Tag: ದಿಯಾ ಮಿರ್ಜಾ

  • ಸೋದರ ಸೊಸೆ ತಾನ್ಯ ಸಾವಿನ ಕುರಿತು ದಿಯಾ ಮಿರ್ಜಾ ಭಾವುಕ

    ಸೋದರ ಸೊಸೆ ತಾನ್ಯ ಸಾವಿನ ಕುರಿತು ದಿಯಾ ಮಿರ್ಜಾ ಭಾವುಕ

    ಬಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ದಿಯಾ ಮಿರ್ಜಾ ಇದೀಗ ತನ್ನ ಸೋದರ ಸೊಸೆ ತಾನ್ಯ ಸಾವಿನ ಕುರಿತು ಭಾವುಕರಾಗಿದ್ದಾರೆ. ತಾನ್ಯ ಕುರಿತು ಎಮೋಷನಲ್ ಪೋಸ್ಟ್ ಶೇರ್ ಮಾಡಿದ್ದಾರೆ.

    ಬಿಟೌನ್ ನಟಿ ದಿಯಾ ಮಿರ್ಜಾ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಸೋದರ ಸೊನೆ ತಾನ್ಯ ಕಾಕಡೆ ನಿಧನರಾಗಿದ್ದರು. ಹೈದರಾಬಾದ್‌ನಲ್ಲಿ ಕಾರ್ ಆಕ್ಸಿಡೆಂಟ್‌ನಲ್ಲಿ ನಿಧನರಾಗಿದ್ದರು. 21 ವರ್ಷದ ಹುಡುಗಿ ತಾನ್ಯ ಸೋದರ ಸೊಸೆ ಸಾವಿಗೆ ಇದೀಗ ದಿಯಾ ಭಾವುಕರಾಗಿದ್ದಾರೆ. ಚಿಕ್ಕವಯಸ್ಸಿಗೆ ಇಹಲೋಕ ತ್ಯಜಿಸಿರುವುದಕ್ಕೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಇನ್ಸ್ಟಾಗ್ರಾಂ ಖಾತೆಯಲ್ಲಿ ಕೃತಿ ಸನೂನ್‌ಗೆ 50 ಮಿಲಿಯನ್ ಫಾಲೋವರ್ಸ್

     

    View this post on Instagram

     

    A post shared by Dia Mirza Rekhi (@diamirzaofficial)

    ನನ್ನ ಸೊಸೆ, ನನ್ನ ಮಗು, ನನ್ನ ಜಾನ್, ಬೆಳಕಿನಡೆಗೆ ಹೋಗಿದೆ. ನೀವು ಎಲ್ಲಿದ್ದರು, ಶಾಂತಿ ಮತ್ತು ಪ್ರೀತಿಯನ್ನು ಕಂಡುಕೊಳ್ಳಲಿ. ನೀವು ಯಾವಾಗಲೂ ನಮಗೆ ಖುಷಿಯನ್ನೇ ಕೊಟ್ಟಿದ್ದೀಯಾ ಅಂತಾ ಸೋದರ ಸೊಸೆಯ ಬಗ್ಗೆ ಭಾವುಕರಾಗಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮಹಾರಾಷ್ಟ್ರ ಸರ್ಕಾರ ಬದಲಾವಣೆ- ಬಾಲಿವುಡ್‌ನಲ್ಲಿ ಕಿತ್ತಾಟ ಶುರು

    ಮಹಾರಾಷ್ಟ್ರ ಸರ್ಕಾರ ಬದಲಾವಣೆ- ಬಾಲಿವುಡ್‌ನಲ್ಲಿ ಕಿತ್ತಾಟ ಶುರು

    ಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಬದಲಾಗುತ್ತಿದ್ದಂತೆಯೇ ಬಾಲಿವುಡ್ ಕೆಲ ನಟಿಯರು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಅಲ್ಲದೇ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಈ ವಿವಾದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮಹಾರಾಷ್ಟ್ರ ಸರಕಾರದ ಪತನ ಮತ್ತು ಹೊಸ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಬಾಲಿವುಡ್ ನಲ್ಲೂ ಕಿತ್ತಾಟ ಶುರುವಾಗಿದೆ.

    ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಉದ್ಭವ್ ಠಾಕ್ರೆ ರಾಜೀನಾಮೆ ನೀಡಿ, ಇದೀಗ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಕುರಿತಾಗಿಯೇ ಬಾಲಿವುಡ್ ನಲ್ಲಿ ಪರ ವಿರೋಧದ ಮಾತು ಕೇಳಿ ಬಂದಿವೆ. ಹೊಸ ಮುಖ್ಯಮಂತ್ರಿಯನ್ನು ಕಂಗನಾ ರಣಾವತ್ ಸ್ವಾಗತಿಸಿದ್ದರೆ, ನಿರ್ಗಮಿಸಿರುವ ಉದ್ಭವ್ ಠಾಕ್ರೆ ಬೆಂಬಲಕ್ಕೆ ದಿಯಾ ಮಿರ್ಜಾ ನಿಂತಿದ್ದಾರೆ. ಈ ಇಬ್ಬರ ನಡೆಗೂ ಪರ ವಿರೋಧ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ ಸುದೀಪ್

    ಉದ್ಭವ್ ಠಾಕ್ರೆ ಅವರನ್ನು ದಿಯಾ ಮಿರ್ಜಾ ಮನಸಾರೆ ಹೊಗಳಿದ್ದಾರೆ. ಮುಂದಿನ ದಿನಗಳು ನಿಮಗೆ ಹೊಸ ಭರವಸೆ ಮತ್ತು ಚೈತನ್ಯವನ್ನು ನೀಡಲಿವೆ. ಮತ್ತೆ ನೀವು ಈ ರಾಜ್ಯವನ್ನು ಆಳುತ್ತೀರಿ ಎಂದು ಹೇಳಿದ್ದಾರೆ. ಈ ಮಾತಿಗೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವ್ಯಂಗ್ಯವಾಡಿದ್ದಾರೆ. ಯಾವ ರಾಜ್ಯ, ಯಾವ ರಾಜ? ಎಂದು ಪರೋಕ್ಷವಾಗಿಯೇ ಉದ್ಭವ್ ಠಾಕ್ರೆ ಅವರನ್ನು ಕಾಲೆಳೆದಿದ್ದಾರೆ.

    Live Tv

  • ಫೆ.15ಕ್ಕೆ ಮದುವೆ, ತಾಯಿಯಾಗ್ತಿದೀನಿ ಅನ್ನೋ ಖುಷಿ ಹಂಚಿಕೊಂಡ ದಿಯಾ ಮಿರ್ಜಾ.!

    ಫೆ.15ಕ್ಕೆ ಮದುವೆ, ತಾಯಿಯಾಗ್ತಿದೀನಿ ಅನ್ನೋ ಖುಷಿ ಹಂಚಿಕೊಂಡ ದಿಯಾ ಮಿರ್ಜಾ.!

    ಮುಂಬೈ: ಬಾಲಿವುಡ್ ನಟಿ ದಿಯಾ ಮಿರ್ಜಾ ಈಗ ಗರ್ಭಿಣಿಯಂತೆ. ಹೌದು ಇದೇ ಫೆಬ್ರವರಿಯಲ್ಲಿ ಮದುವೆಯಾಗಿದ್ದ ಬಾಲಿವುಡ್ ನಟಿ ದಿಯಾ ಮಿರ್ಜಾ ನಾನು ಗರ್ಭಿಣಿ. ನನ್ನ ಮಗುವನ್ನು ಎದುರು ನೋಡುತ್ತಿದ್ದೇನೆ ಎಂದು ತಮ್ಮ ಇನ್‍ಸ್ಟಾಗ್ರಾಂ ಪೋಸ್ಟಲ್ಲಿ ಬರೆದುಕೊಂಡಿದ್ದಾರೆ.

