Tag: ದಿನೇಶ್ ತ್ರಿವೇದಿ

  • ಟಿಎಂಸಿ ಮಾಜಿ ಸಂಸದ ದಿನೇಶ್ ತ್ರಿವೇದಿ ಬಿಜೆಪಿಗೆ ಸೇರ್ಪಡೆ

    ಟಿಎಂಸಿ ಮಾಜಿ ಸಂಸದ ದಿನೇಶ್ ತ್ರಿವೇದಿ ಬಿಜೆಪಿಗೆ ಸೇರ್ಪಡೆ

    ನವದೆಹಲಿ: ತೃಣಮೂಲ ಕಾಂಗ್ರೆಸ್ ಮಾಜಿ ಸಂಸದ ದಿನೇಶ್ ತ್ರಿವೇದಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ನವದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಪಿಯೂಶ್ ಗೋಯಲ್, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ದಿನೇಶ್ ತ್ರಿವೇದಿ ಅವರು ಉತ್ತಮ ವ್ಯಕ್ತಿಯಾಗಿದ್ದು, ತಪ್ಪಾಗಿ ಟಿಎಂಸಿಯಲ್ಲಿದ್ದರು. ಇದೀಗ ಸರಿಯಾದ ಪಕ್ಷಕ್ಕೆ ಸೇರಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ದಿನೇಶ್ ತ್ರಿವೇದಿ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಜೆ.ಪಿ.ನಡ್ಡಾ ಹೇಳಿದರು. ಇದನ್ನೂ ಓದಿ: ಪ್ರಧಾನಿಗಳು 20 ಅಲ್ಲ 120 ರ‍್ಯಾಲಿ ನಡೆಸಲಿ, ಗೆಲ್ಲೋದು ನಾವೇ: ದೀದಿ ಸವಾಲ್

    ನನಗೆ ಬ್ಯುಸಿನೆಸ್‍ನಲ್ಲಿ ಸ್ವಲ್ಪವೂ ಇಷ್ಟವಿಲ್ಲ, ಹೀಗಾಗಿ ಇಂದು ಜನತಾ ಪರಿವಾರ ಸೇರಿದ್ದೇನೆ. ಆ ಪಕ್ಷದ ಬಗ್ಗೆ ಮಾತನಾಡುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್‍ನ ಹೆಸರನ್ನು ತ್ರಿವೇದಿ ಹೇಳಲಿಲ್ಲ. ಆ ಪಕ್ಷದವರು ಜನರ ಸೇವೆ ಮಾಡುತ್ತಿಲ್ಲ. ಬದಲಿಗೆ ಕುಟುಂಬದ ಸೇವೆ ಮಾಡುತ್ತಿದ್ದಾರೆ. ರಾಜ್ಯದ ಸ್ಥಿತಿಗತಿ ಬಗ್ಗೆ ಹಲವರು ನನ್ನನ್ನು ಪ್ರಶ್ನಿಸುತ್ತಾರೆ. ಹೀಗಾಗಿ ಹೇಳುತ್ತಿದ್ದೇನೆ, ರಾಜ್ಯ ಸರ್ಕಾರದಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: 291 ಅಭ್ಯರ್ಥಿಗಳ ಹೆಸರು ಘೋಷಿಸಿದ ದೀದಿ – ಟಿಕೆಟ್ ಹಂಚಿಕೆ ಲೆಕ್ಕಾಚಾರ ಹೀಗಿದೆ

    ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೋ, ಇಲ್ಲವೋ ಗೊತ್ತಿಲ್ಲ. ಆದರೆ ಚುನಾವಣೆ ಪ್ರಕ್ರಿಯೆಯಲ್ಲಿ ಆ್ಯಕ್ಟಿವ್ ಆಗಿರುತ್ತೇನೆ. ಬಂಗಾಳ ಟಿಎಂಸಿಯನ್ನು ತಿರಸ್ಕರಿಸಿದೆ. ಜನತೆ ಪ್ರಗತಿ ಬಯಸಿದ್ದಾರೆ, ಭ್ರಷ್ಟಾಚಾರ ಅಥವಾ ಹಿಂಸಾಚಾರವನ್ನಲ್ಲ. ನಿಜವಾದ ಬದಲಾವಣೆಗೆ ಜನತೆ ಸಿದ್ಧರಾಗಿದ್ದಾರೆ. ರಾಜಕೀಯ ಆಟವಲ್ಲ, ಅದೊಂದು ಗಂಭೀರ ವಿಚಾರ. ಸಿಎಂ ಮಮತಾ ಬ್ಯಾನರ್ಜಿ ಆಟವಾಡುವ ಭರದಲ್ಲಿ ತಮ್ಮ ಆದರ್ಶಗಳನ್ನು ಮರೆತಿದ್ದಾರೆ ಎಂದು ಅವರ ಹೆಸರನ್ನು ಹೇಳದೆ ತ್ರಿವೇದಿ ವಾಗ್ದಾಳಿ ನಡೆಸಿದರು.

    ದಿನೇಶ್ ತ್ರಿವೇದಿ ಮಾಜಿ ಕೇಂದ್ರ ಸಚಿವರಾಗಿದ್ದು, ಬಜೆಟ್ ಅಧಿವೇಶನದ ವೇಳೆ ಫೆಬ್ರವರಿ 12ರಂದು ತಮ್ಮ ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.