ದಾವಣಗೆರೆ: ಇಬ್ಬರು ಬೈಕ್ ಕಳ್ಳರನ್ನು ಹರಿಹರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 16.52 ಲಕ್ಷ ರೂ. ಮೌಲ್ಯದ 30 ಬೈಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳನ್ನು ಚಿಕ್ಕಮಗಳೂರಿನ ಪ್ರತಾಪ್ ಹಾಘೂ ಬಳ್ಳಾರಿ ಜಿಲ್ಲೆಯ ಬೋಜರಾಜ್ ಎಂದು ಗುರುತಿಸಲಾಗಿದೆ. ಆರೋಪಿಗಳು ಹರಿಹರದ ಇಂದಿರಾನಗರ, ವಿದ್ಯಾನಗರ ಸೇರಿದಂತೆ ಹಲವು ಕಡೆ ಬೈಕ್ ಕಳ್ಳತನ ಮಾಡಿದ್ದರು. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಕಾನೂನು ಪ್ರಕ್ರಿಯೆ ಮುಗಿಸಿ ಮಾಲೀಕರಿಗೆ ಬೈಕ್‍ಗಳನ್ನು ಮರಳಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಎಸ್‍ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ: ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಹಬ್ಬದ ದಿನ ದೀಪ ಹಚ್ಚಿ, ಪಟಾಕಿ ಸಿಡಿಸಿ ಎಲ್ಲರೂ ಸಂಭ್ರಮ ಪಡುತ್ತಾರೆ. ಇಲ್ಲೊಂದು ಗ್ರಾಮದಲ್ಲಿ ದೀಪಾವಳಿ (Deepavali) ಅಂದ್ರೇನೆ ಭಯ ಅಂತೇ, ಈ ಹಬ್ಬ ಬಂದ್ರೆ ಇಲ್ಲಿನ ಜನ ಕರಾಳ ದಿನ ಬಂದಂತೆ ಅಂತಾರೆ. ಅಯ್ಯೋ ಇಂತಹದ್ದು ಒಂದು ಊರು ಇದಿಯಾ? ಅಂತೀರಾ. ಹೌದು, ಅನಾದಿಕಾಲದಿಂದಲೂ ದೀಪಾವಳಿಗೆ ಭಯಪಡುವ ಗ್ರಾಮದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ದಾವಣಗೆರೆ (Davangere) ತಾಲೂಕಿನ ಲೋಕಿಕೆರೆ ಗ್ರಾಮದ ಕೆಲ ಸಮುದಾಯದ ಜನರಿಗೆ ದೀಪಾವಳಿ ಹಬ್ಬ ಕರಾಳ ದಿನವಂತೆ. ವಿವಿಧ ಕಾರಣಕ್ಕೆ ಕಳೆದ ಆರೇಳು ತಲೆಮಾರುಗಳಿಂದ ದೀಪಾವಳಿ ನಮ್ಮ ಪಾಲಿಗೆ ಕರಾಳ ಹಬ್ಬ ಎನ್ನುವ ನಂಬಿಕೆಯಲ್ಲಿ ದೀಪಾವಳಿಯಿಂದ ಗ್ರಾಮದ ಸುಮಾರು 200 ಕ್ಕೂ ಅಧಿಕ ಕುಟುಂಬಗಳು ದೂರ ಉಳಿದಿವೆ. ದೇಶದೆಲ್ಲೆಡೆ ಮನೆ ಮನೆಯಲ್ಲಿ ಬೆಳಕು ಮೂಡಿದರೆ, ಇಲ್ಲಿ ಮಾತ್ರ ಕತ್ತಲು ಆವರಿಸಿರುತ್ತದೆ. ಇದನ್ನೂ ಓದಿ: ಪಟಾಕಿ ಸಿಡಿಸಲು ಹೋಗಿ ಅನಾಹುತ – ನಾರಾಯಣ ನೇತ್ರಾಲಯದಲ್ಲಿ 20 ಕೇಸ್ ದಾಖಲು
ಈ ಗ್ರಾಮದವರು ಹಬ್ಬ ಮಾಡದಿರಲು ಸಾಕಷ್ಟು ಕಾರಣ ಹೇಳುತ್ತಾರೆ. ನೂರಾರು ವರ್ಷದ ಹಿಂದೆ ಈ ಗ್ರಾಮದಲ್ಲಿ ವಿವಿಧ ಸಮುದಾಯದ ನೂರಾರು ಯುವಕರು ದೀಪಾವಳಿ ಹಬ್ಬದ ದಿನದಂದೇ ಕಾಣೆಯಾಗಿದ್ದರಂತೆ. ಹಬ್ಬದ ದಿನ ಪೂಜೆಗಾಗಿ, ಉತ್ರಾಣಿ ಕಡ್ಡಿ, ಕಾಶಿಕಡ್ಡಿ, ಹೂ ತರಲು ಊರಿಂದ ಹೊರಗೆ ಹೋದವರು ಮರಳಿ ಬರಲೇ ಇಲ್ವಂತೆ. ಗ್ರಾಮಸ್ಥರು ಅದೆಷ್ಟೇ ಹುಡುಕಿದರೂ ಅವರು ಸುಳಿವು ಸಿಗಲಿಲ್ಲ ಅದೇ ಕಾರಣಕ್ಕೆ ಅಂದೆ ದೀಪಾವಳಿ ಕರಾಳ ದಿನ ಎಂದು ಹಬ್ಬ ಆಚರಣೆ ಕೈಬಿಟ್ಟಿದ್ದಾರೆ. ಅದು ತಲೆ ತಲೆಮಾರುಗಳಿಂದ ಇಲ್ಲಿ ಮುಂದುವರೆಯುತ್ತಾ ಬಂದಿದೆ.
