Tag: ದಾಖಲೆ

  • ಮೊದಲ ದಿನವೇ ಬುಕ್‌ಮೈಶೋದಲ್ಲಿ ದಾಖಲೆ ಬರೆದ ಕಾಂತಾರ

    ಮೊದಲ ದಿನವೇ ಬುಕ್‌ಮೈಶೋದಲ್ಲಿ ದಾಖಲೆ ಬರೆದ ಕಾಂತಾರ

    ರಿಷಭ್‌ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿದ ಕಾಂತಾರ: ಚಾಪ್ಟರ್ 1 (Kantara: Chapter 1) ಟಿಕೆಟ್‌ ಬುಕ್ಕಿಂಗ್‌ ಮಾಡುವ ಬುಕ್‌ಮೈಶೋದಲ್ಲಿ (BookMyShow) ದಾಖಲೆ ಬರೆದಿದಿದೆ.

    24 ಗಂಟೆಯಲ್ಲಿ 1.28 ಮಿಲಿಯನ್‌(12.8 ಲಕ್ಷ) ಟಿಕೆಟ್‌ ಮಾರಾಟವಾಗಿದೆ. ಈ ಮೂಲಕ 2025ರಲ್ಲಿ ಬುಕ್‌ಮೈ ಶೋದಲ್ಲಿ ಅತಿ ಹೆಚ್ಚು ಟಿಕೆಟ್‌ ಮಾರಾಟವಾದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಿನಿಮಾ ತಯಾರಿಸಿದ ಹೊಂಬಾಳೆ ಸಂಸ್ಥೆ ಹೇಳಿಕೊಂಡಿದೆ.

    ಇದು ಕೇವಲ ಒಂದು ದಿನದ ಟಿಕೆಟ್‌ ಮಾರಾಟದ ಲೆಕ್ಕ ಆಗಿದ್ದು, ಶುಕ್ರವಾರ ಮತ್ತು ಶನಿವಾರದ ಟಿಕೆಟ್‌ಗಳು ಭರ್ಜರಿಯಾಗಿ ಮಾರಾಟವಾಗಿದೆ. ಹೀಗಾಗಿ ಎರಡನೇ ದಿನದಲ್ಲಿ ಕಾಂತಾರ 100 ಕೋಟಿ ರೂ. ಕ್ಲಬ್‌ ಸೇರುವ ಸಾಧ್ಯತೆಯಿದೆ. ಇದನ್ನೂ ಓದಿ: Kantara: Chapter 1ಗೆ ಭರ್ಜರಿ ರೆಸ್ಪಾನ್ಸ್ ಮೊದಲ ದಿನವೇ 55 ಕೋಟಿ ಗಳಿಕೆ

    ಭಾರತದಲ್ಲಿ ಒಟ್ಟು 6,500 ಚಿತ್ರ ಮಂದಿರಗಳಲ್ಲಿ ಸುಮಾರು 12,511ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಂಡಿದ್ದವು. ರಿಲೀಸ್‌ಗೂ ಒಂದು ದಿನ ಮೊದಲೇ ಅಂದರೆ ಅ.1ರಂದು ದೇಶದ ವಿವಿಧೆಡೆ ಪ್ರೀಮಿಯರ್ ಶೋಗಳು ನಡೆದಿದ್ದು, ಈ ಶೋಗಳೆಲ್ಲ ಹೌಸ್‌ಫುಲ್ ಪ್ರದರ್ಶನ ಕಂಡಿದ್ದವು. ಇದರಿಂದ ಸಿನಿಮಾಗೆ ಉತ್ತಮ ಪ್ರಚಾರ ಸಿಕ್ಕಿದ್ದು, ಬಿಡುಗಡೆ ದಿನ ಉತ್ತಮ ಪ್ರದರ್ಶನ ಕಂಡಿದೆ.

    ಬುಕ್‌ಮೈಶೋದಲ್ಲಿ 47 ಸಾವಿರಕ್ಕೂ ಹೆಚ್ಚು ಜನ ಸಿನಿಮಾಗೆ ಕಮೆಂಟ್‌ ಮಾಡಿದ್ದರೆ 72 ಸಾವಿರ ಜನ ವೋಟ್‌ ಮಾಡಿದ್ದು 10ಕ್ಕೆ 9.4 ಅಂಕ ನೀಡಿ ಬಹಳ ಚೆನ್ನಾಗಿದ್ದು, ಥಿಯೇಟರ್‌ನಲ್ಲಿ ನೋಡಿ ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸಿ ಎಂದು ಹೇಳುತ್ತಿದ್ದಾರೆ.

     

  • ಸಿಕ್ಸ್‌ ಮೇಲೆ ಸಿಕ್ಸ್‌ – ಏಷ್ಯಾಕಪ್‌ನಲ್ಲಿ ದಾಖಲೆ ಬರೆದ ಅಭಿಷೇಕ್‌ ಶರ್ಮಾ

    ಸಿಕ್ಸ್‌ ಮೇಲೆ ಸಿಕ್ಸ್‌ – ಏಷ್ಯಾಕಪ್‌ನಲ್ಲಿ ದಾಖಲೆ ಬರೆದ ಅಭಿಷೇಕ್‌ ಶರ್ಮಾ

    ದುಬೈ: ಏಷ್ಯಾಕಪ್‌ (Asia Cup) ಪಂದ್ಯಗಳಲ್ಲಿ ಸಿಕ್ಸ್‌ ಮೇಲೆ ಸಿಕ್ಸ್‌ (Six) ಸಿಡಿಸುತ್ತಿರುವ ಅಭಿಷೇಕ್‌ ಶರ್ಮಾ (Abhishek Sharma) ಇತಿಹಾಸ ಸೃಷ್ಟಿಸಿದ್ದಾರೆ.

    ಬಾಂಗ್ಲಾದೇಶ (Bangladesh) ವಿರುದ್ಧ ನಡೆದ ಪಂದ್ಯದಲ್ಲಿ 5 ಸಿಕ್ಸ್‌ ಸಿಡಿಸುವ ಮೂಲಕ ಒಂದು ಏಷ್ಯಾಕಪ್‌ ಆವೃತ್ತಿಯಲ್ಲಿ (ಸಿಂಗಲ್ ಎಡಿಷನ್)  ಅತಿ ಹೆಚ್ಚು ಸಿಕ್ಸ್‌ ಸಿಡಿಸಿದ ಬ್ಯಾಟರ್‌ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ. ಇಲ್ಲಿಯವರೆಗೆ ಶ್ರೀಲಂಕಾದ ಆರಂಭಿಕ ಆಟಗಾರ ಸನತ್‌ ಜಯಸೂರ್ಯ ಹೆಸರಿನಲ್ಲಿ ಈ ದಾಖಲೆ ಇತ್ತು. ಪಾಕಿಸ್ತಾನದಲ್ಲಿ ನಡೆದ 2008 ರ ಏಷ್ಯಾಕಪ್‌ ಟೂರ್ನಿಯಲ್ಲಿ 5 ಪಂದ್ಯವಾಡಿ  14 ಸಿಕ್ಸ್‌ ಹೊಡೆದಿದ್ದರು.

