Tag: ದಿನಚರಿ

  • ಸ್ಟೈಲಿಶ್ ಸ್ಟಾರ್ ಅಲ್ಲು ದಿನಚರಿ: ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದೇನು?

    ಸ್ಟೈಲಿಶ್ ಸ್ಟಾರ್ ಅಲ್ಲು ದಿನಚರಿ: ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದೇನು?

    ಖ್ಯಾತ ನಟ ಅಲ್ಲು ಅರ್ಜುನ್ ಹಾಗೂ ಡ್ಯಾಷಿಂಗ್ ಡೈರೆಕ್ಟರ್ ಸುಕುಮಾರ್ (Sukumaran) ಮತ್ತೊಮ್ಮೆ ಬಾಕ್ಸಾಫೀಸ್ ಉಡೀಸ್ ಮಾಡೋದಿಕ್ಕೆ ಭರ್ಜರಿಯಾಗಿ ಸಜ್ಜಾಗಿದ್ದಾರೆ. ಪುಷ್ಪ ಮೂಲಕ ದಕ್ಷಿಣ ಧ್ರುವದಿಂದ ಉತ್ತರ ಧ್ರುವದವರೆಗೂ ಧಮಾಕ ಎಬ್ಬಿಸಿದ್ದ ಈ ಜೋಡಿ ಡಬಲ್ ಸಂಭ್ರಮದಲ್ಲಿ ತೇಲಾಡ್ತಿದೆ. 2 ರಾಷ್ಟ್ರಪ್ರಶಸ್ತಿಗಳು ಪುಷ್ಪ-ದಿ ರೈಸ್ ಸಿನಿಮಾಗೆ ಒಲಿದು ಬಂದಿವೆ. ಸೂರ್ಯ, ಧನುಷ್ ನಂತಹ ಸ್ಟಾರ್ಸ್ ಹಿಂದಿಕ್ಕೆ ಮಿಸ್ಟರ್ ಅಲ್ಲು ಅತ್ಯುತ್ತಮ ನಟ ಗರಿ ತಮ್ಮದಾಗಿಸಿಕೊಂಡ್ರೆ, ಅತ್ಯುತ್ತಮ ಸಂಗೀತ ನಿರ್ದೇಶಕನ ಪ್ರಶಸ್ತಿ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಪಾಲಾಗಿದೆ. ಈ ಖುಷಿ ಕ್ಷಣವನ್ನು ಪುಷ್ಪ ಟೀಂ ಸಂಭ್ರಮಿಸಿ ಕ್ಯಾಕಿ ಹಾಕ್ತಿದೆ.

    ರಾಷ್ಟ್ರಪ್ರಶಸ್ತಿ ತಮ್ಮ ಮಡಿಲು ಸೇರುವ ಆನಂದದಲ್ಲಿರುವ ಅಲ್ಲು ಅರ್ಜುನ್ ಫ್ಯಾನ್ಸ್ ಗೆ ಸರ್ ಪ್ರೈಸ್ ಗಿಫ್ಟ್ ಗಿಫ್ಟ್ ಕೊಟ್ಟಿದ್ದಾರೆ. ಸೀಕ್ವೆಲ್ ಶೂಟಿಂಗ್ ಎಲ್ಲಿಗೆ ಬಂತು ಗುರು? ಅಪ್ ಡೇಟ್ ಬೇಕು ಅಪ್ ಡೇಟ್ ಅನ್ನುತ್ತಿದ್ದವರಿಗೆ ಸ್ಟೈಲಿಶ್ ಡೈರೆಕ್ಟ್ ಆಗಿ ಪುಷ್ಪ-2 ಕೋಟೆ ಒಳಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲುಗಾರು ಹುಟ್ಟುಹಬ್ಬಕ್ಕೆ ಅನಾವರಣ ಪುಷ್ಪ-2 ಸಣ್ಣ ಟೀಸರ್ ಹಂಗಾಮ ಕ್ರಿಯೇಟ್ ಮಾಡಿತ್ತು. ಕಾಣೆಯಾಗಿದ್ದ ಪುಷ್ಪ ಹೊಸ ಅವತಾರದಲ್ಲಿ ಪ್ರತ್ಯಕ್ಷನಾಗುವ ಮೂಲಕ ಇನ್ಮುಂದೆ ನನ್ನಂದೇ ರೂಲ್ ಎಂಬ ಸಂದೇಶ ರವಾನಿಸಿದ್ದಾನೆ. ಪುಷ್ಪ ಸೀಕ್ವೆಲ್ ಎಂಟ್ರಿ ತುಣುಕು ಬಾಲಿವುಡ್ ಮಂದಿಯನ್ನು ಕಂಗೆಡಿಸಿತ್ತು. ಈಗ ರಿವೀಲ್ ಆಗಿರುವ ಪುಷ್ಪ-2 ಮೇಕಿಂಗ್ ಫ್ಯಾನ್ಸ್ ಎಕ್ಸೈಟ್ ಆಗುವಂತೆ ಮಾಡಿದೆ.

