Tag: ದಾಳಿ

  • ನ್ಯೂಸ್‌ಕ್ಲಿಕ್ ಆನ್‌ಲೈನ್ ಪೋರ್ಟಲ್ ಪತ್ರಕರ್ತರ ಮನೆ ಮೇಲೆ ದೆಹಲಿ ಪೊಲೀಸ್ ದಾಳಿ

    ನ್ಯೂಸ್‌ಕ್ಲಿಕ್ ಆನ್‌ಲೈನ್ ಪೋರ್ಟಲ್ ಪತ್ರಕರ್ತರ ಮನೆ ಮೇಲೆ ದೆಹಲಿ ಪೊಲೀಸ್ ದಾಳಿ

    ನವದೆಹಲಿ: ಚೀನಾ (China) ಜೊತೆಗೆ ಆರ್ಥಿಕ ಸಂಬಂಧ ಹೊಂದಿರುವ ಆರೋಪದ ಮೇಲೆ ನ್ಯೂಸ್‌ಕ್ಲಿಕ್ (NewsClick) ಆನ್‌ಲೈನ್ ಪೋರ್ಟಲ್‌ಗೆ (Online Portal) ಸಂಬಂಧಿಸಿದ ಪತ್ರಕರ್ತರು (Journalist) ಮತ್ತು ಉದ್ಯೋಗಿಗಳ ಮನೆಗಳ ಮೇಲೆ ಮಂಗಳವಾರ ಬೆಳಗ್ಗೆ ದೆಹಲಿ ಪೊಲೀಸರ ವಿಶೇಷ ತಂಡ ದಾಳಿ (Raid) ನಡೆಸಿದೆ. 100ಕ್ಕೂ ಹೆಚ್ಚು ಸ್ಥಳಗಳಲ್ಲಿ 500ಕ್ಕೂ ಹೆಚ್ಚು ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

    ಅಕ್ಟೋಬರ್ 2 ರಂದು ದೆಹಲಿ ಪೊಲೀಸ್ (Delhi Police) ವಿಶೇಷ ಕೋಶದ ಹಿರಿಯ ಅಧಿಕಾರಿಗಳ ಸಭೆ ನಡೆದಿದ್ದು, ಪ್ರಕರಣವನ್ನು ಮುಂದಕ್ಕೆ ಕೊಂಡೊಯ್ಯುವ ಬಗ್ಗೆ ನಿರ್ಧರಿಸಿತ್ತು. ಅಂತಯೇ ದೆಹಲಿ, ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್ ಮತ್ತು ಮುಂಬೈನ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ಇದನ್ನೂ ಓದಿ: ಬಾಲ್ಯ ವಿವಾಹದ ವಿರುದ್ಧ ಸಮರ – ಮತ್ತೆ 800ಕ್ಕೂ ಅಧಿಕ ಮಂದಿಯ ಬಂಧನ

    ಮೂಲಗಳ ಪ್ರಕಾರ ದಾಳಿಗೆ ಒಳಗಾದವರ ಹೆಸರುಗಳನ್ನು ಎ, ಬಿ, ಸಿ ಎಂದು ವರ್ಗಗಳಾಗಿ ವಿಂಗಡಿಸಲಾಗಿತ್ತು. ಎ ವರ್ಗಕ್ಕೆ ಸೇರಿದವರನ್ನು ಬಂಧಿಸಲಾಗಿದೆ. ಬಿ ಮತ್ತು ಸಿ ನ್ಯೂಸ್ ಪೋರ್ಟಲ್‌ನ ಪತ್ರಕರ್ತರ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳಿಂದ ಡೇಟಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನ್ಯೂಸ್‌ಕ್ಲಿಕ್‌ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರನ್ನು ವಿಚಾರಣೆಗಾಗಿ ದೆಹಲಿ ಪೊಲೀಸ್ ವಿಶೇಷ ಸೆಲ್ ಕಚೇರಿಗೆ ಕರೆತರಲಾಯಿತು. ಇದನ್ನೂ ಓದಿ: ಇರುವುದೊಂದೇ ಸನಾತನ ಧರ್ಮ, ಉಳಿದೆಲ್ಲವೂ ಪಂಥಗಳು: ಯೋಗಿ

    ಆಗಸ್ಟ್ 17ರಂದು ಕಟ್ಟುನಿಟ್ಟಾದ ಭಯೋತ್ಪಾದನಾ-ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಾದ ಪ್ರಕರಣವನ್ನು ಆಧರಿಸಿ ದೆಹಲಿಯ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದೆಹಲಿ ಮತ್ತು ನೋಯ್ಡಾ ಮತ್ತು ಗಾಜಿಯಾಬಾದ್‌ನ ನೆರೆಯ ಪ್ರದೇಶಗಳಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ದಾಳಿ ನಡೆಸಿತು. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆದರೆ ಕೆಲವು ಪತ್ರಕರ್ತರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಿಹಾರ ಜಾತಿ ಸಮೀಕ್ಷೆ ವರದಿ ಬಿಡುಗಡೆ; ಜಾತಿ ಹೆಸರಲ್ಲಿ ದೇಶ ವಿಭಜಿಸುವ ಪ್ರಯತ್ನವೆಂದು ಮೋದಿ ವಾಗ್ದಾಳಿ

    ಮೂರು ವರ್ಷಗಳ ಅವಧಿಯಲ್ಲಿ ಚೀನಾದೊಂದಿಗೆ ಸಂಪರ್ಕ ಹೊಂದಿದ ಸಂಸ್ಥೆಗಳಿಂದ ನ್ಯೂಸ್ ಪೋರ್ಟಲ್ 38.05 ಕೋಟಿ ರೂ.ಗಳನ್ನು ಪಡೆದಿದೆ ಎಂದು ಇಡಿ ಈ ಹಿಂದೆ ಆರೋಪಿಸಿತ್ತು. ಹೀಗೆ ಸ್ವೀಕರಿಸಿದ ಹಣವನ್ನು ಗೌತಮ್ ನವ್ಲಾಖಾ ಮತ್ತು ಹಕ್ಕುಗಳ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಸಹಚರರು ಸೇರಿದಂತೆ ಹಲವಾರು ವಿವಾದಾತ್ಮಕ ಪತ್ರಕರ್ತರಿಗೆ ಹಂಚಲಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಭಯೋತ್ಪಾದಕರಿಗೆ ಕಾಂಗ್ರೆಸ್‌ ಮುಕ್ತ ಅವಕಾಶ ಕೊಟ್ಟಿದೆ; ಉದಯಪುರ ಟೈಲರ್‌ ಹತ್ಯೆ ಖಂಡಿಸಿದ ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಯೋತ್ಪಾದಕ ಚಟುವಟಿಕೆ- 6 ರಾಜ್ಯಗಳ 51 ಸ್ಥಳಗಳಲ್ಲಿ NIA ದಾಳಿ

