ತುಮಕೂರು: ಅನೈತಿಕ ಸಂಬಂಧವಿದೆ (Illicit Relationship) ಎಂದು ಅನುಮಾನಗೊಂಡ ಪತಿಯೊಬ್ಬ (Husband) ಸಿಟ್ಟಾಗಿ ಪತ್ನಿ (Wife) ಮತ್ತು ಮೂವರು ಮಕ್ಕಳ ಮೇಲೆ ಬೆಂಕಿ ಹಚ್ಚಿದ ಘಟನೆ ಮಧುಗಿರಿ ತಾಲ್ಲೂಕಿನ ಮುದ್ದನೇರಳೆಕೆರೆ ಗ್ರಾಮದಲ್ಲಿ ನಡೆದಿದೆ.
ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳು ಮಲಗಿದ್ದ ವೇಳೆ ಅವರ ಮೇಲೆ ಪೆಟ್ರೋಲ್ (Petrol) ಸುರಿದು ಬೆಂಕಿ ಹಚ್ಚಿ ರೂಮಿಗೆ ಬೀಗ ಹಾಕಿ ಪರಾರಿಯಾಗಿದ್ದಾನೆ. ರಾಮಾಂಜನಪ್ಪ ಕೃತ್ಯ ಎಸಗಿದ್ದು ಪತ್ನಿ ಶಾಂತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಾರ್ಚ್ 14ರಿಂದಲೇ ದಶಪಥ ರಸ್ತೆಯಲ್ಲಿ ಟೋಲ್ ಸಂಗ್ರಹ ಶುರು
ಅಕ್ಷಯ(18) ಅಕ್ಷತಾ(13) ಅಮೃತಾ(10) ಗಾಯಗೊಂಡ ಹೆಣ್ಣುಮಕ್ಕಳು. ಮೂವರನ್ನು ತುಮಕೂರಿನ ಜಿಲ್ಲಾ ಆಸ್ಪತ್ರಗೆ (Tumakuru District Hospital) ದಾಖಲಿಸಲಾಗಿತ್ತು. ಈ ಪೈಕಿ ಗಂಭೀರ ಗಾಯಗೊಂಡ ಒಬ್ಬಳನ್ನು ಬೆಂಗಳೂರಿನ ಆಸ್ಪತ್ರಗೆ ದಾಖಲಿಸಲಾಗಿದೆ. ಈ ಸಂಬಂಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಶಿ ಕುಮಾರ್ ಹಾಗೂ ಸ್ವಾತಿ ಅವರ ವಿವಾಹ ಮಹೋತ್ಸವ ಆಗಸ್ಟ್ 6 ಮತ್ತು 7 ರಂದು ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನ ಕನ್ವೆನ್ಷನ್ ಸೆಂಟರ್‌ವೊಂದರಲ್ಲಿ ಶಶಿ ಕುಮಾರ್ ಹಾಗೂ ಸ್ವಾತಿ ಅವರ ಕಲ್ಯಾಣ ಜರುಗಿದೆ. ಆಗಸ್ಟ್ 7 ರಂದು ಬೆಳಗ್ಗೆ 9 ರಿಂದ 10:15 ವರೆಗೆ ಇದ್ದ ಶುಭ ಮುಹೂರ್ತದಲ್ಲಿ ಸ್ವಾತಿ ಮತ್ತು ಶಶಿಕುಮಾರ್ ಹೊಸ ಬಾಳಿಗೆ ನಾಂದಿ ಹಾಡಿದ್ದಾರೆ.
ಚೆನ್ನೈ: ಆಸ್ಟ್ರೇಲಿಯಾದ ಆಲ್‍ರೌಂಡರ್ ಗ್ಲೆನ್ ಮಾಕ್ಸ್‌ವೆಲ್, ವಿನಿ ರಾಮನ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ಡಾನ್ಸ್ ಮಾಡುತ್ತಾ ಹಾರ ಬದಲಿಸಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಮಾಕ್ಸ್‌ವೆಲ್ ಮತ್ತು ವಿನಿ ರಾಮನ್ ಜೋಡಿಯು 2020 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಭಾರತೀಯ ಮೂಲದ ವಿನಿ ರಾಮನ್ ಅವರನ್ನು ಮಾರ್ಚ್ 18 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು.
