Tag: ದಿಪೀಕಾ ಪಡುಕೋಣೆ

  • ಕಡಲ ತೀರದಲ್ಲಿ ನಿಂತು ಪತಿಯನ್ನು ತಬ್ಬಿ ಚುಂಬಿಸಿದ ದೀಪಿಕಾ ಪಡುಕೋಣೆ

    ಕಡಲ ತೀರದಲ್ಲಿ ನಿಂತು ಪತಿಯನ್ನು ತಬ್ಬಿ ಚುಂಬಿಸಿದ ದೀಪಿಕಾ ಪಡುಕೋಣೆ

    ಮುಂಬೈ: ಬಾಲಿವುಡ್ ನಟಿ ದಿಪೀಕಾ ಪಡುಕೋಣೆ ಮತ್ತು ಅವರ ಪತಿ ಪತಿ ರಣವೀರ್ ಸಿಂಗ್ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಿರುತ್ತಾರೆ. ದೀಪಿಕಾ ಪಡುಕೋಣೆ ಪತಿಯ ತುಟಿಗೆ ಚುಂಬಿಸಿದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಪತಿ ರಣವೀರ್ ಸಿಂಗ್ ಯಾವಾಗಲೂ ನನ್ನನ್ನು ತಬ್ಬಿಕೊಳ್ಳಲು ಮತ್ತು ಚುಂಬಿಸಲು ಇಷ್ಟಪಡುತ್ತಾರೆ ಎಂದು ಈ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು. ಈಗ ಹೇಳಿಕೆಯಂತೆ ಈಗ ಒಂದು ಫೋಟೋವನ್ನು ಅಭಿಮಾನಿಗಳು ಮೆಚ್ಚಿಕೊಂಡು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ

     

    View this post on Instagram

     

    A post shared by Ranveer Singh (@ranveersingh)

    ದಂಪತಿ ತಮ್ಮ ರಜೆಯನ್ನು ಬೀಚ್‍ನಲ್ಲಿ ಕಳೆಯುತ್ತಿದ್ದಾರೆ. ಆ ಫೋಟೋದಲ್ಲಿ ಇಬ್ಬರು ಬೀಚ್‍ನಲ್ಲಿ ನಿಂತಿದ್ದಾರೆ ರಣವೀರ್‌ನನ್ನು ದೀಪಿಕಾ ಗಟ್ಟಿಯಾಗಿ ತಬ್ಬಿಕೊಂಡು  ಚುಂಬಿಸಿದ್ದಾರೆ. ಈ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡ ರಣವೀರ್ ಸಿಂಗ್ ಮಜವಾದ ಕ್ಯಾಪಶನ್ ಕೊಟ್ಟಿದ್ದಾರೆ.

    ದೀಪಿಕಾ ಪಡುಕೋಣೆ ಅಭಿನಯದ ಗೆಹ್ರೈಯಾನ್ ಶೀರ್ಷಿಕೆ ಗೀತೆ ಡೂಬೆಯ ಸಾಹಿತ್ಯದೊಂದಿಗೆ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ಬಾಲಿವುಡ್ ಸೆಲೆಬ್ರೆಟಿಗಳು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ.

  • ಮದ್ವೆ ಬಳಿಕ ಮಕ್ಕಳ ಬಗ್ಗೆ ಕೇಳಿದ ಪ್ರಶ್ನೆಗೆ ತನ್ನ ಪ್ಲಾನ್ ಬಿಚ್ಚಿಟ್ಟ ರಣ್‍ವೀರ್

    ಮದ್ವೆ ಬಳಿಕ ಮಕ್ಕಳ ಬಗ್ಗೆ ಕೇಳಿದ ಪ್ರಶ್ನೆಗೆ ತನ್ನ ಪ್ಲಾನ್ ಬಿಚ್ಚಿಟ್ಟ ರಣ್‍ವೀರ್

    ಮುಂಬೈ: ಬಾಲಿವುಡ್‍ನ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಅವರು ನವೆಂಬರ್ 14 ಮತ್ತು 15 ರಂದು ಇಟಲಿಯಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದು, ವಿವಾಹದ ಬಳಿಕ ಮೊದಲ ಬಾರಿಗೆ ರಣ್‍ವೀರ್ ಸಿಂಗ್ ಮಾತನಾಡಿದ್ದಾರೆ.

