Tag: ದಾವಣಗೆರೆ

  • ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ರೈಲಿಗೆ ತಲೆಕೊಟ್ಟು ತಾಯಿ, ಅಂಗವಿಕಲೆ ಮಗಳು ಆತ್ಮಹತ್ಯೆ

    ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ರೈಲಿಗೆ ತಲೆಕೊಟ್ಟು ತಾಯಿ, ಅಂಗವಿಕಲೆ ಮಗಳು ಆತ್ಮಹತ್ಯೆ

    ದಾವಣಗೆರೆ: ಸಾಲ ಮರುಪಾವತಿಸುವಂತೆ ಮೈಕ್ರೋ ಫೈನಾನ್ಸ್ (Micro Finance) ಹಾಗೂ ಸ್ವಸಹಾಯ ಸಂಘಗಳ ಕಿರುಕುಳಕ್ಕೆ ಬೇಸತ್ತು ತಾಯಿ ಹಾಗೂ ಅಂಗವಿಕಲೆ ಮಗಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹರಿಹರ (Harihara) ನಗರದ ಬಳಿ ಇರುವ ತುಂಗಭದ್ರ ನದಿ ಸೇತುವೆ ಬಳಿ ನಡೆದಿದೆ.

    ಗಂಗನರಸಿ ಗ್ರಾಮದ ಸುವರ್ಣಮ್ಮ (56), ಅಂಗವಿಕಲ ಮಗಳು ಗೌರಮ್ಮ (26) ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು. ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಸುವರ್ಣಮ್ಮ, ಕೆಲ ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಮೂವರು ಪುತ್ರಿಯರಲ್ಲಿ ಇಬ್ಬರ ವಿವಾಹವಾಗಿದ್ದು, ಅಂಗವಿಕಲೆಯಾದ ಗೌರಮ್ಮ ತಾಯಿಯೊಂದಿಗೆ ನೆಲೆಸಿದ್ದರು. ಕೂಲಿ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದ ಸುವರ್ಣಮ್ಮ, ಸಾಲದ ಹೊರೆಗೆ ಬಳಲಿದ್ದರು ಎನ್ನಲಾಗುತ್ತಿದ್ದು, ಮೈಕ್ರೊ ಫೈನಾನ್ಸ್ ಮತ್ತು ಸ್ವಸಹಾಯ ಸಂಘಗಳಲ್ಲಿ 3 ಲಕ್ಷಕ್ಕೂ ಅಧಿಕ ಸಾಲ ಪಡೆದಿದ್ದರು. 2 ಸಾಲಕ್ಕೆ ವಾರಕ್ಕೊಮ್ಮೆ ಹಾಗೂ 1 ಸಾಲಕ್ಕೆ ತಿಂಗಳ ಕಂತುಗಳಲ್ಲಿ ಮರುಪಾವತಿ ಮಾಡಬೇಕಿತ್ತು. ಸಾಲದ ಕಂತು ಸರಿಯಾಗಿ ಪಾವತಿಸಲು ಕಷ್ಟಪಡುತ್ತಿದ್ದರು. ಇದನ್ನೂ ಓದಿ: ಕಲಬುರಗಿ | ಗಾಣಗಾಪುರದ ದತ್ತನ ಸನ್ನಿಧಿಯಲ್ಲಿ ಕಾಲ್ತುಳಿತ – ಮಹಿಳೆ ಸಾವು

    ಸಾಲಗಾರರ ಕಾಟ ತಾಳಲಾರದೆ ಇಂದು ತುಂಗಾಭದ್ರಾ ನದಿಗೆ ನಿರ್ಮಿಸಿದ ರೈಲ್ವೆ ಸೇತುವೆಯ ಮೇಲೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮೃತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಮುಡಾ ಹಗರಣ | ಸಿಎಂ ಪತ್ನಿಗೆ ಹೈಕೋರ್ಟ್ ನೋಟಿಸ್

  • ದಾವಣಗೆರೆ| ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಯುವಕ ಸಾವು

    ದಾವಣಗೆರೆ| ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಯುವಕ ಸಾವು

    ದಾವಣಗೆರೆ: ಕಾಲೇಜು ವಿದ್ಯಾರ್ಥಿ ಹೃದಯಾಘಾತದಿಂದ (Heart Attack) ಮೃತಪಟ್ಟ ಘಟನೆ ದಾವಣಗೆರೆಯ (Davanagere) ಜಯನಗರದಲ್ಲಿ ನಡೆದಿದೆ.

    ಉದ್ಯಮಿ ರೇಖಾ ಮುರ್ಗೇಶ್ ಪುತ್ರ ಅಕ್ಷಯ್ (22) ಹೃದಯಘಾತಕ್ಕೆ ಮೃತಪಟ್ಟಿದ್ದಾನೆ. ಅಕ್ಷಯ್‌ ಇದ್ದಕ್ಕಿದ್ದಂತೆ ಮನೆಯಲ್ಲಿಯೇ ಕುಸಿದು ಬಿದ್ದಿದ್ದ.  ಇದನ್ನೂ ಓದಿ: ಪತಿ ಜೊತೆ ಜಗಳವಾಡಿ ಕೆರೆಗೆ ಹಾರಿ ಬದುಕಿಸುವಂತೆ ಆಂಜನೇಯನನ್ನ ಬೇಡುತ್ತಿದ್ದ ಮಹಿಳೆಯ ರಕ್ಷಣೆ