    ಇದೇ ವರ್ಷ ಫೆಬ್ರವರಿ 15ರಂದು ದಿಯಾ ಮಿರ್ಜಾ ವೈಭವ್ ರೇಖಿಯನ್ನು ಮದುವೆಯಾಗಿದ್ದರು. ಕೇವಲ ಆಪ್ತರು ಹಾಗೂ ಕುಟುಂಬದ ಸದಸ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮದುವೆ ಮುಗಿಸುತ್ತಿದ್ದಂತೆಯೇ ದಿಯಾ ಮಿರ್ಜಾ ತಮ್ಮ ಪತಿ ಜೊತೆ ಮಾಲ್ಡೀವ್ಸ್‍ಗೆ ಹನಿಮೂನ್‍ಗೆ ತೆರಳಿದ್ದರು.

    ದಿಯಾ ಮಿರ್ಜಾಗೆ ಇದು ಎರಡನೇ ಮದುವೆಯಾಗಿದ್ದು, ಈ ಹಿಂದೆ ಅವರು 2014ರಲ್ಲಿ ಉದ್ಯಮಿ ಸಾಹುಲ್ ಸಂಘ ಅವರನ್ನು ಮದುವೆಯಾಗಿದ್ದರು. ಆದರೆ ಐದೇ ವರ್ಷದಲ್ಲಿ ಈ ಮದುವೆ ಮುರಿದು ಬಿದ್ದು 2019ರಲ್ಲಿ ಡೈವೋರ್ಸ್‍ನಲ್ಲಿ ಪರ್ಯಾವಸಾನಗೊಂಡಿತ್ತು. ಈ ಮೂಲಕ 11 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿ 37ನೇ ವಯಸ್ಸಿನಲ್ಲಿ ವಿಚ್ಛೇದನ ನೀಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೀಡಾಗಿತ್ತು.

    ಇದಾದ ಬಳಿಕ ದಿಯಾ ಮುಂಬೈ ಮೂಲದ ಉದ್ಯಮಿ, ಹಣಕಾಸು ಹೂಡಿಕೆದಾರ ಹಾಗೂ ಪಿರಮಲ್ ಫಂಡ್ ಮ್ಯಾನೇಜ್‍ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ವೈಭವ್ ರೇಖಿ ಜೊತೆ ಡೇಟಿಂಗ್ ಶುರು ಮಾಡ್ಕೊಂಡಿದ್ದರು. ಇದೇ ಫೆಬ್ರವರಿಯಲ್ಲಿ ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದರು. ಇತ್ತ ವೈಭವ್ ರೇಖಿಗೂ ಇದು ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿಗೆ ಮಗಳಿದ್ದಾಳೆ.

     

    View this post on Instagram

     

    A post shared by Dia Mirza (@diamirzaofficial)

  • ನಾನು ಯಾವತ್ತೂ ಡ್ರಗ್ಸ್ ಸೇವಿಸಿಲ್ಲ: ದಿಯಾ ಮಿರ್ಜಾ

    ನಾನು ಯಾವತ್ತೂ ಡ್ರಗ್ಸ್ ಸೇವಿಸಿಲ್ಲ: ದಿಯಾ ಮಿರ್ಜಾ

    – ತನ್ನ ಮೇಲಿನ ಆರೋಪ ನಿರಾಕರಿಸಿದ ನಟಿ

    ಮುಂಬೈ: ಸ್ಯಾಂಡಲ್‍ವುಡ್ ನಂತೆ ಬಾಲಿವುಡ್ ಅಂಗಳದಲ್ಲಿಯೂ ಡ್ರಗ್ಸ್ ಪ್ರಕರಣ ದಿನೇ ದಿನೇ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ನಟಿ ದಿಯಾ ಮಿರ್ಜಾ ಅವರು, ನಾನು ಯಾವತ್ತೂ ಡ್ರಗ್ಸ್ ಸೇವಿಸಿಲ್ಲ ಎಂದು ಹೇಳುವ ಮೂಲಕ ತನ್ನ ಮೇಲಿನ ಆರೋಪಗಳನ್ನು ಅಲ್ಲಗೆಳೆದಿದ್ದಾರೆ.

    ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ದಿಯಾ, ನನ್ನ ವಿರುದ್ಧ ಕೇಳಿಬರುತ್ತಿರುವ ಆರೋಪಗಳೆಲ್ಲವೂ ಸುಳ್ಳಾಗಿದ್ದು, ಆಧಾರ ರಹಿತವಾಗಿದೆ. ಅಲ್ಲದೆ ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದೊಂದು ನನ್ನ ವಿರುದ್ಧದ ಪಿತೂರಿಯಾಗಿದೆ ಎಂದಿದ್ದಾರೆ.

    ಇಂತಹ ಕುಲ್ಲಕ ವರದಿಗಾರಿಕೆ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತದ್ದಾಗಿದೆ. ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ನನ್ನ ವೃತ್ತಿ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡು ಬಂದಿದ್ದೇನೆ ಎಂದು ಕಿಡಿಕಾರಿದ್ದಾರೆ.

    ನನ್ನ ಜೀವನದಲ್ಲಿ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಎಂದಿಗೂ ಸೇವಿಸಿಲ್ಲ. ಓರ್ವ ಭಾರತದ ಪ್ರಜೆಯಾಗಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದೇನೆ. ನನ್ನ ಬೆಂಬಲಕ್ಕೆ ನಿಂತವರಿಗೆಲ್ಲರಿಗೂ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುವುದಾಗಿ ಟ್ವೀಟ್ ನಲ್ಲಿ ದಿಯಾ ಮಿರ್ಜಾ ತಿಳಿಸಿದ್ದಾರೆ.

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆಯ ವೇಳೆ ಡ್ರಗ್ಸ್ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಮಾದಕ ದ್ರವ್ಯ ಸೇವಿಸುತ್ತಾರೆ ಎಂಬ ವಿಚಾರದಡಿಯಲ್ಲಿ ಅನುಜ್ ಕೇಶ್ವಾನಿಯನ್ನು ತನಿಖೆಗೆ ಒಳಪಡಿಸಲಾಗಿತ್ತು. ಈ ವೇಳೆ ದಿಯಾ ಮಿರ್ಜಾ ಹೆಸರು ಕೇಳಿಬಂದಿದ್ದು, ಎನ್‍ಸಿಬಿ ನಟಿಯನ್ನು ತನಿಖೆ ಮಾಡುತ್ತಿದೆ ಎಂದು ಹೇಳಲಾಗಿತ್ತು.

    ಡ್ರಗ್ಸ್ ಕೇಸ್ ಗೆ ಸಂಬಂಧಪಟ್ಟಂತೆ ದಿಯಾ ಹಾಗೂ ಅವರ ಮ್ಯಾನೇಜರ್ ನಡುವೆ ನಡೆದ ವಾಟ್ಸಪ್ ಸಂದೇಶಗಳು ಎನ್‍ಸಿಬಿಗೆ ಸಿಕ್ಕಿವೆಯಂತೆ. ಕೇಶ್ವಾನಿ ಗೆಳತಿ ದಿಯಾ ಮ್ಯಾನೇಜರ್ ಎಂಬುದು ಕೂಡ ಬಹಿರಂಗವಾಗಿದ್ದು, 2019ರಲ್ಲಿ ದಿಯಾ ಡ್ರಗ್ಸ್ ಖರೀದಿ ಮಾಡಿರುವ ಬಗ್ಗೆ ಎನ್‍ಸಿಬಿಗೆ ಮಾಹಿತಿ ಸಿಕ್ಕಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿತ್ತು.

