Tag: ದಿಯಾ ಕುಮಾರಿ

  • ಭಜನ್‌ಲಾಲ್‌ ಶರ್ಮಾ ರಾಜಸ್ಥಾನ ಸಿಎಂ ಆಗಿ ಪ್ರಮಾಣ ವಚನ; ದಿಯಾ ಕುಮಾರಿ, ಪ್ರೇಮ್‌ ಚಂದ್‌ ಡಿಸಿಎಂ

    ಭಜನ್‌ಲಾಲ್‌ ಶರ್ಮಾ ರಾಜಸ್ಥಾನ ಸಿಎಂ ಆಗಿ ಪ್ರಮಾಣ ವಚನ; ದಿಯಾ ಕುಮಾರಿ, ಪ್ರೇಮ್‌ ಚಂದ್‌ ಡಿಸಿಎಂ

    ಜೈಪುರ: ಸಂಗನೇರ್‌ನ ಬಿಜೆಪಿ ಶಾಸಕ ಭಜನ್‌ಲಾಲ್‌ ಶರ್ಮಾ (Bhajanlal Sharma) ರಾಜಸ್ಥಾನದ (Rajasthan) ನೂತನ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ಪ್ರಮಾಣ ವಚನ ಬೋಧಿಸಿದ್ದಾರೆ.

    ದಿಯಾ ಕುಮಾರಿ (Diya Kumari) ಮತ್ತು ಪ್ರೇಮ್ ಚಂದ್ ಬೈರ್ವಾ ರಾಜ್ಯದ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿದ್ದರು. ಇದನ್ನೂ ಓದಿ: ಸಂಸತ್‌ ಸ್ಮೋಕ್‌ ಬಾಂಬ್‌ ಕೇಸ್‌ – ಟಿಎಂಸಿ ಶಾಸಕನ ಜೊತೆ ಆರೋಪಿ – ಫೋಟೋ ಹರಿಬಿಟ್ಟ ಬಿಜೆಪಿ

    ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.

    ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಅರ್ಜುನ್ ರಾಮ್ ಮೇಘವಾಲ್ ಮತ್ತು ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕಿ ವಸುಂಧರಾ ರಾಜೆ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಬದುಕುವ ಆಸೆ ಉಳಿದಿಲ್ಲ: ಲೈಂಗಿಕ ಕಿರುಕುಳಕ್ಕೆ ಬೇಸತ್ತು CJIಗೆ ಪತ್ರ ಬರೆದ ಯುಪಿ ನ್ಯಾಯಾಧೀಶೆ

    ಭಜನ್‌ಲಾಲ್ ಶರ್ಮಾ ರಾಜಸ್ಥಾನದ ಪೂರ್ವ ಜಿಲ್ಲೆ ಭರತ್‌ಪುರದವರು. ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ (RSS) ಬಲವಾದ ಬೆಂಬಲ ಹೊಂದಿದ್ದಾರೆಂದು ಪರಿಗಣಿಸಲಾಗಿದೆ. ಭಜನ್‌ಲಾಲ್ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

    ಈಚೆಗೆ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ 1,45,162 ಮತಗಳನ್ನು ಪಡೆದು ಎದುರಾಳಿ ಕಾಂಗ್ರೆಸ್‌ ಅಭ್ಯರ್ಥಿ ಪುಷ್ಪೇಂದ್ರ ಭಾರದ್ವಾಜ್ ಅವರನ್ನು ಸೋಲಿಸಿದರು. ಭಾರದ್ವಾಜ್‌ 97,081 ಮತಗಳನ್ನು ಪಡೆದಿದ್ದರು.

    ಪ್ರೇಮ್ ಚಂದ್ ಬೈರ್ವಾ ಅವರು ರಾಜಸ್ಥಾನದ ದುಡು ಕ್ಷೇತ್ರದ ಹಾಲಿ ಬಿಜೆಪಿ ಶಾಸಕರಾಗಿದ್ದಾರೆ. ಚುನಾವಣೆಯಲ್ಲಿ ಬೈರ್ವಾ ಅವರು ಕಾಂಗ್ರೆಸ್ ಅಭ್ಯರ್ಥಿ ಬಾಬುಲಾಲ್ ನಗರ್ ಅವರನ್ನು 35,743 ಮತಗಳ ಅಂತರದಿಂದ ಸೋಲಿಸಿದ್ದಾರೆ.

