Tag: ದಾಖಲೆ

  • ವಿಂಡೀಸ್ ಪಂದ್ಯದಲ್ಲಿ ದಾಖಲೆ ಬರೆಯಲಿದ್ದರಾ ರೋಹಿತ್ ಶರ್ಮಾ!

    ವಿಂಡೀಸ್ ಪಂದ್ಯದಲ್ಲಿ ದಾಖಲೆ ಬರೆಯಲಿದ್ದರಾ ರೋಹಿತ್ ಶರ್ಮಾ!

    ಚೆನ್ನೈ: ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ವಿಂಡೀಸ್ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲಿ ರೋಹಿತ್ ಮಹತ್ವದ ದಾಖಲೆ ಬರೆಯುವ ಸನೀಹದಲ್ಲಿದ್ದಾರೆ.

    ರೋಹಿತ್ ಈಗಾಗಲೇ ಟಿ20 ಮಾದರಿಯಲ್ಲಿ ಭಾರತದ ಪರ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದರು. ಭಾನುವಾರ ನಡೆಯುಲಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ 67 ರನ್ ಗಳಿಸಿದರೆ ಟಿ20 ಮಾದರಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನ ಮಾಡಲಿದ್ದಾರೆ. ಸದ್ಯ ರೋಹಿತ್ ಶರ್ಮಾ 2,203 ರನ್ ಗಳಿಸಿದ್ದು, ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗುಪ್ಟಿಲ್ ರನ್ನು ಹಿಂದಿಕ್ಕಲು ಕೇವಲ 67 ರನ್ ಗಳಿಸಬೇಕಿದೆ. ರೋಹಿತ್ ಈ ಸಾಧನೆ ಮಾಡಿದರೆ ಕ್ರಿಕೆಟ್‍ನ ಮೂರು ಮಾದರಿಯಲ್ಲಿ ಭಾರತೀಯರೆ ಅತಿಹೆಚ್ಚು ರನ್ ಗಳಿಸಿದ ಆಟಗಾರರು ಎನಿಸಿಕೊಳ್ಳಲಿದ್ದಾರೆ. ಸಚಿನ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ ಗಳಿಸಿದ್ದಾರೆ.

    ಉಳಿದಂತೆ ಟಿ20 ಮಾದರಿಯಲ್ಲಿ ಪಾಕಿಸ್ತಾನದ ಶೋಯಿಬ್ ಮಲಿಕ್ 108 ಪಂದ್ಯಗಳಿಂದ 2,190 ರನ್ ಗಳಿಸಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ನ್ಯೂಜಿಲೆಂಡ್ ಬ್ರೆಂಡನ್ ಮೆಕಲಮ್ 71 ಪಂದ್ಯಗಳಿಂದ 2,140 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 62 ಪಂದ್ಯಗಳಿಂದ 2,102 ರನ್ ಸಿಡಿಸಿದ್ದಾರೆ.

    ಭಾರತದ ಪರ ಸುರೇಶ್ ರೈನಾ 1,605 ರನ್, ಧೋನಿ 1.487 ರನ್, ಯುವರಾಜ್ ಸಿಂಗ್ 1,177 ರನ್ ಗಳಿಸಿದ್ದಾರೆ. ರೋಹಿತ್ ಟಿ20 ಮಾದರಿಯಲ್ಲಿ 4 ಶತಕಗಳನ್ನು ಸಿಡಿಸಿದ ಸಾಧನೆಯನ್ನು ಮಾಡಿದ್ದು, ವಿಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ರೋಹಿತ್, ಧವನ್ ಜೋಡಿ 123 ಸಿಡಿಸಿದ್ದು, ಇದುವರೆಗೂ 39 ಇನ್ನಿಂಗ್ಸ್ ಗಳಿಂದ ಈ ಜೋಡಿ 1,154 ರನ್ ಸಿಡಿಸಿದೆ. ಈ ಪಟ್ಟಿಯಲ್ಲಿ ಆಸೀಸ್ ಆಟಗಾರರಾದ ಡೇವಿಡ್ ವಾರ್ನರ್ , ಶೇನ್ ವ್ಯಾಟ್ಸನ್ ಜೋಡಿ 37 ಇನ್ನಿಂಗ್ಸ್ ಗಳಿಂದ 1,154 ರನ್ ಗಳಿಸಿ ಮುಂಚೂಣಿಯಲ್ಲಿದೆ.

    ವಿಂಡೀಸ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಟಿ20 ಟೂರ್ನಿಯಲ್ಲಿ 2 ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿರುವ ಟೀಂ ಸರಣಿ ಇಂಡಿಯಾ ಕ್ಲೀನ್ ಸ್ವಿಪ್ ಮಾಡುವತ್ತ ಗಮನ ಹರಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ20 ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಒಂದೇ ಓವರ್‌ನಲ್ಲಿ 43 ರನ್ – ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಂದ ವಿಶ್ವದಾಖಲೆ!

    ಒಂದೇ ಓವರ್‌ನಲ್ಲಿ 43 ರನ್ – ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಂದ ವಿಶ್ವದಾಖಲೆ!

    ಹ್ಯಾಮಿಲ್ಟನ್: ನ್ಯೂಜಿಲೆಂಡ್ ನ ಇಬ್ಬರು ಬ್ಯಾಟ್ಸ್ ಮನ್ ಗಳು ಲಿಸ್ಟ್ ಎ ಏಕದಿನ ಪಂದ್ಯದ ಓವರ್ ಒಂದರಲ್ಲಿ 43 ರನ್ ಚಚ್ಚುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಕೀವಿಸ್ ನಾರ್ಥರ್ನ್ ಡಿಸ್ಟ್ರಿಕ್ಟ್ಸ್ ತಂಡದ ಬ್ಯಾಟ್ಸ್ ಮನ್‍ಗಳಾದ ಜೋಯಿ ಕಾರ್ಟರ್ ಮತ್ತು ಬ್ರೆಟ್ ಹ್ಯಾಂಪ್ಟನ್ ಬುಧವಾರ ನಡೆದ ಫೋರ್ಡ್ ಟ್ರೋಫಿ ಪಂದ್ಯದಲ್ಲಿ ಎದುರಾಳಿ ತಂಡವಾದ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ವಿರುದ್ಧ ಈ ವಿಶೇಷ ಸಾಧನೆ ಮಾಡಿದ್ದಾರೆ.

    ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡದ ಮಧ್ಯಮ ವೇಗಿ ವಿಲ್ಲೆಮ್ ಲುಡಿಕ್ ಓವರ್ ನಲ್ಲಿ ಈ ಸಾಧನೆ ಮಾಡಿದ್ದು, ಓವರ್ ಮೊದಲ ಐದು ಬಾಲ್ ಎದುರಿಸಿದ ಲುಡಿಕ್ ಕ್ರಮವಾಗಿ 4, 6 (ನೋಬಾಲ್), 6 (ನೋಬಾಲ್), 6, 1 ರನ್ ಬಾರಿಸಿದರು. ಬಳಿಕ ಸ್ಟ್ರೈಕ್ ಪಡೆದ ಕಾರ್ಟರ್ ಅಂತಿಮ ಮೂರು ಎಸೆತಗಳನ್ನು ಸಿಕ್ಸರ್ ಸಿಡಿಸಿ ಮಿಂಚಿದರು. ಪಂದ್ಯದಲ್ಲಿ 10 ಓವರ್ ಬೌಲ್ ಮಾಡಿದ ಲುಡಿಕ್ ಮೊದಲ 9 ಓವರ್ ಗಳಲ್ಲಿ ಕೇವಲ 42 ರನ್ ಮಾತ್ರ ನೀಡಿದ್ದರು. ಆದರೆ ಅಂತಿಮ 10ನೇ ಓವರ್ ಮುಕ್ತಾಯದ ವೇಳೆ 85 ರನ್ ನೀಡಿದ್ದರು.

    ಪಂದ್ಯದಲ್ಲಿ ಕಾರ್ಟರ್ 5 ರನ್ ಗಳಿಂದ ಶತಕ ವಂಚಿತರಾದರೆ, ಲುಡಿಕ್ 102 ರನ್ ಸಿಡಿಸಿ ಶತಕ ಪೂರೈಸಿದರು. ಈ ಇಬ್ಬರ ಜೋಡಿ 6ನೇ ವಿಕೆಟ್‍ಗೆ 178 ರನ್ ಜೊತೆಯಾಟ ನೀಡಿತು. ಇಬ್ಬರ ಭರ್ಜರಿ ಬ್ಯಾಟಿಂಗ್ ನಿಂದಾಗಿ ನಾರ್ಥರ್ನ್ ಡಿಸ್ಟ್ರಿಕ್ಟ್ಸ್ ತಂಡ ನಿಗದಿತ 50 ಓವರ್ ಗಳಲ್ಲಿ 317 ರನ್ ಗಳಿಸಿತು. ಬಳಿಕ ಬೃಹತ್ ಮೊತ್ತ ಬೆನ್ನತ್ತಿದ್ದ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಲಷ್ಟೇ ಶಕ್ತವಾಯಿತು.

    ಈ ಹಿಂದೆ 2013ರ ಲಿಸ್ಟ್ ಎ ಢಾಕಾದ ಪ್ರೀಮಿಯರ್ ಲೀಗ್ ನಲ್ಲಿ ಬಾಂಗ್ಲಾದೇಶದ ಅಲಾವುದ್ದೀನ್ ಬಾಬು 39 ರನ್ ಬಿಟ್ಟುಕೊಟ್ಟಿದ್ದರು. ಈ ಪಂದ್ಯದಲ್ಲಿ ಜಿಂಬಾಂಬ್ವೆ ತಂಡದ ಎಲ್ಟನ್ ಚಿಗುಂಬರ ಈ ಸಾಧನೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿರಾಟ್@30 – ವಿಶ್ವ ಕ್ರಿಕೆಟ್‍ನಲ್ಲಿ ಯಾರು ಮಾಡದ ಕೊಹ್ಲಿ ದಾಖಲೆಯ ವಿಡಿಯೋ ನೋಡಿ

    ವಿರಾಟ್@30 – ವಿಶ್ವ ಕ್ರಿಕೆಟ್‍ನಲ್ಲಿ ಯಾರು ಮಾಡದ ಕೊಹ್ಲಿ ದಾಖಲೆಯ ವಿಡಿಯೋ ನೋಡಿ

    ಬೆಂಗಳೂರು: ಕಳೆದ ಒಂದು ದಶಕದ ಹಿಂದೆ ಅಂಡರ್ 19 ವಿಶ್ವಕಪ್ ಗೆದ್ದ ತಂಡದ ನಾಯಕರಾಗಿ ಮಿಂಚಿದ್ದ ವಿರಾಟ್ ಕೊಹ್ಲಿ ಇಂದು 30ನೇ ವಸಂತಕ್ಕೆ ಕಾಲಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಶ್ವದ ಹಲವು ಕ್ರೀಡಾಗಣ್ಯರು ಕೊಹ್ಲಿಗೆ ಶುಭಾಶಯ ತಿಳಿಸಿ ಸಂದೇಶ ರವಾನಿಸಿದ್ದಾರೆ.

    ವಿಶ್ವ ಕ್ರಿಕೆಟ್‍ಗೆ ಕಾಲಿಡುತ್ತಿದಂತೆ ತಮ್ಮ ಅಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದ ಹಲವು ದಾಖಲೆಗಳನ್ನು ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ. ಕ್ರಿಕೆಟ್‍ನ ಎಲ್ಲಾ ಮಾದರಿಗಳಲ್ಲಿಯೂ ಯಶಸ್ವಿ ಪ್ರದರ್ಶನ ನೀಡುತ್ತಿರುವ ಕೊಹ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಹಲವರು ಹಾರೈಸಿದ್ದಾರೆ. ಇತ್ತ ಪತಿಯೊಂದಿಗೆ ಹುಟ್ಟುಹಬ್ಬ ಆಚರಿಕೊಂಡಿರುವ ಅನುಷ್ಕಾ ಶರ್ಮಾ ದೇವರಿಗೆ ಧನ್ಯವಾದ ತಿಳಿಸಿದ್ದಾರೆ.

    ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ನಾಯಕತ್ವದಲ್ಲಿ ಬ್ಯಾಟ್ಸ್ ಮನ್ ಆಗಿ ಹಲವು ದಾಖಲೆ ನಿರ್ಮಿಸಿದಲ್ಲದೇ ಮುಂದಿನ ಅವಧಿಯಲ್ಲಿ ತಂಡದ ನಾಯಕತ್ವ ವಹಿಸಿ ಹಲವು ಸಂದರ್ಭದಲ್ಲಿ ಯಶಸ್ವಿಯಾಗಿ ತಂಡವನ್ನು ಕೊಹ್ಲಿ ಮುನ್ನಡೆಸಿದ್ದರು. ಅಲ್ಲದೇ ಐಪಿಎಲ್ ನಲ್ಲಿ ರಾಯಲ್ಸ್ ಚಾಲೆಂಜರ್ಸ್ ನಾಯಕತ್ವ ವಹಿಸಿದ್ದರು.

