Tag: ದಿನಭವಿಷ್ಯ

  • ದಿನ ಭವಿಷ್ಯ: 05-03-2021

    ದಿನ ಭವಿಷ್ಯ: 05-03-2021

    ಪಂಚಾಂಗ:
    ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
    ಶಿಶಿರ ಋತು,ಮಾಘಮಾಸ,
    ಕೃಷ್ಣಪಕ್ಷ,ಸಪ್ತಮಿ,
    ವಾರ: ಶುಕ್ರವಾರ
    ನಕ್ಷತ್ರ: ಅನುರಾಧ ನಕ್ಷತ್ರ
    ರಾಹುಕಾಲ: 11:06 ರಿಂದ 12 36
    ಗುಳಿಕಕಾಲ: 08:06 ರಿಂದ 09:36
    ಯಮಗಂಡಕಾಲ: 03:35 ರಿಂದ 05:05

    ಮೇಷ: ಆಕಸ್ಮಿಕ ದುರ್ಘಟನೆಯಿಂದ ಮಾನಸಿಕ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಸ್ತಿ ವಿಚಾರವಾಗಿ ಕೋರ್ಟ್‍ಗೆ ಅಲೆದಾಟ

    ವೃಷಭ: ದಾಂಪತ್ಯದಲ್ಲಿ ಆಲಸ್ಯ, ಉದ್ಯೋಗದ ಭರವಸೆ, ಸಂಗಾತಿಯಿಂದ ಅದೃಷ್ಟ

    ಮಿಥುನ: ಆಕಸ್ಮಿಕವಾಗಿ ಸಾಲ ಮಾಡುವ ಸಂಭವ, ಕುಟುಂಬ ಸಮೇತ ಪ್ರಯಾಣ, ಮಾತಿನಿಂದ ಶತ್ರುಗಳು ಅಧಿಕ

    ಕಟಕ: ಪ್ರೀತಿ ಪ್ರೇಮ ವಿಚಾರದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆಗಳು, ಆಸೆ-ಆಕಾಂಕ್ಷೆ ಭಾವನೆಗಳಿಗೆ ಪೆಟ್ಟು

    ಸಿಂಹ: ಶತ್ರುಗಳಿಂದ ಮನೆಯ ವಾತಾವರಣ ಕಲುಷಿತ, ದಾಂಪತ್ಯದಿಂದ ದೂರವಾಗುವ ಮನಸ್ಸು, ವಿಕೃತ ಆಸೆಗಳಿಗೆ ಬಲಿ

    ಕನ್ಯಾ: ನೆರೆಹೊರೆಯವರೊಡನೆ ಕಿರಿಕಿರಿ, ಸಹೋದರ,ಸಹೋದರಿಯೊಂದಿಗೆ ವೈರತ್ವ, ಮಕ್ಕಳಿಗೆ ಉನ್ನತ ಹುದ್ದೆ

    ತುಲಾ: ಕುಟುಂಬ ಸಮಸ್ಯೆಗಳಿಂದ ಮುಕ್ತಿ, ಉತ್ತಮ ಧನಾಗಮನ, ಮಾನಸಿಕ ನೆಮ್ಮದಿ ಪ್ರಾಪ್ತಿ

    ವೃಶ್ಚಿಕ: ಹಳೆಯ ವಸ್ತುವಿನಿಂದ ಪೆಟ್ಟು, ಸ್ವಯಂಕೃತಾಪರಾಧದಿಂದ ಅವಕಾಶವಂಚಿತರಾಗುವಿರಿ, ಮಾನಸಿಕ ಕುಪಿತಕ್ಕೆ ಒಳಗಾಗುವಿರಿ

    ಧನಸು: ಅಧಿಕ ನಿದ್ರೆ, ಆತ್ಮೀಯರು ದೂರ, ಕುಟುಂಬಕ್ಕೆ ನಷ್ಟ, ಆಕಸ್ಮಿಕ ದುರ್ಘಟನೆಯಿಂದ ಮನೋರೋಗ

    ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಗುಪ್ತ ಆಸೆ ಮತ್ತು ಇಚ್ಛೆಗಳು ಈಡೇರುವುದು, ಮಕ್ಕಳಿಂದ ಅನುಕೂಲ

    ಕುಂಭ: ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ಸಾಲಗಾರರಿಂದ ನಷ್ಟ

    ಮೀನ: ಸಂತಾನ ದೋಷ, ತಂದೆ ಮಕ್ಕಳಲ್ಲಿ ಶತ್ರುತ್ವ, ಅವಕಾಶ ವಂಚಿತರಾಗುವಿರಿ, ಮಾನ ಅಪಮಾನಗಳು

  • ದಿನ ಭವಿಷ್ಯ: 14-07-2020

    ದಿನ ಭವಿಷ್ಯ: 14-07-2020

    ಪಂಚಾಂಗ:
    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಆಷಾಢ ಮಾಸ,
    ಕೃಷ್ಣ ಪಕ್ಷ, ನವಮಿ ತಿಥಿ
    ಮಂಗಳವಾರ, ಅಶ್ವಿನಿ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:40 ರಿಂದ 5:16
    ಗುಳಿಕಕಾಲ: ಮಧ್ಯಾಹ್ನ 12:04 ರಿಂದ 2:04
    ಯಮಗಂಡಕಾಲ: ಬೆಳಗ್ಗೆ 9:16 ರಿಂದ 10:52

    ಮೇಷ: ಯಾರನ್ನೂ ಹೆಚ್ಚು ನಂಬಬೇಡಿ, ಪರಿಶ್ರಮಕ್ಕೆ ತಕ್ಕ ಫಲ, ಮನಸ್ಸಿನಲ್ಲಿ ಭಯ ಭೀತಿ, ಪ್ರಿಯ ಜನರ ಭೇಟಿ, ಚಿನ್ನಾಭರಣ ಪ್ರಾಪ್ತಿ, ಗೌರವ-ಕೀರ್ತಿ ಲಾಭ.

    ವೃಷಭ: ಅಧಿಕಾರ ಪ್ರಾಪ್ತಿ, ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ದೂರ ಪ್ರಯಾಣಕ್ಕೆ ಮನಸ್ಸು.

    ಮಿಥುನ: ದೇವತಾ ಕಾರ್ಯಗಳಲ್ಲಿ ಒಲವು, ಪತ್ನಿಯಿಂದ ಬುದ್ಧಿಮಾತು, ಶತ್ರುಗಳ ನಾಶ, ಕುತಂತ್ರದಿಂದ ಹಣ ಸಂಪಾದನೆ, ವೃಥಾ ತಿರುಗಾಟ, ಕೆಲಸ ಕಾರ್ಯಗಳಲ್ಲಿ ಪರಿಶ್ರಮ.

    ಕಟಕ: ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ, ಶೀತ ಸಂಬಂಧಿತ ರೋಗ, ಮಾತಿನಲ್ಲಿ ಹಿಡಿತ ಅಗತ್ಯ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ ಸಾಧ್ಯತೆ, ಇಷ್ಟಾಥ ಸಿದ್ಧಿಗಾಗಿ ಪರಿಶ್ರಮ.

    ಸಿಂಹ: ವ್ಯಾಪಾರ ವ್ಯವಹಾರ ಮೇಲೆ ಕೆಟ್ಟದೃಷ್ಟಿ, ಶರೀರದಲ್ಲಿ ನೋವು, ಪಾಪದ ಕೆಲಸಕ್ಕೆ ಮನಸ್ಸು, ಮಾನಸಿಕ ಒತ್ತಡ, ಆತುರ ಸ್ವಭಾವದಿಂದ ನಷ್ಟ ಸಾಧ್ಯತೆ.

    ಕನ್ಯಾ: ಸಮಾಜದಲ್ಲಿ ಉತ್ತಮ ಗೌರವ, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಮುನ್ನಡೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಹಣಕಾಸು ಪರಿಸ್ಥಿತಿ ಚೇತರಿಕೆ.

    ತುಲಾ: ಮನಸ್ಸಿನಲ್ಲಿ ಭಯ, ಆತಂಕ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಸರಿ ತಪ್ಪುಗಳ ಬಗ್ಗೆ ಚಿಂತನೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.

    ವೃಶ್ಚಿಕ: ಇತರರ ಮಾತಿಗೆ ಮರುಳಾಗಬೇಡಿ, ಆತ್ಮೀಯರು-ಬಂಧುಗಳಿಂದ ಎಚ್ಚರಿಕೆ, ಅಧಿಕವಾದ ಖರ್ಚು, ಶತ್ರುಗಳ ಧ್ವಂಸ, ನೆರೆಹೊರೆಯವರಿಂದ ಕುತಂತ್ರ, ಆಸ್ತಿ ವಿಚಾರಗಳಲ್ಲಿ ಕಲಹ.

