Tag: ದಿನೇಶ್ ಗುಂಡುರಾವ್

  • ಮಂಗಳೂರಿನಲ್ಲಿ ಬೆಂಕಿ ಹಚ್ಚೋ ಬಿಜೆಪಿ ಪ್ರಯೋಗ ವಿಫಲ: ದಿನೇಶ್ ಗುಂಡೂರಾವ್

    ಮಂಗಳೂರಿನಲ್ಲಿ ಬೆಂಕಿ ಹಚ್ಚೋ ಬಿಜೆಪಿ ಪ್ರಯೋಗ ವಿಫಲ: ದಿನೇಶ್ ಗುಂಡೂರಾವ್

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಹಾಸ್ ಶೆಟ್ಟಿ(Suhas Shetty) ಪ್ರಕರಣ ಇಟ್ಟುಕೊಂಡು ಬಿಜೆಪಿ ಅವರು ಬೆಂಕಿ ಹಚ್ಚೋಕೆ ಮುಂದಾಗಿದ್ದರು. ಅವರ ಪ್ರಯೋಗ ಯಶಸ್ವಿಯಾಗಲಿಲ್ಲ ಎಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್(Dinesh Gundu Rao) ಕಿಡಿಕಾರಿದರು.

    ಮೇ 16ರಂದು ಸಿಎಂ ಸಿದ್ದರಾಮಯ್ಯ(Siddaramaiah) ಮಂಗಳೂರು ಪ್ರವಾಸ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಸ್ಪೀಕರ್ ಖಾದರ್ ಮತ್ತು ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆ ಬಳಿಕ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಕಾನೂನು ಸುವ್ಯವಸ್ಥೆ ಬಗ್ಗೆ ಮಾತಾಡಿದ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಕಾನೂನು ಸುವ್ಯವಸ್ಥೆ ಬಗ್ಗೆ ಈಗಾಗಲೇ ಚರ್ಚೆ ಆಗಿದೆ. ಮಂಗಳೂರು ಪೊಲೀಸರು ಅಲರ್ಟ್ ಇದ್ದಾರೆ ಎಂದರು. ಇದನ್ನೂ ಓದಿ: `ಆಪರೇಷನ್ ಸಿಂಧೂರ’ ಇದು ನಿರಂತರ ಕಾರ್ಯಾಚರಣೆ – ಕಿರಣ್ ರಿಜಿಜು

    ಪ್ರಚೋದನಕಾರಿ ಭಾಷಣ ಮಾಡುವವರನ್ನು, ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಪೊಲೀಸರು ಮಾನಿಟರ್ ಮಾಡ್ತಿದ್ದಾರೆ. ಮಂಗಳೂರು ಪೊಲೀಸ್ ನಿಷ್ಪಕ್ಷಪಾತವಾಗಿ ಕೆಲಸ ಮಾಡ್ತಿದ್ದಾರೆ. ನಮ್ಮ ಸರ್ಕಾರದ ಬಗ್ಗೆ ಅಲ್ಲಿನ ಜನರಿಗೆ ನಂಬಿಕೆ ಇದೆ. ಇಂತಹ ಘಟನೆಗಳು ಆಗದಂತೆ ಸೌಹಾರ್ದತೆ, ಶಾಂತಿ ಕಾಪಾಡುವ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೋರ್ಟ್ ಆದೇಶದ ಬಳಿಕ ಜನಾರ್ದನ ರೆಡ್ಡಿ ಶಾಸಕತ್ವ ಅನರ್ಹತೆ ಬಗ್ಗೆ ತೀರ್ಮಾನ – ಯು.ಟಿ.ಖಾದರ್

    ಇಂತಹ ಘಟನೆ ಆದಾಗ ರಾಜಕೀಯವಾಗಿ ಬಳಸಿಕೊಳ್ಳೋ ಸಂಘಟನೆಗಳು ಮಂಗಳೂರಿನಲ್ಲಿ(Mangaluru) ಇವೆ. ಧರ್ಮ ಆಧಾರಿತ ಸಂಘಟನೆಗಳು ಲಾಭಕ್ಕಾಗಿ ಬಳಸಿಕೊಳ್ತಾರೆ. ಸುಹಾಸ್ ಕೇಸ್‌ನಲ್ಲಿ ಹೀಗೆ ಆಯ್ತು. ಗಲಭೆ ಮಾಡಿ, ಬೆಂಕಿ ಹಚ್ಚಿಸೋ ಕೆಲಸ ಮಾಡೋಕೆ ಪ್ರಮುಖ ಪಕ್ಷದ ಮುಖಂಡರು ಪ್ರಚೋದನಾ ಭಾಷಣ ಮಾಡಿದ್ದರು. ಆದರೆ ನಮ್ಮ ಪೊಲೀಸ್ ಹಾಗೂ ಸರ್ಕಾರದ ಕ್ರಮಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಬಿಜೆಪಿ(BJP) ಅವರು ಮಂಗಳೂರಿನಲ್ಲಿ ಬೆಂಕಿ ಹಚ್ಚೋಕೆ ಮುಂದಾಗಿದ್ರು. ಬಿಜೆಪಿ ಅವರ ಪ್ರಯೋಗ ವಿಫಲವಾಯ್ತು. ಬಿಜೆಪಿ ಅವರ ಬೇಳೆ ಬೇಯಲು ನಾವು ಬಿಡಲಿಲ್ಲ. ಅವರ ಉದ್ದೇಶ ಈಡೇರಲಿಲ್ಲ. ಹಾಗೆಯೇ ಅವರ ಪ್ರಯೋಗ ವಿಫಲವಾಯಿತು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರ – ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ್‌ಮೈಂಡ್ ಸಾವು

    ಸೌಹಾರ್ದ ವಾತಾವರಣ ತರಲು ಎಲ್ಲರೂ ಪ್ರಯತ್ನಪಡೋಣ. ನಮ್ಮ ರಾಜಕೀಯ ಬೇರೆ. ಆದರೆ ಇಂತಹ ಕೋಮು ಘಟನೆಗಳು ಆಗದಂತೆ ನಾವೆಲ್ಲ ಕೈ ಜೋಡಿಸಬೇಕು ಎಂದು ಬಿಜೆಪಿ ನಾಯಕರಿಗೆ ಕಿವಿಮಾತು ಹೇಳಿದರು.

