ನಟ ದರ್ಶನ್ (Darshan) ‘ಡೆವಿಲ್’ ಸಿನಿಮಾದ (Devil) ಸೆಟ್‌ನಲ್ಲಿ ಗೆಳೆಯ ಸಚ್ಚಿದಾನಂದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಜನ್ಮದಿನದ ಸಂಭ್ರಮದಲ್ಲಿರೋ ಗೆಳೆಯನಿಗೆ ದರ್ಶನ್ ವಿಶೇಷವಾಗಿ ಶುಭಕೋರಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ:ಭಯೋತ್ಪಾದಕರು ಎಂದಿಗೂ ಕಾಶ್ಮೀರದ ಪ್ರಗತಿ ನೋಡಲು ಬಯಸುವುದಿಲ್ಲ: ಸುನೀಲ್ ಶೆಟ್ಟಿ
‘ಡೆವಿಲ್’ ಚಿತ್ರದ ಶೂಟಿಂಗ್‌ನಲ್ಲಿ ದರ್ಶನ್ ಬ್ಯುಸಿಯಾಗಿದ್ದಾರೆ. ಬಿಡುವಿನ ಸಮಯದಲ್ಲಿ ಗೆಳೆಯ ಸಚ್ಚಿದಾನಂದಗೆ ‘ಡೆವಿಲ್’ ಚಿತ್ರದ ಸೆಟ್ ಕರೆಸಿ ಕೇಕ್ ಕಟ್ ಮಾಡಿಸಿದ್ದಾರೆ. ಈ ವೇಳೆ, ದರ್ಶನ್ ಸಹೋದರ ದಿನಕರ್ ತೂಗುದೀಪ (Dinakar Thoogudeepa) ಕೂಡ ಭಾಗಿಯಾಗಿದ್ದಾರೆ. ಈ ಮೂಲಕ ದರ್ಶನ್ ನಯಾ ಲುಕ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ನಟನ ಸ್ಮಾರ್ಟ್ ಲುಕ್ ನೋಡಿ ದೃಷ್ಟಿ ತೆಗೆರೋ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ದರ್ಶನ್ ಜೊತೆಗಿನ ಹೊಸ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ- ವಾವ್ ಎಂದ ಫ್ಯಾನ್ಸ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್ ಮೇಲೆ ದರ್ಶನ್ ಹೊರಬಂದ್ಮೇಲೆ ಪತಿಯ ವ್ಯವಹಾರವನ್ನು ವಿಜಯಲಕ್ಷ್ಮಿ ಅವರೇ ನೋಡಿಕೊಳ್ತಿದ್ದಾರೆ. ದರ್ಶನ್‌ಗೆ ಎಲ್ಲೇ ಶೂಟಿಂಗ್ ಇದ್ರೂ ಅಥವಾ ಯಾವುದೇ ಕಾರ್ಯಕ್ರಮ ಆಗಿದ್ರೂ ಪತ್ನಿ ಅಥವಾ ಸಹೋದರ ದಿನಕರ್ ಜೊತೆಯಾಗಿರುತ್ತಾರೆ.
ಅಂದಹಾಗೆ, ‘ಡೆವಿಲ್’ ಸಿನಿಮಾದಲ್ಲಿ ಜೊತೆ ರಚನಾ ರೈ, ವಿನಯ್ ಗೌಡ, ಶರ್ಮಿಳಾ ಮಾಂಡ್ರೆ ನಟಿಸುತ್ತಿದ್ದಾರೆ. `ತಾರಕ್’ ಡೈರೆಕ್ಟರ್ ಮಿಲನಾ ಪ್ರಕಾಶ್ ‘ಡೆವಿಲ್’ಗೆ ನಿರ್ದೇಶನ ಮಾಡುತ್ತಿದ್ದಾರೆ.