ಯಾವುದಕ್ಕೂ ಆಗಿದ್ದೆಲ್ಲಾ ಆಗಿ ಹೋಗಿದೆ, ಹಿಂದಿನದೆಲ್ಲಾ ಏಕೆ ಎಂದು ದೀಪಾವಳಿ ಹಬ್ಬ ಆಚರಣೆ ಮಾಡಲು ಐದು ದಶಕದ ಹಿಂದೆ ನಿರ್ಧಾರ ಮಾಡಿದ್ದರು. ಎಂದಿನಂತೆ ದೀಪಾವಳಿ ಹಬ್ಬದ ದಿನದಂದು ಹಬ್ಬ ಆಚರಣೆ ಮಾಡಲು ಮುಂದಾಗಿದ್ದಾರೆ ಈ ವೇಳೆ ಏಕಾಏಕಿ ಜಮೀನಿನಲ್ಲಿನ ಪೈರಿಗೆ, ಹುಲ್ಲಿನ ಬಣವಿಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ. ಇದನ್ನು ಕಂಡು ಆ ಕುಟುಂಬಸ್ಥರು ಮತ್ತಷ್ಟು ಆತಂಕಗೊಂಡಿದ್ದಾರೆ, ಅವತ್ತೇ ಕೊನೆ ಮುಂದೆ ಯಾವತ್ತೂ ಹಬ್ಬ ಮಾಡುವ ಯೋಚನೆಯನ್ನೇ ಇವರು ಮಾಡಿಲ್ಲವಂತೆ. ಇದನ್ನೂ ಓದಿ: ದೀಪಾವಳಿ 2025 – ಬಲಿಪಾಡ್ಯಮಿ ಹಬ್ಬದ ಮಹತ್ವ ಏನು?
ದಾವಣಗೆರೆ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ್ದ ಇಬ್ಬರನ್ನು ದಾವಣಗೆರೆಯ (Davanagere) ಆರ್‌ಎಂಸಿ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.
ಬಾಲಕಿ ಹಾಗೂ ಆಕೆಯ ಜೊತೆಗಿದ್ದ ಅಪ್ರಾಪ್ತ ಬಾಲಕ ಸೇರಿ ದಾವಣಗೆರೆ ಬಸ್ ನಿಲ್ದಾಣದಿಂದ ಆಟೋದಲ್ಲಿ ಮನೆಗೆ ಹೊರಟಿದ್ದರು. ಈ ವೇಳೆ, ಆಟೋ ಚಾಲಕ ಹಾಗೂ ಆತನ ಜೊತೆಗಿದ್ದ ಮತ್ತೊಬ್ಬ ಯುವಕ ಸೇರಿ ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಬಾಲಕನ ಮೇಲೆ ಹಲ್ಲೆ ನಡೆಸಿ, ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. 2 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಡ್ರಾಪ್ ಕೊಡುವ ನೆಪದಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್, ಇಬ್ಬರು ಅರೆಸ್ಟ್
ದೌರ್ಜನ್ಯ ಎಸಗಿದ ಬಳಿಕ ಬಾಲಕಿಯ ಬಳಿ ಇದ್ದ ಮೊಬೈಲ್ ಹಾಗೂ ಹಣವನ್ನು ಕಾಮುಕರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಆರ್‌ಎಂಸಿ ಪೊಲೀಸ್ ಠಾಣೆಯಲ್ಲಿ ಬಾಲಕಿ ದೂರು ನೀಡಿದ್ದಳು. ಬಾಲಕಿ ದೂರು ನೀಡುತ್ತಿದ್ದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಕಾರವಾರ | ಮೆಡಿಕಲ್ ಟೆಸ್ಟ್‌ಗೆ ಕರೆತಂದಿದ್ದ ಆರೋಪಿ ಪರಾರಿ
ದಾವಣಗೆರೆ: ಸಭೆಗೆ ಬರೋಕೆ ಮಾತ್ರ ಪ್ರೆಗ್ನೆಂಟ್ ಇರ್ತಾರೆ, ಗಿಂಬಳ ತೆಗೆದುಕೊಳ್ಳುವಾಗ ಪ್ರೆಗ್ನೆಂಟ್ ಇರಲ್ವಾ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ಮಹಿಳಾ ಅಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.