  • ಜಿಲ್ಲಾಸ್ಪತ್ರೆಗಳಲ್ಲಿ ಗುಣಮಟ್ಟದ ಔಷಧಿ ಸರಬರಾಜಿಗೆ ಕ್ರಮ: ದಿನೇಶ್ ಗುಂಡೂರಾವ್

    ಜಿಲ್ಲಾಸ್ಪತ್ರೆಗಳಲ್ಲಿ ಗುಣಮಟ್ಟದ ಔಷಧಿ ಸರಬರಾಜಿಗೆ ಕ್ರಮ: ದಿನೇಶ್ ಗುಂಡೂರಾವ್

    -ಕಳಪೆ ಔಷಧಿ ಬಗ್ಗೆ ಕೇಂದ್ರಕ್ಕೆ ಪತ್ರ

    ಬೆಂಗಳೂರು: ಜಿಲ್ಲಾಸ್ಪತ್ರೆಗಳಲ್ಲಿ ಗುಣಮಟ್ಟದ ಔಷಧಿ ಒದಗಿಸಲು ಸರ್ಕಾರ ನಿಯಮ ಜಾರಿ ಮಾಡಿದೆ. ಹೆಚ್ಚು ಬೇಡಿಕೆ ಇರುವ ಔಷಧಿಗಳನ್ನು ಆಸ್ಪತ್ರೆಗಳಿಗೆ ಪೂರೈಕೆ ಮಾಡುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundu Rao)  ತಿಳಿಸಿದರು.

    ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ತಳವಾರ ಸಾಬಣ್ಣ ಪ್ರಶ್ನಿಸಿದ ಅವರು, ಜಿಲ್ಲಾ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇದೆ. ತೀವ್ರ ರೋಗಗಕ್ಕೆ ಒಳಗಾದ ರೋಗಿಗಳಿಗೆ ಔಷಧಿ ಸಿಗುತ್ತಿಲ್ಲ. ಬಡವರು ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಕಳಪೆ ಔಷಧಿ ಸರಬರಾಜು ಆಗುತ್ತಿದೆ. ಈ ಬಗ್ಗೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಿಸಿಯೂಟ ತಯಾರಿಸಲು ಅಡುಗೆ ಎಣ್ಣೆ-ಬೇಳೆ ಕೊಟ್ಟಿಲ್ಲ: ಸರ್ಕಾರದ ವಿರುದ್ಧವೇ ಕಾಂಗ್ರೆಸ್ ಸದಸ್ಯ ಟೀಕೆ

    ಪ್ರಶ್ನೆಗೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್ ಅವರು, ಔಷಧಿ ಗುಣಮಟ್ಟದ ಬಗ್ಗೆ ಇಲಾಖೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಮ್ಮಲ್ಲಿ ಸರಬರಾಜು ಆಗುವ ಔಷಧಿ ಬಗ್ಗೆ ನಾವೇ ತಪಾಸಣೆ ಮಾಡುತ್ತಿದ್ದೇವೆ. ಇಡೀ ದೇಶದಲ್ಲಿ ಕಳಪೆ ಔಷಧಿಗಳ ಸಮಸ್ಯೆ ಇದೆ. ಕಳಪೆ ಔಷಧಿ ತಡೆಗೆ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. KSMSCL ಅವರು ಔಷಧಿ ಗುಣಮಟ್ಟದ ಬಗ್ಗೆ ವರದಿ ಕೊಟ್ಟಿರುತ್ತಾರೆ. ಆದರೂ ಖರೀದಿ ಮಾಡಿದ ಮೇಲೆ, ಸಪ್ಲೈ ಆದ ಮೇಲೆ ನಾವು ಕ್ವಾಲಿಟಿ ಚೆಕ್ ಮಾಡಿಸುತ್ತೇವೆ. ಮುಂದಿನ ದಿನಗಳಲ್ಲಿ ಕಂಪನಿಗಳಿಗೆ ಹೋಗಿ ನಾವೇ ಔಷಧಿ ಗುಣಮಟ್ಟದ ಪರಿಶೀಲನೆಗೆ ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ನಿಯಮಗಳ ಬದಲಾವಣೆಗೆ ಹಣಕಾಸು ಇಲಾಖೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಟಿ ಶಬಾನಾ ಆಜ್ಮಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ ಸಿಎಂ

    ಔಷಧಿ ಖರೀದಿಗೆ ಟೆಂಡರ್‌ದಾರರು ಮುಂದೆ ಬರುತ್ತಿಲ್ಲ. ಹೀಗಾಗಿ ಸ್ಥಳೀಯವಾಗಿಯೇ ಔಷಧಿ ಖರೀದಿಗೆ ಸೂಚನೆ ನೀಡಲಾಗಿದೆ. ಸಾಕಷ್ಟು ಹಣವನ್ನ ಔಷಧಿ ಖರೀದಿಗೆ ಆಸ್ಪತ್ರೆಗಳಿಗೆ ನೀಡಲಾಗಿದೆ. ಬೇಡಿಕೆ ಅನುಗುಣವಾಗಿ ಔಷಧಿ ಕೊಡಲು ಆಗುತ್ತಿಲ್ಲ. ಈ ವರ್ಷ 1,084 ಡ್ರಗ್ ಖರೀದಿಗೆ ನಿರ್ಧಾರ ಮಾಡಲಾಗಿದೆ. ಬೇಡಿಕೆ ಇರುವ ಡ್ರಗ್‌ಗಳನ್ನ ಖರೀದಿಗೆ ಮುಂದಾಗಿದ್ದೇವೆ. ಔಷಧಿ ಸರಿಯಾಗಿ ಸರಬರಾಜು ಆಗಬೇಕು. ಈ ನಿಟ್ಟಿನಲ್ಲಿ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಟೆಂಡರ್ ಪ್ರಕ್ರಿಯೆ ಸರಳೀಕೃತ ಮಾಡುತ್ತಿದ್ದೇವೆ. ತಮಿಳುನಾಡಿನ ವ್ಯವಸ್ಥೆ ಸರಿಯಾಗಿದೆ. ಅದರಂತೆ ನಿಯಮ ಸರಳೀಕರಣ ಮಾಡಿದ್ದೇವೆ. ಔಷಧಿ ಕೊರತೆ ನೀಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಬಿಹಾರದಲ್ಲಿ ಸೀತಾ ಮಾತೆಯ ಭವ್ಯ ಮಂದಿರ ನಿರ್ಮಾಣಕ್ಕೆ ಬಿಜೆಪಿ ಪ್ಲ್ಯಾನ್‌