    ಭಯೋತ್ಪಾದಕ ಚಟುವಟಿಕೆ- 6 ರಾಜ್ಯಗಳ 51 ಸ್ಥಳಗಳಲ್ಲಿ NIA ದಾಳಿ

    ನವದೆಹಲಿ: ಭಯೋತ್ಪಾದಕರು ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ಉತ್ತರದ ರಾಜ್ಯಗಳಲ್ಲಿ ಕಾರ್ಯಚರಿಸುತ್ತಿರುವ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ರಾಜ್ಯಗಳಲ್ಲಿ ಇಂದು ಎನ್‌ಐಎ ಪ್ರಮುಖ ದಾಳಿ ನಡೆಸುತ್ತಿದೆ.

    ಲಾರೆನ್ಸ್ ಬಿಷ್ಣೋಯ್, ಬಾಂಬಿಹಾ ಮತ್ತು ಅರ್ಷದೀಪ್ ದಲ್ಲಾ ಗ್ಯಾಂಗ್‌ಗಳ ಸಹಚರರಿಗೆ ಸೇರಿದ 51 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಮಾರ್ಚ್‌ನಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಕಾರ್ಯಾಚರಿಸುತ್ತಿರುವ ಗ್ಯಾಂಗ್‌ಸ್ಟರ್‌ಗಳಿಗೆ ಸೇರಿರುವ ಆಸ್ತಿಯನ್ನು ಎನ್‌ಐಎ ಮುಟ್ಟುಗೋಲು ಹಾಕಿಕೊಂಡಿತ್ತು. ಇದನ್ನೂ ಓದಿ: ಝಡ್ ಪ್ಲಸ್ ಭದ್ರತೆ ಇದ್ರೂ ಚಂದ್ರಬಾಬು ನಾಯ್ಡುಗೆ ಜೈಲಲ್ಲಿ ಸೊಳ್ಳೆ ಕಾಟ- ಡೆಂಗ್ಯೂ ಭೀತಿ

    ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ 1967ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆಗಸ್ಟ್ 2020ರಂದು ಎನ್‌ಐಎ ಸುಮೊಟೊ ಪ್ರಕರಣವನ್ನು ದಾಖಲಿಸಿದೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸೇನಾ ವಾಹನಗಳ ಮಾಹಿತಿ ರವಾನೆ – ಸೇನೆಯ ಮಾಜಿ ಸಿಬ್ಬಂದಿ ಅರೆಸ್ಟ್

    ದಾಲ ಕಳೆದ 3-4 ವರ್ಷಗಳಿಂದ ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪಂಜಾಬ್‌ನಲ್ಲಿ ಹಲವು ಹತ್ಯೆಗಳನ್ನು ನಡೆಸಿದ್ದಾನೆ. ಅಲ್ಲದೇ ಭಾರತದಲ್ಲಿ ಭಯೋತ್ಪಾದನೆ, ಹಿಂಸಾಚಾರ ಮತ್ತು ದೊಡ್ಡ ಪ್ರಮಾಣದ ಸುಲಿಗೆಯನ್ನು ದಾಲ ಉತ್ತೇಜಿಸುತ್ತಿದ್ದಾನೆ. ಭಯೋತ್ಪಾದಕ ಗ್ಯಾಂಗ್‌ಸ್ಟರ್ ಸಂಚು ಪ್ರಕರಣದಲ್ಲಿ ಎನ್‌ಐಎ ಇದುವರೆಗೆ 16 ಜನರನ್ನು ಬಂಧಿಸಿದೆ. ಈ ಕುರಿತು ಹೆಚ್ಚಿನ ತನಿಖೆಗಳು ಮುಂದುವರಿಯುತ್ತಿವೆ. ಇದನ್ನೂ ಓದಿ: ನಡ್ಡಾ ಪ್ರಾರ್ಥನೆ ವೇಳೆ ಗಣೇಶ ಪೆಂಡಾಲ್‍ನಲ್ಲಿ ಅಗ್ನಿ ದುರಂತ – ಪವಾಡದಂತೆ ಸುರಿದ ಮಳೆಯಿಂದ ತಪ್ಪಿದ ಅನಾಹುತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖಾಕಿ ತೊಟ್ಟವರಿಗೆ ಕಚ್ಚುವ ತರಬೇತಿ- ಡ್ರಗ್ಸ್ ದಾಳಿ ವೇಳೆ ಪೊಲೀಸ್‌ ಟೀಂಗೆ ನಾಯಿಗಳ ಕಾಟ

    ಖಾಕಿ ತೊಟ್ಟವರಿಗೆ ಕಚ್ಚುವ ತರಬೇತಿ- ಡ್ರಗ್ಸ್ ದಾಳಿ ವೇಳೆ ಪೊಲೀಸ್‌ ಟೀಂಗೆ ನಾಯಿಗಳ ಕಾಟ

    ತಿರುವನಂತಪುರಂ: ವ್ಯಕ್ತಿಯೊಬ್ಬ ಡ್ರಗ್ಸ್ ಮಾರಾಟ ಮಾಡುತ್ತಿದ್ದಾನೆ ಎಂಬುದನ್ನು ಅರಿತ ಪೊಲೀಸರು ಆತನ ಮನೆ ಮೇಲೆ ದಾಳಿ ಮಾಡಲು ಹೋದಾಗ ನಾಯಿಗಳ ಕಾಟ ಎದುರಿಸಿದ ಪ್ರಸಂಗವೊಂದು ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

    ಖಾಕಿ ತೊಟ್ಟು ಯಾರೇ ಬಂದರೂ ಕಚ್ಚುವಂತೆ ನಾಯಿಗಳಿಗೆ ತರಬೇತಿ (Trained To Bite Anyone In Khaki) ನೀಡಲಾಗಿತ್ತು. ಅಂತೆಯೇ ಇತ್ತ ದಾಳಿಗೆ ಬಂದ ಪೊಲೀಸರಿಗೆ ಅವುಗಳು ಅಡ್ಡಿ ಉಂಟುಮಾಡಿದವು.

