ಹೈದರಾಬಾದ್: ಟಾಲಿವುಡ್‍ನ ಸ್ಟಾರ್ ದಂಪತಿಗಳಾದ ನಾಗಚೈತನ್ಯ, ಸಮಂತಾ ವಿಚ್ಛೇದನವನ್ನು ಪಡೆದುಕೊಳ್ಳುತ್ತಿದ್ದೇವೆ ಹೇಳುವ ಮೂಲಕವಾಗಿ ಈ ವಿಚಾರಕ್ಕೆ ಸ್ವತಃ ಅವರೆ ತೆರೆ ಎಳೆದಿದ್ದಾರೆ.
ಹೆಚ್ಚು ಆಲೋಚನೆಯ ನಂತರ ಚಾಯ್ ಮತ್ತು ನಾನು ನಮ್ಮ ಸ್ವಂತ ದಾರಿಗಳನ್ನು ಅನುಸರಿಸಲಿದ್ದೇವೆ. ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ನಮ್ಮ ಸಂಬಂಧ ಯಾವಾಗಲೂ ನಮ್ಮ ನಡುವೆ ವಿಶೇಷ ಬಾಂಧವ್ಯವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ. ಇದನ್ನೂ ಓದಿ: ತಂದೆ ವಯಸ್ಸಿನ ಕಾರು ಕಂಡು ಅಪ್ಪನ ಕಂಡಷ್ಟೆ ಸಂತೋಷವಾಯಿತು: ಜಗ್ಗೇಶ್
ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು. ನಾವು ಮುಂದುವರಿಯಲು ಬೇಕಾದ ಪ್ರೈವೆಸಿಯನ್ನು ನಮಗೆ ನೀಡಬೇಕೆಂದು ನಾವು ವಿನಂತಿಸುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಬರೆದುಕೊಂಡು ತಾವಿಬ್ಬರು ವಿಚ್ಛೇದನ ಪಡೆದುಕೊಳ್ಳುತ್ತೀರುವ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕವಾಗಿ ತಿಳಿಸಿದ್ದಾರೆ.
ಟಾಲಿವುಡ್‍ನ ಈ ಸ್ಟಾರ್ ದಂಪತಿ ನಾಲ್ಕು ವರ್ಷಗಳ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯವನ್ನು ಹಾಡಿದ್ದಾರೆ. ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುದ್ದಿಗೆ ಇಂದು ತೆರೆ ಬಿದ್ದಿದೆ. ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಎಂಬ ಅನುಮಾನ ಹಲವು ದಿನಗಳಿಂದಲೂ ಕೇಳಿಬರುತ್ತಲೇ ಇತ್ತು. ಆದರೆ ಕುಟುಂಬದ ಯಾರೊಬ್ಬರೂ ಅಧಿಕೃತ ಹೇಳಿಕೆ ನೀಡಿರಲಿಲ್ಲ.
ಕಾರವಾರ : ಪ್ರತಿ ದಿನ ಮನೆಯಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ಹರಟುತ್ತಿದ್ದ ಪತ್ನಿಗೆ ಬುದ್ಧಿ ಹೇಳಿದ್ದಕ್ಕೆ ಪತಿಯನ್ನೇ ಕೊಲ್ಲಲು 30 ಸಾವಿರ ಸುಪಾರಿ ನೀಡಿ ಹತ್ಯೆ ಪ್ರಯತ್ನದ ವೇಳೆ ಪತ್ನಿ ಸಿಕ್ಕಿಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ಸರಸ್ವತಿ ಸುತಾರ ಪತಿಯ ಕೊಲೆಗೆ ಸುಪಾರಿ ನೀಡಿದ ಪತ್ನಿ. ಈಕೆ ದಾಂಡೇಲಿಯ ಅಂಕುಷ ರಾಮಾ ಸುತಾರ ಎಂಬುವವನನ್ನು ಆರು ವರ್ಷದ ಹಿಂದೆ ಮದುವೆಯಾಗಿದ್ದು, ಹಲವು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಹೀಗಾಗಿ ಮನೆಯಲ್ಲಿ ಸಮಯ ಕಳೆಯಲು ನೆಂಟರು ಹಾಗೂ ಪರಿಚಯಸ್ಥರೊಂದಿಗೆ ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಿದ್ದಳು.
ಹೆಂಡತಿಯ ಈ ವರ್ತನೆಯಿಂದ ಬೇಸತ್ತಿದ್ದ ಪತಿ ಅಂಕುಷರಾಮಾ ಪತ್ನಿಗೆ ಮೊಬೈಲ್ ನಲ್ಲಿ ಹರಟದಂತೆ ಬುದ್ದಿ ಹೇಳಿದ್ದನು. ಇದರಿಂದ ಕೋಪಗೊಂಡ ಈಕೆ ತನ್ನ ಪರಿಚಯ ಹೊಂದಿದ್ದ ಗಣೇಶ ಶಾಂತರಾಂ ಎಂಬುವವನಿಗೆ 30 ಸಾವಿರ ಸುಪಾರಿ ನೀಡಿ ಹತ್ಯೆ ಮಾಡುವಂತೆ ತಿಳಿಸಿದ್ದಳು.
ಗಣೇಶ ಶಾಂತರಾಂ ಇಬ್ಬರು ಅಪ್ರಾಪ್ತ ಬಾಲಕರೊಂದಿಗೆ ಇಂದು ಮನೆಗೆ ಆಗಮಿಸಿದ್ದು ಮನೆಯಲ್ಲಿದ್ದ ಅಂಕುಷ ರಾಮಾ ಸುತಾರ ನನ್ನು ಕತ್ತು ಹಿಸುಕಿ ಕೊಲೆ ಮಾಡಲು ಎತ್ನಿಸಿದ್ದು, ಈತ ಕೂಗಿಕೊಂಡಾಗ ಪಕ್ಕದ ಮನೆಯಲ್ಲಿ ಇದ್ದ ಸಹೋದರರು ಓಡಿ ಬಂದಿದ್ದಾರೆ. ಈ ವೇಳೆ ಹತ್ಯೆ ಮಾಡಲು ಬಂದಿದ್ದ ಇಬ್ಬರು ಅಪ್ರಾಪ್ತರು ಓಡಿಹೋಗಿದ್ದು, ಸುಪಾರಿ ತೆಗೆದುಕೊಂಡ ಗಣೇಶ್ ಶಾಂತರಾಂ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಫೇಸ್‍ಬುಕ್ ಲೈವ್ ವೇಳೆ ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಕಿರುತೆರೆ ನಟ
ಘಟನೆ ಸಂಬಂಧ ದಾಂಡೇಲಿಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಸ್ವತಿ ಸುತಾರ ಮತ್ತು ಬೆಳಗಾವಿ ಮೂಲದ ಗಣೇಶ ಶಾಂತರಾಂ ಪಾಟೀಲ್ ನನ್ನು ಬಂಧಿಸಿದ್ದಾರೆ.