    ಅಲ್ಲು ಅರ್ಜುನ್ (Allu Arjun) ಪುಷ್ಪ-2 ಮೇಕಿಂಗ್ ಝಲಕ್ ಮಾತ್ರ ಹಂಚಿಕೊಂಡಿಲ್ಲ. ತಮ್ಮ ದೈನಂದಿನ ದಿನ ದಿನಚರಿ ಹೇಗಿ ಇರುತ್ತೇ ಅನ್ನೋದನ್ನು 2 ನಿಮಿಷ 20 ಸೆಕೆಂಡ್ ವಿಡಿಯೋ ತುಣುಕಿನಲ್ಲಿ ರಿವೀಲ್ ಮಾಡಿದ್ದಾರೆ. ಒಬ್ಬ ಸೆಲೆಬ್ರಿಟಿ ಲೈಫ್ ಸ್ಟೈಲ್ ಹೇಗಿರುತ್ತದೆ? ಅವ್ರ ಮನೆ ಕಾರು, ಗಾರ್ಡನ್, ಕ್ಯಾರವಾನ್ ಬಗ್ಗೆ ತಿಳಿದುಕೊಳ್ಳುವ ಕ್ಯೂರಿಯಾಸಿಟಿಯಂತೂ ಪ್ರತಿಯೊಬ್ಬ ಕಲಾಭಿಮಾನಿಗೂ ಇದ್ದೇ ಇರುತ್ತದೆ. ಆ ಕ್ಯೂರಿಯಾಸಿಟಿಯನ್ನ ತಣಿಸುವ ಕೆಲಸ ಮಾಡಿದ್ದಾರೆ ಮಿಸ್ಟರ್ ಬನ್ನಿಗಾರು. ಈ ಸ್ಪೆಷಲ್ ವಿಡಿಯೋ ಇನ್ ಸ್ಟಾಗ್ರಾಂ ಸಾಥ್ ಕೊಟ್ಟಿದೆ. ಇನ್ ಸ್ಟಾಗ್ರಾಂ ತಂಡ ಅಲ್ಲು ಅರ್ಜುನ್ ಮನೆಗೆ ಭೇಟಿ ಕೊಟ್ಟು ಅವ್ರ ದಿನ ನಿತ್ಯದ ಅಪ್ ಡೇಟ್ ಗಳನ್ನು ಶೂಟ್ ಮಾಡಿ ಫ್ಯಾನ್ಸ್ ಎದುರು ತಂದಿದೆ. ಸ್ವತಃ ಇನ್ ಸ್ಟಾಗ್ರಾಂ ತಂಡವೇ ಅಲ್ಲು ಅರ್ಜುನ್ ಮನೆಗೆ ಭೇಟಿ ಕೊಟ್ಟು ವಿಡಿಯೋ ಮಾಡಿದೆ. ಈ ವಿಶೇಷ ಗೌರವಕ್ಕೆ ಪಾತ್ರವಾಗಿರುವ ದಕ್ಷಿಣ ಭಾರತದ ಮೊದಲ ನಟ ಎಂಬ ಹೆಗ್ಗಳಿಕೆ ಕೂಡ ಅಲ್ಲು ಮಡಿಲು ಸೇರಿದೆ.