    ಕಳಪೆ ಔಷಧಿ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಔಷಧಿ ಕಂಪನಿಗಳು ಬೇರೆ ರಾಜ್ಯದವರು. ಹೀಗಾಗಿ ಕ್ರಮಕೈಗೊಳ್ಳಲು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಬಾಣಂತಿಯ ಸಾವು ತಡೆಗೂ ಬಜೆಟ್‌ನಲ್ಲಿ ಹಣ ಒದಗಿಸಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಡ್ರಗ್ ರೀ ಕಾಲ್ ಪಾಲಿಸಿ ತರುತ್ತಿದ್ದೇವೆ ಎಂದರು. ಇದನ್ನೂ ಓದಿ: ಚಾಮರಾಜನಗರದಲ್ಲಿ ಬಾಲ್ಯವಿವಾಹ, ಅಪ್ರಾಪ್ತ ಬಾಲಕಿ ನಿಶ್ಚಿತಾರ್ಥಕ್ಕೆ ತಡೆ

  • ರಾಜ್ಯದ 14 ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ, ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗೆ ಅನುದಾನದ ಕೊರತೆಯಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

    ರಾಜ್ಯದ 14 ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ, ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗೆ ಅನುದಾನದ ಕೊರತೆಯಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

    ಬೆಂಗಳೂರು: ರಾಜ್ಯದಲ್ಲಿ 14 ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ (CT Scan) ಹಾಗೂ ಎಂಆರ್‌ಐ ಸ್ಕ್ಯಾನಿಂಗ್‌ (MRI Scan) ಸೇವೆಗಳು ಸ್ಥಗಿತಗೊಂಡಿವೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಆರೋಗ್ಯ ಇಲಾಖೆ (Health Department) ಸ್ಪಷ್ಟನೆ ನೀಡಿದೆ.

    ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಅವರು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರೋಗ್ಯ ಇಲಾಖೆ ಮಾಧ್ಯಮಗಳಲ್ಲಿ ಬಂದಿರುವ ವರದಿ ನಿರಾಧಾರ ಎಂದಿದೆ.ಇದನ್ನೂ ಓದಿ: ಗುತ್ತಿಗೆಯಲ್ಲಿ ಮೀಸಲಾತಿ ಕೊಡಿ – ಅಧಿಕಾರಿಗಳಿಗೆ ನರೇಂದ್ರಸ್ವಾಮಿ ಸೂಚನೆ

    ರಾಜ್ಯದಲ್ಲಿ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳಿಗೆ ಅನುದಾನದ ಕೊರತೆಯಿದೆ ಎಂಬ ಮಾಧ್ಯಮ ವರದಿಗಳು ಆಧಾರ ರಹಿತವಾಗಿದೆ. ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳಿಗೆ ಅಗತ್ಯವಿರುವ 63.49 ಕೋಟಿ ರೂ. ಅನುದಾನ ಆರೋಗ್ಯ ಇಲಾಖೆಯ ಬಳಿ ಲಭ್ಯವಿದ್ದು, ಯಾವುದೇ ರೀತಿಯ ಅನುದಾನದ ಕೊರತೆಯಾಗಿಲ್ಲ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.

    ರಾಜ್ಯದಲ್ಲಿ ಒಟ್ಟು 3 ಸಂಸ್ಥೆಗಳು ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳನ್ನು ಒದಗಿಸುತ್ತಿವೆ. ಅದರಲ್ಲಿ ಕೃಷ್ಣ ಡಯಾಗ್ನೋಸ್ಟಿಕ್ ಸಂಸ್ಥೆಯು ಬಿಲ್ ಪಾವತಿಗಾಗಿ ನೀಡಿದ ದಾಖಲಾತಿಗಳಲ್ಲಿ ಮಾಹಿತಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ವಿವರಣೆ ಕೇಳಲಾಗಿದೆ. ಜೂನ್ & ಜುಲೈ 2 ತಿಂಗಳುಗಳ ಬಿಲ್ ಪಾವತಿಯಲ್ಲಿ ಮಾತ್ರವೇ ವಿಳಂಬವಾಗಿದೆ. ಉಳಿದ ಸಂಸ್ಥೆಗಳ ಬಿಲ್ ಪಾವತಿಯಲ್ಲಿ ಯಾವುದೇ ಬಾಕಿ ಇರುವುದಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

    ಇಲಾಖೆ ಕೇಳಿರುವ ಪೂರಕ ಮಾಹಿತಿಯನ್ನ ಕೃಷ್ಣ ಡಯಾಗ್ನೋಸ್ಟಿಕ್ ಸಂಸ್ಥೆ (Krsnaa Diagnostics) ಒದಗಿಸಿದ ತಕ್ಷಣ ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಈ ಸಂಸ್ಥೆಯಿಂದ ಆಗಿರುವ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳ ವ್ಯತ್ಯಯವನ್ನು ಸರಿಪಡಿಸಲು ಬದಲಿ ಕ್ರಮವನ್ನೂ ಈಗಾಗಲೇ ಕೈಗೊಳ್ಳಲಾಗಿದೆ. ಈ ಕೂಡಲೇ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳನ್ನು ಪುನರಾರಂಭಿಸಲು ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ವ್ಯತ್ಯಯ ಕಂಡುಬಂದಲ್ಲಿ ಕೃಷ್ಣ ಡಯಾಗ್ನೋಸ್ಟಿಕ್ ಸಂಸ್ಥೆಯ ವಿರುದ್ಧ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ಇದನ್ನೂ ಓದಿ: ಮಗುವಿನ ಜನನದ ಬಗ್ಗೆ ಅನುಮಾನ – 5 ವರ್ಷದ ಮಗುವನ್ನೇ ಕೊಂದ ಪಾಪಿ ತಂದೆ!