ಬೆಂಗಳೂರು: ಐಪಿಎಸ್ ಅಧಿಕಾರಿ ವರ್ಟಿಕಾ ಕಟಿಯಾರ್ ಗಂಡನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ವರ್ಟಿಕಾ ಕಟಿಯಾರ್ ನಗರದ ಸಂಶೋಧನೆ ಹಾಗೂ ತರಬೇತಿ ಕೇಂದ್ರದ ಡಿಸಿಪಿ ಆಗಿ ಕೆಲಸ ಮಾಡುತ್ತಿದ್ದಾರೆ. ಕಟಿಯಾರ್ ಗಂಡ ನಿತಿನ್ ಸುಭಾಶ್ ಯೋಲ ವಿರುದ್ಧ ವಿಧಾನ ಸೌದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ಇಂದು, ನಾಳೆ ರಾಜ್ಯಕ್ಕೆ ಭಾರೀ ಮಳೆ- ಹಲವೆಡೆ ಆರೆಂಜ್ ಅಲರ್ಟ್
ವರ್ಟಿಕಾ ಕಟಿಯಾರ್ ಈ ಹಿಂದೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಿತಿನ್ ಹಾಗೂ ಕಟಿಯಾರ್ ದಾಂಪತ್ಯದಲ್ಲಿ ಬಿರುಕು ಕಂಡ ಹಿನ್ನಲೆ 2020ರಲ್ಲಿ ವಿಚ್ಚೇದನ ಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವಿಚ್ಚೇದನದ ಅರ್ಜಿ ವಿಚಾರಣಾ ಹಂತದಲ್ಲಿದೆ. ಇದನ್ನೂ ಓದಿ: ಪರಿಸ್ಥಿತಿ ಸುಧಾರಣೆಯಾದ್ರೆ ಮಾತ್ರ ಎಸ್‍ಎಸ್‍ಎಲ್‍ಸಿ ಪರೀಕ್ಷೆ – ಸಿಎಂ ಬಿಎಸ್‍ವೈ
ನಿತಿನ್ ತಾಯಿ ಮಗನೊಂದಿಗೆ ವಾಟ್ಸಪ್ ಕಾಲ್ ನಲ್ಲಿರುವಾಗ ಆಸಿಡ್ ಹಾಕುತ್ತೇನೆ ಅಥವಾ ಬೇರೆಯವರಿಂದ ಆಸಿಡ್ ಹಾಕಿಸೊದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಪ್ರಕರಣ ಹಿಂಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ ಜೊತೆಗೆ ಮೇ 29 ರಂದು ಲಾಕ್‍ಡೌನ್ ಆದೇಶ ಉಲ್ಲಂಘಿಸಿ ಅನಧಿಕೃತವಾಗಿ ಬೆಂಗಳೂರಿನ ಕಚೇರಿಗೆ ಹಲ್ಲೆಗೆ ಸಂಚು ಆರೋಪಿಸಿದ್ದಾರೆಂದು ಆರೋಪಿಸಿ ವರ್ಟಿಕಾ ದೂರು ವಿಧಾನಸೌದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಯಾವುದೇ ದಾನ ಸ್ವೀಕರಿಸಲ್ಲ: ಉಪೇಂದ್ರ
ಈ ಹಿಂದೆ ನೀಡಿದ ಪ್ರಕರಣದ ತನಿಖೆ ದೆಹಲಿ ಪೊಲೀಸರಿಗೆ ವರ್ಗಾವಣೆ ಮಾಡಲಾಗಿತ್ತು. ಈ ನಡುವೆ ಮಗು ನೋಡಲು ಬಿಡುತ್ತಿಲ್ಲ ಎಂದು ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗ ಮೊರೆಹೋಗಿದ್ದ ಪತಿ ನಿತಿನ್ ಪ್ರಾಥಮಿಕ ವಿಚಾರಣೆ ನಡೆಸಿ ಡಿಜಿಪಿ ಪ್ರವೀಣ್ ಸೂದ್‍ಗೆ ವರ್ಟಿಕಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಯೋಗ ಶಿಫಾರಸ್ಸು ಮಾಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಗಂಡನ ವಿರುದ್ಧ ಮತ್ತೊಂದು ದೂರು ನೀಡಿದ್ದಾರೆ.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಪ್ರೇಮಿಗಳ ದಿನದಂದು ಸಪ್ತಪದಿ ತುಳಿದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಮೊಮ್ಮಗ ಹಾಗೂ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಹೆಗ್ಡೆ ಅವರ ಪುತ್ರ ಅಮರ್ತ್ಯ ಹೆಗ್ಡೆ ಇವತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ವೈಟ್‍ಫೀಲ್ಡ್ ಬಳಿಯ ಖಾಸಗಿ ಹೋಟೆಲಿನಲ್ಲಿ ಐಶ್ವರ್ಯ ಮತ್ತು ಅಮರ್ತ್ಯ ಸುಬ್ರಹ್ಮಣ್ಯ ಹೆಗ್ಡೆ ವಿವಾಹ ನೆರವೇರಿದೆ. ಬೆಳಗ್ಗೆ 9 ರಿಂದ 9-45ರ ನಡುವಿನ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಆಗಿದೆ.
ಡಿ.ಕೆ ಶಿವಕುಮಾರ್ ಪುತ್ರಿಯ ಮದುವೆ ಸಮಾರಂಭದಲ್ಲಿ ಆಯ್ದ ಗಣ್ಯರು ಹಾಗೂ ಸಂಬಂಧಿಕರಿಗಷ್ಟೇ ಆಹ್ವಾನಿಸಲಾಗಿದೆ. ಅದ್ದೂರಿಯಾಗಿ ಮದುವೆ ನೇರವೇರಿದೆ. ಕನ್ಯಾದಾನದ ವೇಳೆ ಡಿಕೆ ಶಿವಕುಮಾರ್ ಕಣ್ಣೀರು ಇಟ್ಟಿದ್ದಾರೆ. ಡಿ.ಕೆಶಿ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ.
ನಿನ್ನ ನಡೆದಿರುವ ಕಾರ್ಯಕ್ರಮದಲ್ಲಿ ‘ಅಪ್ಪಾ ಐ ಲವ್ ಯು’ ಹಾಡಿಗೆ ಮಗಳು ನೃತ್ಯ ಮಾಡುತ್ತಿದ್ದರೆ, ಇತ್ತ ತಂದೆ ಶಿವಕುಮಾರ್ ಮಗಳ ನೃತ್ಯ ನೋಡಿ ಆನಂದಭಾಷ್ಪ ಸುರಿಸುತ್ತಿದ್ದರು. ಮಗಳ ಮದುವೆ ಕಾರ್ಯಕ್ರಮದ ಎಲ್ಲಾ ಸಿದ್ಧತೆಯನ್ನು ಸ್ವತಃ ಡಿಕೆ ಶಿವಕುಮಾರ್ ಮುಂದೆ ನಿಂತು ಮಾಡಿದ್ದಾರೆ ಮದುವೆಗೆ ಸಂಬಂಧಿಕರು ಮತ್ತು ಆತ್ಮೀಯ ಸ್ನೇಹಿತರು ಭಾಗಿಯಗಿದ್ದರು. ಫೇ 17 ರಂದು ನಡೆಯುವ ಆರತಕ್ಷತೆಯಲ್ಲಿ ಹಲವು ಗಣ್ಯಾತೀಗಣ್ಯರು ಮತ್ತು ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ. ಐಶ್ವರ್ಯ ಪ್ರೇಮಿಗಳ ದಿನದಂದು ಅಮರ್ತ್ಯ ಹೆಗ್ಡೆ ಅವರನ್ನು ವರೆಸಿರುವುದು ವಿಶೇಷವಾಗಿದೆ.