     

    ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಆಸ್ಪತ್ರೆಗೆ ಸಾಗಿಸಿದ ಕೆಲ ಕ್ಷಣಗಳಲ್ಲಿ ಅಕ್ಷಯ್‌ ಮೃತಪಟ್ಟಿದ್ದಾನೆ. ಇದನ್ನೂ ಓದಿಮಂಡ್ಯ ಮಾನಸಿಕ ಖಿನ್ನತೆಯಿಂದ ಕಾವೇರಿ ನದಿಗೆ ಹಾರಿದ MCA ಪದವೀಧರೆ

    ಕಳೆದು ಮೂರು ತಿಂಗಳಲ್ಲಿ ಕೇವಲ ದಾವಣಗೆರೆ  ಜಿಲ್ಲಾ ಆಸ್ಪತ್ರೆ ಒಂದರಲ್ಲಿಯೇ 75 ಕ್ಕೂ ಹೆಚ್ಚು ಜನ ಹೃದಯಾಘಾತದಿಂದ ಮೃತಪಟ್ಟ ವಿಚಾರ ಬೆಳಕಿಗೆ ಬಂದಿದೆ.

  • ದಾವಣಗೆರೆಯಲ್ಲಿ ಅತೃಪ್ತರ ಬಲ ಪ್ರದರ್ಶನ – ಬಿಎಸ್‌ವೈ ವಿರುದ್ಧ ಸಿದ್ದೇಶ್ವರ್, ಲಿಂಬಾವಳಿ ಗುಡುಗು

    ದಾವಣಗೆರೆಯಲ್ಲಿ ಅತೃಪ್ತರ ಬಲ ಪ್ರದರ್ಶನ – ಬಿಎಸ್‌ವೈ ವಿರುದ್ಧ ಸಿದ್ದೇಶ್ವರ್, ಲಿಂಬಾವಳಿ ಗುಡುಗು

    ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ (Davanagere) ಕೇಂದ್ರದ ಮಾಜಿ ಸಚಿವ ಜಿಎಂ ಸಿದ್ದೇಶ್ವರ್ (GM Siddeshwar) ಜನ್ಮದಿನ ಸಂಭ್ರಮ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಬಿಎಸ್‌ವೈ, ರೇಣುಕಾಚಾರ್ಯ ವಿರುದ್ಧ ರೆಬೆಲ್ ನಾಯಕರು ಮುಗಿಬಿದ್ದು ಕೆಂಡ ಕಾರಿದರು.

    ಇಂದು ಬೆಣ್ಣೆನಗರಿ ಬಿಜೆಪಿಯಲ್ಲಿ ಅಕ್ಷರಶಃ ಇನ್‌ಸೈಡ್ ಸ್ಟೋರಿಗಳು ಓಪನ್ ಆದವು. ಸುಮಾರು ದಿನಗಳಿಂದ ಹೊಟ್ಟೆಯಲ್ಲಿ ಬಚ್ಚಿಟ್ಟ ಸಂಗತಿಗಳು ಹೊರಬಂದವು, ಕಾರ್ಯಕರ್ತರಿಗೆ ಕನಸಲ್ಲೂ ಕಂಡಿರದ ವಿಷಯಗಳ ಅನಾವರಣ ಆಗಿತ್ತು. ನಾಯಕರ ಮಧ್ಯ ಈ ರೀತಿ ಆಗಿದೆಯಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಸಂದರ್ಭ ನಿರ್ಮಾಣ ಆಗಿತ್ತು. ಮಾಜಿ ಸಚಿವ ಜಿಎಂ ಸಿದ್ದೇಶ್ವರ್ ಅವರ 74ನೇ ಜನ್ಮದಿನವನ್ನ ಅಭಿಮಾನಿ ಬಳಗದಿಂದ ನಗರದ ರೇಣುಕಾ ಮಂದಿರದಲ್ಲಿ ಏರ್ಪಡಿಸಲಾಗಿತ್ತು. ಮೊದಲಿಗೆ ಇದು ಜನ್ಮದಿನ ಮಾತ್ರ ಎಂದು ನಾಯಕರು ಸಾರಿದ್ದರು. ಆದರೆ ಬರುಬರುತ್ತಾ ಆಗಿದ್ದೆ ಬೇರೆ. ಬಿಜೆಪಿ ರೆಬೆಲ್ಸ್ ನಾಯಕರ ಶಕ್ತಿ ಪ್ರದರ್ಶನಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು. ಅರವಿಂದ್ ಲಿಂಬಾವಳಿ, ಗೋವಿಂದ ಕಾರಜೋಳ, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ, ಬಿಪಿ ಹರೀಶ್ ಸೇರಿದಂತೆ ಹಲವು ನಾಯಕರ ಸಮಾಗಮವಾಯಿತು. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲು ಎಎಸ್‌ಐ, ಮನೋವೈದ್ಯ ಸೇರಿ ಮೂವರು ಶಂಕಿತ ಉಗ್ರರ ಬಂಧನ

