Tag: ದಾಖಲೆ

  • ಬೊಂಬೆ ಹೇಳುತೈತೆ: ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ

    ಬೊಂಬೆ ಹೇಳುತೈತೆ: ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ

    ಸಿನಿಮಾ ಪತ್ರಕರ್ತನಾಗಿ ಪರಿಚಿತರಾಗಿದ್ದ ಯತಿರಾಜ್ (Yathiraj) ನಂತರ ಕಲಾವಿದನಾಗಿ ಚಿರಪರಿಚಿತರಾದರು. ಈಗ ಯತಿರಾಜ್ ನಿರ್ದೇಶಕನಾಗೂ ಪ್ರಸಿದ್ದರಾಗುತ್ತಿದ್ದಾರೆ. ಪ್ರಸ್ತುತ ಅವರು ನಿರ್ದೇಶಿಸಿ, ಏಕಪಾತ್ರದಲ್ಲಿ ನಟಿಸಿರುವ “ಬೊಂಬೆ ಹೇಳುತೈತೆ” (Bombe Helataite) ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಈ ಚಿತ್ರದ ಮೂಲಕ ಯತಿರಾಜ್ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ (Record) ಬರೆದಿದ್ದಾರೆ. ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಯತಿರಾಜ್ ವಿವರಣೆ ನೀಡಿದರು.

    ನಾನು ಇಪ್ಪತ್ತೈದು ವರ್ಷಗಳ ಹಿಂದೆ ಸಿನಿಮಾದ ಒಂದು ಸನ್ನಿವೇಶದಲ್ಲಿ ಕಂಡರೆ ಸಾಕು ಎಂದು ಕೊಂಡಿದ್ದವನು. ಆನಂತರ ಅನೇಕ ಚಿತ್ರಗಳಲ್ಲಿ ಅಭಿನಯಿಸಿದೆ. ನಂತರ ನಿರ್ದೇಶಕನಾಗುವ ಕನಸು ಈಡೇರಿತು. ಈತನಕ ಆರು ಚಿತ್ರಗಳನ್ನು ನಿರ್ದೇಶಿಸಿದ್ಧೇನೆ. ಇಡೀ ಚಿತ್ರ ಪೂರ್ತಿ ಒಂದೇ ಪಾತ್ರವಿರಬೇಕು. ಅದರಲ್ಲಿ ನಟಿಸಬೇಕು ಎಂಬ ಆಸೆಯಿತ್ತು. ಇದಕ್ಕೆ ಸ್ಪೂರ್ತಿ ಹಿಂದಿಯಲ್ಲಿ ಸುನಿಲ್ ದತ್ ಹಾಗೂ ತಮಿಳಿನಲ್ಲಿ ಪಾರ್ಥಿಬನ್ ಅವರು ಎಂದರೆ ತಪ್ಪಾಗಲಾರದು. ಈ ವಿಷಯವನ್ನು ನನ್ನ ಮಗ ಪೃಥ್ವಿರಾಜ್‌ ಮುಂದೆ ಹೇಳಿದಾಗ, ಅವನು “ಬೊಂಬೆ ಹೇಳುತೈತೆ” ಚಿತ್ರದ ಕಥೆ ಹೇಳಿದ್ದ. ಪರಿಕಲ್ಪನೆ ಅವನದೆ. ಕಥೆ ಕೇಳಿ ಮೆಚ್ಚಿದ ಮಾರುತಿ ಪ್ರಸಾದ್ ನಿರ್ಮಾಣಕ್ಕೆ ಮುಂದಾದರು. ಚನ್ನಪಟ್ಟಣದ ಒಂದು ಬೊಂಬೆ ಅಂಗಡಿಯಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಚಿತ್ರ ಸೆನ್ಸಾರ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿದೆ. ಚಿತ್ರ ಮುಗಿದ ಮೇಲೆ ನನಗೊಂದು ವಿಷಯ ತಿಳಿಯಿತು. ಈವರೆಗೂ ಕನ್ನಡದಲ್ಲಿ ಒಬ್ಬ ವ್ಯಕ್ತಿ ತಾನೇ ನಿರ್ದೇಶಿಸಿ, ಏಕಪಾತ್ರದಲ್ಲಿ ನಟಿಸಿರುವ ಯಾವ ಚಿತ್ರಗಳು ಬಂದಿಲ್ಲ ಎಂದು. ಏಕ ಪಾತ್ರ, ದ್ವಿಪಾತ್ರ ಚಿತ್ರಗಳು ಬಂದಿದೆಯಾದರೂ, ನಿರ್ದೇಶಕರು ಬೇರೆಯವರಾಗಿರುತ್ತಾರೆ. ಅವರೆ ನಿರ್ದೇಶಿಸಿ ಜೊತೆಗೆ ಏಕಪಾತ್ರದಲ್ಲಿ ನಟಿಸಿರುವ ಕನ್ನಡದ ಮೊದಲ ಚಿತ್ರ ಇದೇ ಎನ್ನಬಹುದು. ಹಾಗಂತ ನಾನು ಯಾವ ದಾಖಲೆಗೂ ಇದನ್ನು ಕಳುಹಿಸಿಲ್ಲ. ಇದೇ ಮಾರ್ಚ್ 23ರ ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ. ಅದರಲ್ಲಿ ನಮ್ಮ‌ ಚಿತ್ರ ಪ್ರದರ್ಶನವಾಗಬೇಕೆಂಬ ಆಸೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ. ಸಕಾಲ ನೋಡಿಕೊಂಡು ಮುಂದಿನ ದಿನಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇನೆ ಎಂದ ನಿರ್ದೇಶಕ ಹಾಗೂ ನಟ ಯತಿರಾಜ್, ಸಹಕಾರ ನೀಡಿದ ಚಿತ್ರತಂಡದ ಸದಸ್ಯರಿಗೆ ಹಾಗೂ ಸ್ನೇಹಿತರಿಗೆ ಧನ್ಯವಾದ ತಿಳಿಸಿದರು. ಇದನ್ನೂ ಓದಿ: Exclusive: ʻಯುವ’ ಚಿತ್ರಕ್ಕೆ ಸಪ್ತಮಿ ಗೌಡ ಸೆಲೆಕ್ಟ್ ಆಗಿದ್ದು ಹೇಗೆ?

    ಕಥೆ ಬರೆದಿರುವ ಪೃಥ್ವಿರಾಜ್, ಛಾಯಾಗ್ರಾಹಕ ವಿದ್ಯಾ ನಾಗೇಶ್ ಹಾಗೂ ಸಹ ನಿರ್ದೇಶಕ ಅರುಣ್ ಚಿತ್ರದ ಕುರಿತು ಮಾತನಾಡಿದರು. ಪಿ ಆರ್ ಓ ಸುಧೀಂದ್ರ ವೆಂಕಟೇಶ್, ಸಿರಿ ಮ್ಯೂಸಿಕ್ ನ ಚಿಕ್ಕಣ್ಣ ಮತ್ತು ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಸಂಪರ್ಕಾಧಿಕಾರಿ ಶಂಕರ್ ಚಿತ್ರಕ್ಕೆ ಶುಭ ಕೋರಿದರು. ಪತ್ರಿಕಾಗೋಷ್ಠಿಗೂ ಮುನ್ನ ಯತಿರಾಜ್ ಅವರೆ ಬರೆದಿರುವ, ರಾಜ್ ಭಾಸ್ಕರ್ ಸಂಗೀತ ನೀಡಿರುವ ಹಾಡನ್ನು ಹಾಗೂ ಚಿತ್ರದ ಟ್ರೇಲರ್ ಪ್ರದರ್ಶಿಸಲಾಯಿತು.