    ಜೈಪುರದ ಹಿಂದಿನ ರಾಜಮನೆತನದ ದಿಯಾ ಕುಮಾರಿ ಅವರು ಜೈಪುರದ ವಿದ್ಯಾಧರ್ ನಗರ ಕ್ಷೇತ್ರದಿಂದ ಕಾಂಗ್ರೆಸ್‌ನ ಸೀತಾರಾಮ್ ಅಗರ್ವಾಲ್ ವಿರುದ್ಧ 71,368 ಮತಗಳ ಅಂತರದಿಂದ ಗೆದ್ದಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿ 115 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಕಾಂಗ್ರೆಸ್ 69 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

  • ರಾಜಮನೆತನದಿಂದ ರಾಜಕೀಯಕ್ಕೆ; ರಾಜಸ್ಥಾನದ ನೂತನ ಡಿಸಿಎಂ ದಿಯಾ ಕುಮಾರಿ – ಯಾರು ಈ ರಾಜಕುಮಾರಿ?

    ರಾಜಮನೆತನದಿಂದ ರಾಜಕೀಯಕ್ಕೆ; ರಾಜಸ್ಥಾನದ ನೂತನ ಡಿಸಿಎಂ ದಿಯಾ ಕುಮಾರಿ – ಯಾರು ಈ ರಾಜಕುಮಾರಿ?

    ಜೈಪುರ: ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಭಜನ್‌ಲಾಲ್‌ ಶರ್ಮಾ (Bhajanlal Sharma) ಅವರನ್ನು ರಾಸ್ಥಾನದ ನೂತನ ಸಿಎಂ ಆಯ್ಕೆ ಮಾಡುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ. ಈ ಬೆನ್ನಲ್ಲೇ ರಾಜವಂಶಸ್ಥೆ ದಿಯಾ ಕುಮಾರಿ (Diya Kumari) ಹಾಗೂ ಹಿರಿಯ ನಾಯಕ ಪ್ರೇಮ್‌ಚಂದ್‌ ಬೈರ್ವಾ ಅವರನ್ನ ಉಪಮುಖ್ಯಮಂತ್ರಿಗಳಾಗಿ ನೇಮ ಮಾಡಿದೆ.

    ಯಾರೀ ರಾಜಕುಮಾರಿ?
    ರಾಜ್ಯಸ್ಥಾನದ ನೂತನ ಉಪಮುಖ್ಯಮಂತ್ರಿಗಳಲ್ಲಿ (Rajasthan DCM) ಒಬ್ಬರಾದ ದಿಯಾ ಕುಮಾರಿ ಅವರು 1970ರ ಜನವರಿ 30 ರಂದು ರಾಜಮನೆತನದಲ್ಲಿ (Royal Family) ಜನಿಸಿದರು. ಅವರ ಅಜ್ಜ ಮಾನ್‌ ಸಿಂಗ್‌ II (2ನೇ ಮಾನ್‌ಸಿಂಗ್‌) ಜೈಪುರದ ಕೊನೆಯ ಆಡಳಿತ ಮಹರಾಜರಾಗಿದ್ದರು. ಇನ್ನೂ ದಿಯಾ ಕುಮಾರಿ ಅವರ ತಂದೆ ಬ್ರಿಗೇಡಿಯರ್ ಸವಾಯಿ ಭವಾನಿ ಸಿಂಗ್ ಅವರಿಗೆ 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಹೋರಾಡಿದ ಶೌರ್ಯಕ್ಕಾಗಿ ಮಹಾವೀರ ಚಕ್ರ ನೀಡಿ ಗೌರವಿಸಲಾಗಿತ್ತು. ಇದನ್ನೂ ಓದಿ: ನಾನು ಏನನ್ನಾದರೂ ಕೇಳುವುದಕ್ಕಿಂತ ಸಾಯೋದೇ ಲೇಸು..: ಶಿವರಾಜ್‌ ಸಿಂಗ್‌ ಚೌಹಾಣ್