    ಈ ವೇಳೆ ಮಾತನಾಡಿದ ಅರವಿಂದ ಲಿಂಬಾವಳಿ (Aravind Limbavali), ಯಡಿಯೂರಪ್ಪ (BS Yediyurappa) ಪಕ್ಷ ಬಿಟ್ಟು ಹೋದವರು. ಕಾಂಗ್ರೆಸ್, ಜೆಡಿಎಸ್ ಕದ ತಟ್ಟಿ ಬಂದವರು. ಮತ್ಯಾಕೆ ವಾಪಾಸ್ ಬಂದರೋ ಗೊತ್ತಿಲ್ಲ. ಯಡಿಯೂರಪ್ಪ ಸಿಎಂ ಆಗೋಕೆ ಸಿದ್ದೇಶ್ವರ್ ಕಾರಣ. ಆದರೆ ಸಿದ್ದೇಶ್ವರ್ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ನೇರವಾಗಿ ಟಾಂಗ್ ಕೊಟ್ಟು ಕಿಡಿಕಾರಿದರು. ಇದನ್ನೂ ಓದಿ: 50 ಮೌಲಾನ ಆಜಾದ್ ಮಾದರಿ ಶಾಲೆ ತೆರೆಯಲು ಸರ್ಕಾರ ಆದೇಶ – ವಿಪಕ್ಷಗಳ ಕಿಡಿ

    ಕಾರ್ಯಕ್ರಮದ ಉದ್ದಕ್ಕೂ ದಾವಣಗೆರೆ ಎಂಪಿ ಸೋಲಿನ ಚರ್ಚೆ, ಬಿಎಸ್‌ವೈ ವಿಚಾರವೇ ಪ್ರಮುಖವಾಗಿತ್ತು. ರೇಣುಕಾಚಾರ್ಯ ಅಂಡ್ ಟೀಂ ಸೋಲಿಗೆ ಪ್ರಮುಖ ಕಾರಣ ಹಾಗೂ ಬಿಎಸ್ ವೈ, ವಿಜಯೇಂದ್ರ ಕಾರಣ ಎಂದು ನಾಯಕರು ಪರೋಕ್ಷವಾಗಿ ಆರೋಪಿಸಿದರು. ನಮ್ಮವರ ಅಡ್ಜಸ್ಟ್ಮೆಂಟ್ ಕಾರಣದಿಂದ ಕಾಂಗ್ರೆಸ್ ಗೆದ್ದಿದೆ. ಮೊಣಕಾಲುದ್ದ ನೀರಲ್ಲಿ ದೋಣಿ ಚಲಾಯಿಸಿ, ಕೊರೊನಾ ಟೈಂನಲ್ಲಿ ಡಿಂಗ್ ಡಾಂಗ್ ಮಾಡಿದ್ರು ಎಂದು ರೇಣುಕಾಚಾರ್ಯಗೆ ಪ್ರತಾಪ್ ಸಿಂಹ ಟಾಂಗ್ ಕೊಟ್ಟರು. ಇದನ್ನೂ ಓದಿ: 111.8 ಕೋಟಿ ಅನುದಾನದ ಬಳಿಕವೂ ಶಾಲಾ ಮಕ್ಕಳ ಶೂ-ಸಾಕ್ಸ್‌ಗಾಗಿ ದಾನಿಗಳ ಮೊರೆಹೋದ ಸರ್ಕಾರ

    2006ರಲ್ಲಿ ಮೊದಲ ಭಾರೀ ಬಿಜೆಪಿ ಸರ್ಕಾರ ಬರಲು ನಾನೇ ಕಾರಣ. ಕುಮಾರಸ್ವಾಮಿ ಸಿಎಂ, ಬಿಎಸ್‌ವೈ ಸಿಎಂ ಆಗೋ ವಿಚಾರ ಮಾತುಕತೆ ಮಾಡಿದ್ದೇ ನಾನು. ನಂತರ 110 ಸೀಟು ಬಂದಾಗ ಉಳಿದ ಶಾಸಕರನ್ನ ಕರೆದುಕೊಂಡು ಬಂದು ಬಿಎಸ್‌ವೈ ಸಿಎಂ ಮಾಡಿದ್ದೇ ನಾವು. ಅವರಿಂದ ನಾನೇನು ಗಳಿಸಿಲ್ಲ, ಪಡೆದಿಲ್ಲ. ನನ್ನನ್ನು ಮಂತ್ರಿ ಮಾಡಿದ್ದಾರೆ ಎಂದಿದ್ದಾರೆ. ನನ್ನನ್ನು ಮಂತ್ರಿ ಮಾಡಿದ್ದು ಮೋದಿಜಿ, ಅನಂತಕುಮಾರ್. ಇವರಿಂದ ನಾನೇನು ಪಡೆದಿಲ್ಲ, ನನ್ನಿಂದ ಇವರಿಗೆ ಅನುಕೂಲ ಆಗಿದೆ. ಆದರೆ ನನ್ನ ಪತ್ನಿಯನ್ನು ಚುನಾವಣೆಯಿಂದ ಸೋಲಿಸಿದರು ಎಂದು ಸಿದ್ದೇಶ್ವರ್ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ

    ಒಟ್ಟಾರೆ ಬೆಣ್ಣೆನಗರಿಯಲ್ಲಿಂದು ರೆಬೆಲ್ಸ್ ಸೈಲೆಂಟಾಗಿ ಠಕ್ಕರ್ ಮೇಲೆ ಠಕ್ಕರ್ ಕೊಟ್ಟರು. ರಾಜ್ಯಾಧ್ಯಕ್ಷ ವಿಜಯೇಂದ್ರ ಹೆಸರು ಪ್ರಸ್ತಾಪಿಸಿದರೆ ತೊಡಕಾಗಬಹುದೆಂದ ಅರಿತ ನಾಯಕರು ಚಾಣಾಕ್ಷತನದಿಂದ ಮಾತುಗಳನ್ನಾಡಿದರು. ವಿಜಯೇಂದ್ರನ ಬಿಟ್ಟು ಯಡಿಯೂರಪ್ಪ ವಿರುದ್ಧ ಸೈಲೆಂಟಾಗಿ ಸಮರ ಸಾರಿದಂತೆ ಕಾಣುತ್ತಿದೆ. ಇನ್ನೊಂದು ಕಡೆ ಬಿಎಸ್‌ವೈ, ರೇಣುಕಾಚಾರ್ಯ ವಿರುದ್ಧ ಮಾತನಾಡಬೇಕಾದದ್ದನ್ನೆಲ್ಲ ಮಾತಾಡಿಬಿಟ್ಟರು. 30 ವರ್ಷದಿಂದ ಭದ್ರಕೋಟೆಯಾಗಿದ್ದ ದಾವಣಗೆರೆಯನ್ನು ಲಗಾನ್ ಟೀಂನಿಂದ ಕಳೆದುಕೊಂಡಿದ್ದರ ಕುರಿತಾಗಿ ಎಲ್ಲರು ರೋಷಾವೇಶ ಹೊರ ಹಾಕಿದರು. ಇದನ್ನೂ ಓದಿ: 15 ಏಷ್ಯನ್ ರಾಷ್ಟ್ರಗಳ ಎದುರು ವಿಜಯಪುರದ ಇತಿಹಾಸ ಅನಾವರಣಗೊಳಿಸಿದ ಡಿಸಿ

  • ತುಮಕೂರು | ಹೋಟೆಲ್‌ನಲ್ಲಿ ದಾವಣಗೆರೆ ಪಿಎಸ್‍ಐ ನೇಣಿಗೆ ಶರಣು

    ತುಮಕೂರು | ಹೋಟೆಲ್‌ನಲ್ಲಿ ದಾವಣಗೆರೆ ಪಿಎಸ್‍ಐ ನೇಣಿಗೆ ಶರಣು

    ತುಮಕೂರು: ನಗರದ (Tumakuru) ಹೋಟೆಲ್ ಒಂದರಲ್ಲಿ ದಾವಣಗೆರೆ (Davangere) ಪಿಎಸ್‍ಐ (PSI) ನೇಣಿಗೆ ಶರಣಾಗಿದ್ದಾರೆ.

    ನೇಣಿಗೆ ಶರಣಾದವರನ್ನು ನಾಗರಾಜಪ್ಪ (45) ಎಂದು ಗುರುತಿಸಲಾಗಿದೆ. ನಗರದ ದ್ವಾರಕಾ ಹೋಟೆಲ್‍ನಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಮೊಹರಂ ಆಚರಣೆ ವೇಳೆ ದುರಂತ – ಬೆಂಕಿಗೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ

    ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ‌ ಅವರು ಪಿಎಸ್‍ಐ ಆಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಪುತ್ತೂರು | ವಿಹರಿಸುತ್ತಿದ್ದ ಜೋಡಿಗೆ ಕಿರುಕುಳ – ನಿಂದಿಸಿ ವಿಡಿಯೋ ಹರಿಬಿಟ್ಟ ಪುಂಡರು

  • ರೈಲ್ವೇ ಟ್ರ್ಯಾಕ್‌ನಲ್ಲಿ ನವವಿವಾಹಿತೆ ಶವ ಪತ್ತೆ ಕೇಸ್ – ಪತಿ ಮನೆ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

    ರೈಲ್ವೇ ಟ್ರ್ಯಾಕ್‌ನಲ್ಲಿ ನವವಿವಾಹಿತೆ ಶವ ಪತ್ತೆ ಕೇಸ್ – ಪತಿ ಮನೆ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

    ದಾವಣಗೆರೆ: ಏಳು ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆಯ ಶವ ರೈಲ್ವೇ ಟ್ರ್ಯಾಕ್‌ನಲ್ಲಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರೆಂದು ಆರೋಪ ಕೇಳಿಬಂದಿದೆ.

    ಮೃತಳನ್ನು ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ತಾಲ್ಲೂಕಿನ ವಿದ್ಯಾ ಎಂದು ಗುರುತಿಸಲಾಗಿದೆ. ಸೋಮಲಾಪುರ ಗ್ರಾಮದ ಶಿವು ಎಂಬವನ ಜೊತೆ ಕಳೆದ 7 ತಿಂಗಳ ಹಿಂದೆ ವಿದ್ಯಾಳ ಮದುವೆ ಮಾಡಲಾಗಿತ್ತು. ಪತಿ ಶಿವು ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇಬ್ಬರು ಬೆಂಗಳೂರಿನ ಶಂಕರಪುರಂನಲ್ಲಿ ವಾಸವಾಗಿದ್ದರು.ಇದನ್ನೂ ಓದಿ: ಪ್ರೀತಿ ವಿಚಾರಕ್ಕೆ ಕಿರಿಕ್ – ಶಿಕ್ಷಕಿಗೆ ಚಾಕು ಇರಿದು ಕೊಂದ ಯುವಕ 

    ಜೂ.30ರಂದು ವಿದ್ಯಾ ಕಾಣೆಯಾಗಿದ್ದರು. ಈ ಕುರಿತು ಶಂಕರಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿತ್ತು. ಅದೇ ದಿನ ಸಂಜೆ ಅರಸೀಕೆರೆ ರೈಲ್ವೆ ಟ್ರ‍್ಯಾಕ್ ಬಳಿ ವಿದ್ಯಾ ಪತ್ತೆಯಾಗಿದ್ದಳು, ಆಸ್ಪತ್ರೆಗೆ ಸಾಗಿಸುವ ಮುನ್ನ ಆಕೆ ಸಾವನ್ನಪ್ಪಿದ್ದಳು.

