Tag: ದಾಖಲೆ

  • ದಾಖಲೆ ನಿರ್ಮಿಸಿದ ಮೇಯರ್ ಸಂಪತ್ ರಾಜ್

    ದಾಖಲೆ ನಿರ್ಮಿಸಿದ ಮೇಯರ್ ಸಂಪತ್ ರಾಜ್

    ಬೆಂಗಳೂರು: ನಗರದ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅತಿ ಹೆಚ್ಚು ಸಭೆ ನಡೆಸುವ ಮೂಲಕ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.

    ಮೇಯರ್ ಸಂಪತ್ ರಾಜ್ ಬಿಬಿಎಂಪಿಯಲ್ಲಿ ಅತೀ ಹೆಚ್ಚು ಕೌನ್ಸಿಲ್ ಸಭೆ ನಡೆಸಿದ ದಾಖಲೆ ನಿರ್ಮಿಸಲು ಮುಂದಾಗಿದ್ದು, ಸಭೆಗಳ ಮೇಲೆ ಸಭೆಗಳನ್ನು ಮೇಯರ್ ಮಾಡುತ್ತಿದ್ದಾರೆ. ಆದರೆ ರೆಕಾರ್ಡ್ ಬ್ರೇಕ್ ಮಾಡುವುದಕ್ಕೆ ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ ಎಂಬ ಆರೋಪವೂ ಸಹ ಕೇಳಿ ಬರುತ್ತಿದೆ.

    ಮೇಯರ್ ಸಂಪತ್ ರಾಜ್ ಇದುವರೆಗೂ 31 ಸಭೆಗಳನ್ನು ನಡೆಸಿದ್ದಾರೆ. 31 ಸಭೆಗಳನ್ನು ನಡೆಸುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ. 31 ಸಭೆಗಳಿಗೆ ಬರೋಬ್ಬರಿ 3 ಕೋಟಿ ರೂಪಾಯಿ ವೆಚ್ಚವಾಗಿದೆ. 31 ಸಭೆ ನಡೆಸಿದ್ದರು ಚರ್ಚೆ ನಡೆದಿದ್ದು, ಕೇವಲ 76 ಗಂಟೆಗಳು ಮಾತ್ರವಾಗಿದೆ.

    198 ಚುನಾಯಿತ ಸದಸ್ಯರು ಹಾಗೂ 20 ನಾಮನಿರ್ದೇಶಿತ ಸದಸ್ಯರಿಗೆ ಭತ್ಯೆ ಕೊಡಲಾಗುತ್ತದೆ. ಕೌನ್ಸಿಲ್ ಸಭೆಗೆ ಹಾಜರಾಗುವ ಸದಸ್ಯರಿಗೆ ಒಂದು ದಿನಕ್ಕೆ 400 ರೂ. ಭತ್ಯೆ ನೀಡಲಾಗುತ್ತದೆ. ಜೊತೆಗೆ ಊಟ, ಉಪಹಾರ, ಇನ್ನಿತರ ವೆಚ್ಚ ಸೇರಿ ಒಂದು ದಿನದ ಸಭೆಗೆ ಅಂದಾಜು 8 ಲಕ್ಷ ರೂ. ಖರ್ಚಾಗುತ್ತದೆ. ಆದ್ದರಿಂದ ಸಂಪತ್ ರಾಜ್ ಅವಧಿಯಲ್ಲಿ ಸಭೆಗಾಗಿಯೇ ಬರೋಬ್ಬರಿ 3 ಕೋಟಿ ರೂ. ಖರ್ಚು ಮಾಡಲಾಗಿದೆ. ಮೇಯರ್ ಅವಧಿ ಎರಡು ತಿಂಗಳು ಇದೆ. ಆದ್ದರಿಂದ ಮೇಯರ್ ಗೆ ಎರಡರಿಂದ ಮೂರು ಸಭೆ ನಡೆಸುವ ಅವಕಾಶ ಕೂಡ ಇದೆ.

  • ಕೊಹ್ಲಿ ದಾಖಲೆ ಮುರಿದ ಪಾಕ್ ಆಟಗಾರ ಫಖಾರ್ ಜಮಾನ್

    ಕೊಹ್ಲಿ ದಾಖಲೆ ಮುರಿದ ಪಾಕ್ ಆಟಗಾರ ಫಖಾರ್ ಜಮಾನ್

    ಬುಲಬಾಯೊ: ಪಾಕಿಸ್ತಾನದ ಆರಂಭಿಕ ಆಟಗಾರ ಕಳೆದ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ದಾಖಲೆ ಬರೆದ ಬೆನ್ನಲ್ಲೇ ಮತ್ತೊಂದು ದಾಖಲೆ ನಿರ್ಮಿಸಿದ್ದು, ಏಕದಿನ ಪಂದ್ಯಗಳಲ್ಲಿ 1 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಕಡಿಮೆ ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಗಳಿಸಿದ್ದ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ.