  • ನಾಳೆ 18 ಚಿತ್ರಗಳು ಬಿಡುಗಡೆ: ಸಿನಿಮಾ ಸುನಾಮಿಗೆ ಪ್ರೇಕ್ಷಕರೇ ತತ್ತರ

    ನಾಳೆ 18 ಚಿತ್ರಗಳು ಬಿಡುಗಡೆ: ಸಿನಿಮಾ ಸುನಾಮಿಗೆ ಪ್ರೇಕ್ಷಕರೇ ತತ್ತರ

    ವಾರಕ್ಕೆ ಹೆಚ್ಚೆಂದರೆ ಐದಾರು ಚಿತ್ರಗಳು ಬಿಡುಗಡೆ ಆಗುವುದು ವಾಡಿಕೆ. ಅದೂ ಕೂಡ ಆರೋಗ್ಯಕರವಾದದ್ದು ಅಲ್ಲ. ಈ ಪ್ರಮಾಣದಲ್ಲಿ ಚಿತ್ರಗಳು ರಿಲೀಸ್ ಆದರೆ, ಥಿಯೇಟರ್ ಸಮಸ್ಯೆಯ ಜೊತೆ ಪ್ರೇಕ್ಷಕರಿಗೆ ಕಿರಿಕಿರಿ ಆಗುವುದು ಸಹಜ. ರಿಲೀಸ್ ಆದ ಅಷ್ಟೂ ಚಿತ್ರಗಳು ಚೆನ್ನಾಗಿದ್ದರೆ, ಪ್ರೇಕ್ಷಕರು ಹಣವನ್ನು ಒಂದೇ ಕಾಲಕ್ಕೆ ತರೋದು ಹೇಗೆ? ಇಂತಹ ನೂರಾರು ಪ್ರಶ್ನೆಗಳ ನಡುವೆಯೇ ನಾಳೆ ಕರ್ನಾಟಕದಲ್ಲಿ 18 ಚಿತ್ರಗಳು ಬಿಡುಗಡೆ ಆಗುತ್ತಿವೆ.

    ಈ 18 ಚಿತ್ರಗಳ ಪೈಕಿ ಕನ್ನಡದಲ್ಲೇ 10 ಸಿನಿಮಾಗಳು ಇರುವುದು ಮತ್ತಷ್ಟು ಗಾಬರಿ ಪಡೆಸುವಂತಹ ವಿಷಯ. ವಿಜಯಾನಂದ, ಬಾಂಡ್ ರವಿ, ಡಾ.56, ನಾನೇ ರಾಕ್ಷಸ, ದ್ವಿಪಾತ್ರ, ಸುನಾಮಿ 143, ಕ್ಷೇಮಗಿರಿಯಲ್ಲಿ ಕರ್ನಾಟಕ, ಪ್ರಾಯಶಃ, ಮೈಸೂರು ಡೈರೀಸ್, ಪಂಖುರಿ ಹೀಗೆ ಕನ್ನಡದ ಹತ್ತು ಚಿತ್ರಗಳು ಈ ವಾರ ತೆರೆಕಾಣುತ್ತಿವೆ. ಇವುಗಳ ಜೊತೆಗೆ ಇನ್ನೂ ಎಂಟು ಚಿತ್ರಗಳು ಪರಭಾಷೆಯ ಚಿತ್ರಗಳಾಗಿವೆ. ಇದನ್ನೂ ಓದಿ: ರಶ್ಮಿಕಾ ಕನ್ನಡದ ಹುಡುಗಿ, ಬ್ಯಾನ್ ಯಾಕೆ ಮಾಡಬೇಕು: ಧನಂಜಯ್

    ಸಲಾಂ ವೆಂಕಿ, ನಾಯಿ ಶೇಖರ್ ರಿಟರ್ನ್ಸ್, ಗುರ್ತುಂದ ಶೀಲಕಾಲಂ, ವರಲಾರು ಮುಕ್ಕಿಯಂ, ಪಂಚತಂತ್ರಂ, ಮುಖಚಿತ್ರಂ ಸೇರಿದಂತೆ ಹಲವು ಪರಭಾಷಾ ಚಿತ್ರಗಳು ಕೂಡ ಈ ವಾರ ಕನ್ನಡದಲ್ಲಿ ರಿಲೀಸ್ ಆಗುತ್ತಿದ್ದು, ಅಷ್ಟೂ ಥಿಯೇಟರ್ ಗಳಲ್ಲೂ ಪ್ರದರ್ಶನಕ್ಕೆ ಸಿದ್ಧವಾಗಿವೆ. ಕೆಲವರಿಗೆ ಹೆಚ್ಚು ಚಿತ್ರಮಂದಿರಗಳು ಸಿಕ್ಕರೆ, ಇನ್ನೂ ಕೆಲವರು ಥಿಯೇಟರ್ ಗಾಗಿ ಗುದ್ದಾಟ ಕೂಡ ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂತಾರ 1 ಕೋಟಿ ಟಿಕೆಟ್ಸ್ ಮಾರಾಟ: ದಾಖಲೆಗಳು ಪುಡಿಪುಡಿ

    ಕಾಂತಾರ 1 ಕೋಟಿ ಟಿಕೆಟ್ಸ್ ಮಾರಾಟ: ದಾಖಲೆಗಳು ಪುಡಿಪುಡಿ

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ಕರ್ನಾಟಕದಲ್ಲಿರುವ ಬಹುತೇಕ ದಾಖಲೆಗಳನ್ನು ಬ್ರೇಕ್ ಮಾಡುತ್ತಾ ಮುಂದೆ ಸಾಗುತ್ತಿದೆ. ಈಗಾಗಲೇ ಗಳಿಕೆಯ ಲೆಕ್ಕದಲ್ಲಿ ಕೆಜಿಎಫ್ 2 ಸಿನಿಮಾವನ್ನೂ ಹಿಂದಿಕ್ಕೆ ಮುಂದೆ ಸಾಗುತ್ತಿದೆ. ಇದೀಗ ಸಿಕ್ಕಿರುವ ಮತ್ತೊಂದು ಮಾಹಿತಿ ಅಂದರೆ, ಈವರೆಗೂ ಕರ್ನಾಟಕದಲ್ಲಿ ಈ ಸಿನಿಮಾದ ಟಿಕೆಟ್ಸ್ (Tickets) ಬರೋಬ್ಬರು ಒಂದು ಕೋಟಿ ಮಾರಾಟವಾಗಿವೆಯಂತೆ. ಈ ಮೂಲಕ ಬಹುತೇಕ ದಾಖಲೆಗಳನ್ನು ಕಾಂತಾರ ಪುಡಿಪುಡಿ ಮಾಡಿ ಮುನ್ನುಗ್ಗುತ್ತಿದೆ.