ಅಣ್ಣ ದರ್ಶನ್ (Darshan) ಜೊತೆಗಿನ ಮನಸ್ತಾಪದ ಬಗ್ಗೆ ಕೊನೆಗೂ ಮೌನಮುರಿದ್ದಾರೆ ಸಹೋದರ ದಿನಕರ್ ತೂಗುದೀಪ (Dinakar Thoogudeepa). ಅಣ್ಣ-ತಮ್ಮ ಬೇರೆ ಆಗಿದ್ದೀವಿ ಅಂತ ಯಾರು ಹೇಳಿದ್ದು? ಫ್ಯಾಮಿಲಿಯಲ್ಲಿ ಚಿಕ್ಕಪುಟ್ಟ ಮನಸ್ತಾಪವಿತ್ತು ಅಷ್ಟೆ. ಹಾಗಂತ ದೂರ ಆಗೋ ಮಾತಿಲ್ಲ ಎಂದು ದರ್ಶನ್ ಜೊತೆಗೆ ಯಾವುದೇ ಮನಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ರಾಯಲ್’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನಕರ್, ಗಂಡ-ಹೆಂಡತಿ ಮಧ್ಯೆ ಹೇಗೆ ಜಗಳವೋ ಹಾಗೆ ಅಣ್ಣ-ತಮ್ಮ ಅಂದ್ಮೇಲೆ ಇದ್ದೆ ಇರುತ್ತೆ. ಮಾತಾಡ್ತಾನೇ ಇರ್ತೀವಿ. ತಿಂಗಳಿಗೊಮ್ಮೆ ಆಗೊಮ್ಮೆ ಈಗೊಮ್ಮೆ. ಅತ್ತಿಗೆ ಜೊತೆ ಯಾವಾಗಲೂ ಕಾಂಟೆಕ್ಟ್‌ನಲ್ಲಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಣಬೀರ್ ಕಪೂರ್-ದೀಪಿಕಾ ಪಡುಕೋಣೆಯ ‘ಯೇ ಜವಾನಿ ಹೈ ದೀವಾನಿ’ ಜ.3ಕ್ಕೆ ರೀ-ರಿಲೀಸ್
ಈ ಸಿನಿಮಾಗೆ ದರ್ಶನ್ ಸಾಥ್ ಕೊಡಬಹುದು. ಬೆನ್ನುನೋವಿದೆ.. ಟ್ರೀಟ್ಮೆಂಟ್‌ಗಾಗಿ ಮೈಸೂರಿಗೆ ಹೋಗಿದ್ದೀವಿ. ಅಜಯ್ ಹೆಗ್ಡೆ ಎರಡು ಬಾರಿ ಟ್ರೀಟ್ಮೆಂಟ್ ಮಾಡಿದಾರೆ ಹಾಗಾಗಿ ಅಲ್ಲೇ ಟ್ರೀಟ್ಮೆಂಟ್ ಎಂದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ ‘ನವಗ್ರಹ’ (Navagraha) ಸಿನಿಮಾ ಇದೀಗ ನವೆಂಬರ್ 8ರಂದು ರೀ ರಿಲೀಸ್ ಆಗುತ್ತಿದೆ. 16 ವರ್ಷಗಳ ಬಳಿಕ ಮತ್ತೆ ಈ ಸಿನಿಮಾ ತೆರೆ ಕಾಣುತ್ತಿದೆ. ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಆರೋಪ- ಜಾನಿ ಮಾಸ್ಟರ್‌ಗೆ ಜಾಮೀನು ಮಂಜೂರು
ದರ್ಶನ್, ತರುಣ್ ಸುಧೀರ್, ಮರಿ ಟೈಗರ್ ವಿನೋದ್ ಪ್ರಭಾಕರ್, ಧರ್ಮ ಕೀರ್ತಿರಾಜ್, ಸೃಜನ್ ಲೋಕೇಶ್, ನಾಗೇಂದ್ರ ಅರಸ್, ಗಿರಿ ದಿನೇಶ್, ವರ್ಷ, ಶರ್ಮಿಳಾ ಮಾಂಡ್ರೆ ನಟನೆಯ ‘ನವಗ್ರಹ’ ಚಿತ್ರ ನವೆಂಬರ್ 8ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 16 ವರ್ಷಗಳ ಹಿಂದೆ 2008ರ ನ.7ರಂದು ಚಿತ್ರ ತೆರೆಕಂಡಿತ್ತು.
ಈ ಚಿತ್ರವನ್ನು ತೂಗುದೀಪ ಸಂಸ್ಥೆಯ ನಿರ್ಮಾಣದಲ್ಲಿ ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದರು. ಇನ್ನೂ ದರ್ಶನ್ ನಟನೆಯ ಸಿನಿಮಾಗಳು ಮರು ಬಿಡುಗಡೆಯಾಗುತ್ತಿವೆ. ಈಗಾಗಲೇ ಪೊರ್ಕಿ, ಕರಿಯ, ಶಾಸ್ತ್ರಿ ಚಿತ್ರಗಳು ರಿಲೀಸ್ ಆಗಿವೆ.
ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್‌ರನ್ನು (Darshan) ನೋಡಲು ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಕಾನೂನು ಸಮರದ ಕುರಿತು ಚರ್ಚಿಸಲು ವಿಜಯಲಕ್ಷ್ಮಿ 6ನೇ ಬಾರಿ ಜೈಲಿಗೆ ಆಗಮಿಸಿದ್ದಾರೆ. ಇದನ್ನೂ ಓದಿ:ಹಂಸ ದಮಯಂತಿಯಂತೆ ಪೋಸ್ ಕೊಟ್ಟ ಹರ್ಷಿಕಾ
ದರ್ಶನ್ ನೋಡಲು ಜೈಲಿಗೆ ಭೇಟಿ ಕೊಟ್ಟಿರುವ ವಿಜಯಲಕ್ಷ್ಮಿ(Vijayalakshmi) ಜೊತೆ ದಿನಕರ್ ತೂಗುದೀಪ, ನಟ ಧನ್ವೀರ್ ಗೌಡ, ವಿಜಯಲಕ್ಷ್ಮಿ ಅವರ ತಂಗಿಯ ಗಂಡ ಸುಶಾಂತ್ ನಾಯ್ಡು ಆಗಮಿಸಿದ್ದಾರೆ. ಈ ವೇಳೆ, ಎರಡು ಬ್ಯಾಗ್‌ಗಳಲ್ಲಿ ಬಟ್ಟೆ ಮತ್ತು ಬೇಕರಿ ತಿನಿಸುಗಳನ್ನು ತರಲಾಗಿದೆ.
ಅಂದಹಾಗೆ, ಜೂನ್ 11ರಂದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ದರ್ಶನ್‌ರನ್ನು ಬಂಧಿಸಲಾಯಿತು.