    ಧನಸ್ಸು: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಪರಿಶ್ರಮಕ್ಕೆ ತಕ್ಕ ಫಲ, ಹಣಕಾಸು ಲಾಭ, ಉದ್ಯೋಗದಲ್ಲಿ ಕಿರಿಕಿರಿ, ಮಹಿಳೆಯರಿಗೆ ತೊಂದರೆ, ವಿಪರೀತ ಯೋಚನೆಯ ದಿನ.

    ಮಕರ: ಬೇಡವಾದ ವಿಚಾರಗಳಲ್ಲಿ ಆಸಕ್ತಿ, ಅನಾವಶ್ಯಕ ವಸ್ತುಗಳ ಖರೀದಿ, ಭೂ ವ್ಯವಹಾರದಲ್ಲಿ ಲಾಭ, ಭವಿಷ್ಯದ ಆಲೋಚನೆ, ಋಣ ವಿಮೋಚನೆ.

    ಕುಂಭ: ರಫ್ತು ವ್ಯವಹಾರಸ್ಥರಿಗೆ ಲಾಭ, ಬಿಡುವಿಲ್ಲದ ಕೆಲಸ ಕಾರ್ಯಗಳು, ವಿಪರೀತ ಒತ್ತಡ, ರಾಜಕಾರಣಿಗಳಿಗೆ ಯಶಸ್ಸು, ಕಾರ್ಯದಲ್ಲಿ ನಿರ್ವಿಘ್ನ.

    ಮೀನ: ಮೇಲಾಧಿಕಾರಿಗಳಿಂದ ಪ್ರಶಂಸೆ, ವಿಪರೀತ ಕೆಲಸ, ವಿಶ್ರಾಂತಿ ಪಡೆಯುವಿರಿ, ಆರೋಗ್ಯದಲ್ಲಿ ಏರುಪೇರು, ವೈರಿಗಳಿಂದ ದೂರವಿರಿ, ಇಷ್ಟಾರ್ಥ ಸಿದ್ಧಿ.

  • ದಿನ ಭವಿಷ್ಯ: 25-06-2020

    ದಿನ ಭವಿಷ್ಯ: 25-06-2020

    ಪಂಚಾಂಗ:
    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಆಷಾಢ ಮಾಸ,
    ಶುಕ್ಲ ಪಕ್ಷ, ಚತುರ್ಥಿ ತಿಥಿ,
    ಬೆಳಗ್ಗೆ 8:49 ನಂತರ ಪಂಚಮಿ ತಿಥಿ,
    ಗುರುವಾರ, ಆಶ್ಲೇಷ ನಕ್ಷತ್ರ
    ಮಧ್ಯಾಹ್ನ 12:26 ನಂತರ ಪಂಚಮಿ ತಿಥಿ.

    ರಾಹುಕಾಲ: ಮಧ್ಯಾಹ್ನ 2:01 ರಿಂದ 3:37
    ಗುಳಿಕಕಾಲ: ಬೆಳಗ್ಗೆ 9:13 ರಿಂದ 10:49
    ಯಮಗಂಡಕಾಲ: ಬೆಳಗ್ಗೆ 6:00 ರಿಂದ 7:37

    ಮೇಷ: ಮಾನಸಿಕ ವೇದನೆ, ಚಿಂತೆಯಿಂದ ನಿದ್ರಾಭಂಗ, ಸ್ಥಿರಾಸ್ತಿ ವಿಚಾರದಲ್ಲಿ ನಷ್ಟ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ತಂದೆಯ ಅಹಂಭಾವದಿಂದ ಕಿರಿಕಿರಿ, ಮಾಟ-ಮಂತ್ರದ ತಂತ್ರದ ಭೀತಿ, ಪ್ರಯಾಣಕ್ಕೆ ಮನಸ್ಸು-ಅಡೆತಡೆ, ಜೀವನದ ಮೇಲೆ ಜಿಗುಪ್ಸೆ ಅನ್ನಿಸುವುದು.

    ವೃಷಭ: ಆಕಸ್ಮಿಕ ಬಂಧುಗಳ ಆಗಮನ, ಕುಟುಂಬದಲ್ಲಿ ಬೆರೆಯುವ ಮನಸ್ಸು, ಕೆಲಸ ಕಾರ್ಯಗಳಲ್ಲಿ ಜಯದ ಸೂಚನೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ದುಸ್ವಪ್ನಗಳು, ನಿದ್ರಾಭಂಗ, ಲಾಭ ಪ್ರಮಾಣದ ಅಧಿಕ, ಹಿರಿಯರಿಂದ ಶುಭವಾರ್ತೆ, ಆಕಸ್ಮಿಕ ಅವಘಡ.

    ಮಿಥುನ: ಸ್ನೇಹಿತರಿಂದ ಧನಾಗಮನ ನಿರೀಕ್ಷೆ, ಸಹೋದ್ಯೋಗಿಗಳಿಂದ ಉದ್ಯೋಗ ನಷ್ಟ, ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ಸಂಗಾತಿಯಿಂದ ಬೇಸರ, ದಾಂಪತ್ಯದಲ್ಲಿ ನಿರಾಸಕ್ತಿ.

    ಕಟಕ: ಕಫ, ಶೀತ, ಅಜೀರ್ಣ ಸಮಸ್ಯೆ, ಕುಲದೇವರ ದರ್ಶನ ಭಾಗ್ಯ, ತಂದೆ ಮಾಡಿದ ಸಾಲ ಬಾಧೆ, ಶತ್ರುಗಳ ಕಾಟ, ಆರೋಗ್ಯದಲ್ಲಿ ವ್ಯತ್ಯಾಸ.

    ಸಿಂಹ: ಮಕ್ಕಳಿಂದ ಸಮಸ್ಯೆ, ಕೋರ್ಟ್ ಕೇಸ್‍ಗೆ ಅಲೆದಾಟ, ಭವಿಷ್ಯದ ಚಿಂತೆ, ನಿದ್ರಾಭಂಗ, ಮಾಟ-ಮಂತ್ರದ ಭೀತಿ, ಮಕ್ಕಳ ಬಗ್ಗೆ ಯೋಚನೆ, ಬೇಜವಾಬ್ದಾರಿಯಿಂದ ನೋವು.

    ಕನ್ಯಾ: ದಾಂಪತ್ಯದಲ್ಲಿ ವಿರಸ, ಮಾನಸಿಕ ನೋವು, ಮಾತೃವಿನಿಂದ ಸ್ತಿರಾಸ್ತಿ-ವಾಹನ ಲಾಭ, ಹಿರಿಯರಿಂದ ಮನಸ್ಥೈರ್ಯ ಪ್ರಾಪ್ತಿ, ನಂಬಿಕಸ್ಥರಿಂದ ಮೋಸ, ಸೋಲು-ನಷ್ಟ ನಿರಾಸೆ, ಲಾಭ ಪ್ರಮಾಣ ಕುಂಠಿತ.

    ತುಲಾ: ಸ್ವಂತ ಉದ್ಯೋಗ ಆರಂಭಕ್ಕೆ ಭರವಸೆ, ನೆರೆಹೊರೆಂ-ಬಂಧುಗಳಿಂದ ಕಿರಿಕಿರಿ, ಮನಸ್ಸಿನಲ್ಲಿ ಗೊಂದಲ, ಶತ್ರುಗಳಿಂದ ಅಪಜಯ, ಉದ್ಯೋಗ-ಸ್ಥಳ ಬದಲಾವಣೆಗೆ ಮನಸ್ಸು, ಪ್ರಯಾಣಕ್ಕೆ ಅಡೆತಡೆ, ನೆಮ್ಮದಿ ಇಲ್ಲದ ಜೀವನ.

    ವೃಶ್ಚಿಕ: ತಂದೆಯಿಂದ ಅನುಕೂಲವಾಗುವ ಭರವಸೆ, ಪ್ರೀತಿ ವಿಶ್ವಾಸ-ಭಾವನೆಗಳಿಗೆ ಧಕ್ಕೆ, ಕುಟುಂಬಸ್ಥರಿಂದ ವಿರೋಧ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ, ನೀವಾಡುವ ಮಾತಿನಿಂದಲೇ ಸಮಸ್ಯೆ, ಹಣಕಾಸು ವಿಚಾರವಾಗಿ ತಪ್ಪು ನಿರ್ಧಾರ, ಕುಟುಂಬದಲ್ಲಿ ವೈಮನಸ್ಸು.