    ಏನಿದು ಘಟನೆ..?: ಭಾನುವಾರ ಪೊಲೀಸರು ಶಂಕಿತನ ಮನೆಗೆ ಪರಿಶೀಲನೆಗೆ ತೆರಳಿದ್ದಾರೆ. ಈ ವೇಳೆ ಒಂದಷ್ಟು ನಾಯಿಗಳು ಕಚ್ಚಲು ಬಂದವು. ಆಗ ಪೊಲೀಸರು ನಾಯಿಗಳಿಂದ ಪಾರಾಗಲು ಯತ್ನಿಸಿದರೆ, ಇತ್ತ ಆರೋಪಿಗಳು ತಪ್ಪಿಸಿಕೊಂಡು ಹೋಗಲು ಸಾಧ್ಯವಾಯಿತು. ಈ ನಡುವೆಯೂ ನಾಯಿಗಳನ್ನು ಎದುರಿಸಿ ವ್ಯಕ್ತಿಯ ಮನೆಯಿಂದ 17 ಕಿ.ಗ್ರಾಂಗಳಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಕೊಟ್ಟಾಯಂ ಎಸ್‍ಪಿ ಕೆ ಕಾರ್ತಿಕ್ ಐಪಿಎಸ್, ಗಾಂಧಿನಗರ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಒಳಗೊಂಡ ಶೋಧ ತಂಡವು ಸ್ಥಳಕ್ಕೆ ಆಗಮಿಸಿದಾಗ ಮಧ್ಯರಾತ್ರಿಯಾಗಿತ್ತು. ವ್ಯಕ್ತಿ ಮನೆಯಲ್ಲಿ ಇಷ್ಟೊಂದು ನಾಯಿಗಳು ಇರುತ್ತವೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಆದ್ದರಿಂದ ಆರಂಭದಲ್ಲಿ ಸರಿಯಾದ ಹುಡುಕಾಟ ನಡೆಸುವಲ್ಲಿ ವಿಫಲರಾದೆವು. ಅದೃಷ್ಟವಶಾತ್, ನಾಯಿಗಳಿಂದ ಯಾವುದೇ ಅಧಿಕಾರಿಗಳಿಗೆ ಗಾಯಗಳಾಗಿಲ್ಲ ಎಂದರು.

    ಆರೋಪಿಯು ಖಾಕಿಯನ್ನು ನೋಡಿ ನಾಯಿಗಳಿಗೆ ಕಚ್ಚುವ ತರಬೇತಿಯನ್ನು ನೀಡಿದ್ದನು. ಬಿಎಸ್‍ಎಫ್‍ನಿಂದ ನಿವೃತ್ತನಾದ ವ್ಯಕ್ತಿಯಿಂದ ನಾಯಿ ನಿರ್ವಹಣೆಯ ಕುರಿತು ತರಬೇತಿ ಪಡೆದಿದ್ದನು. ಆದರೆ ಖಾಕಿ ಧರಿಸಿದವರನ್ನೇ ನಾಯಿಗಳು ಕಚ್ಚುವಂತೆ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಅವನು ಉತ್ತರಿಸಿಲ್ಲ. ಶ್ವಾನ ತರಬೇತುದಾರನ ಸೋಗಿನಲ್ಲಿ ಆರೋಪಿಗಳು ಮಾದಕ ವಸ್ತು ಮಾರಾಟ ಮಾಡುತ್ತಿದ್ದು, ಸ್ಥಳದಿಂದ 17 ಕೆಜಿಗೂ ಅಧಿಕ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ತಿಳಿಸಿದ್ದಾರೆ.

    ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಬಾಡಿಗೆ ಕೊಟ್ಟು ಆ ಮನೆಯಲ್ಲಿ ವಾಸಿಸುತ್ತಿದ್ದನು. ಅಲ್ಲದೆ ತಾನು ನೆಲೆಸಿದ್ದ ಪ್ರದೇಶದಲ್ಲಿ ಎಲ್ಲರಿಗೂ ನಾಯಿ ತರಬೇತುದಾರ ಎಂದೇ ಪರಿಚಿತನಾಗಿದ್ದನು. ಆದ್ದರಿಂದ ಜನರು ದಿನಕ್ಕೆ 1,000 ರೂ. ದರದಲ್ಲಿ ತಮ್ಮ ನಾಯಿಗಳನ್ನು ಅವನೊಂದಿಗೆ ಬಿಡುತ್ತಿದ್ದರು. ಸದ್ಯ ಸುಮಾರು 13 ನಾಯಿಗಳು ಅಲ್ಲಿದ್ದು, ಅವುಗಳ ಮಾಲೀಕರನ್ನು ಗುರುತಿಸಿದ ಬಳಿಕ ಹಸ್ತಾಂತರಿಸಲಾಗುವುದು. ಅಲ್ಲದೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದರು.

    ನಾವು ಮೊದಲು ಆರೋಪಿಗಳನ್ನು ಹಿಡಿಯಬೇಕು ಮತ್ತು ನಂತರ ಯಾರಾದರೂ ದಂಧೆಯಲ್ಲಿ ಭಾಗಿಯಾಗಿದ್ದಾರೆಯೇ ಎಂದು ಕಂಡುಹಿಡಿಯಬೇಕು ಎಂದು ಅಧಿಕಾರಿ ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮಾ ರಂಗದಲ್ಲಿ ಮತ್ತೆ ಡ್ರಗ್ಸ್ ಸದ್ದು: ನಟ ನವದೀಪ್ ಮನೆಯ ಮೇಲೆ ದಾಳಿ

    ಸಿನಿಮಾ ರಂಗದಲ್ಲಿ ಮತ್ತೆ ಡ್ರಗ್ಸ್ ಸದ್ದು: ನಟ ನವದೀಪ್ ಮನೆಯ ಮೇಲೆ ದಾಳಿ

    ಚಿತ್ರೋದ್ಯಮದಲ್ಲಿ ಹೆಚ್ಚೆಚ್ಚು ಡ್ರಗ್ಸ್ (Drugs) ಪ್ರಕರಣಗಳು ದಾಖಲಾಗುತ್ತಿದ್ದು, ಇದೀಗ ತೆಲುಗಿನ ನಟ ನವದೀಪ್ (Navdeep) ಮನೆಯ ಮೇಲೆ ಡ್ರಗ್ಸ್ ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೊನ್ನೆಯಷ್ಟೇ ಹೋಟೆಲ್ ವೊಂದರ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ನಿರ್ಮಾಪಕನೂ ಸೇರಿದಂತೆ ಹಲವರನ್ನು ಬಂಧಿಸಿದ್ದರು.