    0 ಬಾಲ್‍ಗೆ ವಿಕೆಟ್ ಪಡೆದ ಕೊಹ್ಲಿ: 2011 ರಲ್ಲಿ ಮಹೇಂದ್ರ ಸಿಂಗ್ ನೇತೃತ್ವದಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಕೊಹ್ಲಿ ಮೊದಲ ಬಾರಿಗೆ ಬೌಲಿಂಗ್ ಮಾಡುವ ಅವಕಾಶ ಪಡೆದರು. ಈ ಪಂದ್ಯದಲ್ಲಿ ಮೊದಲ ಎಸೆತವನ್ನೇ ವೈಡ್ ಎಸೆದ ಕೊಹ್ಲಿ, ಧೋನಿ ಅವರ ಸ್ಟಂಪಿಂಗ್ ನೆರವಿನಿಂದ ವಿಕೆಟ್ ಪಡೆದರು. ಇದರೊಂದಿಗೆ ವಿಶ್ವ ಕ್ರಿಕೆಟ್ ನಲ್ಲಿ 0 ಎಸೆತಕ್ಕೆ ವಿಕೆಟ್ ಪಡೆದ ಬೌಲರ್ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

    ತಂದೆಯ ಸಾವಿನ ಸುದ್ದಿ ಬಳಿಕವೂ ಬ್ಯಾಟಿಂಗ್: ಕೊಹ್ಲಿ ಅವರ ಕರ್ತವ್ಯ ನಿಷ್ಠೆಗೆ ಅವರ ತಂದೆಯ ಸಾವಿನ ದಿನವೂ ಕೊಹ್ಲಿ ತಂಡದ ಪರ ಅದ್ಭುತ ಇನ್ನಿಂಗ್ಸ್ ನೀಡಿದ್ದು ಸಾಕ್ಷಿಯಾಗಿದೆ. ಕೇವಲ 18 ವರ್ಷ ವಯಸ್ಸಿನವರಾಗಿದ್ದ ಕೊಹ್ಲಿ 2006 ಡಿಸೆಂಬರ್ ನಲ್ಲಿ ತಂದೆಯನ್ನು ಕಳೆದುಕೊಂಡಿದ್ದರು. ಅಂದು ಕರ್ನಾಟಕದ ವಿರುದ್ಧ ಪಂದ್ಯದವಾಡುತ್ತಿದ್ದ ದೆಹಲಿ ತಂಡದಲ್ಲಿ ಕೊಹ್ಲಿ ಸ್ಥಾನ ಪಡೆದಿದ್ದರು. ಕೊಹ್ಲಿಗೆ ತಂದೆಯ ಸಾವಿನ ಸುದ್ದಿ ರಾತ್ರಿಯೇ ತಿಳಿದಿದ್ದರೂ ಮರುದಿನ ಕ್ರೀಡಾಂಗಣಕ್ಕೆ ಬಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಪಂದ್ಯದಲ್ಲಿ ತಂಡಕ್ಕೆ ಮಹತ್ವದ 90 ರನ್ ಕಾಣಿಕೆ ನೀಡಿದ್ದ ಕೊಹ್ಲಿ ಅಂಪೈರ್ ನೀಡಿದ್ದ ಕೆಟ್ಟ ತೀರ್ಪಿಗೆ ಔಟಾಗಿ ಪೆವಿಲಿಯನ್ ಸೇರಿದ್ದರು.

    ಕೆಲ ದಿನಗಳ ಹಿಂದೆ ತಮ್ಮ ಕ್ರಿಕಟ್ ವೃತ್ತಿ ಜೀವನ ಬಗ್ಗೆ ಮಾತನಾಡಿದ್ದ ಕೊಹ್ಲಿ, ತನಗೆ ಇನ್ನು ಕೆಲ ವರ್ಷಗಳು ಮಾತ್ರ ಕ್ರಿಕೆಟ್ ಆಡಲು ಅವಕಾಶವಿದೆ. ಅದ್ದರಿಂದ ತಾನು ಮುಂದಿನ ಅವಧಿಯಲ್ಲಿ ಸಂಪೂರ್ಣವಾಗಿ ಕ್ರಿಕೆಟ್‍ನಲ್ಲಿ ತೊಡಗಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದರು. ಈ ಹೇಳಿಕೆ ಕ್ರಿಕೆಟ್ ಬಗ್ಗೆ ಕೊಹ್ಲಿ ಹೊಂದಿರುವ ಪ್ರೀತಿಗೆ ಮತ್ತೊಮ್ಮೆ ಸಾಕ್ಷಿಯಾಗಿತ್ತು. ವೃತ್ತಿಜೀವನದಲ್ಲಿ ವೈಫಲ್ಯ ಕಂಡಿದ್ದ ಸಮಯದಲ್ಲಿ ಹಲವು ಟೀಕೆಗಳನ್ನು ಎದುರಿಸಿದ ಸಂದರ್ಭದಲ್ಲೂ ಕೊಹ್ಲಿ ಬ್ಯಾಟ್ ಮೂಲಕವೇ ಎಲ್ಲರಿಗೂ ಉತ್ತರ ನೀಡಿದ್ದರು. ಸದ್ಯ ವಿಂಡೀಸ್ ವಿರುದ್ಧ ಟಿ20 ಟೂರ್ನಿಯಿಂದ ವಿಶ್ರಾಂತಿ ಪಡೆದಿರುವ ಕೊಹ್ಲಿ, 2019 ರ ವಿಶ್ವಕಪ್ ಟೂರ್ನಿಗೆ ಉತ್ತಮ ತಂಡವನ್ನು ಕೊಂಡ್ಯೊಯುವತ್ತ ಗಮನ ಕೇಂದ್ರಿಕರಿಸಿದ್ದಾರೆ.

    ಕೊಹ್ಲಿ 2018 ರ ವರ್ಷದ ಸಾಧನೆ: 205 ಇನ್ನಿಂಗ್ಸ್ ಗಳಲ್ಲಿ 10 ಸಾವಿರ ರನ್ ಪೂರೈಸಿ ಸಚಿನ್ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೇ ಈ ಸಾಧನೆ ಮಾಡಿದ ಭಾರತದ 13 ಆಟಗಾರ ಎನಿಸಿಕೊಂಡಿದ್ದಾರೆ. ವಿಂಡೀಸ್ ವಿರುದ್ಧ ಹ್ಯಾಟ್ರಿಕ್ ಶತಕ ಗಳಿಸಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಡೆದರು. 2011 ರಿಂದ 2018 ವರ ಅವಧಿಯಲ್ಲಿ ಪ್ರತಿ ವರ್ಷ 1 ಸಾವಿರ ರನ್ ಪೂರೈಸಿದ್ದಾರೆ. ಈ ವರ್ಷ ಕೇವಲ 11 ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಪೂರೈಸುವ ಮೂಲಕ ವರ್ಷವೊಂದರಲ್ಲಿ ವೇಗವಾಗಿ ಸಾವಿರ ರನ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾ ಆಟಗಾರ ಹಶಿಮ್ ಅಮ್ಲ 15 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು. ಇತ್ತ ಟಿ20 ಕ್ರಿಕೆಟ್‍ನಲ್ಲೂ ವೇಗದವಾಗಿ 2 ಸಾವಿರ ಪೂರೈಸಿದ್ದಾರೆ.

