Tag: ದಾಳಿಂಬೆ

  • ದಾವಣಗೆರೆ | ಫಸಲಿಗೆ ಬಂದಿದ್ದ 7.50 ಲಕ್ಷ ಮೌಲ್ಯದ ದಾಳಿಂಬೆ ಕಳವು

    ದಾವಣಗೆರೆ | ಫಸಲಿಗೆ ಬಂದಿದ್ದ 7.50 ಲಕ್ಷ ಮೌಲ್ಯದ ದಾಳಿಂಬೆ ಕಳವು

    ದಾವಣಗೆರೆ: ಫಸಲಿಗೆ ಬಂದಿದ್ದ 7.50 ಲಕ್ಷ ರೂ. ಮೌಲ್ಯದ ದಾಳಿಂಬೆಯನ್ನು ಕಳ್ಳತನ ಮಾಡಿರುವ ಘಟನೆ ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.ಇದನ್ನೂ ಓದಿ: ಶಿಶು ಮರಣ ತಗ್ಗಿಸಿದ ಅಮೃತ – ಜೀವ ಸಂಜೀವಿನಿಯಾಗಿ ಲೇಡಿಗೋಷನ್ ಹ್ಯೂಮನ್ ಮಿಲ್ಕ್ ಬ್ಯಾಂಕ್

    ಗ್ರಾಮದ ರವಿಕುಮಾರ್ ಎಂಬ ರೈತನಿಗೆ ಸೇರಿದ್ದ ಜಮೀನಿನಲ್ಲಿ ಕಳ್ಳತನ ನಡೆದಿದೆ. 10 ಲಕ್ಷ ರೂ. ಬಂಡವಾಳ ಹೂಡಿ, ಎರಡು ಎಕರೆ ಭೂಮಿಯಲ್ಲಿ ದಾಳಿಂಬೆ ಬೆಳೆದಿದ್ದರು. ಉತ್ತಮ ಫಸಲು ಬಂದಿದ್ದು, ಇನ್ನೆರಡು ದಿನದಲ್ಲಿ ಕಟಾವು ಮಾಡಬೇಕಿತ್ತು. ಆದರೆ ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ಕಳ್ಳರು 7.50 ಲಕ್ಷ ರೂ. ಮೌಲ್ಯದ ದಾಳಿಂಬೆ ಕಳವು ಮಾಡಿದ್ದಾರೆ.

    ಮಾರನೇ ದಿನ ಜಮೀನಿಗೆ ಹೋದ ರೈತನಿಗೆ ದಾಳಿಂಬೆ ಕಳ್ಳತನ ವಿಷಯ ತಿಳಿದು ಸಿಡಿಲು ಬಡಿದಂತಾಗಿದೆ. ಸದ್ಯ ರೈತ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದಷ್ಟು ಬೇಗ ಕಳ್ಳರನ್ನು ಹಿಡಿದು ರೈತನಿಗೆ ನ್ಯಾಯ ಒದಗಿಸುವಂತೆ ಸ್ಥಳೀಯರ ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: F-35 ಫೈಟರ್‌ ಜೆಟ್‌ ರಿಪೇರಿಗೆ ಬ್ರಿಟನ್‌ನಿಂದ ಇಂದು 40 ತಂತ್ರಜ್ಞರ ತಂಡ

  • ರೈತನ ಸೋಗಿನಲ್ಲಿ ಬಂದು ದಾಳಿಂಬೆ ಖರೀದಿ – 6.5 ಲಕ್ಷ ಪಂಗನಾಮ

    ರೈತನ ಸೋಗಿನಲ್ಲಿ ಬಂದು ದಾಳಿಂಬೆ ಖರೀದಿ – 6.5 ಲಕ್ಷ ಪಂಗನಾಮ

    ವಿಜಯಪುರ: ರೈತನ ಸೋಗಿನಲ್ಲಿ ಬಂದು ದಾಳಿಂಬೆ ಖರೀದಿಸಿ 6.5 ಲಕ್ಷ ಹಣ ಕೊಡದೇ ಪರಾರಿಯಾಗಿರುವ ಘಟನೆ ವಿಜಯಪುರ (Vijayapura) ತಾಲೂಕಿನ ಜಂಬಗಿ ಗ್ರಾಮದಲ್ಲಿ ನಡೆದಿದೆ.

    ಜಂಬಗಿ (Jambagi) ನಿವಾಸಿಗಳಾದ ಸುಭಾಸ ಹಿಟ್ನಳ್ಳಿ, ಗುರಪ್ಪಾ ಹಿಟ್ನಳ್ಳಿ ಎಂಬುವವರು ವಂಚನೆಗೆ ಒಳಗಾಗಿದ್ದಾರೆ. ಒಟ್ಟು ನಾಲ್ವರು ಆರೋಪಿಗಳಿದ್ದು, ದಾವಣಗೆರೆ ಮೂಲದವರು ಎಂದು ಗುರುತಿಸಲಾಗಿದೆ. ಓರ್ವನನ್ನು ರಫೀಕ್ ಶೇಖ್ ಎಂದು ಪತ್ತೆಹಚ್ಚಲಾಗಿದೆ.ಇದನ್ನೂ ಓದಿ: ನವಜಾತ ಶಿಶು ಕದ್ದು 50,000 ರೂ.ಗೆ ಮಾರಾಟ – ಮೂವರು ಖತರ್ನಾಕ್‌ ಕಳ್ಳಿಯರು ಅರೆಸ್ಟ್‌