    ಈ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ 5 ಸಿಕ್ಸ್‌ ಸಿಡಿಸಿ ಜಯಸೂರ್ಯ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿದ್ದಾರೆ. ಇಲ್ಲಿಯವರೆಗೆ ಶರ್ಮಾ5 ಪಂದ್ಯಗಳಿಂದ  ಒಟ್ಟು 17 ಸಿಕ್ಸ್‌ ಸಿಡಿಸಿ ಮುನ್ನುಗ್ಗುತ್ತಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಬಗ್ಗು ಬಡಿದು ಅಜೇಯವಾಗಿ ಫೈನಲ್‌ ಪ್ರವೇಶಿಸಿದ ಭಾರತ

    ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ (Rohit Sharama) 2018ರ ಆವೃತ್ತಿಯಲ್ಲಿ 13 ಸಿಕ್ಸರ್​ ಸಿಡಿಸಿದ್ದು ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಶಾಹೀದ್ ಅಫ್ರಿದಿ 2010ರ ಟೂರ್ನಿಯಲ್ಲಿ 12 ಸಿಕ್ಸರ್ ಸಿಡಿಸಿ 4ನೇ ಸ್ಥಾನದಲ್ಲಿದ್ದಾರೆ.  ಅಫ್ಘಾನಿಸ್ತಾನದ ರಹಮನುಲ್ಲಾ ಗುರ್ಬಾಜ್ , 2022ರ ಟಿ20 ಮಾದರಿಯ ಏಷ್ಯಾಕಪ್​ನಲ್ಲಿ ಓಪನರ್ ಆಗಿ 12 ಸಿಕ್ಸರ್ ಸಿಡಿಸಿ ಅಫ್ರಿದಿ ಜೊತೆ 4ನೇ ಪಡೆದಿದ್ದಾರೆ.

    ಇಂದಿನ ಪಂದ್ಯದಲ್ಲಿ ಅಭಿಶೇಕ್‌ ಶರ್ಮಾ 37 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸ್‌ ನೆರವಿನಿಂದ 75 ರನ್‌ ಚಚ್ಚಿದ್ದಾರೆ. ಈ ಅತ್ಯುತ್ತಮ ಆಟಕ್ಕೆ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿದೆ.


    ಯಾವ ತಂಡದ ವಿರುದ್ಧ ಅಭಿಷೇಕ್‌ ಶರ್ಮಾ ಎಷ್ಟು ಸಿಕ್ಸ್‌?
    ಯುಎಇ – 3
    ಪಾಕಿಸ್ತಾನ – 2
    ಒಮನ್‌ – 2
    ಪಾಕಿಸ್ತಾನ – 5
    ಬಾಂಗ್ಲಾದೇಶ – 5

  • ಪಂದ್ಯಶ್ರೇಷ್ಠ ಗೆದ್ದು ಐಪಿಎಲ್‌ನಲ್ಲಿ ದಾಖಲೆ ಬರೆದ ಕೃನಾಲ್‌!

    ಪಂದ್ಯಶ್ರೇಷ್ಠ ಗೆದ್ದು ಐಪಿಎಲ್‌ನಲ್ಲಿ ದಾಖಲೆ ಬರೆದ ಕೃನಾಲ್‌!

    ಅಹಮದಾಬಾದ್‌: ಆರ್‌ಸಿಬಿ ಆಲ್‌ರೌಂಡರ್‌ ಕೃನಾಲ್‌ ಪಾಂಡ್ಯ (Krunal Pandya) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಐಪಿಎಲ್‌ನಲ್ಲಿ (IPL) ವಿಶೇಷ ದಾಖಲೆ (Record) ಬರೆದಿದ್ದಾರೆ.

    ಎರಡು ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಕೃನಾಲ್‌ ಪಾತ್ರವಾಗಿದ್ದಾರೆ. 2017ರಲ್ಲಿ ಪುಣೆ ಸೂಪರ್‌ ಜೈಂಟ್ಸ್‌ ವಿರುದ್ಧ ಮುಂಬೈ ತಂಡ ಫೈನಲ್‌ನಲ್ಲಿ ಗೆದ್ದಾಗಲೂ ಕೃನಾಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರವಾಗಿದ್ದರು.

    ಮೊದಲು ಬ್ಯಾಟ್‌ ಮಾಡಿದ್ದ ಮುಂಬೈ 8 ವಿಕೆಟ್‌ ನಷ್ಟಕ್ಕೆ 129 ರನ್‌ ಹೊಡೆದಿತ್ತು. ಈ ಪಂದ್ಯದಲ್ಲಿ ಕೃನಾಲ್‌ 47 ರನ್‌(38 ಎಸೆತ, 3 ಬೌಂಡರಿ, 2 ಸಿಕ್ಸ್‌) ಹೊಡೆದಿದ್ದರು. ಈ ಪಂದ್ಯವನ್ನು ಮುಂಬೈ ರೋಚಕ 1 ರನ್‌ಗಳಿಂದ ಗೆದ್ದುಕೊಂಡಿತ್ತು.

    ಪಂದ್ಯವನ್ನು ತಿರುಗಿಸಿದ್ದ ಕೃನಾಲ್‌:
    ಫೈನಲ್‌ ಪಂದ್ಯ ಪಂಜಾಬ್‌ ಕಡೆ ವಾಲಿತ್ತು. ಆದರೆ 7ನೇ ಓವರ್‌ನಿಂದ ಕೃನಾಲ್‌ ಪಾಂಡ್ಯ ಕೈಚಳಕದಿಂದಾಗಿ ಪಂದ್ಯ ಆರ್‌ಸಿಬಿ (RCB) ಕಡೆ ವಾಲಿತ್ತು. ಅಂತಿಮವಾಗಿ 4 ಓವರ್‌ನಲ್ಲಿ ಕೇವಲ 17 ರನ್‌, 2 ವಿಕೆಟ್‌ ಪಡೆಯುವ ಮೂಲಕ ಪಂಜಾಬ್‌ ರನ್‌ ವೇಗಕ್ಕೆ ಕಡಿವಾಣ ಹಾಕಿದ್ದರು.

    ಪಂಜಾಬ್‌ 6 ಓವರ್‌ ಅಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 52 ರನ್‌ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು.  ಈ ಹಂತದಲ್ಲಿ ರಜತ್‌ ಪಾಟಿದಾರ್‌ ಕೃನಾಲ್‌ ಪಾಂಡ್ಯ (Krunal Pandya) ಕೈಗೆ ಚೆಂಡು ನೀಡಿದರು. ಕೃನಾಲ್‌ ತಮ್ಮ ಮೊದಲ ಓವರ್‌ನಲ್ಲಿ 3 ರನ್‌ ನೀಡಿ ರನ್‌ಗೆ ಕಡಿವಾಣ ಹಾಕಿದರು. ತಮ್ಮ ಎರಡನೇ ಓವರ್‌ನಲ್ಲಿ ಪ್ರಭುಸಿಮ್ರಾನ್‌ ಸಿಂಗ್‌ ಅವರನ್ನು ಔಟ್‌ ಮಾಡಿದರು. ಈ ಓವರ್‌ನಲ್ಲಿ ಕೇವಲ 4 ರನ್‌ ಮಾತ್ರ ನೀಡಿದರು.