    ವಿಶ್ವ ಕ್ರೀಡಾ ಜಗತ್ತಿನಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕೊಹ್ಲಿ, ಯುವ ಸಮುದಾಯಕ್ಕೆ ಫಿಟ್‍ನೆಸ್ ಕುರಿತು ಸಲಹೆ ನೀಡಿ ಪ್ರೇರಣೆಯಾಗಿದ್ದಾರೆ. ಕೊಹ್ಲಿ ಡಿಸೆಂಬರ್ ನಲ್ಲಿ ನಡೆಯಲಿರುವ ಆಸೀಸ್ ಟೂರ್ನಿಗೆ ಮತ್ತೆ ತಂಡವನ್ನು ಸೇರಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆದಾಯದಲ್ಲಿ ದಾಖಲೆ ಬರೆದ ಸಾರಿಗೆ ಇಲಾಖೆ: ಯಾವ ವರ್ಷ ಎಷ್ಟೆಷ್ಟು ಆದಾಯ ಸಂಗ್ರಹ?

    ಆದಾಯದಲ್ಲಿ ದಾಖಲೆ ಬರೆದ ಸಾರಿಗೆ ಇಲಾಖೆ: ಯಾವ ವರ್ಷ ಎಷ್ಟೆಷ್ಟು ಆದಾಯ ಸಂಗ್ರಹ?

    ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು 2017-18ರ ಸಾಲಿನಲ್ಲಿ ದಾಖಲೆ ಪ್ರಮಾಣದ ಆದಾಯ ಸಂಗ್ರಹಿಸಿ ಇತಿಹಾಸ ಸೃಷ್ಟಿಸಿದೆ.

    ಹೌದು, 2017-18 ರ ಸಾಲಿನಲ್ಲಿ ಸಾರಿಗೆ ಇಲಾಖೆಯು ಒಟ್ಟಾರೆ 5,954 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸುವ ಮೂಲಕ ವಾರ್ಷಿಕ ಗುರಿಗಿಂತ ಶೇ.7ರಷ್ಟು ಹೆಚ್ಚಿನ ಆದಾಯವನ್ನು ಸಂಗ್ರಹಿಸಿ ದಾಖಲೆ ನಿರ್ಮಿಸಿದೆ.

    ಸಾರಿಗೆ ಇಲಾಖೆಯು ವರ್ಷದಿಂದ ವರ್ಷಕ್ಕೆ ನಿಗದಿತ ಆದಾಯದ ಗುರಿಯನ್ನು ಹಾಕಿಕೊಳ್ಳುತ್ತದೆ. 2017-18ನೇ ಸಾಲಿನಲ್ಲಿ ಒಟ್ಟಾರೆ 5,516.6 ಕೋಟಿ ರೂಪಾಯಿಯನ್ನು ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ ಈ ಗುರಿಯನ್ನು ದಾಟಿ ಬರೋಬ್ಬರಿ 5,954 ಕೋಟಿ ರೂಪಾಯಿ ಸಂಗ್ರಹಿಸಿದೆ. ಈ ಮೊದಲು 2016-17 ನೇ ಸಾಲಿನಲ್ಲಿ 5,262.4 ಕೋಟಿ ರೂಪಾಯಿಯನ್ನು ಸಂಗ್ರಹಿಸಿತ್ತು, ಆ ವರ್ಷ 5,026 ಕೋಟಿ ರೂಪಾಯಿ ಗುರಿಯನ್ನು ಹಾಕಿಕೊಂಡಿತ್ತು.

    ಯಾವ ವರ್ಷ ಎಷ್ಟು ಆದಾಯ?
    2009-10 ನೇ ಸಾಲಿನಲ್ಲಿ 1,892 ಕೋಟಿ ರೂಪಾಯಿ, 2010-11 ರಲ್ಲಿ 2,511 ಕೋಟಿ ರೂಪಾಯಿ, 2011-12ರಲ್ಲಿ 2,985 ಕೋಟಿ, 2012-13ರಲ್ಲಿ 3,566 ಕೋಟಿ, 2013-14 ರಲ್ಲಿ 3,671 ಕೋಟಿ, 2014-15ರಲ್ಲಿ 4,145 ಕೋಟಿ, 2015-16ರಲ್ಲಿ 4,608 ಕೋಟಿ, 2016-17ರಲ್ಲಿ 5,262 ಕೋಟಿ, 2017-18ರಲ್ಲಿ 5,954 ಕೋಟಿ ರೂಪಾಯಿ ಆದಾಯ ಗಳಿಸಿದೆ.

    ಸಾರಿಗೆ ಇಲಾಖೆಯು ರಸ್ತೆ ತೆರಿಗೆ, ಹೊಸ ವಾಹನಗಳ ನೋಂದಣಿ ಶುಲ್ಕ, ಪರವಾನಿಗೆ ಶುಲ್ಕ, ಬಾಕಿ ಇರುವ ತೆರಿಗೆ ವಸೂಲಿ, ಚಾಲನಾ ಪರವಾನಿಗೆ ಶುಲ್ಕ, ವಾಹನಗಳ ಪರಿಶೀಲನೆ ಹಾಗೂ ರಾಜ್ಯಗಡಿಗಳಲ್ಲಿ ಚೆಕ್‍ಪೋಸ್ಟ್ ಮೂಲಕ ಒಟ್ಟಾರೆ ಆದಾಯವನ್ನು ಗಳಿಸುತ್ತಿದೆ. ಈ ಬಾರಿಯ ವಿಶೇಷವೇನೆಂದರೆ ರಾಜ್ಯದ ಎಲ್ಲಾ ಜಿಲ್ಲೆಗಳಿಗಿಂತ ಬೆಂಗಳೂರು ನಗರ ಈ ಬಾರಿ ಅತಿಹೆಚ್ಚು ಆದಾಯವನ್ನು ತಂದುಕೊಟ್ಟಿದೆ. ಮಾಹಿತಿಗಳ ಪ್ರಕಾರ ರಾಜಧಾನಿಯಲ್ಲಿ ಒಟ್ಟು 76 ಲಕ್ಷ ವಾಹನಗಳು ನೋಂದಣಿಯಾಗುವ ಮೂಲಕ ಆದಾಯ ಹೆಚ್ಚಿದೆ.

    ಕರ್ನಾಟಕ ಸರ್ಕಾರಕ್ಕೆ ಸಾರಿಗೆ ಇಲಾಖೆಯು ನಾಲ್ಕನೇ ಅತಿದೊಡ್ಡ ಆದಾಯ ನೀಡುವ ಸಂಸ್ಥೆಯಾಗಿದೆ. ಇದಲ್ಲದೇ ವಾಣಿಜ್ಯ ತೆರಿಗೆ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಅಬಕಾರಿ ಇಲಾಖೆಗಳು ಸರ್ಕಾರದ ಆದಾಯದ ಪ್ರಮುಖ ಮೂಲಗಳಾಗಿವೆ. ಕಳೆದ 9 ವರ್ಷಗಳಿಂದಲೂ ಸಾರಿಗೆ ಇಲಾಖೆ ವರ್ಷದಿಂದ ವರ್ಷಕ್ಕೆ ತನ್ನ ಆದಾಯವನ್ನು ಹೆಚ್ಚಿಸಿಕೊಂಡೇ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಷ್ಯನ್ ಗೇಮ್ಸ್‌ನಲ್ಲಿ  ಭಾರತದ ಸಾರ್ವಕಾಲಿಕಾ ದಾಖಲೆ!