    ಈ ಹಿಂದೆಯೂ ತೆಲುಗಿನ ಅನೇಕ ನಟರ ಮೇಲೆ ಡ್ರಗ್ಸ್ ಸೇವಿಸುವ ಆರೋಪ ಕೇಳಿ ಬಂದಿತ್ತು. ನೋಟಿಸ್ ನೀಡಿ ವಿಚಾರಣೆಗೂ ಕರೆಯಿಸಿಕೊಂಡಿದ್ದರು. ಆದರೂ ಚಿತ್ರರಂಗದ ಮೇಲೆ ಪದೇ ಪದೇ ಡ್ರಗ್ಸ್ ಕುರಿತಾಗಿ ಆರೋಪಗಳು ಕೇಳಿ ಬರುತ್ತಿವೆ. ಹಾಗಾಗಿ ಅನೇಕ ಬಾರಿ ದಾಳಿಗಳನ್ನೂ ಮಾಡಲಾಗಿದೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ತಾಯಿಯಾದ ‘ಬಿಗ್‌ ಬಾಸ್‌’ ಮಾಜಿ ಸ್ಪರ್ಧಿ ಆಶಿತಾ ಚಂದ್ರಪ್ಪ

    ಕೇವಲ ತೆಲುಗು ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಮಲಯಾಳಂ ಚಿತ್ರರಂಗದಲ್ಲೂ ಈ ವಿಷಗಾಳಿ ಬೀಸಿದೆ. ಸ್ವತಃ ಕೇರಳದ ಕಮಿಷ್ನರ್ ಪತ್ರಿಕಾಗೋಷ್ಠಿ ನಡೆಸಿ, ಶೂಟಿಂಗ್ ನಡೆಯುವ ಸ್ಥಳದಲ್ಲೇ ಪರಿಶೀಲನೆ ಮಾಡಲಾಗುವುದು ಎಂದು ಎಚ್ಚರಿಸಿದ್ದರು. ಕೆಲ ನಟರು ಶೂಟಿಂಗ್ ಸ್ಥಳದಲ್ಲೇ ಡ್ರಗ್ಸ್ ಸೇವಿಸಿದ್ದರ ಬಗ್ಗೆ ದೊಡ್ಡ ಮಟ್ಟದಲ್ಲೂ ಚರ್ಚೆ ನಡೆದಿತ್ತು.

     

    ಕನ್ನಡದಲ್ಲೂ ಈ ಹಿಂದೆ ಹಲವರ ಮೇಲೆ ಡ್ರಗ್ಸ್ ಸೇವಿಸುವ ಆರೋಪ ಕೇಳಿ ಬಂದಿತ್ತು. ರಾಗಿಣಿ, ಸಂಜನಾ ಸೇರಿದಂತೆ ಹಲವರು ಜೈಲು ವಾಸವನ್ನೂ ಅನುಭವಿಸಿ ಬಂದರು. ಇನ್ನೂ ಕೆಲವು ನಟರು ವಿಚಾರಣೆಗೆ ಹಾಜರಾಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ – ಇಬ್ಬರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ – ಇಬ್ಬರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಗುವಾಹಟಿ: ಮಣಿಪುರದಲ್ಲಿ (Manipur) ಶುಕ್ರವಾರ ಶಸ್ತ್ರಸಜ್ಜಿತ ಸ್ಥಳೀಯರು (Armed Locals) ಮತ್ತು ಭದ್ರತಾ ಪಡೆಗಳ (Security Force) ಮಧ್ಯೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ತೆಂಗ್ನೌಪಾಲ್ (Tengnoupal) ಜಿಲ್ಲೆಯ ಪಲ್ಲೆಲ್ ಪಟ್ಟಣದಲ್ಲಿ ಶುಕ್ರವಾರ ಮುಂಜಾನೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಬೆಳಗ್ಗೆ 6 ಗಂಟೆಗೆ ಗುಂಡಿನ ದಾಳಿ ಪ್ರಾರಂಭವಾಗಿದ್ದು, ದಾಳಿಯಲ್ಲಿ ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮೂಲಗಳು ಹೇಳಿವೆ. ಇದನ್ನೂ ಓದಿ: G-20 ಶೃಂಗಸಭೆ ಹಿನ್ನೆಲೆ ಸೆ.14ರ ವರೆಗೆ ಚೀನಾ-ಪಾಕ್ ಗಡಿಯಲ್ಲಿ ಡ್ರಿಲ್ಲಿಂಗ್ ಕಾರ್ಯಾಚರಣೆ ಸ್ಥಗಿತ

    ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಆರ್‌ಎಎಫ್‌, ಅಸ್ಸಾಂ ರೈಫಲ್ಸ್ ಮತ್ತು ಪೊಲೀಸರನ್ನು ಒಳಗೊಂಡ ಭದ್ರತಾ ಪಡೆಗಳು ಪರಿಸ್ಥಿತಿಯನ್ನು ಹತೋಟಿಗೆ ತರಲು ಅಶ್ರುವಾಯು ಶೆಲ್‍ಗಳನ್ನು ಹಾರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಣಿಪುರ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಸರ್ಕಾರದ ವೈಫಲ್ಯದ ವಿರುದ್ಧ ತೌಬಲ್ ಮತ್ತು ಕಾಕ್ಚಿಂಗ್ ಜಿಲ್ಲೆ ಅಪುನ್ಬಾ ಲುಪ್ ರಾಜ್ಯಾದ್ಯಂತ ಬಂದ್ ಘೋಷಿಸಿದ ದಿನವೇ ಗುಂಡಿನ ದಾಳಿ ನಡೆದಿದೆ. ಇದನ್ನೂ ಓದಿ: ಕತ್ತು ಸೀಳಿ ಗಗನಸಖಿ ಹತ್ಯೆಗೈದಿದ್ದ ಆರೋಪಿ – ಲಾಕಪ್‌ನಲ್ಲೇ ಪ್ಯಾಂಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆ.ಆರ್.ಪುರಂ ಸರ್ವೆ ಸೂಪರ್‌ವೈಸರ್ 5 ಲಿಕ್ಕರ್ ಲೈಸೆನ್ಸ್‌ಗಳ ಒಡೆಯ!