ಚನ್ನಗಿರಿಯಲ್ಲಿ (Channagiri) ನಡೆದ ತ್ರೈಮಾಸಿಕ ಕೆಡಿಪಿ ಸಭೆಗೆ ವಲಯ ಅರಣ್ಯಾಧಿಕಾರಿ ಶ್ವೇತಾ ಗೈರಾಗಿದ್ದರು. ಈ ಹಿನ್ನೆಲೆ ಮಹಿಳಾ ಅಧಿಕಾರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಮೀಟಿಂಗ್ ಬನ್ನಿ ಅಂದ್ರೆ ಪ್ರೆಗ್ನೆಂಟ್ ಇದೀನಿ ಅಂತಾ ಹೇಳ್ತಾರೆ. ಅದೇ ಗಿಂಬಳ ಪಡೆಯುವಾಗ, ಕಲೆಕ್ಷನ್ ಮಾಡುವಾಗ ಪ್ರೆಗ್ನೆಂಟ್ ಇರಲ್ವಾ ಎಂದು ಪ್ರಶ್ನಿಸಿದ್ದಾರೆ. ಪ್ರತಿ ಬಾರಿ ಚಕಪ್‌ಗೆ ಹೋಗಿದೀನಿ, ಅಲ್ಲಿ ಹೋಗಿದೀನಿ, ಇಲ್ಲಿ ಹೋಗಿದೀನಿ ಎಂದು ಹೇಳ್ತಾರೆ. ಪ್ರೆಗ್ನೆಂಟ್ ಇದ್ದರೆ ರಜೆ ತೆಗೆದುಕೊಳ್ಳಿ. ಈ ತರ ಹೇಳೋಕೆ ನಿಮಗೆ ನಾಚಿಕೆ ಆಗೋದಿಲ್ವಾ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: Mandya | 60 ವರ್ಷದ ಹಿಂದೂ ಸ್ಮಶಾನ ಈಗ ಮುಸ್ಲಿಂ ಮಕಾನ್
ಡೆಲಿವರಿ ಲಾಸ್ಟ್ ಡೇಟ್‌ವರೆಗೂ ಡ್ಯೂಟಿ ಬೇಕು, ಸಂಬಳ ಬೇಕು, ಗಿಂಬಳ ಬೇಕು. ಆದರೆ ಡ್ಯೂಟಿ ಮಾಡಕ್ಕೆ ಆಗಲ್ಲ. ಮಾತು ಎತ್ತಿದ್ರೆ ಪ್ರೆಗ್ನೆಂಟ್ ಅಂತೀರಾ, ನಾಚಿಕೆ ಆಗಲ್ವಾ? ರಜೆ ಹಾಕ್ಕೊಳ್ಳಿ, ಪ್ರೆಗ್ನೆನ್ಸಿ ರಜೆ ಇದೆಯಲ್ಲ. ಇದಕ್ಕೆ ಇಮಿಡಿಯಟ್ ಆಕ್ಷನ್ ತಗೋಬೇಕು, ನೋಟಿಸ್ ಕಳುಹಿಸಿ ಎಂದು ಸೂಚನೆ ನೀಡಿದ್ದಾರೆ.
ದಾವಣಗೆರೆ: ಮನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು (Boiler Blast) 11 ವರ್ಷದ ಬಾಲಕಿ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಹೊನ್ನಾಳಿ (Honnali) ಪಟ್ಟಣದ ದುರ್ಗಿಗುಡಿ ಉತ್ತರ ಭಾಗದಲ್ಲಿ ನಡೆದಿದೆ.
ಮನೆಯಲ್ಲಿ ಬೆಳಗ್ಗೆ ಬಾಯ್ಲರ್ ಆನ್ ಮಾಡಿದಾಗ ಸ್ಟೋಟಗೊಂಡಿದೆ. ಬಾಯ್ಲರ್ ಪಕ್ಕದಲ್ಲೇ ಇದ್ದ ಬಾಲಕಿ ಸ್ವೀಕೃತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗಂಭೀರವಾಗಿ ಸುಟ್ಟಗಾಯಗಳಾಗಿರುವ ಮೂವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.