    ಧನಸ್ಸು: ತಾಯಿಯೊಂದಿಗೆ ವಾಗ್ವಾದ, ಒಂಟಿತನ ಬಯಸುವಿರಿ, ಸ್ವಂತ ಉದ್ಯಮದಲ್ಲಿ ನಷ್ಟ, ಪ್ರೀತಿ ಪ್ರೇಮ ಭಾವನೆಗಳಿಗೆ ಧಕ್ಕೆ, ಆರ್ಥಿಕ ಮುಗ್ಗಟ್ಟು, ಕೆಲಸ ಕಾರ್ಯಗಳಲ್ಲಿ ಅಡೆತಡೆ.

    ಮಕರ: ಸ್ನೇಹಿತರಿಂದ ನಷ್ಟ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಆತ್ಮೀಯರು-ಬಂಧುಗಳಲ್ಲಿ ವೈಮನಸ್ಸು, ನಿದ್ರೆಯಲ್ಲಿ ದುಸ್ವಪ್ನ, ವ್ಯಾಪಾರ-ವ್ಯವಹಾರ ನಷ್ಟದ ಭೀತಿ, ಅನಗತ್ಯ ಖರ್ಚು, ದಾನ ಮಾಡುವ ಮನಸ್ಥಿತಿ,

    ಕುಂಭ: ಸೇವಕರು-ಕೂಲಿ ಕಾರ್ಮಿಕರಿಂದ ಒಳಿತು, ಮಿತ್ರರಿಂದ ಕೌಟುಂಬಿಕ ಸಮಸ್ಯೆ ಪರಿಹಾರ, ಆದಾಯಕ್ಕಿಂತ ಅಧಿಕವಾದ ಖರ್ಚು, ಸ್ನೇಹಿತರಿಂದ ಸಹಕಾರ, ಮಾಟ-ಮಂತ್ರ, ತಂತ್ರದ ಭೀತಿ, ದುಷ್ಟರ ಸಹವಾಸದಿಂದ ತೊಂದರೆ, ಕಾರ್ಯ ಯಶಸ್ಸಿಗಾಗಿ ಪರಿಶ್ರಮ.

    ಮೀನ: ಮಕ್ಕಳಿಗೆ ಉದ್ಯೋಗಾವಕಾಶ, ದಾಂಪತ್ಯದಲ್ಲಿ ವಿರಸ, ನೆಮ್ಮದಿಗೆ ಭಂಗ, ಉದ್ಯೋಗದಲ್ಲಿ ಅಡೆತಡೆ, ಮಾಡುವ ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಮನಸ್ಸಿಗೆ ಬೇಸರ.

  • ದಿನ ಭವಿಷ್ಯ 13-06-2020

    ದಿನ ಭವಿಷ್ಯ 13-06-2020

    ಪಂಚಾಂಗ

    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಜೇಷ್ಠ ಮಾಸ,
    ಕೃಷ್ಣ ಪಕ್ಷ, ಅಷ್ಟಮಿ ತಿಥಿ,
    ಶನಿವಾರ, ಪೂರ್ವಭಾದ್ರಪದ ನಕ್ಷತ್ರ

    ರಾಹುಕಾಲ: ಬೆಳಗ್ಗೆ 9:11 ರಿಂದ 10:47
    ಗುಳಿಕಕಾಲ: ಬೆಳಗ್ಗೆ 5:58 ರಿಂದ 7:35
    ಯಮಗಂಡಕಾಲ: ಮಧ್ಯಾಹ್ನ 1:59 ರಿಂದ 3:35

    ಮೇಷ: ಸ್ನೇಹಿತರಿಂದ ಧನಾಗಮನ, ತಂದೆಯಿಂದ ಅನುಕೂಲ, ಸ್ಥಿರಾಸ್ತಿ ತಗಾದೆ ಕೋರ್ಟ್‍ಗೆ ಅಲೆದಾಟ, ಸಾಲ ಮಾಡುವ ಪರಿಸ್ಥಿತಿ, ದುರ್ಘಟನೆಗಳಿಂದ ಪ್ರಯಾಣ, ಅನಿರೀಕ್ಷಿತ ಸೋಲು, ನಷ್ಟ, ನಿರಾಸೆ, ಕೆಲಸಗಾರರಿಂದ ತೊಂದರೆ, ಪೆಟ್ಟಾಗುವ ಸಾಧ್ಯತೆ.

    ವೃಷಭ: ಮಕ್ಕಳ ಭವಿಷ್ಯದಲ್ಲಿ ಅಭಿವೃದ್ಧಿ, ಆಕಸ್ಮಿಕ ಧನ ಸಂಪತ್ತು ಪ್ರಾಪ್ತಿ, ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ, ಶುಭ ಕಾರ್ಯ ಸಿದ್ಧಿ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ,ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯಿಂದ ಪ್ರೀತಿ.

    ಮಿಥುನ: ಸ್ವಂತ ಉದ್ಯಮದಲ್ಲಿ ಸಮಸ್ಯೆ, ವ್ಯಾಪಾರ-ವ್ಯವಹಾರದಲ್ಲಿ ಜಯ, ಸ್ಥಿರಾಸ್ತಿ-ವಾಹನಕ್ಕಾಗಿ ಸಾಲ, ಆರೋಗ್ಯದಲ್ಲಿ ವ್ಯತ್ಯಾಸ, ಪ್ರೀತಿ ಪ್ರೇಮ ವಿಚಾರದಲ್ಲಿ ವೈಮನಸ್ಸು, ಮನೆಯಲ್ಲಿ ಮಾಟ-ಮಂತ್ರದ ಭೀತಿ, ಉದ್ಯೋಗ ಕಳೆದುಕೊಳ್ಳುವ ಆತಂಕ.

    ಕಟಕ: ದೂರ ಪ್ರಯಾಣ, ವಿಪರೀತ ರಾಜಯೋಗ, ಉತ್ತಮ ಅವಕಾಶಗಳು ಪ್ರಾಪ್ತಿ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕವಾದ ಆಯಾಸ, ಬಂಧುಗಳಿಂದ ಸಾಲಕ್ಕಾಗಿ ಬೇಡಿಕೆ, ಕೆಲಸಗಾರರು-ಸೇವಕರಿಂದ ನಷ್ಟ, ಅನಗತ್ಯ ತಿರುಗಾಟ, ಅಧಿಕ ಖರ್ಚು.

    ಸಿಂಹ: ಮಕ್ಕಳ ಭವಿಷ್ಯದಲ್ಲಿ ಉತ್ತಮ ಪ್ರಗತಿ, ವಿದ್ಯಾಭ್ಯಾಸದಲ್ಲಿ ಅನುಕೂಲ, ಸ್ಥಿರಾಸ್ತಿ-ವಾಹನ ಲಾಭ, ಇಚ್ಛೆಗಳು ಈಡೇರುವುದು, ಧರ್ಮ ಕಾರ್ಯಗಳನ್ನು ಮರೆಯುವಿರಿ, ಗೌರವಕ್ಕೆ ಧಕ್ಕೆ, ಅಪಕೀರ್ತಿ, ಮಾನಸಿಕ ವ್ಯಥೆ,ಉಷ್ಣ ಬಾಧೆ. ಅಮೂಲ್ಯ ವಸ್ತು ಕಳೆದುಕೊಳ್ಳುವ ಆತಂಕ.

    ಕನ್ಯಾ: ಉದ್ಯೋಗಕ್ಕಾಗಿ ಅಧಿಕ ತಿರುಗಾಟ, ಸ್ಥಿರಾಸ್ತಿ ವ್ಯವಹಾರದಲ್ಲಿ ತೊಡಗುವಿರಿ, ಉದ್ಯೋಗ ಬದಲಾವಣೆಯಿಂದ ಯಶಸ್ಸು, ಇಲ್ಲ ಸಲ್ಲದ ಮಾತಿನಿಂದ ತೊಂದರೆ, ಭುಜ, ಕೈಕಾಲು ನೋವು, ನೆರೆಹೊರೆಯವರಿಂದ ಸಮಸ್ಯೆ, ಕುಟುಂಬದಲ್ಲಿ ಮನಃಸ್ತಾಪ, ಸಂಗಾತಿಯಿಂದ ಅನುಕೂಲ.

