ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನದ ಅಂಗವಾಗಿ ‘ಎಡಗೈ ಅಪಘಾತಕ್ಕೆ ಕಾರಣ’ (Edgaiye Apghatakke Karana) ಸಿನಿಮಾ ತಂಡದಿಂದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಎಡಗೈ ಬಳಸುವವರನ್ನೇ ಗಮನದಲ್ಲಿಟ್ಟುಕೊಂಡು, ಅವರ ಜೀವನ ಶೈಲಿ ಕುರಿತು ಈ ಚಿತ್ರ ಕಟ್ಟಿಕೊಡಲಾಗಿದೆ. ಅದರಂತೆಯೇ ಪೋಸ್ಟರ್ ಕೂಡ ಆಕರ್ಷಕವಾಗಿದೆ. ಸೆಟ್ಟೇರಿದ ದಿನದಂದಲೂ ಚಿತ್ರತಂಡ ವಿಭಿನ್ನ ಪೋಸ್ಟರ್ ಅನಾವರಣ ಮಾಡುವ ಮೂಲಕ ಪ್ರೇಕ್ಷಕರ ಕುತೂಹಲವನ್ನು ಹೆಚ್ಚು ಮಾಡಿದೆ. ಇದನ್ನೂ ಓದಿ:ಪತ್ರಕರ್ತ ಹರೀಶ್ ನಟನೆಯ ‘ಕ್ರೆಡಿಟ್ ಕುಮಾರ’ ಚಿತ್ರಕ್ಕೆ ಸರ್ಜಾ ಚಾಲನೆ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾಗೆ ಸಮರ್ಥ್ ಬಿ ಕಡಕೊಳ್ ಆ್ಯಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾ ಹಂದರ ಈ ಸಿನಿಮಾದಲ್ಲಿದೆ. ದೂದ್ ಪೇಡ ದಿಗಂತ್ (Diganth) ನಾಯಕನಾಗಿ ನಟಿಸಿದ್ದು, ಅವರಿಗೆ ಜೋಡಿಯಾಗಿ ಹೊಸ ನಟಿ ಧನು ಹರ್ಷ ನಟಿಸಿದ್ದಾರೆ. ನಿಧಿ ಸುಬ್ಬಯ್ಯ(Nidhi Subbaiah), ರಾಧಿಕಾ ನಾರಾಯಣ್, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಕೂಡಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾವನ್ನು ಹೈಫನ್ ಪಿಕ್ಚರ್ಸ್ ಹಾಗೂ ಗುರುದತ್ ಗಾಣಿಗ ಫಿಲ್ಮಂಸ್ ಬ್ಯಾನರ್ ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಇದೆ.
ಇತ್ತೀಚೆಗೆ ಕೇರಳದ ದೇವಸ್ಥಾನವೊಂದಕ್ಕೆ ಕನ್ನಡತಿ ಪ್ರಿಯಾಮಣಿ ಎಲೆಕ್ಟ್ರಿಕಲ್ ಆನೆಯೊಂದನ್ನು (Electrical Elephant) ದೇಣಿಗೆ ನೀಡಿದ್ದರು. ಇದೀಗ ಸುತ್ತೂರು ಮಠಕ್ಕೆ ಎಲೆಕ್ಟ್ರಿಕಲ್ ಆನೆಯನ್ನು ಉಡುಗೊರೆಯಾಗಿ ಸ್ಯಾಂಡಲ್‌ವುಡ್ ನಟ ದಿಗಂತ್ (Diganth) ಮತ್ತು ಐಂದ್ರಿತಾ ರೇ (Aindrita Ray) ದಂಪತಿ ನೀಡಿದ್ದಾರೆ. ಇದನ್ನೂ ಓದಿ:ಅನಂತ್ ಅಂಬಾನಿ ಹುಟ್ಟುಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಸಲ್ಮಾನ್
ಸುತ್ತೂರು ಮಠಕ್ಕೆ ಭೇಟಿ ನೀಡಿ ಎಲೆಕ್ಟ್ರಿಕಲ್ ಆನೆಯನ್ನು ದೇಣಿಗೆ ನೀಡಿದ್ದು, ದಿಗಂತ್ ದಂಪತಿಯ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ದಿಗಂತ್ ದಂಪತಿಯ ಕಾರ್ಯಕ್ಕೆ ಬಿಗ್ ಬಾಸ್ ಬೆಡಗಿ ಸಂಗೀತಾ ಶೃಂಗೇರಿ (Sangeetha Sringeri) ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನಟ ದಿಗಂತ್ ಕನ್ನಡದ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಐಂದ್ರಿತಾ ರೇ ಕನ್ನಡದ ಜೊತೆ ಪರಭಾಷೆಯ ಸಿನಿಮಾಗಳಲ್ಲೂ ಆ್ಯಕ್ಟೀವ್ ಆಗಿದ್ದಾರೆ.