    ವಿಜಯಪುರ ಜಿಲ್ಲೆಯ ರೈತರು ಒಂದೆಡೆ ಮಳೆ ಅಭಾವದಿಂದ ಬೇಸತ್ತಿದ್ದಾರೆ. ಆದರೂ ಕೂಡ ಸಾಲ ಮಾಡಿ ಕಷ್ಟಪಟ್ಟು ಬೆಳೆ ಬೆಳೆದಿದ್ದಾರೆ. ಸುಭಾಸ ಹಿಟ್ನಳ್ಳಿ, ಗುರಪ್ಪಾ ಹಿಟ್ನಳ್ಳಿ ಸಹೋದರರು ತಮ್ಮ ಮೂರು ಎಕರೆ ಜಮೀನಲ್ಲಿ ದಾಳಿಂಬೆ ಬೆಳೆದಿದ್ದರು. ಈ ದಾಳಿಂಬೆಯನ್ನು ಖರೀದಿಸಲು ರೈತರ ಸೋಗಿನಲ್ಲಿ ರಫೀಕ್ ಶೇಖ್ ಸೇರಿದಂತೆ ನಾಲ್ವರು ಖದೀಮರು ಬಂದಿದ್ದರು. ದಾಳಿಂಬೆಯನ್ನ ಖರೀದಿಸಿ ಅರ್ಧ ಹಣ ನೀಡಿ, ಇನ್ನುಳಿದ ಹಣ ನೀಡದೆ 6.5 ಲಕ್ಷ ರೂ. ಪಂಗನಾಮ ಹಾಕಿ ಪರಾರಿಯಾಗಿದ್ದಾರೆ.

    ರಫೀಕ್ ಆಂಡ್ ಗ್ಯಾಂಗ್ ಎರಡು ದಿನದ ಹಿಂದೆ ಜಂಬಗಿ ಗ್ರಾಮದ ಪಕ್ಕದ ನಾಗಠಾಣಾ ಗ್ರಾಮಕ್ಕೆ ಬಂದು ವಾಸ್ತವ್ಯ ಹೂಡಿದ್ದರು. ನಂತರ ದಾಳಿಂಬೆ ಬೆಳೆದಿದ್ದ ಅಲ್ಲಿನ ರೈತರ ಬಗ್ಗೆ ವಿಚಾರಿಸಿದ್ದಾರೆ. ಆಗ ಸುಭಾಸ, ಗುರಪ್ಪ ಸಹೋದರರ ದಾಳಿಂಬೆ ಬೆಳೆಯನ್ನು ಪತ್ತೆ ಹಚ್ಚಿ ಅವರ ಜಮೀನಿಗೆ ತೆರಳಿದ್ದಾರೆ. ಒಟ್ಟು 3 ಎಕರೆ ಜಮೀನಿನ ದಾಳಿಂಬೆಗೆ 12 ಲಕ್ಷ ರೂ. ಹೊಂದಿಸಿದ್ದಾರೆ. ನಂತರ 5.5 ಲಕ್ಷ ರೂ ಹಣ ನೀಡಿ, ಒಳ್ಳೆಯ ದಾಳಿಂಬೆಯ ಒಂದು ಲೋಡ್ ಕೊಂಡೊಯ್ದಿದ್ದಾರೆ. ಮರುದಿನ ಬಂದು ಉಳಿದ ಹಣ ನೀಡಿ ಇನ್ನುಳಿದ 2 ವಾಹನದ ಲೋಡ್ ದಾಳಿಂಬೆಯನ್ನ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿ ಹೋಗಿದ್ದಾರೆ. ಬಳಿಕ ಕರೆ ಮಾಡಿ ಹಣ ಕೇಳಿದರೆ ಯಾವ ದಾಳಿಂಬೆ, ಯಾವ ಹಣ? ಎಂದು ಹೇಳಿದ್ದಾರೆ.

    ರೈತ ಸುಭಾಸ ಹಾಗೂ ಇತರರು ಸೇರಿ ದಾವಣಗೆರೆಯ ಆಜಾದ್‌ನಗರ ಪೊಲೀಸ್ ಠಾಣೆಗೆ ತೆರಳಿ ವಂಚನೆ ಮಾಡಿರುವ ಕುರಿತು ತಿಳಿಸಿದ್ದಾರೆ. ಆಗ ಪೊಲೀಸರು ಖದೀಮರನ್ನು ವಿಚಾರಣೆಗೆ ಕರೆಸಿದಾಗ ನಾವು ಯಾವುದೇ ಹಣ ನೀಡುವುದಿಲ್ಲ, ನಾವು ಯಾವುದೇ ದಾಳಿಂಬೆ ಖರೀದಿ ಮಾಡಿಲ್ಲ ಎಂದು ರೀಲ್ ಬಿಟ್ಟಿದ್ದಾರೆ. ಈ ಕುರಿತು ರೈತ ಸುಭಾಸ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರಫೀಕ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.ಇದನ್ನೂ ಓದಿ: ದಿನ ಭವಿಷ್ಯ: 27-11-2024