    ನಟ ರಣ್‍ವೀರ್ ಸಿಂಗ್ ಶುಕ್ರವಾರ ಸಮಾರಂಭವೊಂದರಲ್ಲಿ ಭಾಗವಹಿಸಿದ್ದು, ಅಲ್ಲಿ ಅವರು ಮದುವೆ, ಸಿನಿಮಾಗಳು, ಚಿತ್ರರಂಗದಲ್ಲಿ ಮೀಟೂ ಚಳುವಳಿ ಮತ್ತು ತಂತ್ರಜ್ಞಾನದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ರಣವೀರ್ ದೀಪಿಕಾ ಪಡುಕೋಣೆ ಅವರೊಂದಿಗಿನ ಸಂಬಂಧದ ಬಗ್ಗೆ ಮತ್ತು ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.

    ಸಮಾರಂಭದಲ್ಲಿ ಮದುವೆ ಬಳಿಕ ಮಕ್ಕಳನ್ನು ಪಡೆಯುವ ಬಗ್ಗೆ ಒತ್ತಡ ಇದ್ಯಾ ಎಂಬ ಪ್ರಶ್ನೆ ಹೇಳಿದ್ದಾರೆ. ಇದಕ್ಕೆ ನಕ್ಕು ಉತ್ತರಿಸಿದ ರಣ್‍ವೀರ್, ಮಕ್ಕಳ ಬಗ್ಗೆ ನಾನು ಏನು ಹೇಳಲು ಸಾಧ್ಯವಿಲ್ಲ. ಇದು ನನ್ನ ನಿರ್ಧಾರವಲ್ಲ. ಅದು ದೀಪಿಕಾಗೆ ಸಂಬಂಧಿಸಿದ್ದು, ಇದರಲ್ಲಿ ಆಕೆಯ ನಿರ್ಧಾರವೇ ಅಂತಿಮವಾಗಿರುತ್ತದೆ. ಏಕೆಂದರೆ ನಮ್ಮ ಜೀವನದ ಬಗ್ಗೆ ದೀಪಿಕಾ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾಳೆ ಎಂದು ಹೇಳಿದ್ದಾರೆ.

    ಆಕೆಯನ್ನು ಮದುವೆಯಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ದೀಪಿಕಾ ಎಲ್ಲದರಲ್ಲೂ ತುಂಬಾ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಅಷ್ಟೇ ಅಲ್ಲದೇ ಆಕೆ ಜವಾಬ್ದಾರಿಯುತ ವ್ಯಕ್ತಿ ಎಂದು ಪತ್ನಿಯನ್ನು ರಣ್‍ವೀರ್ ಹೊಗಳಿದ್ದಾರೆ.

    ಈ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದ ರಣ್‍ವೀರ್ ಸಿಂಗ್ ಇಬ್ಬರ ನಡುವಿನ ಭಾಂದವ್ಯದ ಬಗ್ಗೆ ಮಾತನಾಡಿದ್ದರು. ದೀಪಿಕಾ ನಾನು 6 ತಿಂಗಳಿನಿಂದ ರಿಲೆಷನ್‍ಶಿಪ್‍ನಲ್ಲಿದ್ದು, ತನ್ನ ಮಕ್ಕಳಿಗೆ ದೀಪಿಯಾ ಒಳ್ಳೆಯ ತಾಯಿಯಾಗುತ್ತಾಳೆ ಎಂದು ಹೇಳಿದ್ದರು.

    ದೀಪಿಕಾ ಮತ್ತು ರಣವೀರ್ ಜೋಡಿಯ ಮೊದಲ ಸಿನಿಮಾ ‘ಗೋಲಿಯೋಂ ಕೀ ರಾಸ್‍ಲೀಲಾ- ರಾಮ್‍ಲೀಲಾ’ 2013ರ ನವೆಂಬರ್ 15 ರಂದು ಬಿಡುಗಡೆಯಾಗಿತ್ತು. ಈ ಸಿನಿಮಾ ಬಿಡುಗಡೆಯಾದ ದಿನವೇ ಈ ವರ್ಷ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಚಿಕ್ಕಮಗ್ಳೂರಿನಲ್ಲಿದ್ದಾರೆ ಸನ್ನಿ ಲಿಯೋನ್, ದೀಪಿಕಾ ಪಡುಕೋಣೆ!