ಎಡಗೈ ಬಳಸುವವರ ಕಥೆಯಾಧಾರಿತ ಸಿನಿಮಾವೊಂದು ಕನ್ನಡದಲ್ಲಿ ತಯಾರಾಗಿರುವುದು ಗೊತ್ತಿರುವ ವಿಚಾರ. ಯುವ ನಿರ್ದೇಶಕ ಸಮರ್ಥ್ ಕಡಕೋಳ್ ಸಾರಥ್ಯದಲ್ಲಿ ಮೂಡಿಬಂದಿರುವ ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರದ ಹೊಸ ಪೋಸ್ಟರ್ ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ:Bigg Boss: ಡ್ರೋನ್‌ಗೆ ಸಿಕ್ತು ಈ ವಾರದ ಕಿಚ್ಚನ ಚಪ್ಪಾಳೆ
ದಿಗಂತ್ ಮಂಚಾಲೆ (Diganth Manchale) ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ (Edagaiye Apaghatakke Karana) ಚಿತ್ರದ ಪೋಸ್ಟರ್‌ನಲ್ಲಿ ಟೇಬಲ್ ಹಿಂಬದಿಯಲ್ಲಿ ಬಚ್ಚಿಟ್ಟುಕೊಂಡು ಕುಳಿತಿರುವ ನಾಯಕ ಹಾಗೂ ನಾಯಕಿ ಅವರ ಬೆನ್ನಿಂದೆ ವ್ಯಕ್ತಿಯೋರ್ವ ನಿಂತಿದ್ದಾರೆ. ಅವರು ಯಾರು ಅನ್ನೋದನ್ನು ರಿವೀಲ್ ಮಾಡದೇ ಚಿತ್ರತಂಡ ಕುತೂಹಲ ಕಾಯ್ದುಕೊಂಡಿದೆ.
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾಗೆ ಸಮರ್ಥ್ ಬಿ ಕಡಕೊಳ್ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾ ಹಂದರ ಈ ಸಿನಿಮಾದಲ್ಲಿದೆ. ಹೆಸರೇ ಹೇಳುವಂತೆ ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರವಿದು. ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ಹೊಸ ನಟಿ ಧನು ಹರ್ಷ ನಟಿಸುತ್ತಿದ್ದು ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಕೂಡಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾವನ್ನು ಹೈಫನ್ ಪಿಕ್ಚರ್ಸ್ ಮತ್ತು ಗುರುದತ್ ಗಾಣಿಗ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಇದೆ. ಒಂದಷ್ಟು ಪೋಸ್ಟರ್, ಝಲಕ್ ಮೂಲಕ ಗಮನಸೆಳೆದಿರುವ ಸಿನಿಮಾ ಶೀಘ್ರದಲ್ಲೇ ಥಿಯೇಟರ್ ಗೆ ಎಂಟ್ರಿ ಕೊಡಲಿದೆ.
ದೂದ್ ಪೇಡ ದಿಗಂತ್ ಇದೀಗ ಹೊಸ ಸಿನಿಮಾಗಾಗಿ ‘ಗುಳ್ಟು'(Gultoo) ನಿರ್ದೇಶಕನ ಜೊತೆ ಕೈಜೋಡಿಸಿದ್ದಾರೆ. ಅಣ್ಣಾವ್ರ ಮೊಮ್ಮಗಳು ಧನ್ಯಾ ಮತ್ತು ‘ಗಾಳಿಪಟ 2’ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಜೊತೆ ಡ್ಯುಯೇಟ್ ಹಾಡಲು ದಿಗಂತ್ ಮಂಚಾಲೆ (Diganth Manchale) ರೆಡಿಯಾಗಿದ್ದಾರೆ.