  • ಮೂರು ಸಾವಿರ ದಾಳಿಂಬೆ ಗಿಡಗಳ ಸ್ಥಳಾಂತರ- ಕೋಟಿ ರೂ. ಲಾಭ ಗಳಿಸಿ ರೈತನ ಹೊಸ ಸಾಹಸ

    ಮೂರು ಸಾವಿರ ದಾಳಿಂಬೆ ಗಿಡಗಳ ಸ್ಥಳಾಂತರ- ಕೋಟಿ ರೂ. ಲಾಭ ಗಳಿಸಿ ರೈತನ ಹೊಸ ಸಾಹಸ

    ರಾಯಚೂರು: ದಾಳಿಂಬೆ ಬೆಳೆಯಲ್ಲಿ ಒಂದು ಕೋಟಿ ರೂ. ಲಾಭ ಗಳಿಸುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದ ರೈತರೊಬ್ಬರು, ಇದೀಗ ಮೂರು ಸಾವಿರ ದಾಳಿಂಬೆ ಗಿಡಗಳನ್ನು ಬೇರು ಸಮೇತ ಸ್ಥಳಾಂತರಿಸುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.

    ಜಿಲ್ಲೆಯ ಲಿಂಗಸುಗೂರಿನ ರೈತ ಬಸವರಾಜಗೌಡ ಗಣೇಕಲ್ ಅವರು ತಮ್ಮ ಇಪ್ಪತ್ತು ಎಕರೆ ಜಮೀನಿನಲ್ಲಿ ದಾಳಿಂಬೆ ಮತ್ತು ಪಪ್ಪಾಯಿ ಬೆಳೆದಿದ್ದಾರೆ. ಪಪ್ಪಾಯಿಂದ ನಷ್ಟ ಉಂಟಾದರೂ, ದಾಳಿಂಬೆಯಿಂದ ಕೋಟಿ ರೂ. ಲಾಭ ಗಳಿಸಿ, ಇತರರಿಗೆ ಮಾದರಿಯಾಗಿದ್ದರು. ಇದೀಗ ಮತ್ತೊಂದು ಸಾಹಸ ಮಾಡುವ ಮೂಲಕ ರೈತರಿಗೆ ಮಾದರಿಯಾಗಿದ್ದು, ಜಮೀನಿನಲ್ಲಿರುವ ಹೆಚ್ಚುವರಿ ದಾಳಿಂಬೆ ಗಿಡಗಳನ್ನು ಬೇರು ಸಹಿತ ಮತ್ತೊಂದು ಜಮೀನಿಗೆ ಸ್ಥಳಾಂತರಿಸಿ, ಯಶಸ್ವಿಯಾಗಿದ್ದಾರೆ.

    ಈ ಮೂಲಕ ಕೃಷಿ ತಂತ್ರಜ್ಞರು ಮಾಡುವ ಕಾರ್ಯವನ್ನು ರೈತ ಬಸವರಾಜಗೌಡ ಅವರು ತಮ್ಮದೇ ಯೋಜನೆಯೊಂದಿಗೆ ಇಪ್ಪತ್ತು ಲಕ್ಷ ರೂ. ವೆಚ್ಚದಲ್ಲಿ ಗಿಡಗಳನ್ನು ಸ್ಥಳಾಂತರ ಮಾಡಿದ್ದಾರೆ. ಜೆಸಿಬಿ, ಕೂಲಿಕಾರರ ಸಹಾಯದಿಂದ ಮೂರು ಸಾವಿರ ದಾಳಿಂಬೆ ಗಿಡಗಳನ್ನು ಬೇರು ಸಹಿತ ಸ್ಥಳಾಂತರಿಸಲಾಗಿದೆ.

    ರೈತ ಬಸವರಾಜಗೌಡ ಅವರು ಈ ಹಿಂದೆ ಹೆಚ್ಚುವರಿಯಾಗಿದ್ದ 10ಕ್ಕೂ ಹೆಚ್ಚು ಗಿಡಗಳನ್ನು ಸ್ಥಳಾಂತರಿಸಿ, ಉತ್ತಮ ಫಸಲು ಪಡೆದಿದ್ದರು. ಅದೇ ಮಾದರಿಯಲ್ಲಿ ಇದೀಗ 3 ಸಾವಿರ ಗಿಡಗಳನ್ನು ಸ್ಥಳಾಂತರಿಸುತ್ತಿದ್ದಾರೆ. ದಾಳಿಂಬೆಯಿಂದ ನಾಲ್ಕು ವರ್ಷ ಲಾಭ ಗಳಿಸಿ, ಇಳುವರಿ ಕಡಿಮೆಯಾದ ಕಾರಣ ಗಿಡಗಳ ನಡುವೆ ಅಂತರ ಕಾಪಾಡುವುದಕ್ಕಾಗಿ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಗಿಡಗಳನ್ನು ಬೇರು ಸಹಿತ ಕಿತ್ತು ಬೇರೆ ಜಾಗದಲ್ಲಿ ನೆಟ್ಟು ಉತ್ತಮ ಫಸಲು ಪಡೆಯುತ್ತಿದ್ದಾರೆ. ಇದಕ್ಕಾಗಿ ಅಗತ್ಯ ಮಾಹಿತಿ ಪಡೆದು ಗೊಬ್ಬರ ಸಿಂಪರಣೆ ಸೇರಿದಂತೆ ವಿವಿಧ ತಾಂತ್ರಿಕ ನಿಯಮಗಳನ್ನು ಅನುಸರಿಸಿ ಸ್ಥಳಾಂತರ ಕಾರ್ಯ ನಡೆಸಿದ್ದಾರೆ.