    ಕಾಂತಾರ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿಯನ್ನು ಮತ್ತಷ್ಟು ಎತ್ತರಕ್ಕೆ ಕರೆದುಕೊಂಡು ಹೋಗಿದೆ. ಕೇವಲ ಕನ್ನಡ ಸಿನಿಮಾ ರಂಗದಲ್ಲಿ ನಟ ಹಾಗೂ ನಿರ್ದೇಶಕರಾಗಿ ಹೆಸರು ಮಾಡಿದ್ದವರು, ಇಂದು ಜಾಗತಿಕ ಮಟ್ಟದಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿದ್ದಾರೆ. ಹಾಗಾಗಿ ನಾನಾ ಸಿನಿಮಾ ರಂಗದಿಂದ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಮೊನ್ನೆಯಷ್ಟೇ ತೆಲುಗಿನಲ್ಲಿ ಸಿನಿಮಾ ಮಾಡುವಂತೆ ಅಲ್ಲು ಅರ್ಜುನ್ ತಂದೆ ಕೇಳಿಕೊಂಡಿದ್ದರು. ಇದೀಗ ಬಾಲಿವುಡ್ ನಿಂದಲೂ ಅವಕಾಶ ಬಂದಿದೆ.

    ಈ ಕುರಿತು ಮಾತನಾಡಿರುವ ರಿಷಬ್ ಶೆಟ್ಟಿ (Rishabh Shetty), ‘ನನಗೆ ಬಾಲಿವುಡ್ ಮತ್ತು ತೆಲುಗು ಸಿನಿಮಾ ರಂಗದಿಂದ ಆಫರ್ ಬಂದಿದ್ದು ನಿಜ. ಆದರೆ, ಸದ್ಯಕ್ಕೆ ನಾನು ಎಲ್ಲಿಯೂ ಹೋಗುತ್ತಿಲ್ಲ. ಕನ್ನಡದಲ್ಲೇ ಮಾಡುವುದಕ್ಕೆ ತುಂಬಾ ಕೆಲಸಗಳಿವೆ. ಹಾಗಾಗಿ ಇಲ್ಲಿಯೇ ಇದ್ದುಕೊಂಡು ಸಿನಿಮಾ ಮಾಡುತ್ತೇನೆ. ಆ ಸಿನಿಮಾವನ್ನೇ ವಿವಿಧ ಸಿನಿಮಾ ರಂಗದ ಪ್ರೇಕ್ಷಕರು ನೋಡಲಿ ಎನ್ನುವುದು ನನ್ನಾಸೆ ಅಂದಿದ್ದಾರೆ. ಇದನ್ನೂ ಓದಿ:ಬಹಿರಂಗವಾಗಿ ನೋವು ಹಂಚಿಕೊಂಡ ರಶ್ಮಿಕಾ: ನೋವು ಕೊಟ್ಟೋರು ಉದ್ದಾರಾಗ್ತಾರಾ ಎಂದ ಫ್ಯಾನ್ಸ್

    ಹಿಂದಿ ಸಿನಿಮಾ ರಂಗದ ಬಗ್ಗೆಯೂ ಮಾತನಾಡಿರುವ ಅವರು, ತಾವು ಯಾವಾಗಲೂ ಅಮಿತಾಭ್ ಬಚ್ಚನ್ ಅವರನ್ನು ಕೊಂಡಾಡುವುದಾಗಿಯೂ ತಿಳಿಸಿದ್ದಾರೆ. ಈ ಹೊತ್ತಿನ ನಟರಾದ ಶಾಹಿದ್ ಕಪೂರ್ ಮತ್ತು ಈಗಾಗಲೇ ಸಿನಿಮಾ ರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಶಾರುಖ್ ಖಾನ್ ಕುರಿತಾಗಿಯೂ ಅವರು ಮಾತನಾಡಿದ್ದಾರೆ. ಎಲ್ಲ ಸಿನಿಮಾ ರಂಗದ ಬಗ್ಗೆಯೂ ತಮಗೆ ಅಭಿಮಾನವಿದ್ದು, ಕನ್ನಡದಲ್ಲೇ ಸಿನಿಮಾ ಮಾಡುವ ಮೂಲಕ ಇತರ ಚಿತ್ರರಂಗವನ್ನೂ ಗೌರವಿಸುವುದಾಗಿ ಅವರು ತಿಳಿಸಿದ್ದಾರೆ.

    ಕಾಂತಾರ ಸಿನಿಮಾ ಬಾಲಿವುಡ್ ನಲ್ಲೂ ಸಖತ್ ಸದ್ದು ಮಾಡುತ್ತಿದೆ. ಈವರೆಗೂ 65 ಕೋಟಿಗೂ ಅಧಿಕ ಹಣವನ್ನು ಗಳಿಕೆ ಮಾಡಿದೆ. ಇನ್ನೂ ಹಲವು ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ದೇಶದಾದ್ಯಂತ ಒಟ್ಟು 300 ಕೋಟಿಗೂ ಅಧಿಕ ಹಣ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ. ಹೀಗಾಗಿಯೇ ರಿಷಬ್ ಶೆಟ್ಟಿ ಅವರಿಗೆ ಡಿಮಾಂಡ್ ಕ್ರಿಯೇಟ್ ಆಗಿದೆ. ವಿವಿಧ ಸಿನಿಮಾ ರಂಗದಿಂದ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ಪರಭಾಷೆಯಲ್ಲೂ 100 ಕೋಟಿ ಬಾಚಿದ ‘ಕಾಂತಾರ’: ನಿದ್ದೆಗೆಟ್ಟ ಬಾಲಿವುಡ್

    ಪರಭಾಷೆಯಲ್ಲೂ 100 ಕೋಟಿ ಬಾಚಿದ ‘ಕಾಂತಾರ’: ನಿದ್ದೆಗೆಟ್ಟ ಬಾಲಿವುಡ್

    ರಿಷಬ್ ಶೆಟ್ಟಿ (Rishabh Shetty) ಅವರ ಕಾಂತಾರ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಪರಭಾಷೆ ಸಿನಿಮಾ ರಂಗದಲ್ಲೂ ನೂರು ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಪರಭಾಷೆಯಲ್ಲಿ ನೂರು ಕೋಟಿ ಕ್ಲಬ್ ಸೇರಿದ 2ನೇ ಸಿನಿಮಾ ಇದಾಗಿದೆ. ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಮಾತ್ರವಲ್ಲ, ಬಾಲಿವುಡ್ ನಲ್ಲೂ ದಾಖಲೆ ರೀತಿಯಲ್ಲಿ ಹಣ ಹರಿದು ಬರುತ್ತಿದೆ. ಹಾಗಾಗಿ ಸಹಜವಾಗಿಯೇ ಬಾಲಿವುಡ್ ಸಿನಿಮಾ ರಂಗವನ್ನು ನಿದ್ದೆಗೆಡಿಸಿದೆ.