ಭಾರತಕ್ಕೆ ಆಗಮಿಸಿರುವ ದಂಪತಿ ಚೆನ್ನೈನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ತಮಿಳು ಸಂಪ್ರದಾಯದ ಪ್ರಕಾರ ವಿನಿ ರಾಮನ್ ಅವರಿಗೆ ಮಾಕ್ಸ್‌ವೆಲ್ ಮಾಂಗಲ್ಯವನ್ನು ಕಟ್ಟಿದ್ದಾರೆ. ಡ್ಯಾನ್ಸ್ ಮಾಡುತ್ತಾ ಹಾರ ಬದಲಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಲಕ್ನೋಗೆ ಲಾಕ್ ಹಾಕಿದ ಟೈಟಾನ್ಸ್ – ಗುಜರಾತ್‍ಗೆ 5 ವಿಕೆಟ್‍ಗಳ ಜಯ
ವೀಡಿಯೋದಲ್ಲಿ ಏನಿದೆ?: ಗ್ಲೆನ್ ಮಾಕ್ಸ್‌ವೆಲ್ ಭಾರತೀಯ ವರನಂತೆ ಶೇರ್ವಾನಿ ಧರಿಸಿದ್ದಾರೆ. ಕೈಯಲ್ಲಿ ಹೂವಿನ ಮಾಲೆ ಹಿಡಿದು ನೃತ್ಯ ಮಾಡುತ್ತಾ ವಿನಿ ರಾಮನ್ ಅವರಿಗೆ ಹಾರ ಹಾಕುತ್ತಿರುವುದು ಈ ವೀಡಿಯೋದಲ್ಲಿ ಕಾಣಬಹುದಾಗಿದೆ.
ಮಾಕ್ಸ್‌ವೆಲ್ ಅವರ ಪತ್ನಿ ವಿನಿ ರಾಮನ್ ಭಾರತೀಯ ಮೂಲದ ಆಸ್ಟ್ರೇಲಿಯಾ ಪ್ರಜೆ. ಅವರು ಹುಟ್ಟಿದ್ದು ಮತ್ತು ಓದಿದ್ದು ಆಸ್ಟ್ರೇಲಿಯಾದಲ್ಲಿ. ತಮಿಳುನಾಡು ಮೂಲದವರಾದ ವಿನಿ ಅವರ ತಂದೆ ವೆಂಕಟ ರಾಮನ್ ಮತ್ತು ತಾಯಿ ವಿಜಯಲಕ್ಷ್ಮಿ ಮಗಳು ಜನಿಸುವ ಮೊದಲೇ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದರು. ಮಾಕ್ಸ್‌ವೆಲ್ ಮದುವೆಯ ಕಾರಣದಿಂದ ಪಾಕ್ ವಿರುದ್ದದ ಸರಣಿಯಿಂದ ಹೊರಗುಳಿದಿದ್ದರು.
ಸ್ಯಾಂಡಲ್ವುಡ್, ಟಾಲಿವುಡ್, ಕಿರುತೆರೆಯಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಜನಮನ್ನಣೆ ಪಡೆದಿರುವ ನಟಿ ತೇಜಸ್ವಿನಿ ಪ್ರಕಾಶ್, ಖಾಸಗಿ ಕಂಪನಿಯ ಉದ್ಯೋಗಿ ಪಣಿ ವರ್ಮಾ ಜೊತೆಗೆ ರವಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪಣಿ ಮತ್ತು ತೇಜಸ್ವಿನಿ ಹಲವು ವರ್ಷಗಳಿಂದ ಸ್ನೇಹಿತರು, ಈ ಸ್ನೇಹವೇ ಪ್ರೀತಿಗೆ ತಿರುಗಿ ಇದೀ ಹೊಸ ಜೀವನಕ್ಕೆ ನಾಂದಿ ಹಾಡಿದೆ. ಈ ಜೋಡಿಯ ಮದುವೆ ಸಂಭ್ರಮದಲ್ಲಿ ವಧು, ವರರ ಕುಟುಂಬಸ್ಥರು, ಅನೇಕ ಸಿನಿ ಮತ್ತು ಕಿರುತೆರೆ ಕಲಾವಿದರು ಭಾಗಿಯಾಗಿದ್ದರು. ಮದುವೆ ಅದ್ಧೂರಿಯಾಗಿ ನಡೆದದ್ದು ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ:ಹಸೆಮಣೆ ಏರಲಿದ್ದಾರೆ ನಟಿ ತೇಜಸ್ವಿನಿ ಪ್ರಕಾಶ್