    ತಮ್ಮ ಮೂರನೇ ಓವರ್‌ನಲ್ಲಿ 11 ರನ್‌ ನೀಡಿದ ಕೃನಾಲ್‌ ತಮ್ಮ ಕೊನೆಯ ಓವರ್‌ನಲ್ಲಿ ಜೋಶ್‌ ಇಂಗ್ಲಿಸ್‌ ಅವರನ್ನು ಔಟ್‌ ಮಾಡಿದರು. ಸಿಕ್ಸ್‌ ಹೊಡೆಯಲು ಹೋದ ಇಂಗ್ಲಿಸ್‌ ಅವರ ಕ್ಯಾಚನ್ನು ಬೌಂಡರಿ ಬಳಿ ಲಿವಿಂಗ್‌ಸ್ಟೋನ್ ಹಿಡಿದರು. ಇಲ್ಲಿಂದ ಪಂದ್ಯದ ದಿಕ್ಕೇ ಬದಲಾಯಿತು.

    4 ಓವರ್‌ನಲ್ಲಿ ರನ್‌ ನಿಯಂತ್ರಣ ಮಾಡಿದ್ದು ಅಲ್ಲದೇ 2 ವಿಕೆಟ್‌ ತೆಗೆಯುವ ಮೂಲಕ ಕೃನಾಲ್‌ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಂತರ ಪಂಜಾಬ್‌ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿ ಕೊನೆಗೆ ಸೋಲನ್ನು ಒಪ್ಪಿಕೊಂಡಿತು.

    ಹಾಗೆ ನೋಡಿದ್ರೆ 4 ಓವರ್‌ ಎಸೆದ ಭುವನೇಶ್ವರ್‌ ಕುಮಾರ್‌ 38 ರನ್‌ ನೀಡಿದ್ರೆ ಹೆಜಲ್‌ವುಡ್‌ 54 ರನ್‌ ನೀಡಿ ದುಬಾರಿಯಾಗಿದ್ದರು. ಸುಯಾಶ್‌ ಶರ್ಮಾ 2 ಓವರ್‌ ಎಸೆದಿದ್ದರೂ 19 ರನ್‌ ನೀಡಿದ್ದರು. ರೋಮಾರಿಯೋ ಶೆಪರ್ಡ್‌ 3 ಓವರ್‌ ಎಸೆದು 30 ರನ್‌ ಕೊಟ್ಟಿದ್ದರು.

  • ಬೆಂಗಳೂರು| 100 ವರ್ಷಗಳ ದಾಖಲೆ ಮುರಿದ ಮೇ ತಿಂಗಳ ಮಳೆ!

    ಬೆಂಗಳೂರು| 100 ವರ್ಷಗಳ ದಾಖಲೆ ಮುರಿದ ಮೇ ತಿಂಗಳ ಮಳೆ!

    ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ಮೇ ತಿಂಗಳಿನಲ್ಲಿ (May Month) ದಾಖಲೆಯ ಮಳೆಯಾಗಿದೆ. ನೂರು ವರ್ಷದಲ್ಲೇ ಬೆಂಗಳೂರಲ್ಲಿ (Record) ಈ ಬಾರಿ ಬಿದ್ದ ಮಳೆ ದಾಖಲೆ ಸೃಷ್ಟಿಸಿದೆ ಎಂದು ಹವಾಮಾನ ಇಲಾಖೆ (IMD) ವಿಜ್ಞಾನಿ ಸಿಎಸ್ ಪಾಟೀಲ್ ತಿಳಿಸಿದ್ದಾರೆ.

    ಬೆಂಗಳೂರಲ್ಲಿ ಮೇ ತಿಂಗಳಲ್ಲೇ 307.9 ಮಿಮೀ ಮಳೆ ದಾಖಲೆಯಾಗಿದೆ. ಅದೂ ಮೇ 1 ರಿಂದ ಮೇ 26 ರವರೆಗೆ ಈ‌ ಪ್ರಮಾಣದಲ್ಲಿ ಮಳೆಯಾಗಿದೆ. 2023 ಮೇ ತಿಂಗಳಲ್ಲಿ 305.4 ಮಿಮೀ ಮಳೆ ದಾಖಲಾಗಿತ್ತು. ಇದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಈ ದಾಖಲೆಯನ್ನು ಈ ಬಾರಿಯ ಮಳೆ ಮುರಿದಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಕೇರಳ | ಮುಳುಗಿದ ಕಾರ್ಗೋ ಶಿಪ್‌ – ಅಲೆಯ ಅಬ್ಬರಕ್ಕೆ ತೇಲಿಬಂದ ಕಂಟೇನರ್‌; ಮುಟ್ಟದಂತೆ ಜನರಿಗೆ ಸೂಚನೆ

     

    ಜೂನ್ 5 ಕ್ಕೆ ಮುಂಗಾರು ಆಗಮನದ ನಿರೀಕ್ಷೆ ಇತ್ತು. ಆದರೆ ಮೇ 24ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ. ಇಂದು ಸಂಪೂರ್ಣ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ. 2009 ರಲ್ಲಿ ಮೇ 23ಕ್ಕೆ ಕೇರಳ ಪ್ರವೇಶಿಸಿದ್ದ ಮುಂಗಾರು ಈ ಬಾರಿ ಮೇ 24ರಂದೇ ಪ್ರವೇಶ ಮಾಡಿದೆ‌. ಈ ಬಾರಿ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡು ಹಾಗೂ ಕರಾವಳಿಯಲ್ಲೂ ವಾಡಿಕೆಗಿಂತ ಹೆಚ್ಚು ಮಳೆ ಸಾಧ್ಯತೆ ಇದೆ ಅವರು ಮಾಹಿತಿ ನೀಡಿದರು.  ಇದನ್ನೂ ಓದಿ: ರಾಜ್ಯದ 6 ಜಿಲ್ಲೆಗಳಿಗೆ 5 ದಿನ ರೆಡ್‌ ಅಲರ್ಟ್‌, ಎಲ್ಲಿ ಅತಿಹೆಚ್ಚು ಮಳೆ?

    ಬೆಂಗಳೂರಲ್ಲಿ ಇನ್ನೂ ಒಂದು ವಾರ ಸಾಧಾರಣ ಮಳೆ ಮುಂದುವರಿಯಲಿದೆ. ಗಾಳಿ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಅವರು ಹೇಳಿದರು.