  • ವಿಚ್ಛೇದನದ ಬಳಿಕ ಜೀವನ ಹೇಗಿರುತ್ತೆ ಎಂಬುದರ ಅರಿವು ನನಗಿತ್ತು: ದಿಯಾ ಮಿರ್ಜಾ

    ವಿಚ್ಛೇದನದ ಬಳಿಕ ಜೀವನ ಹೇಗಿರುತ್ತೆ ಎಂಬುದರ ಅರಿವು ನನಗಿತ್ತು: ದಿಯಾ ಮಿರ್ಜಾ

    – ನಾಲ್ಕೂವರೆ ವರ್ಷದವಳಿದ್ದಾಗ ಅಪ್ಪ-ಅಮ್ಮ ಬೇರೆಯಾಗಿದ್ರು

    ಮುಂಬೈ: ಬಾಲಿವುಡ್ ನಟಿ ದಿಯಾ ಮಿರ್ಜಾ ಸಂದರ್ಶನದಲ್ಲಿ ತಮ್ಮ ವಿಚ್ಛೇದನ ಪಡೆದ ಬಗ್ಗೆ ಹೇಳಿದ್ದಾರೆ. ಈ ಸಂದರ್ಶನದಲ್ಲಿ ಖಾಸಗಿ ಜೀವನದ ಬಗ್ಗೆ ಹಲವು ವಿಷಯಗಳನ್ನು ಅಭಿಮಾನಿಗಳೊಂದಿಗೆ ದಿಯಾ ಹಂಚಿಕೊಂಡಿದ್ದಾರೆ.

    ನನಗೆ ನಾಲ್ಕೂವರೆ ವರ್ಷ, ಅಮ್ಮನಿಗೆ 34 ವರ್ಷ. ಆವಾಗ ಅಪ್ಪ-ಅಮ್ಮ ವಿಚ್ಛೇದನ ಪಡೆದು ಬೇರೆಯಾಗಿದ್ದರು. ವಿಚ್ಛೇದನದ ಬಳಿಕ ಬದುಕು ಹೇಗಿರುತ್ತೆ ಎಂಬುದರ ಅರಿವು ನನಗಿತ್ತು. ಅಮ್ಮನ ಜೀವನದಲ್ಲಿ ನಡೆದಂತೆ ನಾನು ಸಹ ನನ್ನ 37ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆಯಬೇಕಾಯ್ತು. ಬಹುತೇಕ ದಂಪತಿ ಬೇರೆ ಆಗಲು ಹಿಂದೇಟು ಹಾಕುತ್ತಾರೆ. ಮುಂದಿನ ಜೀವನ ಹೇಗಿರುತ್ತೆ? ಸಮಾಜ ನಮ್ಮನ್ನು ಯಾವ ರೀತಿ ಸ್ವೀಕರಿಸುತ್ತೆ ಎಂಬ ಭಯ ಇರುತ್ತೆ. ನನ್ನ 37ನೇ ವಯಸ್ಸಿನಲ್ಲಿ ಇಂತಹದೊಂದು ದಿಟ್ಟ ನಿರ್ಧಾರಕ್ಕೆ ಬರಬೇಕಾಯ್ತು ಎಂದು ಹೇಳಿದರು.