ಕೆಂಪು ಮತ್ತು ಗೋಲ್ಡ್ ಬಣ್ಣದ ರೇಶ್ಮೆ ಸೀರೆಯಲ್ಲಿ ತೇಜಸ್ವಿನಿ, ಪಣಿ ವರ್ಮಾ ಕ್ರೀಮ್ ಬಣ್ಣದ ರೇಶ್ಮೆ ಶರ್ಟ್, ಪಂಚೆಯಲ್ಲಿ ನವ ದಂಪತಿ ಕಾಣಿಸಿಕೊಂಡಿದ್ದಾರೆ. ತೇಜಸ್ವಿನಿ ಮದುವೆಯಲ್ಲಿ ಕಿರುತೆರೆ ಸ್ನೇಹಿತರು, ನಟ ಪ್ರೇಮ್ ನೆನಪಿರಲಿ, ಸಿಹಿ ಕಹಿ ಚಂದ್ರು ಮತ್ತು ನಿರ್ದೇಶಕ ತರುಣ್ ಸುಧೀರ್, ನಟಿ ಕಾರಣ್ಯ ರಾಮ್ ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ
ನಟಿ ಕಾರುಣ್ಯ ರಾಮ್ ಅವರು ಸ್ನೇಹಿತೆ ತೇಜಸ್ವಿನಿ ಪ್ರಕಾಶ್ ಮದುವೆಯಲ್ಲಿ ಭಾಗಿಯಾದ್ದರ ವಿವಾಹದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಎರಡು ಹೃದಯಗಳು ಒಂದಾಗಿ ನಿಮ್ಮ ಭವಿಷ್ಯಕ್ಕಾಗಿ ಅತ್ಯುತ್ತಮವಾಗಿರಲಿ. ನಿಮ್ಮ ವಿವಾಹ ಜೀವನ ಸುಖಮಯವಾಗಿರಲಿ ಎಂದು ಹಾರೈಸಿ ಫೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ತೇಜಸ್ವಿನಿ ಪ್ರಕಾಶ್ ಅವರ ದಾಂಪತ್ಯ ಜೀವನಕ್ಕೆ ಶುಭ ಕೋರುತ್ತಿದ್ದಾರೆ.
ತೇಜಸ್ವಿನಿ ಕನ್ನಡ ಚಿತ್ರರಂಗ, ಕಿರುತೆರೆ, ಮಾಡೆಲಿಂಗ್ನಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದವರು. 2016ರಲ್ಲಿ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿ, ನಂತರದಲ್ಲಿ 2020ರಿಂದ ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ ಲಾವಣ್ಯ ಪಾತ್ರದ ಮೂಲಕ ಫೇಮಸ್ ಆದರು.
ಮಾತಾಡ್ ಮಾತಾಡ್ ಮಲ್ಲಿಗೆ, ಪ್ರೀತಿ ಏಕೆ ಭೂಮಿ ಮೇಲಿದೆ, ಅರಮನೆ, ರಾಬರ್ಟ್, ಕೃಷ್ಣ ಸೇರಿದಂತೆ ಈವರೆಗೆ 22 ಚಿತ್ರಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5ರಲ್ಲಿ ತೇಜಸ್ವಿನಿ ಸ್ಪರ್ಧಿಯಾಗಿದ್ದರು. ತಮ್ಮದೇ ಆಗಿರುವ ನಟನಾ ಶೈಲಿಯ ಮೂಲಕವಾಗಿ ಅಭಿಮಾನಿಗಳ ಬಳಗವನ್ನು ಸಂಪಾದಿಸಿದ್ದಾರೆ.
ನವದೆಹಲಿ: ಮಾಜಿ ರಾಷ್ಟ್ರಪತಿ ಜಾಕಿರ್ ಹುಸೇನ್ ಅವರ ಮರಿಮೊಮ್ಮಗನ ವಿವಾಹವನ್ನು ಮಹಿಳಾ ಖಾಜಿ ನೆರವೇರಿಸಿದ್ದಾರೆ.