  •  JDSಗೆ ಬದ್ದತೆ ಇಲ್ಲ, ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ: ದಿನೇಶ್ ಗುಂಡೂರಾವ್

     JDSಗೆ ಬದ್ದತೆ ಇಲ್ಲ, ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ: ದಿನೇಶ್ ಗುಂಡೂರಾವ್

    ನವದೆಹಲಿ: ಜೆಡಿಎಸ್‍ಗೆ ಬದ್ದತೆ ಇಲ್ಲ, ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ, ಸ್ಥಿರ ಸರ್ಕಾರ ಬರುವುದು ಇಷ್ಟ ಇಲ್ಲ, ರಾಜ್ಯದಲ್ಲಿ ಅತಂತ್ರ ಸರ್ಕಾರ ಬರಬೇಕು ಎನ್ನುವುದು ಅವರ ಉದ್ದೇಶ ಎಂದು ಜೆಡಿಎಸ್ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿರುವುದು ಯಾಕೆ ಎಂದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಮತಗಳನ್ನು ಇಬ್ಬಾಗ ಮಾಡಿ ಬಿಜೆಪಿ ಸಹಾಯ ಮಾಡುವ ಉದ್ದೇಶ ಗುಟ್ಟಾಗಿ ಉಳಿದಿಲ್ಲ. ಜೆಡಿಎಸ್ ಉಪ ಚುನಾವಣೆಯನ್ನು ಗೆಲ್ಲುವ ದೃಷ್ಟಿಯಿಂದ ಸ್ವರ್ಧಿಸಿಲ್ಲ, ಬಿಜೆಪಿಗೆ ಸಹಾಯ ಮಾಡಲೆಂದು ಚುನಾವಣೆಗೆ ಸ್ಪರ್ಧಿಸಿದೆ ಎಂದು ದಿನೇಶ್ ಗುಂಡೂರಾವ್ ಕಿಡಿ ಕಾರಿದರು.

    ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದು ಟ್ರೋಲ್ ಮಾಡುತ್ತಿರುವ ಬಿಜೆಪಿ ವಿರುದ್ಧವೂ ಹರಿಹಾಯ್ದ ಅವರು, ಬಿಜೆಪಿ ಲಿಂಗಾಯತರನ್ನು ಓಟ್ ಬ್ಯಾಂಕ್ ಅಂದುಕೊಂಡಿದೆ. ಅದನ್ನು ಉಳಿಸಿಕೊಳ್ಳಲು ಏನ್ ಬೇಕಾದರು ಮಾಡಲು ಸಿದ್ದವಾಗಿದ್ದಾರೆ ಅದಕ್ಕೆ ಬಿಜೆಪಿ ಹೀಗೆ ಮಾಡುತ್ತಿದೆ ಎಂದರು. ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ಮಾವ ವಿಧಿವಶ

    ಸಿದ್ದರಾಮಯ್ಯ ಅವರು ಬಸವಣ್ಣನವರ ಮೇಲೆ ಅಪಾರ ಭಕ್ತಿ ಹೊಂದಿದ್ದು, ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಫೋಟೋ ಕಡ್ಡಾಯ ಮಾಡಿದ್ದರು. ಅಲ್ಲದೇ ಅನುಭನ ಮಂಟಪ ನಿರ್ಮಾಣ ಮಾಡಲು ನಿರ್ಧಾರ ಮಾಡಿದರು ಆದರೆ ಬಿಜೆಪಿ ರಾಜಕೀಯ ಲಾಭಕ್ಕೆ ಹೀಗೆ ಹೇಳಿಕೆ ನೀಡುತ್ತಿದೆ ಅಷ್ಟೇ. ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್‍ಗೆ ಉತ್ತಮ ವಾತಾವರಣ ಇದೆ. ಜನರು ಬಿಜೆಪಿ ಆಡಳಿತವನ್ನು ನೋಡಿದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಹೀಗಾಗಿ ಕಾಂಗ್ರೆಸ್‍ಗೆ ಮತ ನೀಡಲಿದ್ದು, ಕಾಂಗ್ರೆಸ್‍ಗೆ ಉತ್ತಮ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಾಕ್ ಗೆಲುವನ್ನು ಸಂಭ್ರಮಿಸಿದವರ DNA ಭಾರತದಲ್ಲ: ಅನಿಲ್ ವಿಜ್

  • ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದ ಶಾಸಕ ಅಜಯ್ ಸಿಂಗ್!

    ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದ ಶಾಸಕ ಅಜಯ್ ಸಿಂಗ್!

    -ಮೈತ್ರಿಗೆ ತಲೆನೋವಾದ ಸಂಪುಟ ವಿಸ್ತರಣೆ

    ಕಲಬುರಗಿ: ಬಂಡಾಯ ಶಾಸಕರ ಮನವೊಲಿಸಲು ಮುಂದಾದ ಮೈತ್ರಿ ನಾಯಕರಿಗೆ ಮತ್ತೊಂದು ಶಾಕ್ ಆಗಿದ್ದು, ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರಿಂದ ಸಚಿವ ಸ್ಥಾನಕ್ಕಾಗಿ ಲಾಭಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.

    ನಾವು ಸಾಧು ಸನ್ಯಾಸಿಗಳಲ್ಲ, ನಾವು ಸಚಿವ ಸ್ಥಾನದ ಆಕಾಂಕ್ಷಿ. ಈ ಹಿಂದೆ ಸಚಿವ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ರಿ. ಲೋಕಸಭೆ ಬಳಿಕ ಸಚಿವ ಸ್ಥಾನ ನೀಡುವುದಾಗಿ ಹೇಳಿ ಮಾತು ಬದಲಿಸಿದ್ದೀರಿ. ಇದೀಗ ಬಂಡಾಯ ಶಾಸಕರಿಗೆ ಮಾತ್ರ ಮಣೆಹಾಕಲು ಮುಂದಾಗಿರುವುದು ಎಷ್ಟು ಸರಿ ಎಂದು ಡಾ.ಅಜಯ್ ಸಿಂಗ್ ಪ್ರಶ್ನೆ ಮಾಡಿದ್ದಾರೆ ಎಂದು ಶಾಸಕರ ಆಪ್ತರಿಂದ ಮಾಹಿತಿ ಲಭ್ಯವಾಗಿದೆ.

    ನಾನು ಎರಡು ಬಾರಿ ಶಾಸಕನಾಗಿ ಅನುಭವ ಹೊಂದಿದ್ದೇನೆ. ನಮ್ಮ ತಂದೆ ದಿವಗಂತ ಧರ್ಮಸಿಂಗ್ ಅವರಿಗೂ ಹಲವು ಜನ ನಿಷ್ಠ ಬೆಂಬಲಿಗರಿದ್ದಾರೆ. ಹೀಗಿರುವಾಗ ಸಚಿವ ಸ್ಥಾನ ನೀಡದಿದ್ದರೆ ನಾನು ಸಹ ಸುಮ್ಮನಿರಲ್ಲ ಎಂದು ಮೈತ್ರಿ ನಾಯಕರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಸದ್ಯಕ್ಕೆ ಅಜಯ್ ಸಿಂಗ್ ಸಚಿವ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನೆಯಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ತಿಳಿದು ಬಂದಿದೆ.