    28 ವರ್ಷದ ಫಖಾರ್ ಜಮಾನ್ 18 ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಪೂರೈಸಿದ್ದು, ಈ ಹಿಂದೆ ವಿರಾಟ್ ಕೊಹ್ಲಿ 1 ಸಾವಿರ ರನ್ ಗಳಿಸಲು 24 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಉಳಿದಂತೆ ವಿವ್ ರಿಚರ್ಡ್ಸ್, ಕೆವಿನ್ ಪೀಟರ್ ಸನ್, ಜೋನಾಥನ್ ಟ್ರಾಟ್, ಬಾಬರ್ ಅಜಂ, ಕ್ವಿಂಟನ್ ಡಿ ಕಾಕ್ 21 ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಗಳಿಸಿದ್ದರು.

    ಫಖಾರ್ ಜಮಾನ್ 18 ಏಕದಿನ ಪಂದ್ಯಗಳಲ್ಲಿ 3 ಅರ್ಧ ಶತಕ, 5 ಶತಕ ಗಳಿಸಿದ್ದು, ಕಳೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ 106 ಎಸೆತಗಳಲ್ಲಿ 114 ರನ್ ಸಿಡಿಸಿದ್ದರು. ಸದ್ಯ ಜಿಂಬಾಬೆ ವಿರುದ್ಧ ಏಕದಿನ ಟೂರ್ನಿಯ ಕೊನೆ ಪಂದ್ಯದಲ್ಲಿ ಫಖಾರ್ ಜಮಾನ್ 85 ರನ್ ಗಳಿಸಿ ಔಟಾಗಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ 505 ರನ್ ಗಳಿಸಿದ್ದಾರೆ.

    ಜಿಂಬಾಂಬ್ವೆ ಕಳೆದ ಪಂದ್ಯದಲ್ಲಿ ಇಮಾಮ್ ಹುಲ್ ಹಕ್ (112 ಎಸೆತ, 112 ರನ್) ರೊಂದಿಗೆ ಉತ್ತಮ ಜೊತೆಯಾಟ ನೀಡಿದ ಫಖಾರ್ ಜಮಾನ್ 304 ರನ್ ಗಳ ದಾಖಲೆಯ ಆರಂಭಿಕ ಜೊತೆಯಾಟ ನೀಡಿದರು. 2006 ರಲ್ಲಿ ಶ್ರೀಲಂಕಾ ಆಟಗಾರ ಉಪುಲ್ ತರಂಗ, ಜಯಸೂರ್ಯ ಜೋಡಿ ಗಳಿಸಿದ್ದ 286 ರನ್ ಗಳ ಆರಂಭಿಕ ಜೊತೆಯಾಟದ ದಾಖಲೆ ಮುರಿದಿದ್ದರು. ಈಗಾಗಲೇ ಜಿಂಬಾಬ್ವೆ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಜಯಿಸಿರುವ ಪಾಕ್, ಈ ಪಂದ್ಯದ ಗೆಲ್ಲುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ.

  • ದ್ವಿಶತಕ ಸಿಡಿಸಿ 21 ವರ್ಷಗಳ ದಾಖಲೆ ಮುರಿದ ಫಖಾರ್ ಜಮಾನ್

    ದ್ವಿಶತಕ ಸಿಡಿಸಿ 21 ವರ್ಷಗಳ ದಾಖಲೆ ಮುರಿದ ಫಖಾರ್ ಜಮಾನ್

    ಬುಲಬಾಯೊ: ಪಾಕಿಸ್ತಾನ ಕ್ರಿಕೆಟ್ ತಂಡದ ಯುವ ಆಟಗಾರ ಫಖಾರ್ ಜಮಾನ್ ಜಿಂಬ್ವಾಂಬೆ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದು, ಈ ಮೂಲಕ ಪಾಕ್ ಪರ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದರು.

    ಈ ಹಿಂದೆ ಪಾಕ್ ನ ಸಯೀದ್ ಅನ್ವರ್ 21 ವರ್ಷಗಳ ಹಿಂದೆ 194 ರನ್ ಗಳಿಸಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಸದ್ಯ ಈ ದಾಖಲೆಯನ್ನು ಫಖಾರ್ ಜಮಾನ್ 156 ಎಸೆತಗಳಲ್ಲಿ ಅಜೇಯ 210 ರನ್ (24 ಬೌಂಡರಿ, 5 ಸಿಕ್ಸರ್) ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು. ಈ ಮೂಲಕ ದ್ವಿಶತಕರ ಗಳಿಸಿದ ಭಾರತದ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಹಾಗೂ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್, ನ್ಯೂಜಿಲೆಂಡ್ ನ ಮಾರ್ಟಿನ್ ಗುಪ್ಟಿಲ್ ಸಾಲಿಗೆ ಸೇರ್ಪಡೆಯಾದರು.

