Tag: ದಿಯಾ

  • ಐಷಾರಾಮಿ ಕಾರು ಖರೀದಿಸಿದ ದಿಯಾ ಸ್ಟಾರ್ ದೀಕ್ಷಿತ್ ಶೆಟ್ಟಿ

    ಐಷಾರಾಮಿ ಕಾರು ಖರೀದಿಸಿದ ದಿಯಾ ಸ್ಟಾರ್ ದೀಕ್ಷಿತ್ ಶೆಟ್ಟಿ

    ದಿಯಾ (Dia) ಸಿನಿಮಾ ಮೂಲಕ ಖ್ಯಾತಿ ಪಡೆದ ನಟ ದೀಕ್ಷಿತ್ ಶೆಟ್ಟಿ ಐಷಾರಾಮಿ ಕಾರು (Car) ಖರೀದಿ ಮಾಡಿದ್ದಾರೆ. ದೀಕ್ಷಿತ್ ಶೆಟ್ಟಿ (Dheekshith Shetty) ಕನ್ನಡವಷ್ಟೇ ಅಲ್ಲದೇ ಪರಭಾಷಾ ಸಿನಿಮಾದಲ್ಲೂ ನಟಿಸಿದ್ದಾರೆ. ಕನ್ನಡದ ಜೊತೆ ಜೊತೆಗೆ ಪರಭಾಷಾ ಚಿತ್ರಗಳಲ್ಲೂ ಬ್ಯುಸಿಯಾಗಿರುವ ದೀಕ್ಷಿತ್ ಶೆಟ್ಟಿ ತಮ್ಮ ಸಿನಿಮಾ ಪಯಣವನ್ನು ಶುರು ಮಾಡಿರುವ ರೋಚಕ ಕಥೆಯನ್ನ ಹಂಚಿಕೊಂಡಿದ್ದಾರೆ. ಮೊದ ಮೊದಲಿಗೆ ಸಿನಿಮಾ ಜರ್ನಿಯನ್ನ ಬಿಎಂಟಿಸಿಯಿಂದ ಶುರು ಮಾಡಿದ ದೀಕ್ಷಿತ್‌ ಶೆಟ್ಟಿ ಈಗ ರೇಂಜ್ ರೋವರ್‌ವರೆಗೂ ಬಂದಿರುವ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ನಟ ದೀಕ್ಷಿತ್ ಶೆಟ್ಟಿ ಸಾಮಾನ್ಯನಿಂದ ಶುರುಮಾಡಿದ ಜರ್ನಿ ಇವತ್ತು ರೇಂಜ್ ರೋವರ್ ರೇಂಜ್‌ಗೆ ತಂದು ನಿಲ್ಲಿಸಿದೆ. ದೀಕ್ಷಿತ್ ಶೆಟ್ಟಿ ಸದ್ಯ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಸಿನಿಮಾದಲ್ಲಿ ನಟಿಸಿದ್ದಾರೆ. ಅಭಿಷೇಕ್ ನಿರ್ದೇಶನದ ಈ ಸಿನಿಮಾದಲ್ಲಿ ದೀಕ್ಷಿತ್ ಜೊತೆಗೆ ಬೃಂದಾ ಆಚಾರ್ ನಾಯಕಿಯಾಗಿ ನಟಿಸಿದ್ದಾರೆ. ತೆಲುಗಿನಲ್ಲಿ ನಾನಿ ನಟನೆಯ ದಸರಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ದಿ ಗರ್ಲ್‌ಫ್ರೆಂಡ್‌ ಸಿನಿಮಾದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ ಶೀಘ್ರದಲ್ಲೇ ಡಿಂಪಲ್ ಕ್ವೀನ್‌ ಮದುವೆ – ಸುಳಿವು ಕೊಟ್ಟ ರಚಿತಾ ರಾಮ್‌

    ಸದ್ಯ ದಿಯಾ ಸ್ಟಾರ್ ದೀಕ್ಷಿತ್ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಈ ವೇಳೆ ಅವರು ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದ್ದಾರೆ. ಅವರ ಈ ಸಾಲುಗಳಿಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
  • ಯಶ್ ತಾಯಿ ನಿರ್ಮಾಣದ ಸಿನಿಮಾ ಬಗ್ಗೆ ಹೊರಬಿತ್ತು ಬಿಗ್ ನ್ಯೂಸ್

    ಯಶ್ ತಾಯಿ ನಿರ್ಮಾಣದ ಸಿನಿಮಾ ಬಗ್ಗೆ ಹೊರಬಿತ್ತು ಬಿಗ್ ನ್ಯೂಸ್

    ರಾಕಿಂಗ್ ಸ್ಟಾರ್ ಯಶ್ (Yash) ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗೋದು ಯಾವಾಗ ಎಂಬುದರ ಬಗ್ಗೆ ಚಿತ್ರತಂಡ ಫ್ಯಾನ್ಸ್‌ಗೆ ಅಪ್‌ಡೇಟ್‌ ಕೊಟ್ಟಿದೆ. ಇದನ್ನೂ ಓದಿ:ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ‘ನನ್ನರಸಿ ರಾಧೆ’ ನಟಿ