ಚಂಡೀಗಢ: ಹುಡುಗನಿಗೆ ಮದುವೇ ವಯಸ್ಸು ಆಗದಿದ್ದರೂ ವಯಸ್ಕ ದಂಪತಿ ಒಟ್ಟಿಗೆ ಜೀವಿಸಬಹುದು ಎಂದು ಪಂಜಾಬ್ ಹರ್ಯಾಣ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.
ವಯಸ್ಕ ದಂಪತಿ ಕಾನೂನಿನ ವ್ಯಾಪ್ತಿಯ ಒಳಗಡೆ ತಮ್ಮ ಜೀವನವನ್ನು ನಡೆಸುವ ಎಲ್ಲ ಹಕ್ಕನ್ನು ಹೊಂದಿದ್ದಾರೆ ಎಂದು ನ್ಯಾ. ಅಲ್ಕಾ ಸರೀನ್ ಅಭಿಪ್ರಾಯಪಟ್ಟಿದ್ದಾರೆ.
ಒಬ್ಬ ವ್ಯಕ್ತಿ ಹೇಗೆ ಬದುಕಬೇಕು ಎಂಬುದನ್ನು ಸಮಾಜ ನಿರ್ಧರಿಸಲು ಸಾಧ್ಯವಿಲ್ಲ. ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಗೆ ಜೀವನದ ಹಕ್ಕನ್ನು ನೀಡಿದೆ. ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವು ಜೀವನದ ಹಕ್ಕಿನ ಒಂದು ಪ್ರಮುಖ ಭಾಗ. ಈ ಪ್ರಕರಣದಲ್ಲಿ ಹುಡುಗನ ವಿವಾಹದ ವಯಸ್ಸು ಮೀರದೇ ಇದ್ದರೂ ಮಗಳು ಆತನ ಜೊತೆ ಒಟ್ಟಿಗೆ ಜೀವಿಸಬಾರದು ಎಂದು ಪೋಷಕರು ಆಕೆಯ ಮೇಲೆ ಒತ್ತಡ ಹಾಕುವಂತಿಲ್ಲ ಎಂದು ಪೀಠ ಹೇಳಿದೆ.
ಕೋರ್ಟ್ ಫತೇಘರ್ ಪೊಲೀಸರಿಗೆ ಈ ದಂಪತಿಗೆ ಕಾನೂನಿನ ಪ್ರಕಾರ ರಕ್ಷಣೆ ನೀಡಬೇಕೆಂದು ಸೂಚಿಸಿದೆ.
ಏನಿದು ಪ್ರಕರಣ?
19 ವರ್ಷದ ಯುವತಿ ಮತ್ತು 20 ವರ್ಷದ ಯುವಕ ಪರಸ್ಪರ ಪ್ರೀತಿಸಿ ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದಾರೆ. ಈ ವಿಚಾರ ತಿಳಿದು ಯುವತಿಯ ಪೋಷಕರು ಪ್ರೇಮಿಗಳಿಗೆ ಥಳಿಸಿದ್ದಾರೆ. ಹುಡುಗನ ಜೊತೆ ಜೀವಿಸಬಾರದು ಎಂದು ಯುವತಿಗೆ ಪೋಷಕರು ಒತ್ತಡ ಹಾಕಿದ್ದಾರೆ.
ಘಟನೆಯ ಬಳಿಕ ಪ್ರೇಮಿಗಳು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದರು. ಆದರೆ ಇಲ್ಲಿ ರಕ್ಷಣೆ ಸಿಗಲಿಲ್ಲ. ಹೀಗಾಗಿ ಯವತಿ ಪೊಲೀಸರು ನನ್ನ ಪೋಷಕರ ಪರ ಕೆಲಸ ಮಾಡಿ ತನಗೆ ಯಾವುದೇ ರಕ್ಷಣೆ ನೀಡಿಲ್ಲ ಎಂದು ಆರೋಪಿಸಿ ಕೋರ್ಟ್ ಮೊರೆ ಹೋಗಿದ್ದಳು.
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಯಾವುದು ಸರಿ? ಯಾವುದು ತಪ್ಪು ಎಂಬ ತೀರ್ಮಾನವನ್ನು ತೆಗೆದುಕೊಳ್ಳಲು ಯುವತಿ ಸ್ವತಂತ್ರವಾಗಿದ್ದಾಳೆ. ಈ ವಿಚಾರದಲ್ಲಿ ಯಾರೂ ಆಕೆಗೆ ಬಲವಂತ ಮಾಡುವಂತಿಲ್ಲ ಎಂದು ಹೇಳಿದೆ. ಈಗ ಯುವತಿ ಮನೆಯನ್ನು ತೊರೆದು ಯುವಕನ ಜೊತೆ ಒಟ್ಟಿಗೆ ಈಗ ಜೀವನ ನಡೆಸುತ್ತಿದ್ದಾಳೆ.
ಮೊದಲು ಹೆಣ್ಣುಮಕ್ಕಳ ಮದುವೆ ವಯಸ್ಸು 15 ಇತ್ತು. ಶಾರದಾ ಕಾಯ್ದೆ 1929 ಅಡಿಯಲ್ಲಿ 1978ರ ನಂತರ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 15ರಿಂದ 18ಕ್ಕೆ ಹೆಚ್ಚಿಸಲಾಗಿದ್ದರೆ ಗಂಡು ಮಕ್ಕಳಿಗೆ ಮದುವೆ ವಯಸ್ಸನ್ನು 21ಕ್ಕೆ ನಿಗದಿಗೊಳಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 21ಕ್ಕೆ ಏರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತು.
ಬೆಂಗಳೂರು: ಮದುವೆಯಾದ ಗಂಡ ತನ್ನ ಜೊತೆಗೆ 4 ವರ್ಷದಿಂದ ಮಲಗದೇ ಇದ್ದಿದ್ದಕ್ಕೆ ಆತನನ್ನೇ ಕೊಲೆ ಮಾಡಿದ್ದ ಪತ್ನಿ ಈಗ ಅರೆಸ್ಟ್ ಆಗಿದ್ದಾಳೆ.