  • ದಾಳಿಂಬೆಗೆ ಬಲಿ – ಉಸಿರುಗಟ್ಟಿ ಪುಟ್ಟ ಕಂದಮ್ಮ ಸಾವು

    ದಾಳಿಂಬೆಗೆ ಬಲಿ – ಉಸಿರುಗಟ್ಟಿ ಪುಟ್ಟ ಕಂದಮ್ಮ ಸಾವು

    ಚಂಡೀಗಢ: ದಾಳಿಂಬೆ ಕಾಳು ಶ್ವಾಸಕೋಶದ ನಾಳದಲ್ಲಿ ಸಿಲುಕಿ ಮೂರು ವರ್ಷದ ಪುಟ್ಟ ಕಂದಮ್ಮ ಸಾವನ್ನಪ್ಪಿದ ಘಟನೆ ಹರ್ಯಾಣದ ಫರೀದಾಬಾದ್ ನಲ್ಲಿ ನಡೆದಿದೆ.

    ಮೂರು ವರ್ಷದ ಯಶಿಕಾ (ಸೀತಾ) ದಾಳಿಂಬೆ ಕಾಳುಗಳಿಂದ ಕೊನೆಯುಸಿರೆಳೆದ ಮಗು. ಫರೀದಾಬಾದ್ ನಗರದ ಸೆಕ್ಟೆರ್ 30ರ ನಿವಾಸಿಯಾಗಿರುವ ಡೇವಿಡ್ ಬೈಸಲ್ ಮತ್ತು ಪೂನಂ ದಂಪತಿಯ ಪುತ್ರಿ ಯಶಿಕಾ. ಪುತ್ರಿ ಯಶಿಕಾಗೆ ತಾಯಿ ದಾಳಿಂಬೆ ಕಾಳುಗಳನ್ನು ನೀಡಿದ್ದರು. ಎರಡು ಕೈಗಳಿಂದ ದಾಳಿಂಬೆ ಕಾಳುಗಳನ್ನು ಯಶಿಕಾ ಬಾಯಿಗೆ ಹಾಕಿಕೊಂಡಿದ್ದಾಳೆ. ಕಾಳುಗಳು ಶ್ವಾಸಕೋಶದ ನಾಳದಲ್ಲಿ ಸಿಲುಕಿ ಉಸಿರುಗಟ್ಟಿ ಯಶಿಕಾ ಸಾವನ್ನಪ್ಪಿದ್ದಾಳೆ.

    ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಡೇವಿಡ್ ಅವರ ಮೂರು ಮಕ್ಕಳ ಪೈಕಿ ಯಶಿಕಾ ಚಿಕ್ಕವಳು. ಯಶಿಕಾ ತನ್ನ ಅಕ್ಕ ಮತ್ತು ಅಣ್ಣನೊಂದಿಗೆ ಆಟವಾಡುತ್ತಿದ್ದಾಗ ತಾಯಿ ದಾಳಿಂಬೆ ಹಣ್ಣು ಹಂಚಿಕೊಂಡು ತಿನ್ನುವಂತೆ ಹೇಳಿ ನೀಡಿದ್ದಾರೆ. ಇದೇ ವೇಳೆ ಸಂಬಂಧಿ ಮೀನಾಕ್ಷಿ ಮಕ್ಕಳು ಅವರೊಂದಿಗೆ ಆಡಲು ಸೇರಿಕೊಂಡಿದ್ದಾರೆ. ಈ ವೇಳೆ ದಾಳಿಂಬೆ ಕಾಳುಗಳಿಗಾಗಿ ಮಕ್ಕಳಲ್ಲಿ ಜಗಳ ಆರಂಭಗೊಂಡಿವೆ. ಜಗಳದ ನಡುವೆ ಎರಡು ಕೈ ತುಂಬಾ ದಾಳಿಂಬೆ ತೆಗೆದುಕೊಂಡು ಯಶಿಕಾ ಬಾಯಿಗೆ ಹಾಕಿಕೊಂಡಿದ್ದಾಳೆ. ದಾಳಿಂಬೆ ಬಾಯಿಗೆ ಹಾಕಿಕೊಂಡ ಬಳಿಕ ಒಂದು ಸಾರಿ ನಕ್ಕ ಯಶಿಕಾಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿವೆ.

    ಮಗಳ ಸ್ಥಿತಿ ಕಂಡ ಪೂನಂ ಭಯಗೊಂಡು ಪತಿಗೆ ಫೋನ್ ಮಾಡಿ ವಿಷಯ ತಿಳಿಸಿ ನೆರೆಹೊರೆಯವರ ಸಹಾಯದಿಂದ ಯಶಿಕಾಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸ್ಥಳೀಯ ವೈದ್ಯರ ಸಲಹೆ ಮೇರೆಗೆ ಯಶಿಕಾಳನ್ನ ಸೆಕ್ಟರ್ 28ರಲ್ಲಿಯ ಶಂಕರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಸರ್ವೋದಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಆಸ್ಪತ್ರೆಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಯಶಿಕಾ ಸಾವನ್ನಪ್ಪಿದ್ದಾಳೆ.