    ಈ ಹಿಂದೆ ಇದೇ ಹೊಂಬಾಳೆ ಬ್ಯಾನರ್ (Hombale Films) ನಲ್ಲಿ ನಿರ್ಮಾಣವಾದ ಕೆಜಿಎಫ್ 2 ಸಿನಿಮಾ ಬಾಕ್ಸ್ ಆಫೀಸಿನಲ್ಲಿ (Box Office) ಧೂಳ್ ಎಬ್ಬಿಸಿತ್ತು. ಐನೂರು ಕೋಟಿಗೂ ಅಧಿಕ ಹಣವನ್ನು ಗಳಿಕೆ ಮಾಡಿತ್ತು. ಇದೀಗ ಅದೇ ಬ್ಯಾನರ್ ನಲ್ಲಿ ತಯಾರಾದ ಕಾಂತಾರ (Kantara) ಚಿತ್ರ ಕೂಡ ಮಗದೊಂದು ದಾಖಲೆ ಬರೆಯಲು ಸಜ್ಜಾಗಿದೆ. ಬಾಲಿವುಡ್ ನಲ್ಲೂ ಸಿನಿಮಾ ಸಖತ್ ಆಗಿ ಪ್ರದರ್ಶನ ಕಾಣುತ್ತಿದೆ. ವೀಕೆಂಡ್‌ನಲ್ಲಂತೂ ಹಣದ ಹೊಳೆಯೇ ಹರಿಯುತ್ತಿದೆ. ಇದನ್ನೂ ಓದಿ:ಪುನೀತ್ ಪ್ರಥಮ ಪುಣ್ಯಸ್ಮರಣೆ: ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾವುಕ ಪತ್ರ

    ಒಂದು ಕಡೆ ಗಳಿಕೆಯಲ್ಲಿ ಸಿನಿಮಾ ದಾಖಲೆ (Record) ಬರೆದಿದ್ದರೆ, ಮತ್ತೊಂದು ಕಡೆ ರಿಷಬ್ ಶೆಟ್ಟಿ ಅವರಿಗೆ ಅಪರೂಪದ ಗಳಿಕೆಯೊಂದು ಕೂಡಿ ಬಂದಿದೆ.  ಕಾಂತಾರ ಸಿನಿಮಾ ನೋಡಿ ಅಚ್ಚರಿ ಎನ್ನುವಂತೆ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರಿಗೆ ಕರೆ ಮಾಡಿದ್ದರು ಸೂಪರ್ ಸ್ಟಾರ್ ರಜನಿಕಾಂತ್. ಅದೊಂದು ಅನಿರೀಕ್ಷಿತ ಕರೆ ಆಗಿದ್ದರಿಂದ ರಿಷಬ್ ಕೂಡ ಅಚ್ಚರಿ ಪಟ್ಟಿದ್ದರು. ಸೂಪರ್ ಸ್ಟಾರ್ ಒಬ್ಬರು ಸಿನಿಮಾ ನೋಡಿ, ಕರೆ ಮಾಡಿದ್ದರಿಂದ ಅವರಿಗೆ ಕೃತಜ್ಞತೆ ಹೇಳುವುದಕ್ಕಾಗಿ ರಿಷಬ್ ರೆಡಿಯಾಗಿದ್ದರು. ಅಷ್ಟರಲ್ಲೇ ಮತ್ತೊಂದು ಸರ್ ಪ್ರೈಸ್ ನೀಡಿದ್ದಾರೆ ರಜನಿ. ಸ್ವತಃ ರಿಷಬ್ ಅವರನ್ನು ತಮ್ಮ ಮನೆಗೆ ಕರೆದು ಸನ್ಮಾನ ಮಾಡಿದ್ದಾರೆ.

    ಕಾಂತಾರ ಮೂಲಕ ನ್ಯಾಷಿನಲ್ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ, ಕೆಲ ಹೊತ್ತು ರಜನಿಕಾಂತ್ ಅವರ ಜೊತೆ ಮಾತನಾಡಿ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕೃತಜ್ಞತೆಯನ್ನೂ ಹೇಳಿದ್ದಾರೆ. ಕಾಂತಾರ ಮೇಕಿಂಗ್, ಅದನ್ನು ಹೇಳಿದ ರೀತಿ, ತೋರಿಸಿದ ಕ್ರಮದ ಬಗ್ಗೆ ರಜನಿಕಾಂತ್ ಮೆಚ್ಚುಗೆಯನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ. ರಜನಿ ಮಾತು ಕೇಳಿ ರಿಷಬ್ ಕೂಡ ಖುಷ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕದಲ್ಲಿ ಕಾಂತಾರ ಹೊಸ ದಾಖಲೆ: 25 ದಿನಗಳಲ್ಲಿ 77 ಲಕ್ಷ ಜನ ವೀಕ್ಷಣೆ

    ಕರ್ನಾಟಕದಲ್ಲಿ ಕಾಂತಾರ ಹೊಸ ದಾಖಲೆ: 25 ದಿನಗಳಲ್ಲಿ 77 ಲಕ್ಷ ಜನ ವೀಕ್ಷಣೆ

    ತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಿ ಕನ್ನಡಿಗರ ಮನೆಮಾತಾಗಿರುವ ಹೆಮ್ಮೆಯ ‘ಹೊಂಬಾಳೆ ಫಿಲಮ್ಸ್ ‘ (Hombale Films) , ಚಿತ್ರರಸಿಕರ ನಿರೀಕ್ಷೆಯಂತೆ ಸತತವಾಗಿ ಯಶಸ್ವಿ ಚಿತ್ರಗಳನ್ನು ದೇಶದ ಚಲನಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿ ಮೆಚ್ಚುಗೆ ಗಳಿಸಿದೆ. ಇತ್ತೀಚೆಗೆ ಬಿಡುಗಡೆಯಾದ  ‘ಕಾಂತಾರ’ (Kantara) ದೇಶ-ವಿದೇಶಗಳಲ್ಲಿ ಜನಮೆಚ್ಚುಗೆ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಇದೀಗ ಕಾಂತಾರ ಬಿಡುಗಡೆಯಾದ ಇಪ್ಪತ್ತೈದು ದಿನಕ್ಕೆ ಹೊಸ ದಾಖಲೆಯೊಂದನ್ನು ನಿರ್ಮಿಸಿರುವುದು ಹೊಂಬಾಳೆ ಫಿಲಮ್ಸ್ ಯಶಸ್ಸಿನ ಮುಕುಟಕ್ಕೆ ಹೊಸ ಗರಿ ಮೂಡಿದೆ.

    ಈವರೆಗೆ ಹೊಂಬಾಳೆ ಬ್ಯಾನರ್ ನಲ್ಲಿ ನಿರ್ಮಿಸಿದ ಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ 25 ದಿನಗಳಲ್ಲಿ 77 ಲಕ್ಷ ಮಂದಿ ಸಿನಿಮಾಪ್ರಿಯರು ಕಾಂತಾರ ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ. ಹೊಂಬಾಳೆ ಫಿಲಮ್ಸ್ ಸಂಸ್ಥೆ  ನಿರ್ಮಿಸಿ 2017 ರಲ್ಲಿ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಿ, ಸಂತೋಷ್ ಆನಂದ್ ರಾಮ್ ನಿರ್ದೇಶಿಸಿದ್ದ ಚಿತ್ರ ‘ ರಾಜಕುಮಾರ’ ಸೂಪರ್ ಹಿಟ್ ಚಿತ್ರವಾಗಿತ್ತು. ಕನ್ನಡಿಗರ ಮನಸೂರೆಗೊಂಡಿರುವ ಈ ಚಲನಚಿತ್ರವನ್ನು 65 ಲಕ್ಷ ಜನರು ವೀಕ್ಷಿಸಿ ದಾಖಲೆ ನಿರ್ಮಾಣವಾಗಿತ್ತು. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    2018 ರಲ್ಲಿ ಹೊಂಬಾಳೆ ನಿರ್ಮಿಸಿದ ಮತ್ತೊಂದು ಸೂಪರ್ ಹಿಟ್ ಚಿತ್ರ ಕೆಜಿಎಫ್ 1 ಬಿಡುಗಡೆಯಾಯಿತು. ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ದೇಶದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು. ಈ ಚಿತ್ರವನ್ನು ಈವರೆಗೆ ಕರ್ನಾಟಕದಲ್ಲಿ 75 ಲಕ್ಷ ಜನರು ವೀಕ್ಷಿಸಿ ಮತ್ತೊಂದು ದಾಖಲೆ ನಿರ್ಮಿಸಿತ್ತು.. ಆ ಮೂಲಕ ಹೊಂಬಾಳೆ ಬ್ಯಾನರ್ ನ ಹಿಂದಿನ ದಾಖಲೆಯನ್ನು ‘ಕೆಜಿಎಫ್ 1 ‘ ಬ್ರೇಕ್ ಮಾಡಿತ್ತು.