ಇದೀಗ ಮೂವರು ಗಾಯಾಳುಗಳು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ: ಜಾತಿ ಸಮೀಕ್ಷೆಗೆ ತೆರಳಿದ್ದ ವೇಳೆ ಶಿಕ್ಷಕನಿಗೆ ಹೃದಯಾಘಾತ ಆಗಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆ ತಾಲ್ಲೂಕಿನ ಹಳೆಕಡ್ಲೆಬಾಳು ಶಾಲೆಯ ಶಿಕ್ಷಕ ಪ್ರಕಾಶ್ ನಾಯಕ್ (44) ಅವರು ಸಮೀಕ್ಷೆ ಮಾಡುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿದೆ.
ತಕ್ಷಣ ಸ್ಥಳೀಯರ ಸಹಾಯದಿಂದ ಅವರನ್ನ ನಗರದ ಹೈಟೆಕ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಬಳಿಕ ಸ್ಟೆಂಟ್ ಹಾಕಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಸ್ಥಳೀಯರ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಶಿಕ್ಷಕ ಪ್ರಕಾಶ್ ನಾಯಕ್ ಪಾರಾಗಿದ್ದಾರೆ. ಘಟನೆ ತಿಳಿದ ದಾವಣಗೆರೆ ಡಿಸಿ ಗಂಗಾಧರ ಸ್ವಾಮಿ ದೂರವಾಣಿ ಕರೆ ಮಾಡಿ ಪ್ರಕಾಶ್ ನಾಯಕ್‌ಗೆ ಧೈರ್ಯ ತುಂಬಿದ್ದಾರೆ.
ದಾವಣಗೆರೆ: ಬೆಸ್ಕಾಂ (BESCOM) ಇಲಾಖೆಯಲ್ಲಿ ಕೋಟ್ಯಂತರ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ರೈತರಿಗೆ (Farmers) ಸೇರಬೇಕಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಪರಿಕರಗಳು ನಾಪತ್ತೆಯಾಗಿದ್ದು ಇದ್ದ ಮೂವರಲ್ಲಿ ಕದ್ದವರು ಯಾರು ಎನ್ನುವುದೇ ಈಗ ದೊಡ್ಡ ಪ್ರಶ್ನೆಯಾಗಿದೆ.
ದಾವಣಗೆರೆಯ (Davanagere) ಹರಿಹರದ (Harihara) ಬೆಸ್ಕಾಂ ವಿಭಾಗೀಯ ಉಗ್ರಾಣದಲ್ಲಿ ಆಂತರಿಕ ಲೆಕ್ಕಪರಿಶೋಧನೆ ವೇಳೆ ಅಧಿಕಾರಿಗಳ ಕಳ್ಳಾಟ ಬಯಲಿಗೆ ಬಂದಿದೆ.ಬೆಸ್ಕಾಂ ವಿಭಾಗೀಯ ಉಗ್ರಾಣದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಆದರೂ ಸಹ ಅಲ್ಲಿನ ಅಧಿಕಾರಿಗಳು ಯಾವುದೇ ತನಿಖೆಗೆ ಮುಂದಾಗಿಲ್ಲ. ಕನಿಷ್ಠ ಠಾಣೆಗೆ ದೂರು ಸಹ ದಾಖಲಿಸದೇ ಇರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಇನ್ನೇನು ನನ್ನ ತಲೆ ಬಂದರೆ ಕಷ್ಟ ಆಗಬಹುದು ಎಂದು ಭಾವಿಸಿ ಈಗ ಅಧಿಕಾರಿಗಳು ತುರ್ತಾಗಿ ಹರಿಹರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತನಿಖೆಯ ವೇಳೆ ಉಗ್ರಾಣದಿಂದ ಬರೋಬರಿ 72.58 ಲಕ್ಷ ರೂ. ಮೌಲ್ಯದ 102 ಪರಿವರ್ತಕಗಳೇ (TC) ಮಾಯವಾಗಿವೆ ಎಂಬುದು ಆಂತರಿಕ ಲೆಕ್ಕ ಪರಿಶೋಧನೆಯಿಂದ ಗೊತ್ತಾಗಿದೆ ಎಂದು ದಾವಣಗೆರೆ ಎಸ್‌ಪಿ ಉಮಾಪ್ರಶಾಂತ್ ತಿಳಿಸಿದ್ದಾರೆ.