    ಯಶ್ ತಾಯಿ ಸ್ಯಾಂಡಲ್‌ವುಡ್‌ ನಿರ್ಮಾಪಕಿಯಾಗಿ ಎಂಟ್ರಿ ಕೊಡ್ತಿದ್ದಾರೆ. ಅವರ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿದ್ದಾರೆ. ಅಕ್ಷಯ ತೃತೀಯ ದಿನದಂದು (ಏ.30) ಬೆಳಗ್ಗೆ 11 ಗಂಟೆಗೆ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ. ಈ ಚಿತ್ರದ ಬಗೆಗಿನ ಮಾಹಿತಿ ತಿಳಿದುಕೊಳ್ಳಲು ಫ್ಯಾನ್ಸ್‌ ಕ್ಯೂರಿಯಸ್‌ ಆಗಿದ್ದಾರೆ. ಇದನ್ನೂ ಓದಿ:ನಿರ್ಮಾಪಕಿಯಾದ ರಾಕಿಂಗ್ ಸ್ಟಾರ್ ಯಶ್ ತಾಯಿ


    ನಟ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ (Pushpa Arun Kumar) ಅವರು ‘ಪಿಎ ಪ್ರೊಡಕ್ಷನ್ಸ್’ ಎಂಬ ಹೊಸ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಯಶ್ ತಾಯಿ ಹೆಸರು ಪುಷ್ಪ, ತಂದೆ ಅರುಣ್ ಕುಮಾರ್ ಹೀಗಾಗಿ ನಿರ್ಮಾಣ ಸಂಸ್ಥೆಗೆ ‘ಪಿಎ ಪ್ರೊಡಕ್ಷನ್ಸ್’ ಎಂದು ಇಡಲಾಗಿದೆ. ಇದರ ಮೂಲಕ ಹೊಸ ಪ್ರತಿಭೆಗಳ ಕನಸಿಗೆ ಸಾಥ್ ನೀಡ್ತಿದ್ದಾರೆ. ಈ ಸಂಸ್ಥೆಯ ಮೂಲಕ ಈಗಾಗಲೇ ಸಿನಿಮಾ ಕೆಲಸ ಶುರುವಾಗಿದೆ.

    ಈ ಸಿನಿಮಾದಲ್ಲಿ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್ (Pruthvi Ambaar) ಅವರೊಂದಿಗೆ ‘ಕೆಂಡಸಂಪಿಗೆ’ ಖ್ಯಾತಿಯ ಕಾವ್ಯ ಶೈವ, ಗೋಪಾಲ ಕೃಷ್ಣ ದೇಶಪಾಂಡೆ ಸೇರಿದಂತೆ ಅನೇಕರು ಕಾಣಿಸಿಕೊಳ್ತಿದ್ದಾರೆ. ಈ ಚಿತ್ರಕ್ಕೆ ಶ್ರೀರಾಜ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

    ಅಂದಹಾಗೆ, ‘ಟಾಕ್ಸಿಕ್’ ಚಿತ್ರಕ್ಕೆ ನಾಯಕ ಕಮ್ ಸಹ ನಿರ್ಮಾಪಕನಾಗಿ ಯಶ್ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ರಾಮಾಯಣ’ ಚಿತ್ರದಲ್ಲಿ ರಾವಣನಾಗಿ ರಾಕಿ ಭಾಯ್ ನಟಿಸಲಿದ್ದಾರೆ. ಈ ಚಿತ್ರಕ್ಕೂ ಅವರು ಸಹ ನಿರ್ಮಾಪಕರಾಗಿದ್ದಾರೆ.

  • ತಮಿಳಿನತ್ತ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ

    ತಮಿಳಿನತ್ತ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ

    ‘ದಿಯಾ’ (Dia) ಖ್ಯಾತಿಯ ದೀಕ್ಷಿತ್ ಶೆಟ್ಟಿ (Dheekshith Shetty) ಕಾಲಿವುಡ್‌ನತ್ತ (Kollywood) ಮುಖ ಮಾಡಿದ್ದಾರೆ. ಕನ್ನಡ, ತೆಲುಗಿನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ದೀಕ್ಷಿತ್ ಶೆಟ್ಟಿ ಈಗ ತಮಿಳು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಇದನ್ನೂ ಓದಿ:ನಮಗೆ ಪುನೀತ್‌ ಬೇರೆಯಲ್ಲ, ದರ್ಶನ್‌ ಬೇರೆ ಅಲ್ಲ: ‘ಅಪ್ಪು’ ಸಿನಿಮಾ ವೀಕ್ಷಿಸಿದ ಡಿ ಬಾಸ್‌ ಫ್ಯಾನ್‌

    ರಾಮ್ ವೆಂಕಟ್ ನಿರ್ದೇಶನದ ಹೊಸ ಸಿನಿಮಾದಲ್ಲಿ ದೀಕ್ಷಿತ್ ಆಯ್ಕೆಯಾಗಿದ್ದಾರೆ. ಇದೀಗ ಸರಳವಾಗಿ ಮುಹೂರ್ತ ಕಾರ್ಯಕ್ರಮ ಕೂಡ ಜರುಗಿದೆ. ವಿಭಿನ್ನ ಕಥೆಯ ಮೂಲಕ ಕಾಲಿವುಡ್‌ಗೆ ಅವರು ಎಂಟ್ರಿ ಕೊಡುತ್ತಿದ್ದಾರೆ.

    ರಶ್ಮಿಕಾ ಮಂದಣ್ಣಗೆ ಜೋಡಿಯಾಗಿ ‘ದಿ ಗರ್ಲ್‌ಫ್ರೆಂಡ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸು, ಸ್ಟ್ರಾಬೆರಿ, ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ, ತೆಲುಗಿನ ಕಿಂಗ್ ಜಾಕಿ ಕ್ವೀನ್ ಮತ್ತು ಒಪ್ಪೀಸ್ ಚಿತ್ರಗಳು ನಟನ ಕೈಯಲ್ಲಿವೆ.