ರೆಹಮಾನ್ ಮತ್ತು ಉರ್ಸಿಲಾ ಅಲಿ ದಾಂಪತ್ಯಕ್ಕೆ ಕಾಲಿಟ್ಟ ನವಜೋಡಿಗಳಾಗಿದ್ದಾರೆ. ಮಾಜಿ ರಾಷ್ಟ್ರಪತಿ ಜಾಕಿರ್ ಹುಸೇನ್ ಅವರ ಮೊಮ್ಮಗ ರೆಹಮಾನ್ ವಿವಾಹವನ್ನು ಮಹಿಳಾ ಖಾಜಿ ನೆರವೇರಿಸಿದರು. ಮದುವೆ ಸಮಾರಂಭದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ – 29 ಮಂದಿ ಕಾರ್ಯಕರ್ತರ ವಿರುದ್ಧ ಪ್ರಕರಣ
ಯೋಜನಾ ಆಯೋಗದ ಸದಸ್ಯರಾದ ಸೈಯದಾ ಸೈಯದೈನ್ ಹಮೀದ್ ಅವರು ರೆಹಮಾನ್ ಮತ್ತು ಉರ್ಸಿಲಾ ಅಲಿ ಅವರ ನಿಕಾಹ್ ಪೂರ್ಣಗೊಳಿಸಲು ಖಾಜಿಯ ಕರ್ತವ್ಯಗಳನ್ನು ವಹಿಸಿಕೊಂಡರು. ವರನ ಮುತ್ತಜ್ಜಿ ಬೇಗಂ ಸಯೀದಾ ಖುರ್ಷಿದ್ ಸ್ಥಾಪಕ ಅಧ್ಯಕ್ಷರಾಗಿದ್ದು, ಮುಸ್ಲಿಂ ಮಹಿಳಾ ವೇದಿಕೆಯ ಆಶ್ರಯದಲ್ಲಿ ಮದುವೆ ಮಾಡಲಾಗಿದೆ.
ನಿಕಾಹ್ ಆಚರಣೆಗೆ ಖುರಾನ್ ಆದೇಶಗಳು, ಸಾಕ್ಷಿಗಳು ಮತ್ತು ಖಾಜಿ ಆಗಿದ್ದರೆ, ಈ ನಿಕಾಹ್ನಾಮದ ಹೆಚ್ಚುವರಿ ಮಹತ್ವವೆಂದರೆ ಇಕ್ರಾರ್ನಾಮ (ಒಪ್ಪಂದ) ಇದು ವಧುವರ, ಪರಸ್ಪರ ಒಪ್ಪಿದ ಷರತ್ತುಗಳನ್ನು ಸೇರಿಸುತ್ತದೆ. ಸಮಾನ ಹಕ್ಕುಗಳು ಮತ್ತು ಜವಾಬ್ದಾರಿಗಳಿಗೆ ಸಂಬಂಧಿಸಿದೆ. ಹೇಳಿಕೆಯ ಪ್ರಕಾರ ವೈವಾಹಿಕ ಜೀವನದ ಎಲ್ಲಾ ಅಂಶಗಳನ್ನು ಗೌರವಿಸುತ್ತದೆ.
ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡ-ಹೆಂಡತಿ ಜಗಳವಾಡಿದ್ದು, ಪರಿಣಾಮ ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಣಕನೂರು ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆ ಸುರೇಂದ್ರ ಅವರ ಪತ್ನಿ ಸ್ನೇಹಾ(25) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಸುರೇಂದ್ರ ಸಹ ಚಾಕುವಿನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಸ್ತುತ ಸುರೇಂದ್ರ ಅವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದನ್ನೂ ಓದಿ: ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!
ಸ್ನೇಹಾ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿಲಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಮೃತಳ ಪೋಷಕರು ಹಾಗೂ ಸಂಬಂಧಿಕರ ಆಗಮನಕ್ಕಾಗಿ ಕಾದಿದ್ದು, ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ.