    ಕಳೆದ ವರ್ಷ ಆಗಸ್ಟ್ ನಲ್ಲಿ ಪತಿ ಸಾಹಿಲ್ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇನೆ ಎಂದು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಳ್ಳುವ ಮೂಲಕ ವಿಷಯವನ್ನು ಬಹಿರಂಗಪಡಿಸಿದ್ದರು. 11 ವರ್ಷಗಳ ಬಳಿಕ ನಾವಿಬ್ಬರು ಬೇರೆ ಆಗಬೇಕೆಂದು ನಿರ್ಧರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇಬ್ಬರು ಒಳ್ಳೆಯ ಸ್ನೇಹಿತರಾಗಿರಲು ಇಷ್ಟಪಡುತ್ತೇವೆ. ದೂರವಾದ ಬಳಿಕ ಒಬ್ಬರನ್ನೊಬ್ಬರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುತ್ತೇವೆ. ಇಂದಿನಿಂದ ಇಬ್ಬರ ಜೀವನ ಹೊಸ ದಿಕ್ಕುಗಳತ್ತ ಸಾಗಲಿದ್ದು, ಇಷ್ಟು ದಿನ ಜೊತೆಯಾಗಿದ್ದಕ್ಕೆ ಒಬ್ಬರಿಗೊಬ್ಬರು ಆಭಾರಿಯಾಗಿದ್ದೇವೆ. ಇಷ್ಟು ನಮ್ಮ ಜೊತೆಗಿದ್ದ ಕುಟುಂಬ, ಸ್ನೇಹಿತರ ಬಳಗ ಮತ್ತು ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸಿ ಎಲ್ಲ ವಿಚಾರವನ್ನು ದಿಯಾ ತಿಳಿಸಿದ್ದರು.

    2014ರಲ್ಲಿ ಮದುವೆ: 2014 ಅಕ್ಟೋಬರ್ 18ರಂದು ದಿಯಾ ಮಿರ್ಜಾ ಉದ್ಯಮಿ ಸಾಹಿಲ್ ಅವರನ್ನು ಮದುವೆ ಆಗಿದ್ದರು. ಆರ್ಯ ಸಂಪ್ರದಾಯದಂಯೆ ಮದುವೆ ದೆಹಲಿಯಲ್ಲಿ ನಡೆದಿತ್ತು. ಹೈದರಾಬಾದ್ ಸಂಪ್ರದಾಯದಂತೆ ದಿಯಾ ರೆಡಿಯಾಗಿ ಕಂಗೊಳಿಸಿದ್ದರು. ಸಾಹಿಲ್ ಮತ್ತು ದಿಯಾ ಮದುವೆ ಬಳಿಕ ಜೊತೆಯಾಗಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು. ವ್ಯವಹಾರದಲ್ಲಿ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ ಇಬ್ಬರು ಬೇರೆಯಾಗಲು ನಿರ್ಧರಿಸಿದ್ದರು ಎಂದು ವರದಿಗಳ ಪ್ರಕಟವಾಗಿವೆ.

    ಮಂದಿನ ಸಿನಿಮಾ ಥಪ್ಪಡ್: ತಾಪ್ಸಿ ಪನ್ನು ನಟನೆಯ ‘ಥಪ್ಪಡ್’ ಸಿನಿಮಾದಲ್ಲ ಶಿವಾನಿ ಪಾತ್ರದಲ್ಲಿ ದಿಯಾ ಮಿರ್ಜಾ ನಟಿಸುತ್ತಿದ್ದಾರೆ. ಅನುವ್ ಸಿನ್ಹಾ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಫೆಬ್ರವರಿ 28ರಂದು ಬಿಡುಗಡೆಯಾಗಲಿದೆ.

  • ಮುರಿದು ಬಿತ್ತು ದಿಯಾ, ಸಾಹಿಲ್ 11 ವರ್ಷದ ಬಾಂಧವ್ಯ

    ಮುರಿದು ಬಿತ್ತು ದಿಯಾ, ಸಾಹಿಲ್ 11 ವರ್ಷದ ಬಾಂಧವ್ಯ

    ಮುಂಬೈ: ಬಾಲಿವುಡ್ ನಟಿ ದಿಯಾ ಮಿರ್ಜಾ ಮತ್ತು ಸಾಹಿಲ್ ಸಂಘಾ ಅವರ ಐದು ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಇಬ್ಬರು ಪ್ರತ್ಯೇಕವಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