    ಪಂದ್ಯದಲ್ಲಿ ಇಮಾಮ್ ಹುಲ್ ಹಕ್ (112 ಎಸೆತ, 112 ರನ್) ರೊಂದಿಗೆ ಉತ್ತಮ ಜೊತೆಯಾಟ ನೀಡಿದ ಫಖಾರ್ ಜಮಾನ್ 304 ರನ್ ಗಳ ದಾಖಲೆಯ ಆರಂಭಿಕ ಜೊತೆಯಾಟ ನೀಡಿದರು. 2006 ರಲ್ಲಿ ಶ್ರೀಲಂಕಾ ಆಟಗಾರ ಉಪುಲ್ ತರಂಗ, ಜಯಸೂರ್ಯ ಜೋಡಿ ಗಳಿಸಿದ್ದ 286 ರನ್ ಗಳ ಆರಂಭಿಕ ಜೊತೆಯಾಟದ ದಾಖಲೆ ಮುರಿದರು.

    ಪಾಕಿಸ್ತಾನ 50 ಓವರ್ ಗಳಲ್ಲಿ 399 ರನ್ ಗಳಿಗೆ 1 ವಿಕೆಟ್ ಕಳೆದು ಜಿಂಬ್ವಾಬೆಗೆ ಬೃಹತ್ ಗುರಿಯನ್ನು ನೀಡಿದರು. ಆದರೆ ಪಾಕ್ ಬೌಲರ್ ಗಳ ಮುಂದೇ ಯಾವುದೇ ಪ್ರತಿರೋಧ ತೋರದ ಜಿಂಬ್ವಾಂಬೆ 155 ರನ್ ಗಳಿಗೆ ಅಲೌಟ್ ಆಗುವ ಮೂಲಕ ಸೋಲುಂಡಿತು. ಪಾಕ್ ಪರ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಾಣವಾಗಿದ್ದು, 2010 ರಲ್ಲಿ ಬಾಂಗ್ಲಾದೇಶ ಪರ ಪಾಕ್ ಗಳಿಸಿದ್ದ 385/7 ಬೃಹತ್ ರನ್ ದಾಖಲೆಯನ್ನು ಅಳಿಸಿ ಹಾಕಿತು. ಈಗಾಗಲೇ 3-0 ಅಂತರದಲ್ಲಿ ನಾಲ್ಕು ಪಂದ್ಯಗಳ ಟೂರ್ನಿಯನ್ನ ಜಯಿಸಿರುವ ಪಾಕ್ , ಮುಂದಿನ ಪಂದ್ಯದ ಗೆಲ್ಲುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ.

    https://twitter.com/taimoorze/status/1020266255322943488?

  • 10 ಭಾಷೆಗಳಲ್ಲಿ ಮಾತನಾಡಿ ದಾಖಲೆ ಬರೆದ ವೆಂಕಯ್ಯ ನಾಯ್ಡು

    10 ಭಾಷೆಗಳಲ್ಲಿ ಮಾತನಾಡಿ ದಾಖಲೆ ಬರೆದ ವೆಂಕಯ್ಯ ನಾಯ್ಡು

    ನವದೆಹಲಿ: ಉಪರಾಷ್ಟ್ರಪತಿ, ರಾಜ್ಯಸಭಾ ಸ್ಪೀಕರ್ ಆಗಿರುವ ಎಂ ವೆಂಕಯ್ಯ ನಾಯ್ಡು ಅವರು ಸದನದಲ್ಲಿ 10 ಭಾಷೆಗಳಲ್ಲಿ ಮಾತನಾಡುವ ಮೂಲಕ ದಾಖಲೆ ಬರೆದಿದ್ದಾರೆ.

    ಮಾನ್ಸೂನ್ ಅಧಿವೇಶನದ ಮೊದಲ ದಿನದ ಬುಧವಾರದಂದು ಸದನ ವೇಳೆ ವೆಂಕಯ್ಯ ನಾಯ್ಡು ಅವರು ಮಾತನಾಡಿ, ಸದನದಲ್ಲಿ ಇಂಗ್ಲೀಷ್ ಸೇರಿದಂತೆ ಭಾರತೀಯ 22 ಭಾಷೆಗಳಲ್ಲಿ ಮಾತನಾಡಬಹುದು ಎಂದು ತಿಳಿಸಿದರು.