    ದಿಯಾ ಕುಮಾರಿ ಅವರು ಮಹಾರಾಣಿ ಗಾಯತ್ರಿ ದೇವಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿದರು. ಜೈಪುರದ ಮಹಾರಾಣಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. ಬಳಿಕ ನರೇಂದ್ರ ಸಿಂಗ್ ಎಂಬವರನ್ನ ವಿವಾಹವಾದರು. ದಂಪತಿಗೆ ಜೈಪುರದ ರಾಜವಂಶಸ್ಥ ಪದ್ಮನಾಭ್ ಸಿಂಗ್ ಸೇರಿದಂತೆ ಅವರಿಗೆ ಮೂವರು ಮಕ್ಕಳಿದ್ದಾರೆ. ಆದ್ರೆ 2018ರಲ್ಲಿ ದಿಯಾ ಕುಮಾರಿ ಪತಿಗೆ ವಿಚ್ಛೇದನ ನೀಡಿದ್ದರು. ಇದನ್ನೂ ಓದಿ: ಶಾಸಕರ ಆದಾಯ ಕೋಟಿ ಕೋಟಿ ಹೆಚ್ಚಾದ್ರೂ ಕನಕಪುರ ಅಭಿವೃದ್ಧಿಯಾಗಿಲ್ಲ: ಪರೋಕ್ಷವಾಗಿ ಡಿಕೆಶಿ ತಿವಿದ ಯತ್ನಾಳ್‌

    ಕಾಲೇಜು ಶಿಕ್ಷಣದ ಬಳಿಕ ರಾಜಕೀಯ ಜೀವನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ದಿಯಾ ಕುಮಾರಿ 2013ರಲ್ಲಿ ರಾಜಸ್ಥಾನದ ಸವಾಯಿ ಮಾಧೋಪುರ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾದರು. ಅಲ್ಲಿಂದ ಅವರ ರಾಜಕೀಯ ಜೀವನ ಶುರುವಾಯಿತು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮೇಲೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಕಡೆಗೆ ಆಸಕ್ತಿ ತೋರಿದರು. ಇದರಿಂದಲೇ 2019ರ ಲೋಕಸಭಾ ಚುನಾವಣೆಯಲ್ಲಿ ದಿಯಾ ರಾಜ್‌ಸಮಂದ್‌ ಕ್ಷೇತ್ರದಿಂದ ಸ್ಪರ್ಧಿಸಿ ಅತ್ಯಧಿಕ ಬಹುಮತದಿಂದ ಗೆದ್ದು ಸಂಸದರಾದರು. ಈ ಮೂಲಕ ರಾಷ್ಟ್ರ ರಾಜಕಾರಣ ಪ್ರವೇಶಿಸಿದರು.

    ರಾಜಕೀಯದ ಹೊರತಾಗಿಯೂ ದಿಯಾ ಕುಮಾರಿ, ಎರಡು ಶಾಲೆಗಳು, ಟ್ರಸ್ಟ್‌ಗಳು, ವಸ್ತುಸಂಗ್ರಹಾಲಯಗಳು, ಹೋಟೆಲ್‌ಗಳು ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಒಳಗೊಂಡಂತೆ ಹಲವಾರು ವ್ಯಾಪಾರ ಉದ್ಯಮಗಳನ್ನು ನಿರ್ವಹಿಸುತ್ತಿದ್ದಾರೆ. ಮಹಾರಾಜ ಸವಾಯಿ ಮಾನ್ ಸಿಂಗ್-II ಮ್ಯೂಸಿಯಂ ಟ್ರಸ್ಟ್ ಮತ್ತು ಜೈಗಢ್ ಫೋರ್ಟ್ ಚಾರಿಟೇಬಲ್ ಟ್ರಸ್ಟ್ ಅನ್ನು ಇತರ ಉದ್ಯಮಗಳನ್ನೂ ನಿರ್ವಹಿಸುತ್ತಿರುವುದು ಗಮನಾರ್ಹ. ಇದನ್ನೂ ಓದಿ: ರಾಜಭವನಕ್ಕೂ ಬಾಂಬ್ ಬೆದರಿಕೆ ಹಾಕುವ ಧೈರ್ಯ, ಭಯೋತ್ಪಾದಕರ ಕೇಂದ್ರ ಆಗ್ತಿದೆ ರಾಜ್ಯ: ಈಶ್ವರಪ್ಪ ಕಿಡಿ