  • ಭಾರತ-ಬಾಂಗ್ಲಾ ಟೆಸ್ಟ್ ಸರಣಿ: 5 ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸ್ತಾರಾ ಅಶ್ವಿನ್?

    ಭಾರತ-ಬಾಂಗ್ಲಾ ಟೆಸ್ಟ್ ಸರಣಿ: 5 ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸ್ತಾರಾ ಅಶ್ವಿನ್?

    ಚೆನ್ನೈ: ಸೆ.19ರಂದು ಪ್ರಾರಂಭವಾಗಲಿರುವ ಬಾಂಗ್ಲಾ-ಭಾರತ ನಡುವಿನ ಟೆಸ್ಟ್ ಚಾಂಪಿಯನ್‌ಶಿಪ್‌ನ (Test Championship) ಎರಡು ಪಂದ್ಯಗಳಲ್ಲಿ ಅದೃಷ್ಟ ಇದ್ದರೆ ವಿಶ್ವದ ನಂ.1 ಟೆಸ್ಟ್ ಬೌಲರ್ ಆರ್.ಅಶ್ವಿನ್ (R.Ashwin) 5 ದಾಖಲೆ ನಿರ್ಮಿಸಬಹುದು.

    ಮೊದಲ ಪಂದ್ಯ ಅಶ್ವಿನ್ ತವರೂರಾದ ಚೆನ್ನೈನ ಎಮ್‌ಎ ಚಿದಂಬರಂ ಕ್ರೀಡಾಂಗಣದಲ್ಲಿ (MA Chidambaram Stadium) ನಡೆಯಲಿದ್ದರೆ, ಎರಡನೇ ಪಂದ್ಯ ಸೆ.27ರಂದು ಉತ್ತರಪ್ರದೇಶದ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ (Green Park Stadium) ನಡೆಯಲಿದೆ.

    ಸೆ.17ರಂದು ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿರುವ ಅಶ್ವಿನ್, ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಪಂದ್ಯದಲ್ಲಿ ಅಶ್ವಿನ್ ಅತೀ ಹೆಚ್ಚು ವಿಕೆಟ್ ಪಡೆದುಕೊಂಡಿದ್ದರು.ಇದನ್ನೂ ಓದಿ: Fifth And Final Call | ಮಾತುಕತೆಗಾಗಿ ಪ್ರತಿಭಟನಾನಿರತ ವೈದ್ಯರಿಗೆ ಅಂತಿಮ ಆಹ್ವಾನ ಕೊಟ್ಟ ದೀದಿ

    ಆ ಐದು ದಾಖಲೆಗಳೇನು?
    1. ಡಬ್ಲ್ಯೂಟಿಸಿಯಲ್ಲಿ ಅತೀ ಹೆಚ್ಚು ವಿಕೆಟ್:
    ಸದ್ಯ ಅಶ್ವಿನ್ ತಮ್ಮ ಹೆಸರಲ್ಲಿ 174 ವಿಕೆಟ್‌ಗಳನ್ನು ಹೊಂದಿದ್ದಾರೆ. ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ನಥಾನ್ ಲಿಯಾನ್‌ರವರ (Nathan Lyon) ಹೆಸರಿನಲ್ಲಿ 187 ವಿಕೆಟ್‌ಗಳಿವೆ. ಅಶ್ವಿನ್ 14 ವಿಕೆಟ್‌ಗಳನ್ನು ಈ ಎರಡು ಪಂದ್ಯಗಳಲ್ಲಿ ಪಡೆದರೆ ಡಬ್ಲ್ಯೂಟಿಸಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಳ್ಳಲಿದ್ದಾರೆ.

    2. 2023-25ರವರೆಗೆ ನಡೆಯಲಿರುವ ಡಬ್ಲ್ಯೂಟಿಸಿಯಲ್ಲಿ ಅತೀ ಹೆಚ್ಚು ವಿಕೆಟ್
    ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ (Josh Hazlewood) 51 ವಿಕೆಟ್‌ಗಳನ್ನು ಪಡೆದಿದ್ದು ಅಶ್ವಿನ್ 42 ವಿಕೆಟ್‌ಗಳನ್ನು ಹೊಂದಿದ್ದಾರೆ. ಈ ಎರಡು ಪಂದ್ಯದಲ್ಲಿ 10 ವಿಕೆಟ್ ತಮ್ಮದಾಗಿಸಿಕೊಂಡರೆ ಅಗ್ರ ಸ್ಥಾನಕ್ಕೇರಲಿದ್ದಾರೆ.

    3. ಅತಿಹೆಚ್ಚು ಬಾರಿ 5 ವಿಕೆಟ್ ದಾಖಲೆಗೆ ಒಂದೇ ಹೆಜ್ಜೆ:
    ಅಶ್ವಿನ್ ಈವರೆಗೆ ಆಡಿರುವ 34 ಪಂದ್ಯಗಳಲ್ಲಿ 10 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅಲ್ಲದೇ ಆಸೀಸ್ ಕ್ರಿಕೆಟಿಗ ನಥಾನ್ ಲಿಯಾನ್ ಸಹ ಇದೇ ಸಾಧನೆ ಮಾಡಿದ್ದು, ಜಂಟಿಯಾಗಿ ಇಬ್ಬರೂ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಸದ್ಯ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ 2 ಟೆಸ್ಟ್ ಪಂದ್ಯಗಳ ಪೈಕಿ ಕನಿಷ್ಠ 1 ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದರೆ, ಅತಿಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದ ಆಟಗಾರನಾಗಿ ಹೊರಹೊಮ್ಮಲಿದ್ದಾರೆ.

    4.ಭಾರತ-ಬಾಂಗ್ಲಾ ನಡುವೆ ಅತಿ ಹೆಚ್ಚು ವಿಕೆಟ್:
    ಇಲ್ಲಿಯವರೆಗೂ ಬಾಂಗ್ಲಾ ವಿರುದ್ಧದ 6 ವಿಶ್ಚ ಟೆಸ್ಟ್ ಸರಣಿಯಲ್ಲಿ ಒಟ್ಟು 23 ವಿಕೆಟ್‌ಗಳನ್ನು ಪಡೆದಿರುವ ಅಶ್ವಿನ್, 31 ವಿಕೆಟ್ ಪಡೆದಿರುವ ಜಹೀರ್ ಖಾನ್ ಅವರ ದಾಖಲೆ ಮುರಿಯಲು 9 ವಿಕೆಟ್‌ಗಳ ಅಗತ್ಯವಿದೆ.ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ – ಓರ್ವ ಸಾವು, ಮತ್ತೊಬ್ಬ ಗಂಭೀರ

    5. ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಆಟಗಾರ:
    126 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇಲ್ಲಿಯವಗೂ ಅಶ್ವಿನ್ ಒಟ್ಟು 455 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 476 ವಿಕೆಟ್ ಗಳಿಸುವ ಮೂಲಕ ಅಗ್ರ ಸ್ಥಾನದಲ್ಲಿರುವ ಅನಿಲ್ ಕುಂಬ್ಳೆ (Anil Kumble) ಅವರ ದಾಖಲೆ ಮುರಿಯಲು ಅಶ್ವಿನ್ 22 ವಿಕೆಟ್ ಅಗತ್ಯವಿದೆ.

  • ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ – ದಾಖಲೆ ಬರೆದ ಕೊಹ್ಲಿ

    ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ – ದಾಖಲೆ ಬರೆದ ಕೊಹ್ಲಿ

    ಅಹಮದಾಬಾದ್‌: ವಿರಾಟ್‌ ಕೊಹ್ಲಿ (Virat Kohli) ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿ 8000 ರನ್‌ ಹೊಡೆದ ಏಕೈಕ ಬ್ಯಾಟರ್‌ ಎಂಬ ದಾಖಲೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

    ಒಟ್ಟು 252 ಪಂದ್ಯಗಳಿಂದ ಈ ಸಾಧನೆ ನಿರ್ಮಾಣವಾಗಿದೆ. ಐಪಿಎಲ್‌ (IPL) ಒಟ್ಟು 8 ಶತಕ ಮತ್ತು 55 ಅರ್ಧಶತಕವನ್ನು ಕೊಹ್ಲಿ ಸಿಡಿಸಿದ್ದಾರೆ.

    ಈ ವರ್ಷದ ಐಪಿಎಲ್‌ಲ್ಲಿ 15 ಪಂದ್ಯಗಳ 15 ಇನ್ನಿಂಗ್ಸ್‌ನಿಂದ ಕೊಹ್ಲಿ 741 ರನ್‌ ಹೊಡೆದಿದ್ದಾರೆ. 1 ಶತಕ, 5 ಅರ್ಧ ಶತಕ ಸಿಡಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್‌ ಹೊಡೆದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಆರೆಂಜ್‌ ಕ್ಯಾಪ್‌ ಧರಿಸಿದ್ದಾರೆ.


    ಪಂಜಾಬ್‌ ಕಿಂಗ್ಸ್‌ನ ನಾಯಕ ಶಿಖರ್‌ ಧವನ್‌ (Shikar Dhawan) ಅತಿ ಹೆಚ್ಚು ರನ್‌ ಹೊಡೆದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಶಿಖರ್‌ ಧವನ್‌ 222 ಪಂದ್ಯಗಳಿಂದ 6,769 ರನ್‌ ಹೊಡೆದಿದ್ದಾರೆ. ರೋಹಿತ್‌ ಶರ್ಮಾ (Rohit Sharma) 257 ಪಂದ್ಯಗಳಿಂದ 6,628 ರನ್‌ ಸಿಡಿಸಿದ್ದಾರೆ.

    ರಾಜಸ್ಥಾನ ವಿರುದ್ಧ ಇಂದು ನಡೆಯುತ್ತಿರುವ ಎಲಿಮಿನೇಟರ್‌ ಪಂದ್ಯದಲ್ಲಿ ಕೊಹ್ಲಿ 33 ರನ್‌(24 ಎಸೆತ, 3 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಸಿಕ್ಸ್‌ ಸಿಡಿಸಲು ಹೋಗಿ ಕ್ಯಾಚ್‌ ನೀಡಿ ವಿಕೆಟ್‌ ಒಪ್ಪಿಸಿದರು.

  • ಸಿಕ್ಸರ್‌, ಬೌಂಡರಿಗಳ ಆಟದಲ್ಲಿ ಗೆದ್ದ ಹೈದರಾಬಾದ್‌ – ಹೋರಾಡಿ ಸೋತ ಮುಂಬೈ

    ಸಿಕ್ಸರ್‌, ಬೌಂಡರಿಗಳ ಆಟದಲ್ಲಿ ಗೆದ್ದ ಹೈದರಾಬಾದ್‌ – ಹೋರಾಡಿ ಸೋತ ಮುಂಬೈ

    ಹೈದರಾಬಾದ್‌: ಸಿಕ್ಸರ್‌ ಬೌಂಡರಿಗಳ ಆಟದಲ್ಲಿ ಸನ್‌ರೈಸರ್ಸ್‌ ಹೈದಾಬಾದ್‌ (Sunrisers Hyderabad) ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ 31 ರನ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 278 ರನ್‌ಗಳ ಕಠಿಣ ಗುರಿಯನ್ನು ಪಡೆದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 246 ರನ್‌ ಹೊಡೆದು ಸತತ ಎರಡನೇ ಸೋಲನ್ನು ಅನುಭವಿಸಿತು. ಎರಡು ತಂಡಗಳು ಮೊತ್ತ 500 ರನ್‌ಗಳ ಗಡಿಯನ್ನು ದಾಟಿದ್ದು ವಿಶೇಷ.

    ಮೂರು ದಾಖಲೆ ಸೃಷ್ಟಿ: ಒಟ್ಟು 523 ರನ್‌ ಸಿಡಿದಿದ್ದು ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲು. ಇಂದಿನ ಪಂದ್ಯದಲ್ಲಿ 31 ಬೌಂಡರಿ, 38 ಸಿಕ್ಸ್‌ ಸಿಡಿಯಲ್ಪಟ್ಟಿದೆ. ಐಪಿಎಲ್‌ನಲ್ಲಿ ಇಷ್ಟು ಬೌಂಡರಿ, ಸಿಕ್ಸ್‌ ಚಚ್ಚುವ ಮೂಲಕ ಮತ್ತೊಂದು ದಾಖಲೆ ಬರೆಯಲಾಗಿದೆ.

    ಇಂದಿನ ಪಂದ್ಯದಲ್ಲಿ ಹೈದರಾಬಾದ್‌ 277 ರನ್‌ ಹೊಡೆಯುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ತಂಡ ಎಂಬ ಹೆಗ್ಗಳಿಕೆಗೆ ಹೈದರಾಬಾದ್‌ ಪಾತ್ರವಾಯಿತು. ಈ ಹಿಂದೆ ಅತಿ ಹೆಚ್ಚು ರನ್‌ ಸಿಡಿಸಿದ ದಾಖಲೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಹೆಸರಿನಲ್ಲಿ ಇತ್ತು. 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ 5 ವಿಕೆಟ್‌ ನಷ್ಟಕ್ಕೆ 263 ರನ್‌ ಹೊಡೆದಿತ್ತು. ಈ ಪಂದ್ಯದಲ್ಲಿ ಕ್ರಿಸ್‌ ಗೇಲ್‌ ಔಟಾಗದೇ 175 ರನ್‌ ಚಚ್ಚಿದ್ದರು.

