Tag: ದಾಲ್

  • ಪರ್ಫೆಕ್ಟ್ ಸ್ಟೈಲ್‌ನಲ್ಲಿ ದಾಲ್ ತೋವೆ ಮಾಡುವ ವಿಧಾನ

    ಪರ್ಫೆಕ್ಟ್ ಸ್ಟೈಲ್‌ನಲ್ಲಿ ದಾಲ್ ತೋವೆ ಮಾಡುವ ವಿಧಾನ

    ತೊಗರಿ ಬೇಳೆ ಬಳಸಿ ಮಾಡಲಾಗುವ ದಾಲ್ ತೋವೆ (Dal Tovve) ಸಾಂಪ್ರದಾಯಿಕ ಅಡುಗೆಗಳಲ್ಲಿ ಒಂದು. ಮುಖ್ಯವಾಗಿ ದಕ್ಷಿಣ ಭಾರತ ಹಾಗೂ ಉತ್ತರ ಕೆನರಾ ಪ್ರದೇಶದಲ್ಲಿ ಇದು ಅತ್ಯಂತ ಫೇಮಸ್. ದಾಲ್ ಫ್ರೈ ಅಥವಾ ದಾಲ್ ತಡ್ಕಾಗೆ ಹೋಲಿಸಿದರೆ ದಾಲ್ ತೋವೆ ತುಂಬಾ ವಿಭಿನ್ನವಾದ ಸ್ವಾದ ನೀಡುತ್ತದೆ. ಅನ್ನ ಮಾತ್ರವಲ್ಲದೇ ಇಡ್ಲಿಯೊಂದಿಗೂ ಇದರ ಟೇಸ್ಟ್ ಸೂಪರ್ ಎನಿಸಿಕೊಳ್ಳುತ್ತದೆ. ಸುಲಭವಾಗಿ ಮಾಡಬಹುದಾದ ದಾಲ್ ತೋವೆಯನ್ನು ಒಮ್ಮೆ ನೀವು ಕೂಡಾ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಬೇಯಿಸಲು:
    ತೊಗರಿಬೇಳೆ – ಅರ್ಧ ಕಪ್
    ಸೀಳಿದ ಮೆಣಸಿನಕಾಯಿ – 2
    ಎಣ್ಣೆ – 1 ಟೀಸ್ಪೂನ್
    ನೀರು – ಒಂದೂವರೆ ಕಪ್
    ಇತರ ಪದಾರ್ಥಗಳು:
    ಉಪ್ಪು – ಅರ್ಧ ಟೀಸ್ಪೂನ್
    ಹಿಂಗ್ – ಕಾಲು ಟೀಸ್ಪೂನ್
    ನೀರು – ಅರ್ಧ ಕಪ್ ಇದನ್ನೂ ಓದಿ: ರುಚಿಕರವಾದ ಗೋಡಂಬಿ ತೊಂಡೆಕಾಯಿ ಪಲ್ಯ ಮಾಡಿ

