Tag: `ದಿಯಾ ಔರ್ ಬಾತಿ ಹಮ್’

  • ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ ಕಾನಿಷ್ಕಾ ಸೋನಿ

    ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ ಕಾನಿಷ್ಕಾ ಸೋನಿ

    ಕಿರುತೆರೆಯಲ್ಲಿ ಸಾಕಷ್ಟು ಶೋ ಮತ್ತು ಸೀರಿಯಲ್ ಮೂಲಕ ಕಮಾಲ್ ಮಾಡಿರುವ ಕಾನಿಷ್ಕಾ ಸೋನಿ ಅವರ ಮದುವೆಯ ಪ್ರಸಂಗ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ತನ್ನನ್ನು ತಾನೇ ಮದುವೆಯಾಗಿರುವ ನಟಿ ಕಾನಿಷ್ಕಾ ವಿಚಾರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

     

    View this post on Instagram

     

    A post shared by Kanishka Soni (@itskanishkasoni)

    ಕಿರುತೆರೆ ಜನಪ್ರಿಯ ಸೀರಿಯಲ್ `ದಿಯಾ ಔರ್ ಬಾತಿ ಹಮ್’ ಖ್ಯಾತಿಯ ನಟಿ ಕಾನಿಷ್ಕಾ ಸೋನಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಆಕೆಯ ಕೆಲವು ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೇಟ್ ಮಾಡುತ್ತಿದೆ. ಅದರಲ್ಲಿ ಅವರು ಹಣೆಗೆ ಸಿಂಧೂರವಿಟ್ಟು ಮತ್ತು ಕತ್ತಿಗೆ ಮಂಗಳಸೂತ್ರವನ್ನು ಧರಿಸಿದ್ದಾರೆ. ಕಾನಿಷ್ಕಾ ತನ್ನ ಇನ್ಸ್ಟಾಗ್ರಾಂ ಮೂಲಕ ತಾನು ಮದುವೆಯಾಗಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದುಬಾರಿ ಮೊತ್ತದ ಕಾರು ಖರೀದಿಸಿದ `ಬಿಗ್ ಬಾಸ್’ ಖ್ಯಾತಿಯ ಅನುಪಮಾ ಗೌಡ

     

    View this post on Instagram

     

    A post shared by Kanishka Soni (@itskanishkasoni)

    ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಫೋಟೋ, ಕಾನಿಷ್ಕಾ ಹಣೆಯಲ್ಲಿ ಸಿಂಧೂರವೂ ಕಾಣುತ್ತದೆ ಅಲ್ಲದೇ ಆಕೆ ಕತ್ತಿನಲ್ಲಿ ಮಂಗಳಸೂತ್ರವನ್ನು ಧರಿಸಿದ್ದಾರೆ. ಈಗ ಕನಿಷ್ಕಾ ತಮ್ಮ ಪೋಸ್ಟ್‌ನಲ್ಲಿ, ನನ್ನನ್ನೇ ಮದುವೆಯಾಗಿದ್ದೇನೆ ಏಕೆಂದರೆ ನಾನು ನನ್ನ ಎಲ್ಲಾ ಕನಸುಗಳನ್ನು ಪೂರೈಸಿದ್ದೇನೆ ಮತ್ತು ನನ್ನನ್ನು ಪ್ರೀತಿಸುವ ಏಕೈಕ ವ್ಯಕ್ತಿ ನಾನೇ ಆಗಿದ್ದೇನೆ ಎಂದಿದ್ದಾರೆ. ಒಟ್ನಲ್ಲಿ ನಟಿಯ ನಡೆ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]