ಹೊಸ ವರ್ಷದ (New Movie) ಮುನ್ನ ದಿನ ಶಿವರಾಜ್ ಕುಮಾರ್ (Shivaraj Kumar) ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದರು ದಿನಕರ್ ತೂಗುದೀಪ್ (Dinkar Thugudeep). ಶಿವರಾಜ್ ಕುಮಾರ್ ಅವರ ಚಿತ್ರ ಮಾಡುವುದಾಗಿ ಘೋಷಿಸಿಕೊಂಡಿದ್ದರು. ಇದೀಗ ಶಿವಣ್ಣ ನಟನೆಯ 131ನೇ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಶಿವರಾಜ್ ಕುಮಾರ್ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದ್ದಾರೆ.
ಉತ್ಸಾಹದ ಚಿಲುಮೆಯಂತಿರುವ ಖ್ಯಾತ ನಟ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಲಿರುವ ನೂತನ ಚಿತ್ರ ಹೊಸವರ್ಷಕ್ಕೆ ಘೋಷಣೆಯಾಗಿದೆ. ಹೆಸರಾಂತ ನಿರ್ದೇಶಕ ದಿನಕರ್ ತೂಗುದೀಪ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಬಿಂದ್ಯಾ ಮೂವೀಸ್ ಲಾಂಛನದಲ್ಲಿ ಆರ್ ಕೇಶವ್ ಹಾಗೂ ಬಿ.ಎಸ್ ಸುಧೀಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪಕ್ಕಾ ಮಾಸ್ ಹಾಗೂ ಕಮರ್ಷಿಯಲ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರಿಯದರ್ಶಿನಿ ರಾಮರೆಡ್ಡಿ ಕಥೆ ಬರೆದಿದ್ದಾರೆ. ಪ್ರೀ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗುತ್ತಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ನಡೆಯುತ್ತಿದೆ. ಮಹಾ ಶಿವರಾತ್ರಿ ಹಬ್ಬದ ವೇಳೆಗೆ ಶೀರ್ಷಿಕೆ ಬಿಡುಗಡೆಯಾಗಲಿದೆ.
ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಹಾಗೂ ದಿನಕರ್ ತೂಗುದೀಪ ಅವರ ಕಾಂಬಿನೇಶನ್ ನಲ್ಲಿ ಮೂಡಿಬರಲಿರುವ ಈ ಚಿತ್ರದ ಕುರಿತು ಅಭಿಮಾನಿ ವಲಯದಲ್ಲಿ ಹಾಗೂ ಚಿತ್ರೋದ್ಯಮದಲ್ಲಿ ಸಾಕಷ್ಟು ನಿರೀಕ್ಷೆಯಿದೆ.
ಕನ್ನಡ ಚಿತ್ರರಂಗದಲ್ಲಿ ಜೊತೆ ಜೊತೆಯಲಿ, ಸಾರಥಿ, ನವಗ್ರಹ ಸಿನಿಮಾಗಳ ಮೂಲಕ ಸಂಚಲನ ಸೃಷ್ಟಿಸಿದ ನಿರ್ದೇಶಕ ದಿನಕರ್ ತೂಗುದೀಪ ಇದೀಗ `ಕಿಸ್’ ಚಿತ್ರದ ನಟ ವಿರಾಟ್‌ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇನ್ನು ಈ ಹಿಂದೆ ಪುನೀತ್ ರಾಜ್‌ಕುಮಾರ್‌ಗಾಗಿ ಹೆಣೆದಿದ್ದ ಕಥೆಯನ್ನೇ ವಿರಾಟ್‌ಗೆ ನಿರ್ದೇಶನ ಮಾಡ್ತಾರಾ ಎಂಬ ಸುದ್ದಿಗೆ ಇದೀಗ ಸ್ಪಷ್ಟನೆ ಸಿಕ್ಕಿದೆ.