    ಏಷ್ಯನ್ ಗೇಮ್ಸ್‌ನಲ್ಲಿ  ಭಾರತದ ಸಾರ್ವಕಾಲಿಕಾ ದಾಖಲೆ!

    ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಇತಿಹಾಸದಲ್ಲೇ ಅತಿಹೆಚ್ಚು ಪದಕಗಳನ್ನು ಗೆದ್ದಿದ್ದಾರೆ.

    ಕೊನೆಯ ದಿನವಾದ ಶನಿವಾರ ಪುರುಷರ ಹಾಕಿ ತಂಡ ಪಾಕಿಸ್ತಾನವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ಪಡೆಯಿತು. ಮಹಿಳೆಯರ ಸ್ಕ್ವಾಶ್ ತಂಡ ಬೆಳ್ಳಿ ಪದಕ ಗೆದ್ದರೆ ಬಾಕ್ಸಿಂಗ್ ನಲ್ಲಿ ಅಮಿತ್ ಪಾಂಗಲ್ ಮತ್ತು ಬ್ರಿಡ್ಜ್ ಗೇಮ್(ಇಸ್ಪೀಟ್) ನಲ್ಲಿ ಪುರುಷರ ತಂಡ ಚಿನ್ನವನ್ನು ಗೆದ್ದುಕೊಂಡಿದೆ.

    2010ರಲ್ಲಿ ಚೀನಾದಲ್ಲಿ ನಡೆದಿದ್ದ 16ನೇ ಏಷ್ಯನ್  ಗೇಮ್ಸ್‌ನಲ್ಲಿ 65 ಪದಕಗಳನ್ನು ಗೆದ್ದಿದ್ದೇ ಭಾರತದ ಇವರೆಗಿನ ದಾಖಲೆಯಾಗಿತ್ತು. ಆದರೆ ಈ ಬಾರಿ 15 ಚಿನ್ನ, 24 ಬೆಳ್ಳಿ, 30 ಕಂಚು ಜಯಿಸುವ ಮೂಲಕ ಒಟ್ಟು 69 ಪದಕಗಳನ್ನು ಸ್ಪರ್ಧಿಗಳು ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: ಚಿನ್ನ ಗೆದ್ದ 16ರ ಹರೆಯದ ಶೂಟರ್ ಹಿಂದಿದೆ ಖೇಲೋ ಇಂಡಿಯಾ! ಏನಿದು ಯೋಜನೆ?

    2014ರ ಇಂಚಾನ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 11 ಚಿನ್ನ, 10 ಬೆಳ್ಳಿ, 36 ಕಂಚು ಸೇರಿ 57 ಪದಕ ಜಯಿಸಿತ್ತು. 1982ರಲ್ಲಿ ದೆಹಲಿಯಲ್ಲಿ ನಡೆದಿದ್ದ ಕೂಟದಲ್ಲೂ ಭಾರತ ಕ್ರೀಡಾಪಟುಗಳು 57 ಪದಕ ಜಯಿಸಿದ್ದರೂ, ಗೆದ್ದ ಚಿನ್ನದ ಪದಕಗಳ ಸಂಖ್ಯೆ 13 ಆಗಿತ್ತು. 2006ರ ದೋಹಾದಲ್ಲಿ ನಡೆದ ಕ್ರೀಡಾಕೂಟದಲ್ಲಿ 53 ಹಾಗೂ 1962ರ ಜರ್ಕಾತದಲ್ಲಿ 52 ಪದಕಗಳನ್ನು ಗೆದ್ದುಕೊಂಡಿತ್ತು.  ಇದನ್ನೂ ಓದಿ: ಹೆಪ್ಟಾಥ್ಲಾನ್ ಚಿನ್ನದ ಹುಡುಗಿ ಸ್ವಪ್ನಾ ತಾಯಿಯ ಆನಂದಭಾಷ್ಪ ವಿಡಿಯೋ ವೈರಲ್

    ಭಾರತದ ಅಥ್ಲೆಟ್ ಗಳು ಈ ಬಾರಿ ವಿಶೇಷ ಸಾಧನೆ ಮಾಡಿದ್ದು ಒಟ್ಟು 7 ಚಿನ್ನ, 10 ಬೆಳ್ಳಿ, 2 ಕಂಚನ್ನು ಗೆಲ್ಲುವ ಮೂಲಕ ಒಟ್ಟು 19 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಅಥ್ಲೆಟಿಕ್ಸ್ ನಲ್ಲಿ ಮೂರನೇ ಸ್ಥಾನ ಸಂಪಾದಿಸಿದ್ದಾರೆ. ಶೂಟಿಂಗ್ ನಲ್ಲಿ 2 ಚಿನ್ನ ಸೇರಿ ಒಟ್ಟು 9 ಪದಕ ಗೆದ್ದಿದ್ದರೆ, ಕುಸ್ತಿಯಲ್ಲ 2 ಚಿನ್ನ ಸೇರಿ ಒಟ್ಟು 3 ಪದಕವನ್ನು ಗೆದ್ದುಕೊಂಡಿದೆ.

    ಚಿನ್ನ ನಿರೀಕ್ಷಿಸಿದ್ದ ಕಬಡ್ಡಿ, ಹಾಕಿ, ಬಾಕ್ಸಿಂಗ್ ನಲ್ಲಿ ಕಂಚು, ಬೆಳ್ಳಿ ಪದಕ ಸಿಕ್ಕಿದ್ದರೆ, ಟೇಬಲ್ ಟೆನಿಸ್, ಸೈಲಿಂಗ್ (ಹಾಯಿದೋಣಿ) ಬ್ರಿಡ್ಜ್ (ಇಸ್ಪೀಟ್), ಈಕ್ವೇಸ್ಟ್ರಿಯನ್ (ಕುದುರೆ ಸವಾರಿ), ಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗೆದ್ದಿರುವುದು ವಿಶೇಷ.  ಇದನ್ನೂ ಓದಿ:ಚಿನ್ನ ಗೆದ್ದ ಸ್ವಪ್ನಾ ಸಾಧನೆಯ ಹಿಂದಿದೆ ದ್ರಾವಿಡ್ ಸಹಾಯಹಸ್ತ!

     289 ಪದಕ ಪಡೆಯುವ ಮೂಲಕ ಚೀನಾ ಮೊದಲ ಸ್ಥಾನ ಪಡೆದರೆ ಸಿರಿಯಾ ಕೊನೆಯ 37ನೇ ಸ್ಥಾನ ಪಡೆದಿದೆ. 4 ಕಂಚಿನ ಪದಕ ಗೆದ್ದಿರುವ ಪಾಕಿಸ್ತಾನ ಪಟ್ಟಿಯಲ್ಲಿ 34ನೇ ಸ್ಥಾನ ಪಡೆದಿದೆ.