    ಇದೂವರೆಗೂ ಇದ್ದ 17 ಭಾಷೆಗಳಲ್ಲಿ ಪ್ರಮುಖವಾದ ಆಸ್ಸಾಮಿಸ್, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳ್, ತೆಲುಗು ಮತ್ತು ಉರ್ದು ಭಾಷೆಗಳೊಂದಿಗೆ ಹೆಚ್ಚವರಿಯಾಗಿ ಕೊಂಕಣಿ, ದೋಗ್ರಿ, ಕಾಶ್ಮೀರಿ, ಸಂಥಾಲಿ, ಸಿಂಧಿ ಭಾಷೆಗಳು ಮಾತನಾಡಬಹುದು. ಆದರೆ ಈ ಕುರಿತು ಸಂಸದರು ಮಾತನಾಡುವ ಮೊದಲು ಸಭೆಗೆ ಮಾಹಿತಿ ನೀಡಬೇಕು ಎಂಬ ಸೂಚನೆಯನ್ನು ನೀಡಿದರು.

    ಈ ಕುರಿತು ಘೋಷಣೆ ಮಾಡಿದ ವೇಳೆ ಕೆಲ ಪದಗಳನ್ನು ಬಾಂಗ್ಲಾ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸ್ವತಃ ತಾವೇ ಮಾತನಾಡಿದ್ದು ದಾಖಲೆಯಾಗಿದೆ.

  • ನಾಯಕನಾಗಿ ಮತ್ತೊಂದು ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ

    ನಾಯಕನಾಗಿ ಮತ್ತೊಂದು ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ

    ಲಂಡನ್: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನಾಯಕನಾಗಿ ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಮಂಗಳವಾರ ಲೀಡ್ಸ್‍ನಲ್ಲಿ ನಡೆದ ವಿರಾಟ್ ಕೊಹ್ಲಿಯ ಕಡಿಮೆ ಪಂದ್ಯಗಳಲ್ಲಿ 3,000 ರನ್ ಗಳ ಗಡಿತಲುಪಿದ ವಿಶ್ವದ ಮೊದಲ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 16 ರನ್ ಗಳಿಸಿದ್ದಾಗ ಕೊಹ್ಲಿ ಈ ಸಾಧನೆ ನಿರ್ಮಿಸಿದರು.

    ವಿರಾಟ್ ಕೊಹ್ಲಿಯವರು ಒಟ್ಟಾರೆ 49 ಇನ್ನಿಂಗ್ಸ್ ನಲ್ಲಿ 3,000 ಗಡಿ ತಲುಪುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಈ ಮೊದಲು ಭಾರತದ ಮಾಜಿ ಕ್ಯಾಪ್ಟನ್ ಗಳಾದ ಮಹೇಂದ್ರ ಸಿಂಗ್ ಧೋನಿ 70 ಇನ್ನಿಂಗ್ಸ್ ಹಾಗೂ ಸೌರವ್ ಗಂಗೂಲಿ 74 ಇನ್ನಿಂಗ್ಸ್ ಆಡಿ ಈ ಸಾಧನೆಯನ್ನು ಮಾಡಿದ್ದರು. ಈ ಮೊದಲು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ರವರು 60 ಇನ್ನಿಂಗ್ಸ್ ಮೂಲಕ ಈ ಸಾಧನೆಯನ್ನು ಮಾಡಿದ್ದರು. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ಪಾಕಿಸ್ತಾನ ಮಿಸ್ಬಾ ಉಲ್ ಹಕ್ 83 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರೆ ಶ್ರೀಲಂಕಾದ ಸನತ್ ಜಯಸೂರ್ಯ ಮತ್ತು ಆಸ್ಟ್ರೇಲಿಯಾದ ರಿಕ್ಕಿ ಪಾಟಿಂಗ್ 84 ಇನ್ನಿಂಗ್ಸ್ ನಲ್ಲಿ ಈ ಸಾಧನೆ ನಿರ್ಮಿಸಿದ್ದರು.

    ಮಂಗಳವಾರದ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಪಂದ್ಯವನ್ನು ಜಯಿಸಿದೆ. ಭಾರತ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256ರನ್ ಗಳಿಸಿತ್ತು. ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ಕೇವಲ 44.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 260 ರನ್ ಭಾರಿಸಿ ಪಂದ್ಯವನ್ನು ಗೆದ್ದುಕೊಂಡಿತು.