ದಿನಕರ್ ತೂಗುದೀಪ ಮಾಡಿದ್ದು ಕೆಲವೇ ಚಿತ್ರವಾಗಿದ್ರು, ಪವರ್‌ಫುಲ್ ಕಥೆಯೊಂದಿಗೆ ಬೆಳ್ಳಿತೆರೆಯಲ್ಲಿ ನಿರ್ದೇಶನದ ಮೂಲಕ ಕಮಾಲ್ ಮಾಡಿದ್ದಾರೆ. ಈ ಹಿಂದೆ ಪುನೀತ್ ರಾಜ್‌ಕುಮಾರ್‌ಗಾಗಿ ಒಂದೊಳ್ಳೆ ಕಥೆಯನ್ನ ದಿನಕರ್ ಮಾಡಿದ್ರು. ಆದರೆ ಪುನೀತ್ ಅಗಲಿಕೆಯ ಆ ಸಿನಿಮಾ ಕನಸು ಕನಸಾಗೇ ಉಳಿದಿದೆ. ಇದೀಗ ದಿನಕರ್ ನಿರ್ದೇಶನದಲ್ಲಿ `ಕಿಸ್’ ಚಿತ್ರದ ನಟ ವಿರಾಟ್ ಕಾಣಿಸಿಕೊಳ್ತಿದ್ದಾರೆ. ಅಪ್ಪುಗಾಗಿ ಹೆಣೆದಿದ್ದ ಕಥೆನಾ ಇದು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ನಟಿಸಿದ ಮೊದಲ ಚಿತ್ರ `ಕಿಸ್’ ಸಿನಿಮಾದಲ್ಲೇ ತಾನೆಂತಹ ಕಲಾವಿದ ಅಂತಾ ಪ್ರೂವ್ ಮಾಡಿದ್ದ ವಿರಾಟ್ ಈಗ ಅದ್ದೂರಿ ಲವರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜತೆಗೆ ದಿನಕರ್ ನಿರ್ದೇಶನದಲ್ಲಿ ನಟಿಸುವ ಅವಕಾಶ ಕೂಡ ಗಿಟ್ಟಿಸಿಕೊಂಡಿದ್ದಾರೆ. ರಘು ನಿಡುವಳ್ಳಿ ಬರೆದ ಕತೆಗೆ ದಿನಕರ್ ನಿರ್ದೇಶನ ಮಾಡ್ತಿದ್ದಾರೆ. ಪುನೀತ್‌ಗಾಗಿ ದಿನಕರ್ ಕಥೆ ಬರೆದಿದ್ರು ಆ ಕಥೆ ಹಾಗೇಯೇ ಇದೆ. ಮಾಸ್ ಕಮರ್ಷಿಯಲ್ ಕಥೆಗೆ ವಿರಾಟ್‌ನನ್ನು ನಾಯಕನಾಗಿ ಲಾಂಚ್ ಮಾಡ್ತಿದ್ದಾರೆ. ಪುನೀತ್‌ಗೆ ಬರೆದ ಕಥೆಗೂ ಈ ಹೊಸ ಪ್ರಾಜೆಕ್ಟ್ಗೂ ಯಾವುದೇ ಸಂಬಂಧವಿಲ್ಲ ಎಂಬ ಸ್ಪಷ್ಣನೆ ಸಿಕ್ಕಿದೆ. ಇದನ್ನೂ ಓದಿ: ರಕ್ತಸಿಕ್ತ ಅಧ್ಯಾಯಕ್ಕೆ ನಾಯಕನಾಗಲಿದ್ದಾರಾ ನೀನಾಸಂ ಸತೀಶ್?: 20 ಕೋಟಿ ಬಜೆಟ್, ಪ್ಯಾನ್ ಇಂಡಿಯಾ ಸಿನಿಮಾ
ʻಕಿಸ್ʼ ಚಿತ್ರದಲ್ಲಿ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದ ನಟ ವಿರಾಟ್, ದಿನಕರ್ ನಿರ್ದೇಶನದ ಚಿತ್ರದಲ್ಲಿ ಫುಲ್ ಮಾಸ್ ಮತ್ತು ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಗಟ್ಟಿ ಕಥೆ ಜತೆ ಕಮರ್ಷಿಯಲ್ ಕಂಟೆಂಟ್ ಹೊತ್ತು ದಿನಕರ್ ಮತ್ತು ವಿರಾಟ್ ಮಿಂಚಲು ರೆಡಿಯಾಗಿದ್ದಾರೆ.
ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನರಾದ ನಂತರ ಅವರಿಗಾಗಿಯೇ ಬರೆದ ಎಷ್ಟೋ ಸ್ಕ್ರಿಪ್ಟ್ ಸಿನಿಮಾವಾಗದೇ ನಿಂತಿದೆ. ಅನಿವಾರ್ಯವಾಗಿ ಕೆಲವು ಸಿನಿಮಾಗಳು ಬೇರೆ ನಾಯಕರ ಪಾಲಾಗಿದೆ. ಈಗ ಪುನೀತ್ ನಟಿಸಬೇಕಿದ್ದ ಸಿನಿಮಾಗೆ ‘ಕಿಸ್’ ಖ್ಯಾತಿಯ ವಿರಾಟ್ ಬಣ್ಣ ಹಚ್ಚುತ್ತಿದ್ದಾರೆ.
ಪುನೀತ್ ಅವರಿಗೆ ಆಕ್ಷನ್ ಕಟ್ ಹೇಳಬೇಕು ಎಂದು ಕಥೆ ರಚಿಸಿದ್ದ ದಿನಕರ್ ತೂಗುದೀಪ ಆ ಕಥೆಗೆ ಬೇರೆ ನಾಯಕರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾಗೆ ವಿರಾಟ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇಂದು ವಿರಾಟ್ ಹುಟ್ಟುಹಬ್ಬವಾದ ಹಿನ್ನೆಲೆ ಇಂದು ಸಿನಿಮಾ ಪೋಸ್ಟರ್‌ನನ್ನು ಚಿತ್ರತಂಡ ಬಿಡುಗಡೆ ಮಾಡಿದ್ದಾರೆ. ಇದು ವಿರಾಟ್ 3ನೇ ಸಿನಿಮಾ. ಮೂರನೇ ಚಿತ್ರಕ್ಕೆ ಇಷ್ಟು ದೊಡ್ಡ ಪ್ರಾಜೆಕ್ಟ್ ಸಿಕ್ಕಿರುವುದಕ್ಕೆ ವಿರಾಟ್ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವರ್ಕೌಟ್‌ನಲ್ಲಿ ಬ್ಯುಸಿಯಾದ ವರದನಾಯಕನ ರಾಣಿ
ಚಿತ್ರತಂಡ ವಿರಾಟ್ ಇರುವ ಪೋಸ್ಟರ್‌ನನ್ನು ಬಿಡುಗಡೆ ಮಾಡಿದ್ದು, ಈ ಸಿನಿಮಾ ಟೈಟಲ್ ಏನು ಎಂಬುದನ್ನು ಮಾತ್ರ ಚಿತ್ರತಂಡ ರಿಲೀಸ್ ಮಾಡಿಲ್ಲ. ಸಿನಿಮಾ ಯಾವುದು ಎಂದು ಗೆಸ್ ಮಾಡಲು ಚಿತ್ರತಂಡ ಪ್ರೇಕ್ಷಕರಿಗೆ ಬಿಟ್ಟಿದ್ದಾರೆ.
