Tag: ದಾನಿಗಳು

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ನಿರಾಶ್ರಿತರಿಗೆ 1 ತಿಂಗಳಿಗಾಗುವಷ್ಟು ರೇಷನ್

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ನಿರಾಶ್ರಿತರಿಗೆ 1 ತಿಂಗಳಿಗಾಗುವಷ್ಟು ರೇಷನ್

    ಚಿಕ್ಕಮಗಳೂರು: ಲಾಕ್‍ಡೌನ್ ಘೋಷಿಸಿದ ಮೇಲೆ ಮೇಲೆ ಶೆಡ್ ಬಿಟ್ಟು ಹೊರ ಹೋಗದೆ ಯಾರಾದರೂ ಕೊಟ್ಟರೆ ಅದನ್ನೇ ಊಟ ಮಾಡಿಕೊಂಡಿದ್ದ ಚಿಕ್ಕಮಗಳೂರಿನ ಹೆಳವ ಸಮುದಾಯದ ಕುಟುಂಬಗಳಿಗೆ ದಾನಿಗಳಾದ ರೋನಾಲ್ಡೋ ಕುಲಾಸೋ ಸಹೋದರ ಜೋ ಕುಲಾಸೋ ಅವರು ಒಂದು ತಿಂಗಳಿಗೆ ಆಗುವಷ್ಟು ಆಹಾರದ ಸಾಮಾಗ್ರಿಗಳ ಕಿಟ್ ನೀಡಿದ್ದಾರೆ.

    ಕಿಟ್‍ನಲ್ಲಿ ಅಕ್ಕಿ, ತೊಗರಿಬೇಳೆ, ಸಕ್ಕರೆ, ಗೋಧಿ ಹಿಟ್ಟು, ರವೆ, ಉಪ್ಪು, ಈರುಳ್ಳಿ, ಟೀ ಪುಡಿ, ಖಾರದಪುಡಿ, ದನಿಯಾ ಪುಡಿ, ಮೈ ಸೋಪು, ಬಟ್ಟೆ ಸೋಪು, ಅಡುಗೆ ಎಣ್ಣೆ ಒಳಗೊಂಡಿದೆ. ಸುಮಾರು 20 ಮಕ್ಕಳು ಸೇರಿದಂತೆ 14 ಕುಟುಂಬದ 54 ಜನ ಇಲ್ಲಿ ವಾಸವಿದ್ದಾರೆ. ಬೀದಿ ಮೇಲೆ ನಾನಾ ರೀತಿಯ ವ್ಯಾಪಾರ ಮಾಡಿಕೊಂಡು ಬಂದ ದುಡ್ಡಲ್ಲೇ ಊಟ ಮಾಡುತ್ತಿದ್ದ ಇವರು, ಲಾಕ್‍ಡೌನ್ ಹಿನ್ನೆಲೆ ತಿಂಗಳಿಂದ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದರು. ಯಾರಾದರೂ ತಂದು ಕೊಟ್ಟರೇ ಊಟ ಇಲ್ಲವಾದಲ್ಲಿ ಇಲ್ಲ ಎನ್ನುವ ಸ್ಥಿತಿ ಇತ್ತು.

    ಹಲವು ದಿನಗಳ ಕಾಲ ದಿನಕ್ಕೆ ಒಂದು ಹೊತ್ತು ಊಟ ಮಾಡಿ ಬದುಕಿದ್ದರು. ಈ ಬಗ್ಗೆ ‘ಪಬ್ಲಿಕ್ ಟಿವಿ’ಯೂ ಸುದ್ದಿ ಮಾಡಿತ್ತು. ಸುದ್ದಿ ನೋಡಿದ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಆಹಾರ ಸಾಮಾಗ್ರಿ ವಿತರಿಸಿದ್ದರು. ಇಂದು ಬೆಂಗಳೂರಿನಿಂದ ಬಂದ ದಾನಿಗಳು ನಿರಾಶ್ರಿತ ಹೆಳವ ಕುಟುಂಬಗಳಿಗೆ ತಿಂಗಳ ಸಾಮಾಗ್ರಿ ನೀಡಿದ್ದಾರೆ.

    ಇದೇ ಶೆಡ್‍ನಲ್ಲಿನ ಮಹಿಳೆಯೊಬ್ಬರು ನಾಲ್ಕು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಲಾಕ್ ಡೌನ್ ಆಗಿದ್ದರಿಂದ ಹಣವಿಲ್ಲದೆ, ಹೊಟ್ಟೆ ತುಂಬಾ ಊಟ ಸಿಗದೆ, ತಾಯಿಗೆ ಹಣ್ಣು, ತರಕಾರಿ ಸೇರಿದಂತೆ ಪೌಷ್ಠಿಕ ಆಹಾರವೂ ಸಿಗದೆ ಮಗುವಿಗೆ ಹೊಟ್ಟೆ ತುಂಬ ಹಾಲು ಕುಡಿಸಲೂ ಸಾಧ್ಯವಾಗಿರಲಿಲ್ಲ. ಇದೀಗ ದಾನಿಗಳು ರೇಷನ್ ಕೊಟ್ಟಿರುವುದರಿಂದ ನಿರಾಶ್ರಿತರ ಮೊಗದಲ್ಲಿ ಮಂದಹಾಸ ಮೂಡಿದೆ.