  • ಬರೀ ಮಾತಿನಿಂದ ಏನು ಆಗಲ್ಲ, ಮೋದಿ ಮಾಡಿ ತೋರಿಸಬೇಕು: ದಿನೇಶ್ ಗುಂಡೂರಾವ್

    ಬರೀ ಮಾತಿನಿಂದ ಏನು ಆಗಲ್ಲ, ಮೋದಿ ಮಾಡಿ ತೋರಿಸಬೇಕು: ದಿನೇಶ್ ಗುಂಡೂರಾವ್

    ಮಂಡ್ಯ: ನಾವು ಮೋದಿಯವರ ಜೊತೆಗಿದ್ದೇವೆ. ಮಾತಿನಿಂದ ಏನು ಆಗಲ್ಲ, ಮೋದಿ ಅವರು ಮಾತನ್ನು ಕಾರ್ಯ ರೂಪಕ್ಕೆ ತಂದು ತೋರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಸ್ವಗ್ರಾಮ ಗುಡಿಗೆರೆಗೆ ಕಾಂಗ್ರೆಸ್ ನಾಯಕರು ಭೇಟಿ ಪತ್ನಿ ಕಲಾವತಿ, ತಾಯಿ ಚಿಕ್ಕತಾಯಮ್ಮ, ತಂದೆ ಹೊನ್ನಯ್ಯ ಸೇರಿದಂತೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

    ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ 5 ಲಕ್ಷ, ಮನ್ಮುಲ್‍ನಿಂದ 3ಲಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿಂದ 2 ಲಕ್ಷ ಸೇರಿ ಒಟ್ಟಾರೆ 10 ಲಕ್ಷ ರೂ. ಹಣವನ್ನು ಯೋಧ ಗುರು ಕುಟುಂಬಕ್ಕೆ ನೀಡಲಾಯಿತು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುಂಡೂರಾವ್, ಮೋದಿಯವರು ಉಗ್ರರ ದಾಳಿಗೆ ಸರಿಯಾದ ಪ್ರತ್ಯುತ್ತರ ನೀಡಲಿದ್ದಾರೆ. ನಾವು ಮೋದಿಯವರ ಜೊತೆಗಿದ್ದೇವೆ. ಕಳೆದ 5 ವರ್ಷದಲ್ಲಿ ಈ ರೀತಿಯ ದಾಳಿಗಳು ಆಗುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಯೋಧರ ಹತ್ಯೆಯಾಗುತ್ತಿದೆ. ಮಾತಿನಿಂದ ಏನು ಆಗಲ್ಲ, ಮೋದಿ ಮಾಡಿ ತೋರಿಸಬೇಕು. ಪಾಕಿಸ್ತಾನವನ್ನ ಉಗ್ರ ರಾಷ್ಟ್ರ ಎಂದು ಘೋಷಿಸಿ ಸರಿಯಾದ ಪಾಠ ಕಲಿಸಬೇಕು ಎಂದು ಹೇಳಿದರು.

    ಮೈತ್ರಿ ಪಕ್ಷದಲ್ಲಿ ಸೀಟು ಹಂಚಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಲೋಕಸಭೆ ಚುನಾವಣೆ ಸಂಬಂಧ ನಮ್ಮ ಸೀಟು ಅವರು ಕೇಳೋದು, ಅವರ ಸೀಟು ನಾವು ಕೇಳೋದು ಸಹಜ. ಸೀಟು ಹಂಚಿಕೆ ಬಗ್ಗೆ ಕುಳಿತು ಮಾತನಾಡಿ ತೀರ್ಮಾನಿಸಬೇಕಿದೆ. ಪರ್ಯಾಯ ವ್ಯವಸ್ಥೆ ಏನೂ ಇಲ್ಲ. ನಾನೂ ಕುಮಾರಸ್ವಾಮಿ ಅವರ ಹತ್ತಿರ ಮಾತನಾಡಿದ್ದೇನೆ. ಅವರು ಚೆನ್ನಾಗಿಯೇ ಮಾತಾಡಿದ್ದಾರೆ. ಮೈತ್ರಿಯಾಗಿಯೇ ಚುನಾವಣೆ ಎದುರಿಸುತ್ತೇವೆ ಎಂದರು. ನಂತರ ಮೈತ್ರಿ ಕುರಿತು ಬಿಜೆಪಿ ಹೇಳಿಕೆ ವಿಚಾರ ಪ್ರಸ್ತಾಪಿಸಿ ಅವರು ಹಾಗೆ ಹೇಳಲೇ ಬೇಕು. ನಾವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯದಿಂದ ಧೂಳೀಪಟ ಮಾಡಿ, ದಕ್ಷಿಣ ಭಾರತದಿಂದಲೇ ಬಿಜೆಪಿಯನ್ನು ಹೊರಹಾಕ್ತೀವಿ: ದಿನೇಶ್ ಗುಂಡೂರಾವ್

    ರಾಜ್ಯದಿಂದ ಧೂಳೀಪಟ ಮಾಡಿ, ದಕ್ಷಿಣ ಭಾರತದಿಂದಲೇ ಬಿಜೆಪಿಯನ್ನು ಹೊರಹಾಕ್ತೀವಿ: ದಿನೇಶ್ ಗುಂಡೂರಾವ್

    ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೇಶದ ರಾಜಕಾರಣವನ್ನು ಬದಲಾಯಿಸುತ್ತೇವೆ. ರಾಜ್ಯದಿಂದ ಧೂಳೀಪಟ ಮಾಡಿ, ದಕ್ಷಿಣ ಭಾರತದಿಂದಲೇ ಬಿಜೆಪಿಯನ್ನು ಹೊರಹಾಕುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಉಪಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ ಹಿನ್ನೆಲೆಯಲ್ಲಿ, ಈ ಬಾರಿ ರಾಜ್ಯದಲ್ಲಿ ಸ್ಪಷ್ಟ ಬಹುಮತದಿಂದ ಮೈತ್ರಿ ಸರ್ಕಾರ ಉಪಚುನಾವಣೆಯ 4 ಕ್ಷೇತ್ರದಲ್ಲಿ ಗೆಲವು ಸಾಧಿಸಿದೆ. ಈಗಾದರೂ ಬಿಜೆಪಿ ತನ್ನ ಉದ್ಧಟತನವನ್ನು ಬಿಡಬೇಕು ಎಂದರು.  ಇದನ್ನು ಓದಿ: ದಿನೇಶ್ ಅವರೇ 4:1 ಅಲ್ಲ, 1:1 ಗೆಲುವು: ಇದು ಪ್ರತಾಪ್ ಸಿಂಹ ವಿಶ್ಲೇಷಣೆ