ಈ ಸಿನಿಮಾವನ್ನು ಜಯಣ್ಣ-ಭೋಗೇಂದ್ರ ಕಂಬೈನ್ಸ್ ನಿರ್ಮಾಣ ಮಾಡುತ್ತಿದ್ದು, ಇದು ಇವರ 24ನ ಸಿನಿಮಾವಾಗಿದೆ. ಅದಕ್ಕೆ ಚಿತ್ರತಂಡ ರಿಲೀಸ್ ಮಾಡಿರುವ ಪೋಸ್ಟರ್‌ರಲ್ಲಿ 24 ಸಂಖ್ಯೆ ಬರೆದಿರುವುದನ್ನು ಕಾಣಬಹುದು.
ದಿನಕರ್ ಮತ್ತು ಅಪ್ಪು ಕಾಂಬಿನೇಷನ್‍ನಲ್ಲಿ ಸಿನಿಮಾ ನೋಡಬೇಕು ಎಂದು ಅಭಿಮಾನಿ ಬಳಗ ಕಾಯುತ್ತಿತ್ತು. ಆದರೆ ಅದು ಆಗಲೇ ಇಲ್ಲ. ದಿನಕರ್ ಅವರಿಗೂ ಅಪ್ಪುಗೆ ಆಕ್ಷನ್ ಕಟ್ ಹೇಳಬೇಕು ಎಂದು ತುಂಬಾ ಆಸೆಯಿತ್ತು. ಆದರೆ ಅದು ನೆರವೇರಲಿಲ್ಲ ಎಂಬುದು ಅವರಿಗೂ ಬೇಸರವಿದೆ. ಜಯಣ್ಣ-ಭೋಗೇಂದ್ರ ಕಂಬೈನ್ಸ್ 24ನೇ ಸಿನಿಮಾದ ನಿರ್ಮಾಣದಲ್ಲಿ ಅಪ್ಪು ಮಾಡಬೇಕಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಈ ಪರಿಣಾಮ ಅಪ್ಪು ಮಾಡಬೇಕಾದ ಸಿನಿಮಾ ವಿರಾಟ್ ಪಾಲಾಗಿದೆ.
ಈ ಸಿನಿಮಾವನ್ನು ದಿನಕರ್ ಅವರು ಅಪ್ಪುವಿಗಾಗಿ ಮಾಡಿದ್ದರು. ಆ ಸಿನಿಮಾದಲ್ಲಿ ವಿರಾಟ್ ನಟಿಸುತ್ತಿದ್ದಾರೆ ಎಂದು ಚಂದನವನದಲ್ಲಿ ಸುದ್ದಿ ಹರಿದಾಡುತ್ತಿದೆ. ಪ್ರಸ್ತುತ ಪೋಸ್ಟರ್ ಬಿಟ್ಟು ಚಿತ್ರತಂಡ ಯಾವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಹೊಸ ಚಿತ್ರದ ಅನೌನ್ಸಮೆಂಟ್ ಕೇಳಿ ವಿರಾಟ್ ಫುಲ್ ಖುಷ್ ಆಗಿದ್ದು, ಮಾಧ್ಯಮಗಳೊಂದಿಗೆ ಖುಷಿಯನ್ನು ಹಂಚಿಕೊಂಡಿದ್ದಾರೆ. ವಿರಾಟ್, ಜಯಣ್ಣ-ಭೋಗೇಂದ್ರ ಕಂಬೈನ್ಸ್ ನಲ್ಲಿ ಸಿನಿಮಾ ಮಾಡಬೇಕು ಎಂಬುದು ನನ್ನ ದೊಡ್ಡ ಕನಸು. ಈಗ ಅದು ನೆರವೇರುತ್ತಿದೆ. ದಿನಕರ್ ಅವರ ನಿರ್ದೇಶನದಲ್ಲಿ ನಟಿಸುವ ಅದೃಷ್ಟ ಸಿಕ್ಕಿದೆ. ಈ ಅವಕಾಶ ಕೊಟ್ಟಿದಕ್ಕೆ ನಾನು ಅವರಗೆ ಚಿರಋಣಿ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ವಿರಾಟ್ ‘ಕಿಸ್’ ಮೂವೀ ನಂತರ ‘ಅದ್ದೂರಿ ಲವ್ವರ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಬಿಡುಗಡೆಯ ಹಂತದಲ್ಲಿದೆ. ಈಗ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಸಿಕ್ಕಿದೆ. ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಇವರು ಚಂದನವನಕ್ಕೆ ಭರ್ಜರಿಯಾಗಿ ಪಾದರ್ಪಣೆ ಮಾಡಿದ್ದರು. ಮೊದಲ ಸಿನಿಮಾವೇ ಇವರಿಗೆ ದೊಡ್ಡಮಟ್ಟದ ಯಶಸ್ಸು ತಂದುಕೊಟ್ಟಿತ್ತು. ಇದನ್ನೂ ಓದಿ: ತೆಲುಗಿಗೆ ಎಂಟ್ರಿ ಕೊಟ್ಟ ಸಲಗನ ಸಂಗಾತಿ ಸಂಜನಾ
ಹಿಟ್ ನಿರ್ದೇಶಕರ ಸಾಲಿನಲ್ಲಿ ದಿನಕರ್ ಅವರು ಇದ್ದು, ಇವರ ನಿರ್ದೇಶನದ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಹಲವು ವರ್ಷಗಳ ನಂತರ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಬಗ್ಗೆ ಚಂದನವನದಲ್ಲಿ ಭಾರೀ ನಿರೀಕ್ಷೆ ಇದೆ.