     

    View this post on Instagram

     

    A post shared by Instagram (@instagram)

    ಪುಷ್ಪರಾಜ ಬೆಳಗ್ಗೆ ಎದ್ದ ತಕ್ಷಣ ತಮ್ಮ ಮನೆಯ ಅಲ್ಲು ಗಾರ್ಡನ್ ನಲ್ಲಿ ಧಾನ್ಯ ಮಾಡಿ ಚಿಲ್ ಆಗ್ತಾರೆ. ಗಾರ್ಡನ್ ಒಂದು ರೌಂಡ್ ಆಗಿ ಕಾಫಿ ಕುಡಿದು ತಮ್ಮ ಕಾಸ್ಟ್ಲೀ ಕಾರ್ ಹತ್ತಿಕೊಂಡು ತಮ್ಮ ಮುದ್ದಿನ ಮಕ್ಕಳಿಗೆ ವಿಡಿಯೋ ಕಾಲ್ ಮಾಡ್ತಾರೆ. ಎಲ್ಲಿ ಇರಲಿ ಎಷ್ಟೇ ಬ್ಯುಸಿ ಇರಲಿ ಅಲ್ಲು ಮಿಸ್ ಮಾಡದೇ ಮಧ್ಯಾಹ್ನ 1 ಗಂಟೆ ಮಕ್ಕಳಿಗೆ ವಿಡಿಯೋ ಕಾಲ್ ಮಾಡೋದನ್ನ ಮಾತ್ರ ಮರೆಯೋದಿಲ್ಲ. ವಿಡಿಯೋ ಕಾಲ್ ಮಾಡ್ತಾ ಹೈದ್ರಾಬಾದ್ ರಾಮೋಜಿಸಿಟಿ ಫಿಲ್ಮ ಸಿಟಿ ತಲುಪ್ತಾರೆ. ಅಲ್ಲಿ ನೆರೆದಿದ್ದ ಫ್ಯಾನ್ಸ್ ಭೇಟಿ ಮಾಡಿ ಶೂಟಿಂಗ್ ಸೆಟ್ ಗೆ ಹಾಜರಾಗ್ತಾರೆ.

    ಶೂಟಿಂಗ್ ಸೆಟ್ ಗೆ ಎಂಟ್ರಿ ಕೊಡ್ತಿದ್ದಂತೆ ಸಿನಿಮಾಗೆ ಸಂಬಂಧಿಸಿದ ಕಾಸ್ಟ್ಯೂಮ್, ಪ್ರಾಪರ್ಟಿಸ್ ಆಯ್ಕೆ ಮಾಡಿಕೊಂಡ ನಂತ್ರ ಪುಷ್ಪರಾಜ್ ತಮ್ಮ ಕ್ಯಾರವಾನ್ ಗೆ ಪ್ರವೇಶಿಸ್ತಾರೆ. ಅಲ್ಲು ಕ್ಯಾರವಾನ್ ತಲುಪ್ತಿದ್ದಂತೆ ನಿರ್ದೇಶಕ ಸುಕುಮಾರ್ ನೆಚ್ಚಿನ ಡಾರ್ಲಿಂಗ್ ಮೀಟ್ ಮಾಡಿ ಹಗ್ ಮಾಡಿ ಆ ದಿನ ಸೀನ್ಸ್ ಬಗ್ಗೆ ಎಕ್ಸ್ ಪ್ಲೈನ್ ಮಾಡ್ತಾರೆ. ನಂತ್ರ ಮೇಕಪ್ ಹಚ್ಚಿಕೊಂಡು ಕ್ಯಾಮೆರಾ ಎದುರು ಪ್ರತ್ಯಕ್ಷರಾಗ್ತಾರೆ.

    ಅಲ್ಲು ಅರ್ಜುನ್ ಹಾಗೂ ಸುಕುಮಾರ್ ನಡುವೆ ಅದ್ಭುತವಾದ ಬಾಂಡಿಂಗ್ ಇದೆ. ಸುಕುಮಾರ್ ಸಿನಿಮಾ ಜರ್ನಿ ಶುರುವಾಗಿದ್ದು ಅಲ್ಲು ಜೊತೆನೇ. ಆರ್ಯ ಸಿನಿಮಾದ ಮೂಲಕ ಹಿಟ್ ಜೋಡಿಯಾದ ಸ್ಟೈಲಿಶ್ ಸ್ಟಾರ್ ಸುಕುಮಾರ್ ಆರ್ಯ-2 ನಂತ್ರ ಪುಷ್ಪ-1 ಈಗ ಪುಷ್ಪ-2 ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ನನ್ನ ಮೊದಲ ಹೀರೋ ಎಂದಿರುವ ಸುಕುಮಾರ್, ನನ್ನ ಗೆಳೆಯ ಅಂತಾನೂ ಹೇಳಿಕೊಂಡಿದ್ದಾರೆ.