  • ನಾವು ಶ್ರೀರಾಮನ ವಂಶಸ್ಥರು ಎಂದ ಬಿಜೆಪಿ ಸಂಸದೆ

    ನಾವು ಶ್ರೀರಾಮನ ವಂಶಸ್ಥರು ಎಂದ ಬಿಜೆಪಿ ಸಂಸದೆ

    ಜೈಪುರ: ಸುಪ್ರೀಂ ಕೋರ್ಟ್ ಶುಕ್ರವಾರ ಅಯೋಧ್ಯೆ ಕುರಿತು ವಿಚಾರಣೆ ನಡೆಸುತ್ತಿದ್ದ ವೇಳೆ “ಶ್ರೀರಾಮನ (ರಘುವಂಶಸ್ಥರು) ಎಲ್ಲಿದ್ದಾರೆ?” ಎಂದು ಪ್ರಶ್ನಿಸಿತ್ತು. ಇದೇ ಬೆನ್ನಲ್ಲಿ ರಾಜಸ್ಥಾನದ ಬಿಜೆಪಿ ಸಂಸದೆ ದಿಯಾ ಕುಮಾರಿ ಅವರು ನಮ್ಮದು ಶ್ರೀರಾಮಚಂದ್ರನ ವಂಶ ಎಂದು ಟ್ವೀಟ್ ಮಾಡಿದ್ದಾರೆ.

    ಸಂಸದೆಯ ಈ ಪ್ರತಿಪಾದನೆಗೆ ಕಾರಣ, ಸುಪ್ರೀಂ ಕೋರ್ಟಿನ ಶುಕ್ರವಾರದ ವಿಚಾರಣೆ ವೇಳೆ “ಶ್ರೀರಾಮನ (ರಘುವಂಶಸ್ಥರು) ಎಲ್ಲಿದ್ದಾರೆ? ಅಯೋಧ್ಯೆಯಲ್ಲಿ ಆತನ ಸಂಬಂಧಿಕರು ಯಾರಾದರೂ ಈಗ ಇದ್ದಾರಾ?” ಎಂದು ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಪೀಠ ಪ್ರಶ್ನಿಸಿತ್ತು. ಇದಕ್ಕೆ ದಿಯಾ ಅವರು ಪ್ರತಿಕ್ರಿಯಿಸಿ, “ಶ್ರೀರಾಮ ವಿಶ್ವರೂಪಿ. ಜಗತ್ತಿನ ಎಲ್ಲಾ ಕಡೆ ಆತನ ವಂಶಸ್ಥರು ಇದ್ದಾರೆ. ನನ್ನದು ರಘುವಂಶ ಕುಟುಂಬ. ಶ್ರೀರಾಮನ ಪುತ್ರ ಕುಶ ನಮ್ಮ ಪೂರ್ವಜ” ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ರಾಜ ವಂಶಸ್ಥರ ಕುರಿತು ಇರುವ ಮನುಸ್ಮೃತಿ, ವಂಶವೃಕ್ಷ ಹಾಗೂ ವಂಶಾವಾಹಿ ದಾಖಲೆಗಳನ್ನು ಆಧಾರವಾಗಿ ಇಟ್ಟುಕೊಂಡೇ ತಾವು ಈ ಪ್ರತಿಪಾದನೆ ಮಾಡುತ್ತಿರುವುದಾಗಿ ದಿಯಾ ಅವರು ಹೇಳಿಕೊಂಡಿದ್ದಾರೆ. ರಾಮ ನಮ್ಮೆಲ್ಲರ ನಂಬಿಕೆಯ ದೈವ. ಹೀಗಾಗಿ ಆತನ ಜನ್ಮಭೂಮಿಗೆ ಸಂಬಂಧಿಸಿದ ಪ್ರಕರಣ ಕುರಿತು ಕೋರ್ಟ್ ತ್ವರಿತ ವಿಚಾರಣೆ ನಡೆಸಿ ತೀರ್ಪು ನೀಡಬೇಕು ಎಂದು ದಿಯಾ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದಾರೆ.

    ಅಲ್ಲದೆ ನಮ್ಮ ಕುಟುಂಬ ಕುಶನ ವಂಶವೃಕ್ಷ ಹೊಂದಿದೆ ಎನ್ನುವುದಕ್ಕೆ ದಾಖಲೆಗಳು ಬೇಕಾದರೆ ನಾವು ನೀಡುತ್ತೇವೆ. ಆದರೆ ಅಯೋಧ್ಯೆ ಪ್ರಕರಣದ ಮಧ್ಯೆ ಬಂದು ಮುನ್ನಡೆಯನ್ನು ಪಡೆಯಲು ನಾವು ಇಚ್ಛಿಸುವುದಿಲ್ಲ ಎಂದಿದ್ದಾರೆ.