ಬೆಂಗಳೂರು: ನನಗೂ ನಟ ದರ್ಶನ್ ತೂಗುದೀಪ ಅವರಿಗೂ ಕೆಲಸದ ವಿಷಯದಲ್ಲಿ ಮನಸ್ತಾಪವಿರುವುದು ನಿಜ, ಹೀಗಾಗಿ ಕೆಲಸ ಬಿಟ್ಟಿದ್ದೇನೆ ಎಂದು ನಟ ದರ್ಶನ್ ಮ್ಯಾನೇಜರ್ ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀನಿವಾಸ್, ದರ್ಶನ್ ತೂಗುದೀಪ ಅಭಿಮಾನಿಗಳು ಮತ್ತು ಮಾಧ್ಯಮಗಳಿಗೂ ನನ್ನ ನಮಸ್ಕಾರಗಳು. ನನಗೂ ಮತ್ತು ನಟ ದರ್ಶನ್ ತೂಗುದೀಪರವರಿಗೂ ಕೆಲಸದ ವಿಷಯವಾಗಿ ಮನಸ್ತಾಪ ಬಂದಿರುವುದು ನಿಜ. ಆದ ಕಾರಣ ನಾನು ಸೆಪ್ಟೆಂಬರ್ 18 ರಿಂದ ದರ್ಶನ್ ಬಳಿ ಕೆಲಸ ಬಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಕೆಲಸ ಬಿಟ್ಟಿದ್ದರಿಂದ ನನ್ನ ಮೇಲೆ ಯಾರೂ ಸಹ ಇಲ್ಲಸಲ್ಲದ ಆರೋಪ ಹೊರಿಸಬೇಡಿ. ನನಗೂ ಕುಟುಂಬ ಇದೆ, ನಾನು ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗಿಲ್ಲ. ಇಲ್ಲಿಯೇ ಕೆಲಸ ಮಾಡಿಕೊಂಡು ಇದ್ದೇನೆ. ಹೀಗಾಗಿ ಯಾರೂ ಈ ಕುರಿತು ಅಪಪ್ರಚಾರ ಮಾಡಬೇಡಿ ಎಂದು ಶ್ರೀನಿವಾಸ್ ಮನವಿ ಮಾಡಿದ್ದಾರೆ.
ಡಿ ಕಂಪನಿ ಹೇಳಿದ್ದೇನು?
ನಟ ದರ್ಶನ್ ತೂಗುದೀಪ್ ಬಳಗದಿಂದ ಮತ್ತೊಬ್ಬ ವ್ಯಕ್ತಿ ಹೊರ ಬಿದ್ದಿರುವ ಕುರಿತು ಡಿ ಕಂಪನಿ ಫೇಸ್‍ಬುಕ್ ಮತ್ತು ಟ್ವಿಟ್ಟರ್‍ನಲ್ಲಿ ತಿಳಿಸಿದೆ. ನಮ್ಮ ಡಿ ಬಾಸ್ ಬಳಿ ಕೆಲಸ ನಿರ್ವಹಿಸುತ್ತಿದ್ದ ಶ್ರೀನಿವಾಸ್ (ಸೀನ) ರವರನ್ನು ತೂಗುದೀಪ ಪರಿವಾರ ಹಾಗೂ ಅಭಿಮಾನಿ ಸಂಘದ ವ್ಯಾವಹಾರಿಕ ಚಟುವಟಿಕೆಗಳಿಂದ ದೂರ ಸರಿಸಲಾಗಿದೆ. ಅವರ ಜೊತೆ ಡಿಬಾಸ್ ರವರ ಹೆಸರಲ್ಲಿ ಯಾವುದೇ ವ್ಯವಹಾರ ಮಾಡದಿರಿ ಎಂದು ಡಿ ಕಂಪನಿ ಹೇಳಿದೆ.
ಇನ್ನು ಮುಂದೆ ದರ್ಶನ್ ಮತ್ತು ತೂಗುದೀಪ ಕಂಪನಿ ವ್ಯವಹಾರಗಳಿಗೂ ಶ್ರೀನಿವಾಸ್‍ಗೂ ಯಾವುದೇ ಸಂಬಂಧ ಇಲ್ಲ. ಯಾವುದೇ ಕಾರಣಕ್ಕೂ ದರ್ಶನ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಶ್ರೀನಿವಾಸ್ ಅವರನ್ನು ಸಂಪರ್ಕಿಸಬಾರದು ಎಂದು ಪೇಜ್‍ನಲ್ಲಿ ತಿಳಿಸಲಾಗಿದೆ.