ಇಲ್ಲಿ ನಾಪತ್ತೆಯಾಗಿರುವುದು ಒಂದೇರಡಲ್ಲ. 89,270 ಲೀಟರ್ ಟಿ.ಸಿ. ಆಯಿಲ್‌ನ ಲೆಕ್ಕವಂತೂ ಇಲ್ವೇ ಇಲ್ಲ. ಒಟ್ಟು 3.85 ಕೋಟಿ ಮೌಲ್ಯದ 42 ವಿವಿಧ ಸಾಮಗ್ರಿಗಳ ದುರುಪಯೋಗ ಮಾಡಿಕೊಳ್ಳಲಾಗಿದೆ. ವಿದ್ಯುತ್ ಪರಿವರ್ತಕ, ಪೋಲ್, ವಯರ್, ಲೈನ್ ಮಟೇರಿಯಲ್ಸ್ ಪಿವಿಸಿ ಅಲ್ಯುಮಿನಿಯಮ್ ರೀಡ್ ವೈರ್, ಆಯಿಲ್ ಸೇರಿ 42 ಸಾಮಗ್ರಿಗಳನ್ನು ದುರುಪಯೋಗ ಮಾಡಲಾಗಿದೆ.
2018 ರ ಜೂನ್ 19 ರಿಂದ 2025 ರ ಸೆಪ್ಟೆಂಬರ್ 16 ರವರೆಗೆ ಹರಿಹರ ಬೆಸ್ಕಾಂ ಉಗ್ರಾಣದಲ್ಲಿ ಸಹಾಯಕ ಉಗ್ರಾಣ ಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅರುಣಕುಮಾರ್ ಅವರು ಸಾಮಾಗ್ರಿಗಳು ಉಗ್ರಣದಲ್ಲೇ ಇರುವಂತೆ ಕಡತದಲ್ಲಿ ನಮೂದಿಸಿ ಅವುಗಳನ್ನು ಹೊರಕ್ಕೆ ಸಾಗಿಸಿ ದುರುಪಯೋಗ ಮಾಡಿಕೊಂಡಿದ್ದು, ಇನ್ ವಾಯ್ಸ್ ಸಂಖ್ಯೆಗಳನ್ನು ಮಾತ್ರ ಕಡತದಲ್ಲಿ ದಾಖಲಿಸಿ ವಂಚಿಸಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!
2025 ರ ಏಪ್ರಿಲ್ ನಲ್ಲಿ ತ್ರೈಮಾಸಿಕ ಪರಿಶೀಲನೆ ನಡೆಸಿದ್ದು, ಪರಿವರ್ತನೆ ತೈಲದಲ್ಲಿ 89,270 ಲೀಟರ್ ಕೊರತೆ ಕಂಡು ಬಂದಿದ್ದು 56,67,864 ರೂ. ನಷ್ಟ ಉಂಟಾಗಿದೆ. ಅಷ್ಟೇ ಅಲ್ಲದೇ 72.58 ಲಕ್ಷ ರೂ.ಮೌಲ್ಯದ 102 ಪರಿವರ್ತಕಗಳು ಬಫರ್ ಸ್ಟಾಕ್ ನಿಂದ ಕಣ್ಮರೆಯಾಗಿದ್ದವು. ಇದರಲ್ಲದೇ 12.75 ಲಕ್ಷ ರೂ. ಮೌಲ್ಯದ 21 ಪರಿವರ್ತಕಗಳನ್ನು ಲೆಡ್ಜರ್ ನಲ್ಲಿ ದುರಸ್ಥಿದಾರರಿಗೆ ಇನ್ ವಾಯ್ಸ್ ಮಾಡಿದಂತೆ ದಾಖಲಾಗಿದ್ದರೂ ವಾಸ್ತವದಲ್ಲಿ ದುರಸ್ಥಿದಾರರಿಗೆ ಹಸ್ತಾಂತರವಾಗಿರಲಿಲ್ಲ. ಈ ರೀತಿಯಲ್ಲಿ ಒಟ್ಟು 3.85 ಕೋಟಿ ರೂ. ಮೌಲ್ಯದ ಸಾಮಾಗ್ರಿಗಳನ್ನು ದುರುಪಯೋಗ ಮಾಡಲಾಗಿದೆ ಎಂಬುದು ಪರಿಶೀಲನೆಯಿಂದ ದೃಢಪಟ್ಟಿದ್ದು ಕಾನೂನು ಕ್ರಮ ಜರುಗಿಸಬೇಕೆಂದು ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕಿರಣ್ ಇದೀಗ ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎಫ್‌ಐಆರ್ ದಾಖಲಾಗುತ್ತಿದ್ದಂತೆ ಬೆಸ್ಕಾಂ ಹರಿಹರ ಉಗ್ರಾಣಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೂರುದಾರ ಇಇ ರವಿಕುಮಾರ್ ನಿಂದ ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಂಧನ ಇಲಾಖೆಯ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಇದೇ ರೀತಿ ಗೋಲ್‌ಮಾಲ್ ಆಗಿದೆ ಎಂಬ ಆರೋಪ ಕೂಡಾ ಕೇಳಿ ಬಂದಿದೆ.
ಕೆಪಿಟಿಸಿಎಲ್ ಅಡಿಯಲ್ಲಿ ಬರುವ ಬೆಸ್ಕಾಂ, ಎಸ್ಕಾಂ ಜೆಸ್ಕಾಂ ಸೇರಿದಂತೆ ಎಲ್ಲಾ ನಿಗಮಗಳಲ್ಲಿ ಕೂಡ ತನಿಖೆ ನಡೆಸಿದರೆ ಇನ್ನು ಹೆಚ್ಚಿನ ಅವ್ಯವಹಾರ ಬೆಳಕಿಗೆ ಬರುತ್ತದೆ ಎಂದು ಸಾಮಾಜಿಕ ಹೋರಾಟಗಾರ ಗಿರೀಶ್ ಎಸ್ ದೇವರಮನಿ ತಿಳಿಸಿದ್ದಾರೆ.
ದಾವಣಗೆರೆ: ದೇಶದೆಲ್ಲೆಡೆ ಗಣೇಶ ಚತುರ್ಥಿಗೆ ಭರ್ಜರಿಯಾಗಿ ಆಚರಣೆ ನಡೆಯುತ್ತಿದೆ. ಅಲ್ಲದೆ ಈಗಾಗಲೇ ಬಹುತೇಕ ಗಣೇಶ ಮೆರವಣಿಗೆಗಳು ಮುಗಿದು ಹೋಗಿವೆ. ಆದರೆ ದಾವಣಗೆರೆಯಲ್ಲಿ ಮಾತ್ರ ಇನ್ನೂ ಡಿಜೆಗಾಗಿ ಫೈಟಿಂಗ್ ಮಾಡುತ್ತಲೇ ಇದ್ದಾರೆ. ಇತ್ತ ಡಿಜೆಯನ್ನೇ ರಾಜಕೀಯವಾಗಿ ಬಳಕೆ ಮಾಡಿದಕೊಂಡ ರಾಜಕಾರಣಿಗಳು ಡಿಜೆಗಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಅಲ್ಲದೆ ಯುವ ಜನತೆಯಲ್ಲಿ ಗೊಂದಲ ಸೃಷ್ಟಿ ಮಾಡುವ ಕೆಲಸಗಳಾಗುತ್ತಿವೆ.
ಬೆಣ್ಣೆ ನಗರಿ ದಾವಣಗೆರೆಯಲ್ಲಿ (Davanagere) ಗಣೇಶ ಮೆರವಣಿಗೆಯಲ್ಲಿ ಸೃಷ್ಟಿಯಾದ ಡಿಜೆ (DJ) ಗೊಂದಲ, ಗಣೇಶ ಪ್ರತಿಷ್ಠಾಪನೆಗಿಂತ ಮುಂಚಿತವಾಗಿ ದಾವಣಗೆರೆ ಯುವಜನತೆ ಡಿಜೆ ಹಾಕಿ ಅದ್ದೂರಿಯಾಗಿ ಗಣೇಶ ಮೆರವಣಿಗೆ ಮಾಡಿ ಎಂಜಾಯ್ ಮಾಡಿಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದರು. ಆದರೆ ಕಳೆದ ಬಾರಿ ಗಣೇಶೋತ್ಸವ ಮೆರವಣಿಗೆಯಲ್ಲಿ ಬೇತೂರು ರಸ್ತೆಯಲ್ಲಿ ಕಲ್ಲು ತೂರಾಟವಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಈದ್ ಮಿಲಾದ್ ಹಾಗೂ ಗಣೇಶ ಮೆರವಣಿಗೆಯಲ್ಲಿ ಡಿಜೆ ಯನ್ನು ಸಂಪೂರ್ಣ ಬ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: ಭೋವಿ ನಿಗಮದಲ್ಲಿ 60% ಕಮಿಷನ್, ಅಧ್ಯಕ್ಷರಿಂದಲೇ ಬೇಡಿಕೆ – ವಿಡಿಯೋ ರಿಲೀಸ್
ಇದರಿಂದ ಯುವಜನತೆ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಡಿಜೆ ಮಾಲೀಕರು ಹಾಗೂ ಯುವಜನತೆ, ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರಿಗೆ ಡಿಜೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಸಚಿವರು ಡಿಸಿ, ಎಸ್‌ಪಿ ನಿರ್ಧಾರ ಮಾಡುತ್ತಾರೆ ವಿನಃ ನಾನೇನು ಮಾಡೋಕೆ ಆಗೋದಿಲ್ಲ ಎಂದು ಹೇಳಿದ್ದಾರೆ. ಆದರೆ ಇತ್ತ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಮಾತ್ರ ಯಾವುದೇ ಕಾರಣಕ್ಕೂ ಡಿಜೆಗೆ ಅನುಮತಿ ನೀಡೋದಿಲ್ಲ. ಈಗಾಗಲೇ ಆದೇಶ ಹೊರಡಿಸಿದ್ದು, ಅದೇಶವನ್ನು ಮೀರಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ನಡೆಯಲಾರದ ನಾಣ್ಯಗಳು ಚಾಲ್ತಿಗೆ ಬರೋಕೆ ದಸರಾ ಬಗ್ಗೆ ಮಾತು – ಪ್ರಿಯಾಂಕ್ ಖರ್ಗೆ