ಈಗಾಗಲೇ ’ದಿ ಜಡ್ಜ್‌ಮೆಂಟ್’ ಸಿನಿಮಾದಲ್ಲಿ ದಿಗಂತ್- ಧನ್ಯಾ ಒಟ್ಟಿಗೆ ನಟಿಸಿದ್ದಾರೆ. ಮತ್ತೆ ಈ ಹೊಸ ಚಿತ್ರದ ಮೂಲಕ ದಿಗಂತ್‌ಗೆ ನಟಿ ಧನ್ಯಾ ರಾಮ್‌ಕುಮಾರ್ ಜೊತೆಯಾಗಿದ್ದಾರೆ. ಮತ್ತೊಂದು ವಿಶೇಷ ಅಂದರೆ, 13 ವರ್ಷಗಳ ನಂತರ ಶರ್ಮಿಳಾ ಮಾಂಡ್ರೆ- ದಿಗಂತ್ ಈ ಚಿತ್ರದ ಮೂಲಕ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ.
2010ರಲ್ಲಿ ‘ಸ್ವಯಂವರ’ ಸಿನಿಮಾದಲ್ಲಿ ದಿಗಂತ್-ಶರ್ಮಿಳಾ ಜೋಡಿಯಾಗಿ ನಟಿಸಿದ್ದರು. ಗುಳ್ಟು ನಿರ್ದೇಶಕನ ಹೆಸರಿಡದ ಹೊಸ ಸಿನಿಮಾದ ಮೂಲಕ ಧನ್ಯಾ(Dhanya Ramkumar), ಶರ್ಮಿಳಾ, ದಿಗಂತ್ ಜೊತೆಯಾಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಟ್ರೈಯಾಂಗಲ್ ಲವ್ ಸ್ಟೋರಿ ಬೆಳ್ಳಿಪರದೆಯಲ್ಲಿ ಹೇಗೆ ಮೂಡಿ ಬರಲಿದೆ ಎಂದು ಕಾದುನೋಡಬೇಕಿದೆ.
ಇಂದು ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನ. ಈ ದಿನದ ಅಂಗವಾಗಿ ವೇಗಾ ಹೆಲ್ಮೆಟ್ ಕಂಪನಿ ವಿಶೇಷವಾದ ಹೆಲ್ಮೆಟ್ ವಿನ್ಯಾಸಗೊಳಿಸಿ ಬಿಡುಗಡೆ ಮಾಡಿದೆ. ವೇಗಾ ಕಂಪನಿಗೆ ಇಂತಹದೊಂದು ಐಡಿಯಾ ಬರಲು ಕಾರಣ ಎಡಗೈ ಬಳಸುವವರನ್ನೇ ಕಥಾಹಂದರವಾಗಿ ಹೊಂದಿರುವ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ. ಈ ಚಿತ್ರದ ಪ್ರೇರಣೆಯಿಂದ ವೇಗಾ 1308 ಸೌತ್ ಪಾವ್ ಎಂಬ ವಿಶೇಷ ಹೆಲ್ಮೆಟ್ ಲಾಂಚ್ ಮಾಡಿದೆ. ಇದು ಎಗಡೈ ಬಳಕೆದಾರರಿಗೆ ಬಹಳಷ್ಟು ಸುಲಭವಾಗಿದೆ. ಈ ಹೆಲ್ಮೆಟ್ ISI ಮತ್ತು ಸರ್ಟಿಫೈಡ್ ಹೊಂದಿದೆ. ಖಾಸಗಿ ಹೋಟೆಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರತಂಡ ಭಾಗಿಯಾಗಿ ಸಿನಿಮಾ ಬಗ್ಗೆ ಹಾಗೂ ವೇಗಾ ಹೆಲ್ಮೆಟ್ ತಮ್ಮ ಚಿತ್ರಕ್ಕೆ ಬೆಂಬಲವಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ವೇಗಾ ಹೆಲ್ಮೆಟ್ ಕಂಪನಿ ಮನ್ಮತ್ ಶೆಟ್ಟಿ, ಒಂದು ದಿನಕ್ಕೆ 20 ಸಾವಿರ ಹೆಲ್ಮೆಟ್ ಕಂಪನಿ ಮಾರಾಟ ಮಾಡುತ್ತೇವೆ. ಎಡಗೈ ಬಳಸುವವರಿಗೆ ಸುಲಭವಾಗುವ ರೀತಿ ಹೊಸ ಹೆಲ್ಮೆಟ್ ತಯಾರಿಸಲಾಗಿದೆ. ನಾವು ದಿನನಿತ್ಯ ಹೊಸತನವನ್ನು ಕಲಿಯುತ್ತಿದ್ದೇನೆ. ಅದರಂತೆ ಇಂದು ವಿಶೇಷ ಹೆಲ್ಮೆಟ್ ಲಾಂಚ್ ಮಾಡಲಾಗಿದೆ. ಎಡಗೈ ಬಳಸುವ ಶೇಖಡ ಹತ್ತರಷ್ಟು ಮಂದಿಗೆ ಈ ಹೆಲ್ಮೆಟ್ ಉಪಯೋಗವಾಗಲಿದೆ ಎಂದರು.