    ಸದ್ಯ ವಿದ್ಯಾ ಕುಟುಂಬಸ್ಥರು ಅರಸೀಕರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪತಿ ಶಿವುನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಸುಮಾರು ನಾಲ್ಕು ತಿಂಗಳಿನಿಂದ ವಿದ್ಯಾಗೆ ಪತಿ ಕುಟುಂಬಸ್ಥರು ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಅವರೇ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಪತಿಯ ಮನೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.ಇದನ್ನೂ ಓದಿ: ಕೊಡವ ಕಮ್ಯೂನಿಟಿಯಿಂದ ಇಂಡಸ್ಟ್ರಿಗೆ ಬಂದಿದ್ದು ನಾನೇ ಫಸ್ಟ್ – ರಶ್ಮಿಕಾ ಮತ್ತೊಂದು ಯಡವಟ್ಟು 

  • ದಾವಣಗೆರೆ | ಫಸಲಿಗೆ ಬಂದಿದ್ದ 7.50 ಲಕ್ಷ ಮೌಲ್ಯದ ದಾಳಿಂಬೆ ಕಳವು

    ದಾವಣಗೆರೆ | ಫಸಲಿಗೆ ಬಂದಿದ್ದ 7.50 ಲಕ್ಷ ಮೌಲ್ಯದ ದಾಳಿಂಬೆ ಕಳವು

    ದಾವಣಗೆರೆ: ಫಸಲಿಗೆ ಬಂದಿದ್ದ 7.50 ಲಕ್ಷ ರೂ. ಮೌಲ್ಯದ ದಾಳಿಂಬೆಯನ್ನು ಕಳ್ಳತನ ಮಾಡಿರುವ ಘಟನೆ ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.ಇದನ್ನೂ ಓದಿ: ಶಿಶು ಮರಣ ತಗ್ಗಿಸಿದ ಅಮೃತ – ಜೀವ ಸಂಜೀವಿನಿಯಾಗಿ ಲೇಡಿಗೋಷನ್ ಹ್ಯೂಮನ್ ಮಿಲ್ಕ್ ಬ್ಯಾಂಕ್

    ಗ್ರಾಮದ ರವಿಕುಮಾರ್ ಎಂಬ ರೈತನಿಗೆ ಸೇರಿದ್ದ ಜಮೀನಿನಲ್ಲಿ ಕಳ್ಳತನ ನಡೆದಿದೆ. 10 ಲಕ್ಷ ರೂ. ಬಂಡವಾಳ ಹೂಡಿ, ಎರಡು ಎಕರೆ ಭೂಮಿಯಲ್ಲಿ ದಾಳಿಂಬೆ ಬೆಳೆದಿದ್ದರು. ಉತ್ತಮ ಫಸಲು ಬಂದಿದ್ದು, ಇನ್ನೆರಡು ದಿನದಲ್ಲಿ ಕಟಾವು ಮಾಡಬೇಕಿತ್ತು. ಆದರೆ ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ಕಳ್ಳರು 7.50 ಲಕ್ಷ ರೂ. ಮೌಲ್ಯದ ದಾಳಿಂಬೆ ಕಳವು ಮಾಡಿದ್ದಾರೆ.

    ಮಾರನೇ ದಿನ ಜಮೀನಿಗೆ ಹೋದ ರೈತನಿಗೆ ದಾಳಿಂಬೆ ಕಳ್ಳತನ ವಿಷಯ ತಿಳಿದು ಸಿಡಿಲು ಬಡಿದಂತಾಗಿದೆ. ಸದ್ಯ ರೈತ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದಷ್ಟು ಬೇಗ ಕಳ್ಳರನ್ನು ಹಿಡಿದು ರೈತನಿಗೆ ನ್ಯಾಯ ಒದಗಿಸುವಂತೆ ಸ್ಥಳೀಯರ ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: F-35 ಫೈಟರ್‌ ಜೆಟ್‌ ರಿಪೇರಿಗೆ ಬ್ರಿಟನ್‌ನಿಂದ ಇಂದು 40 ತಂತ್ರಜ್ಞರ ತಂಡ

  • ಬೈಕ್‌ಗೆ ಟ್ರ್ಯಾಕ್ಟರ್‌  ಡಿಕ್ಕಿ – ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸಾವು

    ಬೈಕ್‌ಗೆ ಟ್ರ್ಯಾಕ್ಟರ್‌  ಡಿಕ್ಕಿ – ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸಾವು

    ದಾವಣಗೆರೆ: ಬೈಕ್‌ಗೆ ಟ್ರ್ಯಾಕ್ಟರ್‌ ಡಿಕ್ಕಿಯಾದ ಪರಿಣಾಮ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸಾವನಪ್ಪಿರುವ ಘಟನೆ ದಾವಣಗೆರೆ (Davanagere) ನಗರದ ಸಂಗೊಳ್ಳಿ ರಾಯಣ್ಣ ಫ್ಲೈ ಓವರ್‌ನಲ್ಲಿ ನಡೆದಿದೆ.