  • 66 ವರ್ಷಗಳ ಬಳಿಕ ವಿಶ್ವದ ಅತ್ಯಂತ ಉದ್ದನೆಯ ಉಗುರು ಕಟ್: ವಿಡಿಯೋ ನೋಡಿ

    66 ವರ್ಷಗಳ ಬಳಿಕ ವಿಶ್ವದ ಅತ್ಯಂತ ಉದ್ದನೆಯ ಉಗುರು ಕಟ್: ವಿಡಿಯೋ ನೋಡಿ

    ನ್ಯೂಯಾರ್ಕ್: 66 ವರ್ಷಗಳ ಬಳಿಕ ಪುಣೆಯ ನಿವಾಸಿ ತನ್ನ ವಿಶ್ವದ ಅತ್ಯಂತ ಉದ್ದದ ಉಗುರನ್ನು ಕತ್ತರಿಸಿಕೊಂಡಿದ್ದಾರೆ.

    ಶ್ರೀಧರ್ ಚಿಲ್ಲಾಲ್ ತಮ್ಮ ಎಡಗೈ ಬೆರಳುಗಳಲ್ಲಿ ಉದ್ದನೆಯ ಉಗುರನ್ನು ಬೆಳಸಿ ವಿಶ್ವ ಗಿನ್ನಿಸ್ ದಾಖಲೆ ಮಾಡಿದ್ದರು. ಶ್ರೀಧರ್ 1952ರಿಂದ ತಮ್ಮ ಉಗುರುಗಳನ್ನು ಬೆಳಸಿಕೊಂಡಿದ್ದರು. ಈಗ ಅವರಿಗೆ 82 ವರ್ಷವಾಗಿದ್ದು, ಈಗ ತಮ್ಮ ಉದ್ದನೆಯ ಉಗುರುಗಳನ್ನು ಕತ್ತರಿಸಿದ್ದಾರೆ.

    ಶ್ರೀಧರ್ ಮೂಲತಃ ಪುಣೆಯವರಾಗಿದ್ದು, ತನ್ನ ಬೆರಳ ಉಗುರುಗಳನ್ನು ಕತ್ತರಿಸೋಕೆ ನ್ಯೂಯಾರ್ಕ್ ಗೆ ಹೋಗಿದ್ದರು. ನ್ಯೂಯಾರ್ಕ್ ನ ರಿಪ್ಲೆ ಬಿಲಿವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಶ್ರೀಧರ್ ತಮ್ಮ ಉಗುರನ್ನು ಕತ್ತರಿಸಿಕೊಂಡಿದ್ದಾರೆ.

    ಶ್ರೀಧರ್ ಅವರ ಐದು ಬೆರಳಿನ ಉಗುರುಗಳು ಒಟ್ಟು 909.6 ಸೆ.ಮೀ ಉದ್ದವಿದ್ದು, ಅದರಲ್ಲೂ ಅವರ ಹೆಬ್ಬೆಟ್ಟಿನ ಉಗುರು 197.8 ಸೆ.ಮೀ ಉದ್ದವಿತ್ತು. ಒಂದೇ ಕೈಯಲ್ಲಿ ವಿಶ್ವದ ಅತ್ಯಂತ ಉದ್ದದ ಉಗುರು ಹೊಂದಿದ್ದರಿಂದ 2016ರಲ್ಲಿ ಗಿನ್ನಿಸ್ ದಾಖಲೆ ಬರೆದಿದ್ದರು.

    ಸದ್ಯ ಶ್ರೀಧರ್ ಅವರ ಕತ್ತರಿಸಿದ ಉಗುರುಗಳನ್ನು ನ್ಯೂಯಾರ್ಕ್‍ನ ಟೈಮ್ಸ್ ಸ್ಕ್ವೇರ್ ನಲ್ಲಿರುವ ರಿಪ್ಲೆ ಬಿಲಿವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದೆ. ಶ್ರೀಧರ್ ತನ್ನ ಉಗುರುಗಳನ್ನು ಕತ್ತರಿಸಿಕೊಳ್ಳುತ್ತಿರುವ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ಇದೂವರೆಗೂ 1.3 ಲಕ್ಷಕ್ಕೂ ಹೆಚ್ಚು ವ್ಯೂ ಕಂಡಿದೆ.

    https://www.youtube.com/watch?v=gwoYzpesr4c

  • ಸೋಮವಾರ ಒಂದೇ ದಿನ ಮೆಟ್ರೋಗೆ ದಾಖಲೆಯ 1.30 ರೂ. ಕೋಟಿ ಕಲೆಕ್ಷನ್

    ಸೋಮವಾರ ಒಂದೇ ದಿನ ಮೆಟ್ರೋಗೆ ದಾಖಲೆಯ 1.30 ರೂ. ಕೋಟಿ ಕಲೆಕ್ಷನ್

    ಬೆಂಗಳೂರು: ನಮ್ಮ ಮೆಟ್ರೋಗೆ ಸೋಮವಾರ ಅದೃಷ್ಟ ತಂದಿದ್ದು, ಒಂದೇ ದಿನದಲ್ಲಿ ದಾಖಲೆಯ ಮಟ್ಟದಲ್ಲಿ ಆದಾಯ ಸಂಗ್ರಹವಾಗಿದೆ.