ನಿರ್ಮಾಪಕ ಗುರುದತ್ ಗಣಿಗ ಮಾತನಾಡಿ, ಐಡಿಯಾ ಎಲ್ಲಾ ಶುರುವಾಗಿದ್ದು, ಸಮರ್ಥ್ ಅವರಿಂದ. ಇದೊಂದು ವಿಭಿನ್ನ ಕಥೆ. ಈ ರೀತಿ ಸಿನಿಮಾ ಬೇರೆ ಇಂಡಸ್ಟ್ರಿಯಲ್ಲಿ ಬಂದಾಗ ವಾವ್ ಎನ್ನುತ್ತಾರೆ. ಇಂತಹ ಕಥೆಗೆ ನಿರ್ಮಾಪಕರು ಸಿಗಲ್ಲ. ಸ್ನೇಹಿತರು , ಇಡೀ ತಂಡದ ಬೆಂಬಲದಿಂದ ಇಲ್ಲಿವರೆಗೂ ಬಂದಿದ್ದೇವೆ. ನಿರ್ದೇಶಕರು ತುಂಬಾ ಚೆನ್ನಾಗಿ ಕಥೆ ಮಾಡಿದ್ದಾರೆ ಎಂದರು. ನಿರ್ದೇಶಕ ಸಮರ್ಥ್ ಬಿ ಕಡಕೋಳ್, ಲಾಕ್ ಡೌನ್ ಟೈಮ್ ನಲ್ಲಿ ಬರೆದ ಕಥೆ ಇದು. ಈ ಕಥೆ ಇಟ್ಕೊಂಡು ಸುಮಾರು ನಿರ್ಮಾಪಕರ ಬಳಿ ಹೋದೆ. ಕೊನೆಗೆ ಗುರು ಭೇಟಿಯಾದೆ. ನನ್ನ ಸ್ನೇಹಿತರು, ಮಂಜು ಸರ್ ಬೆಂಬಲದಿಂದ ಸಿನಿಮಾ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ:ಸಮುದಾಯವೊಂದನ್ನು ನಿಂದಿಸಿದ್ದಕ್ಕೆ ಉಪೇಂದ್ರ ಮೇಲೆ ಎಫ್‌ಐಆರ್ ದಾಖಲು
ನಟ ದಿಗಂತ್ (Diganth) ಮಾತನಾಡಿ, ನಮ್ಮ ಸಿನಿಮಾಗೆ ಸಾಥ್ ಕೊಟ್ಟ ವೇಗಾದವರಿಗೆ ದೊಡ್ಡ ಧನ್ಯವಾದ. ದಿನಕ್ಕೆ 20 ಸಾವಿರ ಹೆಲ್ಮೆಟ್ ಮಾರಾಟವಾಗುತ್ತದೆ. ಅವರು ಹೆಲ್ಮೆಟ್ ಜೊತೆ ನಮ್ಮ ಸಿನಿಮಾ ಕಾರ್ಡ್ ಹಾಕಿ ಎಲ್ಲರಿಗೂ ಪ್ರಮೋಷನ್ ಮಾಡುತ್ತಿದ್ದಾರೆ. ಎಡಗೈ ಬಳಸುವವರಿಗೆ ವೇಗಾ ವಿಶೇಷ ಹೆಲ್ಮೆಟ್ ಲಾಂಚ್ ಮಾಡಿದೆ. ಎಡಗೈ ಅಪಘಾತಕ್ಕೆ ಕಾರಣ ಸಿನಿಮಾದ ಕಥೆ ಅದ್ಭುತವಾಗಿದೆ. ಒಂದೊಳ್ಳೆ ತಂಡದ ಜೊತೆ ಒಳ್ಳೆ ಪ್ರಯತ್ನ ಮಾಡಿದ್ದೇವೆ ಎಂಬ ಹಾರೈಕೆ ಇರಲಿ ಎಂದರು.