  • ರಾಜ್ಯದಲ್ಲಿ ಕೊರೊನಾ ಅಟ್ಟಹಾಸ – ಧನಸಹಾಯಕ್ಕೆ ಸಿಎಂ ಮನವಿ

    ರಾಜ್ಯದಲ್ಲಿ ಕೊರೊನಾ ಅಟ್ಟಹಾಸ – ಧನಸಹಾಯಕ್ಕೆ ಸಿಎಂ ಮನವಿ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ದಿನೇ ದಿನೇ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಧನಸಹಾಯ ಮಾಡುವಂತೆ ದಾನಿಗಳಿಗೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.

    ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ಸರ್ಕಾರದ ಜೊತೆ ಕೈಜೋಡಿಸಿ ಎಂದು ದಾನಿಗಳಿಗೆ ಸಿಎಂ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಪರಿಹಾರನಿಧಿ ಕೊವಿಡ್-19 ಹೆಸರಿನ ಖಾತೆಗೆ ಧನಸಹಾಯಕ್ಕೆ ಮನವಿ ಮಾಡಲಾಗಿದೆ. ಧನಸಹಾಯ ಮಾಡಲಿ ಇಚ್ಛಿಸುವವರು ಖಾತೆ ಸಂಖ್ಯೆ-39234923151 ಹಾಗೂ ಐಎಫ್‍ಎಸ್‍ಸಿ ಕೋಡ್ – ಎಸ್‍ಬಿಐಎನ್0040277 ಹಣ ಹಾಕಬಹುದು ಎಂದು ಕೇಳಿಕೊಳ್ಳಲಾಗಿದೆ.

    ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೇ ರಾಜ್ಯದಲ್ಲಿ ಜಾಸ್ತಿಯಾಗುತ್ತಿದೆ. ಇಂದು ಈ ವಿಚಾರವಾಗಿ ಮಾತನಾಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಇಂದು ಒಂದೇ ದಿನ ಹತ್ತು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮಂಗಳವಾರ 41 ಇದ್ದ ಸಂಖ್ಯೆ ಇಂದು 51ಕ್ಕೆ ಏರಿಕೆಯಾಗಿದೆ. ಹಾಗಾಗಿ ಕೊರೊನಾ ವೈರಸ್ ತಡೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ತೆಗದುಕೊಳ್ಳುತ್ತಿದೆ. ಇದಕ್ಕೆ ಜನರು ಸಹಕರಿಸಬೇಕು ಎಂದು ಕೇಳಿಕೊಂಡಿದ್ದರು.

  • ಕೃಷ್ಣಮಠದ ಆನೆ ಶಿಫ್ಟ್ ಮಾಡಿದ್ದಕ್ಕೆ ದಾನಿಗಳ ಆಕ್ರೋಶ

    ಕೃಷ್ಣಮಠದ ಆನೆ ಶಿಫ್ಟ್ ಮಾಡಿದ್ದಕ್ಕೆ ದಾನಿಗಳ ಆಕ್ರೋಶ

    ಉಡುಪಿ: ನಗರದ ಶ್ರೀಕೃಷ್ಣ ಮಠದ ಆನೆ ಸುಭದ್ರೆಯನ್ನು ಹೊನ್ನಾಳಿ ಮಠಕ್ಕೆ ರಾತ್ರೋರಾತ್ರಿ ಶಿಫ್ಟ್ ಮಾಡಿದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

    ಕಳೆದ ಎರಡು ದಶಕಗಳಿಂದ ಉಡುಪಿ ಕೃಷ್ಣ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದ ಆನೆ ಸುಭದ್ರೆಯನ್ನು ಸ್ಥಳಾಂತರ ಮಾಡಿದ್ದ ಬಗ್ಗೆ ಭಕ್ತರಲ್ಲಿ ಗೊಂದಲವಾಗಿತ್ತು. ಅಷ್ಟಾಗುತ್ತಲೇ ಆನೆಯನ್ನು 25 ವರ್ಷಗಳ ಹಿಂದೆ ಮಠಕ್ಕೆ ದಾನ ನೀಡಿದ್ದ ಮುಂಬೈನಲ್ಲಿ ನೆಲೆಸಿರುವ ಉರುವಾಲ್ ಕುಟುಂಬ ಸದಸ್ಯ ಉಡುಪಿಗೆ ಓಡೋಡಿ ಬಂದಿದ್ದಾರೆ. ಆನೆಯನ್ನು ಮಠದಲ್ಲಿ ಇರಿಸಿ, ಇಲ್ಲದಿದ್ದರೆ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಕಳುಹಿಸಿ ಎಂದಿದ್ದಾರೆ. ಆನೆಗೆ ಅನಾರೋಗ್ಯ ಇರುವುದರಿಂದ ಟ್ರೀಟ್‍ಮೆಂಟ್ ಮಾಡಿಸಬೇಕು. ಹೊನ್ನಾಳಿ ಮಠದಲ್ಲಿ ಆನೆ ವಾಸಿಸುವ ಯಾವುದೇ ವಾತಾವರಣ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೃಷ್ಣಮಠದ ‘ಸುಭದ್ರೆ’ ರಾತ್ರೋ ರಾತ್ರಿ ಹೊನ್ನಾಳಿ ಮಠಕ್ಕೆ ಸ್ಥಳಾಂತರ