    ಮೆಟ್ರೋ ಒಂದೇ ದಿನದಲ್ಲಿ 1.30 ಕೋಟಿ ರೂ. ದಷ್ಟು ಆದಾಯಗಳಿಸಿದೆ. ಸಾಮಾನ್ಯವಾಗಿ 20 ಲಕ್ಷದಷ್ಟು ಹಣ ನಿತ್ಯ ಸಂಗ್ರಹವಾಗುತ್ತಿತ್ತು. ಆದರೆ ಆರು ಹೆಚ್ಚುವರಿ ಕೋಚ್‍ಗಳಿಂದ ಬಿಎಂಆರ್ ಸಿಎಸ್ ಭರ್ಜರಿ ಆದಾಯಗಳಿಸಿದೆ.

    ಆದರೆ ಈಗ ಸಿಕ್ಸ್ ಕೋಚ್ ನಿಂದ ಮೆಟ್ರೋಗೆ ಕೋಟಿ ಕೋಟಿ ಲಾಭವಾಗುತ್ತಿದೆ. ಒಟ್ಟಿನಲ್ಲಿ ಸಿಲಿಕಾನ್ ಸಿಟಿಯ ಜನ ಮೆಟ್ರೋಗೆ ಫಿದಾ ಆಗಿದ್ದಾರೆ.

    ಆರು ಬೋಗಿಗಳ ಮೆಟ್ರೋ ರೈಲು ಸಂಚಾರಕ್ಕೆ ಜೂನ್ 23 ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರೊಡಗೂಡಿ ಆರು ಬೋಗಿಗಳ ನಮ್ಮ ಮೆಟ್ರೋ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದರು. ವಿಧಾನಸೌಧದಿಂದ ಮೆಟ್ರೋದಲ್ಲಿಯೇ ಸಂಚರಿಸಿ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಬಂದ ಮುಖ್ಯಮಂತ್ರಿಗಳು ಅಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದು ವಿಶೇಷವಾಗಿತ್ತು. ಆರು ಬೋಗಿಯ ರೈಲು ಪ್ರತಿ ದಿನ ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲ್ಲಿ ಸೇವೆ ನೀಡುತ್ತಿದೆ.

  • ಬಾಹುಬಲಿ-2 ಚಿತ್ರದ ದಾಖಲೆಯನ್ನು ಮುರಿದ ಸಂಜು!

    ಬಾಹುಬಲಿ-2 ಚಿತ್ರದ ದಾಖಲೆಯನ್ನು ಮುರಿದ ಸಂಜು!

    ಮುಂಬೈ: ಬಹು ನಿರೀಕ್ಷಿತ ಸಂಜು ಚಿತ್ರ ಬಿಡುಗಡೆಯಾಗಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈಗ ಈ ಚಿತ್ರ ‘ಬಾಹುಬಲಿ- 2’ ಚಿತ್ರದ ಒಂದು ದಾಖಲೆಯನ್ನು ಮುರಿದು ಸೂಪರ್ ಹಿಟ್ ಆಗಿ ಓಡುತ್ತಿದೆ.

    ಸಂಜು ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ 120.06 ಕೋಟಿ ರೂ. ಗಳಿಸಿದೆ. ಸಲ್ಮಾನ್ ಖಾನ್ ನಟಿಸಿದ ‘ರೇಸ್-3’ ಚಿತ್ರ ಹಾಗೂ ದೀಪಿಕಾ ಪಡುಕೋಣೆ ನಟಿಸಿದ ‘ಪದ್ಮಾವತ್’ ಚಿತ್ರದ ಮೊದಲ ದಿನದ ಗಳಿಕೆಯ ದಾಖಲೆಯನ್ನು ಸಂಜು ಚಿತ್ರ ಮುರಿದಿದೆ.

    ರೇಸ್-3 ಬಿಡುಗಡೆಯಾದ ಮೊದಲನೇ ವಾರದಲ್ಲಿ 106.47 ಕೋಟಿ ರೂ. ಗಳಿಸಿದ್ದು, ಪದ್ಮಾವತ್ ಚಿತ್ರ ಬಿಡುಗಡೆಯಾಗಿ ಮೊದಲ ವಾರದಲ್ಲಿ 114 ಕೋಟಿ ರೂ. ಗಳಿಸಿತ್ತು. ಈಗ ಸಂಜು ಚಿತ್ರ ಈ ದಾಖಲೆಯನ್ನು ಮುರಿದು ಭರ್ಜರಿ ಪ್ರದರ್ಶನ ಕಾಣುತ್ತಿದೆ.