    ದೀಕ್ಷಿತ್ ಶೆಟ್ಟಿ ಅವರು 2020ರಲ್ಲಿ ‘ದಿಯಾ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಬಳಿಕ ಅವರು ಕೆಟಿಎಂ ಮತ್ತು ಬ್ಲಿಂಕ್ ಮತ್ತು ತೆಲುಗು ಚಿತ್ರಗಳಾದ ಮುಗ್ಗುರು ಮೊನಗಲ್ಲು, ದಿ ರೋಸ್ ವಿಲ್ಲಾ ನಟಿಸಿದ್ದಾರೆ. ತೆಲುಗಿನಲ್ಲಿ ನಾನಿ ಮತ್ತು ಕೀರ್ತಿ ಸುರೇಶ್ ಜೊತೆ ‘ದಸರಾ’ (Dasara) ಸಿನಿಮಾ ಮಾಡಿ ಗೆದ್ದಿದ್ದಾರೆ.

  • ಮಾಲಿವುಡ್‌ಗೆ ಕಾಲಿಟ್ಟ ‘ದಿಯಾ’ ಹೀರೋ ದೀಕ್ಷಿತ್ ಶೆಟ್ಟಿ

    ಮಾಲಿವುಡ್‌ಗೆ ಕಾಲಿಟ್ಟ ‘ದಿಯಾ’ ಹೀರೋ ದೀಕ್ಷಿತ್ ಶೆಟ್ಟಿ

    ‘ದಿಯಾ’ (Dia) ಸಿನಿಮಾದಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದ ದೀಕ್ಷಿತ್ ಶೆಟ್ಟಿ (Dheekshith Shetty) ‘ದಸರಾ’ (Dasara) ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸಿನಿ ಪ್ರಪಂಚಕ್ಕೆ ಪರಿಚಿತರಾಗಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಗೆಳೆಯನಿಗೆ ದಸರಾದಲ್ಲಿ ಬಣ್ಣ ಹಚ್ಚಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿರುವ ಈ ಚಾಕ್ಲೇಟ್ ಹೀರೋ, ಈಗ ಮಲಯಾಳಂ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ದಾರೆ.

    ಪ್ಯಾರಾ ಸೈಕಲಾಜಿಕಲ್ ಕಥಾಹಂದರ ಹೊಂದಿರುವ ‘ಒಪ್ಪೀಸ್’ (Oppis) ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗಷ್ಟೇ ಕೇರಳದಲ್ಲಿ ಸರಳವಾಗಿ ನಡೆದಿದೆ. 10 ವರ್ಷಗಳ ಕಾಲ ವಿದೇಶದಲ್ಲಿದ್ದ ವ್ಯಕ್ತಿ ತಾನು ಹುಟ್ಟಿ ಬೆಳೆದ ಕೇರಳಗೆ ವಾಪಸ್ ಆದಾಗ ಏನಾಗುತ್ತದೆ ಅನ್ನೋದೆ ಕಥೆಯ ತಿರುಳು. ಫೆಬ್ರವರಿಯಿಂದ ಒಪ್ಪೀಸ್ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಸೌಜನ್ ಜೋಸೆಫ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಪ್ರದ್ಯುಮನ್ಹಾ ಕೊಳ್ಳೇಕಾಲ ಬಂಡವಾಳ ಹೂಡಿದ್ದಾರೆ. ಎಂ ಜಯಚಂದ್ರನ್ ಮ್ಯೂಸಿಕ್ ಚಿತ್ರಕ್ಕಿದೆ.

    ರಂಗಭೂಮಿಯಿಂದ ಕಿರುತೆರೆ ಹಾಗೂ ಹಿರಿತೆರೆಗೆ ಬಂದು ‘ದಿಯಾ’ ಚಿತ್ರದ ಮೂಲಕ ಪ್ರೇಕ್ಷಕರ ಮನ ಸೆಳೆದಿದ್ದ ಸ್ಪುರದ್ರೂಪಿ ನಟ ದೀಕ್ಷಿತ್ ಶೆಟ್ಟಿ. ಸದ್ಯ ಅವರೀಗ ‘ಬ್ಲಿಂಕ್’ ಎಂಬ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ರವಿಚಂದ್ರ ಎ.ಜೆ ಎಂಬುವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಶ್ರೀನಿಧಿ ‘ಬೆಂಗಳೂರು ಕಥೆ’ ಬರೆದು ನಿರ್ದೇಶನ ಮಾಡಿದ್ದಾರೆ. ಮಾರ್ಚ್ 8ಕ್ಕೆ ‘ಬ್ಲಿಂಕ್’ ರಿಲೀಸ್ ಆಗ್ತಿದೆ.