ಇನ್ನು, ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಡಿಜೆಗೆ ಪರ್ಮಿಷನ್ ನೀಡಲಾಗಿದೆ ಎಂದು ವೈರಲ್ ಆಗುತ್ತಿದ್ದು, ಇದನ್ನು ನಂಬಿ ಬಸವನಾಳ್ ಗೊಲ್ಲರಹಟ್ಟಿ ಗ್ರಾಮದಲ್ಲಿ ಡಿಜೆ ಹಾಕಿದ್ದು, ಪೊಲೀಸರು ಡಿಜೆ ಸೌಂಡ್ ಸಿಸ್ಟಮ್ ಹಾಗೂ ಲಾರಿಯನ್ನು ಸೀಜ್ ಮಾಡಿದ್ದಾರೆ. ಅಲ್ಲದೇ ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಆದರೆ ಸುಖಾ ಸುಮ್ಮನೆ ರಾಜಕೀಯ ಮುಖಂಡರು ಡಿಜೆಗೆ ಅನುಮತಿ ನೀಡಲಾಗಿದೆ. ಇದು ನಮ್ಮ ಹೋರಾಟದ ಫಲ ಎಂದು ಪೋಸ್ಟ್ರ್‌ಗಳನ್ನು ಹಾಕುತ್ತಿದ್ದು. ಇದು ಗೊಂದಲವನ್ನು ಸೃಷ್ಟಿ ಮಾಡಿದೆ. ಆದರೆ ಡಿಜೆಗೆ ಮಾತ್ರ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ನೀಡಿಲ್ಲ. ಇದರಿಂದ ಯುವಜನತೆ ಗೊಂದಲದಲ್ಲಿ ಇದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಗಳು ಮಾಡಿದ ಆದೇಶ ವಾಪಪ್ ಪಡೆಯಲು ಆಗೋದಿಲ್ಲ. ಡಿಜೆ ಹಾಕುವುದರಿಂದ ಪರಿಸರಕ್ಕೆ ತೊಂದರೆಯಾಗುವುದರ ಜೊತೆಗೆ ಜನರ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಸುಖಾಸುಮ್ಮನೆ ಯುವಜನತೆಯಲ್ಲಿ ಗೊಂದಲ ಮೂಡಿಸುವುದನ್ನು ರಾಜಕೀಯ ಮುಖಂಡರು ಬಿಡಬೇಕು ಎಂದು ಪರಿಸರ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಜಿಲ್ಲಾಡಳಿತ ಡಿಜೆಗೆ ಅನುಮತಿ ನೀಡಿಲ್ಲ. ಏನಾದರೂ ರಾಜಕೀಯ ಮುಖಂಡರ ಮಾತು ನಂಬಿ ಡಿಜೆ ಹಾಕಿದ್ರೆ ಕೇಸ್ ಬೀಳೋದಂತು ಗ್ಯಾರಂಟಿ.
ಮಟ್ಟಿಕಲ್‌ನಲ್ಲಿ ಅಫ್ಜಲ್ ಖಾನ್‌ನನ್ನು ಛತ್ರಪತಿ ಶಿವಾಜಿ ಕೊಂದ ಫ್ಲೆಕ್ಸ್ ಹಾಕಲಾಗಿತ್ತು. ಎಚ್ಚೆತ್ತ ಪೊಲೀಸರು ತಕ್ಷಣ ಫ್ಲೆಕ್ಸ್ ತೆರವುಗೊಳಿಸಿದ್ದಾರೆ. ತೆರವು ಮಾಡಿದ್ದನ್ನು ವಿರೋಧಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅದರಲ್ಲಿ ಹಿಂದೂ ಜಾಗರಣ ವೇದಿಕೆ ರಾಜ್ಯ ದಕ್ಷಿಣ ವಿಭಾಗೀಯ ಸಹ ಸಂಚಾಲಕ ಸತೀಶ್ ಪೂಜಾರಿ ಮುಂಚೂಣಿಯಲ್ಲಿದ್ದ.