    ಈ ಬಗ್ಗೆ ಪ್ರತಿಕ್ರಿಯಿಸಿದ ದಾನಿ ಸಂದೇಶ್ ಉರುವಾಲ್, ಮಧ್ಯರಾತ್ರಿ 2 ಗಂಟೆಗೆ ಮ್ಯಾನೇಜರ್ ಪ್ರಹ್ಲಾದ್ ಆಚಾರ್ಯ ಅವರು ಕಾನೂನು ಮುರಿದಿದ್ದಾರೆ. ಯಾವುದೇ ಆನೆ ಶಿಫ್ಟ್ ಮಾಡುವ ಮೊದಲು ಅರಣ್ಯ ಇಲಾಖೆ ನೇಮಿಸಿದ ವೆಟಿನರಿ ಡಾಕ್ಟರ್ ಇರಬೇಕಿತ್ತು. ಆದರೆ ಅಲ್ಲಿ ಯಾವುದೇ ವೈದ್ಯರು ಇರಲಿಲ್ಲ. ಅವರು ಹತ್ತಿರದ ಅರಣ್ಯಾಧಿಕಾರಿಗಳಿಂದ ಅನುಮತಿ ಪಡೆಯದೇ ಯಾವುದೇ ಸೌಲಭ್ಯ ಇಲ್ಲದಿರುವ ಜಾಗದಲ್ಲಿ ನೇರವಾಗಿ ಆನೆಯನ್ನು ಶಿಫ್ಟ್ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

    ನಾನು 4 ವರ್ಷಗಳ ಹಿಂದೆ ನಾನು ಸಕ್ರೆಬೈಲಿನಲ್ಲಿದೆ. ಆಗ ಆ ಆನೆಗೆ ಭಾರೀ ಗಾಯವಾಗಿದ್ದ ಕಾರಣ ಮಠದ ಇಬ್ಬರು ಸದಸ್ಯರು ನನಗೆ ಇಲ್ಲಿ ಕರೆದುಕೊಂಡು ಬಂದಿದ್ದರು. ಆನೆ ಇಲ್ಲದೆ ನನಗೆ ತುಂಬಾ ನೋವಾಗುತ್ತಿದೆ. ಅಲ್ಲದೆ ನನಗೆ ಊಟ, ನಿದ್ದೆ ಕೂಡ ಸೇರುತ್ತಿಲ್ಲ. ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ನಾನು ಆನೆಯನ್ನು ನೋಡಿಕೊಳ್ಳುತ್ತದೆ. ಮಧ್ಯರಾತ್ರಿ ಆನೆಯನ್ನಯ ಹೊನ್ನಾಳಿ ಮಠಕ್ಕೆ ಕರೆದುಕೊಂಡು ಹೋದರು. ಆದರೆ ಯಾಕೆ ಎಂದು ಅವರು ನನಗೆ ಹೇಳಲಿಲ್ಲ. ಆನೆ ಲಾರಿ ಹತ್ತಲು ಒಪ್ಪಲಿಲ್ಲ. ಆದರೂ ಅವರು ಬಲವಂತವಾಗಿ ಆನೆಯನ್ನು ಕರೆದುಕೊಂಡು ಹೋದರು ಎಂದು ಮಾವುತ ಲಿಯಾಕತ್ ತಿಳಿಸಿದ್ದಾರೆ.

    ಕೃಷ್ಣ ಮಠದ ಆನೆ ಸುಭದ್ರೆಯನ್ನು ಸೋಮವಾರ ಮುಂಜಾನೆ 4 ಗಂಟೆಯ ವೇಳೆಗೆ ಸುದ್ದಿಯಿಲ್ಲದೆ, ಗೌಪ್ಯವಾಗಿ ಕೊಂಡೊಯ್ಯಲಾಗಿತ್ತು. ಕೃಷ್ಣಮಠದ ಪರ್ಯಾಯ ಪಲಿಮಾರು ಮಠದ ಮ್ಯಾನೇಜರ್ ಪ್ರಹ್ಲಾದ್ ಆಚಾರ್ಯ ಸೂಚನೆ ಮೇರೆಗೆ ರವಾನಿಸಲಾಗಿತ್ತು.