    ದಿಯಾ ಮಿರ್ಜಾ ಇನ್‍ಸ್ಟಾಗ್ರಾಂನಲ್ಲಿ ತಾವು ಬೇರೆಯಾಗುತ್ತಿರುವ ಬಗ್ಗೆ ಒಂದು ಪತ್ರವನ್ನು ಪೋಸ್ಟ್ ಮಾಡಿದ್ದಾರೆ. ಆ ಪತ್ರದ ಕೊನೆಯಲ್ಲಿ ದಿಯಾ ಮತ್ತು ಸಾಹಿಲ್ ಇಬ್ಬರೂ ಸಹಿ ಮಾಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ:
    ಸುಮಾರು 11 ವರ್ಷಗಳ ಕಾಲ ನಮ್ಮ ಬದುಕನ್ನು ಹಂಚಿಕೊಂಡು ಒಟ್ಟಿಗೆ ಇದ್ದೆವು. ಆದರೆ ಈಗ ಇಬ್ಬರು ಒಪ್ಪಿಗೆ ಮೇರೆಗೆ ಪ್ರತ್ಯೇಕವಾಗಲು ನಿರ್ಧರಿಸಿದ್ದೇವೆ. ನಾವು ದೂರವಾದರೂ ಸ್ನೇಹಿತರಾಗಿಯೇ ಇರುತ್ತೇವೆ. ನಮ್ಮ ಪ್ರೀತಿ ಹೀಗೆಯೇ ಮುಂದುವರಿಯಲಿದೆ. ಇದೇ ರೀತಿ ಪರಸ್ಪರ ಪ್ರೀತಿ ಮತ್ತು ಗೌರವದಿಂದ ಇರುತ್ತೇವೆ. ನಮ್ಮಿಬ್ಬರು ಒಟ್ಟಿಗಿದ್ದ ಬಾಂಧವ್ಯಕ್ಕೆ ನಾವು ಎಂದೆಂದಿಗೂ ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದ್ದಾರೆ.

    ನಿರಂತರವಾಗಿ ಪ್ರೀತಿ ತೋರಿಸುತ್ತಿರುವ ಕುಟುಂಬ, ಸ್ನೇಹಿತರು ಹಾಗೂ ಮಾಧ್ಯಮದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೇ ವೇಳೆ ಈ ವಿಷಯದ ಕುರಿತು ನಾವು ಇನ್ಮುಂದೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

    ದಿಯಾ ಮತ್ತು ಸಾಹಿಲ್ ಅವರು 11 ವರ್ಷಗಳ ಹಿಂದೆ ಪರಿಚಯವಾಗಿದ್ದು, ಸುಮಾರು 6 ವರ್ಷಗಳ ಕಾಲ ಇಬ್ಬರು ಡೇಟಿಂಗ್‍ನಲ್ಲಿ ಇದ್ದರು. ನಂತರ ಪರಸ್ಪರ ಇಬ್ಬರು ಪ್ರೀತಿಸಿ 2014ರ ಅಕ್ಟೋಬರ್ 18 ರಂದು ವಿವಾಹವಾಗಿದ್ದರು. ನಟಿ ದಿಯಾ ಮಿರ್ಜಾ ‘ರೆಹನಾ ಹೈ ಟೆರ್ರೆ ದಿಲ್ ಮೇ’, ‘ತೆಹ್ಜೀಬ್’, ‘ಕೊಯಿ ಮೇರೆ ದಿಲ್ ಮೇ ಹೈ’, ‘ಲಗೆ ರಹೋ ಮುನ್ನಾ ಭಾಯ್’ ಮತ್ತು ‘ಫೈಟ್ ಕ್ಲಬ್’ ಸಿನಿಮಾಗಳಲ್ಲಿ ನಟಿಸಿದ್ದು, ಹೆಸರುವಾಸಿಯಾಗಿದ್ದಾರೆ. ‘ಸಂಜು’ ಅವರ ಕೊನೆಯ ಬಾಲಿವುಡ್ ಸಿನಿಮಾವಾಗಿದೆ. ಸಾಹಿಲ್ ಅವರು ಸಿನಿಮಾ ನಿರ್ಮಾಪಕರಾಗಿದ್ದಾರೆ.