ಇದಕ್ಕೆ ಅಭಿಮಾನಿಗಳು ಯಾವ ಕಾರಣಕ್ಕೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದ ಕಮೆಂಟ್ ಮಾಡಿ ಪ್ರಶ್ನಿಸುತ್ತಿದ್ದಾರೆ. ಇತ್ತೀಚೆಗೆ ಶ್ರೀನಿವಾಸ್ ಒಂದು ಹೋಟೆಲ್ ಆರಂಭಿಸಿದ್ದರು. ಅಷ್ಟು ಬಿಟ್ಟರೆ ಯಾವ ಕಾರಣಕ್ಕೆ ಶ್ರೀನಿವಾಸ್ ವಿರುದ್ಧ ಈ ನಿರ್ಧಾರ ಕೈಗೊಳ್ಳಲಾಗಿದೆ ತಿಳಿದು ಬಂದಿಲ್ಲ. ಕಳೆದ ವರ್ಷ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ ಕೂಡ ಹಣಕಾಸು ವ್ಯವಹಾರದ ವಿಚಾರವಾಗಿ ದಚ್ಚು ಕ್ಯಾಂಪ್‍ನಿಂದ ಹೊರ ಬಿದ್ದಿದ್ದರು.
ಈ ಕುರಿತು ಕೇವಲ ಡಿ ಕಂಪನಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ತಿಳಿಸಿದೆ. ನಟ ದರ್ಶನ್ ತೂಗುದೀಪ್ ಆಗಲಿ ಅಥವಾ ಅವರ ಸಹೋದರ ದಿನಕರ್ ತೂಗುದೀಪ್ ಆಗಲಿ ಈ ಕುರಿತು ಅಧಿಕೃತವಾಗಿ ಸ್ಪಷ್ಟಪಡಿಸಿಲ್ಲ.
ಬೆಂಗಳೂರು: ದರ್ಶನ್ ಮತ್ತು ದಿನಕರ್ ಅವರ ಅಭಿಮಾನಿಗಳೆಲ್ಲಾ ಸೇರಿ ನಡೆಸುತ್ತಿರುವ ನೋಂದಾಯಿತ ಸಂಘ ‘ಡಿ ಕಂಪನಿ’. ಕರ್ನಾಟಕದ ಇಪ್ಪತ್ತು ಜಿಲ್ಲೆಗಳಲ್ಲಿ ಸದ್ಯ ‘ಡಿ ಕಂಪನಿ’ ಕಾರ್ಯ ನಿರ್ವಹಿಸುತ್ತಿದೆ. ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಾ, ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ‘ಡಿ ಕಂಪನಿ’ ಹಲವಾರು ಸಾಮಾಜಿಕ ಜವಾಬ್ದಾರಿಯ ಕೆಲಸಗಳನ್ನು ನಡೆಸುತ್ತಲೇ ಬಂದಿದೆ.
ದಿನಕರ್ ತೂಗುದೀಪ ಅವರು ತಮ್ಮ ಹುಟ್ಟುಹಬ್ಬವನ್ನು ಆಡಂಬರದಿಂದ ಆಚರಿಸಿಕೊಳ್ಳುವುದಿಲ್ಲ. ‘ಕೇಕು ಕತ್ತರಿಸಿ, ಹೂವು, ಹಾರಗಳಿಗೆ ಖರ್ಚು ಮಾಡುವ ಹಣವನ್ನು ಸಮಾಜದ ಒಳಿತಿಗೆ ವ್ಯಯ ಮಾಡಬೇಕು’ ಎನ್ನುವ ದಿನಕರ್ ಅವರ ಮಾತನ್ನು ಶಿರಸಾವಹಿಸಿ ಪಾಲಿಸುತ್ತಿರುವ ‘ಡಿ ಕಂಪನಿ’ ಕಳೆದ ಮೂರು ವರ್ಷಗಳಿಂದ ಶಾಲಾ ಮಕ್ಕಳಿಗೆ ಉಪಯುಕ್ತ ವಸ್ತುಗಳನ್ನು ನೀಡುವುದು, ಅನಾಥಾಶ್ರಮಕ್ಕೆ ಮೂರ್ನಾಲ್ಕು ತಿಂಗಳಿಗಾಗುವಷ್ಟು ದಿನಸಿ ವಿತರಿಸುವ ಕಾರ್ಯ ಮಾಡಿತ್ತು. ಈ ವರ್ಷ ಹಾಸನ ಜಿಲ್ಲೆಯ ಮಳಲಿ ಬಳಿಯ ರಾಮೇನಹಳ್ಳಿ ಎಂಬ ಕುಗ್ರಾಮದಲ್ಲಿರುವ ಸರ್ಕಾರಿ ಶಾಲೆಯನ್ನು 2 ವರ್ಷಗಳ ಕಾಲಕ್ಕೆ ದತ್ತು ಪಡೆದುಕೊಂಡಿದೆ. ಈ ಮೂಲಕ ಮಕ್ಕಳಿಗೆ ಬಟ್ಟೆ, ಪುಸ್ತಕ, ಶಾಲೆಗೆ ಬಣ್ಣ, ಪೀಠೋಪಕರಣಗಳು ಸೇರಿದಂತೆ ಶಾಲೆಗೆ ಬೇಕಿರುವ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಿದೆ. ಇದರ ಜೊತೆಗೆ ಯಾವುದೇ ಕಾರ್ಯಕ್ರಮಗಳನ್ನು ನಡೆಸಿದರೂ ಕನಿಷ್ಠ ಹತ್ತು ಗಿಡಗಳನ್ನು ನೆಡುವುದು ‘ಡಿ ಕಂಪನಿ’ ವಾಡಿಕೆ. ರಾಮೇನಹಳ್ಳಿ ಶಾಲಾ ಆವರಣದಲ್ಲೂ ಗಿಡಗಳನ್ನು ನೆಡಲಾಯಿತು.