    ಭಾರೀ ದೊಡ್ಡ ಮೊತ್ತವಿದ್ದ ಹಿನ್ನೆಲೆಯಲ್ಲಿ ಆರಂಭದಲ್ಲೇ ರೋಹಿತ್‌ ಶರ್ಮಾ (Rohit Sharma) ಮತ್ತು ಇಶನ್‌ ಕಿಶನ್‌ (Ishan Kishan) ಅಬ್ಬರಿಸಲು ಆರಂಭಿಸಿದರು. ಇಬ್ಬರು 20 ಎಸೆತಗಳಲ್ಲಿ 56 ರನ್‌ ಚಚ್ಚಿದರು.

    ಈಶನ್‌ ಕಿಶನ್‌ 34 ರನ್‌(13 ಎಸೆತ, 2 ಬೌಂಡರಿ, 4 ಸಿಕ್ಸರ್‌) ಹೊಡೆದು ಔಟಾದರೆ ರೋಹಿತ್‌ ಶರ್ಮಾ 26 ರನ್‌ (12 ಎಸೆತ, 1 ಬೌಂಡರಿ, 3 ಸಿಕ್ಸರ್‌) ಹೊಡೆದು ಔಟಾದರು. ನಂತರ ನಮನ್‌ ಧೀರ್‌ 30 ರನ್‌(14 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆದು ಕ್ಯಾಚ್‌ ನೀಡಿದರು.

    ವಿಕೆಟ್‌ ಉರುಳಿದರೂ ಗೆಲ್ಲಲೇಬೇಕೆಂದು ಕ್ರೀಸ್‌ಗೆ ಇಳಿದ ತಿಲಕ್‌ ವರ್ಮಾ ಹೈದರಾಬಾದ್‌ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು. 24 ಎಸೆತಗಳಲ್ಲಿ ಅರ್ಧಶತಕ ಹೊಡೆದ ವರ್ಮಾ 64 ರನ್‌ (34 ಎಸೆತ, 2 ಬೌಂಡರಿ, 6 ಸಿಕ್ಸರ್‌) ಗಳಿಸಿದ್ದಾಗ ಸಿಕ್ಸ್‌ ಸಿಡಿಸಲು ಹೋಗಿ ಕ್ಯಾಚ್‌ ನೀಡಿ ಔಟಾದರು. ಹಾರ್ದಿಕ್‌ ಪಾಂಡ್ಯ 24 ರನ್‌ ಹೊಡೆದರು ಔಟಾದರೆ ಡಿಮ್‌ ಡೇವಿಡ್‌ ಔಟಾಗದೇ 42 ರನ್‌ (22 ಎಸೆತ, 2 ಬೌಂಡರಿ, 3 ಸಿಕ್ಸರ್‌) ಹೊಡೆದರು. ಇದನ್ನೂ ಓದಿ: ಆರ್‌ಸಿಬಿ ದಾಖಲೆ ಉಡೀಸ್‌ – ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೈದರಾಬಾದ್‌

    ನಾಯಕ ಪ್ಯಾಟ್‌ ಕಮ್ಮಿನ್ಸ್‌ 4 ಓವರ್‌ ಎಸೆದು 35 ರನ್‌ ನೀಡಿ ರೋಹಿತ್‌ ಶರ್ಮಾ ಮತ್ತು ತಿಕಲ್‌ ವರ್ಮಾ ವಿಕೆಟ್‌ ಪಡೆದು ಹೈದರಾಬಾದ್‌ಗೆ ಮಹತ್ವದ ಮುನ್ನಡೆ ತಂದುಕೊಟ್ಟರು.

    ಮುಂಬೈ ರನ್‌ ಏರಿದ್ದು ಹೇಗೆ?
    50 ರನ್‌ – 18 ಎಸೆತ
    100 ರನ್‌ – 45 ಎಸೆತ
    150 ರನ್‌ – 63 ಎಸೆತ
    200 ರನ್‌ – 101 ಎಸೆತ
    246 ರನ್‌ – 120 ಎಸೆತ

  • ಆರ್‌ಸಿಬಿ ದಾಖಲೆ ಉಡೀಸ್‌ – ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೈದರಾಬಾದ್‌

    ಆರ್‌ಸಿಬಿ ದಾಖಲೆ ಉಡೀಸ್‌ – ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೈದರಾಬಾದ್‌

    ಹೈದರಾಬಾದ್‌: ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ಬ್ಯಾಟರ್‌ಗಳರು ಸಿಕ್ಸರ್‌, ಬೌಂಡರಿಗಳನ್ನು ಸಿಡಿಸಿದ ಪರಿಣಾಮ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ಐಪಿಎಲ್‌ನಲ್ಲಿ (IPL) ಹೊಸ ದಾಖಲೆ ಬರೆದಿದೆ.

    ಮೂರು ವಿಕೆಟ್‌ ನಷ್ಟಕ್ಕೆ 277 ರನ್‌ ಹೊಡೆಯುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ತಂಡ ಎಂಬ ಹೆಗ್ಗಳಿಕೆಗೆ ಎಸ್‌ಆರ್‌ಹೆಚ್‌ (SRH) ಪಾತ್ರವಾಯಿತು.

    ಈ ಹಿಂದೆ ಅತಿ ಹೆಚ್ಚು ರನ್‌ ಸಿಡಿಸಿದ ದಾಖಲೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಹೆಸರಿನಲ್ಲಿ ಇತ್ತು.  2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ 5 ವಿಕೆಟ್‌ ನಷ್ಟಕ್ಕೆ 263 ರನ್‌ ಹೊಡೆದಿತ್ತು. ಈ ಪಂದ್ಯದಲ್ಲಿ ಕ್ರಿಸ್‌ ಗೇಲ್‌ ಔಟಾಗದೇ 175 ರನ್‌ ಚಚ್ಚಿದ್ದರು.

    ಟಾಸ್‌ ಸೋತು ಬ್ಯಾಟ್‌ ಮಾಡಿದ ಹೈದರಾಬಾದ್‌ ಬ್ಯಾಟರ್‌ಗಳು ಆರಂಭದಿಂದಲೇ ಚಚ್ಚಲು ಆರಂಭಿಸಿದರು. ಮೊದಲ ವಿಕೆಟಿಗೆ 4.1 ಓವರ್‌ಗಳಲ್ಲಿ 45 ರನ್‌ ಬಂದಿತ್ತು. ಎರಡನೇ ವಿಕೆಟಿಗೆ ಟ್ರಾವಿಸ್‌ ಹೆಡ್‌ ಮತ್ತು ಅಭಿಷೇಕ್‌ ಶರ್ಮಾ 23 ಎಸೆತಗಳಲ್ಲಿ 68 ರನ್‌ ಹೊಡೆದರು. ಟ್ರಾವಿಸ್‌ ಹೆಡ್‌ 62 (24 ಎಸೆತ, 9 ಬೌಂಡರಿ, 3 ಸಿಕ್ಸರ್‌) ಹೊಡೆದು ಔಟಾದರು.  ಇದನ್ನೂ ಓದಿ: 42ನೇ ವಯಸ್ಸಿನಲ್ಲೂ ಎಷ್ಟೊಂದು ಉತ್ಸಾಹ – ಚಿರತೆಯಂತೆ ನೆಗೆದು ಕ್ಯಾಚ್‌ ಹಿಡಿದ ಮಹಿ; ವೀಡಿಯೋ ವೈರಲ್‌

    ಅಭಿಷೇಕ್‌ ಶರ್ಮಾ ಮತ್ತು ಮಾರ್ಕ್ರಾಮ್ 19 ಎಸೆತಗಳಲ್ಲಿ 48 ರನ್‌ ಜೊತೆಯಾಟವಾಡಿದರು. ಅಭಿಷೇಕ್‌ ಶರ್ಮಾ 63 ರನ್‌ (23 ಎಸೆತ, 3 ಬೌಂಡರಿ, 7 ಸಿಕ್ಸರ್‌) ಹೊಡೆದು ವಿಕೆಟ್‌ ಒಪ್ಪಿಸಿದರು.