    ನಾನೇ ಅವಳಿಗೆ ಹಾಲು ಕೊಟ್ಟು ಕೆಲಸಕ್ಕೆ ಹೋಗಿದ್ದೆ. ಕೆಲಸಕ್ಕೆ ಹೋಗುವಾಗ ಮಕ್ಕಳು ಆಟವಾಡುತ್ತಿದ್ದರು, ಎಲ್ಲವೂ ಚೆನ್ನಾಗಿತ್ತು. ನೋಡ ನೋಡುತ್ತಿದ್ದಂತೆ ಯಶಿಕಾ ದಾಳಿಂಬೆ ಕಾಳುಗಳನ್ನು ಬಾಯಿಗೆ ಹಾಕಿಕೊಂಡಿದ್ದರಿಂದ ಉಸಿರಾಟದಲ್ಲಿ ತೊಂದರೆ ಆಗಿದೆ. ದಾಳಿಂಬೆ ಕಾಳುಗಳಿಂದ ಇಷ್ಟು ದೊಡ್ಡ ದುರಂತ ಸಂಭವಿಸುತ್ತೆ ಎಂದು ಗೊತ್ತಿರಲಿಲ್ಲ ಎಂದು ಡೇವಿಡ್ ಕಣ್ಣೀರು ಹಾಕುತ್ತಾರೆ.

  • 10 ದಿನದೊಳಗೆ ಸಾಲ ಕಟ್ಟಿಲ್ಲಾಂದ್ರೆ ಜಮೀನು ಹರಾಜಿಗೆ ಹಾಕ್ತೀವಿ- ಕೊಪ್ಪಳ ರೈತರಿಗೆ ನೋಟಿಸ್

    10 ದಿನದೊಳಗೆ ಸಾಲ ಕಟ್ಟಿಲ್ಲಾಂದ್ರೆ ಜಮೀನು ಹರಾಜಿಗೆ ಹಾಕ್ತೀವಿ- ಕೊಪ್ಪಳ ರೈತರಿಗೆ ನೋಟಿಸ್

    ಕೊಪ್ಪಳ: 10 ದಿನಗಳೊಳಗೆ ಸಾಲ ಕಟ್ಟಿ. ಇಲ್ಲವೆಂದಲ್ಲಿ ನಿಮ್ಮ ಜಮೀನು ಹರಾಜಿಗೆ ಹಾಕ್ತೀವಿ ಎಂದು ಜಿಲ್ಲೆಯ ರೈತರಿಗೆ ಬ್ಯಾಂಕ್ ನೋಟಿಸ್ ನೀಡಿದೆ.

    ಕೊಪ್ಪಳದ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮದ ದಾಳಿಂಬೆ ಬೆಳೆಗಾರರಿಗೆ ಬ್ಯಾಂಕ್ ಲೀಗಲ್ ನೋಟಿಸ್ ನೀಡಿದೆ. ಈ ಮೂಲಕ ಸಾಲದ ಜೋತೆಗೆ ಬಡ್ಡಿ, ಸುಸ್ತಿ ಬಡ್ಡಿ ಕಟ್ಟುವಂತೆ ಒತ್ತಾಯಿಸಲಾಗಿದೆ. ತೆಗೆದುಕೊಂಡ ಸಾಲಕ್ಕೆ ಶೇ.15ರಷ್ಟು ಬಡ್ಡಿ ಸಮೇತ ಕಟ್ಟುವಂತೆ ನೋಟಿಸಿನಲ್ಲಿ ತಿಳಿಸಲಾಗಿದೆ. ಅಲ್ಲದೆ 10 ದಿನದೊಳಗೆ ಸಾಲ ಮರುಪಾವತಿ ಮಾಡದಿದ್ದರೆ ಜಮೀನು ಜಪ್ತಿ ಮಾಡುವುದಾಗಿ ಬ್ಯಾಂಕ್ ಕಿರುಕುಳ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.

     

    ಮಾಜಿ ಸಿಎಂ ಕುಮಾರಸ್ವಾಮಿ ಅವರು ದಾಳಿಂಬೆ ಬೆಳೆಗಾರರ ಸಾಲಮನ್ನಾ ಮಾಡಲು ಅನುದಾನ ಮಿಸಲಿಟ್ಟಿದ್ದರು. ಆದರೆ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಾಗಿನಿಂದ ದಾಳಿಂಬೆ ಬೆಳೆಗಾರರ ಸಾಲಮನ್ನಾದ ಬಗ್ಗೆ ಚಕಾರವೇ ಎತ್ತಿಲ್ಲ. ಹೀಗಾಗಿ ರೈತರು ಇದೀಗ ಬ್ಯಾಂಕ್ ಕಿರುಕುಳದಿಂದ ಬೇಸತ್ತಿದ್ದಾರೆ.

    ಒಟ್ಟಿನಲ್ಲಿ ಕುಮಾರಸ್ವಾಮಿ ಸಾಲಮನ್ನಾದಿಂದ ನಿಟ್ಟುಸಿರು ಬಿಟ್ಟಿದ್ದ ದಾಳಿಂಬೆ ಬೆಳೆಗಾರರು ಇದೀಗ ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಮಗೆ ಬ್ಯಾಂಕ್ ಕಿರುಕುಳದಿಂದ ಮುಕ್ತಿ ಕೊಡಿಸಿ ನಮ್ಮ ಸಾಲಮನ್ನಾ ಮಾಡಿಸಿ ಎಂದು ಸಿಎಂ ಬಿಎಸ್‍ವೈ ಗೆ ರೈತ ಮುಖಂಡರ ಮನವಿ ಮಾಡಿಕೊಂಡಿದ್ದಾರೆ.