ವಿಶೇಷವೆಂದರೆ ಈ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಮೂಲಕ ‘ದಿನಕರೋತ್ಸವ’ವನ್ನು ಆಚರಿಸಿದ ಸಂದರ್ಭದಲ್ಲಿ ‘ಟಕ್ಕರ್’ ಚಿತ್ರತಂಡದ ನಾಯಕ ನಟ ಮನೋಜ್ ಕುಮಾರ್, ನಾಯಕಿ ರಂಜನಿ ರಾಘವನ್, ನಿರ್ಮಾಪಕ ನಾಗೇಶ್ ಕೋಗಿಲು ಉಪಸ್ಥಿತರಿದ್ದರು.
ನಟ ಮನೋಜ್ ಮಾತನಾಡಿ ‘ನನ್ನ ಮಾವಂದಿರಾದ ದರ್ಶನ್ ಮತ್ತು ದಿನಕರ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ಕಂಪನಿ, ಈ ರೀತಿ ಜನಸ್ನೇಹಿ ಕಾರ್ಯಗಳನ್ನು ಮಾಡುತ್ತಾ ಬಂದಿರುವುದು ಎಲ್ಲರಿಗೂ ಆದರ್ಶವಾಗಿದೆ. ಇವತ್ತು ಕನ್ನಡವೇ ನಮ್ಮ ಅನ್ನ, ಕನ್ನಡ ನಮ್ಮ ಉಸಿರಾಗಿದೆ. ಕನ್ನಡಿಗರು ನಮ್ಮ ದರ್ಶನ್ ಮತ್ತು ದಿನಕರ್ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ಹೀಗಿರುವಾಗ ಕನ್ನಡ ಶಾಲೆಯನ್ನು ದತ್ತು ಸ್ವೀಕರಿಸಿರುವ ‘ಡಿ’ ಕಂಪನಿಯ ಕನ್ನಡ ಪ್ರೇಮವನ್ನು ಮೆಚ್ಚಬೇಕು ಎಂದರು.
‘ನನ್ನ ತಾಯಿ ಕೂಡಾ ಹಾಸನದಲ್ಲಿ ಜನಿಸಿದವರು. ಇದೇ ನೆಲದಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಪಾಲ್ಗೊಂಡಿರುವುದು ನನಗೆ ಹೆಮ್ಮೆ ತಂದಿದೆ’ ಎಂದರು ರಂಜನಿ ರಾಘವನ್. ನಿರ್ಮಾಪಕ ನಾಗೇಶ್ ಕೋಗಿಲು ಮಾತನಾಡುತ್ತಾ, ನಾನು ಕನ್ನಡ ಶಾಲೆಯಲ್ಲಿ ಓದಿದವನು. ಇವತ್ತು ಖಾಸಗಿ ಶಾಲೆಗಳ ಹಾವಳಿಯಿಂದ ಕನ್ನಡ ಶಾಲೆಗಳಿಗೆ ಸಂಚಕಾರ ಬಂದಿದೆ. ಇದರ ಮಧ್ಯೆಯೂ ಕನ್ನಡ ಶಾಲೆಯನ್ನು ಉಳಿಸಿಕೊಳ್ಳುವ ಅನಿವಾರ್ಯವಿದೆ. ಈ ಶಾಲೆಯನ್ನು ದತ್ತು ಸ್ವೀಕರಿಸಿರುವ ದರ್ಶನ್ ಮತ್ತು ದಿನಕರ್ ಅವರ ಅಭಿಮಾನಿಗಳ ಕಾರ್ಯ ಶ್ಲಾಘನೀಯ ಎಂದು ನುಡಿದರು.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ದೇಶಕ ದಿನಕರ್ ತೂಗುದೀಪ, ನನ್ನ ನಲವತ್ತೆರಡನೇ ಹುಟ್ಟುಹಬ್ಬ ಇಷ್ಟೊಂದು ಅರ್ಥಪೂರ್ಣವಾಗಿ ನೆರವೇರಿದೆ. ಇದಕ್ಕಿಂತಾ ಖುಷಿ ಬೇರೇನಿದೆ. ನಮ್ಮ ಅಭಿಮಾನಿ ಸಂಘ ಮುಂದೆಯೂ ಹೀಗೇ ಉತ್ತಮ ಕೆಲಸಗಳನ್ನು ಮಾಡಿ ಮಾದರಿಯಾಗಲಿ. ಟಕ್ಕರ್ ಚಿತ್ರತಂಡಕ್ಕೂ ಒಳಿತಾಗಲಿ ಎಂದಿದ್ದಾರೆ.