    ನಾಯಕರ ನಕಾರಾತ್ಮಕ ರಾಜಕೀಯ ಹಾಗೂ ಕೇಂದ್ರದಲ್ಲಿ ಮೋದಿ ಸರ್ಕಾರದ ವೈಫಲ್ಯದಿಂದ ಈ ಬಾರಿ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಜನ ತಿರಸ್ಕರಿಸಿದ್ದಾರೆ. ಮೋದಿ ಸರ್ಕಾರ ಯಾವುದೇ ಜನಪರ ಕೆಲಸ ಮಾಡಿಲ್ಲ, ಕೇವಲ ಭಾವನಾತ್ಮಕ ಭಾಷಣ ಬಿಟ್ಟರೇ ಜನರಿಗಾಗಿ ಕೆಲಸ ಮಾಡಿಲ್ಲ. ರಾಜ್ಯದಲ್ಲೂ ಅಷ್ಟೇ ಬಿಜೆಪಿ ಜನಪರ ಕೆಲಸ ಮಾಡಿಲ್ಲ. ಮೈತ್ರಿ ಸರ್ಕಾರ ಬಂದಾಗ ವಿರೋಧ ಪಕ್ಷವಾಗಿ ಹೇಗೆ ಅಧಿಕಾರ ಪಡೆಯಬೇಕು ಅಂತ ಬಿಜೆಪಿ ತಲೆ ಕೆಡಿಸಿಕೊಂಡಿತ್ತೆ ಹೊರತು ಜನರಿಗಾಗಿ ಏನೂ ಮಾಡಿಲ್ಲ. ಯಾವುದೇ ಹೋರಾಟ ಮಾಡಿಲ್ಲ, ಜನಪರ ವಿಚಾರವನ್ನು ಮಾತಾಡಿಲ್ಲ ಎಂದು ಕಿಡಿಕಾರಿದರು.

    ಮೈತ್ರಿ ಸರ್ಕಾರ ಎಷ್ಟು ಗಟ್ಟಿಯಾಗಿದೆ ಎಂದು ಈ ಉಪಚುನಾವಣೆಯಿಂದ ತಿಳಿದಿದೆ. ಬಳ್ಳಾರಿಯಲ್ಲಿ ಯಾವ ಅಭ್ಯರ್ಥಿಯನ್ನು ನಿಲ್ಲಿಸಬೇಕು ಅಂತಾ ತುಂಬಾ ಯೋಚನೆಮಾಡಿ ನಂತರ ಉಗ್ರಪ್ಪ ಅವರನ್ನು ಆಯ್ಕೆಮಾಡಲಾಗಿತ್ತು. ಈಗ ಬಿಜೆಪಿಯನ್ನು ಬಳ್ಳಾರಿಯಲ್ಲಿ ಛಿದ್ರ ಛಿದ್ರ ಮಾಡಿ ಜಯ ಗಳಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

    ಬಳ್ಲಾರಿಯಲ್ಲಿ ಧಣಿಗಣಿಗಳ ದಬ್ಬಾಳಿಕೆಗೆ, ಅಹಂಕಾರಕ್ಕೆ ಜನರೇ ಉತ್ತರ ಕೊಟ್ಟಿದ್ದಾರೆ. ಒಳ್ಳೆಯ ರೀತಿಯಲ್ಲಿ ನಾವು ಸರ್ಕಾರವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೇಶದ ರಾಜಕಾರಣವನ್ನು ಬದಲಾಯಿಸುತ್ತೇವೆ. ಮೋದಿಯವರ ಯಾವುದೇ ಭಾಷಣ ನಡೆಯುವುದಿಲ್ಲ. ನಮಗೆ ಸುಳ್ಳು ಹೇಳೋ ಪ್ರಧಾನಿ ಬೇಡ, ಕೆಲಸ ಮಾಡೋ ಪ್ರಧಾನಿ ಬೇಕು ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

     

     

     

     

     

     

     

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಿನೇಶ್ ಅವರೇ 4:1 ಅಲ್ಲ, 1:1 ಗೆಲುವು: ಇದು ಪ್ರತಾಪ್ ಸಿಂಹ ವಿಶ್ಲೇಷಣೆ

    ದಿನೇಶ್ ಅವರೇ 4:1 ಅಲ್ಲ, 1:1 ಗೆಲುವು: ಇದು ಪ್ರತಾಪ್ ಸಿಂಹ ವಿಶ್ಲೇಷಣೆ

    ಬೆಂಗಳೂರು: ಇಂದು ಕರ್ನಾಟಕ ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಟ್ವಿಟ್ಟರಿನಲ್ಲಿ ಕರ್ನಾಟಕದ ಜನು ಬಿಜೆಪಿಯ ನೆಗೆಟಿವ್ ಸರ್ಕಾರವನ್ನು ತಿರಸ್ಕರಿಸಿದೆ ಎನ್ನುವ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಅವರಿಗೆ ರೀ-ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

    ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಸದ್ದು ಮಾಡುತ್ತಿದೆ. 4-1 ಗೆಲುವು ಸಾಧಿಸಿ ಬಿಜೆಪಿಯನ್ನು ಹೊಡೆದು ಕಳುಹಿಸಿದೆ. ಕರ್ನಾಟಕದ ಜನರು ಬಿಜೆಪಿಯ ನೆಗೆಟಿವ್ ಸರ್ಕಾರವನ್ನು ತಿರಸ್ಕರಿಸಿದೆ. ಜನರ ಸಮಸ್ಯೆ ಬಗೆ ಹರಿಸುವುದರಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಎಲ್ಲ ವಿಜೇತರಿಗೆ ನನ್ನ ಅಭಿನಂದನೆಗಳು ಎಂದು ಎಂದು ದಿನೇಶ್ ಗುಂಡುರಾವ್ ಟ್ವೀಟ್ ಮಾಡಿದ್ದರು.