  • ಬ್ಯಾಂಕ್ ಅಧಿಕಾರಿಗಳ ಕಿರುಕುಳದಿಂದ ಮನೆಯನ್ನೇ ತೊರೆದ ರೈತ!

    ಬ್ಯಾಂಕ್ ಅಧಿಕಾರಿಗಳ ಕಿರುಕುಳದಿಂದ ಮನೆಯನ್ನೇ ತೊರೆದ ರೈತ!

    ಕೊಪ್ಪಳ: ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಿದ್ದಾರೆ. ಆದ್ರೂ ರೈತರಿಗೆ ಬ್ಯಾಂಕ್ ಅಧಿಕಾರಿಗಳ ಕಿರುಕುಳ ಮಾತ್ರ ತಪ್ಪಿಲ್ಲ. ದಿನಕ್ಕೊಂದು ಕಿರುಕುಳ ಪ್ರಕರಣ ಬೆಳಕಿಗೆ ಬರ್ತಿದ್ದು, ಕೊಪ್ಪಳದ ದಾಳಿಂಬೆ ಬೆಳೆಗಾರರೊಬ್ಬರು ಮನೆಯನ್ನೇ ತೊರೆದು ಹೋಗಿದ್ದಾರೆ.

    ಮೂಲತಃ ಕೊಪ್ಪಳ ತಾಲೂಕಿನ ಕೊಡದಾಳ ನಿವಾಸಿಯಾಗಿರೋ ಬಸವರಾಜ್, ತಂದೆ ನಾಗಪ್ಪ ದ್ಯಾಮಣ್ಣ ಮಡಿವಾಳರ ಕಳೆದ ಏಳೆಂಟು ವರ್ಷಗಳ ಹಿಂದೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆರು ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆಗಾಗಿ ಆರು ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು ಆದ್ರೆ ದಾಳಿಂಬೆ ಬೆಳೆಗೆ ದುಂಡಾಣು ರೋಗ ಬಿದ್ದು ಬೆಳೆ ಸಂಪೂರ್ಣ ಹಾಳಾಗಿ ಹೋಗಿತ್ತು. ಹೀಗಾಗಿ ನಾಗಪ್ಪ ದ್ಯಾಮಣ್ಣರಿಗೆ ಸಾಲ ಮರುಪಾವತಿ ಮಾಡಲಾಗಿರಲಿಲ್ಲ. ಇದೀಗ ಸಾಲ ಸುಮಾರು 12 ಲಕ್ಷದಷ್ಟಾಗಿದ್ದು, ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿಸುವಂತೆ ಕಿರುಕುಳ ನೀಡುತ್ತಿದ್ದರಂತೆ. ಜೊತೆಗೆ ವಸೂಲಾತಿ ನ್ಯಾಯಾಧೀಕರಣದ ಮೂಲಕ ಮುಂದಿನ ತಿಂಗಳು ಜಮೀನು ಹರಾಜು ಮಾಡುವುದಾಗಿ ನೋಟಿಸ್ ನೀಡಿದ್ದಾರೆ. ಇದರಿಂದ ಮನನೊಂದು ಸಾಲಗಾರ ನಾಗಪ್ಪ ದ್ಯಾಮಣ್ಣ ಮಡಿವಾಳರ ಮನೆ ಬಿಟ್ಟು ಹೋಗಿದ್ದಾರೆ.

    ಜಿಲ್ಲೆಯ ಸುಮಾರು ಹದಿನೈದಕ್ಕೂ ಹೆಚ್ಚು ದಾಳಿಂಬೆ ಬೆಳೆಗಾರರಿಗೆ ವಸೂಲಾತಿ ನ್ಯಾಯಾಧೀಕರಣದ ಮೂಲಕ ನೋಟಿಸ್ ನೀಡಿದ್ದಾರಂತೆ. ದಾಳಿಂಬೆ ಬೆಳೆಗಾರರು ಸಾಲ ಮನ್ನಾಗಾಗಿ ಕಳೆದ 9 ವರ್ಷದಿಂದ ಹೋರಾಟ ಮಾಡ್ತಿದ್ರು, ಇದುವರೆಗೂ ಯಾರೊಬ್ಬರು ಸ್ಪಂದಿಸಿಲ್ಲ, ಜೊತೆಗೆ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿರೋದರಿಂದ ರೈತರ ಗೋಳು ಹೇಳತೀರದ್ದಾಗಿದೆ ಅಂತ ದಾಳಿಂಬೆ ಬೆಳೆಗಾರರ ರಾಜ್ಯಾಧ್ಯಕ್ಷ ಅಬ್ದುಲ್ ನಯೀಮ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಮುಖ್ಯಮಂತ್ರಿ ಕುಮಾಸ್ವಾಮಿ ಅವರು ಸಾಲಮನ್ನಾ ಆದೇಶ ಮಾಡಿದ್ರು ರೈತರಿಗೆ ಕಿರುಕುಳ ನಿಂತಿಲ್ಲ. ಇದ್ರಿಂದ ಬೇಸತ್ತಿರೋ ರೈತರು ನಮಗಿರೋದು ಆತ್ಮಹತ್ಯೆ ಒಂದೇ ದಾರಿ ಅಂತ ಹೇಳುತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಇನ್ನಾದ್ರೂ ಇತ್ತ ಗಮನ ಹರಿಸಿ ರೈತರ ಸಂಕಷ್ಟ ಬಗೆಹರಿಸ್ತಾರಾ ಕಾದು ನೋಡಬೇಕಷ್ಟೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict

  • ರಾಯಚೂರಲ್ಲಿ ತಂಪೆರದ ಮಳೆ: ಬಿರುಗಾಳಿಗೆ ದಾಳಿಂಬೆ ಬೆಳೆ ಹಾನಿ

    ರಾಯಚೂರಲ್ಲಿ ತಂಪೆರದ ಮಳೆ: ಬಿರುಗಾಳಿಗೆ ದಾಳಿಂಬೆ ಬೆಳೆ ಹಾನಿ

    -ಬಳ್ಳಾರಿಯಲ್ಲಿ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

    ರಾಯಚೂರು/ಬಳ್ಳಾರಿ: ಬಿರುಬಿಸಿಲ ಮಧ್ಯದಲ್ಲೇ ಬಿಸಿಲನಾಡು ರಾಯಚೂರಿನಲ್ಲಿ ಮಳೆರಾಯ ಕೃಪೆ ತೋರಿದ್ದಾನೆ. ರಾತ್ರಿಯಿಡಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಮೂಲಕ ಜಿಲ್ಲೆ ತಂಪಾಗಿದೆ. ಲಿಂಗಸುಗೂರು, ಸಿಂಧನೂರು, ಮಾನ್ವಿ ಸೇರಿ ಎಲ್ಲೆಡೆ ಮಳೆಯಾಗಿದ್ದು ಅಲ್ಲಲ್ಲಿ ಮಳೆಹಾನಿಯೂ ಆಗಿದೆ. ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದ್ದರಿಂದ ಕೆಲವೆಡೆ ಹಾನಿ ಸಂಭವಿಸಿದೆ.

    ಲಿಂಗಸುಗೂರಿನಲ್ಲಿ ಸುರಿದ ಮಳೆಗೆ ಮನೆ ಹಾಗೂ ಅಂಗಡಿಗಳ ಶೆಡ್‍ಗಳು ಹಾರಿಹೋಗಿವೆ. ಲಿಂಗಸುಗೂರು ತಾಲೂಕಿನಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ದಾಳಿಂಬೆ ಬೆಳೆ ಸಂಪೂರ್ಣ ನೆಲಕ್ಕಚ್ಚಿದೆ. ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಸುಮಾರು 100 ಎಕರೆಯಷ್ಟು ಬೆಳೆ ಹಾನಿ ಸಂಭವಿಸಿದೆ. ಈ ಬೇಸಿಗೆ ಮಳೆ ನೇರವಾಗಿ ತೋಟಗರಿಕಾ ಬೆಳೆಯ ಮೇಲೆ ಪರಿಣಾಮ ಬೀರಿದೆ.

    ಇನ್ನೂ ಬಿರುಗಾಳಿಗೆ 30 ಕ್ಕೂ ಹೆಚ್ಚು ಮರಗಳು ಧರೆಗುರಳಿದ್ದು, 15 ವಿದ್ಯುತ್ ಕಂಬಗಳು ಬಿದ್ದಿವೆ. ಗುಡಿಸಲು ಹಾಗೂ ಗೂಡಂಗಡಿಗಳು ಹಾರಿಹೋಗಿವೆ. ಮಾನ್ವಿ, ಸಿಂಧನೂರು, ರಾಯಚೂರು ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ರಾಯಚೂರು ನಗರದಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದ್ದು, ಜನಜೀವನ ಸ್ವಲ್ಪಮಟ್ಟಿಗೆ ಅಸ್ತವ್ಯಸ್ತವಾದ್ರು ಬೇಸಿಗೆಯ ಮಳೆಗೆ ಜನ ಖುಷಿಯಾಗಿದ್ದಾರೆ.

    ಬಳ್ಳಾರಿಯಲ್ಲೂ ಮಳೆ: ಗಣಿನಾಡು ಬಳ್ಳಾರಿಯಲ್ಲೂ ರಾತ್ರಿ ಮಳೆಯಾಗಿದೆ. ಮಳೆಯಾದ ಪರಿಣಾಮ ಬಳ್ಳಾರಿಯ ಕೆಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಳ್ಳಾರಿಯ ಹೊಸ ಬಸ ನಿಲ್ದಾಣದ ಬಳಿಯ ಅಂಡರ್ ಬ್ರೀಡ್ಜ್ ಬಳಿ ನೀರು ಶೇಖರಣೆಯಾದ ಪರಿಣಾಮ ಇಂದು ಮುಂಜಾನೆ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಯಿತು.

    ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕ್ಯಾದಿಗೇನಹಳ್ಳಿ ಎಂಬಲ್ಲಿ ಗೋಣೆಪ್ಪ ಎಂಬವರಿಗೆ ಸೇರಿದ 14 ಕುರಿ ಹಾಗೂ ಒಂದು ನಾಯಿ ಸಿಡಿಲು ಬಡಿದು ಸಾವನ್ನಪ್ಪಿವೆ.