    ಹೊಂಬಾಳೆ ಸಂಸ್ಥೆ ನಿರ್ಮಿಸಿ 2022 ರಲ್ಲಿ ಬಿಡುಗಡೆಯಾದ ಮಗದೊಂದು ಚಿತ್ರ ‘ಕೆಜಿಎಫ್ 2’  ದೇಶ-ವಿದೇಶಗಳಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಯಶ್ ಅಭಿನಯದ ಈ ಚಿತ್ರ ಬಾಲಿಹುಡ್ ನ ಎಲ್ಲ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿತ್ತು.. ದೇಶದ ಚಿತ್ರರಂಗವೇ ಕನ್ನಡದ ಕಡೆಗೆ ತಿರುಗಿ ನೋಡುವಂತೆ ಮಾಡಿತ್ತು.. ಕರ್ನಾಟಕದ 72 ಲಕ್ಷ ಸಿನಿಮಾಪ್ರಿಯರು ಇದುವರೆಗೆ ಈ ಚಿತ್ರ ವೀಕ್ಷಿಸಿದ್ದೂ ಕೂಡ ದಾಖಲೆಯಾಗಿ ಉಳಿದಿದೆ.

    ಹೊಂಬಾಳೆ ಬ್ಯಾನರ್ ನ ಚಿತ್ರಗಳು ಸ್ಥಾಪಿಸಿದ ದಾಖಲೆಗಳನ್ನು ಅವರದೇ ಸಂಸ್ಥೆಯ ನಿರ್ಮಾಣದ ಚಿತ್ರಗಳು ಮುರಿಯುತ್ತಾ ನೂತನ ದಾಖಲೆಯೊಂದಿಗೆ ಇತಿಹಾಸ ನಿರ್ಮಿಸುತ್ತಾ ಬಂದಿದೆ. ಇದೀಗ ಕಾಂತಾರ ಚಲನಚಿತ್ರ ಆ ಸಾಲಿಗೆ ಸೇರುವ ಮೂಲಕ ಹೊಂಬಾಳೆ ಸಂಸ್ಥೆಗೆ  ಗರಿಮೆ ಮೂಡಿಸಿದೆ.. ಹೊಂಬಾಳೆ ನಿರ್ಮಾಣದ ಎಲ್ಲ ಚಲನಚಿತ್ರಗಳ ಇದುವರೆಗಿನ ಎಲ್ಲಾ ಹಿಂದಿನ ದಾಖಲೆಗಳನ್ನು ಇಪ್ಪತ್ತೈದು ದಿನಗಳಲ್ಲಿಯೇ ಬ್ರೇಕ್ ಮಾಡಿ ಮುನ್ನುಗ್ಗುತ್ತಿದೆ ‘ಕಾಂತಾರ’ ಎನ್ನುವುದು ಹೆಮ್ಮೆಯ ವಿಷಯ. ಮುಂದಿನ ವಾರಗಳಲ್ಲಿ ಒಂದು ಕೋಟಿ ಸಿನಿಮಾಪ್ರಿಯರು ವೀಕ್ಷಿಸಿ ಮಗದೊಂದು ದಾಖಲೆ ನಿರ್ಮಿಸುವ ಕಡೆಗೆ ‘ಕಾಂತಾರ’ ಸಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕೆಜಿಎಫ್ 2 ದಾಖಲೆ ಉಡಿಸ್ ಮಾಡಿದ ಕಾಂತಾರ:  ಹೊಸ ದಾಖಲೆ ಘೋಷಿಸಿದ ಹೊಂಬಾಳೆ ಫಿಲ್ಮ್ಸ್

    ಕೆಜಿಎಫ್ 2 ದಾಖಲೆ ಉಡಿಸ್ ಮಾಡಿದ ಕಾಂತಾರ: ಹೊಸ ದಾಖಲೆ ಘೋಷಿಸಿದ ಹೊಂಬಾಳೆ ಫಿಲ್ಮ್ಸ್

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಮತ್ತೊಂದು ಹೊಸ ದಾಖಲೆಯನ್ನು ಕ್ರಿಯೇಟ್ ಮಾಡಿದೆ. ಅದು ಕೆಜಿಎಫ್ 2 ದಾಖಲೆಯನ್ನೂ ಉಡಿಸ್ ಮಾಡಿದೆ. ಈವರೆಗೂ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮಾಹಿತಿಯನ್ನು ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಈವರೆಗೆ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ಕಾಂತಾರ’. ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ. ಧನ್ಯವಾದಗಳು ಕರ್ನಾಟಕ ಎಂದು ನಿರ್ಮಾಪಕ ವಿಜಯ್ ಕಿರಂಗದೂರ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಕಣ್ಣೀರಿಟ್ಟ ಜಪಾನ್ ಫ್ಯಾನ್ಸ್

    ಕಾಂತಾರ ಸಿನಿಮಾದ ಒಟ್ಟು ಗಳಿಕೆ 200 ಕೋಟಿ ಎಂದು ಅಂದಾಜಿಸಲಾಗಿದೆ. ಕನ್ನಡದಲ್ಲೇ ಅದು ನೂರು ಕೋಟಿ ಗಳಿಕೆ ಮಾಡಿದೆ. ಬಾಲಿವುಡ್ ನಲ್ಲೂ ಕಾಂತಾರ ಹಿಂದೆ ಬಿದ್ದಿಲ್ಲ. ಹಿಂದಿಯಲ್ಲಿ ಈವರೆಗೂ 22.25 ಕೋಟಿ ಹಣ ಹರಿದು ಬಂದಿದೆಯಂತೆ. ಕೆಜಿಎಫ್ 2 ಸಿನಿಮಾದ ನಂತರ ಕನ್ನಡ ಸಿನಿಮಾವೊಂದು ಈ ಪರಿ ಗಳಿಕೆ ಮಾಡಿದ ಹೆಗ್ಗಳಿಕೆ ಕಾಂತಾರದ್ದು.