    ಚಿಕ್ಕಮಗ್ಳೂರಿನಲ್ಲಿದ್ದಾರೆ ಸನ್ನಿ ಲಿಯೋನ್, ದೀಪಿಕಾ ಪಡುಕೋಣೆ!

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಗೆ ಬಾಲಿವುಡ್ ನಟಿಯರಾದ ಸನ್ನಿ ಲಿಯೋನ್ ಹಾಗೂ ದೀಪಿಕಾ ಪಡುಕೋಣೆ ಆಗಮಿಸಲಿದ್ದಾರೆ. ಅಯ್ಯೋ, ಹೌದಾ ನಮ್ಗೆ ಗೊತ್ತೇ ಇಲ್ಲ ಅಂತ ಗಾಬರಿಯಾಗಬೇಡಿ.

    ಕಳಸ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಚೆನ್ನಯ್ಯ ಮಾಡಿದ ರಸ್ತೆ ಮೂರೇ ತಿಂಗಳಿಗೆ ಅಡಿಯಷ್ಟು ಗುಂಡಿ ಬಿದ್ದು ಹಾಳಾಗಿ ಹೋಗಿದೆ. ಇದರಿಂದಾಗಿ ಸ್ಥಳೀಯರು ಸರ್ಕಾರದ ವಿರುದ್ಧ ಈ ರೀತಿ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

    ಕಳಸ ಪಟ್ಟಣದ ಯುವಕರು ಗುಂಡಿ ಬಿದ್ದ ರಸ್ತೆಯನ್ನ ಸ್ವಿಮ್ಮಿಂಗ್ ಪೂಲ್ ನಂತೆ ಫೋಟೋಶಾಪ್‍ನಲ್ಲಿ ಎಡಿಟ್ ಮಾಡಿ ಎಂಜಿನಿಯರ್ ಹಾಗೂ ಕಂಟ್ರಾಕ್ಟರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುಂಡಿ ಬಿದ್ದ ರಸ್ತೆಯಲ್ಲಿ ದೀಪಿಕಾ ಪಡುಕೋಣೆ ಹಾಗೂ ಸನ್ನಿ ಲಿಯೋನ್‍ರನ್ನು ಕೂರಿಸಿ ಇಂದು ಬೆಳಗ್ಗೆ ಸನ್ನಿ ಹಾಗೂ ಪಡುಕೋಣೆ 10 ಗಂಟೆಗೆ ಈಜು ಕೊಳವನ್ನ ಉದ್ಘಾಟಿಸಲಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಮತ್ಸ್ಯ ಕನ್ಯೆ ವೇಷ ಧರಿಸಿ ನಟಿ ಸೋನು ಗೌಡ ಬೆಂಗ್ಳೂರಲ್ಲಿ ವಿಶಿಷ್ಟ ಪ್ರತಿಭಟನೆ

    ಇದೇ ಈಜು ಕೊಳದ ಬಳಿ ತಮಿಳಿನ ಖ್ಯಾತ ನಟ ವಿಜಯ್ ಸೆಲ್ಫಿ ತೆಗೆದುಕೊಂಡಿರುವ ಫೋಟೋಗಳು ಕೂಡ ವಾಟ್ಸಾಪ್‍ನಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ವೈರಲ್ ಆಗಿದೆ. ಮೂರು ತಿಂಗಳ ಹಿಂದೆ ಬಾಳೂರು ಹ್ಯಾಂಡ್‍ಪೋಸ್ಟ್ ನಿಂದ ಕಳಸಾದ ಅಂಬಾತೀರ್ಥ ಬಸ್ ನಿಲ್ದಾಣದವರೆಗೆ ನಿರ್ಮಿಸಿರೋ ರಸ್ತೆ ಇದಾಗಿದೆ. ಎರಡು ವರ್ಷ ನಿರ್ವಹಣೆಯ ಜವಾಬ್ದಾರಿ ಹೊತ್ತಿರೋ ಎಂಜಿನಿಯರ್ ಹಾಗೂ ಕಂಟ್ರಾಕ್ಟರ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳಿಯರು ಎಂಜಿನಿಯರ್ ಚೆನ್ನಯ್ಯ ಹಾಗೂ ಕಂಟ್ರಾಕ್ಟರ್ ಹಾಲಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.