    “ಸಂಜು ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಬೆಂಕಿ ಹಚ್ಚಿದೆ. ಪ್ರೇಕ್ಷಕರು ಈ ಸಿನಿಮಾವನ್ನು ಮೆಚ್ಚಿದ್ದಾರೆ. ಶುಕ್ರವಾರ 34.75 ಕೋಟಿ ರೂ., ಶನಿವಾರ 38.60 ಕೋಟಿ ರೂ. ಗಳಿಸಿದರೆ ಭಾನುವಾರ 46.71 ಕೋಟಿ ರೂ. ಗಳಿಸಿ ಒಟ್ಟು 120.06 ಕೋಟಿ ರೂ. ಗಳಿಸಿದೆ ಎಂದು ಚಲನಚಿತ್ರ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

    ತರಣ್ ಆದರ್ಶ್ ತಮ್ಮ ಮತ್ತೊಂದು ಟ್ವೀಟ್‍ನಲ್ಲಿ “ಸಂಜು ಚಿತ್ರ ಮೂರನೇ ದಿನದಲ್ಲಿ ಅತಿ ಹೆಚ್ಚು ಹಣಗಳಿಸಿ ಇತಿಹಾಸವನ್ನು ಬರೆದಿದೆ. ಅಲ್ಲದೇ ಬಾಹುಬಲಿ-2 ಚಿತ್ರದ ದಾಖಲೆಗಳನ್ನು ಮುರಿದಿದೆ. ಬಾಹುಬಲಿ-2 ಹಿಂದಿ ಚಿತ್ರ ಮೂರನೇ ದಿನ 46.50 ಕೋಟಿ ರೂ. ಗಳಿಕೆ ಮಾಡಿತ್ತು. ಆದರೆ ಸಂಜು ಮೂರನೇ ದಿನ 46.71 ಕೋಟಿ ರೂ. ಗಳಿಸಿ ಭಾರತದ ಬಾಕ್ಸ್ ಆಫೀಸ್‍ನಲ್ಲಿ ಬೆಂಕಿ ಹಚ್ಚಿದೆ” ಎಂದು ಟ್ವೀಟ್ ಮಾಡಿದ್ದಾರೆ.

    ಸದ್ಯ ಸಂಜು ಚಿತ್ರ ಬಿಡುಗಡೆಯಾಗಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ನಟ ರಣ್‍ಬೀರ್ ಕಪೂರ್, ಸಂಜಯ್ ದತ್ ರವರ ಪಾತ್ರ ನಿರ್ವಹಿಸಿದ್ದಾರೆ. ರಣ್‍ಬೀರ್ ಜೊತೆ ಸೋನಂ ಕಪೂರ್, ಪರೇಷ್ ರಾವಲ್, ದಿಯಾ ಮಿರ್ಜಾ ಮತ್ತು ಅನುಷ್ಕಾ ಶರ್ಮಾ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • ಕರ್ನಾಟಕ ರಾಜಕೀಯದಲ್ಲಿ ಹೊಸ ದಾಖಲೆ ಬರೆದ ಬಿಎಸ್‍ವೈ!

    ಕರ್ನಾಟಕ ರಾಜಕೀಯದಲ್ಲಿ ಹೊಸ ದಾಖಲೆ ಬರೆದ ಬಿಎಸ್‍ವೈ!

    ಬೆಂಗಳೂರು: ರಾಜ್ಯದ ಕಡಿಮೆ ಅವಧಿಯ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದಾಖಲೆ ಬರೆದಿದ್ದರು. ಆದರೆ ಈಗ ಮತ್ತೊಂದು ದಾಖಲೆ ಅವರ ಹೆಸರಿಗೆ ಸೇರ್ಪಡೆಯಾಗಿದೆ.

    ರಾಜ್ಯ ರಾಜಕೀಯದಲ್ಲಿ ಅತಿ ಹೆಚ್ಚು ಬಾರಿಗೆ ವಿಧಾನಸಭೆಯ ವಿಪಕ್ಷ ನಾಯಕರಾದ ದಾಖಲೆಯನ್ನು ಸದ್ಯ ಬಿ.ಎಸ್.ಯಡಿಯೂರಪ್ಪ ಅವರು ತಮ್ಮದಾಗಿಸಿಕೊಂಡಿದ್ದಾರೆ. 11 ವರ್ಷಗಳ ಬಳಿಕ ವಿಪಕ್ಷ ನಾಯಕರಾಗಿರುವ ಯಡಿಯೂರಪ್ಪ ಅವರು, ಒಟ್ಟು ಮೂರು ಬಾರಿ ಈ ಸ್ಥಾನವನ್ನು ಏರಿದ್ದಾರೆ.

    ಮಾಜಿ ಪ್ರಧಾನಿ ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ(1994 ಡಿಸೆಂಬರ್ 27 ನಿಂದ 1996 ಡಿಸೆಂಬರ್ 18) ಮೊದಲ ಬಾರಿ ವಿಪಕ್ಷ ನಾಯಕರಾಗಿದ್ದರು. ಮಾಜಿ ಸಿಎಂ ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದಾಗ (2004ರ ಜೂನ್ 10 ರಿಂದ, 2006 ಫೆಬ್ರವರಿ 3ರವರೆಗೆ) ಎರಡನೇ ಬಾರಿ ವಿಪಕ್ಷ ನಾಯಕರಾಗಿದ್ದರು. ಈಗ 2018ರ ಮೇ 25 ರಿಂದ ಮೂರನೇ ಬಾರಿ ವಿರೋಧ ಪಕ್ಷದ ನಾಯಕರಾಗಿದ್ದಾರೆ.

    ವಿಪಕ್ಷ ನಾಯಕರ ಕಚೇರಿಯಲ್ಲಿ ಪೂಜೆ:
    ವಿಧಾನಸೌಧ ವಿಪಕ್ಷ ನಾಯಕರ ಕೊಠಡಿ ಹೂಗಳಿಂದ ಸಿಂಗಾರಗೊಂಡಿದ್ದು, ಪುರೋಹಿತರಿಂದ ಪೂಜೆ ನಡೆಯಿತು. ಪೂಜೆಯಲ್ಲಿ ಬಿಎಸ್ ಯಡಿಯೂರಪ್ಪ, ಶಾಸಕರಾದ ಗೋವಿಂದ ಕಾರಜೋಳ, ರಾಜು ಗೌಡ, ಸಿಎಂ ಉದಾಸಿ, ಅಪ್ಪಚ್ಚು ರಂಜನ್ ಭಾಗವಹಿಸಿದ್ದರು.

  • ಟೆಸ್ಟ್ ಕ್ರಿಕೆಟ್‍ನಲ್ಲಿ ಹೊಸ ದಾಖಲೆ ಬರೆದ ಶಿಖರ್ ಧವನ್

    ಟೆಸ್ಟ್ ಕ್ರಿಕೆಟ್‍ನಲ್ಲಿ ಹೊಸ ದಾಖಲೆ ಬರೆದ ಶಿಖರ್ ಧವನ್

    ಬೆಂಗಳೂರು: ಅಫ್ಘಾನಿಸ್ಥಾನ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ಭಾರತದ ಪರ ಹೊಸ ದಾಖಲೆ ಬರೆದಿದ್ದಾರೆ.

    ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದ ಭೋಜನ ವಿರಾಮದ ಮೊದಲೇ ಶತಕ ಸಿಡಿಸಿದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಧವನ್ ಪಾತ್ರರಾಗಿದ್ದಾರೆ. 2006ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧದ ಪಂದ್ಯದಲ್ಲಿ ಸೆಹ್ವಾಗ್ 99 ರನ್, 1967ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧದ ಪಂದ್ಯದಲ್ಲಿ ಫಾರುಖ್ ಎಂಜಿನಿಯರ್ 94 ರನ್ ಗಳಿಸಿದ್ದರು.

    ಶಿಖರ್ ಧವನ್ 47 ಎಸೆತಗಳಲ್ಲಿ 50 ರನ್ (10 ಬೌಂಡರಿ, 1 ಸಿಕ್ಸ್) ಗಳಿಸಿದ್ದರು. ಮುಂದಿನ 40 ಎಸೆತಗಳಲ್ಲಿ ಶತಕ ದಾಖಲಿಸಿದ ಅವರು 18 ಬೌಂಡರಿ, 3 ಸಿಕ್ಸರ್ ಸಿಡಿಸಿದ್ದರು. ಮೊದಲ ವಿಕೆಟ್ ಗೆ ಮುರಳಿ ವಿಜಯ್ ಜೊತೆ 172 ಎಸೆತಗಳಲ್ಲಿ 168 ರನ್ ಜೊತೆಯಾಟವಾಡಿದ್ದ ಧವನ್ 107 ರನ್(96 ಎಸೆತ, 19 ಬೌಂಡರಿ, 3 ಸಿಕ್ಸರ್ ಸಿಡಿಸಿ) ಔಟಾದರು.

    ಬೌಲರ್ ಯಾಮಿನ್ ಅಹ್ಮದ್‍ಜೈ ಎಸೆತದಲ್ಲಿ ಶಿಖರ್ ಧವನ್ ಮೊಹ್ಮದ್ ನಬಿಗೆ ಕ್ಯಾಚ್ ನೀಡಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.