    ಎಸ್‌ಪಿ ಕಚೇರಿಯಲ್ಲಿ ಹೆಡ್‌ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎ.ಗುರುಮೂರ್ತಿ(49) ಮೃತ ದುರ್ದೈವಿ. ಇದನ್ನೂ ಓದಿ: ಶಾಲಿನಿ ರಜನೀಶ್‌ ವಿರುದ್ಧ ಅಸಭ್ಯ ಹೇಳಿಕೆ – ರವಿಕುಮಾರ್‌ ವಿರುದ್ಧ ಕೇಸ್‌ ದಾಖಲು

    ಗುರುಮೂರ್ತಿಯವರು ಎಸ್‌ಪಿ ಕಚೇರಿಯಲ್ಲಿ ಡ್ಯೂಟಿ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಸಂಗೊಳ್ಳಿ ರಾಯಣ್ಣ ಫ್ಲೈ  ಓವರ್ ಮೇಲೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಟ್ರ್ಯಾಕ್ಟರ್‌, ಬೈಕ್‌ಗೆ ಡಿಕ್ಕಿಯಾಗಿದೆ. ಇದನ್ನೂ ಓದಿ: ಹಾಸನ| ಪತ್ನಿಯನ್ನು ಕೊಂದು ಹೃದಯಾಘಾತವಾಗಿದೆ ಎಂದು ಬಿಂಬಿಸಿದ್ನಾ ಪತಿ?

    ಗಂಭೀರ ಗಾಯಗೊಂಡಿದ್ದ ಗುರುಮೂರ್ತಿಯವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಬೆಳಿಗ್ಗೆ ಮದುವೆ, ರಾತ್ರಿ ನೇಣು ಬಿಗಿದು ಆತ್ಮಹತ್ಯೆ – ಡೇಟಾ ಆಪರೇಟರ್ ಸಾವಿನ ಸುತ್ತ ಅನುಮಾನದ ಹುತ್ತ

    ಆಸ್ಪತ್ರೆಗೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಗುರುಮೂರ್ತಿ ಅವರು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

  • ಪ್ರಾಣ ಹೋದ್ರೂ ಸರಿ ಮಸೀದಿ ನಿರ್ಮಾಣಕ್ಕೆ ಬಿಡಲ್ಲ: ಮುಸ್ಲಿಂ ಮುಖಂಡರ ವಿರುದ್ಧ ಸ್ಥಳೀಯರ ಆಕ್ರೋಶ

    ಪ್ರಾಣ ಹೋದ್ರೂ ಸರಿ ಮಸೀದಿ ನಿರ್ಮಾಣಕ್ಕೆ ಬಿಡಲ್ಲ: ಮುಸ್ಲಿಂ ಮುಖಂಡರ ವಿರುದ್ಧ ಸ್ಥಳೀಯರ ಆಕ್ರೋಶ

    – ದಾವಣಗೆರೆಯಲ್ಲಿ ಅನಧಿಕೃತ ಮಸೀದಿ ನಿರ್ಮಾಣ?

    ದಾವಣಗೆರೆ: ನಗರದ ಮಹಾನಗರ ಪಾಲಿಕೆ ಸುಪರ್ದಿಗೆ ಬರುವ ವಾರ್ಡ್‌ವೊಂದರಲ್ಲಿ ಏಕಾಏಕಿ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

    ದಾವಣಗೆರೆ (Davanagere) ನಗರದ ಎಸ್‌ಓಜಿ ಕಾಲೊನಿಯಲ್ಲಿ ಮಸೀದಿ ನಿರ್ಮಾಣಕ್ಕೆ ಜನರಿಂದ ವಿರೋಧ ವ್ಯಕ್ತವಾಗಿದೆ. ದಾವಣಗೆರೆ ನಗರಪಾಲಿಕೆಯ 31ನೆ ವಾರ್ಡ್ಗೆ ಅಂಟಿಕೊಂಡಿರುವ ಈ ಜಾಗ ತೋಳಹುಣಸೆ ಗ್ರಾಮ ಪಂಚಾಯತ್ ವಾಪ್ತಿಗೆ ಬರುವ ಪಾಮೇನಹಳ್ಳಿ ಗ್ರಾಮದ ಸರ್ವ ನಂಬರ್‌ನಲ್ಲಿ ಇದೆ. ಇಲ್ಲಿ ಕಳೆದ 20 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರಿಂದ 18 ಗುಂಟೆ ಜಮೀನನ್ನ ಮಲ್ಲೇಶ್ ಎಂಬವರು ಇಸಿ ಮಾಡಿಸಿಕೊಂಡು ಮುಸ್ಲಿಂ ಸಮಾಜದವರಿಗೆ ನೀಡಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ಮುಸ್ಲಿಂ ಸಮಾಜದ ಕೆಲ ಮುಖಂಡರು ಕಳೆದ ಒಂದು ವಾರದಿಂದ ಮಸೀದಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: Bengaluru | ಸ್ಪೋರ್ಟ್ಸ್ ಪ್ರಾಕ್ಟಿಸ್ ನೋಡಲು ಹೋಗಿದ್ದ ವಿದ್ಯಾರ್ಥಿ ನಾಪತ್ತೆ

