Tag: ದಿನೇಶ್ ಅಮಿನ್ ಮಟ್ಟು

  • ಪ್ರಕಾಶ್ ರೈ ಮತ ವಿಭಜನೆಗೆ ಹೊರಟಿದ್ದಾರೆ: ದಿನೇಶ್ ಅಮಿನ್ ಮಟ್ಟು

    ಪ್ರಕಾಶ್ ರೈ ಮತ ವಿಭಜನೆಗೆ ಹೊರಟಿದ್ದಾರೆ: ದಿನೇಶ್ ಅಮಿನ್ ಮಟ್ಟು

    – ಪೇಜಾವರ ಮಠದಲ್ಲೂ ರಾಜಕೀಯ ಇದೆ

    ಉಡುಪಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ನಟ ಪ್ರಕಾಶ್ ರೈ ಇಷ್ಟು ದಿನ ಬಿಜೆಪಿಯನ್ನು ಕ್ಯಾನ್ಸರ್ ಎನ್ನುತ್ತಿದ್ದರು. ಆದರೆ ಈಗ ಕಾಂಗ್ರೆಸ್ ಕೂಡಾ ಕ್ಯಾನ್ಸರ್ ಬಂದಂತೆ ಕಾಣಿಸುತ್ತಿದೆ. ಹೀಗೆ ರೈ ಹೇಳುತ್ತಲೇ ಪ್ರಕಾಶ್ ರೈ ಮತ ವಿಭಜನೆಗೆ ಹೊರಟಿದ್ದಾರೆ ಎಂದು ದಿನೇಶ್ ಅಮಿನ್ ಮಟ್ಟು ಹೇಳಿದರು.

    ಉಡುಪಿಯಲ್ಲಿ ಸಹಬಾಳ್ವೆ ಸಂಸ್ಥೆ ಆಯೋಜಿಸಿದ್ದ ಸರ್ವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷವನ್ನು ಮರೆತು ಮುಖವಾಡಗಳನ್ನು ಬಿಟ್ಟು ಬಿಡಿ. ಮುಖಗಳನ್ನು ನೋಡಿ ಮತ ನೀಡಿ ಎಂದು ಕರೆ ನೀಡಿದ ಅವರು, 6 ತಿಂಗಳ ಹಿಂದೆ ರೈ ಅವರು ಬಿಜೆಪಿಗೆ ಕ್ಯಾನ್ಸರ್ ಎನ್ನುತ್ತಿದ್ದರು. ಈಗ ಕಾಂಗ್ರೆಸನ್ನು ಕ್ಯಾನ್ಸರ್ ಎಂದು ಕರೆಯುತ್ತಿದ್ದಾರೆ. 6 ತಿಂಗಳ ಅವಧಿಯಲ್ಲಿ ಈ ಪಕ್ಷಕ್ಕೆ ಏನಾಯ್ತು ಅಥವಾ ಅವರ ರೈ ಅವರ ದೃಷ್ಟಿಗೆ ಏನಾಯ್ತು ಎಂಬುವುದು ನನಗೆ ತಿಳಿದಿಲ್ಲ ಎಂದರು.

    ಇದೇ ವೇಳೆ ಪೇಜಾವರ ಶ್ರೀಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಅವರು, ಉಡುಪಿ ಕೃಷ್ಣ ಮಠದಲ್ಲೂ ರಾಜಕೀಯ ಇದೆ. ಪೇಜಾವರ ಸ್ವಾಮಿಗಳು ಹಿಂದೂ ಯಾರು ಅಂತ ಹೇಳಬೇಕು. ಬಿಜೆಪಿ ಶಾಸಕ ರಘುಪತಿ ಭಟ್ ನಿಜವಾದ ಹಿಂದೂವೋ? ಅಥವಾ ಕಾಂಗ್ರೆಸ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಿಂದೂವಾ ಎಂದು ಪೇಜಾವರ ಶ್ರೀಗಳು ಹೇಳಬೇಕು. ಒಂದು ಪಕ್ಷದ ಪರ ಬೆಂಬಲ ನೀಡುವ ಮೂಲಕ ಹಿಂದೂಗಳ ಪರ ಅಂತ ಧರ್ಮ ದ್ರೋಹ ಮಾಡ ಬೇಡಿ ಎಂದರು. ಇದನ್ನು ಓದಿ: ನಿಮ್ಮ ಕ್ಷೇತ್ರದ ಮೇಲೆ ನಿಮಗೆ ನಂಬಿಕೆ ಇಲ್ವಾ: ಮೋದಿ, ರಾಹುಲ್‍ಗೆ ಪ್ರಕಾಶ್ ರೈ ಟಾಂಗ್

  • ಆರೋಪಗಳನ್ನು ಪ್ರಶ್ನಿಸಬೇಡಿ, ದಾಖಲೆ ಸಹಿತ ತೋರಿಸಿ- ಪತ್ರಕರ್ತರ ವಿರುದ್ಧ ಅಮಿನ್ ಮಟ್ಟು ಕಿಡಿ

    ಆರೋಪಗಳನ್ನು ಪ್ರಶ್ನಿಸಬೇಡಿ, ದಾಖಲೆ ಸಹಿತ ತೋರಿಸಿ- ಪತ್ರಕರ್ತರ ವಿರುದ್ಧ ಅಮಿನ್ ಮಟ್ಟು ಕಿಡಿ

    ತುಮಕೂರು: ಕಾಂಗ್ರೆಸ್ ಸರ್ಕಾರದ ವೈಫಲ್ಯದ ಬಗ್ಗೆ ಪ್ರಶ್ನೆ ಮಾಡಿದ ಪತ್ರಕರ್ತರ ವಿರುದ್ಧ ಹಿರಿಯ ಪತ್ರಕರ್ತ, ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ ಸಿದ್ದರಾಮಯ್ಯ ಸಿಡಿಮಿಡಿಗೊಂಡ ಘಟನೆ ನಡೆಯಿತು.

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕರಾವಳಿಯಲ್ಲಿನ ಕೋಮುಗಲಭೆ ಹೆಚ್ಚಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯವೇ ಕಾರಣ ಎಂಬ ಆರೋಪ ಇದೆ ಎಂಬ ಪ್ರಶ್ನೆಗೆ ಆಕ್ರೋಶ ಭರಿತರಾದ ಸಿದ್ದಲಿಂಗಯ್ಯ ಹಾಗೂ ದಿನೇಶ್ ಅಮಿನ್ ಮಟ್ಟು, ಆರೋಪಗಳನ್ನು ಪ್ರಶ್ನಿಸಬೇಡಿ, ದಾಖಲೆ ಸಹಿತ ತೋರಿಸಿ ಎಂದು ಪತ್ರಕರ್ತರನ್ನು ಬಾಯಿ ಮುಚ್ಚಿಸಲು ಯತ್ನಿಸಿದರು.

    ಎಸ್ ಜಿ ಸಿದ್ದರಾಮಯ್ಯ ಅವರು ಚಿಕ್ಕನಾಯಕನ ಹಳ್ಳಿ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಜೆಡಿಎಸ್ ಅಭ್ಯರ್ಥಿ ಸುರೇಶ್ ಬಾಬು ಅವರನ್ನು ಬೆಂಬಲಿಸುತ್ತಿರಿ ಎನ್ನುವ ಆರೋಪದ ಪ್ರಶ್ನೆ ಕೇಳಿದಾಗ ಸಿದ್ದರಾಮಯ್ಯ ಕೆಂಡಾಮಂಡಲವಾಗಿ ಯಾವ ಮೂರ್ಖರು ಹಾಗಂತ ಹೇಳಿದ್ದು? ಎಂದು ಏರು ಧ್ವನಿಯಲ್ಲಿ ಮಾತನಾಡಿ ಮಾಧ್ಯಮದವರ ಬಾಯಿ ಮುಚ್ಚಿಸುವ ಯತ್ನಮಾಡಿದರು.

    ಸುದ್ದಿಗೋಷ್ಠಿ ನಡೆಸಲು ಬಂದಿದ್ದ ದಿನೇಶ್ ಅಮಿನ್ ಮಟ್ಟು ಹಾಗೂ ಸಿದ್ದರಾಮಯ್ಯರ ಧೋರಣೆ ಖಂಡಿಸಿ ಪತ್ರಕರ್ತರು ಪ್ರತಿದಾಳಿ ನಡೆಸಿದಾಗ ಸುಮ್ಮನಾಗಿ ಉತ್ತರ ನೀಡತೊಡಗಿದರು.

  • ದಿನೇಶ್ ಅಮಿನ್ ಮಟ್ಟು ವಿರುದ್ಧ ಕೋಟಾ ಶ್ರೀನಿವಾಸ ಪೂಜಾರಿ ವಾಗ್ದಾಳಿ

    ದಿನೇಶ್ ಅಮಿನ್ ಮಟ್ಟು ವಿರುದ್ಧ ಕೋಟಾ ಶ್ರೀನಿವಾಸ ಪೂಜಾರಿ ವಾಗ್ದಾಳಿ

    ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ವಿರುದ್ಧ ಕೋಟಾ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

    ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ನಿಯಮ 68 ರಲ್ಲಿ ವಿಧಾನ ಪರಿಷತ್ ನಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, ಕೋಮು ಗಲಭೆಗಳ ಕೊಲೆಗಳಾದಾಗ ಧರ್ಮ ಜಾತಿ ರಾಜಕಾರಣ ಮಾಡಬೇಡಿ. ಕುದ್ರೋಳಿ ದೇವಸ್ಥಾನಕ್ಕೆ ಸಂಘ ಪರಿವಾರದವರು ಬಂದು ಜನಾರ್ದನ ಪೂಜಾರಿ ಹಾಳಾಗಿದ್ದಾರೆ ಎಂದು ದಿನೇಶ್ ಅಮೀನ್ ಮಟ್ಟು ಮಾತಾನಾಡುತ್ತಾರೆ. ಮಾಧ್ಯಮ ಸಲಹೆಗಾರರು ಹೀಗೆ ಮಾತಾಡುವುದು ಸರಿಯಲ್ಲ ಎಂದು ಹೇಳಿದರು.

    ಗೌರಿ ಹತ್ಯೆಗೈದವರನ್ನು ಹಿಡಿಯಬೇಕಾದವರು ರಾಜ್ಯ ಸರ್ಕಾರ. ಆದರೆ ಮಂಗಳೂರಿನಲ್ಲಿ ಮಾನವ ಸರಪಳಿ ಮಾಡಿ “ನಾನು ಗೌರಿ ನಾವೆಲ್ಲ ಗೌರಿ” ಎಂದು ಹೇಳುವುದು ಎಷ್ಟು ಸರಿ? ಅಧಿಕಾರ ನಿಮ್ಮ ಕೈಯಲ್ಲಿದ್ದು ನೀವೇ ಹಿಡಿಯಬೇಕು. ಗೌರಿಗೆ ಹೇಳಿದಂತೆ “ನಾನು ಸಂತೋಷ್, ನಾನು ಪರೇಸ್ ಮೆಸ್ತಾ” ಎಂಬುದಾಗಿ ಯಾಕೆ ಹೇಳುವುದಿಲ್ಲ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉಡುಪಿ ಚಲೋ ವೇಳೆ ಗೋಮೂತ್ರ ಸಿಂಪಡಣೆ ಈಗ ಏಕಿಲ್ಲ: ಅಮೀನ್ ಮಟ್ಟು ವಿವಾದಾದ್ಮಕ ಪೋಸ್ಟ್

    ಪರೇಶ್ ಮೆಸ್ತಾ ಸಾವು ಸಹಜ ಸಾವು ಎಂದು ಸರ್ಕಾರ ಹೇಳಿದೆ. ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ಸಂತೋಷ್ ಕೊಲೆ ಮಾಡಲಾಗಿದೆ ಎಂದು ಎಂದು ಗೃಹ ಸಚಿವರು ಹೇಳ್ತಾರೆ. ನಮಗೆ ದೀಪಕ್, ಬಷೀರ್ ಹತ್ಯೆ ಎರಡು ಒಂದೇ ಎಂದು ಹೇಳಿದರು. ಇದನ್ನೂ ಓದಿ: ಗೆದ್ರೆ ಖುಷಿಯಲ್ಲಿ, ಸೋತ್ರೆ ದು:ಖದಲ್ಲಿ ತಿನ್ನೋಣವೆಂದು 2 ಕೆಜಿ ಕಾಣೆ ಮೀನು ತಂದಿಟ್ಟುಕೊಂಡಿದ್ದೇನೆ- ಅಮೀನ್ ಮಟ್ಟು

    ಮಂಗಳೂರು ಎಸ್.ಪಿ. ಸುಧೀಂದ್ರ ರೆಡ್ಡಿ ವರ್ಗಾವಣೆ ವಿಷಯ ಪ್ರಸ್ತಾಪಿಸಿದ ಅವರು ಸುಧೀಂದ್ರ ರೆಡ್ಡಿ ಅವರನ್ನು ವರ್ಗಾವಣೆ ಯಾಕೆ ಮಾಡಿದ್ರಿ? ಅಕ್ರಮ ಮರಳುಗಾರಿಕೆ ಮಾಡಿದ್ದಕ್ಕೆ ವರ್ಗಾವಣೆ ಮಾಡಿದ್ದೀರಿ. ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ. ಪ್ರಾಮಾಣಿಕ ಅಧಿಕಾರಿಗಳನ್ನ ಎತ್ತಂಗಡಿ ಮಾಡಿತ್ತಿದ್ದೀರಿ ಎಂದು ಹೇಳಿ ಸರ್ಕಾರದ ವಿರುದ್ಧ ಪೂಜಾರಿ ವಾಗ್ದಾಳಿ ನಡೆಸಿದರು.  ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ ಭಟ್ಟರ ಹಿಂದೂ ಧರ್ಮಕ್ಕೆ ಧಿಕ್ಕಾರ, ಮೋದಿ ದೊಡ್ಡ ಜಾದೂಗಾರ: ಅಮೀನ್ ಮಟ್ಟು