ದೂದ್ ಪೇಡಾ ದಿಗಂತ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಕಾನ್ಸೆಪ್ಟ್ ‘ವೇಗ’ (Vega) ಹೆಲ್ಮೆಟ್ ಕಂಪನಿಯವರಿಗೆ ಇಷ್ಟವಾಗಿದ್ದು, ಅವರು ಈ ವಿಶೇಷ ಹೆಲ್ಮೆಟ್ ಮೂಲಕ ಚಿತ್ರತಂಡದ ಜತೆ ಕೈಜೋಡಿಸಿದ್ದಾರೆ. ಅಂದಹಾಗೆ ಇಂಥದ್ದೊಂದು ಹೆಲ್ಮೆಟ್ ರೂಪಿಸಿ ಮಾರುಕಟ್ಟೆಗೆ ಬಿಡುಗಡೆ ಆಗುತ್ತಿರುವುದು ಇದೇ ಮೊದಲು. ಇದನ್ನೂ ಓದಿ:ಚಿತ್ರೀಕರಣಕ್ಕೆ ಬ್ರೇಕ್ – ಅಮೆರಿಕದಲ್ಲಿ ಪ್ರಭಾಸ್‌ಗೆ ಶಸ್ತ್ರಚಿಕಿತ್ಸೆ
ನಿರ್ದೇಶಕ ಸಮರ್ಥ್ ಬಿ ಕಡಕೋಳ್ ‘ಎಡಗೈಯೇ ಅಪಘಾತಕ್ಕೆ ಕಾರಣ’ (Edagaiye Apagathakke Karana Film) ಸಿನಿಮಾಗೆ ನಿರ್ದೇಶನ ಮಾಡಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾಹಂದರ ಈ ಚಿತ್ರದಲ್ಲಿದೆ. ಹೆಸರೇ ಹೇಳುವಂತೆ ಇದು ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರ. ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ನವನಟಿ ಧನು ಹರ್ಷ ನಟಿಸುತ್ತಿದ್ದು, ರಾಧಿಕಾ ನಾರಾಯಣ್ (Radhika Narayan), ನಿಧಿ ಸುಬ್ಬಯ್ಯ (Nidhi Subbaih) ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಹೈಫನ್ ಪಿಕ್ಚರ್ಸ್ ಬ್ಯಾನರ್ನಡಿ ಗುರುದತ್ ಗಾಣಿಗ- ನಿರ್ದೇಶಕ ಸಮರ್ಥ್ ಬಿ ಕಡಕೋಳ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಈ ಸಿನಿಮಾಗಿದೆ.
ಸ್ಯಾಂಡಲ್ವುಡ್ ದೂದ್ ಪೇಡಾ ನಟ ದಿಗಂತ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 36ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ದಿಗಂತ್‍ಗೆ ಚಿತ್ರರಂಗದ ಸ್ನೇಹಿತರು ಅಭಿಮಾನಿಗಳು ಶುಭ ಕೋರಿದ್ದಾರೆ. ದಿಗ್ಗಿ ಹುಟ್ಟು ಹಬ್ಬಕ್ಕೆ ‘ಮಾರಿಗೋಲ್ಡ್’ ಚಿತ್ರತಂಡ ಫಸ್ಟ್ ಲುಕ್ ಗಿಫ್ಟ್ ನೀಡುವ ಮೂಲಕ ಹುಟ್ಟು ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.
‘ಮಾರಿಗೋಲ್ಡ್’ ದಿಗಂತ್ ಅಭಿನಯದ ಬಹು ನಿರೀಕ್ಷಿತ ಸಿನಿಮಾವಾಗಿದ್ದು, ಹುಟ್ಟು ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ಫಸ್ಟ್ ಲುಕ್ ಸಖತ್ ಇಂಟರೆಸ್ಟಿಂಗ್ ಆಗಿದ್ದು, ದಿಗಂತ್ ಲುಕ್ ಗಮನ ಸೆಳೆಯುತ್ತಿದೆ. ‘ಮಾರಿಗೋಲ್ಡ್’ ಚಿತ್ರಕ್ಕೆ ರಾಘವೇಂದ್ರ ಎಂ.ನಾಯಕ್ ಆಕ್ಷನ್ ಕಟ್ ಹೇಳಿದ್ದು, ಕಥೆ, ಚಿತ್ರಕಥೆ ಕೂಡ ಇವರದ್ದೆ. ಇದೊಂದು ಕಾಮಿಡಿ, ಕ್ರೈಂ, ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರವಾಗಿದ್ದು, ಸಡನ್ನಾಗಿ ಗೋಲ್ಡ್ ಬಿಸ್ಕಟ್ ಸಿಕ್ಕಿದ್ರೆ ಏನಾಗುತ್ತೆ ಎಂಬ ಎಳೆಯ ಸುತ್ತಾ ಸಿನಿಮಾ ಹೆಣೆಯಲಾಗಿದೆ.