    ತುಲಾ: ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಕಾರ್ಯ ಜಯ, ಕುಟುಂಬ ನಿರ್ವಹಣೆಗೆ ಅಧಿಕ ಖರ್ಚು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಅಜೀರ್ಣ ಸಮಸ್ಯೆ, ಮೈಕೈ ನೋವು, ಪತ್ರ ವ್ಯವಹಾರಗಳಲ್ಲಿ ಖರ್ಚು, ಬಂಧುಗಳಿಗಾಗಿ ಹಣವ್ಯಯ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

    ವೃಶ್ಚಿಕ: ಆಕಸ್ಮಿಕ ಧನ ಯೋಗ, ಸೋಲು, ನಷ್ಟ, ನಿರಾಸೆ, ಅಪಕೀರ್ತಿ, ಪಿತ್ರಾರ್ಜಿತ ಆಸ್ತಿಯಿಂದ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಧಿಕ ಉಷ್ಣ ಬಾಧೆ, ತಲೆ ನೋವು, ಮೃತ್ಯು ಭಯ, ಹಾರ್ಮೋನ್ಸ್ ವ್ಯತ್ಯಾಸ, ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ.

    ಧನಸ್ಸು: ದೈವ ಶಾಪದ ಕಾಟ, ಕುಲದೇವರ ನಿಂದನೆ, ಮಕ್ಕಳ ವೈವಾಹಿಕ ಜೀವನದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳ ಬದಲಾವಣೆಯ ಕನಸು, ವಿವಾದದಲ್ಲಿ ಸಿಲುಕುವ ಸಂಭವ, ಹಿರಿಯರ ಗೌರವಕ್ಕೆ ಧಕ್ಕೆ, ಪ್ರವಾಸ ಕೈಗೊಳ್ಳುವ ಆಲೋಚನೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

    ಮಕರ: ಸಾಲ ಬಾಧೆಯಿಂದ ಮುಕ್ತಿ, ಲಾಭದ ಪ್ರಮಾಣ ಅಧಿಕ, ವ್ಯಾಪಾರ-ಉದ್ಯಮ ಆರಂಭಕ್ಕೆ ಚಿಂತನೆ, ಕುತ್ತಿಗೆ ನೋವು, ನರ ದೌರ್ಬಲ್ಯ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ತಂದೆಯಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ ಸಾಧ್ಯತೆ.

    ಕುಂಭ: ಉದ್ಯೋಗ ಸ್ಥಳದಲ್ಲಿ ಧನಾಗಮನ, ಮಕ್ಕಳಿಗೆ ಅದೃಷ್ಟ ಒಲಿಯುವುದು, ಆಕಸ್ಮಿಕ ಪ್ರಯಾಣ, ಸ್ಥಿರಾಸ್ತಿ ಖರೀದಿಗೆ ಚಿಂತನೆ, ಪ್ರೇಮ ವಿಚಾರದಲ್ಲಿ ಯಶಸ್ಸು, ಆಧ್ಯಾತ್ಮಿಕ ಚಿಂತನೆ, ಜೂಜು-ರೇಸು, ಲಾಟರಿಯಿಂದ ತೊಂದರೆ, ಲಾಭ ಪ್ರಮಾಣ ಅಧಿಕ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ಮೀನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಅಧಿಕವಾದ ಒತ್ತಡ, ತಂದೆ ಮಾಡಿದ ತಪ್ಪುಗಳು ಕಾಡುವುದು, ಸ್ಥಿರಾಸ್ತಿ-ವಾಹನ ಯೋಗ, ಮಕ್ಕಳ ಕೌಟುಂಬಿಕ ಜೀವನದಲ್ಲಿ ವ್ಯತ್ಯಾಸ, ದಂಡ ಕಟ್ಟುವ ಸಂದರ್ಭ, ಮಾಡುವ ಕೆಲಸದಲ್ಲಿ ಸಂತೃಪ್ತಿ.

  • ದಿನ ಭವಿಷ್ಯ 11-05-2020

    ದಿನ ಭವಿಷ್ಯ 11-05-2020

    ಪಂಚಾಂಗ

    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ವೈಶಾಖ ಮಾಸ,
    ಕೃಷ್ಣ ಪಕ್ಷ, ಚತುರ್ಥಿ ತಿಥಿ ಉಪರಿ ಪಂಚಮಿ
    ಸೋಮವಾರ, ಪೂರ್ವಷಾಢ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:34 ರಿಂದ 9:09
    ಗುಳಿಕಕಾಲ: ಮಧ್ಯಾಹ್ನ 1:54 ರಿಂದ 3:29
    ಯಮಗಂಡಕಾಲ: ಬೆಳಗ್ಗೆ 10:44 ರಿಂದ 12:10

    ಮೇಷ: ವ್ಯವಹಾರಗಳಲ್ಲಿ ಅಲ್ಪ ಲಾಭ, ಹಣಕಾಸು ಮೋಸ, ವಂಚಿಸುವವವರ ಜಾಲಕ್ಕೆ ಸಿಲುಕುವಿರಿ, ಸಹಾಯಕರಿಂದ ಕಾರ್ಯ ನಿರ್ವಿಘ್ನ, ಈ ದಿನ ಎಚ್ಚರಿಕೆಯಲ್ಲಿರುವುದು ಉತ್ತಮ.

    ವೃಷಭ: ನೀವಾಡುವ ಮಾತಿನಿಂದ ಅನರ್ಥ, ತಂಪು ಪಾನೀಯಗಳಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಹಿತನುಡಿ, ಉದ್ಯೋಗದಲ್ಲಿ ಕಿರಿಕಿರಿ.

    ಮಿಥುನ: ಮನಸ್ಸಿನಲ್ಲಿ ದುಷ್ಟ ಆಲೋಚನೆ, ಕೆಲಸದಲ್ಲಿ ವಿಘ್ನ, ಅಕಾಲ ಭೋಜನ, ಮಕ್ಕಳಿಂದ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸ.

    ಕಟಕ: ವಿದ್ಯಾರ್ಥಿಗಳಲ್ಲಿ ಪ್ರಗತಿ, ನಾನಾ ರೀತಿಯ ತೊಂದರೆ, ಬಂಧುಗಳಲ್ಲಿ ಕಲಹ, ಇಲ್ಲ ಸಲ್ಲದ ಅಪವಾದ, ಆಹಾರ ಸೇವನೆಯಲ್ಲಿ ವ್ಯತ್ಯಾಸ.

    ಸಿಂಹ: ಹಣಕಾಸು ಸಮಸ್ಯೆ, ಸಾಲ ಬಾಧೆ, ವಾಹನದಿಂದ ತೊಂದರೆ, ಶರೀರದಲ್ಲಿ ಸ್ವಲ್ಪ ಆತಂಕ, ಹಿರಿಯರಿಂದ ಹಿತವಚನ.

    ಕನ್ಯಾ: ಅಲ್ಪ ಆದಾಯ, ಅಧಿಕವಾದ ಖರ್ಚು, ಮಾತಿನ ಚಕಮಕಿ, ಮನಃಕ್ಲೇಷ, ಮಾತೃವಿನಿಂದ ಸಹಾಯ, ದಿನಸಿ ವ್ಯಾಪಾರಿಗಳಿಗೆ ಲಾಭ.

    ತುಲಾ: ದಾನ ಧರ್ಮದಲ್ಲಿ ಆಸಕ್ತಿ, ಆಕಸ್ಮಿಕ ಧನವ್ಯಯ, ಶತ್ರುಗಳ ನಾಶ, ನಂಬಿದ ಜನರಿಂದ ಅಶಾಂತಿ, ಮಾನಸಿಕ ವ್ಯಥೆ.

    ವೃಶ್ಚಿಕ: ಉದ್ಯೋಗದಲ್ಲಿ ಕಿರಿಕಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಾನಸಿಕ ಚಿಂತೆ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ತಾಳ್ಮೆಯಿಂದ ಇರುವುದು ಉತ್ತಮ.

    ಧನಸ್ಸು: ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಮಾನಸಿಕ ನೆಮ್ಮದಿ, ಕೃಷಿಕರಿಗೆ ಲಾಭ, ದಾಂಪತ್ಯದಲ್ಲಿ ಪ್ರೀತಿ, ಹಿತೈಷಿಗಳಿಂದ ಹೊಗಳಿಕೆ.

    ಮಕರ: ಮಾನಸಿಕ ನೆಮ್ಮದಿ, ಬಾಕಿ ಹಣ ವಸೂಲಿ, ಚಂಚಲ ಮನಸ್ಸು, ಯಶಸ್ಸಿನ ಮೆಟ್ಟಿಲೇರುವಿರಿ, ಶತ್ರುಗಳ ಬಾಧೆ, ಕೆಲಸ ಕಾರ್ಯಗಳಲ್ಲಿ ಮುನ್ನಡೆ.