     

  • ದಾಳಿಂಬೆಗೆ ವರವಾಯ್ತು ಸೀರೆ!: ರಾಯಚೂರು ರೈತರ ಪ್ರಯೋಗ ಯಶಸ್ವಿ

    ದಾಳಿಂಬೆಗೆ ವರವಾಯ್ತು ಸೀರೆ!: ರಾಯಚೂರು ರೈತರ ಪ್ರಯೋಗ ಯಶಸ್ವಿ

    ರಾಯಚೂರು: ಹೆಣ್ಣಿಗೆ ಮಾತ್ರ ಸೀರೆ ಬೇಕು ಅನ್ನೋದನ್ನು ರಾಯಚೂರಿನ ರೈತರು ಸುಳ್ಳು ಮಾಡಿದ್ದಾರೆ. ಹಣ್ಣಿಗೂ ಸೀರೆ ಬೇಕು ಅಂತಾ ತಮ್ಮದೇ ಆದ ಕೃಷಿ ಪದ್ಧತಿಯಲ್ಲಿ ಸೀರೆ ಬಳಸಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಹೀಗಾಗಿ ಹಳೆಯ ಸೀರೆಗಳಿಗೆ ರಾಯಚೂರಿನಲ್ಲಿ ಇನ್ನಿಲ್ಲದ ಡಿಮ್ಯಾಂಡ್ ಬಂದಿದೆ.

    ಕೃಷಿಯಲ್ಲಿ ನೀವು ನಾನಾ ಬಗೆಗಳನ್ನ ಕೇಳಿರಬಹುದು. ಸಾವಯವ, ಸಹಜ ಕೃಷಿ, ಸಮಗ್ರ ಬೇಸಾಯ, ಸಾಂದ್ರೀಕೃತ ಬೇಸಾಯ ಅಂತ ಕೃಷಿ ಪದ್ಧತಿಗಳಿವೆ. ಆದ್ರೆ ರಾಯಚೂರು ಜಿಲ್ಲೆಯಲ್ಲಿ ರೈತರು ಸೀರೆಗಳಿಂದ ದಾಳಿಂಬೆ ಬೆಳೆ ಬೆಳೆಯುತ್ತಿದ್ದಾರೆ. ಒಂದೊಂದು ದಾಳಿಂಬೆ ಗಿಡಕ್ಕೆ ಒಂದರಿಂದ ಮೂರು ಸೀರೆಗಳನ್ನು ಸುತ್ತಿ ಬೇಸಾಯ ಮಾಡುತ್ತಿದ್ದಾರೆ. ಇದರಿಂದ ರುಚಿಯಾದ, ಗಾತ್ರದಲ್ಲೂ ದೊಡ್ಡದಾದ ದಾಳಿಂಬೆಯ ಹೆಚ್ಚು ಇಳುವರಿಯನ್ನ ಪಡೆದು ಲಾಭ ಗಳಿಸುತ್ತಿದ್ದಾರೆ. ಈ ರೀತಿ ಬೆಳೆದ ದಾಳಿಂಬೆಗೆ ಮಾರುಕಟ್ಟೆಯಲ್ಲೂ ಹೆಚ್ಚಿನ ಬೇಡಿಕೆಯಿದೆ. ಸೀರೆ ಕಟ್ಟುವುದರಿಂದ ರೈತರು ನಾನಾ ಲಾಭಗಳನ್ನ ಪಡೆಯುತ್ತಿದ್ದಾರೆ.

    ಸೀರೆಯ ಲಾಭ ಹೇಗೆ?: ಸೂರ್ಯನ ಬಿಸಿಲಿನಿಂದ ಉಂಟಾಗುವ ಸನ್ ಬರ್ನ್‍ನಿಂದ ಕಾಯಿಗಳು ಕಪ್ಪಾಗುತ್ತವೆ. ಹಲವಾರು ಬಗೆಯ ಕೀಟಗಳು ಪದೇ ಪದೇ ದಾಳಿಯಿಡುವುದು, ಗಿಳಿ, ಕೋತಿಗಳ ಕಾಟದಿಂದ ದಾಳಿಂಬೆ ಹಾಳಾಗುತ್ತದೆ. ದುಂಡಾಣು ರೋಗ ಬಂದರಂತೂ ರೈತ ನಷ್ಟ ಅನುಭವಿಸುವುದು ನಿಶ್ಚಿತ. ಆದ್ರೆ ಸೀರೆ ಬಳಸುವುದರಿಂದ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಅಲ್ಲದೆ ಸೀರೆಗಳೇ ಕೀಟಗಳನ್ನು ಬಹುಪಾಲು ತಡೆಯುವುದರಿಂದ ಕ್ರಿಮಿ ಕೀಟನಾಶಕಗಳ ಬಳಕೆ ಕೂಡ ಕಡಿಮೆಯಾಗಿ ಇಳುವರಿ ಹೆಚ್ಚಾಗುತ್ತದೆ.

    ಈ ಹಿಂದೆಯಲ್ಲಾ ದಾಳಿಂಬೆ ಬೆಳೆದು ಕೈಸುಟ್ಟುಕೊಂಡ ರೈತರು ಈಗ ಸೀರೆಯನ್ನ ನಂಬಿ ಪುನಃ ದಾಳಿಂಬೆ ಬೆಳೆದಿದ್ದಾರೆ. ಜಿಲ್ಲೆಯಲ್ಲಿ 50 ಸಾವಿರ ಎಕರೆಯಷ್ಟು ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗಿದೆ. ಆದ್ರೆ ಸೀರೆ ಖರೀದಿಗೆ ಹೆಚ್ಚು ಖರ್ಚು ಬರುತ್ತಿದ್ದು ಕೃಷಿ ಇಲಾಖೆ ಸಹಾಯ ಮಾಡಬೇಕು ಅನ್ನೋದು ರೈತರ ಆಶಯ.