    ಒಗ್ಗರಣೆಗೆ:
    ತೆಂಗಿನ ಎಣ್ಣೆ – 3 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಕರಿಬೇವಿನ ಎಲೆ – ಕೆಲವು
    ಒಣ ಕೆಂಪು ಮೆಣಸಿನಕಾಯಿ – 2
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ಪ್ರೆಶರ್ ಕುಕ್ಕರ್‌ನಲ್ಲಿ ತೊಗರಿ ಬೇಳೆ, ಸೀಳಿದ ಮೆಣಸಿನಕಾಯಿ ಮತ್ತು 1 ಟೀಸ್ಪೂನ್ ಎಣ್ಣೆಯನ್ನು ಹಾಕಿ, ಒಂದೂವರೆ ಕಪ್ ನೀರನ್ನು ಸೇರಿಸಿ, 5 ಸೀಟಿ ಬರುವವರೆಗೆ ಬೇಯಿಸಿ.
    * ಬೆಂದ ಬೇಳೆಯನ್ನು ಸ್ವಲ್ಪ ಹಿಸುಕಿ ಮೃದು ಮಾಡಿ.
    * ಈಗ ಅದಕ್ಕೆ ಉಪ್ಪು, ಹಿಂಗ್ ಮತ್ತು ಅರ್ಧ ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಕುದಿಸಿ.
    * ಈಗ ಒಗ್ಗರಣೆ ತಯಾರಿಸಲು ಸಣ್ಣ ಕಡಾಯಿಯಲ್ಲಿ 3 ಟೀಸ್ಪೂನ್ ತೆಂಗಿನ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಕೆಲವು ಕರಿಬೇವಿನ ಎಲೆಗಳು ಹಾಗೂ ಒಣ ಕೆಂಪು ಮೆಣಸಿನಕಾಯಿಯನ್ನು ಸೇರಿಸಿ, ಸಾಸಿವೆ ಒಡೆಯುವವರೆಗೆ ಬಿಸಿ ಮಾಡಿ.
    * ಈಗ ಒಗ್ಗರಣೆಯನ್ನು ದಾಲ್ ಮಿಶ್ರಣದ ಮೇಲೆ ಸುರಿಯಿರಿ.
    * ಕೊತ್ತಂಬರಿ ಸೊಪ್ಪನ್ನು ಸೇರಿಸಿ.
    * ಇದೀಗ ದಾಲ್ ತೋವೆ ತಯಾರಾಗಿದ್ದು, ಇಡ್ಲಿ ಅಥವಾ ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ಮಾಡಿ ನೋಡಿದ್ದೀರಾ?

    Live Tv
    [brid partner=56869869 player=32851 video=960834 autoplay=true]

  • ಡಾಬಾ ಶೈಲಿಯ ದಾಲ್ ಚಪಾತಿ ಜೊತೆಗೆ ಸೂಪರ್

    ಡಾಬಾ ಶೈಲಿಯ ದಾಲ್ ಚಪಾತಿ ಜೊತೆಗೆ ಸೂಪರ್

    ನಿಮಗೂ ಮನೆಯಲ್ಲಿ ನಿತ್ಯ ಒಂದೇ ರೀತಿಯ ದಾಲ್ ತಿಂದು ಬೋರ್ ಆದಾಗ ವಿಭಿನ್ನ ಶೈಲಿಯ ದಾಲ್ ಮಾಡಬೇಕು ಎಂದರೆ ಈ ದಾಲ್ ಮಾಡಬಹುದು. ನಾವು ಈ ಕೆಳಗೆ ಹೇಳಲಿರುವ ಶೈಲಿಯಲ್ಲಿ ದಾಲ್ ಮಾಡಿದರೆ ಮನೆಯಲ್ಲೇ ಡಾಬಾ ಶೈಲಿಯ ದಾಲ್ ಅನ್ನು ಜೀರಾ ರೈಸ್, ಚಪಾತಿ, ಪರೋಟ ಜೊತೆ ಸವಿಯಬಹುದು.

    ಬೇಕಾಗುವ ಸಾಮಗ್ರಿಗಳು:
    * ಕಡಲೇಬೇಳೆ- ಅರ್ಧ ಕಪ್
    * ತೊಗರಿ ಬೇಳೆ ಅರ್ಧ ಕಪ್
    * ಮಸೂರ್ ದಾಲ್ ಅರ್ಧ ಕಪ್
    * ಹೆಸರು ಬೇಳೆ ಅರ್ಧ ಕಪ್
    * ಉದ್ದಿನ ಬೇಳೆ- ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ – ಅರ್ಧ ಕಪ್
    * ಜೀರಿಗೆ 1 ಚಮಚ
    * ತುಪ್ಪ 1 ಚಮಚ
    * ಒಣ ಮೆಣಸಿನಕಾಯಿ 2
    * ಈರುಳ್ಳಿ-1
    * ಬೆಳ್ಳುಳ್ಳಿ-1
    * ಶುಂಠಿ
    * ಹಸಿ ಮೆಣಸಿನಕಾಯಿ -2
    * ಟೊಮೆಟೊ -2
    * ಕಸೂರಿ ಮೇತಿ- ಅರ್ಧ ಚಮಚ
    * ಮೆಣಸಿನ ಪುಡಿ -1 ಚಮಚ
    * ಅರಿಶಿನ ಪುಡಿ – ಅರ್ಧ ಚಮಚ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಚಮಚ ನಿಂಬೆ ಹಣ್ಣು- ಅರ್ಧ ಇದನ್ನೂ ಓದಿ:  ಬಾಯಲ್ಲಿ ನೀರೂರಿಸುವ ದೊನ್ನೆ ಬಿರಿಯಾನಿ ಮನೆಯಲ್ಲಿ ಮಾಡಿ