     

     

  • ಏಷ್ಯನ್ ಗೇಮ್ಸ್ 2018: ಭಾರತದ 14 ವರ್ಷಗಳ ದಾಖಲೆ ಮುರಿದ ಹಿಮಾ ದಾಸ್!

    ಏಷ್ಯನ್ ಗೇಮ್ಸ್ 2018: ಭಾರತದ 14 ವರ್ಷಗಳ ದಾಖಲೆ ಮುರಿದ ಹಿಮಾ ದಾಸ್!

    ಜಕಾರ್ತ: ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪರ ಮೊದಲ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ್ದ ಹಿಮಾ ದಾಸ್ ಏಷ್ಯನ್ ಗೇಮ್ಸ್ ಸ್ಪರ್ಧೆಯಲ್ಲಿ ಭಾರತದ 14 ವರ್ಷಗಳ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

    ಶನಿವಾರ ನಡೆದ ಅರ್ಹತಾ ಸುತ್ತಿನ 400 ಮೀ ಓಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಿಮಾ ದಾಸ್ ರವರು 51.00 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಈ ಸಾಧನೆಮಾಡಿದ್ದಾರೆ. ಈ ಮೂಲಕ ಭಾರತದ 14 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿ, ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಪದಕ ತಂದುಕೊಟ್ಟ ಹಿಮಾ ದಾಸ್ ಚಿರತೆಯ ಓಟದ ವಿಡಿಯೋ ನೋಡಿ

    ಈ ಮೊದಲು 2004 ರ ಚೆನ್ನೈನಲ್ಲಿ ನಡೆದಿದ್ದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಮಂಜಿತ್ ಕೌರ್ ಈ ದಾಖಲೆಯನ್ನು ಮಾಡಿದ್ದರು. ಅರ್ಹತಾ ಸುತ್ತಿನ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಮಾ ದಾಸ್ ರವರು ಅಂತಿಮ ಪಂದ್ಯಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ.

    ಅರ್ಹತಾ ಸುತ್ತಿನ ಓಟದಲ್ಲಿ ಬಹರೇನ್‍ನ ಸಲ್ವಾ ನಸರ್ ಜೊತೆ ಹಿಮಾ ದಾಸ್ ಓಡಿದ್ದು, ಸಲ್ವಾ ನಸರ್ ಸಹ ಸ್ಪರ್ಧೆ ಗೆಲ್ಲುವ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಇದನ್ನೂ ಓದಿ: ಹಿಮಾ ದಾಸ್ ಸಾಧನೆಗಿಂತ, ಜಾತಿಯನ್ನೇ ಹೆಚ್ಚಾಗಿ ಹುಡುಕಿದ ಜಾಲತಾಣಿಗರು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬರೋಬ್ಬರಿ 40 ಸಾವಿರಕ್ಕೆ 1 ಕೆ.ಜಿ ಚಹಾ ಪುಡಿ ಮಾರಾಟ!

    ಬರೋಬ್ಬರಿ 40 ಸಾವಿರಕ್ಕೆ 1 ಕೆ.ಜಿ ಚಹಾ ಪುಡಿ ಮಾರಾಟ!

    ಗುವಾಹಟಿ: ಅರುಣಾಚಲ ಪ್ರದೇಶ ರಾಜ್ಯದ ರಾಜಧಾನಿಯಲ್ಲಿ ವಿಶೇಷ ಚಹಾ ಪುಡಿಯೊಂದು ಪ್ರತಿ ಕೆಜಿಗೆ ಬರೋಬ್ಬರಿ 40 ಸಾವಿರಕ್ಕೆ ಮಾರಾಟವಾಗುವ ಮೂಲಕ ವಿಶ್ವದಾಖಲೆಯನ್ನು ನಿರ್ಮಾಣ ಮಾಡಿದೆ.

    ಕಳೆದ ಗುರುವಾರ ಗುವಾಹಟಿಯ ಚಹಾ ಪುಡಿ ಹರಾಜು ಪ್ರಕ್ರಿಯೆಯಲ್ಲಿ ಗೋಲ್ಡನ್ ನೀಡಲ್ಸ್ ಟೀ ತಳಿಯ ಚಹಾ ಎಲೆಯ ಪುಡಿಯು ಪ್ರತಿ ಕೆಜಿಗೆ 40,000 ರೂ.ಗೆ ಮಾರಾಟವಾಗುವ ಮೂಲಕ ವಿಶ್ವದಲ್ಲೇ ಅತೀ ಹೆಚ್ಚಿನ ಬೆಲೆಗೆ ಮಾರಾಟವಾದ ಚಹಾ ತಳಿಯಾಗಿ ಹೆಸರು ಪಡೆದುಕೊಂಡಿದೆ.

    ದೋನಿ ಪೋಲೊ ಎಂಬ ಎಸ್ಟೇಟ್‍ನಲ್ಲಿ ಅಭಿವೃದ್ಧಿ ಪಡಿಸಿ ಬೆಳೆದ ಗೋಲ್ಡನ್ ನೀಡಲ್ಸ್ ಟೀ ತಳಿಯು ಅತ್ಯಂತ ಉತ್ಕೃಷ್ಟ ಮಟ್ಟದ ಚಹಾ ಪುಡಿ ಎಂದು ಖ್ಯಾತಿ ಪಡೆದುಕೊಂಡಿದೆ. ಈ ಎಸ್ಟೇಟ್ ಕಳೆದ 1987 ರಿಂದಲೂ ಸಾಂಪ್ರದಾಯಿಕ ಶೈಲಿಯ ಚಹಾ ಬೆಳೆಗೆ ಹೆಸರುವಾಸಿಯಾಗಿದ್ದು, ಇಲ್ಲಿನ ಚಹಾ ಪುಡಿಗಳು ವಿಶ್ವದಲ್ಲಿಯೇ ಉನ್ನತ ದರ್ಜೆಯನ್ನು ಪಡೆದುಕೊಂಡಿವೆ. ಇದನ್ನೂ ಓದಿ:ವಿಶ್ವದಾಖಲೆ ಬರೆದ ಅಸ್ಸಾಂ ಚಹಾ: 1 ಕೆಜಿ ಎಲೆಗಳಿಗೆ 39 ಸಾವಿರ!