    ಇದರ ಹೊರತಾಗಿ ದೀಕ್ಷಿತ್, ಅಲ್ಲು ಅರವಿಂದ್ ಪ್ರೆಸೆಂಟ್ ಮಾಡುತ್ತಿರುವ ‘ಗರ್ಲ್ ಫ್ರೆಂಡ್’ ಸಿನಿಮಾದಲ್ಲಿಯೂ ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸರಳವಾಗಿ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ.ದೀಕ್ಷಿತ್ ಬರ್ತ್ ಡೇ ಸ್ಪೆಷಲ್ ಆಗಿ ‘ಗರ್ಲ್ ಫ್ರೆಂಡ್’ (Girl Friend) ಸಿನಿಮಾದ ಸಣ್ಣ ಗ್ಲಿಂಪ್ಸ್ ರಿಲೀಸ್ ಮಾಡಿ ಚಿತ್ರತಂಡ ಶುಭಾಶಯ ಕೋರಿದೆ. ಇದನ್ನೂ ಓದಿ:ಮಕ್ಕಳ ಕಲ್ಯಾಣಕ್ಕೆ 1 ಲಕ್ಷ ದೇಣಿಗೆ ನೀಡಿದ ರಣ್‌ಬೀರ್ ಕಪೂರ್

    ‘ರಂಗಿತರಂಗ’, ‘ಅವನೇ ಶ್ರೀಮನ್ನಾರಾಯಣ’ ಹಾಗೂ ‘ಸ್ಪೂಕಿ ಕಾಲೇಜು’ ಗಳಂತಹ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ಹೆಚ್.ಕೆ.ಪ್ರಕಾಶ್ ನಿರ್ಮಾಣದ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾದಲ್ಲಿಯೂ ದಿಯಾ ಹೀರೋ ಬಣ್ಣ ಹಚ್ಚಿದ್ದಾರೆ. ಇನ್ನೂ, ದೀಕ್ಷಿತ್ ನಟನೆಯ ‘ಕೆಟಿಎಂ’ ಫೆಬ್ರವರಿಯಲ್ಲಿ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ ತಮಿಳು ಸಿನಿಮಾವೊಂದು ತೆರೆಗೆ ಬರಲು ಅಣಿಯಾಗಿದೆ.

  • ‘ಜೇನುಗೂಡಿ’ನಿಂದ ದಿಯಾ ಔಟ್- ಹೊಸ ನಟಿಯ ಆಗಮನ

    ‘ಜೇನುಗೂಡಿ’ನಿಂದ ದಿಯಾ ಔಟ್- ಹೊಸ ನಟಿಯ ಆಗಮನ

    ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಜೇನುಗೂಡಿʼನಿಂದ (Jenugudu) ನಟಿ ನಿತ್ಯಾ ಗೌಡ (Nithya Gowda), ದಿಯಾ ಪಾತ್ರಧಾರಿ ಹೊರ ಬಂದಿದ್ದಾರೆ. ದಿಯಾ ರೋಲ್‌ಗೆ ‘ಕನ್ನಡತಿ’ ನಟಿಯ ಎಂಟ್ರಿಯಾಗಿದೆ.

    ಶಶಾಂಕ್- ದಿಯಾ ಕ್ಯೂಟ್ ಲವ್ ಸ್ಟೋರಿ, ಕುಟುಂಬ ಮಹತ್ವ ಸಾರುವ ಕಥೆಯೇ ಜೇನುಗೂಡು ಸೀರಿಯಲ್. ಸದಾ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದ ಶಶಾಂಕ್- ದಿಯಾ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಆದರೆ ನಾಯಕಿ ನಟಿ ಈಗ ದಿಯಾ ಪಾತ್ರದಿಂದ ಹೊರ ಬರುವ ಮೂಲಕ ಪ್ರೇಕ್ಷಕರಿಗೆ ಶಾಕ್ ಕೊಟ್ಟಿದ್ದಾರೆ.

    ‘ಜೇನುಗೂಡು’ ಸೀರಿಯಲ್‌ನ ಕಥಾ ನಾಯಕಿಯ ಬದಲಾವಣೆ ಆಗಿದೆ.ಈಗಾಗಲೇ ಸೀರಿಯಲ್‌ಗೆ ಗುಡ್ ಬೈ ಹೇಳಿದ್ದಾರಂತೆ ದಿಯಾ ಅಲಿಯಾಸ್ ನಿತ್ಯಾ. ಅವರ ಪಾತ್ರಕ್ಕೆ ‘ಕನ್ನಡತಿ’ ಖ್ಯಾತಿಯ ಅಮೃತಾ ಮೂರ್ತಿ (Amrutha Murthy) ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಅಣ್ಣ ತಂಗಿ ಸೀರಿಯಲ್‌ಗೆ ‘ಟಗರು’ ನಟಿ ಮಾನ್ವಿತಾ ಸಾಥ್

    ಜನಪ್ರಿಯ ಸೀರಿಯಲ್ ‘ಕನ್ನಡತಿʼ ಹೀರೋ ಹರ್ಷನ ತಂಗಿಯಾಗಿ ನಟಿಸಿದ್ದ ಅಮೃತಾ ಬಳಿಕ ‘ಜೊತೆ ಜೊತೆಯಲಿ’ ಕೂಡ ನಟಿಸಿದರು. ಈಗ ದಿಯಾ ಪಾತ್ರಕ್ಕೆ ಜೀವತುಂಬಲು ಅಮೃತಾ ಸಜ್ಜಾಗಿದ್ದಾರೆ.