    ಮಾಡುವ ವಿಧಾನ:
    * ಎಲ್ಲಾ ಬೇಳೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮತ್ತು ಒಂದೆರಡು ಬಾರಿ ನೀರಿನಿಂದ ತೊಳೆದು ಅರ್ಧ ಗಂಟೆ ನೆನೆಸಿಡಿ.
    * ಪ್ರೆಶರ್ ಕುಕ್ಕರ್‍ನಲ್ಲಿ ಬೇಳೆಗಳು, ನೀರು, ಅರಿಶಿನ ಪುಡಿ ಸೇರಿಸಿ ಮುಚ್ಚಳವಿಲ್ಲದೆ ಒಲೆಯ ಮೇಲೆ ಇಡಿ, ಮೊದಲ ಕುದಿಯ ನಂತರ ಮುಚ್ಚಳವನ್ನು ಹಾಕಿ. 3-5 ಸೀಟಿಗಳಿಗೆ ಬೇಯಿಸಿ.


    * ಪ್ರೆಶರ್ ಕುಕ್ಕರ್ ತಣ್ಣಗಾಗಲು ಬಿಡಿ ನಂತರ ಬೇಯಿಸಿದ ದಾಲ್ ಅನ್ನು ಮ್ಯಾಶ್ ಮಾಡಿ.
    * ಬಾಣಲೆ ಎಣ್ಣೆ ಹಾಕಿ ನಂತರ ಜೀರಿಗೆ, ಹಿಂಗು,ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ.

    * ಮಿಶ್ರಣವನ್ನು ಒಂದೆರಡು ನಿಮಿಷ ಹುರಿದು ನಂತರ ಹಸಿ ಮೆಣಸಿನಕಾಯಿ, ಟೊಮೆಟೊ, ಕಸೂರಿ ಮೇತಿ ಸೇರಿಸಿ ಮತ್ತು ಸಂಪೂರ್ಣವಾಗಿ ಬೇಯಿಸಿ.
    * ನಂತರ ಈ ಮಿಶ್ರಣಕ್ಕೆ ಬೇಯಿಸಿದ ದಾಲ್ ಸೇರಿಸಿ ಸ್ವಲ್ಪ ನೀರು ಹಾಕಿ.
    * ಉಪ್ಪು ಸೇರಿಸಿ 10-12 ನಿಮಿಷಗಳ ಕಾಲ ಕುದಿಸಲು ಬಿಡಿ.
    * ಈಗ ಬೇಯಿಸಿದ ದಾಲ್‍ಗೆ ನಿಂಬೆ ರಸ, ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಬಿಸಿಬಿಸಿ ದಾಲ್ ಸಿದ್ಧವಾಗುತ್ತದೆ.