    ಪುಷ್ಪ 2 ದಿ ರೂಲ್ಸ್ ಶೂಟಿಂಗ್ ಹೈದ್ರಾಬಾದ್ (Hyderabad) ನ ರಾಮೋಜಿ ಫಿಲ್ಮಂ ಸಿಟಿಯಲ್ಲಿ ಭರದಿಂದ ಸಾಗ್ತಿದೆ. ಈ ನಡುವೆಯೇ ಸೀಕ್ವೆಲ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿರುವ ಸುದ್ದಿ ಹೊರಬಿದ್ದಿದೆ. ಹಿಂದಿ ಬೆಲ್ಟ್ ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹಕ್ಕು ಮಾರಾಟವಾಗಿದೆಯಂತೆ. ಪುಷ್ಪ ಮೊದಲ ಭಾಗ ಬಾಲಿವುಡ್ ಅಂಗಳದಲ್ಲಿ ಬಡಾ ಹಿಟ್ ಕಂಡಿತ್ತು. ಅಲ್ಲು ಆಕ್ಟಿಂಗ್, ಸುಕುಮಾರ್ ಟೇಕಿಂಗ್ ಗೆ ಹಿಂದಿ ಮಂದಿ ಫಿದಾ ಆಗಿದ್ದರು. ಬಾಲಿವುಡ್ ಚಿತ್ರಗಳಿಗೆ ಟಕ್ಕರ್ ಕೊಟ್ಟಿದ್ದ ಪುಷ್ಪ 2 ಗಾಗಿ ಬಂಗಾರದ ಬೇಡಿಕೆ ಬಂದಿದೆ. 200 ಕೋಟಿ ಮೊತ್ತಕ್ಕೆ ಹಿಂದಿ ರೈಟ್ಸ್ ಮಾರಾಟವಾಗಿದ್ದು, 75 ಕೋಟಿಗೆ ಆಡಿಯೋ ರೈಟ್ಸ್ ಸೇಲ್ ಆಗಿರುವ ಬಗ್ಗೆ ಸಿನಿ ಜಜಾರ್ ನಲ್ಲಿ ಹೊಸ ಬಜ್ ಓಡಾಡ್ತಿದೆ. ಹಾಗಿದ್ರೆ ಪುಷ್ಪ-2  ವರ್ಷ ತೆರೆಗೆ ಬರೋದಂತು ಡೌಟ್. ಮುಂದಿನ ವರ್ಷ ಮಾರ್ಚ್ 22ಕ್ಕೆ ಪುಷ್ಪರಾಜನ ಫೈಯರ್ ತೆರೆಯಲ್ಲಿ ಶುರುವಾಗಲಿದೆ ಎನ್ನಲಾಗ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಳಗ್ಗೆ 2.15 ರಿಂದ ರಾತ್ರಿ 11 ಗಂಟೆ – ನಡೆದಾಡುವ ದೇವರ ದಿನಚರಿ ವಿಸ್ಮಯ

    ಬೆಳಗ್ಗೆ 2.15 ರಿಂದ ರಾತ್ರಿ 11 ಗಂಟೆ – ನಡೆದಾಡುವ ದೇವರ ದಿನಚರಿ ವಿಸ್ಮಯ

    ಕಲ ಜೀವಗಳಿಗೂ ಲೇಸನ್ನು ಬಯಸುವ ಶಿವಕಾರುಣ್ಯ ಸ್ವರೂಪರಾದ ಶ್ರೀಗಳ ಬದುಕಿನಷ್ಟೇ ಅವರ ದಿನಚರಿಯೂ ವಿಸ್ಮಯ. ಶ್ರೀಗಳ ಪಾಲಿಗೆ ವಿರಾಮವೆಂದ್ರೆ “ಒಂದು ಕಾರ್ಯವನ್ನು ಮುಗಿಸಿ ಇನ್ನೊಂದು ಕಾರ್ಯದಲ್ಲಿ ತೊಡುಗುವುದು” ಎನ್ನುವ ವ್ಯಾಖ್ಯನ ನೀಡುತ್ತಾರೆ. ಕಾಯಕಯೋಗಿಯ ದಿನಚರಿ ಆರಂಭವಾಗುವುದು ಬೆಳಗಿನ ಜಾವ 2.15ಕ್ಕೆ. ನಾವೆಲ್ಲ 2.15ಕ್ಕೆ ನಿದ್ದೆಯಲ್ಲಿದ್ದರೆ ಗುರುಗಳು ಎದ್ದು ತಮ್ಮ ಕೆಲಸ ಆರಂಭಿಸುತ್ತಿದ್ದರು.