  • ಕೆ.ಆರ್.ಮಾರ್ಕೆಟ್ ನಲ್ಲಿ ಕಾಣಿಸಿಕೊಂಡ ದಿಯಾ ಬ್ಯೂಟಿ  ಖುಷಿ

    ಕೆ.ಆರ್.ಮಾರ್ಕೆಟ್ ನಲ್ಲಿ ಕಾಣಿಸಿಕೊಂಡ ದಿಯಾ ಬ್ಯೂಟಿ ಖುಷಿ

    ದಿಯಾ (Dia) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿ ಇಟ್ಟ ಸರಳ ಸಿಗ್ದ ಸುಂದರಿ ಖುಷಿ ರವಿ (Khushi Ravi) ಹೊಸ ಲುಕ್ ನಲ್ಲಿ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದಾರೆ. ಅದೂ ಅತ್ಯಂತ ಜನಬೀಡು ಪ್ರದೇಶವಾದ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ (K.R. Market) ಎನ್ನುವುದು ಮತ್ತೊಂದು ವಿಶೇಷ.

    ಬೆಂಗಳೂರಿನ ಕೆ ಆರ್ ಮಾರುಕಟ್ಟೆಯಲ್ಲಿ ಬೆಳಂ ಬೆಳಗ್ಗೆ ಹೂವುಗಳ ಮಧ್ಯೆ ಫೋಟೋಗೆ (Photoshoot) ಫೋಸ್ ಕೊಟ್ಟಿದ್ದಾರೆ. ತಿಳಿನೀಲಿ ಬಣ್ಣದ ಸೀರೆಯುಟ್ಟು ಹೋಮ್ಲಿ ಲುಕ್ ನಲ್ಲಿ ಕಂಗೊಳಿಸಿರುವ ಖುಷಿಯ ಚೆಂದದ ಪಟ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಇದನ್ನೂ ಓದಿ:ಹೊಸ ಫೋಟೋಶೂಟ್‌ನಿಂದ ಇಂಟರ್‌ನೆಟ್‌ ಬೆಂಕಿ ಹಚ್ಚಿದ ರಶ್ಮಿಕಾ ಮಂದಣ್ಣ

    ಹೂವುಗಳ‌ ಮಧ್ಯೆ ಮತ್ತೊಂದು ಹೂವು ನೋಡಿ ಫ್ಯಾನ್ಸ್ ಮನಮೋಹಕ ಎನ್ನುತ್ತಿದ್ದಾರೆ. ವಿಂಟೇಜ್ ಲುಕ್ ನಲ್ಲಿ ಬಹಳ ಸೊಗಸಾಗಿ ಮೂಡಿಬಂದಿರುವ ಫೋಟೋಶೂಟ್ ಹಿಂದಿನ ಶಕ್ತಿ ನಿರ್ಮಾಪಕ ನಾಗರಾಜ್ ಸೋಮಯಾಜಿ.

    ಈ ಸ್ಪೆಷಲ್ ಫೋಟೋಶೂಟ್ ಐಡಿಯಾ ಹಾಗೂ ಫೋಟೋಗ್ರಫಿ ಕೈಚಳಕ ಇವರದ್ದೆ. ತಮ್ಮದೇ ಫೋಕಸ್ ಸ್ಟುಡಿಯೋನಡಿ ಬ್ಯೂಟಿಫುಲ್ ಫೋಟೋಶೂಟ್ ಮಾಡಿದ್ದಾರೆ.  ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿ ಕಾರ್ಯಕ್ರಮಗಳು ಸೇರಿದಂತೆ ಒಂದಿಷ್ಟು ತಾರೆಯರಿಗೆ ಫೋಕಸ್ ಫೋಟೋಗ್ರಫಿ ಸ್ಟುಡಿಯೋ ಅಚ್ಚುಮೆಚ್ಚು.

    ಸೆಲೆಬ್ರಿಟಿಗಳ ಫೋಟೋಶೂಟ್, ವೆಡ್ಡಿಂಗ್ ಫೋಟೋಗ್ರಫಿ ಹಾಗೂ ನಾನಾ ಕಾರ್ಯಕ್ರಮಗಳ ಸೇರಿದಂತೆ ಇನ್ನಿತರ ಶುಭ ಸಂದರ್ಭದ ಚೆಂದದ ಫೋಟೋಗಳನ್ನು ಸೆರೆಹಿಡಿಯುವಲ್ಲಿ ನಾಗರಾಜ್ ಸೋಮಯಾಜಿ  (Nagaraj Somyaji)ಹೆಸರುವಾಸಿ.

  • ನಾನಿ ಸಿನಿಮಾದಲ್ಲಿ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಟನೆ

    ನಾನಿ ಸಿನಿಮಾದಲ್ಲಿ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಟನೆ

    ‘ದಿಯಾ’ (Diya) ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ದೀಕ್ಷಿತ್ ಶೆಟ್ಟಿ (Dixit Shetty) ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಬೆಳ್ಳಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ‘ದಿಯಾ’ ಸಿನಿಮಾದಲ್ಲಿ ಸಿಂಪಲ್ ಹುಡುಗನ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದ ದೀಕ್ಷಿತ್ ನ್ಯಾಚುರಲ್ ಸ್ಟಾರ್ ನಾನಿ (Nani) ಅಭಿನಯದ ‘ದಸರಾ’ (Dasara) ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಇದೇ ಮಾರ್ಚ್ 30ರಂದು ‘ದಸರಾ’ ವರ್ಲ್ಡ್ ವೈಡ್ ಬಿಡುಗಡೆಯಾಗುತ್ತಿದ್ದು, ಸೂರಿ ಪಾತ್ರದ ಮೂಲಕ ದೀಕ್ಷಿತ್ ಶೆಟ್ಟಿ ತೆರೆ ಮೇಲೆ ಬರ್ತಿದ್ದಾರೆ.

    ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ನ್ಯಾಚುರಲ್ ಸ್ಟಾರ್ ನಾನಿ, ಕೀರ್ತಿ ಸುರೇಶ್ ಅಭಿನಯದ ‘ದಸರಾ’ ಸಖತ್ ಬಝ್ ಕ್ರಿಯೇಟ್ ಮಾಡಿದೆ. ಟೀಸರ್ ಮೂಲಕ ವರ್ಲ್ಡ್ ವೈಡ್ ಸಖತ್ ಸೌಂಡ್ ಮಾಡಿರುವ ಈ ಚಿತ್ರ ನಾನಿ ಬಹು ನಿರೀಕ್ಷಿತ  ಪ್ಯಾನ್ ಇಂಡಿಯಾ ಪ್ರಾಜೆಕ್ಟ್. ಈ ಚಿತ್ರದಲ್ಲಿ ಕನ್ನಡದ ನಟ ದೀಕ್ಷಿತ್ ಶೆಟ್ಟಿ ನ್ಯಾಚುರಲ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಿರೋದು ವಿಶೇಷ. ಇದನ್ನೂ ಓದಿ: Biffes 2023- ಇಂದು ಸಂಜೆ 4.30ಕ್ಕೆ ಬೆಂಗಳೂರು ಚಿತ್ರೋತ್ಸವಕ್ಕೆ ಚಾಲನೆ

    ನಾನಿ ಸರ್ ಪ್ರೊಡಕ್ಷನ್ ಹೌಸ್ ನಡಿ ನಿರ್ಮಾಣವಾದ ‘ಮೀಟ್ ಕ್ಯೂಟ್’ ವೆಬ್ ಸೀರೀಸ್ ನಲ್ಲಿ ನಟಿಸಿದ್ದೆ. ವೆಬ್ ಸೀರೀಸ್ ಸಹ ನಿರ್ದೇಶಕರಾದ ವಿನಯ್ ನನ್ನ ಅಭಿನಯ ನೋಡಿ ದಸರಾ ಸಿನಿಮಾಗೆ ರೆಫರ್ ಮಾಡಿದ್ರು. ನಾನಿ ಸರ್ ಕೂಡ ವೆಬ್ ಸೀರೀಸ್ ನಲ್ಲಿ ನನ್ನ ಅಭಿನಯ ನೋಡಿ ಮೆಚ್ಚಿಕೊಂಡಿದ್ರು ಇದ್ರಿಂದ ದಸರಾ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ತು ಎನ್ನುತ್ತಾರೆ ದೀಕ್ಷಿತ್ ಶೆಟ್ಟಿ.

    ಚಿತ್ರದಲ್ಲಿ ಸೂರಿ ಎಂಬ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಇಡೀ ಸಿನಿಮಾದಲ್ಲಿ ಈ ಪಾತ್ರ ಕ್ಯಾರಿಯಾಗುತ್ತೆ. ಹತ್ತು ತಿಂಗಳು ‘ದಸರಾ’ ಸಿನಿಮಾ ತಂಡದೊಂದಿಗೆ ಕೆಲಸ ಮಾಡಿದ್ದೇನೆ. ಈ ಚಿತ್ರ ಅದ್ಭುತ ಅನುಭವ ನೀಡಿದೆ. ನಿರ್ದೇಶಕರ ಜೊತೆಗೆ ನಾನಿ ಸರ್ ಕೂಡ ನನ್ನ ಪಾತ್ರ ನಿರ್ವಹಿಸಲು ಒಂದಿಷ್ಟು ಸಲಹೆ ನೀಡುತ್ತಿದ್ರು ಎಂದು ತಮ್ಮ ಪಾತ್ರ ಹಾಗೂ ‘ದಸರಾ’ ತಂಡದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ ದೀಕ್ಷಿತ್ ಶೆಟ್ಟಿ.

    ‘ದಿಯಾ’ ನಂತರ ದೀಕ್ಷಿತ್ ಶೆಟ್ಟಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದೇ ರೀತಿಯ ಕಥೆ, ಪಾತ್ರಕ್ಕೆ ಸೀಮಿತವಾಗದೇ  ಅಳೆದು ತೂಗಿ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ‘ಕೆಟಿಎಂ’ ಹಾಗೂ ‘ಬ್ಲಿಂಕ್’ ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಗೆ ರೆಡಿಯಾಗಿವೆ.  ಅದಕ್ಕೂ ಮೊದಲು ‘ದಸರಾ’ ಮೂಲಕ ಸೂರಿ ಪಾತ್ರದಲ್ಲಿ ತೆರೆ ಮೇಲೆ ರಂಜಿಸಲು ರೆಡಿಯಾಗಿದ್ದಾರೆ ದೀಕ್ಷಿತ್ ಶೆಟ್ಟಿ.