    ಶತಕದ ಜೊತೆಯಾಟ:
    ಮಾರ್ಕ್ರಾಮ್ ಮತ್ತು ಹೆನ್ರಿಕ್‌ ಕ್ಲಾಸನ್‌ () ಮುಂಬೈ ಬೌಲರ್‌ಗಳನ್ನು ಅಕ್ಷರಶ: ಚೆಂಡಾಡಿದರು. ಸಿಕ್ಸ್‌, ಬೌಂಡರಿ ಹೊಡೆದು ಬೆವರಿಳಿಸಿದರು. ಇಬ್ಬರು ಮುರಿಯದ ನಾಲ್ಕನೇ ವಿಕೆಟಿಗೆ 55 ಎಸೆತಗಳಲ್ಲಿ 116 ರನ್‌ ಹೊಡೆದು ತಂಡದ ಮೊತ್ತವನ್ನು 270 ರನ್‌ಗಳ ಗಡಿಯನ್ನು ದಾಟಿಸಿದರು. ಕ್ಲಾಸನ್‌ ಔಟಾಗದೇ 80 ರನ್‌ ( 34 ಎಸೆತ, 4 ಬೌಂಡರಿ, 7 ಸಿಕ್ಸರ್‌), ಮಾರ್ಕ್ರಾಮ್ ಔಟಾಗದೇ 42 ರನ್‌ ( 28 ಎಸೆತ, 2 ಬೌಂಡರಿ, 1 ಸಿಕ್ಸರ್)‌ ಹೊಡೆದರು.

     

    ಸ್ಫೋಟಕ ಅರ್ಧಶತಕ:
    ಟ್ರಾವಿಸ್‌ ಹೆಡ್‌ – 18 ಎಸೆತ, 9 ಬೌಂಡರಿ, 2 ಸಿಕ್ಸರ್‌
    ಅಭಿಷೇಕ್‌ ಶರ್ಮಾ – 16 ಎಸೆತ, 2 ಬೌಂಡರಿ, 6 ಸಿಕ್ಸರ್‌
    ಹೆನ್ರಿಕ್‌ ಕ್ಲಾಸನ್‌ – 23 ಎಸೆತ,1 ಬೌಂಡರಿ, 5 ಸಿಕ್ಸರ್‌

    ರನ್‌ ಏರಿದ್ದು ಹೇಗೆ?
    50 ರನ್‌ – 28 ಎಸೆತ
    100 ರನ್‌ – 43 ಎಸೆತ
    150 ರನ್‌ – 63 ಎಸೆತ
    200 ರನ್‌ – 90 ಎಸೆತ
    250 ರನ್‌ – 114 ಎಸೆತ
    277 ರನ್‌ – 120 ಎಸೆತ

  • ಬಿಜೆಪಿಗೆ ಭರ್ಜರಿ ಜಯ, ಹೂಡಿಕೆದಾರರ ಸಂಪತ್ತು ಒಂದೇ ದಿನ 6 ಲಕ್ಷ ಕೋಟಿ ಹೆಚ್ಚಳ – ದಾಖಲೆ ಬರೆದ ಸೆನ್ಸೆಕ್ಸ್‌

    ಬಿಜೆಪಿಗೆ ಭರ್ಜರಿ ಜಯ, ಹೂಡಿಕೆದಾರರ ಸಂಪತ್ತು ಒಂದೇ ದಿನ 6 ಲಕ್ಷ ಕೋಟಿ ಹೆಚ್ಚಳ – ದಾಖಲೆ ಬರೆದ ಸೆನ್ಸೆಕ್ಸ್‌

    ಮುಂಬೈ: ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಬೆನ್ನಲ್ಲೇ ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ (Sensex) ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಬರೆದಿದೆ.

    ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದ ಪರಿಣಾಮ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty)ಭರ್ಜರಿ ಏರಿಕೆ ಕಂಡಿದೆ. ಹೂಡಿಕೆದಾರರ ಸಂಪತ್ತು ಒಂದೇ ದಿನ 6 ಲಕ್ಷ ಕೋಟಿ ರೂ. ಹೆಚ್ಚಳವಾಗಿದೆ.

    ಶುಕ್ರವಾರ 67,481.19 ಅಂಕಗಳಿಗೆ ಸೆನ್ಸೆಕ್ಸ್‌ ಕೊನೆಯಾಗಿತ್ತು. ಇಂದು ಒಂದೇ ದಿನ 1,383.93 ಅಂಕ ಏರಿಕೆಯಾಗಿ ಅಂತಿಮವಾಗಿ 68,865.12 ಅಂಕಗಳಿಗೆ ದಿನದ ವಹಿವಾಟು ಮುಗಿಸಿತು. ಒಂದು ಹಂತದಲ್ಲಿ ಸೆನ್ಸೆಕ್ಸ್‌ 68,918 ಅಂಕಗಳಿಗೆ ಏರಿತ್ತು.  ಇದನ್ನೂ ಓದಿ: ದಯವಿಟ್ಟು ಸೋಲಿನ ಹತಾಶೆ ಹೊರಹಾಕಬೇಡಿ – ಸಂಸತ್‌ ಅಧಿವೇಶನಕ್ಕೂ ಮುನ್ನ ವಿಪಕ್ಷಗಳಿಗೆ ಮೋದಿ ಸಲಹೆ

    ನಿಫ್ಟಿ ಶುಕ್ರವಾರ 20,267.90 ಅಂಕಗಳಿಗೆ ಕೊನೆಯಾಗಿತ್ತು. ಇಂದು 418.90 ಅಂಕ ಏರಿಕೆಯಾಗಿ 20,686.80 ಅಂಕಗಳಿಗೆ ದಿನದ ವಹಿವಾಟು ಮುಗಿಸಿತು. ಒಂದು ಹಂತದಲ್ಲಿ ನಿಫ್ಟಿ 20,702 ಅಂಕಗಳಿಗೆ ಏರಿಕೆಯಾಗಿತ್ತು.