    ಮಧ್ಯರಾತ್ರಿ ಕಳೆದ ನಂತರ 2.15ಕ್ಕೆ ಏಳುತ್ತಾರೆ. ಅಧ್ಯಯನ ಕೊಂಚ ಕಾಲ, ಅನಂತರ ಶೌಚಾದಿ ನಿತ್ಯಕರ್ಮಗಳನ್ನು ಮುಗಿಸಿ 3.30ರ ವೇಳೆಗೆ ಪೂಜಾಗೃಹ ಪ್ರವೇಶ. ಕೊಂಚ ಕಾಲ ಏಕಾಂತ ಧ್ಯಾನ, ಯಾರಿಗೂ ಪ್ರವೇಶವಿಲ್ಲ. ಅನಂತರ ಅರ್ಚನಾದಿಗಳ ಆರಂಭ. ವೇದಮಂತ್ರಗಳ, ಶರಣರ ವಚನ, ಕೈವಲ್ಯದ ಹಾಡುಗಳು ಭಕ್ತಿಗೀತೆಗಳನ್ನು ಹಾಡುತ್ತಾರೆ. ಹತ್ತಾರು ಭಕ್ತರ ಮದ್ಯೆ ಗುರು ಲಿಂಗ ಜಂಗಮಾಚರಣೆ ಶುರುವಾಗುತ್ತೆ. ಮಾತು ಮನಗಳು ಮೂಕವಾಗುವ ಅನುಭಾವದ ಪವಿತ್ರ ಜಗತ್ತು ಅಲ್ಲಿ ಸೃಷ್ಟಿಯಾಗಿ ಬಿಡುತ್ತೆ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಇಷ್ಟಲಿಂಗಾರ್ಚನೆಯ ನಂತರ ಪ್ರಸಾದ ಸ್ವೀಕಾರ. ಪ್ರಸಾದ ವಿತರಣೆಯ ಸಂದರ್ಭದಲ್ಲಿ ತುಂಬುಕಂಠದ ಅನುಭಾವದ ಹಾಡುಗಳು ಅಲ್ಲಿ ಮೊಳಗುತ್ತದೆ. ಶ್ರೀಗಳೇ ಈ ಹಾಡು ಹಾಡುತ್ತಾರೆ. ಇದನ್ನು ಕೇಳುವುದೊಂದೆ ಅವಿಸ್ಮರಣೀಯ. ತದನಂತರ ಮಿತಾಹಾರ ಸೇವನೆ. ಒಂದಿಷ್ಟು ಹಣ್ಣು, ಅದು ಒಂದೆರಡು ತೊಳೆ ಅಷ್ಟೇ.

    5.30ಕ್ಕೆ ಪೂಜಾಗೃಹದಿಂದ ಕಾಯಕದತ್ತ ಗಮನ. ಕಾರ್ಯಲಾಯಕ್ಕೆ ಆಗಮನ. ಮುಂಜಾನೆಯ ಪ್ರಾರ್ಥನಾ ಸಭೆ. ಸಾಮೂಹಿಕವಾಗಿ ವಿದ್ಯಾರ್ಥಿಗಳ ಪ್ರಾರ್ಥನೆಯಲ್ಲಿ ಶ್ರೀಗಳು ಉಪಸ್ಥಿತಿ. ತದನಂತ್ರ ವಿದ್ಯಾರ್ಥಿಗಳಿಗೆ ಹಿತವಚನ ಭೋಧನೆ. ಬಳಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಜೊತೆ ಹೊಲ ಗದ್ದೆಗಳಿಗೆ ಭೇಟಿ ಕೊಡುವ ಶ್ರೀಗಳು ಹೊಲದಲ್ಲಿ ಬೆಳೆಯುವ ಬೆಳೆಯ ಬಗ್ಗೆ ಅಷ್ಟೇ ಆಸ್ಥೆ ವಹಿಸುತ್ತಾರೆ. ಇದಕ್ಕಾಗಿಯೇ ಶ್ರೀಗಳನ್ನು ಧರೆಗಿಳಿದ ಭಗವಂತ ಅಂತಾ ಕರೆಯೋದು. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ಶ್ರೀಗಳು ಎಂದಿಗೂ ವಿರಮಿಸಿದವರಲ್ಲ. ಭಕ್ತರಿಗೆ ಸದಾ ದರ್ಶನ ನೀಡುತ್ತಾ, ವಿದ್ಯಾರ್ಥಿಗಳ ಜೊತೆ ಸಂವಾದ ಮಾಡುತ್ತಾ ಇಡೀ ಮಠದ ತುಂಬೆಲ್ಲ ಓಡಾಡುತ್ತಿದ್ದರೆ ಮಠದಲ್ಲಿ ಏನೋ ಚೈತನ್ಯ. ಇವರ ಲವಲವಿಕೆಯ ನೋಡಿ ಅಲಸ್ಯದಿಂದ ಮೂಲೆಸೇರಿದವರು ಎದ್ದು ಕುಳತು ಕೆಲ್ಸ ಮಾಡುವಂತಹ ದೈವಿಕ ಶಕ್ತಿ ಶ್ರೀಗಳಲ್ಲಿತ್ತು.