  • ಈ ದಿನ ಊಟಕ್ಕೆ ಇರಲಿ ಬಾಯಲ್ಲಿ ನೀರೂರಿಸುವ ದಾಲ್

    ಈ ದಿನ ಊಟಕ್ಕೆ ಇರಲಿ ಬಾಯಲ್ಲಿ ನೀರೂರಿಸುವ ದಾಲ್

    ದಾಲ್ ಎಂದರೆ ಕೆಲವರು ತುಂಬಾ ಇಷ್ಟಪಟ್ಟು ಅನ್ನ, ಚಪಾತಿಯೊಂದಿಗೆ ಸವಿಯುತ್ತಾರೆ. ಬ್ಯಾಚುಲರ್‌ಗಳು ಹೆಚ್ಚಾಗಿ ದಾಲ್ ಮಾಡುತ್ತಾರೆ. ಮಾಡಲು ಸುಲಭ ಮತ್ತು ಬೇಗ ತಯಾರಾಗುವ ಅಡುಗೆಯಾಗಿದೆ. ಹೀಗಾಗಿ ನೀವು ಇಂದು ಮನೆಯಲ್ಲಿ ರುಚಿರುಚಿಯಾಗಿ ದಾಲ್ ಮಾಡಿ ಸವಿಯಿರಿ..

    ಬೇಕಾಗುವ ಸಾಮಗ್ರಿಗಳು:
    * ಹೆಸರುಬೇಳೆ- ಅರ್ಧ ಕಪ್
    * ತೊಗರಿ ಬೇಳೆ- ಅರ್ಧ ಕಪ್
    * ಟೊಮ್ಯಾಟೋ- 2
    * ಈರುಳ್ಳಿ- 2
    * ತುಪ್ಪ- 2 ಟೀ ಸ್ಪೂನ್
    * ಜೀರಿಗೆ- 2 ಟೀ ಸ್ಪೂನ್
    * ಇಂಗು
    * ಅರಿಶಿಣ- 1 ಟೀ ಸ್ಪೂನ್
    * ಕೆಂಪು ಮೆಣಸು- 2 ರಿಂದ 3
    * ಗರಂ ಮಸಾಲ – 2 ಟೀ ಸ್ಪೂನ್
    * ನಿಂಬೆ ರಸ- 1 ಟೀ ಸ್ಪೂನ್
    * ಹಸಿಮೆಣಸಿನಕಾಯಿ ಪೌಡರ್- 2 ಟೀ ಸ್ಪೂನ್
    * ಬೆಳ್ಳುಳ್ಳಿ – 2
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:

    * ಒಂದು ಪಾತ್ರೆಯಲ್ಲಿ ಹೆಸರುಬೇಳೆ, ತೊಗರಿ ಬೇಳೆ, ಅರಿಶಿಣ ಸೇರಿಸಿ, ಕುಕ್ಕರ್‍ನಲ್ಲಿ 5-6 ಸೀಟಿ ಕೂಗಿಸಿ ಬೇಯಿಸಿಕೊಳ್ಳಬೇಕು.

    * ನಂತರ ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಹಾಕಿ. ಬಿಸಿಯಾದ ತುಪ್ಪಕ್ಕೆ ಜೀರಿಗೆ, ಬೆಳ್ಳುಳ್ಳಿ, ಇಂಗು, ಹಸಿ ಮೆಣಸಿನ ಕಾಯಿ, ಟೊಮ್ಯಾಟೋ, ಈರುಳ್ಳಿಯನ್ನು ಸೇರಿಸಿ, ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.

    * ಮಿಶ್ರಣಕ್ಕೆ ಮೆಣಸಿನ ಪುಡಿ, ಗರಂ ಮಸಾಲ, ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕೊತ್ತಂಬರಿ ಸೊಪ್ಪ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಬೇಯಿಸಿಕೊಂಡ ಬೇಳೆಯನ್ನು ಸೇರಿಸಿ, 3-4 ನಿಮಿಷಗಳ ಕಾಲ ಕುದಿಸಬೇಕು. ಇದೀಗ ದಾಲ್ ಸವಿಯಲು ಸಿದ್ಧವಾಗುತ್ತದೆ.

    * ಬಿಸಿ ಬಿಸಿಯಾದ ಅನ್ನ ಅಥವಾ ರೊಟ್ಟಿಯೊಂದಿಗೆ ತುಪ್ಪ, ದಾಲ್ ಹಾಕಿ ಸವಿಯ ಬಹುದಾಗಿದೆ.

  • ಕುದಿಯುತ್ತಿದ್ದ ಬೇಳೆ ಸಾರಿನ ಪಾತ್ರೆಗೆ ಬಿದ್ದು 5ರ ಬಾಲೆ ಸಾವು!