    ಈ ಟ್ವೀಟ್‍ಗೆ ಸಂಸದ ಪ್ರತಾಪ್ ಸಿಂಹ ರೀ-ಟ್ವೀಟ್ ಮಾಡಿ, “ಮೊದಲು ಸತ್ಯವನ್ನು ತಿಳಿದುಕೊಳ್ಳಿ. 4-1ರ ಗೆಲುವು ಅಲ್ಲ ಅದು 1-1ರ ಗೆಲುವು. ನಾವು ಬಳ್ಳಾರಿಯಲ್ಲಿ ಸೋತಿದ್ದರೂ ಶಿವಮೊಗ್ಗವನ್ನು ಉಳಿಸಿಕೊಂಡಿದ್ದೇವೆ. ನೀವು ಬಳ್ಳಾರಿಯನ್ನು ಗೆದ್ದುಕೊಂಡು ಜಮಖಂಡಿಯನ್ನು ಉಳಿಸಿಕೊಂಡಿದ್ದೀರಿ. ಜೆಡಿಎಸ್ ರಾಮನಗರ, ಮಂಡ್ಯವನ್ನು ಗೆದ್ದುಕೊಂಡರೂ ಶಿವಮೊಗ್ಗದಲ್ಲಿ ವಿಫಲವಾಗಿದೆ. ಆದರೆ ಈ ಸಂಭ್ರಮಕ್ಕೆ ಮೊದಲು ನಂಜನಗೂಡು ಮತ್ತು ಗುಂಡ್ಲುಪೇಟೆಯನ್ನು ಮರೆಯಬೇಡಿ ಎಂದು ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.

    ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಉಗ್ರಪ್ಪ, ಶಿವಮೊಗ್ಗದಲ್ಲಿ ರಾಘವೇಂದ್ರ, ಮಂಡ್ಯದಲ್ಲಿ ಶಿವರಾಮೇಗೌಡ ಜಯಗಳಿಸಿದ್ದಾರೆ. ವಿಧಾನಸಭಾ ಉಪಚುನಾವಣೆ ನಡೆದ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ, ಜಮಖಂಡಿಯಲ್ಲಿ ಆನಂದ್ ನ್ಯಾಮಗೌಡ ಗೆದ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 5 ವರ್ಷಕ್ಕೆ ಒಪ್ಪಂದ ಆಗಿದೆ, ಬೇರೆ ಸಿಎಂ ಚರ್ಚೆ ಅನಾವಶ್ಯಕ: ದಿನೇಶ್ ಗುಂಡೂರಾವ್

    5 ವರ್ಷಕ್ಕೆ ಒಪ್ಪಂದ ಆಗಿದೆ, ಬೇರೆ ಸಿಎಂ ಚರ್ಚೆ ಅನಾವಶ್ಯಕ: ದಿನೇಶ್ ಗುಂಡೂರಾವ್

    ದಾವಣಗೆರೆ: ಜೆಡಿಎಸ್ ಪಕ್ಷಕ್ಕೆ 5 ವರ್ಷಗಳ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಒಪ್ಪಂದ ಮಾಡಿಕೊಟ್ಟಿದೆ. ಹೀಗಾಗಿ ಬೇರೆ ಸಿಎಂ ಬಗ್ಗೆ ಚರ್ಚೆಮಾಡುವುದು ಅನವಶ್ಯಕವೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

    ನಗರದ ಬಾಪೂಜಿ ಅತಿಥಿ ಗೃಹದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಸಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ನಾವುಗಳು 5 ವರ್ಷಗಳ ಕಾಲ ಯಾವುದೇ ಬೇರೆ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವುದಿಲ್ಲವೆಂದು ಒಪ್ಪಂದ ಮಾಡಿಕೊಟ್ಟಿದ್ದೇವೆ. ಹೀಗಾಗಿ ಒಪ್ಪಂದ ಮುಗಿಯುವವರೆಗೂ ಬೇರೆ ಸಿಎಂ ಬಗ್ಗೆ ಚರ್ಚೆ ಮಾಡುವುದು ಅನಾವಶ್ಯಕವೆಂದರು.  ಇದನ್ನೂ ಓದಿ: ಒಂದು ಕಾಲ್, ಒಂದು ಡೋಸ್, ಒಂದು ಒಪ್ಪಂದ- ಚೆಕ್ ಕೊಟ್ಟು ಗೆದ್ದ ಎಚ್‍ಡಿಡಿ

    ಸಿದ್ದರಾಮಯ್ಯನವರ ಹೇಳಿಕೆಯ ಬಗ್ಗೆ ಮಾತನಾಡಿ, ಕಾರ್ಯಕರ್ತರು ಯಾವುದೇ ಊಹಾಪೋಹಳಿಗೆ ಕಿವಿಕೊಡಬಾರದು, ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಕಾಲ ಸುಭದ್ರವಾಗಿರುತ್ತದೆ. ಸಮ್ಮಿಶ್ರ ಸರ್ಕಾರ ಉರುಳಿಸುವ ವಿಚಾರ ಕೇವಲ ವಂದತಿಯಾಗಿದೆ. ಮೈಸೂರು ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ಕೆಲಸಗಳ ಬಗ್ಗೆ ನಾವು ಹೇಳಿಕೊಳ್ಳುತ್ತೇವೆ. ಜೆಡಿಎಸ್‍ಗೆ ಕಳೆದ ಐದು ವರ್ಷಗಳ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಹೀಗಾಗಿ ಅವರು ತಮ್ಮ ಅವಧಿಯಲ್ಲಿ ಆದ ಕೆಲಸಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ತಿಳಿಸಿದರು. ಇದನ್ನೂ ಓದಿ : ಎಚ್‍ಡಿಡಿ ಮುಂದೆ 18 ಪುಟಗಳ ಒಪ್ಪಂದಕ್ಕೆ ಸಹಿ- ಮೈತ್ರಿ ಸುಗಮಕ್ಕೆ 6 ಸೂತ್ರ