ದೂದ್ ಪೇಡಾಗೆ ಇಲ್ಲಿ ಜೋಡಿಯಾಗಿ ಸಂಗೀತ ಶೃಂಗೇರಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಆರ್.ವಿ.ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ‘ಮಾರಿಗೋಲ್ಡ್’ ಚಿತ್ರ ನಿರ್ಮಾಣವಾಗಿದ್ದು, ರಘುವರ್ಧನ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದೆ. ಚಿತ್ರಕ್ಕೆ ಕೆ.ಎಸ್ ಚಂದ್ರಶೇಖರ್ ಕ್ಯಾಮೆರಾ ನಿರ್ದೇಶನ, ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ. ಸಂಪತ್ ಕುಮಾರ್, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ ಸೇರಿದಂತೆ ಹಲವು ಕಲಾವಿದರು ಮಾರಿಗೋಲ್ಡ್ ತಾರಾಬಳಗದಲ್ಲಿದ್ದಾರೆ.
ಬೆಂಗಳೂರು: ಮೂರು ಗಂಟೆಯ ಸಿಸಿಬಿ ವಿಚಾರಣೆ ಎದುರಿಸಿದ ಬಳಿಕ ನಟ ದಿಗಂತ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿ ದಿಗಂತ್ ಸಿಸಿಬಿ ಪೊಲೀಸರ ಮುಂದೆ ಹಾಜರಾಗಿದ್ದರು.
ಸಿಸಿಬಿ ಕಚೇರಿಯಿಂದ ಹೊರ ಬಂದ ದಿಗಂತ್, ಪ್ರಕರಣ ತನಿಖಾ ಹಂತದಲ್ಲಿದೆ. ಇಂದು ಕರೆದಿದ್ದಕ್ಕೆ ಬಂದಿದ್ದೇನೆ. ಮತ್ತೆ ಕರೆದ್ರೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದರು. ಇಂದು ಮಾರಿಗೋಲ್ಡ್ ಸಿನಿಮಾ ಚಿತ್ರೀಕರಣದಿಂದ ದಿಗಂತ್ ನೇರವಾಗಿ ಸಿಸಿಬಿ ಕಚೇರಿಗೆ ಆಗಮಿಸಿದ್ದರು. ಇಂದು ಬೆಳಗ್ಗೆ ದಿಗಂತ್ ಅವರಿಗೆ ಸಿಸಿಬಿ ನೋಟಿಸ್ ನೀಡಿತ್ತು.
ಬೆಂಗಳೂರಿನ ಹೆಚ್‍ಎಂಟಿ ಬಳಿ ಮಾರಿಗೋಲ್ಡ್ ಸಿನಿಮಾದ ಚಿತ್ರೀಕರಣದಲ್ಲಿ ದಿಗಂತ್ ಭಾಗಿಯಾಗಿದ್ದರು. ನೋಟಿಸ್ ಹಿನ್ನೆಲೆ ದಿಗಂತ್ ಚಿತ್ರತಂಡಕ್ಕೆ ಮಾಹಿತಿ ನೀಡಿ ವಿಚಾರಣೆಗೆ ಹಾಜರಾಗಿದ್ದರು. ಮಂಗಳವಾರ ಸಾಹಸ ದೃಶ್ಯ ಚಿತ್ರೀಕರಣ ಮಾಡಲಾಗಿತ್ತು. ಇಂದು ಬೆಳಗ್ಗೆ ಎಮೋಷನಲ್ ದೃಶ್ಯಗಳನ್ನ ಶೂಟ್ ಮಾಡಲಾಗಿತ್ತು ಎಂದು ಚಿತ್ರತಂಡ ಹೇಳಿದೆ.