    ಕುಂಭ: ಸಾಧಾರಣ ಲಾಭ, ತಾಳ್ಮೆ ಅತ್ಯಗತ್ಯ, ಆರೋಗ್ಯದಲ್ಲಿ ವ್ಯತ್ಯಾಸ, ಧನ ಲಾಭ, ಗೊಂದಲದ ವಾತಾವರಣ, ವೈಯುಕ್ತಿಕ ವಿಚಾರದಲ್ಲಿ ಕಾಳಜಿವಹಿಸಿ.

    ಮೀನ: ಅನ್ಯ ಜನರಲ್ಲಿ ಪ್ರೀತಿ, ಉತ್ತಮ ಅವಕಾಶ ಪ್ರಾಪ್ತಿ, ದುಷ್ಟರಿಂದ ತೊಂದರೆ, ಮನಃಸ್ತಾಪ ಹೆಚ್ಚಾಗುವುದು, ವಿಪರೀತ ವ್ಯಸನ.

  • ದಿನ ಭವಿಷ್ಯ 07-05-2020

    ದಿನ ಭವಿಷ್ಯ 07-05-2020

    ಪಂಚಾಂಗ

    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ವೈಶಾಖ ಮಾಸ,
    ಶುಕ್ಲ ಪಕ್ಷ, ಪೌರ್ಣಿಮೆ,
    ಸಂಜೆ 4:15 ನಂತರ ಪ್ರಥಮಿ ತಿಥಿ,
    ಗುರುವಾರ, ಸ್ವಾತಿ ನಕ್ಷತ್ರ
    ಬೆಳಗ್ಗೆ 11:09 ನಂತರ ವಿಶಾಖ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 1:54 ರಿಂದ 3:29
    ಗುಳಿಕಕಾಲ: ಬೆಳಗ್ಗೆ 9:10 ರಿಂದ 10:45
    ಯಮಗಂಡಕಾಲ: ಬೆಳಗ್ಗೆ 6:01 ರಿಂದ 7:35

    ದಿನ ವಿಶೇಷ: ಬುದ್ಧ ಪೌರ್ಣಿಮೆ

    ಮೇಷ: ಸ್ತ್ರೀಯರಿಂದ ಧನ ಸಂಪತ್ತು ಅನುಕೂಲ, ಪಿತ್ರಾರ್ಜಿತ ಸ್ವತ್ತು ಒಲಿದು ಬರುವುದು, ತಂದೆಯಿಂದ ಬಾಂಧವ್ಯ, ಸಹಕಾರ, ದಾಯಾದಿಗಳಿಂದ ನೋವು, ಪುಣ್ಯಕ್ಷೇತ್ರ ದರ್ಶನ ಭಾಗ್ಯ, ದೇವತಾ ಕಾರ್ಯಗಳಿಗೆ ಅಧಿಕ ಖರ್ಚು, ಈ ದಿನ ಶುಭ ಫಲ ಯೋಗ.

    ವೃಷಭ: ಸಂಬಂಧಿಕರೇ ಶತ್ರುಗಳಾಗುವರು, ಪ್ರಯಾಣದಲ್ಲಿ ಸಂಕಷ್ಟ, ಅಮೂಲ್ಯ ವಸ್ತು, ಹಣ ಕಳೆದುಕೊಳ್ಳುವ ಸಾಧ್ಯತೆ, ಕುಟುಂಬದಲ್ಲಿ ಶತ್ರುತ್ವ, ಆಕಸ್ಮಿಕ ಅವಘಡ, ಅಪಘಾತವಾಗುವ ಸಾಧ್ಯತೆ, ಗೌರವಕ್ಕೆ ಧಕ್ಕೆ.

    ಮಿಥುನ: ಮಕ್ಕಳಿಂದ ಧನ ಸಹಾಯ, ದುಶ್ಚಟಗಳಿಂದ ಸಮಸ್ಯೆ ತಂದುಕೊಳ್ಳುವಿರಿ, ಋಣ ರೋಗ ಬಾಧೆ, ಹಣಕಾಸು ನಷ್ಟ, ಸಂಗಾತಿಯಿಂದ ಅನುಕೂಲ, ಉದ್ಯೋಗದಲ್ಲಿ ಅಭಿವೃದ್ಧಿ, ಆರ್ಥಿಕ ಪರಿಸ್ಥಿತಿ ಪ್ರಗತಿ.

    ಕಟಕ: ಸೈಟ್ ಖರೀದಿ ಗೃಹ ನಿರ್ಮಾಣ ವಿಚಾರದಲ್ಲಿ ನಿರಾಸೆ, ಅಜೀರ್ಣ ಸಮಸ್ಯೆ, ಶರೀರದಲ್ಲಿ ನೋವು, ಉದರ ಬಾಧೆ, ಹಾರ್ಮೋನ್ಸ್ ವ್ಯತ್ಯಾಸ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಧರ್ಮ ಕಾರ್ಯ, ಗುರು ದರ್ಶನಕ್ಕೆ ಮನಸ್ಸು,

    ಸಿಂಹ: ಪ್ರಯಾಣದಲ್ಲಿ ತೊಂದರೆ, ನಷ್ಟ ಮಾಡಿಕೊಳ್ಳುವ ಸಾಧ್ಯತೆ, ಕುಟುಂಬದಲ್ಲಿ ವೈಮನಸ್ಸು, ಸ್ತ್ರೀ ವಿಚಾರದಲ್ಲಿ ಕಿರಿಕಿರಿ, ಗೃಹ, ಸ್ಥಳ ಬದಲಾವಣೆಗೆ ಮನಸ್ಸು, ಅನಿರೀಕ್ಷಿತ ಸೋಲು, ಆತಂಕ.

    ಕನ್ಯಾ: ಸಹೋದರನಿಂದ ಅನುಕೂಲ, ಮಿತ್ರರಿಂದ ಧನ ಲಾಭ, ಸಂಗಾತಿಯ ಮಾತಿನಿಂದ ನೋವು, ಸ್ಥಿರಾಸ್ತಿ-ವಾಹನದಿಂದ ಅನುಕೂಲ, ಆಸೆ ಆಕಾಂಕ್ಷೆಗಳಿಗೆ ಧಕ್ಕೆ, ಆತ್ಮೀಯರಿಂದಲೇ ಅಭಿವೃದ್ಧಿ ಕುಂಠಿತ,  ದಾಯಾದಿಗಳಿಂದ ತೊಂದರೆ.

    ತುಲಾ: ಗ್ಯಾಸ್ಟ್ರಿಕ್-ಅಜೀರ್ಣ ಸಮಸ್ಯೆ, ಶರೀರದಲ್ಲಿ ನೋವು, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಕೆಲಸ ಕಾರ್ಯಗಳಲ್ಲಿ ಎಳೆದಾಟ, ಉದ್ಯೋಗ ನಿಮಿತ್ತ ಪ್ರಯಾಣ, ಕಾರ್ಮಿಕರು-ಬಾಡಿಗೆದಾರರಿಂದ ನಷ್ಟ, ಸಾಲ ಬಾಧೆ ಹೆಚ್ಚಾಗುವುದು.

    ವೃಶ್ಚಿಕ: ದೂರ ಪ್ರಯಾಣ, ಅಧಿಕ ಖರ್ಚು, ಮಕ್ಕಳಿಂದ ನಷ್ಟ, ಸಂತಾನ ಸಮಸ್ಯೆ, ಭವಿಷ್ಯದ ಬಗ್ಗೆ ಚಿಂತೆ, ಯೋಚನೆಯಿಂದ ನಿದ್ರಾಭಂಗ, ಅಧಿಕವಾದ ಉಷ್ಣ, ತಲೆನೋವು, ಉಸಿರಾಟದ ಸಮಸ್ಯೆ ಹೆಚ್ಚು, ತಂದೆಯಿಂದ ನಷ್ಟ-ಕಿರಿಕಿರಿ.

    ಧನಸ್ಸು: ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಲಾಭ, ವಿಶ್ರಾಂತಿ ವೇತನ ಲಭಿಸುವುದು, ಮಕ್ಕಳಿಂದ ಅನುಕೂಲ, ಸೈಟ್, ವಾಹನದಿಂದ ಲಾಭ, ಮಾತೃವಿನಿಂದ ಅನುಕೂಲ.

    ಮಕರ: ಮಕ್ಕಳಿಂದ ನಷ್ಟ, ಸಂಗಾತಿಯಿಂದ ಕಿರಿಕಿರಿ, ವೈವಾಹಿಕ ಜೀವನದಲ್ಲಿ ವೈಮನಸ್ಸು, ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ, ದೂರ ಪ್ರದೇಶಕ್ಕೆ ಹೋಗುವ ಪ್ರಸಂಗ. ಹಣಕಾಸು ಸಮಸ್ಯೆ, ನೆಮ್ಮದಿ ಇಲ್ಲದ ಜೀವನ.

    ಕುಂಭ: ಪ್ರಯಾಣ ರದ್ದಾಗುವುದು, ಕೈಕಾಲು, ತಲೆ ನೋವು, ಸಂತಾನ ದೋಷ, ಮಾಸದೋಷ ಕಾಡುವುದು, ತಂದೆಯಿಂದ ಲಾಭ, ಧಾರ್ಮಿಕ ವ್ಯಕ್ತಿಗಳಿಂದ ಅನುಕೂಲ, ಸಹೋದರರಿಂದ ಸಹಕಾರ, ಪತ್ರ ವ್ಯವಹಾರಗಳಿಂದ ಧನ ಲಾಭ.

    ಮೀನ: ಆಕಸ್ಮಿಕ ಧನಾಗಮನ, ಗೌರವ, ಸನ್ಮಾನ ಪ್ರಾಪ್ತಿ, ಪ್ರಶಂಸೆ, ಹೊಗಳಿಕೆ ಭಾಜನರಾಗುವಿರಿ, ಆಕಸ್ಮಿಕ ಉದ್ಯೋಗ ಲಭಿಸುವುದು, ಕೆಲಸ ಕಾರ್ಯಗಳಲ್ಲಿ ಪ್ರಗತಿ, ದೈವನಿಂದನೆ ಮಾಡುವ ಸಂದರ್ಭ.

  • ದಿನ ಭವಿಷ್ಯ 24-04-2020

    ದಿನ ಭವಿಷ್ಯ 24-04-2020

    ಪಂಚಾಂಗ

    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಶುಕ್ಲ ಪಕ್ಷ, ಪ್ರಥಮಿ ತಿಥಿ, ಉಪರಿ ದ್ವಿತೀಯಾ ತಿಥಿ,
    ಶುಕ್ರವಾರ, ಭರಣಿ ನಕ್ಷತ್ರ

    ಮೇಷ: ಸ್ಥಿರಾಸ್ತಿ ಯೋಗ, ಅಲಂಕಾರಿಕ ವಸ್ತುಗಳು ಪ್ರಾಪ್ತಿ, ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ವಿಘ್ನ, ದಾಂಪತ್ಯ ಸಮಸ್ಯೆಗಳಿಗೆ ಮುಕ್ತಿ, ಮಾನಸಿಕ ನೆಮ್ಮದಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಅಡೆತಡೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಧ್ಮಾತ್ಮಿಕ ಚಿಂತನೆ.

    ವೃಷಭ: ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ನೆರೆಹೊರೆಯವರಿಂದ ತೊಂದರೆ, ಸಾಲ ಮರುಪಾವತಿ, ಬ್ಯಾಂಕಿನಿಂದ ನೋಟಿಸ್, ಸಹೋದರರಿಂದ ಕಿರಿಕಿರಿ, ದೈವ ನಿಂದನೆ, ಮಾಟ-ಮಂತ್ರದ ಭೀತಿ, ಸೋಲು ನಷ್ಟ ನಿರಾಸೆ, ಮಾನಸಿಕ ಆಘಾತ.

    ಮಿಥುನ: ಕೌಟುಂಬಿಕ ಸಮಸ್ಯೆಗೆ ಪರಿಹಾರ, ಹಣಕಾಸು ಸಮಸ್ಯೆ ನಿವಾರಣೆ, ಪ್ರೇಮ ವಿಚಾರದಲ್ಲಿ ಜಯ, ಬಂಧುಗಳಿಂದ ಕಿರಿಕಿರಿ, ಮೇಲಾಧಿಕಾರಿಗಳಿಂದ ತೊಂದರೆ. ಸೇವಕ ವರ್ಗದಿಂದ ಎಚ್ಚರಿಕೆ.

    ಕಟಕ: ವ್ಯಾಪಾರಸ್ಥರಿಗೆ ಅಧಿಕ ಲಾಭ, ಕಲಾವಿದರಿಗೆ ಉತ್ತಮ ಅವಕಾಶ, ಉದ್ಯೋಗಾವಕಾಶ ಪ್ರಾಪ್ತಿ, ಸ್ಥಿರಾಸ್ತಿ-ವಾಹನ ಖರೀದಿಗೆ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಅಲ್ಪ ವ್ಯತ್ಯಾಸ.

    ಸಿಂಹ: ತಂದೆಯ ಆರೋಗ್ಯಕ್ಕಾಗಿ ಖರ್ಚು, ಅನಗತ್ಯ ಓಡಾಟ ಖರ್ಚು, ಉದ್ಯೋಗದಲ್ಲಿ ಮಾನಸಿಕ ಹಿಂಸೆ, ಸಹೋದರರಿಂದ ಕಿರಿಕಿರಿ, ಇಲ್ಲ ಸಲ್ಲದ ಅಪವಾದ, ಉದ್ಯೋಗ ಸ್ಥಳದಲ್ಲಿ ಗಡಿಬಿಡಿ.

    ಕನ್ಯಾ: ಆಕಸ್ಮಿಕ ಲಾಭ, ದಾಯಾದಿಗಳ ಕಲಹ, ದೂರ ಪ್ರಯಾಣ, ಸ್ತ್ರೀಯರಿಗೆ ಧನಾಗಮನ, ಅದೃಷ್ಟದ ಶುಭ ಯೋಗ, ಹಣಕಾಸು ಪರಿಸ್ಥಿತಿ ಚೇತರಿಕೆ, ಹೊಗಳಿಕೆಯಿಂದ ಕಾರ್ಯ ಜಯ.

    ತುಲಾ: ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಲಾಭ, ಶುಭ ಮಂಗಳ ಕಾರ್ಯಕ್ಕಾಗಿ ಪ್ರಯಾಣ, ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ, ವ್ಯಾಪಾರ ವ್ಯವಹಾರದಲ್ಲಿ ಶತ್ರುಗಳಿಂದ ಸಮಸ್ಯೆ, ಸ್ವಯಂಕೃತ ಅಪರಾಧದಿಂದ ತೊಂದರೆ, ಪ್ರಯಾಣದಲ್ಲಿ ಕಿರಿಕಿರಿ, ಬಂಧುಗಳಿಂದ ಸಮಸ್ಯೆ.

    ವೃಶ್ಚಿಕ: ಶೀತ, ಕಫ, ಗ್ಯಾಸ್ಟ್ರಿಕ್ ಸಮಸ್ಯೆ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಮೋಜು ಮಸ್ತಿಗಾಗಿ ಸಾಲ, ಉಷ್ಣ ಬಾಧೆ, ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ, ಹಿರಿಯರಿಂದ ಬೇಸರ.

    ಧನಸ್ಸು: ಅನಿರೀಕ್ಷಿತ ಗೌರವ ಸನ್ಮಾನ, ಭೂ ವ್ಯವಹಾರದಲ್ಲಿ ಜಯ, ಮಕ್ಕಳಲ್ಲಿ ವೈಮನಸ್ಸು, ಸ್ನೇಹಿತರೇ ಶತ್ರುಗಳಾಗುವರು, ಕೆಲಸ ಕಾರ್ಯಗಳಲ್ಲಿ ಎಚ್ಚರ, ನಿಮ್ಮ ಎಚ್ಚರಿಕೆಯಲ್ಲಿರುವುದು ಉತ್ತಮ.

    ಮಕರ: ದಾಂಪತ್ಯದಲ್ಲಿ ಅನ್ಯೋನ್ಯತೆ, ಪಾಲುದಾರಿಕೆ ವ್ಯವಹಾರದಲ್ಲಿ ನೆಮ್ಮದಿ, ಕಂಕಣ ಭಾಗ್ಯ, ಶುಭ ಕಾರ್ಯಕ್ಕೆ ಸಕಾಲ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಅಶುಭ ಸುದ್ದಿ ಸಾಧ್ಯತೆ.