ಭೋಪಾಲ್: ಪ್ರೀತಿಗೆ ಜಾತಿ, ಧರ್ಮಗಳು ಮಾತ್ರವಲ್ಲ ದೇಶದ ಗಡಿಗಳೂ ಅಡ್ಡಿಯಾಗುವುದಿಲ್ಲ ಎಂಬುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೋಂದು ಜೋಡಿ ಸಾಬೀತು ಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಧ್ಯಪ್ರದೇಶ ಗ್ವಾಲಿಯರ್ ನಗರದ 26 ವರ್ಷದ ಅವಿನಾಶ್‌ಗೆ ಸೋಶಿಯಲ್ ಮೀಡಿಯಾ ಮೂಲಕವಾಗಿ ಮೊರಾಕೊ ದೇಶದ 24 ವರ್ಷದ ಫದ್ವಾ ಲೈಮಾಲಿ ಪರಿಚಯವಾಗಿತ್ತು. ಇವರಿಬ್ಬರ ಸ್ನೇಹ, ಪ್ರೀತಿಯಾಗಿ ಬದಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರು ಮದುವೆಯಾಗಲು ಬಯಸಿದ್ದರು. ಆದರೆ ಮದುವೆ ಸ್ಟೋರಿ ಸಿನಿಮಾ ಕಥೆಯನ್ನು ಮೀರಿಸುವಂತಿದೆ.
ನಡೆದಿದ್ದೇನು: ಪ್ರೇಯಸಿಗಾಗಿ ಅವಿನಾಶ್ ಮೊರಾಕೊಗೆ ತೆರಳಿದ ಅಲ್ಲಿ ಆಕೆಯ ತಂದೆ ಅಲಿ ಲೈಮಾಲಿ ಅವರೊಂದಿಗೆ ತಮ್ಮ ಪ್ರೀತಿಯ ಬಗ್ಗೆ ತಿಳಿಸಿ ವಿವಾಹಕ್ಕೆ ಅನುಮತಿ ಕೋರಿದ. ಫದ್ವಾ ತಂದೆ ಇದಕ್ಕೆ ಬಿಲ್ ಕುಲ್ ಒಪ್ಪಲಿಲ್ಲ. ಕೊನೆಗೂ ಪುತ್ರಿ ಫದ್ವಾ ಒತ್ತಾಯದಿಂದ ಆತ ಒಪ್ಪಿಕೊಂಡಿದ್ದಾರೆ. ಅಲಿ ಲೈಮಾಲಿ ಅವರ ಮದುವೆಗೆ ಒಂದು ಷರತ್ತು ವಿಧಿಸಿದರು. ಅವಿನಾಶ್ ಇಸ್ಲಾಂಗೆ ಮತಾಂತರಗೊಂಡು ಮುಸಲ್ಮಾನನಾಗಬೇಕು, ಮದುವೆಯಾಗಿ, ಮೊರಾಕೊದಲ್ಲಿ ಉಳಿಯಬೇಕು ಎಂದು ಷರತ್ತು ಹಾಕಿದರು.
ಫದ್ವಾ ತಂದೆ ವಿಧಿಸಿದ್ದ ಷರತ್ತುಗಳಿಗೆ ಅವಿನಾಶ್ ಒಪ್ಪಲಿಲ್ಲ. ಮೇಲಾಗಿ ಫದ್ವಾ ಅವಿನಾಶ್ ಜೊತೆ ಭಾರತಕ್ಕೆ ತೆರಳುವುದಾಗಿ ಹೇಳಿದ್ದಳು. ಮಗಳ ಸಂತೋಷಕ್ಕಾಗಿ ತಂದೆ ಕೊನೆಗೂ ಒಪ್ಪಿದ್ದಾರೆ. ಮೊರಾಕೊ ಒಂದು ಮುಸ್ಲಿಂ ದೇಶ. ಅಲ್ಲಿನ ಜನಸಂಖ್ಯೆಯ ಶೇ 99 ಜನರು ಮುಸ್ಲಿಮರು, ಫದ್ವಾ ವಿವಾಹಕ್ಕೆ ಸರ್ಕಾರದ ಅನುಮತಿ ಪಡೆಯಲು ಬಹಳ ಸಮಯ ಹಿಡಿಯಿತು. ಎಲ್ಲಾ ಅಡೆ ತಡೆ ದಾಟಿ ಭಾರತ ತಲುಪಬೇಕೆಂದು ಬಯಸಿದ ಫದ್ವಾಗೆ ಕೊರೊನಾ ಅಡಚಣೆಯಾಯಿತು. ಕೊರೊನಾ ಪ್ರಕರಣಗಳು ಕಡಿಮೆಯಾಗುವವರೆಗೂ ಕಾದ ಅವಿನಾಶ್ -ಫದ್ವಾ ಜೋಡಿ ಇತ್ತೀಚೆಗೆ ಭಾರತಕ್ಕೆ ಆಗಮಿಸಿ ವಿವಾಹ ಮಾಡಿಕೊಳ್ಳಲು ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದನ್ನೂ ಓದಿ:ಕೋವಿನ್ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಕೇಂದ್ರ
ಸರ್ಕಾರದ ಅನುಮತಿ ಪಡೆದು ಬುಧವಾರ ಇಬ್ಬರೂ ಒಂದಾಗಿದ್ದಾರೆ. ಮದುವೆಯ ನಂತರ ಅವಿನಾಶ್ ಮಾತನಾಡಿ, ತನ್ನ ಪತ್ನಿ ಫದ್ವಾ ಮತಾಂತರಗೊಳ್ಳುವಂತೆ ತಾವು ಎಂದಿಗೂ ಒತ್ತಾಯಿಸುವುದಿಲ್ಲ ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಈ ಜೋಡಿ ಕೊನೆಗೂ ತಮ್ಮ ಆಸೆಯಂತೆ ನವಜೀವನಕ್ಕೆ ಕಾಲಿಟ್ಟಿದೆ.