ಈ ಹಿಂದೆ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಇಬ್ಬರನ್ನೂ ಸಿಸಿಬಿ ವಿಚಾರಣೆ ನಡೆಸಿ ಕಳುಹಿಸಿತ್ತು. ಇಬ್ಬರ ಮೊಬೈಲ್ ನ್ನು ಕೂಡ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಸಿಸಿಬಿ, ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗಬೇಕು ಎಂದು ಹೇಳಿತ್ತು. ಅಂತೆಯೇ ದಂಪತಿ ಕೂಡ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಮತ್ತೆ ಸಿಸಿಬಿ ಅಧಿಕಾರಿಗಳು ಕರೆದರೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು.
ಮೊಬೈಲ್ ಪಾಸ್ ವರ್ಡ್ ಪಡೆದುಕೊಂಡಿದ್ದ ಸಿಸಿಬಿಗೆ ದಿಗಂತ್ ಮೊಬೈಲ್ ನಲ್ಲಿ ಹಲವು ಮಾಹಿತಿಗಳು ಲಭ್ಯವಾಗಿದೆ. ದಿಗಂತ್ ಹೇಳಿಕೆ ಆಧಾರದ ಮೇಲೆ ಕೆಲ ಡ್ರಗ್ಸ್ ಪೆಡ್ಲರ್ಸ್ ಗಳನ್ನು ಸಿಸಿಬಿ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ದಿಗಂತ್ ವಿರುದ್ಧ ಕೆಲ ಮಾಹಿತಿ ಮತ್ತು ಸಾಕ್ಷಿಗಳು ಸಿಕ್ಕ ಮಾಹಿತಿ ಲಭ್ಯವಾಗಿದೆ. ಮೊಬೈಲ್ ನಲ್ಲಿ ನಡೆಸಿದ್ದ ಚಾಟಿಂಗ್ ರಿಟ್ರೀವ್ ಮಾಡಲಾಗಿದೆ. ಈ ಕುರಿತು ವಿಚಾರಣೆಗೆ ಬುಲಾವ್ ನೀಡಿತ್ತು ಎನ್ನಲಾಗಿದೆ.
ಬೆಂಗಳೂರು: ಪ್ರಕರಣದ ಬಗ್ಗೆ ನಾವು ಏನೂ ಮಾತನಾಡುವ ಹಾಗಿಲ್ಲ. ಸಿಸಿಬಿ ಪೊಲೀಸರ ನಿಯಮಗಳನ್ನ ಪಾಲಿಸುತ್ತಿದ್ದೇವೆ ಎಂದು ಚಂದನವನದ ಪಾರಿಜಾತ ಐಂದ್ರಿತಾ ರೇ ಹೇಳಿದ್ದಾರೆ.
ಬುಧವಾರ ದಿಗಂತ್ ಮತ್ತು ಐಂದ್ರಿತಾ ಸಿಸಿಬಿಗೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಬಳಿಕ ಐಂದ್ರಿತಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇಂದು ಬೆಳಗ್ಗೆ ಮನೆಯ ಬಾಲ್ಕನಿಗೆ ಅತ್ತೆ ಜೊತೆ ಬಂದ ಐಂದ್ರಿತಾ ರೇ, ಸಿಸಿಬಿ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ನಾಗರೀಕರಾಗಿ ಪೊಲೀಸರ ತನಿಖೆ ಸಹಕಾರ ನೀಡೋದು ನಮ್ಮ ಕರ್ತವ್ಯ. ನಿನ್ನೆಯೇ ಪ್ರತಿಕ್ರಿಯೆ ನೀಡಿದ್ದೇವೆ. ಸಿಸಿಬಿ ಕೊಟ್ಟಿರೋ ನಿಯಮಗಳ ಪಾಲನೆ ಮಾಡುತ್ತಿದ್ದೇವೆ. ಮಾಧ್ಯಮಗಳ ಜೊತೆ ಮಾತನಾಡಿದ್ರೆ ರೂಲ್ಸ್ ಬ್ರೇಕ್ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ನಾಳೆ ದಿಗಂತ್ ಚಿತ್ರೀಕರಣಕ್ಕೆ ಹೋಗಬಹುದು ಅದರ ಬಗ್ಗೆ ನನಗೆ ಗೊತ್ತಿಲ್ಲ. ಸದ್ಯಕ್ಕೆ ಯಾವುದೇ ನೋಟಿಸ್ ಬಂದಿಲ್ಲ ಎಂದು ದಿಗಂತ್ ತಾಯಿ ಮಲ್ಲಿಕಾ ಹೇಳಿದರು.