  • ಧಾರಾವಾಹಿಯಲ್ಲೂ ಪ್ರೀ ವೆಡ್ಡಿಂಗ್ ಫೋಟೋ ಶೂಟ್ : ಜೇನುಗೂಡಿಗೆ ಜವಳಿ ಹಿಡಿದು ಬಂದ ಹಿರಿಯ ನಟ ಉಮೇಶ್

    ಧಾರಾವಾಹಿಯಲ್ಲೂ ಪ್ರೀ ವೆಡ್ಡಿಂಗ್ ಫೋಟೋ ಶೂಟ್ : ಜೇನುಗೂಡಿಗೆ ಜವಳಿ ಹಿಡಿದು ಬಂದ ಹಿರಿಯ ನಟ ಉಮೇಶ್

    ಸ್ಟಾರ್ ಸುವರ್ಣದ ಜೇನುಗೂಡು ಧಾರಾವಾಹಿಯಲ್ಲಿ ಈಗ ಮದುವೆ ಸಂಭ್ರಮ. ಕಿರುತೆರೆಯಲ್ಲಿ ಹಿಂದೆಂದೂ ಕಂಡಿರದ ರೀತಿಯ ಉತ್ತರ ಕರ್ನಾಟಕ ಶೈಲಿಯ ಮದುವೆ ಸಂಭ್ರಮ ಮತ್ತು ಸಂಪ್ರದಾಯಗಳು ಜೇನುಗೂಡು ಧಾರಾವಾಹಿಯಲ್ಲಿ ಕಾಣಸಿಗಲಿದೆ. ಇದೆಲ್ಲಕ್ಕೂ ಮೊದಲು ಧಾರಾವಾಹಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಲಾಗಿದೆ.

    ಧಾರಾವಾಹಿಯೊಂದರಲ್ಲಿ ಮದುವೆಗಾಗಿ ಫೋಟೋಶೂಟ್ ಮಾಡಿರುವುದು ಇದೇ ಮೊದಲು. ಶಶಾಂಕ್ ಮತ್ತು ದಿಯ ಮದುವೆಗೂ ಮುನ್ನ ಉತ್ತರ ಕರ್ನಾಟಕ ಶೈಲಿಯ ಪೇಟ, ಸೀರೆ ತೊಟ್ಟು ಸಂಭ್ರಮಕ್ಕೆ ಸಜ್ಜಾಗಿದ್ದಾರೆ. ಇನ್ನೊಂದು ಕಡೆ ಸೂಟ್ ಮತ್ತು ಗೌನ್ ಹಾಕಿ ಮಾಡರ್ನ್ ಲುಕ್‍ನಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ:ನಟಿ ಸಾಯಿ ಪಲ್ಲವಿ ಬಂಧಿಸಿ : ಬಿಜೆಪಿ ಶಾಸಕ ರಾಜಾ ಸಿಂಗ್ ಆಗ್ರಹ

    ಈ ವಾರದ ಜೇನುಗೂಡು ಧಾರಾವಾಹಿಯ ಮತ್ತೊಂದು ಆಕರ್ಷಣೆ ಹಿರಿಯ ನಟ ಉಮೇಶ್. ನಡುಕೋಟೆ ಮನೆಗೆ ಜವಳಿ ಮಾರಲು ವಿಶೇಷ ಪಾತ್ರದಲ್ಲಿ ಬಂದಿದ್ದಾರೆ. ವಿನಾಯಕ್ ದಾದಾ ಮದುವೆ ಜವಳಿಗಾಗಿ ಎಷ್ಟು ಹಣ ಖರ್ಚು ಮಾಡ್ತಾರೆ, ಮನೆಮಂದಿಗೆಲ್ಲಾ ಉಮೇಶ್ ಅವರು ಯಾವ ಜವಳಿ ಕೊಡಲಿದ್ದಾರೆ ಅಂತ ತಿಳಿದುಕೊಳ್ಳಲು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಜೇನುಗೂಡು ಧಾರಾವಾಹಿಯನ್ನು ಮಿಸ್ ಮಾಡದೇ ನೋಡಿ.

    Live Tv

  • ಹಿಂದಿ ಆಯ್ತು, ಇದೀಗ ಮರಾಠಿಯಲ್ಲೂ ಕನ್ನಡದ ದಿಯಾ

    ಹಿಂದಿ ಆಯ್ತು, ಇದೀಗ ಮರಾಠಿಯಲ್ಲೂ ಕನ್ನಡದ ದಿಯಾ

    ಪೃಥ್ವಿ ಅಂಬರ್ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದ ‘ದಿಯಾ’ ಸಿನಿಮಾ 2020ರಲ್ಲಿ ರಿಲೀಸ್ ಆಗಿ, ಬಾಕ್ಸ್ ಆಫೀಸ್ ಅನ್ನು ಭರ್ತಿ ಮಾಡಿತ್ತು. ಬಹುತೇಕ ಹೊಸಬರೇ ತುಂಬಿದ್ದ ಈ ಸಿನಿಮಾ ಕೇವಲ ಹಣ ಗಳಿಕೆಯಲ್ಲಿ ಮಾತ್ರವಲ್ಲ, ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ವಿಮರ್ಶೆಕರೂ ಮೆಚ್ಚಿಕೊಂಡಿದ್ದರು. ಹೀಗಾಗಿ ಪೃಥ್ವಿ ಅಂಬರ್ ಯುವ ಪೀಳಿಗೆಯ ಭರವಸೆಯ ನಟ ಅನಿಸಿಕೊಂಡರು. ಇದನ್ನೂ ಓದಿ : ಸಿಂಬು ನಟನೆಯ ಚಿತ್ರಕ್ಕೆ ಐಶ್ವರ್ಯ ರಜನೀಕಾಂತ್ ನಿರ್ದೇಶಕಿ

    ನಂತರ ಈ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಯಿತು. ಹಿಂದಿಯಲ್ಲಿ ರೀಮೇಕ್ ಆದರೂ, ನಿರ್ದೇಶಕ ಕೆ.ಎಸ್. ಅಶೋಕ್, ತನ್ನ ಹೀರೋನನ್ನು ತಮ್ಮೊಂದಿಗೆ ಬಾಲಿವುಡ್ ಗೂ ಕರೆದುಕೊಂಡು ಹೋದರೂ, ಇನ್ನೇನು ಆ ಸಿನಿಮಾ ಸಂಪೂರ್ಣ ಶೂಟಿಂಗ್ ಮುಗಿಸಿದೆ ಎನ್ನುವ ಹೊತ್ತಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಈ ಸಿನಿಮಾ ಇದೀಗ ಮರಾಠಿಯಲ್ಲೂ ರಿಮೇಕ್ ಆಗುತ್ತಿದೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಹೌದು, ಕನ್ನಡದ ದಿಯಾ, ಹಿಂದಿಯ ನಂತರ ಮರಾಠಿಯಲ್ಲೂ ಮೂಡಿ ಬರಲಿದೆ. ವಿಶೇಷ ಅಂದರೆ, ನಾಯಕ ಪೃಥ್ವಿ ಅಂಬರ್ ಮರಾಠಿ ಸಿನಿಮಾದಲ್ಲೂ ನಾಯಕನಾಗಿ ಮುಂದುವರೆಯಲಿದ್ದಾರೆ. ಸಿನಿಮಾ ಮರಾಠಿಯಲ್ಲಿ ಮೂಡಿ ಬಂದರೂ, ಕನ್ನಡದ ನೆಲದಲ್ಲೇ ಚಿತ್ರವನ್ನು ಶೂಟ್ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲೇ ಚಿತ್ರಕ್ಕೆ ಮುಹೂರ್ತ ನಡೆದಿದೆ. ಮೈಸೂರು, ಮಂಗಳೂರು ಸೇರಿದಂತೆ ಇತರ ಸ್ಥಳಗಳಲ್ಲಿ ಶೂಟಿಂಗ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ನಾಯಕಿಯಾಗಿ ರಿತಿಕಾ ಶ್ರೋತ್ರಿ ನಟಿಸುತ್ತಿದ್ದು, ಕಿರುತೆರೆ ನಟಿ ಅಜಿಂಕ್ಯಾ ರಾವುದ್, ಮೃಣಾಲ್ ಕುಲಕರ್ಣಿ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇರಲಿದ್ದಾರೆ.

  • ದೂರದರ್ಶನದಲ್ಲಿ ಸಿಗ್ತಾರೆ ದಿಯಾ ಹೀರೋ

    ದೂರದರ್ಶನದಲ್ಲಿ ಸಿಗ್ತಾರೆ ದಿಯಾ ಹೀರೋ

    ದಿಯಾ ಸಿನಿಮಾದ ಮೂಲಕ ಕನ್ನಡದ ಪ್ರೇಕ್ಷಕರಿಗೆ ಪರಿಚಯವಾದ ಪೃಥ್ವಿ ಅಂಬರ್ ಇದೀಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಸುಕೇಶ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಸಿನಿಮಾದಲ್ಲಿ ಪೃಥ್ವಿ ಹೊಸ ಬಗೆಯ ಪಾತ್ರ ನಿರ್ವಹಿಸಲಿದ್ದಾರೆ. ಇದನ್ನೂ ಓದಿ : ಸ್ಟಾರ್ ನಟನ ಮಗಳನ್ನೂ ಬಿಡಲಿಲ್ಲ ಕಾಸ್ಟಿಂಗ್ ಕೌಚ್ : ನೋವು ಹಂಚಿಕೊಂಡ ಮೋಹನ್ ಬಾಬು ಪುತ್ರಿ

    ಈ ಚಿತ್ರಕ್ಕಾಗಿ 1986ರಲ್ಲಿ ನಡೆವ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು. ಈ ಕಾಲದಲ್ಲಿ ನಡೆದ ಪ್ರಮುಖ ಘಟನೆಯೇ ಸಿನಿಮಾವಂತೆ. ಇದನ್ನೂ ಓದಿ : ಮದ್ವೆ ಸೀರೆ ವಾಪಸ್ಸು ಕೊಟ್ರಂತೆ ಸಮಂತಾ: ಮಳೆ ನಿಂತರು ಮಳೆ ಹನಿ ನಿಲ್ಲದು

    ಪೃಥ್ವಿ ಅಂಬರ್ ಕಡಿಮೆ ಸಮಯದಲ್ಲೇ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪ್ರತಿ ಸಿನಿಮಾದಲ್ಲೂ ಬೇರೆ ಬೇರೆ ಬಗೆಯ ಪಾತ್ರಗಳನ್ನೇ ಅವರು ಮಾಡುತ್ತಿದ್ದಾರೆ. ದಿಯಾ ಸಿನಿಮಾದಿಂದ ಲಕ್ ತಿರುಗಿದೆ ಮೇಲೆ ಪೃಥ್ವಿ ಅದೃಷ್ಟ ಖುಲಾಯಿಸಿದೆ. ಇದನ್ನೂ ಓದಿ : ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ

    ನಿರ್ದೇಶಕ ಸುಕೇಶ್ ಸಿನಿಮಾ ರಂಗಕ್ಕೆ ಹೊಸಬರೇನೂ ಅಲ್ಲ. ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಸ್ವತಂತ್ರವಾಗಿ ಕಿರುಚಿತ್ರವನ್ನು ನಿರ್ದೇಶನವನ್ನೂ ಮಾಡಿದೆ. ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಮುಂದಾಗಿದ್ದಾರೆ.