    ಕುದಿಯುತ್ತಿದ್ದ ಬೇಳೆ ಸಾರಿನ ಪಾತ್ರೆಗೆ ಬಿದ್ದು 5ರ ಬಾಲೆ ಸಾವು!

    ಭೋಪಾಲ್: ಕುದಿಯುತ್ತಿದ್ದ ಬೇಳೆ ಸಾರಿನ ಪಾತ್ರೆಗೆ ಜಾರಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ 5 ವರ್ಷದ ಬಾಲಕಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಶಾಹೆದೊಲ್ ಜಿಲ್ಲೆಯ ಅಂಗನವಾಡಿಯೊಂದರಲ್ಲಿ ನಡೆದಿದೆ.

    ಸುಹಾಸಿನಿ ಬೈಗಾ ಮೃತಪಟ್ಟ ಬಾಲಕಿ. ಘಟನೆ ನಡೆದು 5 ದಿನಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬಾಲಕಿಯು ಜಬಲ್ಪುರ್ ಖಾಸಗಿ ಆಸ್ಪತೆಯಲ್ಲಿ ಮೃತಪಟ್ಟಿದ್ದಾಳೆ.

    ನಡೆದದ್ದು ಏನು?
    ನಾನು ಪಕ್ಕದ ಕೊಠಡಿಯಲ್ಲಿ ಇದ್ದ ಅಕ್ಕಿಯನ್ನು ತರಲು ಹೋಗಿದ್ದೆ. ಆಗ ಯಾರೋ ಕಿರುಚಿದ ಶಬ್ಧ ಕೇಳಿಸಿತು. ತಕ್ಷಣವೇ ಬಂದು ನೋಡಿದಾಗ ಬಾಲಕಿ ಸಾರ್ ಪಾತ್ರೆಯ ಒಳಗಡೆ ಬಿದ್ದಿದ್ದಳು. ತಕ್ಷಣವೇ ಆಕೆಯನ್ನು ಹೊರ ತೆಗೆದು, ಬಾಲಕಿಯ ತಂದೆಗೆ ಮಾಹಿತಿ ನೀಡಿದೆ. ಅವರು ಶಾಹೆದೊಲ್ ಜಿಲ್ಲಾಸ್ಪತ್ರೆಗೆ ದಾಖಲಿಸಿದರು ಎಂದು ಅಂಗನವಾಡಿ ಸಹಾಯಕಿ ಬೈಗಾ ತಿಳಿಸಿದ್ದಾರೆ.

    ಬಾಲಕಿಯ ಚಿಕಿತ್ಸೆಗೆ ಅಡುಗೆ ಸಹಾಯಕಿ 250 ರೂ. ನೀಡಿದ್ದರು. ನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿದ್ದರೂ, ಪ್ರಕರಣದ ಕುರಿತು ಶಾಹೆದೊಲ್ ಜಿಲ್ಲಾಸ್ಪತ್ರೆ ವೈದ್ಯರು ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಮಂಗಳವಾರ ಬಾಲಕಿ ಸ್ಥಿತಿ ಗಂಭೀರವಾಗಿದ್ದರಿಂದ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಇತ್ತ ಬಾಲಕಿ ಪೋಷಕರು ಆಕೆಯನ್ನು ಜಿಲ್ಲಾಸ್ಪತ್ರೆಯಿಂದ ಜಬಲ್ಪುರ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪ್ರಕರಣದ ಕುರಿತ ತನಿಖೆ ನಡೆಸುವಂತೆ ಮತ್ತು ನಿಷ್ಕಾಳಜಿ ತೋರಿದ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೇಳೆ ಕಾಳು ಖರೀದಿಸ್ತಿದ್ರೆ ಗಮನಿಸಿ – ಬ್ರ್ಯಾಂಡೆಡ್ ಬೇಳೆ ದರ ಏರಿಕೆ

    ಬೇಳೆ ಕಾಳು ಖರೀದಿಸ್ತಿದ್ರೆ ಗಮನಿಸಿ – ಬ್ರ್ಯಾಂಡೆಡ್ ಬೇಳೆ ದರ ಏರಿಕೆ

    ಬೆಂಗಳೂರು: ಜಿ.ಎಸ್.ಟಿ ಜಾರಿಯಾದ ಮೇಲೆ ಬೇಳೆ ಕಾಳುಗಳ ಬೆಲೆ ಇಳಿಕೆಯಾಗಲಿದೆ ಎಂಬ ಗ್ರಾಹಕರ ನಿರೀಕ್ಷೆ ಉಲ್ಟಾ ಆಗಿದೆ.

    ಈ ಮೂಲಕ ದಿನಸಿ ಅಂಗಡಿಗಳು ಗ್ರಾಹಕರಿಗೆ ಜಿ.ಎಸ್.ಟಿ ಶಾಕ್ ನೀಡಿದೆ. ಬ್ರಾಂಡೆಡ್ ಬೇಳೆ ಕಾಳುಗಳ ಬೆಲೆ ಕೆಜಿಗೆ ಐದು ರೂ. ಏರಿಕೆಯಾಗಿದೆ, ಬ್ರಾಂಡೆಡ್ ಅಲ್ಲದೇ ಇರುವ ಬೇಳೆ ಕಾಳುಗಳ ದರ ಇಳಿಕೆಯಾಗಿದೆ, ಇನ್ನು ಕೇಶ ತೈಲ, ಸೋಪು, ಕಾಸ್ಮೆಟಿಕ್ಸ್ ಸೇರಿದಂತೆ ಕೆಲ ಹೆಚ್ಚು ಬೆಲೆ ಏರಿಕೆಯಾದ ಐಟಂಗಳ ಸರಬರಾಜು ಸದ್ಯಕ್ಕೆ ಸ್ಥಗಿತಗೊಂಡಿದೆ.

    ಇದನ್ನೂ ಓದಿ: ಟೀ, ಕಾಫಿ, ತಿಂಡಿ ತಿನ್ನೋಕೆ ಹೋಗ್ತಿದೀರಾ..? ನಿಮಗೆ ಕೊಡೋ ಬಿಲ್ ಗಳಲ್ಲಿ ಈ ಬದಲಾವಣೆ ಗಮನಿಸಿ!

    ಹೊಸ ಎಂ.ಆರ್.ಪಿ ಬರುವವರೆಗೆ ಹಳೆ ಸ್ಟಾಕ್ ಗಳನ್ನು ಹಳೆ ದರದಲ್ಲಿಯೇ ಮಾರಾಟ ಮಾಡಲಾಗುತ್ತದೆ. ಇನ್ನು ಅಕ್ಕಿ, ಸಕ್ಕರೆ ಧನಿಯಾ ಸೇರಿದಂತೆ ನಾನಾ ದಿನಸಿ ವಸ್ತುಗಳ ಬೆಲೆ ಕೊಂಚ ಏರಿಕೆಯಾಗಿದೆ.

    ಇದನ್ನೂ ಓದಿ: ಜಿಎಸ್‍ಟಿಯಿಂದ ಯಾವ್ಯಾವ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಪೂರ್ಣ ಮಾಹಿತಿ

    ಜಿ.ಎಸ್.ಟಿ.ಯಿಂದ ಎಲೆಕ್ಟ್ರಾನಿಕ್ಸ್ ಐಟಂ ದುಬಾರಿಯಾಗಿದೆ. 2000 ರೂ.ನ ಸ್ಟೆಬಿಲೈಸರ್ ಗೆ ಗ್ರಾಹಕರು 14% ಸಿ.ಜಿ.ಎಸ್.ಟಿ ಹಾಗೂ ಎಸ್.ಜಿ.ಎಸ್.ಟಿ.ಯಂತೆ ತಲಾ 218 ರೂ.ಗಳಂತೆ ಒಟ್ಟು 437 ರೂ. ಟ್ಯಾಕ್ಸ್ ಪಾಲಾಗುತ್ತದೆ.