    ಈ ಕುರಿತು ಪ್ರತಿಕ್ರಿಯಿಸಿದ ಗುವಾಹಟಿ ಚಹಾ ಹರಾಜು ಖರೀದಿದಾರ ಸಂಘದ ಕಾರ್ಯದರ್ಶಿ ದಿನೇಶ್ ಬಿಹಾನಿರವರು, ಗೋಲ್ಡನ್ ನೀಡಲ್ಸ್ ಚಹಾ ತಳಿಯು ಪ್ರತಿ ಕೆಜಿಗೆ 40 ಸಾವಿರಕ್ಕೆ ಮಾರಾಟವಾಗುವ ಮೂಲಕ ವಿಶ್ವದಲ್ಲಿಯೇ ಅತಿಹೆಚ್ಚು ಮೊತ್ತ ಪಡೆದ ಚಹಾಪುಡಿ ಎಂದೆನಿಸಿಕೊಂಡಿದೆ. ಅಲ್ಲದೇ ಈ ಮೊದಲು ಜುಲೈ 24ರಂದು ಅಸ್ಸಾಂನ ಚಹಾ ಎಲೆಯು 39 ಸಾವಿರಗಳಿಸುವ ಮೂಲಕ ದಾಖಲೆ ನಿರ್ಮಿಸಿತ್ತು ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 87 ವರ್ಷದ ದಾಖಲೆ ಮುರಿದ ಕೊಡಗು ಮಳೆ: ಮೂರೇ ದಿನದಲ್ಲಿ ಬಿದ್ದಿದ್ದು ಎಷ್ಟು ಗೊತ್ತೆ?

    87 ವರ್ಷದ ದಾಖಲೆ ಮುರಿದ ಕೊಡಗು ಮಳೆ: ಮೂರೇ ದಿನದಲ್ಲಿ ಬಿದ್ದಿದ್ದು ಎಷ್ಟು ಗೊತ್ತೆ?

    ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆ 87 ವರ್ಷದ ಹಿಂದಿನ ದಾಖಲೆಯನ್ನು ಅಳಿಸಿಹಾಕಿದೆ.

    1931ರಲ್ಲಿ ಆಗಸ್ಟ್ ತಿಂಗಳಿನಲ್ಲಿ ಒಟ್ಟು 1,559 ಮಿ.ಮೀ ಮಳೆಯಾಗಿತ್ತು. ಆದರೆ ಈ ಆಗಸ್ಟ್ ನಲ್ಲಿ 1,675 ಮಿ.ಮೀ(ಆಗಸ್ಟ್ 21ರ ಅಂತ್ಯಕ್ಕೆ) ಮಳೆಯಾಗಿದೆ ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ. ಇದನ್ನೂ ಓದಿ: ಅನ್ನಾಹಾರವಿಲ್ಲದೇ ಕುಸಿದ ಮನೆಯನ್ನೇ ಕಾವಲು ಕಾಯುತ್ತಿದೆ ಶ್ವಾನ!

    ಇದರಲ್ಲಿ 768 ಮಿ.ಮೀ(45%) ರಷ್ಟು ಮಳೆ ಆಗಸ್ಟ್ 15, 16, 17ರ ಮೂರೇ ದಿನದಲ್ಲಿ ಸುರಿದಿದೆ. ಕೊಡಗಿನಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಲು ಮಹಾಮಳೆಯೇ ಕಾರಣವಾಗಿದೆ. ಒಂದು ದಿನದಲ್ಲೇ 200 ಮಿ.ಮೀಗಿಂತಲೂ ಜಾಸ್ತಿ ಮಳೆಯಾಗಿದೆ. ಅಷ್ಟೇ ಅಲ್ಲದೇ ನಿರಂತರ ಮೂರು ದಿನ ಮಳೆಯಾದ ಕಾರಣ ಕೊಡಗಿನಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ ಎಂದು ಐಎಂಡಿ ನಿರ್ದೇಶಕಿ ಗೀತಾ ಅಗ್ನಿಹೋತ್ರಿ ತಿಳಿಸಿದ್ದಾರೆ.

    ಆಗಸ್ಟ್ 17 ಶುಕ್ರವಾರ ಒಂದೇ ದಿನ 300 ಮಿ.ಮೀ ಮಳೆಯಾಗಿತ್ತು. ಈ ದಿನವೇ ಸಂಪಾಜೆ ಘಾಟಿ ಪ್ರದೇಶಗಳಾದ ಮದೆನಾಡು, ಜೋಡುಪಾಲದಲ್ಲಿ ಭಾರೀ ಕುಸಿತವಾಗಿ ನದಿಯಂತೆ ನೀರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದಿತ್ತು. ಇದನ್ನೂ ಓದಿ: ಭಾರೀ ಶಬ್ಧದಿಂದ ಹೆದರಿ ಬಾಣಂತಿ, 2 ತಿಂಗ್ಳ ಮಗುವನ್ನು ಎತ್ತಿಕೊಂಡು ಓಡಿದ್ವಿ- ಜೋಡುಪಾಲದ ಮಹಿಳೆ ಕಣ್ಣೀರು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂಗ್ಲೆಂಡ್ ಟೆಸ್ಟ್: ಮೊದಲ ದಿನವೇ ಅಪರೂಪದ ದಾಖಲೆ ಬರೆದ ಆರ್ ಅಶ್ವಿನ್

    ಇಂಗ್ಲೆಂಡ್ ಟೆಸ್ಟ್: ಮೊದಲ ದಿನವೇ ಅಪರೂಪದ ದಾಖಲೆ ಬರೆದ ಆರ್ ಅಶ್ವಿನ್

    ಬರ್ಮಿಂಗ್‍ಹ್ಯಾಮ್: ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಎದುರಾಳಿ ತಂಡದ 4 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಅಪರೂಪದ ಸಾಧನೆ ಮಾಡಿದ್ದಾರೆ.

    ಹೌದು, ಇಂಗ್ಲೆಂಡ್ ವಿರುದ್ಧ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ವೇಳೆ ಅಶ್ವಿನ್ ಇಂಗ್ಲೆಂಡ್ ತಂಡದ ಕುಕ್, ಬೆನ್ ಸ್ಟೋಕ್ಸ್, ಜೊಸ್ ಬಟ್ಲರ್, ಸ್ಟುವರ್ಟ್ ಬ್ರಾಡ್ ರನ್ನು ಔಟ್ ಮಾಡುವ ಮೂಲಕ ನಾಲ್ಕು ವಿಕೆಟ್ ಪಡೆದರು. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ದಿನವೇ 4 ವಿಕೆಟ್ ಪಡೆದ ಮೊದಲ ಟೀಂ ಇಂಡಿಯಾದ ಸ್ಪಿನ್ ಬೌಲರ್ ಎಂಬ ಹೆಗ್ಗಳಿಕೆ ಪಡೆದರು. ಅಲ್ಲದೇ ವಿದೇಶಿ ನೆಲದಲ್ಲಿ ಈ ಸಾಧನೆ ಮಾಡಿದ 4ನೇ ಆಟಗಾರ ಎನಿಸಿಕೊಂಡರು. ಈ ಹಿಂದೆ ಟೀಂ ಇಂಡಿಯಾ ಪರ ಸ್ಪಿನ್ನರ್ ಚಂದ್ರಶೇಖರ್ (6/94), ಬಿಷನ್ ಸಿಂಗ್ ಬೇಡಿ (5/55), ಅನಿಲ್ ಕುಂಬ್ಳೆ (5/84) ವಿದೇಶಿ ನೆಲದಲ್ಲಿ ಈ ಸಾಧನೆ ಮಾಡಿದ್ದರು.