ಪತಿ ಮಧುಸೂಧನ್ ಕೊಲೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಪತ್ನಿ ನೀಲಾಳನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಈ ಕೃತ್ಯಕ್ಕೆ ಸಹಕಾರ ನೀಡಿದ ಆರೋಪದಡಿ ಪ್ರದೀಪ್, ರಂಜಿತ್, ಹರಿಪ್ರಸಾದ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ನೀಲಾಳಿಗೆ ಪ್ರದೀಪ್ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು. ಹೀಗಾಗಿ ಗಂಡ ಮಧುಸೂಧನ್ ಮುಗಿಸಿಲು ಪ್ಲಾನ್ ಮಾಡಿದ್ದಳು. ಅದರಂತೆ ಅಕ್ಟೋಬರ್ 12 ರ ರಾತ್ರಿ ಮಧುಸೂಧನ್ ನನ್ನ ಕ್ಯಾಂಟರ್ ನಲ್ಲಿ ಪ್ರದೀಪ್ ಕರೆದೊಯ್ದಿದ್ದ. ದಾರಿ ಮಧ್ಯೆ ಸ್ನೇಹಿತರಾದ ರಂಜಿತ್ ಮತ್ತು ಹರಿಪ್ರಸಾದನನ್ನು ಕ್ಯಾಂಟರ್ ಗೆ ಹತ್ತಿಸಿಕೊಂಡಿದ್ದ ಪ್ರದೀಪ್ ಮಧುಸೂಧನ್ ಗೆ ಚೆನ್ನಾಗಿ ಮದ್ಯ ಕುಡಿಸಿದ್ದ.
ರಾಜ್ ಕುಮಾರ್ ಸಮಾಧಿ ಬಳಿ ಕ್ಯಾಂಟರ್ ನಿಲ್ಲಿಸಿ ಪ್ರದೀಪ್ ಎಲ್ಲರ ಜೊತೆ ಮಲಗೋಣ ಎಂದು ಹೇಳಿದ್ದಾನೆ. ಮಧುಸೂಧನ್ ಮಲಗುತ್ತಿದ್ದ ಹಾಗೆ ಆರೋಪಿಗಳು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಕೆಂಗೇರಿ ಬಳಿಯ ರಾಜಕಾಲುವೆಗೆ ಶವ ಎಸೆದು ಪರಾರಿಯಾಗಿದ್ದರು.
ಪ್ರಿಯತಮೆ ನೀಲಾಳಿಗೆ ಪ್ರದೀಪ್ ನಿನ್ನ ಗಂಡನನ್ನು ಕೊಲೆ ಮಾಡಿದ್ದೇವೆ ಎಂದು ಕರೆ ಮಾಡಿ ವಿಚಾರ ತಿಳಿಸಿದ್ದ. ಮರುದಿನ ರಾಜಗೋಪಾಲನಗರ ಪೊಲೀಸ್ ಠಾಣೆಗೆ ಹೋಗಿದ್ದ ನೀಲಾ ಗಂಡ ಕಾಣಿಸುತ್ತಿಲ್ಲ ಎಂದು ನಾಪತ್ತೆ ದೂರು ನೀಡಿದ್ದಳು. ಆರೋಪಿಗಳ ಜಾಡು ಹಿಡಿದ ಪೊಲೀಸರು ಈಗ ನಾಲ್ವರನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ನನ್ನ ಗಂಡ ನಾಲ್ಕು ವರ್ಷದಿಂದ ಜೊತೆಯಲ್ಲಿ ಮಲಗುತ್ತಿರಲಿಲ್ಲ. ಹೀಗಾಗಿ ಕೊಲೆ ಮಾಡಿಸಿದ್ದೇನೆ ಎಂದು ನೀಲಾ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.
ಚಿಕ್ಕಬಳ್ಳಾಪುರ: ಪ್ರಿಯಕರನ ಜೊತೆ ಸೇರಿಕೊಂಡ ಗೃಹಿಣಿಯೊರ್ವಳು, ಸ್ವತಃ ಗಂಡನಿಗೆ ವಿಷ ಪ್ರಾಶನ ಮಾಡಿ ಕೊಲೆ ಮಾಡಲು ಯತ್ನಿಸಿದ್ದು, ಈ ಸಂಚು ಮೊಬೈಲ್ ಆಡಿಯೋ ರೆಕಾರ್ಡ್ ಮೂಲಕ ಬಯಲಾಗಿದೆ.
ಪತ್ನಿ ಕೃಷ್ಣಮ್ಮ ಪತಿ ನರಸಿಂಹಪ್ಪ ಅವರ ಹತ್ಯೆಗೆ ಸಂಚು ರೂಪಿಸಿದ್ದು, ಪೊಲೀಸರು ಈಗ ಆಕೆಯನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕು ಚಿಕ್ಕಮುನಿಮಂಗಲ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮದ ಆನಂದರೆಡ್ಡಿ ಎನ್ನುವ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು ಗಂಡನನ್ನು ಮುಗಿಸಲು ಕೃಷ್ಣಮ್ಮಸಂಚು ರೂಪಿಸಿದ್ದಳು. ಒಂದೇ ಬಾರಿಗೆ ವಿಷ ಹಾಕಿದ್ರೆ ಗೊತ್ತಾಗುತ್ತೆ ಎನ್ನುವ ಕಾರಣ ಪ್ರತಿದಿನ ಊಟದಲ್ಲಿ ಸ್ವಲ್ಪ ಸ್ವಲ್ಪ ವಿಷ ಪ್ರಾಶನ ಮಾಡುತ್ತಿದ್ದಳು. ಆರೋಗ್ಯದಲ್ಲಿ ಏರು ಪೇರಾಗಿ ಗಂಡ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಇದನ್ನರಿತ ಆನಂದ ರೆಡ್ಡಿ ಕೃಷ್ಣಮ್ಮ ಜೊತೆ ವಿಚಾರಿಸುವ ಆಡಿಯೋ ಈಗ ಪೊಲೀಸರ ಕೈ ಸೇರಿದ್ದು, ಪೊಲೀಸರು ಕೃಷ್ಣಮ್ಮನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರೆ, ಪ್ರಿಯಕರ ಆನಂದ ರೆಡ್ಡಿ ನಾಪತ್ತೆಯಾಗಿದ್ದಾನೆ. ಮತ್ತೊಂದೆಡೆ ಕೃಷ್ಣಮ್ಮ ಪತಿ ನರಸಿಂಹಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತ್ತೆಯಾಗಿದ್ದು ಹೇಗೆ: ಆನಂದ್ ರೆಡ್ಡಿ ಕೃಷ್ಣಮ್ಮನಿಗೆ ಮೊಬೈಲ್ ಉಡುಗೊರೆಯಾಗಿ ನೀಡಿದ್ದ. ಈ ಮೊಬೈಲನ್ನು ಬಳಸುವುದನ್ನು ನೋಡಿದ ಪತಿ ಎಲ್ಲಿಂದ ಬಂತು, ಯಾರು ಕೊಟ್ಟಿದ್ದು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೃಷ್ಣಮ್ಮ ರಸ್ತೆಯಲ್ಲಿ ಸಿಕ್ಕಿತ್ತು, ಈಗ ಬಳಸುತ್ತಿದ್ದೇನೆ ಎಂದು ಹೇಳಿದ್ದಾಳೆ. ಈ ವಿಚಾರದ ಬಗ್ಗೆ ಇಬ್ಬರ ನಡುವೆ ಗಲಾಟೆ ನಡೆದು ಕೊನೆಗೆ ನರಸಿಂಹಪ್ಪ ಆ ಮೊಬೈಲ್ ತನ್ನ ಜೊತೆ ಇಟ್ಟುಕೊಂಡಿದ್ದಾರೆ. ಇದಾಗಿ ಕೆಲ ದಿನಗಳ ಬಳಿಕ ಸಂಬಂಧಿಯೊಬ್ಬ ಮನೆಗೆ ಬಂದಾಗ ಆತನ ಮೂಲಕ ಸಿಮ್ ತೆಗೆಯುತ್ತಾಳೆ. ಬಳಿಕ ಆ ಸಿಮ್ ನಲ್ಲಿ ಕರೆನ್ಸಿ ಇದೆ ಎಂದು ಹೇಳಿ ಸಂಬಂಧಿ ಫೋನ್ ಮೂಲಕ ಆನಂದ್‍ಗೆ ಕರೆ ಮಾಡುತ್ತಾಳೆ. ಮೂರು ಬಾರಿ ಆಕೆ ಕರೆ ಮಾಡಿದ್ದಾಳೆ. ಸಂಬಂಧಿ ತನ್ನ ಮೊಬೈಲ್ ನಲ್ಲಿ ಆಟೋಮ್ಯಾಟಿಕ್ ಆಗಿ ಕರೆಗಳನ್ನು ರೆಕಾರ್ಡ್ ಮಾಡುವಂತೆ ಸೆಟ್ ಮಾಡಿಕೊಂಡಿದ್ದ. ಇದಾದ ಬಳಿಕ ಸಂಬಂಧಿ ಕೃಷ್ಣಮ್ಮ ಯಾರ ಜೊತೆ ಏನು ಮಾತನಾಡಿದ್ದಾಳೆ ಎನ್ನುವುದನ್ನು ತಿಳಿಯಲು ಆಡಿಯೋ ಫೈಲ್‍ಗಳನ್ನು ಓಪನ್ ಮಾಡಿದಾಗ ಈಕೆಯ ಕೃತ್ಯ ಗೊತ್ತಾಗಿದೆ. ನಂತರ ಈ ಆಡಿಯೋ ಫೈಲನ್ನು ಸಂಬಧಿ ನರಸಿಂಹಪ್ಪಗೆ ಕೇಳಿಸಿದ್ದಾನೆ.