    ಯಾವುದು ಎಷ್ಟು ಏರಿಕೆ?
    ಐಷರ್‌ ಮೋಟಾರ್ಸ್‌ (299.16 ರೂ.), ಅದಾನಿ ಎಂಟರ್‌ಪ್ರೈಸ್‌ (2,531.20 ರೂ.), ಅದಾನಿ ಪೋರ್ಟ್ಸ್‌ ಎಸ್‌ಇಝಡ್‌ (878.65 ರೂ.) ಬಿಪಿಸಿಎಲ್‌ (461.50) ಐಸಿಐಸಿಐ ಬ್ಯಾಂಕ್‌ (991.20), ಎಸ್‌ಬಿಐ (594.70), ಕೋಟಕ್‌ ಬ್ಯಾಕ್‌ (1,818.55) ಷೇರುಗಳ ಬೆಲೆ ಏರಿಕೆ ಕಂಡಿವೆ.

    ಏರಿಕೆಗೆ ಕಾರಣ ಏನು?
    ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ್ದು ಹೂಡಿಕೆದಾರರಿಗೆ ಉತ್ಸಾಹ ಹೆಚ್ಚಿಸಿದೆ. ಈ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ಹಣವನ್ನು ಹೂಡಿಕೆ ಮಾಡಿದ್ದಾರೆ.

    ಜುಲೈ- ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ(Indian Economy) ನಿರೀಕ್ಷೆಗೂ ಮೀರಿ ವೃದ್ಧಿಯಾಗಿದೆ. ಈ ಅವಧಿಯಲ್ಲಿ ಹಲವು ಸಂಸ್ಥೆಗಳು ಜಿಡಿಪಿ (GDP) 6.8% ರಷ್ಟು ಪ್ರಗತಿ ಸಾಧಿಸಬಹುದು ಎಂದು ಅಂದಾಜು ಮಾಡಿತ್ತು. ಆರ್‌ಬಿಐ (RBI) 6.5% ಅಭಿವೃದ್ಧಿ ಸಾಧಿಸಬಹುದು ಎಂದು ನಿರೀಕ್ಷೆ ಮಾಡಿತ್ತು. ಆದರೆ ಈ ನಿರೀಕ್ಷೆಗೂ ಮೀರಿ ಜಿಡಿಪಿ 7.6% ರಷ್ಟು ಪ್ರಗತಿ ಸಾಧಿಸಿದೆ.

    ಜಿಎಸ್‌ಟಿ ಸಂಗ್ರಹವು ನವೆಂಬರ್‌ನಲ್ಲಿ 15 ಪ್ರತಿಶತದಷ್ಟು ಹೆಚ್ಚಾಗಿದ್ದು ಸುಮಾರು 1.68 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹ 1.45 ಲಕ್ಷ ಕೋಟಿ ರೂಪಾಯಿ ಆಗಿದ್ದು, ನವೆಂಬರ್ 2023ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು 1,67,929 ಕೋಟಿ ರೂಪಾಯಿಗಳಷ್ಟಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತ್ತು.

     

  • ಆಸೀಸ್‌ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಗಾಯಕ್‌ವಾಡ್‌

    ಆಸೀಸ್‌ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಗಾಯಕ್‌ವಾಡ್‌

    ಗುವಾಹಟಿ: ಟೀಂ ಇಂಡಿಯಾದ (Team India) ಆರಂಭಿಕ ಆಟಗಾರ ಋತುರಾಜ್‌ ಗಾಯಕ್‌ವಾಡ್‌ (Ruturaj Gaikwad) ಆಸ್ಟ್ರೇಲಿಯಾ (Australia) ವಿರುದ್ಧ ಶತಕ (Century) ಸಿಡಿಸಿ ಭಾರತದ ಪರ ದಾಖಲೆ ಬರೆದಿದ್ದಾರೆ.

    ಟಿ20 (T20) ಪಂದ್ಯದಲ್ಲಿ ಆಸೀಸ್‌ ವಿರುದ್ಧ ಶತಕ ಹೊಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಗಾಯಕ್‌ವಾಡ್‌ ಪಾತ್ರರಾಗಿದ್ದಾರೆ.

    32 ಎಸೆತಗಳಲ್ಲಿ ಅರ್ಧಶತಕ ಹೊಡೆದ ಗಾಯಕ್‌ವಾಡ್‌ ನಂತರ 20 ಎಸೆತಗಳಲ್ಲಿ 50 ರನ್‌ ಸಿಡಿಸಿ ಮೊದಲ ಶತಕ ಹೊಡೆದರು. 52 ಎಸೆತಗಳಲ್ಲಿ 100 ರನ್‌ ಹೊಡೆದ ಗಾಯಕ್ವಾಡ್‌ ಮಾಕ್ಸ್‌ವೆಲ್‌ ಎಸೆದ ಕೊನೆಯ ಓವರ್‌ನಲ್ಲಿ ಮೂರು ಸಿಕ್ಸ್‌ ಮತ್ತು 2 ಬೌಂಡರಿ ಸಿಡಿಸಿದರು. ಅಂತಿಮವಾಗಿ ಗಾಯಕ್‌ವಾಡ್‌ ಔಟಾಗದೇ 123 ರನ್‌ (57 ಎಸೆತ, 13 ಬೌಂಡರಿ, 7 ಸಿಕ್ಸ್‌) ಚಚ್ಚಿದರು.  ಇದನ್ನೂ ಓದಿ: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಾಕ್‌ನಲ್ಲಿ ನಡೆಯುವುದು ಅನುಮಾನ

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 24 ರನ್‌ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್‌ ಕಳೆದುಕೊಂಡಿತ್ತು. ಯಶಸ್ವಿ ಜೈಸ್ವಾಲ್‌ ಮತ್ತು ಇಶನ್‌ ಕಿಶನ್‌ ಔಟಾಗಿದ್ದರು. ನಂತರ ಸೂರ್ಯಕುಮಾರ್‌ ಯಾದವ್‌ 39 ರನ್‌(29 ಎಸೆತ, 5 ಬೌಂಡರಿ, 1 ಸಿಕ್ಸರ್‌), ತಿಲಕ್‌ ವರ್ಮಾ ಔಟಾಗದೇ 31 ರನ್‌ ( 24 ಎಸೆತ, 4 ಬೌಂಡರಿ) ಹೊಡೆದರು.

    ಇತರೇ ರೂಪದಲ್ಲಿ 23 ರನ್‌( ಲೆಗ್‌ ಬೈ 4, ನೋಬಾಲ್‌ 1 , ವೈಡ್‌ 18) ಬಂದಿದ್ದರಿಂದ ಅಂತಿಮವಾಗಿ 20 ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟಕ್ಕೆ 222 ರನ್‌ ಗಳಿಸಿತು.

    ರನ್‌ ಏರಿದ್ದು ಹೇಗೆ?
    50 ರನ್‌ – 41 ಎಸೆತ
    100 ರನ್‌ – 72 ಎಸೆತ
    150 ರನ್‌ – 97 ಎಸೆತ
    200ರನ್‌ – 116 ಎಸೆತ