    ಮೊದಮೊದಲು ನೇರವಾಗಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಸಮುದಾಯದ ಪ್ರಭಾವಿಗಳು, ಯಾವಾಗ ಎಸ್‌ಓಜಿ ಕಾಲೊನಿಯ ಜನ ವಿರೋಧ ಮಾಡಲು ಪ್ರಾರಂಭಿಸಿದರೋ ಅಂದಿನಿಂದ ಜನರು ಕೆಲಸಕ್ಕೆ ಹೋದಾಗ ಅಥವಾ ಮುಂಜಾನೆ ನಾಲ್ಕು ಗಂಟೆಗೆ ಬಂದು ಮಸೀದಿ ನಿರ್ಮಾಣ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಮಸೀದಿ ನಿರ್ಮಾಣದಿಂದ ಸ್ಥಳೀಯವಾಗಿ ಸಮಸ್ಯೆ ಆಗುತ್ತೆ ಅಂತ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಪ್ರಾಣ ಹೋದರು ಸರಿಯೇ ನಾವು ಮಸೀದಿ ನಿರ್ಮಾಣ ಮಾಡಲು ಅವಕಾಶ ಕೊಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮಸೀದಿ ನಿರ್ಮಾಣದ ಕುರಿತು ಯಾರಿಗೂ ಮಾಹಿತಿ ನೀಡಿಲ್ಲ ಎನ್ನಲಾಗಿದೆ.

    ಮಸೀದಿ ನಿರ್ಮಾಣಕ್ಕೆ ಗ್ರಾಮ ಪಂಚಾಯತ್‌ನಿಂದ ಯಾವುದೇ ಅನುಮತಿ ಪಡೆದಿಲ್ಲ. ಅನುಮತಿ ಪಡೆಯದೆ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂಬ ಆರೋಪವಿದೆ. ಆರು ವರ್ಷಗಳ ಹಿಂದೆ ಮಸೀದಿ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿತ್ತು. ಈಗ ಯಾರ ಗಮನಕ್ಕೂ ಬಾರದೇ ಮಸೀದಿ ನಿರ್ಮಾಣ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ. ಮಸೀದಿ ನಿರ್ಮಿಸಲು ದಾಖಲಾತಿ ನೀಡಿ. ನಂತರ ಕಾಮಗಾರಿ ಆರಂಭ ಮಾಡಿ ಎಂದು ಪೊಲೀಸ್ ಹೇಳಿದ್ದಾರೆ. ಇಷ್ಟಿದ್ದರೂ ಮತ್ತೆ ಕಾಮಗಾರಿ ಆರಂಭಿಸಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರವೇ ಅನುಮತಿ ನೀಡಿದ್ದರೂ, ನಾವು ಅವಕಾಶ ಕೊಡುವುದಿಲ್ಲ ಎಂದು ಜನ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ – ಡ್ಯೂಟಿ ಡಾಕ್ಟರ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಮಸೀದಿ ನಿರ್ಮಾಣಕ್ಕೆ ಗ್ರಾಮದ ಜನರ ವಿರೋಧದ ಬೆನ್ನಲ್ಲೇ ಜಾಗದ ಮೂಲ ಮಾಲೀಕ ಎಂದು ಬಂದ ಕುಟುಂಬ 20 ವರ್ಷದಿಂದ ಈ ಜಾಗ ವಿವಾದ ಕೋರ್ಟ್ನಲ್ಲಿ ಇದೆ. ನಮಗೇ ಗೊತ್ತಿಲ್ಲದಂತೆ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.

  • ಭದ್ರಾ ಬಲದಂಡೆ ಕಾಲುವೆ ಸೀಳಿ ಕುಡಿಯುವ ನೀರಿನ ಅವೈಜ್ಞಾನಿಕ ಕಾಮಗಾರಿ – ಇಂದು ದಾವಣಗೆರೆ ಬಂದ್

    ಭದ್ರಾ ಬಲದಂಡೆ ಕಾಲುವೆ ಸೀಳಿ ಕುಡಿಯುವ ನೀರಿನ ಅವೈಜ್ಞಾನಿಕ ಕಾಮಗಾರಿ – ಇಂದು ದಾವಣಗೆರೆ ಬಂದ್

    ದಾವಣಗೆರೆ: ಭದ್ರಾ ಬಲದಂಡೆ ಕಾಲುವೆ (Bhadra Right Bank Canal) ಸೀಳಿ ಕುಡಿಯುವ ನೀರಿನ ಅವೈಜ್ಞಾನಿಕ ಕಾಮಗಾರಿಯನ್ನು ಖಂಡಿಸಿ ಭಾರತೀಯ ರೈತ ಒಕ್ಕೂಟ ಹಾಗೂ ಬಿಜೆಪಿ ರೈತ ಮೋರ್ಚ ದಾವಣಗೆರೆ (Davanagere) ನಗರ ಬಂದ್‌ಗೆ ಕರೆ ಕೊಟ್ಟಿದೆ.

    ಬಂದ್ ಹಿನ್ನೆಲೆ ದಾವಣಗೆರೆ ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಪೊಲೀಸರು ಬಿಗಿ ಭದ್ರತೆ ವಹಿಸಿದ್ದಾರೆ. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ಎಸ್ ರವೀಂದ್ರನಾಥ್, ಮಾಡಾಳ್ ಮಲ್ಲಿಕಾರ್ಜುನ್ ಹಾಗೂ ಭಾರತೀಯ ರೈತ ಒಕ್ಕೂಟದಿಂದ ಜಯದೇವ ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಇದನ್ನೂ ಓದಿ: ವಿಮಾನ ದುರಂತವಾಗಿ ದಿನಗಳೂ ಕಳೆದಿರಲಿಲ್ಲ – ಪಾರ್ಟಿ ಮೂಡ್‌ನಲ್ಲಿದ್ದ ಉದ್ಯೋಗಿಗಳ ವಜಾಗೊಳಿಸಿದ Air India ವೆಂಚರ್‌

    ಭದ್ರಾ ಬಲದಂಡೆ ನಾಲೆಯಿಂದ ಅವೈಜ್ಞಾನಿಕವಾಗಿ ಕುಡಿಯುವ ನೀರಿನ ಯೋಜನೆ ಮಾಡಲಾಗುತ್ತಿದೆ. ಹೊಸದುರ್ಗ ಅಜ್ಜಂಪುರ ತರೀಕೆರೆ ತಾಲೂಕುಗಳ 1600ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ಭದ್ರಾ ಬಲನಾಲೆ ಸೀಳಿ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ದಾವಣಗೆರೆ ಭಾಗದ ರೈತರಿಗೆ ನೀರು ಪೂರೈಕೆಯಾಗುವುದಿಲ್ಲ. ಇದು ಅವೈಜ್ಞಾನಿಕ, ಕೂಡಲೇ ಕಾಮಗಾರಿಯನ್ನು ಸ್ಥಗಿತ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ, ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರೂ ಪ್ರಯೋಜನವಾಗದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ದಾವಣಗೆರೆ ಬಂದ್‌ಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: Bengaluru | ಬ್ರೇಕ್ ಫೇಲ್ ಆಗಿ ಡಿವೈಡರ್‌ಗೆ KSRTC ಬಸ್ ಡಿಕ್ಕಿ

  • ದಾವಣಗೆರೆ | ಯೂತ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ `ಕೈ’ ಕಾರ್ಯಕರ್ತರ ಕಾಳಗ!

    ದಾವಣಗೆರೆ | ಯೂತ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ `ಕೈ’ ಕಾರ್ಯಕರ್ತರ ಕಾಳಗ!

    ದಾವಣಗೆರೆ: ಜಿಲ್ಲೆಯಲ್ಲಿ ನಡೆದ ಯುವ ಕಾಂಗ್ರೆಸ್ (Congress) ಪದಗ್ರಹಣ ಕಾರ್ಯಕ್ರಮದಲ್ಲಿ `ಕೈ’ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ನಡೆದಿದೆ.

    ಯೂತ್ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಹೆಚ್.ಎಸ್ ಮಂಜುನಾಥ್ ಗೌಡ, ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಮುಂದೆಯೇ ಬಣ ರಾಜಕೀಯ ಹಿನ್ನೆಲೆ `ಕೈ’ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಕಾರ್ಯಕ್ರಮದ ವೇಳೆ ಎರಡು ಬಣಗಳ ಮಧ್ಯೆ ವಾಗ್ಯುದ್ಧ ಮತ್ತು ತಳ್ಳಾಟ ನಡೆಯಿತು.

    ನಿಕಟಪೂರ್ವ ಅಧ್ಯಕ್ಷರ ಪದಾಧಿಕಾರಿಗಳು ಮತ್ತು ನೂತನ ಅಧ್ಯಕ್ಷರ ಬಣಗಳ ನಡುವೆ ಭಿನ್ನಮತ ಸ್ಫೋಟಗೊಂಡು, ಪದಗ್ರಹಣ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂದು ಒಂದು ಬಣ ಆಕ್ರೋಶ ಹೊರಹಾಕಿದರೆ, ಇನ್ನೊಂದು ಬಣ ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ಹಿಂದಿನ ಪದಾಧಿಕಾರಿಗಳು, ನಿಕಟಪೂರ್ವ ಅಧ್ಯಕ್ಷರಿಗೆ ಆಹ್ವಾನ ನೀಡಿಲ್ಲ, ಹಾಲಿ ಜಿಲ್ಲಾಧ್ಯಕ್ಷ ವರುಣ್ ಬೆಣ್ಣೆಹಳ್ಳಿ, ನಿಕಟಪೂರ್ವ ಅಧ್ಯಕ್ಷ ನಿಖಿಲ್ ಕೊಂಡಜ್ಜಿಯವರನ್ನು ಆಹ್ವಾನ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿತು.

    ನಿಕಟಪೂರ್ವ ಜಿಲ್ಲಾಧ್ಯಕ್ಷರಿಂದ ಅಧಿಕಾರ ಹಸ್ತಾಂತರ ಮಾಡಬೇಕು, ಆದರೆ ಅಧಿಕೃತವಾಗಿ ಆಹ್ವಾನ ಮಾಡದೆ ಕಡೆಗಣಿಸಿದ್ದಾರೆ. ಕೈ,ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆಯನ್ನು ಕೊನೆಗೂ ಹಿರಿಯ ಕಾಂಗ್ರೆಸ್ ಮುಖಂಡರು ಮಧ್ಯ ಪ್ರವೇಶ ಮಾಡಿ, ಪರಿಸ್ಥಿತಿಯನ್ನು ಸರಿಪಡಿಸಿದರು.