    ಒಂದು ಕಡೆ ಬಾಕ್ಸ್ ಆಫೀಸಿನಲ್ಲಿ ಸಿನಿಮಾ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ ಹಿಂದೂ ಸಂಸ್ಕೃತಿಗೆ ಸಂಬಂಧಿಸಿದಂತೆ ಈ ಸಿನಿಮಾ ವಿವಾದಕ್ಕೆ ಕಾರಣವಾಗಿದೆ. ಚೇತನ್ ಮತ್ತು ಬೆಂಬಲಿಗರು ಸಿನಿಮಾದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಹಿಂದೂಪರ ಸಂಘಟನೆಯ ಕಾರ್ಯಕರ್ತರು ಚೇತನ್ ವಿರುದ್ಧ ದಂಗೆ ಎದ್ದಿದ್ದಾರೆ. ಕೆಲವು ಕಡೆ ಚೇತನ್ ಮೇಲೆ ದೂರು ಕೂಡ ದಾಖಲಾಗಿವೆ.

    Live Tv
    [brid partner=56869869 player=32851 video=960834 autoplay=true]

  • 5 ವರ್ಷದ ಬಳಿಕ ಮತ್ತೆ ದಾಖಲೆಯತ್ತ ಬೆಂಗಳೂರು ಮಹಾಮಳೆ!

    5 ವರ್ಷದ ಬಳಿಕ ಮತ್ತೆ ದಾಖಲೆಯತ್ತ ಬೆಂಗಳೂರು ಮಹಾಮಳೆ!

    ಬೆಂಗಳೂರು: ಕಳೆದ ಎರಡ್ಮೂರು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಕಳೆದ 5 ವರ್ಷಗಳ ಬಳಿಕ ಮತ್ತೆ ಸಿಲಿಕಾನ್ ಸಿಟಿಯಲ್ಲಿ ಮಳೆ ದಾಖಲೆ ಸೃಷ್ಟಿಸಿದೆ.

    ಹೌದು, ಈ ಹಿಂದೆ 2017ರಲ್ಲಿ 170 ಮಿ.ಮೀ. ಮಳೆಯಾಗುವ ಮೂಲಕ ದಾಖಲೆ ಸೃಷ್ಟಿಯಾಗಿತ್ತು. ಇದೀಗ 5 ವರ್ಷದ ಬಳಿಕ ಮತ್ತೆ ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆಯಾಗಿದ್ದು, ಹೊಸ ದಾಖಲೆಯಾಗಿದೆ. ಈ ವರ್ಷ ಇಲ್ಲಿವರೆಗೆ 166 ಮಿ.ಮೀ. ಮಳೆಯಾಗಿದೆ. ಇದನ್ನೂ ಓದಿ: ಧರ್ಮಸ್ಥಳ, ಹಾಸನಾಂಬೆ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ – ಮಕ್ಕಳು ಸೇರಿ 9 ಮಂದಿ ದುರ್ಮರಣ

    2011ರಲ್ಲಿ 110 ಮಿ.ಮೀ. ಮಳೆ ಸುರಿದು ದಾಖಲೆ ಬರೆದಿತ್ತು. ಆದರೆ ನಿನ್ನೆ ಒಂದೇ ದಿನ 11 ಮಿ.ಮೀ. ಮಳೆ ಸುರಿದಿದೆ. ಮುಂದಿನ 5 ದಿನ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದ್ದು, ಎಲ್ಲೆಡೆ ಅಲರ್ಟ್ ಘೋಷಿಸಲಾಗಿದ್ದು, ಸದ್ಯ ಸಾರ್ವಕಾಲಿಕ ದಾಖಲೆಯಾಗುವ ಸಾಧ್ಯತೆ ಇದೆ. ಜನವರಿಯಿಂದಲೇ ಈ ಬಾರಿ ನಗರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ.

    rain

    ನಗರದಲ್ಲಿ ಮುಂಗಾರು ಮಳೆ
    ನಗರದಲ್ಲಿ ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ವಾಡಿಕೆಗಿಂತ ಶೇ. 11ರಷ್ಟು ಹೆಚ್ಚು ಮಳೆಯಾಗಿದ್ದು, ಅಕ್ಟೋಬರ್ 1 ರಿಂದ ಅಕ್ಟೋಬರ್ 15 ರವರೆಗೆ 123 ಮಿ.ಮೀ ಅಂದರೆ ವಾಡಿಕೆಗಿಂತ ಶೇ. 40ರಷ್ಟು ಹೆಚ್ಚು ಮಳೆಯಾಗಲಿದೆ. ಇದನ್ನೂ ಓದಿ: ಸ್ವಿಟ್ಜರ್‌ಲೆಂಡ್ ನಲ್ಲಿ ಬುರ್ಖಾ ಬ್ಯಾನ್‌ಗೆ ಪ್ರಸ್ತಾವನೆ – ನಿಯಮ ಉಲ್ಲಂಘಿಸಿದ್ರೆ 83 ಸಾವಿರ ದಂಡ

    ಶನಿವಾರವು ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಎಚ್. ಗೊಲ್ಲರ್ 3.75 ಮೀ.ಮೀ. ವಿದ್ಯಾ ಪೀಠ 3.3 ಮೀ.ಮೀ, ಸಂಪಂಗಿರಾಮನಗರ .3.9 ಮೀ.ಮೀ, ಕೆಂಗೇರಿ 3.1 ಮೀ.ಮೀ, ಹೆಮ್ಮಿಗೆಪುರ 2.8 ಮೀ.ಮೀ ಮಳೆ ದಾಖಲಾಗಿದೆ.

    ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮೈಸೂರು ಬೆಂಗಳೂರು ಹೆದ್ದಾರಿ ಮತ್ತೆ ಜಲಾವೃತವಾಗಿದೆ. ಮಂಡ್ಯದ ಬೂದನೂರು ಕೆರೆ ಹೊಡೆದ ಪರಿಣಾಮ ಹೆದ್ದಾರಿಗೆ ನೀರು ನುಗ್ಗಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಇದರಿಂದ ವೀಕೆಂಡ್‍ನಲ್ಲಿ ಮೈಸೂರಿಗೆ ಹೆಚ್ಚು ವಾಹನಗಳು ಸಂಚಾರ ಮಾಡುವುದರಿಂದ ಬೆಂಗಳೂರು-ಮೈಸೂರು ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಬರುವ ವಾಹನಗಳು ಮದ್ದೂರು ಬಳಿ ಡೈವರ್ಟ್ ಆಗಿ ಮದ್ದೂರು – ಕೆಎಂ ದೊಡ್ಡಿ ಮಾರ್ಗವಾಗಿ ಮೈಸೂರು ತಲುಪುವ ವ್ಯವಸ್ಥೆ ಮಾಡಿದರೆ, ಮೈಸೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳಿಗೆ ಮಂಡ್ಯ ಬಳಿ ಡೈವರ್ಟ್ ಆಗಿ ಮಳವಳ್ಳಿ- ಮದ್ದೂರು ಮಾರ್ಗವಾಗಿ ಬೆಂಗಳೂರು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಒಟಿಟಿಯಲ್ಲಿ ‘ವಿಕ್ರಾಂತ್ ರೋಣ’ ಹವಾ: 24 ಗಂಟೆಯಲ್ಲಿ ವೀಕ್ಷಣೆ ಆಗಿದ್ದೆಷ್ಟು?

    ಒಟಿಟಿಯಲ್ಲಿ ‘ವಿಕ್ರಾಂತ್ ರೋಣ’ ಹವಾ: 24 ಗಂಟೆಯಲ್ಲಿ ವೀಕ್ಷಣೆ ಆಗಿದ್ದೆಷ್ಟು?

    ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸುತ್ತಿದೆ. ಅಡ್ವೆಂಚರ್ಸ್ ಕಥಾನಕದ ಜೊತೆಗೆ ಮರ್ಡರ್ ಮಿಸ್ಟ್ರೀ ಕಂಟೆಂಟ್ ಹೊತ್ತುಬಂದಿದ್ದ ಈ ಚಿತ್ರಕ್ಕೆ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಸುದೀಪ್ ಹುಟ್ಟುಹಬ್ಬಕ್ಕೆ ಅಂದ್ರೆ ಸೆಪ್ಟಂಬರ್ 2ರಂದು ಜೀ5 ಒಟಿಟಿಗೆ ಲಗ್ಗೆ ಇಟ್ಟಿದ್ದ ವಿಕ್ರಾಂತ್ ರೋಣ ಜಸ್ಟ್ 24 ಗಂಟೆಯಲ್ಲಿ 500 ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿದೆ.

    ಜುಲೈ 28ರಂದು ಬಿಗ್ ಸ್ಕ್ರೀನ್ ನಲ್ಲಿ ದಿಬ್ಬಣ ಹೊರಟಿದ್ದ ವಿಕ್ರಾಂತ್ ರೋಣನಿಗೆ ಸುದೀಪಿಯನ್ಸ್ ಬಹುಪರಾಕ್ ಎಂದಿದ್ದರು. ತ್ರಿಡಿಯಲ್ಲಿ ಕಿಚ್ಚನ ನಯಾ ಅವತಾರ ಕಣ್ತುಂಬಿಕೊಂಡು ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಬಿಟೌನ್ ಬೊಂಬೆ ಜಾಕ್ವೆಲಿನ್ ಫರ್ನಾಂಡಿಸ್, ಅನೂಪ್ ಭಂಡಾರಿ, ನೀತಾ ಆಶೋಕ್ ಸೇರಿದಂತೆ ಹಲವರು ಅಭಿನಯಿಸಿದ್ದರು. ಜಾಕ್ ಮಂಜು ನಿರ್ಮಾಣದಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಂಡಿದ್ದ ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ನಲ್ಲೂ ಕೋಟಿ-ಕೋಟಿ ಕಮಾಯಿ ಮಾಡಿತ್ತು. ಇದನ್ನೂ ಓದಿ:ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಮಿಂಚಿದ `ಕಮಲಿ’ ಖ್ಯಾತಿಯ ಗೇಬ್ರಿಯೆಲಾ- ಸುಹಾಸ್

    ಅದ್ಧೂರಿ ಸೆಟ್ ನಲ್ಲಿ ಚಿತ್ರೀಕರಿಸಿದ್ದ ರಾ ರಾ ರಕ್ಕಮ್ಮ ಹಾಡು ಹಿಟ್ ಲೀಸ್ಟ್ ಸೇರಿತ್ತು. ಬಿ ಅಜನೀಶ್ ಲೋಕನಾಥ್ ಸಂಗೀತವಿದ್ದ ಎಲ್ಲಾ ಹಾಡುಗಳು ಪ್ರೇಕ್ಷಕ ಗಮನಸೆಳೆದಿದ್ದವು. ಸಿಲ್ವರ್ ಸ್ಕ್ರೀನ್ ನಲ್ಲಿ ಗುಮ್ಮನ  ಆರ್ಭಟ ಮಿಸ್ ಮಾಡಿಕೊಂಡ ಪ್ರೇಕ್ಷಕರು ಈಗ ಕುಳಿತು ವಿಕ್ರಾಂತ್ ರೋಣ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

    Live Tv
    [brid partner=56869869 player=32851 video=960834 autoplay=true]

  • ಈದ್ಗಾ ಮೈದಾನ ವಿವಾದ – ದಾಖಲೆ ನೀಡಲು 2 ತಿಂಗಳು ಬೇಕೆಂದ ಮುಸ್ಲಿಂ ಮುಖಂಡರು

    ಈದ್ಗಾ ಮೈದಾನ ವಿವಾದ – ದಾಖಲೆ ನೀಡಲು 2 ತಿಂಗಳು ಬೇಕೆಂದ ಮುಸ್ಲಿಂ ಮುಖಂಡರು

    ಬೆಂಗಳೂರು: ಈದ್ಗಾ ವಿವಾದ ಸಂಬಂಧ ದಾಖಲೆ ಒದಗಿಸಲು ನೀಡಿದ ನೋಟಿಸ್‍ಗಳಿಗೆ ವಕ್ಫ್ ಬೋರ್ಡ್‌ನಿಂದ ಉತ್ತರ ದೊರಕಿಲ್ಲ. ಈಗ ಮತ್ತೊಮ್ಮೆ ಬಿಬಿಎಂಪಿ ದಾಖಲೆ ಕೊಡಲು ಅವಕಾಶ ನೀಡಿದೆ.

    ಪಶ್ಚಿಮ ವಿಭಾಗ ಜಂಟಿ ಆಯುಕ್ತ ಶ್ರೀನಿವಾಸ್, ವಕ್ಫ್ ಬೋರ್ಡ್ ಪರ ಮಾತನಾಡಲು ಹಾಜರಿದ್ದವರಿಗೆ ಆಗಸ್ಟ್ 3 ರಂದು ಕಡೆ ದಿನ. ಡೆಡ್‍ಲೈನ್ ಒಳಗೆ ದಾಖಲೆ ಒದಗಿಸುವಂತೆ ಸೂಚಿಸಿದ್ದಾರೆ. ಆದರೆ, ಮುಸ್ಲಿಂ ಮುಖಂಡರ ಪ್ರಕಾರ ದಾಖಲೆ ಕೊಡಲು ಕಾಲಾವಕಾಶ ಸಾಕಾಗಲ್ಲ. ಕನಿಷ್ಠ 2 ತಿಂಗಳು ಮತ್ತೊಮ್ಮೆ ಅವಕಾಶ ನೀಡಬೇಕಿತು ಎಂದು ವಾದ ಮುಂದಿಟ್ಟಿದ್ದಾರೆ. ವಾದ – ಪ್ರತಿವಾದಗಳ ನಂತರ ಆಗಸ್ಟ್ 3ಕ್ಕೆ ಆದರೂ ಈದ್ಗಾ ಆಸ್ತಿ ಯಾರದೆಂದು ಇತ್ಯರ್ಥ ಆಗುತ್ತಾ ಕಾದುನೋಡಬೇಕಿದೆ.  ಇದನ್ನೂ ಓದಿ: ಇಸ್ಲಾಂಗಿಂತ ದೊಡ್ಡ ಧರ್ಮವಿಲ್ಲ ಅಲ್ಲಾಹುಗಾಗಿ ಎಲ್ಲದಕ್ಕೂ ಸಿದ್ಧ – ಪಾಕ್‍ಗೆ ತೆರಳಲು ಸಿದ್ಧರಾಗಿದ್ರು ಶಂಕಿತ ಉಗ್ರರು