    ಕುಕ್‍ಗೆ ಮಾರಕವಾದ ಅಶ್ವಿನ್: ಪಂದ್ಯದ ವಿಶೇಷವಾಗಿ ಅಶ್ವಿನ್ ಇಂಗ್ಲೆಂಡ್ ತಂಡದ ಕುಕ್ ರನ್ನು ತಮ್ಮ ವೃತ್ತಿ ಜೀವನಲ್ಲಿ 8 ಬಾರಿಗೆ ಬಲಿ ಪಡೆದರು. ಇದರೊಂದಿಗೆ ಅಶ್ವಿನ್ ಬೌಲಿಂಗ್ ನಲ್ಲಿ ಹೆಚ್ಚು ಬಾರಿ ಔಟಾದ 2ನೇ ಆಟಗಾರ ಎನಿಸಿಕೊಂಡರು. ಅಸೀಸ್ ಆಟಗಾರ ಡೆವಿಡ್ ವಾರ್ನರ್ 9 ಬಾರಿ ಅಶ್ವಿನ್‍ಗೆ ಬಲಿಯಾಗಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

    ಮೊದಲ ದಿನದಾಟದಲ್ಲಿ 25 ಓವರ್ ಬೌಲ್ ಮಾಡಿರುವ ಅಶ್ವಿನ್ 2.40 ಎಕಾನಮಿಯಲ್ಲಿ 60 ರನ್ ನೀಡಿ 4 ವಿಕೆಟ್ ಪಡೆದರು. ಇದರಲ್ಲಿ 7 ಓವರ್ ಮೆಡನ್ ಮಾಡಿ ಇಂಗ್ಲೆಂಡ್ ಬ್ಯಾಟ್ಸ್‍ಮನ್ ಗಳು ಪರದಾಡುವಂತೆ ಮಾಡಿದರು. ಉಳಿದಂತೆ ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 2, ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್ ತಲಾ 1 ವಿಕೆಟ್ ಪಡೆದಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿದೆ.

  • ಟೀಂ ಇಂಡಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲೇ ಇಂಗ್ಲೆಂಡ್ ದಾಖಲೆ

    ಟೀಂ ಇಂಡಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲೇ ಇಂಗ್ಲೆಂಡ್ ದಾಖಲೆ

    – ಐತಿಹಾಸಿಕ ಪಂದ್ಯದಲ್ಲಿ ರಾಹುಲ್‍ಗೆ ಸ್ಥಾನ

    ಬರ್ಮಿಂಗ್‍ಹ್ಯಾಮ್: ಟೀಂ ಇಂಡಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಟೂರ್ನಿಯ ಮೊದಲ ಪಂದ್ಯವಾಡುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ಸಾವಿರ ಪಂದ್ಯಗಳನ್ನು ಆಡಿದ ಮೊದಲ ತಂಡ ಎಂಬ ಹೆಗ್ಗಳಿಕೆ ಇಂಗ್ಲೆಂಡ್ ಪಾತ್ರವಾಗಿದೆ.

    ಈ ಐತಿಹಾಸಿಕ ಪಂದ್ಯಕ್ಕೆ ಇಂಗ್ಲೆಂಡ್ ನ ಬರ್ಮಿಂಗ್‍ಹ್ಯಾಮ್ ಕ್ರೀಡಾಂಗಣ ಸಾಕ್ಷಿಯಾಗಿದ್ದು, ಸಂತಸದಲ್ಲಿರುವ ಇಂಗ್ಲೆಂಡ್ ತಂಡದ ವಿರುದ್ಧ ವಿರಾಟ್ ಪಡೆ ಗೆಲುವಿನ ನಿರೀಕ್ಷೆಯಲ್ಲಿದೆ.

    ಅಂದಹಾಗೇ ಇಂಗ್ಲೆಂಡ್ 1877 ರಲ್ಲಿ ಆಸ್ಟೇಲಿಯಾ ವಿರುದ್ಧ ಮೊದಲ ಪಂದ್ಯವನ್ನಾಡಿದ್ದು, ಈವರೆಗೂ ಹಲವು ದಾಖಲೆಗಳನ್ನು ನಿರ್ಮಿಸಿದೆ. ಇದುವರೆಗೂ ಇಂಗ್ಲೆಂಡ್ ಆಡಿರುವ ಪಂದ್ಯಗಳಲ್ಲಿ 357 ಪಂದ್ಯಗಳಲ್ಲಿ ಗೆಲುವು ಪಡೆದಿದ್ದು, 297 ಪಂದ್ಯಗಳಲ್ಲಿ ಸೋಲುಂಡಿದೆ. ಉಳಿದಂತೆ 345 ಪಂದ್ಯಗಳು ಡ್ರಾದಲ್ಲಿ ಅಂತ್ಯಕಂಡಿದೆ.

    ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟೀಂ ಇಂಡಿಯಾ ತನ್ನ ಈ ಹಿಂದಿನ ಇಂಗ್ಲೆಂಡ್ ವಿರುದ್ಧ ಪ್ರವಾಸಗಳಲ್ಲಿ ಹೆಚ್ಚು ಸೋಲುಂಡಿದೆ. 1932 ಜೂನ್ ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನಾಡಿದ ಟೀಂ ಇಂಡಿಯಾ ಆಡಿರುವ 117 ಪಂದ್ಯಗಳಲ್ಲಿ 43 ರಲ್ಲಿ ಗೆಲುವು ಪಡೆದಿದ್ದು, 25 ರಲ್ಲಿ ಸೋಲುಂಡಿದೆ. ಇದರಲ್ಲಿ ಇಂಗ್ಲೆಂಡ್ ತವರು ನೆಲದಲ್ಲಿ 30 ಟೆಸ್ಟ್ ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ 6 ಪಂದ್ಯಗಳಲ್ಲಿ ಗೆಲುವು, 21 ಪಂದ್ಯಗಳಲ್ಲಿ ಸೋಲುಂಡಿದೆ.

    ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಜಯಗಳಿಸಿರುವ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾ ಪರ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಅವರನ್ನು ಆಡುವ 11 ಬಳಗದಿಂದ ಕೈಬಿಡಲಾಗಿದ್ದು, ಕೆಎಲ್ ರಾಹುಲ್ ಅವರಿಗೆ ಸ್ಥಾನ ನೀಡಲಾಗಿದೆ. ಉಳಿದಂತೆ ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಆಗಿದ್ದರೆ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ವೇಗದ ಬೌಲಿಂಗ್ ಜವಾಬ್ದಾರಿ ಹೊಂದಿದ್ದು, ಸ್ಪಿನ್ ಹೊಣೆಯನ್ನು ಅನುಭವಿ ಅಶ್ವಿನ್ ಪಡೆದಿದ್ದಾರೆ.