    ಕುಂಭ: ತಂದೆಯ ಬಂಧುಗಳಿಂದ ಸಾಲ ಕೇಳುವಿರಿ, ಆಸ್ತಿ ಪಾಲು ಕೇಳುವಿರಿ, ಸ್ವಯಂಕೃತ್ಯಗಳಿಂದ ತೊಂದರೆ, ಉದ್ಯೋಗದಲ್ಲಿ ಸಂಕಷ್ಟ, ಸ್ಥಿರಾಸ್ತಿ ಯೋಗ, ಮಹಿಳೆಯರಿಂದ ಶುಭ, ಅಲಂಕಾರಿಕ ವಸ್ತುಗಳಿಂದ ಸಂತೃಪ್ತಿ.

    ಮೀನ: ಬಾಡಿಗೆದಾರರ ಜೊತೆ ವಾಗ್ವಾದ, ಸ್ತ್ರೀಯರಿಗೆ ಧನ ಸಹಾಯ, ತಂದೆಯಿಂದ ಸಂಕಷ್ಟ, ಇಲ್ಲ ಸಲ್ಲದ ಅಪವಾದ, ನೀವಾಡುವ ಮಾತಿನಿಂದ ಅನರ್ಥ.

  • ದಿನ ಭವಿಷ್ಯ 22-04-2020

    ದಿನ ಭವಿಷ್ಯ 22-04-2020

    ಪಂಚಾಂಗ

    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರಾ ಮಾಸ,
    ಕೃಷ್ಣ ಪಕ್ಷ, ಅಮಾವಾಸ್ಯೆ,
    ಬುಧವಾರ, ರೇವತಿ ನಕ್ಷತ್ರ

    ಮೇಷ: ಹಣ ಸಮಸ್ಯೆ, ಸಾಲ ಬಾಧೆ, ಪಾಪ ಬುದ್ಧಿ, ಚರ್ಮರೋಗ, ಕುಟುಂಬದಲ್ಲಿ ಸೌಖ್ಯ, ದಾಂಪತ್ಯದಲ್ಲಿ ಪ್ರೀತಿ, ವ್ಯಾಪಾರದಲ್ಲಿ ಚೇತರಿಕೆ.

    ವೃಷಭ: ಯಾರನ್ನೂ ಹೆಚ್ಚು ನಂಬಬೇಡಿ, ಮನಸ್ಸಿನಲ್ಲಿ ಭಯ, ಶತ್ರುಗಳ ಬಾಧೆ, ಅನಗತ್ಯ ಸುತ್ತಾಟ ಮಾಡಬೇಡಿ, ವೈಯುಕ್ತಿಕ ವಿಚಾರದ ಬಗ್ಗೆ ಗಮನಹರಿಸಿ.

    ಮಿಥುನ: ಹಣಕಾಸು ವಿಚಾರದಲ್ಲಿ ಎಚ್ಚರ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಮಾನಸಿಕ ಚಿಂತೆ, ಅಕಾಲ ಭೋಜನ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.

    ಕಟಕ: ಮಾತಿನ ಮೇಲೆ ಹಿಡಿತ ಅಗತ್ಯ, ತಾಳ್ಮೆಯಿಂದ ವರ್ತಿಸುವುದು ಉತ್ತಮ, ಮಕ್ಕಳಿಗೆ ಅನಾರೋಗ್ಯ, ವಿಪರೀತ ಹಣ ಖರ್ಚು, ವಿದ್ಯಾಭ್ಯಾಸದಲ್ಲಿ ಆಸಕ್ತಿ. ಈ ದಿನ ಮಿಶ್ರಫಲ ಯೋಗ.

    ಸಿಂಹ: ಕೆಲಸ ಕಾರ್ಯಗಳಲ್ಲಿ ವಿಳಂಬ, ಅಲ್ಪ ಆದಾಯ, ಅಧಿಕ ಖರ್ಚು, ಅಭಿವೃದ್ಧಿ ಕುಂಠಿತ, ಹೇಳಿಕೆ ಮಾತಿನಿಂದ ಸಂಕಷ್ಟಕ್ಕೆ ಸಿಲುಕುವಿರಿ, ಬಂಧು ಮಿತ್ರರ ವಿಚಾರದಲ್ಲಿ ಎಚ್ಚರ.

    ಕನ್ಯಾ: ಖಾಸಗಿ ಕಂಪನಿಗಳಿಗೆ ನಷ್ಟ, ಗುರು ಹಿರಿಯಲ್ಲಿ ಭಕ್ತಿ, ಶತ್ರುಗಳ ನಾಶ, ಮಾನಸಿಕ ಒತ್ತಡ, ನೆಮ್ಮದಿಯಾಗಿರಲು ಬಯಸುವಿರಿ.

    ತುಲಾ: ಅನಗತ್ಯ ಕಲಹವಾಗುವುದು, ಚಂಚಲ ಮನಸ್ಸು, ವಿದ್ಯಾರ್ಥಿಗಳಲ್ಲಿ ಗೊಂದಲ, ಹಣಕಾಸು ವಿಚಾರದಲ್ಲಿ ಮೋಸ, ವ್ಯವಹಾರಗಳನ್ನು ಮುಂದೂಡುವುದು ಉತ್ತಮ.

    ವೃಶ್ಚಿಕ: ಅತಿಯಾದ ಕೋಪ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರಗಳಲ್ಲಿ ದೃಷ್ಟಿ ದೋಷ, ಆಕಸ್ಮಿಕ ತೊಂದರೆ, ಮಾನಸಿಕ ವ್ಯಥೆ.

    ಧನಸ್ಸು: ಮಾತೃವಿನಿಂದ ಲಾಭ, ಸ್ನೇಹಿತರಿಂದ ನೆರವು, ಸುಖ ಭೋಜನ, ಪ್ರೀತಿ ಸಮಾಗಮ, ಶರೀರದಲ್ಲಿ ತಳಮಳ.

    ಮಕರ: ಕೆಲಸ ಕಾರ್ಯಗಳಲ್ಲಿ ಅಲ್ಪ ಪ್ರಗತಿ, ಉದರ ಬಾಧೆ, ವ್ಯರ್ಥ ಧನಹಾನಿ, ಪುತ್ರರಲ್ಲಿ ದ್ವೇಷ, ಯಾರನ್ನೂ ಹೆಚ್ಚು ನಂಬಬೇಡಿ, ಆಲಸ್ಯ ಮನೋಭಾವ.

    ಕುಂಭ: ವಾದ-ವಿವಾದದಲ್ಲಿ ತೊಡಗುವಿರಿ, ಅತಿಯಾದ ಆತ್ಮ ವಿಶ್ವಾಸದಿಂದ ತೊಂದರೆ, ವೈರಿಗಳಿಂದ ದೂರವಿರಿ, ಪರಿಶ್ರಮಕ್ಕೆ ತಕ್ಕ ಆದಾಯ.

    ಮೀನ: ತಂಪು ಪಾನೀಯಗಳಿಂದ ಅನಾರೋಗ್ಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಹಿತ ಶತ್ರುಗಳ ಬಾಧೆ, ಸ್ತ್ರೀಯರಿಗೆ ಲಾಭ, ಹೊಗಳಿಕೆ ಮಾತಿಗೆ ಮರುಳಾಗಬೇಡಿ.

  • ದಿನಭವಿಷ್ಯ 20-04-2020

    ದಿನಭವಿಷ್ಯ 20-04-2020

    ಪಂಚಾಂಗ

    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
    ಸೋಮವಾರ, ಪೂರ್ವಭಾದ್ರ ನಕ್ಷತ್ರ ಉಪರಿ ಉತ್ತರಭಾದ್ರ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:42 ರಿಂದ 9:15
    ಗುಳಿಕಕಾಲ: ಮಧ್ಯಾಹ್ನ 1:56 ರಿಂದ 3:29
    ಯಮಗಂಡಕಾಲ: ಬೆಳಗ್ಗೆ 10:49 ರಿಂದ 12:22

    ಮೇಷ: ಮನಸ್ಸಿಗೆ ದುಃಖ, ಅಶಾಂತಿ ವಾತಾವರಣ, ಶತ್ರುಗಳಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಏರುಪೇರು, ಅಧಿಕಾರಿಗಳಲ್ಲಿ ಕಲಹ.

    ವೃಷಭ: ಅಧಿಕ ತಿರುಗಾಟ, ಹಣಕಾಸು ತೊಂದರೆ, ಆದಾಯಕ್ಕಿಂತ ಖರ್ಚು ಹೆಚ್ಚು, ಆರೋಗ್ಯದಲ್ಲಿ ಸಮಸ್ಯೆ.

    ಮಿಥುನ: ಕೈ ಹಾಕಿದ ಕೆಲಸದಲ್ಲಿ ಪ್ರಗತಿ, ಸ್ತ್ರೀಯರಿಗೆ ಲಾಭ, ಮಕ್ಕಳಿಗೆ ಅನಾರೋಗ್ಯ, ಉದ್ಯೊಗದಲ್ಲಿ ಬಡ್ತಿ.

    ಕಟಕ: ದ್ರವ್ಯ ನಷ್ಟ, ಸಾಲ ಬಾಧೆ, ಯತ್ನ ಕಾರ್ಯದಲ್ಲಿ ಭಂಗ, ಉದ್ಯೋಗದಲ್ಲಿ ಕಿರಿಕಿರಿ, ಹೆಚ್ಚು ಅಶುಭ ಫಲಗಳು.

    ಸಿಂಹ: ನಂಬಿದ ಜನರಿಂದ ಮೋಸ, ಆತ್ಮೀಯರಲ್ಲಿ ಮನಃಸ್ತಾಪ, ದೂರ ಪ್ರಯಾಣ, ಮನಸ್ಸಿನಲ್ಲಿ ಭಯ ಭೀತಿ.

    ಕನ್ಯಾ: ಪ್ರಿಯ ಜನರ ಭೇಟಿ, ಉದ್ಯೋಗದಲ್ಲಿ ಧನ ಲಾಭ, ಬಂಧು ಮಿತ್ರರ ಸಮಾಗಮ, ಮಂಗಳ ಕಾರ್ಯ ನಡೆಯುವುದು.

    ತುಲಾ: ಮಾನಸಿಕ ವ್ಯಥೆ, ಹಣಕಾಸು ತೊಂದರೆ, ಶತ್ರುಗಳ ಬಾಧೆ, ಋಣ ಬಾಧೆ, ಆರೋಗ್ಯದಲ್ಲಿ ಏರುಪೇರು.

    ವೃಶ್ಚಿಕ: ಚಂಚಲ ಮನಸ್ಸು, ಸ್ಥಳ ಬದಲಾವಣೆ, ಬಂಧುಗಳಲ್ಲಿ ಕಲಹ, ದಾಂಪತ್ಯದಲ್ಲಿ ವೈಮನಸ್ಸು.

    ಧನಸ್ಸು: ಸ್ನೇಹಿತರಿಂದ ಸಹಾಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರುಗಳ ಬಾಧೆ, ಗುರು ಹಿರಿಯರಲ್ಲಿ ಭಕ್ತಿ.

    ಮಕರ: ಕೆಲಸ ಕಾರ್ಯಗಳಲ್ಲಿ ಜಯ, ಶತ್ರುಗಳನ್ನು ನಾಶ, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ ಪ್ರಾಪ್ತಿ.

    ಕುಂಭ: ಋಣ ವಿಮೋಚನೆ, ಕೋರ್ಟ್ ಕೇಸ್‍ಗಳಲ್ಲಿ ಮುನ್ನಡೆ, ಕೃಷಿಯಲ್ಲಿ ಲಾಭ, ಈ ದಿನ ಶುಭ ಫಲ, ಮಾನಸಿಕ ನೆಮ್ಮದಿ.

    ಮೀನ: ಕೆಲಸ ಕಾರ್ಯಗಳಲ್ಲಿ ವಿಘ್ನ, ಸುಳ್ಳು ಮಾತನಾಡುವಿರಿ, ಇಲ್ಲಸ ಸಲ್ಲದ ಅಪವಾದ ನಿಂದನೆ, ಅಧಿಕ ಹಣವ್ಯಯ.

  • ದಿನಭವಿಷ್ಯ 13-04-2020

    ದಿನಭವಿಷ್ಯ 13-04-2020

    ಪಂಚಾಂಗ

    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರಮಾಸ,
    ಕೃಷ್ಣ ಪಕ್ಷ, ಷಷ್ಠಿ ತಿಥಿ,
    ಸೋಮವಾರ, ಮೂಲಾ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:45 ರಿಂದ 9:18
    ಗುಳಿಕಕಾಲ: ಮಧ್ಯಾಹ್ನ 1:57 ರಿಂದ 3:30
    ಯಮಗಂಡಕಾಲ: ಬೆಳಗ್ಗೆ 10:51 ರಿಂದ 12:24

    ಮೇಷ: ಯತ್ನ ಕಾರ್ಯದಲ್ಲಿ ಅನುಕೂಲ, ಸೇವಕ ವರ್ಗದಿಂದ ಸಹಾಯ, ಸ್ಥಳ ಬದಲಾವಣೆ, ದಾಂಪತ್ಯದಲ್ಲಿ ಕಲಹ, ಭೂ ಲಾಭ.

    ವೃಷಭ: ಕುಟುಂಬದಲ್ಲಿ ಕಲಹ, ಮಾತಿನ ಚಕಮಕಿ, ಮನಃಕ್ಲೇಷ, ಕುಟುಂಬದ ಮುಖ್ಯಸ್ಥರಿಂದ ಸಲಹೆ.

    ಮಿಥುನ: ನಿವೇಶನ ಖರೀದಿ ಯೋಗ, ಸ್ಥಳ ಬದಲಾವಣೆ, ತೀರ್ಥಕ್ಷೇತ್ರ ದರ್ಶನ, ಉತ್ತಮ ವ್ಯಾಪಾರ ವಹಿವಾಟು.

    ಕಟಕ: ಅಧಿಕವಾದ ತಿರುಗಾಟ, ಶತ್ರುಗಳ ಬಾಧೆ, ಮಿತ್ರರೊಂದಿಗೆ ವಾಗ್ವಾದ, ಬರಹಗಾರರಿಗೆ ಅನುಕೂಲ, ಋಣ ಬಾಧೆ,

    ಸಿಂಹ: ವಾಹನ ರಿಪೇರಿ, ವ್ಯವಹಾರದಲ್ಲಿ ಏರುಪೇರು, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.

    ಕನ್ಯಾ: ದೂರ ಪ್ರಯಾಣ, ಸುಖ ಭೋಜನ, ಸ್ಥಗಿತ ಕಾರ್ಯಗಳು ಮುಂದುವರೆಯುವುದು, ಮಾನಸಿಕ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಏರುಪೇರು.

    ತುಲಾ: ಆಲಸ್ಯ ಮನೋಭಾವ, ಇಲ್ಲ ಸಲ್ಲದ ಅಪವಾದ, ಶತ್ರುಗಳ ಭಯ, ಹಣಕಾಸು ನಷ್ಟ, ದ್ರವ್ಯ ನಷ್ಟ, ಚಂಚಲ ಮನಸ್ಸು.

    ವೃಶ್ಚಿಕ: ಕುತಂತ್ರದಿಂದ ಹಣ ಸಂಪಾದನೆ, ಚೋರ ಭಯ, ಮುಂಗೋಪ ಹೆಚ್ಚು, ವಾಹನದಿಂದ ಕಂಟಕ.

    ಧನಸ್ಸು: ಪರರ ಮಾತಿಗೆ ಕಿವಿಗೊಡಬೇಡಿ, ಗೆಳೆಯರಿಂದ ಸಹಾಯ, ಸಾಲ ಬಾಧೆ, ವ್ಯಾಸಂಗದಲ್ಲಿ ಹಿನ್ನಡೆ.

    ಮಕರ: ದಾಯಾದಿಗಳ ಕಲಹ, ಕೆಲಸ ಕಾರ್ಯಗಳಲ್ಲಿ ಜಯ, ಅಕಾಲ ಭೋಜನ, ಆಕಸ್ಮಿಕ ಖರ್ಚು, ಋಣ ವಿಮೋಚನೆ, ಸಾಧಾರಣ ಫಲ.

    ಕುಂಭ: ನೆಮ್ಮದಿ ಇಲ್ಲದ ಜೀವನ, ವೈದ್ಯಕೀಯ ಕ್ಷೇತ್ರದವರಿಗೆ ಲಾಭ, ಉತ್ತಮ ಅನುಕೂಲ, ಪಾಪದ ಕಾರ್ಯಕ್ಕೆ ಮನಸ್ಸು ಪ್ರಚೋದನೆ.

    ಮೀನ: ಮನೆಯಲ್ಲಿ ಸಂತಸದ ವಾತಾವರಣ, ವೈಯುಕ್ತಿಕ ಕೆಲಸದ ಬಗ್ಗೆ ನಿಗಾವಹಿಸಿ, ವಿದೇಶ ಪ್ರಯಾಣ, ಅವಿವಾಹಿತರಿಗೆ ವಿವಾಹ ಯೋಗ.