    ಮಾಜಿ ಸಚಿವ ಎ.ಮಂಜು ಹಾಗೂ ರೇವಣ್ಣ ನಡುವಿನ ವಾಕ್ಸಮರಕ್ಕೆ ಬಗ್ಗೆ ಮಾತನಾಡಿದ ಅವರು, ಹಾಸನ ಹಾಗೂ ಮಂಡ್ಯದ ರಾಜಕೀಯವೇ ಬೇರೆ. ಅದನ್ನು ರಾಜ್ಯ ರಾಜಕೀಯಕ್ಕೆ ಹೋಲಿಕೆ ಮಾಡುವಂತಿಲ್ಲ. ರೇವಣ್ಣ ಪವರ್ ಮಿನಿಸ್ಟರ್ ಹಾಗೂ ನಮ್ಮ ಸರ್ಕಾರದ ಸಚಿವರು. ಅವರ ಬಗ್ಗೆ ನಾವು ಏನು ಹೇಳಲು ಬಯಸುವುದಿಲ್ಲವೆಂದು, ಪರೋಕ್ಷವಾಗಿ ರೇವಣ್ಣ ಪವರ್ ಮಿನಿಸ್ಟರ್ ಎಂದು ಒಪ್ಪಿಕೊಂಡರು. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ದೂರು ನೀಡಿ ಕಾಂಗ್ರೆಸ್ಸಿಗೆ 3 ಷರತ್ತು ವಿಧಿಸಿದ ದೇವೇಗೌಡರು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟೆಂಪಲ್‍ಗೆ ಎಂಟ್ರಿಯಾದ್ರೆ ಟಾಯ್ಲೆಟ್ ದರ್ಶನ – ಅಧ್ಯಕ್ಷರ ಕಾಮಗಾರಿಗೆ ಭಕ್ತರ ಆಕ್ರೋಶ

    ಟೆಂಪಲ್‍ಗೆ ಎಂಟ್ರಿಯಾದ್ರೆ ಟಾಯ್ಲೆಟ್ ದರ್ಶನ – ಅಧ್ಯಕ್ಷರ ಕಾಮಗಾರಿಗೆ ಭಕ್ತರ ಆಕ್ರೋಶ

    ಬೆಂಗಳೂರು: ದೇವಾಲಯದ ಮುಂಭಾಗದಲ್ಲಿಯೇ ಶೌಚಾಲಯ ನಿರ್ಮಿಸಲು ಅಧ್ಯಕ್ಷರು ಮುಂದಾಗಿದ್ದು, ಇದರಿಂದ ಭಕ್ತರು ಆಕ್ರೋಶಗೊಂಡಿದ್ದಾರೆ.

    200 ವರ್ಷಗಳ ಚಿಕ್ಕಪೇಟೆಯ ಉತ್ತರಾದಿ ಮಠದಲ್ಲಿರುವ ಆಂಜನೇಯ ದೇವಾಲಯದ ಮುಂದೆ ಪೇ ಅಂಡ್ ಯೂಸ್ ಟಾಯ್ಲೆಟ್ ನಿರ್ಮಿಸಲು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಹೊರಟಿದ್ದಾರೆ. ಇದು 200 ವರ್ಷ ಪುರಾತನವಾದ ಚಿಕ್ಕಪೇಟೆಯ ಉತ್ತರಾದಿ ಮಠ. ಚಿಕ್ಕ ಪೇಟೆಯ ವ್ಯಾಪಾರಿಗಳೆಲ್ಲ ಬೆಳಗೆದ್ದು ಈ ಹನುಮನಿಗೆ ಒಂದು ನಮಸ್ಕಾರ ಮಾಡಿ ಅಂಗಡಿಗಳನ್ನ ಓಪನ್ ಮಾಡುತ್ತಾರೆ. ಈ ಮಠದ ಎದುರು 98 ಲಕ್ಷ ವೆಚ್ಚದಲ್ಲಿ ಫೇ ಆಂಡ್ ಯೂಸ್ ಟಾಯ್ಲೆಟ್ ನಿರ್ಮಿಸಲು ಕೆಪಿಸಿಸಿ ಅಧ್ಯಕ್ಷರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

    ಈ ಶೌಚಾಲಯ ಮೊದಲು ರಾಘವೇಂದ್ರ ದೇವಸ್ಥಾನದ ಪಕ್ಕದಲ್ಲೆ ಇತ್ತು. ಆದರೆ ಈಗ ಹಳೆ ಶೌಚಾಲಯ ಒಡೆದು ಹಾಕಿ ಹೊಸ ಶೌಚಾಲಯವನ್ನ ಹನುಮನ ಎದುರೇ ನಿರ್ಮಿಸುತ್ತಿದ್ದಾರೆ. ಆದ್ದರಿಂದ ದೇವಾಲಯದ ಮುಂದೆ ಶೌಚಾಲಯ ನಿರ್ಮಿಸಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಈ ಕಾಮಗಾರಿ ಆರಂಭಿಸುವ ಮುನ್ನವೇ ದೇವಸ್ಥಾನ ಎದುರಿಗೆ ಶೌಚಲಯ ನಿರ್ಮಾಣ ಮಾಡುವುದು ಬೇಡ ಭಕ್ತರಿಗೆ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಮಹಿಳೆಯರು ದೇವಸ್ಥಾನಕ್ಕೆ ಬರುವುದಕ್ಕೆ ಮುಜುಗರ ಪಟ್ಟುಕೊಳ್ಳುತ್ತಾರೆ ಅಂತ ಹೇಳಿದ್ದಾರೆ. ಆದರೆ ಗುಂಡುರಾವ್ ಮಾತ್ರ ಭಕ್ತರು ಮತ್ತು ಮಠದ ಮಾತಿಗೆ ಕ್ಯಾರೆ ಎನ್ನದೆ ಕಾಮಗಾರಿ ಆರಂಭಸಿದ್ದಾರೆ ಅಂತ ಮಾಜಿ ಕಾರ್ಪೋರೇಟರ್ ಶಿವಕುಮಾರ್ ಆರೋಪಿಸಿದ್ದಾರೆ.

    ಈ ವಿಚಾರವಾಗಿ ಸ್ಥಳೀಯರು ಮತ್ತು ಮಠದವರು, ದಿನೇಶ್ ಗುಂಡುರಾವ್ ಹಾಗೂ ಬಿಬಿಎಂಪಿಯ ಮೇಯರ್ ಸಂಪತ್ ರಾಜ್, ಕಮೀಷನರ್ ಮಂಜುನಾಥ್ ಪ್ರಸಾದ್ ಗೆ  ಪತ್ರ ಕೊಟ್ಟಿದ್ದಾರೆ. ಆದರು ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳಿಯರು ತಮ್ಮ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.