ವಿಚಾರಣೆ ಹಂತದಲ್ಲಿರುವದರಿಂದ ಬೆಂಗಳೂರು ತೊರೆಯುವಂತಿಲ್ಲ ಎಂದು ಸಿಸಿಬಿ ನೀಡಿದೆ ಎನ್ನಲಾಗಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾರಿಗೋಲ್ಡ್ ಸಿನಿಮಾ ಚಿತ್ರೀಕರಣದಲ್ಲಿ ದಿಗಂತ್ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ವಿಚಾರಣೆಯಿಂದ ಸಿನಿಮಾಗಳಿಗೆ ಯಾವುದೇ ತೊಂದರೆ ಆಗಲ್ಲ ಎಂದು ದಿಗಂತ್ ಸಿನಿಮಾ ತಂಡಕ್ಕೆ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು: ಚಂದನವನದ ಗುಳಿ ಕೆನ್ನೆ ದಂಪತಿ ದಿಗಂತ್ ಮಂಚಾಲೆ ಮತ್ತು ಐಂದ್ರಿತಾ ರೇ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಹಾಜರಾಗಿರುವ ಇಬ್ಬರನ್ನ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್ – ದಿಗಂತ್, ಐಂದ್ರಿತಾಗೆ ಸಿಸಿಬಿ ನೋಟಿಸ್
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್ ದಂಪತಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಫೋನ್ ಕಾಲ್ ಮೂಲಕ ಮಂಗಳವಾರ ನೋಟಿಸ್ ನೀಡಿತ್ತು. ನೋಟಿಸ್ ನೀಡಿದ ವೇಳೆ ದಿಗಂತ್ ಮತ್ತು ಐಂದ್ರಿತಾ ಕೇರಳದಲ್ಲಿದ್ರೂ ಎಂದು ಹೇಳಲಾಗಿತ್ತು. ಇಂದು ಬೆಳಗ್ಗೆ ದಂಪತಿ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.
ತಡರಾತ್ರಿ ವಕೀಲರನ್ನು ಸಂಪರ್ಕಿಸಿರುವ ಮನಸಾರೆ ಜೋಡಿ, ವಿಚಾರಣೆಯನ್ನ ಹೇಗೆ ಎದುರಿಸಬೇಕು? ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ಕೇಳುವ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ. ಹಾಗೇ ಕಾನೂನಿನಲ್ಲಿರುವ ಅವಕಾಶಗಳು ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ
ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯ ಬಂಧನವಾಗಿದೆ. ಸಂಜನಾ ಮತ್ತು ರಾಗಿಣಿ ಪೊಲೀಸ್ ವಿಚಾರಣೆ ವೇಳೆ ನಟಿ ಐಂದ್ರಿತಾ ಹೆಸರು ಹೇಳಿದ ಹಿನ್ನೆಲೆ ಸಿಸಿಬಿ ನೋಟಿಸ್ ನೀಡಿರುವ ಸಾಧ್ಯತೆಗಳಿವೆ. ಕೆಲವು ದಿನಗಳ ಹಿಂದೆ ಕ್ಯಾಸಿನೋ ಮಾಲೀಕ ಶೇಖ್ ಫಾಝಿಲ್ ಜೊತೆ ಐಂದ್ರಿತಾ ಫೋಟೋಗಳು ವೈರಲ್ ಆಗಿದ್ದವು. ಫೋಟೋ ವೈರಲ್ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ದಿಗಂತ್ ಮಡದಿ, ಹಿಂದಿ ಸಿನಿಮಾ ಪ್ರಚಾರಕ್ಕಾಗಿ ಕ್ಯಾಸಿನೋಗೆ ಹೋಗಿದ್ದು ನಿಜ. ಬಾಲಿವುಡ್ ನಟ ಅರ್ಬಾಜ್ ಖಾನ್ ಮೂಲಕ ಎರಡು ಬಾರಿ ಶೇಖ್ ಫಾಝಿಲ್ ನನ್ನು ಎರಡು ಬಾರಿ ಭೇಟಿಯಾಗಿದ್ದೇನೆ. ವೈಯಕ್ತಿಕವಾಗಿ ಶೇಖ್ ಫಾಝಿಲ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು.