Tag: ದಾದಾ ಸಾಹೇಬ್ ಪಾಲ್ಕೆ

  • ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿ

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿ

    – ‘ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್’ ಪ್ರಶಸ್ತಿಗೆ ಮುತ್ತಿಟ್ಟ ಕಿಚ್ಚ

    ಮುಂಬೈ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಗಿದೆ.

    ದಾದಾ ಸಾಹೇಬ್ ಪಾಲ್ಕೆ ಹಾಗೂ ಮಹಾತ್ಮ ಗಾಂಧೀಜಿ ಅವರ 150ನೇ ವರ್ಷದ ಜನ್ಮದಿನೋತ್ಸವದ ಅಂಗವಾಗಿ ಮುಂಬೈನಲ್ಲಿ ಗುರುವಾರ ಅದ್ದೂರಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುದೀಪ್ ಅವರಿಗೆ ದಾದಾ ಸಾಹೇಬ್ ಪಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ 2020ರ ‘ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

    `ದಬಾಂಗ್ 3′ ಸಿನಿಮಾದ ಬಲ್ಲಿಸಿಂಗ್ ಪಾತ್ರಕ್ಕೆ ಕಿಚ್ಚನಿಗೆ ಈ ಹೆಮ್ಮೆಯ ಪ್ರಶಸ್ತಿ ಒಲಿದಿದೆ. ಪ್ರಶಸ್ತಿ ಸ್ವೀಕರಿಸಿದ ಸುದೀಪ್, ‘ದಬಾಂಗ್ 3’ ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿ, ಪ್ರಶಸ್ತಿಯನ್ನು ಫ್ಯಾಮಿಲಿಗೆ ಡೆಡಿಕೇಟ್ ಮಾಡಿದ್ದಾರೆ.

    ಇದೇ ವೇಳೆ ಮಾತನಾಡಿ ಸುದೀಪ್, ಇಂತಹ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ತಮಗೆಲ್ಲರಿಗೂ ಧನ್ಯವಾದ. ಕಳೆದ ಹದಿನೈದು, ಹದಿನಾರು ವರ್ಷಗಳಿಂದ ನಾನು ಯಾವುದೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹೋಗಿಲ್ಲ. ಆದರೆ ನೀವು ನೀಡಿದ ಗೌರವದಿಂದ ಇಲ್ಲಿಗೆ ಬಂದು ಪ್ರಶಸ್ತಿ ಸ್ವೀಕರಿಸುತ್ತಿರುವೆ ಎಂದು ತಿಳಿಸಿದರು.

  • ‘ಸರಬ್ಜಿತ್’ ಚಿತ್ರದ ನಟನೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಐಶ್ವರ್ಯಾ ರೈ

    ‘ಸರಬ್ಜಿತ್’ ಚಿತ್ರದ ನಟನೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಐಶ್ವರ್ಯಾ ರೈ

    ಮುಂಬೈ: ಬಾಲಿವುಡ್‍ನ ನೀಲಿ ಕಂಗಳ ಸುಂದರಿ ಐಶ್ವರ್ಯ ರೈ ಬಚ್ಚನ್ `ಸರಬ್ಜಿತ್’ ಚಿತ್ರದ ನಟನೆಗಾಗಿ ಶನಿವಾರ ಸಿನಿಮಾ ಲೋಕದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

    ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಐಶ್ವರ್ಯಾರ ಸೌಂದರ್ಯತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಒಮಂಗ್ ಕುಮಾರ್ ನಿರ್ದೇಶನದ ಸರಬ್ಜಿತ್ ಸಿನಿಮಾದಲ್ಲಿ ಐಶ್ವರ್ಯ, ದಲ್ಬೀರ್ ಕೌರ್ ಆಗಿ ಕಾಣಿಸಿಕೊಂಡಿದ್ದರು. ರಣ್ ದೀಪ್ ಹೂಡಾ ಚಿತ್ರದಲ್ಲಿ ಸರಬ್ಜಿತ್ ಪಾತ್ರದಲ್ಲಿ ನಟಿಸಿದ್ರು. ಚಿತ್ರದ ಐಶ್ವರ್ಯ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

    2016 ರಲ್ಲಿ ಐಶ್ವರ್ಯ ರೈ ನಟನೆಯ `ಏ ದಿಲ್ ಹೈ ಮುಷ್ಕಿಲ್’ ಚಿತ್ರ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿತ್ತು. ಚಿತ್ರದಲ್ಲಿ ರಣ್‍ಬೀರ್ ಕಪೂರ್, ಅನುಷ್ಕಾ ಶರ್ಮಾ ನಟಿಸಿದ್ದರು. ಏ ದಿಲ್ ಹೈ ಮುಷ್ಕಿಲ್ ಬಾಕ್ಸ್ ಆಫೀಸ್‍ನಲ್ಲಿ ನೂರು ಕೋಟಿಗೂ ಅಧಿಕ ಹಣವನ್ನು ಗಳಿಸಿತ್ತು.