    ಕೆ.ಆರ್.ಪುರಂ ಸರ್ವೆ ಸೂಪರ್‌ವೈಸರ್ 5 ಲಿಕ್ಕರ್ ಲೈಸೆನ್ಸ್‌ಗಳ ಒಡೆಯ!

    ಬೆಂಗಳೂರು: ಕೆ.ಆರ್.ಪುರಂ (K.R.Puram) ಸರ್ವೆ ಸೂಪರ್‌ವೈಸರ್ ಕೆ.ಟಿ ಶ್ರೀನಿವಾಸ್‌ಗೆ ಸೇರಿದ 14 ಕಡೆಗಳಲ್ಲಿ ಲೋಕಾಯುಕ್ತ (Lokayukta) ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ (Ride) ನಡೆಸಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಪತ್ತೆ ಮಾಡಿದ್ದಾರೆ.

    ತುಮಕೂರು (Tumakuru) ಹಾಗು ಬೆಂಗಳೂರಿನ (Bengaluru) 14 ಕಡೆ ಲೋಕಾ ದಾಳಿ ನಡೆದಿದ್ದು, 5 ಲಿಕ್ಕರ್ ಲೈಸೆನ್ಸ್‌ಗಳನ್ನು (Liquor License) ಹೆಂಡತಿ ಹಾಗೂ ಸಹೋದರಿಯ ಹೆಸರಿನಲ್ಲಿ ಹೊಂದಿರುವ ಬಗ್ಗೆ ದಾಖಲೆಗಳು ಪತ್ತೆಯಾಗಿದೆ. ಕೆ.ಟಿ ಶ್ರೀನಿವಾಸ್‌ಗೆ ಸೇರಿದ ಎಷ್ಟೆಷ್ಟು ಆಸ್ತಿ ಪತ್ತೆಯಾಗಿದೆ ಎಂಬ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಇದನ್ನೂ ಓದಿ: ಗೃಹಜ್ಯೋತಿಗಾಗಿ ಹಣ ಬಿಡುಗಡೆ – ಎಸ್ಕಾಂಗಳು ಕೇಳಿದ್ದು ಎಷ್ಟು? ಸಿಕ್ಕಿದ್ದು ಎಷ್ಟು?

    ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ?
    * ಅಂದ್ರಳ್ಳಿಯಲ್ಲಿ 2.70 ಲಕ್ಷ ರೂ. ಮೌಲ್ಯದ ನಿವೇಶನ.
    * ಬೆಂಗಳೂರಿನ ಹೆಣ್ಣೂರು ಗ್ರಾಮದಲ್ಲಿ ಸಹೋದರಿ ಕೆ.ಟಿ ಪುಷ್ಪಲತಾ ಹೆಸರಿನಲ್ಲಿ 83.45 ಲಕ್ಷ ರೂ. ಮೌಲ್ಯದ ನಿವೇಶನ.
    * 60 ಲಕ್ಷ ರೂ. ಮೌಲ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ.
    * ರಾಯಪುರ ಗ್ರಾಮದಲ್ಲಿ ಪತ್ನಿ ರಾಜೇಶ್ವರಿ ಹೆಸರಿನಲ್ಲಿ 5 ಲಕ್ಷ ರೂ. ಮೌಲ್ಯದ 5 ಗುಂಟೆ ಜಮೀನು.
    * ಪತ್ನಿ ಹಾಗೂ ಸಹೋದರಿಯ ಹೆಸರಲ್ಲಿ 50 ಲಕ್ಷ ರೂ. ಮೌಲ್ಯದ ಹೋಟೆಲ್ ಉದ್ಯಮ
    * ತುಮಕೂರಿನ ಬಾಣಾವರದಲ್ಲಿ 50 ಲಕ್ಷ ರೂ. ಮೌಲ್ಯದ ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್
    * ಸಹೋದರಿ ಹೆಸರಿನಲ್ಲಿ ತುಮಕೂರಿನ ನಂಜೇಗೌಡನ ಪಾಳ್ಯದಲ್ಲಿ 20 ಲಕ್ಷ ರೂ. ಮೌಲ್ಯದ ಬಾರ್.
    * ಸಹೋದರ ಕೆ.ಟಿ ವೆಂಕಟೇಗೌಡ ಹೆಸರಲ್ಲಿ ತುಮಕೂರಿನ ಭೈರಸಂದ್ರದಲ್ಲಿ 25 ಲಕ್ಷ ರೂ. ಮೌಲ್ಯದ ಬಾರ್ ಅಂಡ್ ರೆಸ್ಟೊರೆಂಟ್.
    * ಪತ್ನಿ ರಾಜೇಶ್ವರಿ ಹೆಸರಲ್ಲಿ ಮತ್ತೊಂದು 40 ಲಕ್ಷ ರೂ. ಮೌಲ್ಯದ ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್
    * 10 ಲಕ್ಷ ರೂ. ಮೌಲ್ಯದ ಎಸ್ ಕ್ರಾಸ್ ಕಾರು.
    * ಕೊತ್ತನೂರಿನಲ್ಲಿ 10 ಲಕ್ಷ ರೂ. ಮೌಲ್ಯದ ನಿವೇಶನ.

    ಒಟ್ಟು ಅಂದಾಜು 3.53 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ ಪತ್ತೆಯಾಗಿದ್ದು, ಲೋಕಾಯುಕ್ತ ಪೊಲೀಸರಿಂದ ತನಿಖೆ ಮುಂದುವರೆದಿದೆ. ಇದನ್ನೂ ಓದಿ: ಆಪರೇಷನ್ ಹಸ್ತ ಬೆನ್ನಲ್ಲೇ ಯಶವಂತಪುರ ಕ್ಷೇತ್ರಕ್ಕೆ ಬಂಪರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಚ್ಚಿನಿಂದ ಹೊಡೆದು ಕರಡಿ ದಾಳಿಯಿಂದ ಪತಿಯನ್ನು ರಕ್ಷಿಸಿದ ಪತ್ನಿ

    ಮಚ್ಚಿನಿಂದ ಹೊಡೆದು ಕರಡಿ ದಾಳಿಯಿಂದ ಪತಿಯನ್ನು ರಕ್ಷಿಸಿದ ಪತ್ನಿ

    ಹಾವೇರಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ರೈತರ ಮೇಲೆ ಏಕಾಏಕಿ ಕರಡಿಯೊಂದು (Bear) ದಾಳಿ (Attack) ಮಾಡಿದ್ದು, ಪತ್ನಿ ಮಚ್ಚಿನಿಂದ (Machete) ಕರಡಿಯನ್ನು ಹೊಡೆದು ಪತಿ ಹಾಗೂ ಸಹೋದರನನ್ನು ರಕ್ಷಿಸಿದ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.