    ಗುರುಗಳ ದಿನಚರಿ
    ಬೆಳಗಿನ ಜಾವ 2:15 ಕ್ಕೆ ನಿದ್ದೆಯಿಂದ ಎಚ್ಚರ
    2:15 – 2:45 ಶರಣ ಸಂತರ ತತ್ವ ಪಠಣ
    2:45 – 3:00 ಸ್ನಾನಾದಿ ನಿತ್ಯವಿಧಿ
    3:00 – 5:30 ಶಿವಪೂಜೆ ಲಘುಪ್ರಸಾದ ಸ್ವೀಕಾರ
    5:30 – 6: 00 ಸಾಮೂಹಿಕ ಪ್ರಾರ್ಥನೆ
    6:15 – 7:10 ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮತ್ತು ಸಂಸ್ಕೃತ ಪಾಠ ಭೋಧನೆ
    7.10 – 7:40 ದಿನಪತ್ರಿಕೆ ಓದುವ ಹವ್ಯಾಸ
    8:40 – 9:00 ಟಪಾಲು ಪರಿಶೀಲನೆ
    9:00 – 9:10 ಪ್ರಸಾದ ವಸ್ತು ಪರಿಶೀಲನೆ
    9:10 – 9:30 ಶ್ರೀ ಕ್ಷೇತ್ರದ ಕಾರ್ಯವೀಕ್ಷಣೆ
    9:30 – 10:30 ಶ್ರೀಗಳಿಂದ ಪತ್ರಗಳಿಗೆ ಉತ್ತರ
    10:30 – 10:45 ವಿದ್ಯಾರ್ಥಿಗಳ ಊಟದ ವ್ಯವಸ್ಥೆ ಪರಿಶೀಲನೆ
    10:45 – 12:00 ಭಕ್ತಾದಿಗಳಿಗೆ ಸಂದರ್ಶನ
    12:00 – 1:00 ಯಂತ್ರಧಾರಣೆ
    1:00 – 2:30 ಭಕ್ತಾದಿಗಳಿಗೆ ಸಂದರ್ಶನ
    2:30 – 3:30 ಪೂಜೆ ಮತ್ತು ಪ್ರಸಾದ ಸ್ವೀಕಾರ
    3:30 – 5:30 ಸಂಸ್ಥೆಗಳ ಕಾರ್ಯಚಟುವಟಿಕೆ ಪರಿಶೀಲನೆ
    5:30 – 5:45 ಪ್ರಸಾದ ಸಿದ್ದತೆ ಪರಿಶೀಲನೆ
    5:45 – 6:30 ಗದ್ದೆ ತೋಟಗಳ ಪರಿಶೀಲನೆ
    6:30 – 7:00 ವಿದ್ಯಾರ್ಥಿಗಳೊಂದಿಗೆ ಸಾಮೂಹಿಕ ಪ್ರಾರ್ಥನೆ
    7:00 – 7:15 ವಿದ್ಯಾರ್ಥಿಗಳಿಗೆ ಆರ್ಶೀವಚನ
    7:15 – 7:45 ಭಕ್ತಾದಿಗಳ ಸಂದರ್ಶನ
    7:45 – 8:00 ಪ್ರಸಾದ ನಿಲಯ ವ್ಯವಸ್ಥೆಯ ವೀಕ್ಷಣೆ
    8:00 – 8:30 ಕಾರ್ಯಾಲಯ ವ್ಯವಹಾರ
    8:30 – 8:45 ಶರಣರ ತತ್ವಪಠಣ
    8:45 – 9:00 ಸ್ನಾನ
    9:00 – 10:00 ಪೂಜೆ, ಲಘು ಪ್ರಸಾದ
    10:00 – 10:30 – ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಯ ಮೇಲ್ವಿಚಾರಣೆ
    10:30 – 10:45 ದಿನಚರಿ ಬರೆಯುವುದು
    11 ಗಂಟೆಗೆ – ನಿದ್ರೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • “ಸಿಎಂ ಎಚ್‍ಡಿಕೆ ದಿನನಿತ್ಯ ಮಾಡೋದು ಮೂರೇ ಮೂರು ಕೆಲ್ಸ”