ಪ್ರಚೋದನೆ ಮಾಡಿದ್ದಾರೆ ಎಂದು ಅರೋಪ ಹಿನ್ನೆಲೆ ಸತೀಶ್ ಪೂಜಾರಿಯನ್ನು ದಾವಣಗೆರೆ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧನ ಬೆನ್ನಲ್ಲೇ ಠಾಣೆ ಮುಂದೆ ಹಲವಾರು ಹಿಂದೂ ಕಾರ್ಯಕರ್ತರು ಜಮಾಯಿಸಿದ್ದರು.
ಸತೀಶ್ ಪೂಜಾರಿಯನ್ನು ಬಿಡುಗಡೆ ಮಾಡುವವರೆಗೂ ಸ್ಥಳದಿಂದ ಹೋಗೋದಿಲ್ಲ ಎಂದು ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಎಎಸ್ಪಿ ಪರಮೇಶ್ವರಪ್ಪ, ಡಿವೈಎಸ್‌ಪಿ ಬಸವರಾಜ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು. ಕೊನೆಗೆ ಸ್ಟೇಷನ್ ಬೇಲ್ ಮೇಲೆ ಸತೀಶ್ ಪೂಜಾರಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ದಾವಣಗೆರೆ: ನಿತ್ಯ ಬಿಳಿ ಬಣ್ಣದ ಮೊಟ್ಟೆ ಇಡುತ್ತಿದ್ದ ಕೋಳಿ, ಇದ್ದಕ್ಕಿದ್ದಂತೆ ನೀಲಿ ಬಣ್ಣದ ಮೊಟ್ಟೆ ಇಟ್ಟು ಅಚ್ಚರಿ ಮೂಡಿಸಿದ ಘಟನೆ ಚನ್ನಗಿರಿಯ (Channagiri) ನಲ್ಲೂರ ಗ್ರಾಮದಲ್ಲಿ ನಡೆದಿದೆ.
ಸೈಯದ್ ನೂರ್ ಎಂಬವರಿಗೆ ಸೇರಿದ ನಾಟಿ ಕೋಳಿ ನೀಲಿ ಬಣ್ಣದ ಮೊಟ್ಟೆ (Blue Egg) ಇಟ್ಟಿದೆ. ಸೈಯದ್ ಮನೆಯಲ್ಲಿ ಹತ್ತು ಕೋಳಿಗಳಿವೆ. ಇದರಲ್ಲಿ ಒಂದು ಕೋಳಿ ಇದ್ದಕ್ಕಿದ್ದಂತೆ ನೀಲಿ ಬಣ್ಣದ ಮೊಟ್ಟೆ ಇಟ್ಟಿದೆ. ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಮೊಟ್ಟೆಯನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆಯಲ್ಲಿ ಹಸುಗೂಸನ್ನು ಹತ್ಯೆಗೈದಿದ್ದ ಪಾಪಿ ತಾಯಿ ಅರೆಸ್ಟ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಚನ್ನಗಿರಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅಶೋಕ, ಮೆದೊಜೀರಕಾಂಗದಲ್ಲಿ ಬಿಲಿವರ್ಡಿನ್ ಎಂಬ ವರ್ಣ ದ್ರವ್ಯದ ಕಾರಣಕ್ಕೆ ನೀಲಿ ಬಣ್ಣ ಬಂದಿರುವ ಸಾದ್ಯತೆ ಇದೆ. ಮೊಟ್ಟೆಯ ಮೇಲ್ಭಾಗ ಮಾತ್ರ ನೀಲಿ. ಉಳಿದಂತೆ ಮೊಟ್ಟೆ ಮಾಮೂಲಾಗಿ ಇರುತ್ತದೆ. ಹೀಗೆ ನಿರಂತರವಾಗಿ ನೀಲಿ ಮೊಟ್ಟೆ ಹಾಕಿದ್ದರೇ ವೈಜ್ಞಾನಿಕವಾಗಿ ಪರಿಶೀಲನೆ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಜಮೀನಿನಲ್ಲಿ ಕೆಲಸ ಮಾಡ್ತಿದ್ದ ರೈತನ ಮೇಲೆ ಚಿರತೆ ದಾಳಿ