    ಜಿಲ್ಲೆಯ ಶಿಗ್ಗಾಂವಿ (Shiggavi) ತಾಲೂಕಿನ ಬಸವನಕಟ್ಟಿ ಗ್ರಾಮದ ಬಳಿ ಘಟನೆ ನಡೆದಿದ್ದು, ಕರಡಿ ದಾಳಿಯಿಂದಾಗಿ ರೈತ ಬಸೀರಸಾಬ್ (45) ಹಾಗೂ ರಜಾಕ್ (30) ಗಾಯಗೊಂಡಿದ್ದಾರೆ. ಇವರಿಬ್ಬರೂ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕರಡಿ ದಾಳಿ ಮಾಡಿದೆ. ಕರಡಿ ಇಬ್ಬರ ಮೇಲೂ ದಾಳಿ ನಡೆಸಿದ್ದು, ಪತಿ ಬಸೀರಸಾಬ್ ಸವದತ್ತಿ ಜೀವ ಉಳಿಸುವ ಸಲುವಾಗಿ ಪತ್ನಿ ಸಬೀನಾ ಮಚ್ಚಿನಿಂದ 3 ಬಾರಿ ಕರಡಿಯ ಮೇಲೆ ಹೊಡೆದಿದ್ದಾಳೆ. ಇದನ್ನೂ ಓದಿ: ಪತ್ನಿಯನ್ನು ರಕ್ಷಿಸಲು ನೀರಿಗೆ ಧುಮುಕಿದ ಪತಿಯೂ ಸಾವು!

    ಇದರಿಂದ ಗಾಯಗೊಂಡ ಕರಡಿ ಇಬ್ಬರನ್ನೂ ಅಲ್ಲಿಯೇ ಬಿಟ್ಟು ಬೇರೆ ಜಮೀನಿಗೆ ತೆರಳಿ ಅಲ್ಲಿ ಪ್ರಾಣ ಬಿಟ್ಟಿದೆ. ಕರಡಿ ದಾಳಿಯಿಂದ ಗಾಯಗೊಂಡ ಇಬ್ಬರು ಹುಬ್ಬಳ್ಳಿಯ (Hubballi) ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರಿಗೂ ಮುಖ, ಕೈ ಹಾಗೂ ದೇಹದ ಭಾಗಗಳಿಗೆ ಗಾಯಗಳಾಗಿವೆ. ದಾಳಿಯ ವೇಳೆ ಸಬೀನಾ ತನ್ನ ದಿಟ್ಟತನವನ್ನು ಪ್ರದರ್ಶಿಸಿ ಕರಡಿಯೊಂದಿಗೆ ಹೋರಾಡಿ ತನ್ನ ಪತ್ನಿ ಹಾಗೂ ಸಹೋದರನನ್ನು ಕಾಪಾಡಿಕೊಂಡಿದ್ದಾಳೆ. ಇದನ್ನೂ ಓದಿ: ಹೆಂಡತಿ ಮೊಬೈಲ್‌ನಲ್ಲಿ ಮಾತಾಡ್ತಾಳೆ ಅಂತ ಮಕ್ಕಳನ್ನು ಕೊಂದ ಪಾಪಿ ತಂದೆ

    ಕರಡಿ ದಾಳಿಯ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: 3 ವರ್ಷದ ಹಿಂದಿನ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ – ಮಹಿಳೆಯ ಅಸ್ತಿಪಂಜರ ಸೆಪ್ಟಿಕ್ ಟ್ಯಾಂಕ್‍ನಲ್ಲಿ ಪತ್ತೆ

  • ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ – ಪೊಲೀಸರ ಮೇಲೆಯೇ ಗುಂಡಿನ ದಾಳಿ, ಶಸ್ತ್ರಾಸ್ತ್ರ ಧ್ವಂಸ

    ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ – ಪೊಲೀಸರ ಮೇಲೆಯೇ ಗುಂಡಿನ ದಾಳಿ, ಶಸ್ತ್ರಾಸ್ತ್ರ ಧ್ವಂಸ

    ಇಂಪಾಲ: ಸಂಘರ್ಷ ಪೀಡಿತ ಪ್ರದೇಶವಾದ ಮಣಿಪುರದಲ್ಲಿ (Manipur) ಶುಕ್ರವಾರ ರಾತ್ರಿ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪೊಲೀಸ್ (Police) ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಶನಿವಾರ ಮುಂಜಾನೆಯವರೆಗೂ ಗುಂಡಿನ ದಾಳಿ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾ ಮತ್ತು ಚುರಾಚಂದ್‌ಪುರ್ ಜಿಲ್ಲೆಯ ಕಾಂಗ್ವಾಯ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದು, ಗುಂಪು ಗುಂಪಾಗಿ ಸೇರಿಕೊಂಡು ಅಲ್ಲಲ್ಲಿ ಬೆಂಕಿ ಹಚ್ಚುವ ವಿದ್ವಂಸಕ ಕೃತ್ಯಗಳು ನಡೆದಿವೆ. ಭಾರತೀಯ ಸಶಸ್ತ್ರ ಪಡೆ, ಅಸ್ಸಾಂ ರೈಫಲ್ಸ್, ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ (RAF) ಮತ್ತು ರಾಜ್ಯ ಪೊಲೀಸರ ಜಂಟಿ ಪಡೆಗಳು ಇಂಪಾಲದ ಪೂರ್ವ ಜಿಲ್ಲೆಯಲ್ಲಿ ಮಧ್ಯರಾತ್ರಿಯವರೆಗೆ ಧ್ವಜ ಮೆರವಣಿಗೆ (Flag March) ಕೈಗೊಂಡಿದ್ದ ಸಂದರ್ಭ ಅಡ್ವಾನ್ಸ್ ಆಸ್ಪತ್ರೆ ಬಳಿಯ ಅರಮನೆ ಕಾಂಪೌಂಡ್‌ನಲ್ಲಿ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ. ಇದನ್ನೂ ಓದಿ: Biparjoy ಸೈಕ್ಲೋನ್‌ನಿಂದ ತೊಂದರೆಗೆ ಸಿಲುಕಿದ್ದ ಮಗುವನ್ನು ಸಿಮೆಂಟ್ ಚೀಲದಲ್ಲಿ ಸಾಗಿಸಿದ ಸಿಬ್ಬಂದಿ