    ಕೆಲವು ದಿನಗಳ ಹಿಂದೆಯಷ್ಟೇ ಶಾಸಕ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಮುಸ್ಲಿಂ ಸಮುದಾಯದ ಜನರು ಬಕ್ರೀದ್ ಹಿನ್ನೆಲೆ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದರಿಂದಾಗಿ ಈದ್ಗಾ ಮೈದಾನ ಇತ್ತೀಚಿಗೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇಲ್ಲಿ ಆಟ ಆಡಲು, ಪ್ರಾರ್ಥನೆ ಸಲ್ಲಿಸಲು ನಮಗೂ ಅವಕಾಶ ನೀಡಿ ಅಂತ ಹಿಂದೂ ಪರ ಸಂಘಟನೆಗಳು ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ಮೈದಾನವನ್ನು ಆಟದ ಮೈದಾನ ಅಂತ ಘೋಷಿಸಿತ್ತು. ಇದನ್ನೂ ಓದಿ: ಗಿಲ್, ಚಹಲ್ ಆಟಕ್ಕೆ ದಕ್ಕಿದ ಜಯ – ವೆಸ್ಟ್ ಇಂಡೀಸ್‍ನಲ್ಲಿ ಚೊಚ್ಚಲ ಬಾರಿಗೆ ಕ್ಲೀನ್ ಸ್ವೀಪ್ ಸಾಧಿಸಿದ ಭಾರತ

    ಹಲವು ದಶಕಗಳಿಂದ ಈದ್ಗಾ ಜಮೀನಿನ ವಿವಾದವಿದೆ. ಹಿಂದೆ ಮೈಸೂರಿನ ರಾಜಮನೆತನದ ಒಡೆಯರ್ ಕುಟುಂಬದಿಂದ 10 ಎಕರೆಗೂ ಹೆಚ್ಚು ಭೂಮಿಯನ್ನು ಮುಸ್ಲಿಂ ಸಮುದಾಯಕ್ಕೆ ಸ್ಮಶಾನಕ್ಕಾಗಿ ಹಾಗೂ ಈದ್ಗಾಗಾಗಿ ನೀಡಲಾಗಿತ್ತು. ಈದ್ಗಾ ಮುಸ್ಲಿಂ ಸಮುದಾಯಕ್ಕೆ ವರ್ಷಕ್ಕೆ ಎರಡು ಬಾರಿ ಈದ್ ಪ್ರಾರ್ಥನೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಕರ್ನಾಟಕ ವಕ್ಫ್ ಬೋರ್ಡ್ 1965 ರಲ್ಲಿ ಈದ್ಗಾ ಮೈದಾನವನ್ನು ತನ್ನ ವಶದಲ್ಲಿರುವಂತೆ ಗೆಜೆಟ್ ಮಾಡಿತು. ಇದನ್ನು ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ (ಸಿಎಂಎ) ನಡೆಸುತ್ತದೆ.

    ದಶಕಗಳ ನಂತರ, ಸುದೀರ್ಘ ಕಾನೂನು ಹೋರಾಟ ನಡೆಯಿತು ಮತ್ತು 1964ರಲ್ಲಿ, ಸುಪ್ರೀಂ ಕೋರ್ಟ್ ಈ ಭೂಮಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್(ಸಿಎಂಎ)ಗೆ ಸೇರಿದೆ ಎಂದು ಇತ್ಯರ್ಥಪಡಿಸಿತು. ನಂತರ ಈದ್ಗಾ ಮೈದಾನಕ್ಕೆ ಬದಲಿ ಜಾಗ ವ್ಯವಸ್ಥೆ ಮಾಡಲಾಯಿತು. ಬದಲಿ ಜಾಗವನ್ನು ಗೋರಿಪಾಳ್ಯದ ಬಡ ಈದ್ಗಾದಲ್ಲಿ ಕೊಟ್ಟಿದ್ದರು. ಮುಸ್ಲಿಂ ಸಮುದಾಯದವರು ಈದ್ಗಾ ಮೈದಾನವನ್ನು ಉಪಯೋಗಿಸುತ್ತಾರೆ ಎಂಬುದು ಈಗಿನ ಆರೋಪವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಈಜು ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಬರೆದ ಮಾಧವನ್ ಪುತ್ರ

    ಭುವನೇಶ್ವರ: ಬಹುಭಾಷಾ ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ವೇದಾಂತ್ 48ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದು, ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

    ಭಾನುವಾರ ಭುವನೇಶ್ವರದಲ್ಲಿ ನಡೆದ 1,500 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ವೇದಾಂತ್ ಕೇವಲ 16:01.73 ನಿಮಿಷಗಳಲ್ಲಿ ಗುರಿ ತಲುಪಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಈ ಹಿಂದೆ ಈಜುಪಟು ಅದ್ವೈತ್ 2017ರಲ್ಲಿ 16:06.45 ನಿಮಿಷಗಳಲ್ಲಿ ಗುರಿ ತಲುಪಿ ದಾಖಲೆ ಬರೆದಿದ್ದರು. ಇದೀಗ ವೇದಾಂತ್ ಅದ್ವೈತ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದನ್ನೂ ಓದಿ: ಕೊನೆಗೂ ಮರಳಿ ಬಂತು ಪುನೀತ್ ರಾಜ್‌ಕುಮಾರ್ ಖಾತೆಗೆ ಬ್ಲೂ ಟಿಕ್

    ಈ ಸಂಭ್ರಮದ ವಿಚಾರವನ್ನು ಮಾಧವನ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ದಾಖಲೆ ಬಗ್ಗೆ ತಿಳಿಸಿರುವ ಮಾಧವನ್, ಎಂದಿಗೂ ಆಗಲ್ಲ ಎಂದು ಯಾವತ್ತೂ ಹೇಳಬೇಡಿ. 1,500 ಮೀಟರ್ ಫ್ರೀಸ್ಟೈಲ್ ರಾಷ್ಟ್ರೀಯ ಜೂನಿಯರ್ ದಾಖಲೆ ಇದೀಗ ಮುರಿದಿದೆ ಎಂದು ಬರೆದಿದ್ದು, ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮೋತ್ಸವಕ್ಕೆ ‘ಹರ್ ಘರ್ ತಿರಂಗಾ’ ಅಭಿಯಾನ – ದೇಶಾದ್ಯಂತ 20 ಕೋಟಿ ಮನೆಗಳಲ್ಲಿ ಹಾರಲಿದೆ ತ್ರಿವರ್ಣ ಧ್ವಜ

    ವೇದಾಂತ್ ಈ ಹಿಂದೆಯೂ ಹಲವಾರು ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಬಾಚಿಕೊಂಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ವೇದಾಂತ್, ಸ್ವತಃ ಹೆಸರು ಮಾಡಲು ಬಯಸುವುದಾಗಿ ತಿಳಿಸಿದ್ದರು. ನನಗೆ ನನ್ನ ತಂದೆಯ ನೆರಳಿನಲ್ಲಿ ಬದುಕಲು ಇಷ್ಟವಿಲ್ಲ. ನಾನಾಗಿಯೇ ಹೆಸರು ಮಾಡಲು ಬಯಸುತ್ತೇನೆ. ನಾನು ಕೇವಲ ಆರ್. ಮಾಧವನ್ ಅವರ ಮಗನಾಗಿರಲು ಬಯಸುವುದಿಲ್ಲ ಎಂದು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]