ಇಬ್ಬರ ಮೊಬೈಲ್ ಸಂಭಾಷಣೆಯಲ್ಲಿ ಏನಿದೆ?
ಆನಂದ್ ರೆಡ್ಡಿ: ಸರಿ ಈಗ ಏನು ಮಾಡೋದು?
ಕೃಷ್ಣಮ್ಮ: ಇದನ್ನೇ ಬಳಸೋಣ.
ಆನಂದ್ ರೆಡ್ಡಿ: ಸರಿ ಅದನ್ನೇ ಬಳಸ್ತೀಯಾ? ಆದ್ರೆ 10 ದಿನಗಳಿಂದ ಬಳಸ್ತೀದ್ದೀಯಾ ಏನು ಆಗಲಿಲ್ವಲ್ಲ
ಕೃಷ್ಣಮ್ಮ: 10 ದಿನಗಳಿಂದ ಎಲ್ಲಿ? ಡೈಲಿ ಇಲ್ಲ, ಒಂದು ದಿನ, ಎರಡು ದಿನಕ್ಕೆ ಒಂದು ಸಾರಿ
ಅನಂದ್ ರೆಡ್ಡಿ: ಈಗ ಸಿರೀಯಸ್ ಆಗೋದಾದ್ರೆ ಡೈಲಿ ಬಳಸು.
ಕೃಷ್ಣಮ್ಮ: ಡೈಲಿ ಬಳಸಬಹುದು, ಮಕ್ಕಳಿರ್ತಾರೆ, ಒಂದು ಸಾರಿ ಮನೆಯಲ್ಲಿ ಊಟ ಮಾಡ್ತಾನೆ, ಮತ್ತೊಂದು ಸಾರಿ ಅಚೆ ಊಟ ಮಾಡ್ತಾನೆ. ಆಚೆ ತಿಂದಾಗ ಏನೂ ಆಗಲ್ಲ. ಮನೆಯಲ್ಲಿ ತಿಂದಾಗ ಆಗುತ್ತೆ. ಆದರಿಂದ ಒಂದು ಸಾರಿ ಬಿಟ್ಟು ಮತ್ತೊಂದು ಸಾರಿ ಹಾಕಿದ್ರೇ ಸರಿ ಹೋಗುತ್ತೆ. ಅಲ್ಲಾ ಡೈಲಿ ಹಾಕಿದ್ರೇ ಡೌಟ್ ಬರಲ್ವಾ?
ಅನಂದ್ ರೆಡ್ಡಿ: ಏನ್ ಡೌಟ್ ಬರುತ್ತೆ?
ಕೃಷ್ಣಮ್ಮ: ಅಲ್ಲಾ ಮನೆಯಲ್ಲಿ ತಿಂದಾಗ ವಾಮಿಟ್ ಆಗುತ್ತಲ್ಲ. ಆಚೆ ತಿಂದಾಗ ಆಗಲ್ವಲ್ಲಾ
ಆನಂದ್ ರೆಡ್ಡಿ: ತಿಂತಾನೇ ವಾಮಿಟ್ ಆಗುತ್ತಾ?
ಕೃಷ್ಣಮ್ಮ : ತಿಂದ ಹತ್ತು ಹದಿನೈದು ನಿಮಿಷ ಆದ ಮೇಲೆ ಆಗುತ್ತೆ. ಅದು ಹಾಕಿದ ಹಾಗೆ ಜಾಸ್ತಿ ಹಾಕಿದ್ರೆ 10 ನಿಮಿಷ, ಕಡಿಮೆ ಹಾಕಿದ್ರೆ 15 ನಿಮಿಷ
ಅನಂದ್ ರೆಡ್ಡಿ : ಹುಂ ಅದು ವಾಂತಿ ಆಗದೆ ಇದ್ದ ಹಾಗೆ ನೋಡಿಕೊಳ್ಳಲಾಗುವುದಿಲ್ಲವೇ?ಸರಿ ಈಗ ಏನು ಮಾಡೋದು?
ಕೃಷ್ಣಮ್ಮ: ಹೇಗೆ? ಏನ್ ಮಾಡಿದ್ರು ಆಗುತ್ತೆ.
ಅನಂದ್ ರೆಡ್ಡಿ: ಹಾ..
ಕೃಷ್ಣಮ್ಮ: ಮೊನ್ನೆನೇ ಹೇಳ್ತಿದ್ದ ಮೊದಲು ವಾಂತಿ, ಅಮೇಲೆ ಜ್ವರ, ತಲೆ ನೋವು ಅಂತ ವರ್ಷದಿಂದ ಹೀಗೆ ಆಗ್ತಿದೆ ಎಲ್ಲೆಲ್ಲೋ ತೋರಿಸಿದೆ ಅಂತ ಅಂಜಪ್ಪಗೆ ಹೇಳ್ತಿದ್ದ.
ಅನಂದರೆಡ್ಡಿ: ಈಗ ಜ್ವರ ತಲೆ ನೋವು ಏನೂ ಇಲ್ವಾ?
ಕೃಷ್ಣಮ್ಮ: ತಲೆನೋವು ಅಂತೆ ಹಿಂದೆ ತಲೆ ನೋವು ಅಂತೆ ಜ್ವರ ಇಲ್ವೇನೋ.
ಅನಂದರೆಡ್ಡಿ: ಅದು ಚೆನ್ನಾಗಿ ಮೈಗೆ ಹತ್ತಿದಾಗ ತಲೆನೋವು ಜ್ವರ ಬರೋದು. ಚೆನ್ನಾಗಿ ಮೈಗೆ ಇಳಿಲಿ.
ಕೃಷ್ಣಮ್ಮ: ಹುಂ..
ಅನಂದರೆಡ್ಡಿ: ಯಾರದು
ಕೃಷ್ಣಮ್ಮ: ನನ್ನ ಮಗಳು.
ಅನಂದರೆಡ್ಡಿ: ಹುಂ ನನಗೆ ಬಹಳ ಬೇಜರಾಗಿ ಹೋಗಿದೆ. ಪ್ರಮಾಣಿಕವಾಗಿ ಹೇಳ್ತಿದ್ದೇನೆ. ತಡೆದುಕೊಳ್ಳಲು ಆಗುತ್ತಿಲ್ಲ.
ಕೃಷ್ಣಮ್ಮ: ಹಾ..
ಅನಂದರೆಡ್ಡಿ: ಅವನ ನೋಡಿದ್ರೆ ನಂಗೆ ಹಲ್ಲು ಕಚ್ಚಬೇಕು ಅನಿಸುತ್ತೆ ಕೋಪ ಬರುತ್ತೆ. ಏನಾದ್ರೂ ಮಾಡಿಬೇಗ ಮುಗಿಸಿಬಿಟ್ರೇ? ನನಗೆ ಓಕೆ. ಇಲ್ಲ ಅಂದ್ರೆ ನನಗೆ ಬಹಳ ಕಷ್ಟ ಆಗುತ್ತೆ. ಏನ್ ಮಾಡ್ತೀಯಾ ಈಗ
ಕೃಷ್ಣಮ್ಮ: ಹು ಹಂಗೆ ಮಾಡ್ತೀನಿ.
ಅನಂದರೆಡ್ಡಿ: ಹಾ
ಕೃಷ್ಣಮ್ಮ: ಹಾಗೆ ಮಾಡೋಣ ಬಿಡು.
ಅನಂದರೆಡ್ಡಿ: ಹುಂ ನಂಗೆ ಜಾಸ್ತಿ ಭಾದೆ ಆಗೋಗಿದೆ.
ಕೃಷ್ಣಮ್ಮ: ಹಲೋ ಏನು ಕೇಳಿಸ್ತಿಲ್ಲ.
ಅನಂದರೆಡ್ಡಿ: ಮೂರು ತಿಂಗಳು ಆಯ್ತೇನೇ? ಅವನ ಮುಖ ನೋಡಿದ್ರೇ ಆಗಲ್ಲ. ಏನೋ ಕಷ್ಟ ನಂಗೆ ಈ ಟೆನ್ಷನ್
ಕೃಷ್ಣಮ್ಮ: ಏನೂ ಟೆನ್ಷನ್ ತಗೋಬೇಡ ಆರಾಮಾಗಿರು.
ಅನಂದ್ ರೆಡ್ಡಿ: ಏನೂ ಟೆನ್ಷನ್ ಇಲ್ಲ. ವಯಸ್ಸಲ್ಲಿ ಏನೂ ಮಾಡಿದರ ವಯಸ್ಸಾದ ಮೇಲೆ ಏನು ಮಾಡೋದು ಅದೇ ಬಾಧೆ ನಂಗೆ.
ಕೃಷ್ಣಮ್ಮ: ಏನ್ ಮಾಡ್ತೀಯಾ? ಮೂರು ಸಲ ಮುಂದೆ ಬಂದು ಹೋಯ್ತು.
ಹಾಸನ: ಪತ್ನಿಯೇ ಪತಿಗೆ ಜ್ಯೂಸ್ ನಲ್ಲಿ ನಿದ್ದೆ ಮಾತ್ರೆ ಕುಡಿಸಿ ಇಂಜೆಕ್ಷನ್ ನೀಡಿ ಹತ್ಯೆ ಮಾಡಿದ ಆರೋಪ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಆರೋಪಿಯಾಗಿರುವ ಪತ್ನಿಗೆ ಬೇರೊಬ್ಬನ ಜೊತೆ ಸ್ನೇಹ ಇರುವ ವಿಚಾರ ಈಗ ಬೆಳಕಿಗೆ ಬಂದಿದೆ.
ಹಾಸನ ತಾಲೂಕು ಕಿತ್ತನಕೆರೆಯಲ್ಲಿ ಕೃಷಿ ಮಾಡುತ್ತಿದ್ದ ವಿಶ್ವನಾಥ್ ಮತ್ತು ಮೆಡಿಕಲ್ ಶಾಪ್ ನಲ್ಲಿ ಉದ್ಯೋಗದಲ್ಲಿದ್ದ ಕೌಶಿಕ ಗ್ರಾಮದ ಆಶಾ ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ಆದರೆ ಈ ಮದುವೆಗೆ ಮೊದಲು ಸಂತೋಷ್ ಎಂಬಾತನ ಜೊತೆ ಆಶಾ ಸ್ನೇಹ ಬೆಳೆಸಿದ್ದಳು. ಕಳೆದ ಐದಾರು ವರ್ಷಗಳ ಹಿಂದಿನಿಂದಲೂ ಆಶಾ ಮತ್ತು ಸಂತೋಷ್ ಗೆಳೆತನ ಹೊಂದಿದ್ದು, ಮದುವೆಯಾಗಿ ಮೂರು ತಿಂಗಳಾಗಿದ್ದರೂ ಆಶಾ ಅಂತರ ಕಾಯ್ದುಕೊಂಡಿದ್ದಳು.
ಪ್ರವಾಸ ಹೋಗಿದ್ದ ವೇಳೆ ಆಶಾಳಿಗೆ ಪರಿಚಯವಾಗಿದ್ದ ಸಂತೋಷ್ ನಂತರ ಆಕೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಅಷ್ಟೇ ಅಲ್ಲದೇ ಆಶಾಳಿಗೆ ಮೊಬೈಲ್ ಕೊಡಿಸಿದ್ದ. ಈ ಎಲ್ಲ ಮಾಹಿತಿಯನ್ನು ಆಶಾಳ ಮಾವ ಬೋರಶೆಟ್ಟಿ ತಿಳಿಸಿದ್ದು, ಈ ಕೊಲೆಗೆ ಸಂತೋಷ್ ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ.
ಏನಿದು ಕೊಲೆ ಕೇಸ್?
ವಿಶ್ವನಾಥ್ ಮತ್ತು ಆಶಾ, ಹತ್ತಿರದ ಸಂಬಂಧಿಗಳಾಗಿದ್ದರಿಂದ ಚಿಕ್ಕಂದಿನಿಂದಲೂ ಒಟ್ಟಿಗೆ ಬೆಳೆದಿದ್ದರು. ಈ ಕಾರಣಕ್ಕೆ ಫೆಬ್ರವರಿ 15 ರಂದು ಇವರಿಬ್ಬರ ಮದುವೆ ನಡೆದಿತ್ತು. ಮದುವೆಗೆ ಎರಡೂ ಮನೆಯವರ ಸಹಕಾರವಿತ್ತು. ಮದುವೆಯಾದ ಒಂದೆರಡು ತಿಂಗಳವರೆಗೂ ನವಜೋಡಿ ಸಂಬಂಧಿಕರ ಮನೆ, ಸಿನಿಮಾ ಹೀಗೆ ಎಲ್ಲಾ ಕಡೆ ಓಡಾಡಿಕೊಂಡಿದ್ದರು. ಆದ್ರೆ ಇಬ್ಬರ ನಡುವೆ ಏನಾಯಿತೋ ಏನೋ ಮದುವೆಯಾದ ಎರಡೇ ತಿಂಗಳಿಗೆ ದಾಂಪತ್ಯದಲ್ಲಿ ಬಿರುಕು ಮೂಡಿತ್ತು.
ಆದರೆ ಸಂಬಂಧ ಹಾಳಾಗಲಿದೆ ಎನ್ನುವ ಒಂದೇ ಕಾರಣಕ್ಕೆ ಈ ವಿಷಯವನ್ನು ವಿಶ್ವನಾಥ್ ಯಾರ ಬಳಿಯೂ ಹೇಳಿರಲಿಲ್ಲ. ಕಳೆದ ಏಪ್ರಿಲ್ 24 ರಂದು ಸಂಬಂಧಿಕರ ಮಗುವಿನ ನಾಮಕರಣಕ್ಕೆ ಹೋಗಬೇಕು ಎಂದು ಗಂಡನೊಂದಿಗೆ ಹಾಸನಕ್ಕೆ ಆಶಾ ಹೋಗಿದ್ದಳು. ಮಹಾರಾಜ ಪಾರ್ಕ್ ನಲ್ಲಿ ಇಬ್ಬರು ಕುಳಿತುಕೊಂಡಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ವಿಶ್ವನಾಥ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಸಂಜೆ ಮನೆಗೆ ಬಂದ ವಿಶ್ವನಾಥ್ ನಡೆದ ಘಟನೆಯನ್ನು ವಿವರಿಸಿದ್ದಾರೆ. ಮಾರನೇ ದಿನ ಅನಾರೋಗ್ಯಕ್ಕೆ ತುತ್ತಾಗಿದ್ದ ವಿಶ್ವನಾಥ್ ಅವರನ್ನು ಹಾಸನ, ಅಲ್ಲಿಂದ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ವಿಶ್ವನಾಥ್ ಅವರು ಮೇ 2ರ ಸಂಜೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ವಿಶ್ವನಾಥ್ ಹೇಳಿದ್ದೇನು?
ಮದುವೆಯಾದ ಬಳಿಕ ಹುಟ್ಟುವ ಮಗುವಿನ ಬಗ್ಗೆ ನಮ್ಮಲ್ಲಿ ಚರ್ಚೆ ನಡೆದಿತ್ತು. ಮಹಾರಾಜ ಪಾರ್ಕ್ ನಲ್ಲಿ ನಾವು ಕುಳಿತ್ತಿದ್ದಾಗ ಆಶಾ ಭವಿಷ್ಯದಲ್ಲಿ ಹುಟ್ಟುವ ಮಗು ಬೆಳ್ಳಗಿರಬೇಕು ಎಂದು ಹೇಳಿ ಮಾತ್ರೆ ಮತ್ತು ಜ್ಯೂಸ್ ನೀಡಿದ್ದಳು. ಆಕೆಯ ಮಾತನ್ನು ನಂಬಿ ನಾನು ಜ್ಯೂಸ್‍ನೊಂದಿಗೆ 4-5 ಮಾತ್ರೆ ನುಂಗಿದ್ದೇನೆ. ಬಳಿಕ ಆಕೆ ಇಂಜೆಕ್ಷನ್ ನೀಡಿದ್ದಾಳೆ. ಬಳಿಕ ನನಗೆ ಏನಾಯ್ತು ಗೊತ್ತಿಲ್ಲ ಎಂದು ಎಂದು ವಿಶ್ವನಾಥ್ ಸಂಬಂಧಿಕರಿಗೆ ಆಸ್ಪತ್ರೆಯಲ್ಲಿ ತಿಳಿಸಿದ್ದರು.
ಸಂಬಂಧಿಕರು ಹೇಳೋದು ಏನು?
ಗಂಡ ತನ್ನ ಬಣ್ಣಗೆ ಮ್ಯಾಚ್ ಆಗಲ್ಲ. ನನಗಿಂತ ಎತ್ತರ ಆಗಿದ್ದಾನೆ ಎಂದು ಆಶಾ ನಿಂದಿಸುತ್ತಿದ್ದಳು. ಆಶಾ ಮೊದಲೇ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದುರಿಂದ ಆಕೆ ದುರುದ್ದೇಶದಿಂದಲೇ ಹೀಗೆ ಮಾಡಿದ್ದಾಳೆ. ಅಲ್ಲದೇ ಆಕೆಗೆ ಬೇರೊಬ್ಬರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ತಿಳಿದು ಮುಂದೆ ಗಂಡ ಎಲ್ಲಿ ಅಡ್ಡಿ ಬರುತ್ತಾನೋ ಎಂಬ ಕಾರಣದಿಂದ ವಿಷದ ಜ್ಯೂಸ್ ನೀಡಿದ್ದಾಳೆ. ಪತಿ ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಆಕೆ ಅಲ್ಲಿಂದ ಪರಾರಿಯಾಗಿದ್ದಾಳೆ ಎಂದು ವಿಶ್ವನಾಥ್ ಅವರ ತಂದೆ ಬೋರ ಶೆಟ್ಟಿ ಆರೋಪಿಸಿದ್ದಾರೆ.
ತನಿಖೆ ಎಲ್ಲಿಯವರೆಗೆ ಬಂದಿದೆ?
ವಿಶ್ವನಾಥ್ ಮನೆಯವರು ನೀಡಿದ ದೂರು ಆಧರಿಸಿ ಆಶಾಳನ್ನು ವಶಕ್ಕೆ ಪಡೆದಿರುವ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆ ವರದಿ ಬಂದ ನಂತರ ವಿಶ್ವನಾಥ್ ಸಾವಿನ ರಹಸ್ಯ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಬೆಂಗಳೂರು: ಪರಪುರುಷರು ಪತ್ನಿಯನ್ನು ನೋಡಬಾರದು ಎನ್ನುವ ಕಾರಣಕ್ಕೆ ಪತ್ನಿಯ ಕೇಶಮುಂಡನ ಮಾಡಿ ಮುಖಕ್ಕೆ ಗುದ್ದಿರುವ ಘಟನೆ ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏಳು ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಿಳೆಗೆ ನಾಲ್ಕು ವರ್ಷದ ಮಗನಿದ್ದಾನೆ. ಆದ್ರೆ ಪತಿರಾಯನಿಗೆ ಹೆಂಡತಿ ಸೌಂದರ್ಯದ ಚಿಂತೆ. ಸೌಂದರ್ಯವತಿಯಾದ ನನ್ನ ಹೆಂಡತಿಯನ್ನು ಬೇರೆಯವರು ನೋಡ್ತಾರೆ ಎನ್ನುವ ಕೊರಗು ಕಾಡುತಿತ್ತು. ಹೀಗಾಗಿ ಪತ್ನಿಯೊಂದಿಗೆ ಪತಿರಾಯ ಈ ವಿಚಾರದ ಬಗ್ಗೆ ಆಗಾಗ ಜಗಳ ಮಾಡುತ್ತಿದ್ದ.
ಮದುವೆಗೂ ಮುಂಚಿನಿಂದ ಮಹಿಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಬಿಡು ನಿನ್ನನ್ನ ಎಲ್ಲರೂ ನೋಡ್ತಾರೆ ಅಂತಾ ಪತ್ನಿಗೆ ಹಿಂಸೆ ಕೊಡುತ್ತಿದ್ದ. ಜಗಳ ಜಾಸ್ತಿಯಾಗಿ ಏಪ್ರಿಲ್ 17 ರಂದು ಹೆಂಡತಿಯ ಮುಖ ವಿರೂಪಗೊಳಿಸಿ ತಲೆ ಬೋಳಿಸಿದ್ದಾನೆ. ನೊಂದ ಮಹಿಳೆ ಈ ಬಗ್ಗೆ ವನಿತಾ ಸಹಾಯವಾಣಿ ಮೊರೆ ಹೋಗಿದ್ದಾರೆ.
ನನಗೆ ಯಾವುದೇ ಕೌನ್ಸಿಲಿಂಗ್ ಬೇಡ. ನನ್ನ ಗಂಡನಿಂದ ಮುಕ್ತಿ ಕೊಡಿ ಅಂತಾ ನೊಂದ ಮಹಿಳೆ ಕೇಳಿದ್ದಾರೆ. ಮಹಿಳೆಯ ಸ್ಥಿತಿಯನ್ನು ನೋಡಿದ ಮಹಿಳಾ ಸಹಾಯವಾಣಿ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಈ ಬಗ್ಗೆ ಮಹಿಳೆ ಕಡೆಯಿಂದ ದೂರು ದಾಖಲಾಗಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಜಿ ಹಳ್ಳಿ ಪೊಲೀಸರು ಹೇಳಿದ್ದಾರೆ.
ವನಿತಾ ಸಹಾಯವಾಣಿ ಮುಖ್ಯಸ್ಥೆ ರಾಣಿ ಶೆಟ್ಟಿ ಪ್ರತಿಕ್ರಿಯಿಸಿ, ಕೆಲ ದಿನಗಳ ಹಿಂದೆ ನೊಂದ ಮಹಿಳೆ ನಮ್ಮ ಬಳಿ ಬಂದಿದ್ದಳು. ವಾರಗಳ ಕಾಲ ಮನೆಯಲ್ಲಿ ಕೂಡಿ ಹಾಕಿ ಪತಿ ಹಿಂಸೆ ನೀಡಿದ್ದಾನೆ ಎಂದು ಹೇಳಿಕೆ ನೀಡಿದ್ದಳು. ಈ ವೇಳೆ ನನಗೆ ವಿಚ್ಚೇದನ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಳು. ನಾವು ಕೌನ್ಸಿಲಿಂಗ್ ಮಾಡುತ್ತೇವೆ ಎಂದು ಹೇಳಿದ್ದಕ್ಕೆ, ಆಕೆ, ನನಗೆ ಆತನ ಜೊತೆ ಬದುಕಲು ಇಷ್ಟವಿಲ್ಲ. ನೀವು ಆತನಿಗೆ ಕೌನ್ಸಿಲಿಂಗ್ ಮಾಡಿದ್ರೆ ಅವನು ನನ್ನ ಹೊಡೆಯುತ್ತಾನೆ, ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ ಅವರು ತಿಳಿಸಿದ್ದಾರೆ.
ನವದೆಹಲಿ: 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಕುಸ್ತಿಯಲ್ಲಿ ಕಂಚು ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದ ಸಾಕ್ಷಿ ಮಲಿಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 22 ವರ್ಷದ ಸತ್ಯವರ್ತ್ ಕಡಿಯಾನ್ ಜೊತೆ ರೊಹ್ಟಕ್ ನಲ್ಲಿ ಭಾನುವಾರ ಸಪ್ತಪದಿ ತುಳಿದಿದ್ದಾರೆ.
ಕಳೆದ ವರ್ಷ ಅಕ್ಟೋಬರ್‍ನಲ್ಲಿ ಸಾಕ್ಷಿ ಅವರಿಗೆ ಸತ್ಯವರ್ತ್ ಜೊತೆ ನಿಶ್ಚಿತಾರ್ಥವಾಗಿತ್ತು. ಸಾಕ್ಷಿ ಅವರು ತಮ್ಮ ಮೆಹಂದಿ ಕಾರ್ಯಕ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
2008ರಲ್ಲಿ ಬೀಜಿಂಗ್ ಹಾಗೂ 2012ರಲ್ಲಿ ಲಂಡನ್ ಒಲಿಂಪಿಕ್ಸ್ ನಲ್ಲಿ ಕುಸ್ತಿಯಲ್ಲಿ ಪದಕಗಳನ್ನು ಗೆದ್ದಿದ್ದ ಸುಶಿಲ್ ಕುಮಾರ್ ಸಾಕ್ಷಿ ಮದುವೆಯಲ್ಲಿ ಭಾಗಿಯಾಗಿದ್ರು.
ಸತ್ಯವರ್ತ್ ಕೂಡ ಕುಸ್ತಿಪಟುವಾಗಿದ್ದು, ಸಾಕ್ಷಿ ಮಲಿಕ್‍ಗಿಂತ 2 ವರ್ಷ ಚಿಕ್ಕವರು. ರೊಹ್ಟಕ್‍ನಲ್ಲಿ ತಂದೆಯ ಅಖಾಡಾದಲ್ಲಿ ಸತ್ಯವರ್ತ್ ತರಬೇತಿ ನೀಡ್ತಿದ್ದಾರೆ. ಸತ್ಯವರ್ತ್ ಕೂಡ ಒಬ್ಬ ಒಳ್ಳೆಯ ಆಟಗಾರರಾಗಿದ್ದು, ಗ್ಲಾಸ್ಗೋನಲ್ಲಿ ನಡೆದ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಅದೇ ವರ್ಷ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಕಂಚು ಗೆದ್ದಿದ್ದರು.
ಕಳೆದ ವರ್ಷ ಬ್ರೆಜಿಲ್‍ನ ರಿಯೋ ಡಿ ಜನೈರೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಭಾವಹಿಸಿದ್ದ ಸಾಕ್ಷಿ ಕುಸ್ತಿಯಲ್ಲಿ ಭಾರತಕ್ಕೆ ಕಂಚು ತಂದುಕೊಟ್ಟಿದ್ದರು. ಈ ಮೂಲಕ ಒಲಿಪಿಂಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಸಾಕ್ಷಿ ಪಾತ್ರರಾದ್ರು. ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದ ಬಳಿಕ ಭಾರತದ ಧ್ವಜವನ್ನು ಹಿಡಿದು ಸಾಕ್ಷಿ ಸಂಭ್ರಮಿಸಿದ್ದರು.