    ಶುಕ್ರವಾರ ಸಂಜೆ ಸುಮಾರು 1,000 ಜನರ ಗುಂಪು ಸೇರಿಕೊಂಡು ಈ ದುಷ್ಕೃತ್ಯ ಎಸಗಿದ್ದಾರೆ. ಈ ಗುಂಪನ್ನು ಚದುರಿಸುವ ಸಲುವಾಗಿ ಆರ್‌ಎಎಫ್ ಆಶ್ರವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ವಿಸ್ಕಿ ಬಾಟ್ಲಿಯಲ್ಲಿ 13 ಕೋಟಿ ರೂ. ಮೌಲ್ಯದ ಕೊಕೇನ್- ಕೀನ್ಯಾ ಮಹಿಳೆ ಅರೆಸ್ಟ್

    ಮಣಿಪುರ ವಿಶ್ವವಿದ್ಯಾನಿಲಯದ ಬಳಿ ಗುಂಪೊಂದು ನಿರ್ಮಾಣವಾಗಿದ್ದು, ರಾತ್ರಿ 10:40ರ ಸುಮಾರಿಗೆ 200ರಿಂದ 300 ಮಂದಿ ಸೇರಿಕೊಂಡು ಶಾಸಕರ ಮನೆಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಆರ್‌ಎಎಫ್ ತಂಡವು ಈ ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾಗಿದೆ. ಅದೇ ರಾತ್ರಿ ಮತ್ತೊಂದು ಗುಂಪು ಇಂಪಾಲದ ಪಶ್ಚಿಮ ಜಿಲ್ಲೆಯ ಇರಿಂಗ್‌ಬಾಮ್ (Iringbam) ಪೊಲೀಸ್ ಠಾಣೆಯ ಶಸ್ತ್ರಾಸ್ತ್ರಗಳನ್ನು ಧ್ವಂಸಗೊಳಿಸಲು ಪ್ರಯತ್ನಿಸಿದೆ. ಸುಮಾರು 300ರಿಂದ 400 ಮಂದಿ ಪೊಲೀಸ್ ಠಾಣೆಯ ಒಳಗೆ ನುಗ್ಗಿದ್ದು, ಆರ್‌ಎಎಫ್ ತಂಡ ಗುಂಪನ್ನು ಚದುರಿಸಿದೆ. ಅಲ್ಲದೇ 200ರಿಂದ 300 ಜನರ ಗುಂಪೊಂದು ಬಿಜೆಪಿ ಕಚೇರಿಗೆ ಸುತ್ತುವರೆದಿದ್ದು, ಸೇನಾ ಪಡೆಯು ಅದನ್ನು ಚದುರಿಸಿದೆ ಎಂದು ಸೇನಾ ಮೂಲಗಳು ತಿಳಿಸಿದೆ. ಇದನ್ನೂ ಓದಿ: Cyclone Biparjoy: ಗುಜರಾತ್‍ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಸೈಕ್ಲೋನ್

    ಪಶ್ಚಿಮ ಇಂಪಾಲದಲ್ಲಿರುವ ಬಿಜೆಪಿ ಅಧ್ಯಕ್ಷ ಅಧಿಕಾರಿಮಯುಮ್ ಶಾರದಾ ದೇವಿಯವರ ನಿವಾಸವನ್ನೂ ಧ್ವಂಸಗೊಳಿಸಲು ಪ್ರಯತ್ನ ಪಟ್ಟಿದ್ದು, ಅದನ್ನು ಸೇನೆ ಮತ್ತು ಆರ್‌ಎಎಫ್ ತಡೆದಿದೆ. 1,200 ಜನರ ಗುಂಪೊಂದು ಕೇಂದ್ರ ಸಚಿವ ಆರ್‌ಕೆ ರಂಜನ್ ಸಿಂಗ್ (R.K.Ranjan Singh) ಅವರ ಮನೆಯನ್ನು ಸುಟ್ಟುಹಾಕಿದ ಬಳಿಕ ಈ ಘಟನೆ ನಡೆದಿದೆ. ಇದನ್ನೂ ಓದಿ: ಟ್ಯೂಷನ್ ಮುಗಿಸಿ ಬರುತ್ತಿದ್ದಾಗ 10ನೇ ಕ್ಲಾಸ್ ವಿದ್ಯಾರ್ಥಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರು

    ಕಳೆದ ಕೆಲವು ದಿನಗಳಿಂದ ಮಣಿಪುರ ಕೋಮು ಸಂಘರ್ಷವು ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ರಾಜಕಾರಣಿಗಳ ಮನೆ ಹಾಗೂ ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡುವ ಗುರಿಯನ್ನು ಕೆಲ ಗುಂಪುಗಳು ಹೊಂದಿವೆ. ಈ ಹಿನ್ನೆಲೆ ಅಲ್ಲಲ್ಲಿ ಬೆಂಕಿ ಹಚ್ಚುವ ಕಾರ್ಯಗಳು ನಡೆಯುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರ ಶ್ರಮಿಸಬೇಕಿದೆ. ಇದನ್ನೂ ಓದಿ: ವರದಕ್ಷಿಣೆ ಕೇಳಿದ್ದಕ್ಕೆ ವರನನ್ನೇ ಮರಕ್ಕೆ ಕಟ್ಟಿ ಹಾಕಿದ ವಧುವಿನ ಕಡೆಯವ್ರು

  • ಎಂಜಿನಿಯರ್ ಮನೆಯಲ್ಲಿ ಜಿಂಕೆ ಕೊಂಬು ಸಮೇತ 4.75 ಕೋಟಿ ರೂ. ಆಸ್ತಿ ಪತ್ತೆ

    ಎಂಜಿನಿಯರ್ ಮನೆಯಲ್ಲಿ ಜಿಂಕೆ ಕೊಂಬು ಸಮೇತ 4.75 ಕೋಟಿ ರೂ. ಆಸ್ತಿ ಪತ್ತೆ

    – ಅರ್ಧ ಕೆಜಿ ಬಂಗಾರ, 2 ಕೆಜಿ ಬೆಳ್ಳಿ, ಕಂತೆ ಕಂತೆ ನೋಟು ಪತ್ತೆ

    ಹಾವೇರಿ: ರಾಜ್ಯದ ಹಲವೆಡೆ ಬುಧವಾರ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸಿದ್ದು, ಹಾವೇರಿ (Haveri) ನಿರ್ಮಿತಿ ಕೇಂದ್ರ ಎಂಜಿನಿಯರ್ (Engineer) ವಾಗೀಶ್ ಶೆಟ್ಟರ್ ಮನೆಯಲ್ಲಿ ಜಿಂಕೆ ಕೊಂಬು (Deer Horn) ಸಮೇತ ಒಟ್ಟು 4.75 ಕೋಟಿ ರೂ. ಆಸ್ತಿ ಪತ್ತೆಯಾಗಿದೆ.

    ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ನಡೆಸಿ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಅದೇ ರೀತಿ ರಾಣೇಬೆನ್ನೂರು (Ranebennur) ನಗರದಲ್ಲಿರುವ ವಾಗೀಶ್ ಶೆಟ್ಟರ ಮನೆ ಹಾಗೂ ಕಚೇರಿಗೆ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಅರ್ಧ ಕೆಜಿ ಬಂಗಾರ, 2 ಕೆಜಿ ಬೆಳ್ಳಿ, 18.30 ಲಕ್ಷ ರೂ. ಹಣ, ಹಣ ಎಣಿಕೆ ಮಾಡುವ ಯಂತ್ರ, 3 ಕಾರು, 2 ಟ್ರ್ಯಾಕ್ಟರ್, 2 ಬೈಕ್, 8 ಮನೆ ಪತ್ತೆಯಾಗಿದೆ. ಇದನ್ನೂ ಓದಿ: ನಿರ್ಗತಿಕರನ್ನು ಕೆಲಸಕ್ಕೆಂದು ಕರೆದುಕೊಂಡು ಬಂದು ಕೂಡಿಹಾಕಿದ್ದ ದುರುಳ ಅರೆಸ್ಟ್ – 18 ಕಾರ್ಮಿಕರ ರಕ್ಷಣೆ

    ಅಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ 16 ಸೈಟ್, 65 ಎಕರೆ ಭೂಮಿ ಹೊಂದಿರುವ ದಾಖಲೆ ಪತ್ತೆಯಾಗಿದೆ. ವಿಶೇಷವೆಂದರೆ 10 ಇಂಚಿನ ಜಿಂಕೆ ಕೊಂಬು ಕೂಡ ಅವರ ಮನೆಯಲ್ಲಿ ಪತ್ತೆಯಾಗಿದ್ದು, ಒಟ್ಟು 4.75 ಕೋಟಿ ರೂ. ಆಸ್ತಿ ಪತ್ತೆಯಾಗಿದೆ. ಅಧಿಕಾರಿಗಳು ಏಕಕಾಲದಲ್ಲಿ ಕಚೇರಿ, ಮನೆ ಹಾಗೂ ಕಾಂಪ್ಲೆಕ್ಸ್‌ನಲ್ಲಿ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಒಬ್ಬಂಟಿಯಾಗಿ ಸಾಗುವವರನ್ನು ಟಾರ್ಗೆಟ್ ಮಾಡುತ್ತಿದ್ದ ಕುಖ್ಯಾತ ಡಕಾಯಿತಿ ಗ್ಯಾಂಗ್ ಅರೆಸ್ಟ್

  • ಎರಡು ದಿನಗಳ ಹಿಂದೆ ಕಾಡಾನೆ ದಾಳಿಗೆ ಒಳಗಾಗಿದ್ದ ಕಾರ್ಮಿಕ ಆಸ್ಪತ್ರೆಯಲ್ಲಿ ಸಾವು

    ಎರಡು ದಿನಗಳ ಹಿಂದೆ ಕಾಡಾನೆ ದಾಳಿಗೆ ಒಳಗಾಗಿದ್ದ ಕಾರ್ಮಿಕ ಆಸ್ಪತ್ರೆಯಲ್ಲಿ ಸಾವು

    ಮಡಿಕೇರಿ: ಕಳೆದ ಎರಡು ದಿನಗಳ ಹಿಂದೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ (Virajpete) ತಾಲೂಕಿನ ಪಲಿಬೆಟ್ಟ ಗ್ರಾಮದ ಮಸ್ಕಲ್ ಕಾಫಿತೋಟದಲ್ಲಿ ಕಾಡಾನೆ (Wild Elephant) ದಾಳಿಗೆ ಒಳಗಾಗಿದ್ದ ಕಾರ್ಮಿಕ ಬಾಬಿ ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನ (Mysuru) ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಎರಡು ದಿನಗಳ ಹಿಂದೆ ಬಾಬಿ ಮಸ್ಕಲ್ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಡಾನೆಯೊಂದು ಅವರ ಮೇಲೆ ದಾಳಿ ನಡೆಸಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಬಾಬಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಇದೇ ತಿಂಗಳು ಉದ್ಘಾಟನೆಗೊಳ್ಳಬೇಕಿದ್ದ ಸಮುದಾಯ ಭವನದಲ್ಲಿ ಡಬಲ್ ಮರ್ಡರ್

    ಮೃತ ಬಾಬಿ ಕುಟುಂಬಕ್ಕೆ ವಿರಾಜಪೇಟೆಯ ನೂತನ ಶಾಸಕ ಎ.ಎಸ್ ಪೊನ್ನಣ್ಣ (M.S.Ponnanna) ದೂರವಾಣಿ ಮೂಲಕ ಸಂಪರ್ಕ ಮಾಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ತಕ್ಷಣ ತುರ್ತು ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ (Forest Department) ಸೂಚನೆ ನೀಡಿದ ಅವರು, ಸದ್ಯದಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾಡಾನೆಗಳ ಉಪಟಳದ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಆದಷ್ಟು ಬೇಗ ಸಭೆ ಕರೆಯಬೇಕು ಎಂದರು. ಇದನ್ನೂ ಓದಿ: ಮಹಿಳೆಯ ಕತ್ತು ಕೊಯ್ದು ಭೀಕರ ಹತ್ಯೆಗೈದ ಪತಿಯ ಅಣ್ಣ!

    ಕಾಫಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಕಳೆದ ಒಂದು ವಾರದಿಂದ ಕಾಫಿ ತೋಟಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಾನೆಗಳನ್ನು ಬೇರೆಡೆಗೆ ಓಡಿಸುವ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ಮಕ್ಕಳ ಮದುವೆಗೆ ಮುಂದಾಗಿದ್ದ ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