    “ಸಿಎಂ ಎಚ್‍ಡಿಕೆ ದಿನನಿತ್ಯ ಮಾಡೋದು ಮೂರೇ ಮೂರು ಕೆಲ್ಸ”

    – ಸಿಎಂ ದಿನಚರಿ ಬಗ್ಗೆ ಬಿಜೆಪಿ ಕರ್ನಾಟಕ ವ್ಯಂಗ್ಯ
    – ಟ್ವಿಟ್ಟರ್ ಖಾತೆಯಲ್ಲಿ ಎಚ್‍ಡಿಕೆಗೆ ಹೇಳಿಕೆಗೆ ತಿರುಗೇಟು

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ದಿನನಿತ್ಯ ಮಾಡೋದು ಮೂರೇ ಮೂರು ಕೆಲಸ ಎಂದು ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.

    ಟ್ವೀಟ್ ಮೊದಲ ಸಾಲಿನಲ್ಲಿ ಸಿಎಂ ಕುಮಾರಸ್ವಾಮಿ ಅವರ ದಿನಚರಿ ಪಟ್ಟಿ ಎಂದು ಆರಂಭಿಸಿ, ಬಳಿಕ ನಿತ್ಯವು ಮೂರು ಹೊತ್ತು ಸಿಎಂ ಏನೇನು ಕೆಲಸ ಮಾಡುತ್ತಾರೆ ಎನ್ನುವುದನ್ನು ವಿವರಿಸಲಾಗಿದೆ.

    ಟ್ವೀಟ್‍ನಲ್ಲಿ ಏನಿದೆ?
    ಕುಮಾರಸ್ವಾಮಿ ಅವರು ಬೆಳಗ್ಗೆ ಮಾಧ್ಯಮಗಳ ಎದುರು ಸುಳ್ಳು ಆಶ್ವಾಸನೆ, ಆಣೆ ಮಾತು ಹೇಳಿ ಫುಲ್ ಕವರೇಜ್ ಪಡೆದು ತಮ್ಮ ತಿಂಡಿಯನ್ನು ತಿನ್ನುತ್ತಾರೆ. ಮಧ್ಯಾಹ್ನದ ವೇಳೆ ಆಪರೇಷನ್ ಕಮಲದ ಕುರಿತು ಮಾತನಾಡಿ ಅಳುತ್ತಾರೆ. ಅಲ್ಲದೆ ತಮ್ಮ ಸರ್ಕಾರದ ವಿಫಲತೆಯನ್ನು ಮುಚ್ಚಿಟ್ಟುಕೊಂಡು ಬಿಜೆಪಿಯನ್ನು ದೂಷಿಸುತ್ತಾರೆ.

    ಮತ್ತೆ ರಾತ್ರಿ ಅಧಿಕಾರಕ್ಕಾಗಿ ತಮ್ಮ ತಮ್ಮಲ್ಲೇ ಜಗಳವಾಡಿ ನಿದ್ರೆಗೆ ಜಾರುತ್ತಾರೆ. ಮರುದಿನ ಇದೇ ದಿನಚರಿ ಮುಂದುವರಿಯುತ್ತದೆ ಎಂದು ಬರೆದು ಸಿಎಂ ಅವರನ್ನು ಬಿಜೆಪಿ ಕರ್ನಾಟಕ ಕಾಲೆಳೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv