Tag: ದಾಂಪತ್ಯ ಜೀವನ

  • ಧವನ್ ದಾಂಪತ್ಯ ಜೀವನದಲ್ಲಿ ಬಿರುಕು- ವಿಚ್ಛೇದನಕ್ಕೆ ಮುಂದಾದ ಪತ್ನಿ

    ಧವನ್ ದಾಂಪತ್ಯ ಜೀವನದಲ್ಲಿ ಬಿರುಕು- ವಿಚ್ಛೇದನಕ್ಕೆ ಮುಂದಾದ ಪತ್ನಿ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ದಾಂಪತ್ಯ ಜೀವನದಲ್ಲಿ ಬಿರುಕು ಎದ್ದಿದೆ. ಪತ್ನಿ ಆಸ್ಟ್ರೇಲಿಯಾದ ಬಾಕ್ಸರ್ ಆಯೇಷಾ ವಿಚ್ಛೇದನ ಪಡೆದಿರೋದಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಧವನ್ 2012ರಲ್ಲಿ ಆಯೇಷಾರನ್ನು ಮದುವೆಯಾಗಿದ್ದರು. ಬಳಿಕ ಅನ್ಯೋನ್ಯವಾಗಿಯೇ ಇದ್ದ ದಂಪತಿ, ಇದೀಗ 8 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‍ಬೈ ಹೇಳಿರುವುದಾಗಿ ಆಯೇಷಾ ಇನ್‍ಸ್ಟಾಗ್ರಾಮ್‍ನಲ್ಲಿ ಬಹಿರಂಗಪಡಿಸಿದ್ದಾರೆ. ‘ವಿಚ್ಛೇದನ ಬಹಳ ಕೆಟ್ಟ ಪದ ಎಂದು ನಾನು ಭಾವಿಸಿದ್ದೇನೆ. ಆದರೆ ನನ್ನ ಜೀವನದಲ್ಲಿ ಇದು ಎರಡನೇ ಬಾರಿ ಸಂಭವಿಸಿದೆ. ಮೊದಲ ಬಾರಿ ವಿಚ್ಛೇದನೆ ಪಡೆದಾಗ ನಾನು ತುಂಬಾ ಹೆದರಿದ್ದೆ ಜೊತೆಗೆ ಸೋತ ಅನುಭವವಾಗಿತ್ತು. ಆದರೆ ನಾನು ಏನೂ ತಪ್ಪು ಮಾಡಿಲ್ಲ ಎಂಬ ಭಾವನೆ ಬಂದಿತ್ತು’ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರನ್‍ನಂತೆ ಏರುತ್ತಿದೆ ವಿರಾಟ್ ಕೊಹ್ಲಿ ಫಾಲೋವರ್ಸ್ ಸಂಖ್ಯೆ

     

    View this post on Instagram

     

    A post shared by Aesha Mukerji (@apwithaesha)

    ಆಯೇಷಾಗೆ ಇದು ಎರಡನೇ ವಿಚ್ಛೇದನವಾಗಿದ್ದು, ಮೊದಲ ಗಂಡನಿಂದ ದೂರವಾದ ಬಳಿಕ ಧವನ್ ಅವರನ್ನು ವರಿಸಿದ್ದರು. ಆಯೇಷಾ ಈಗಾಗಲೇ ಮೂವರು ಮಕ್ಕಳಿದ್ದು, ಮೊದಲ ಗಂಡನಿಂದ ಇಬ್ಬರು ಹೆಣ್ಣು ಮಕ್ಕಳನ್ನು ಪಡೆದಿದ್ದರು. ನಂತರ ಧವನ್ ಮತ್ತು ಆಯೇಷಾ ದಂಪತಿಗೆ ಗಂಡು ಮಗು ಜನಿಸಿ, ಮಗನಿಗೆ ಜೊರಾವರ್ ಎಂದು ಹೆಸರಿಟ್ಟಿದ್ದರು. ಕೆಲದಿನಗಳ ಹಿಂದೆ ಇವರಿಬ್ಬರು ದಾಂಪತ್ಯ ಜೀವನದ ಬಗ್ಗೆ ವರದಿಯಾಗಿತ್ತು. ಆದರೆ ಇದೀಗ ಆಯೇಷಾ ಅವರ ಪೋಸ್ಟ್ ಮೂಲಕ ಸ್ಪಷ್ಟವಾಗಿದೆ. ಇದನ್ನೂ ಓದಿ: ವಿಶೇಷ ಅತಿಥಿಯನ್ನು ಹಿಡಿದುಕೊಂಡು ಪೃಥ್ವಿ ಶಾ ಪ್ರಯಾಣ

  • ಮಾಸ್ಕ್ ಧರಿಸಿ ಮದುವೆಯಾದ ಚಂದನ್, ಕವಿತಾ ಗೌಡ

    ಮಾಸ್ಕ್ ಧರಿಸಿ ಮದುವೆಯಾದ ಚಂದನ್, ಕವಿತಾ ಗೌಡ

    ಬೆಂಗಳೂರು: ನಟ ಚಂದನ್ ಕುಮಾರ್, ನಟಿ ಕವಿತಾ ಗೌಡ ಧಾರಾವಾಹಿಯಲ್ಲಿ ಯಶಸ್ವಿ ಜೋಡಿಯಾಗಿ ಕಾಣಿಸಿಕೊಂಡಿದ್ದ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಏಪ್ರಿಲ್ ಒಂದರಂದು ಈ ಜೋಡಿ ಎಂಗೇಜ್‍ಮೆಂಟ್ ಕೂಡ ಮಾಡಿಕೊಂಡಿತ್ತು. ಇದೀಗ ಸರಳವಾಗಿ ಚಂದನ್ ಮತ್ತು ಕವಿತಾ ಸಪ್ತಪದಿ ತುಳಿದು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇಂದು ನೂತನ ದಂಪತಿಗಳು ಮಾಸ್ಕ್ ಧರಿಸಿಯೇ ಮದುವೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿದೆ. ಬೆಂಗಳೂರಿನ ಸಹಕಾರ ನಗರದಲ್ಲಿರುವ ಚಂದನ್ ಮನೆಯಲ್ಲಿ ಈ ಮದುವೆ ನೆರವೇರಿದೆ.

     

    View this post on Instagram

     

    A post shared by K A V I T H A (@iam.kavitha_official)

    ಏಪ್ರಿಲ್ ಒಂದರಂದು ಬೆಂಗಳೂರಿನ ಖಾಸಗಿ ಹೋಟೆಲ್‍ವೊಂದರಲ್ಲಿ ಚಂದನ್ ಮತ್ತು ಕವಿತಾ ಅವರ ನಿಶ್ಚಿತಾರ್ಥ ಕಾರ್ಯಕ್ರಮವು ನೆರವೇರಿತ್ತು. ಆನಂತರ ಮೇ 13-14ರಂದು ನಾವು ಸಪ್ತಪದಿ ತುಳಿಯಲಿದ್ದೇವೆ ಎಂದು ಈ ಜೋಡಿ ಹೇಳಿಕೊಂಡಿತ್ತು. ಕನ್ನಡ ಕಿರುತೆರೆಯ ಯಶಸ್ವಿ ಧಾರಾವಾಹಿಯಲ್ಲಿ ಚಂದು ಮತ್ತು ಚಿನ್ನು ಪಾತ್ರಗಳಲ್ಲಿ ಮಿಂಚಿದವರು ಚಂದನ್ ಕುಮಾರ್ ಮತ್ತು ಕವಿತಾ ಗೌಡ. ಧಾರಾವಾಹಿಯಲ್ಲಿ ಯಶಸ್ವಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈ ಸೆಲೆಬ್ರಿಟಿಗಳು ಈಗ ನಿಜಜೀವನದಲ್ಲೂ ಜೋಡಿಯಾಗಿದ್ದಾರೆ.

     

    View this post on Instagram

     

    A post shared by K A V I T H A (@iam.kavitha_official)

    ಪ್ರಸ್ತುತ ಕೊರೊನಾ ಲಾಕ್‍ಡೌನ್ ಇರುವುರಿಂದ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ, ಕೋವಿಡ್ ನಿಯಮಗಳ ಅನ್ವಯದಂತೆ ಚಂದನ್ ಮತ್ತು ಕವಿತಾ ಅವರ ವಿವಾಹವು ಸರಳವಾಗಿ ನಡೆದಿದೆ. ಚಂದನ್ ಮತ್ತು ಕವಿತಾ ಮಾಸ್ಕ್ ಧರಿಸಿಯೇ ಮದುವೆಯಾಗಿದ್ದು ವಿಶೇಷವಾಗಿತ್ತು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಇದೀಗ ತಮ್ಮ ಪ್ರೀತಿಗೆ ಮದುವೆಯ ಮುದ್ರೆಯನ್ನು ಒತ್ತಿದೆ.