ಹೈದರಾಬಾದ್: ಕಾಲಿವುಡ್ ನಟ ಧನುಷ್ ಹಾಗೂ ರಜಿನಿಕಾಂತ್ ಪುತ್ರಿ ಐಶ್ವರ್ಯಾ ಪರಸ್ಪರ ದೂರಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ 18 ವರ್ಷಗಳ ವೈವಾಹಿಕ ಜೀವನ ಅಂತ್ಯಗೊಂಡಂತಾಗಿದೆ.
2004 ರಲ್ಲಿ ಐಶ್ವರ್ಯಾ ಹಾಗೂ ಧನುಷ್ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇದೀಗ 18 ವರ್ಷಗಳ ದಾಂಪತ್ಯ ಜೀವನ ಅಂತ್ಯ ಹಾಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ತಾವು ದೂರವಾಗುತ್ತಿರುವ ಬಗ್ಗೆ ಅಧಿಕೃತ ಮಾಹಿತಿಯನ್ನು ಧನುಷ್ ಮತ್ತು ಐಶ್ವರ್ಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಾವಿಬ್ಬರು 18 ವರ್ಷಗಳಿಂದ ಸ್ನೇಹಿತರಾಗಿ, ಪ್ರೇಮಿಗಳಾಗಿ, ದಂಪತಿಯಾಗಿ , ಪೋಷಕರಾಗಿ, ಪರಸ್ಪರ ಒಳ್ಳೆಯದನ್ನು ಬಯಸುತ್ತಾ, ಅರ್ಥಮಾಡಿಕೊಳ್ಳುತ್ತಾ, ಸಹಕರಿಸುತ್ತಾ ಜೀವನ ನಡೆಸಿದ್ದೇವೆ. ಒಬ್ಬರಿಗೆ ಒಬ್ಬರು ಆಸರೆಯಾಗಿದ್ದೇವೆ. ಇಂದು ನಮ್ಮಿಬ್ಬರ ದಾರಿ ಬೇರೆ ಬೇರೆಯಾಗಿದೆ. ನಾನು ಹಾಗೂ ಐಶ್ವರ್ಯಾ ಸಮಯ ತೆಗೆದುಕೊಂಡು ಕೊನೆಗೆ ತೀರ್ಮಾನಿಸಿ ಪರಸ್ಪರ ಒಪ್ಪಿ ದಾಂಪತ್ಯ ಜೀವನದಿಂದ ದೂರಾಗುತ್ತಿದ್ದೇವೆ. ನಮ್ಮ ನಿರ್ಧಾರಕ್ಕೆ ನಿಮ್ಮ ಬೆಂಬಲ ಹಾಗೂ ಸಹಕಾರ ಇರಲಿ ಎಂದು ಆಶಿಸುತ್ತೇನೆ. ದಯಮಾಡಿ ನಮ್ಮ ಖಾಸಗಿ ನಿರ್ಧಾರವನ್ನು ಗೌರವಿಸಿ ಎಂದು ಧನುಷ್ ಟ್ವೀಟ್ ಮಾಡಿದ್ದಾರೆ.
ಧನುಷ್ ಅವರ ಪೋಸ್ಟ್‌ನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡ ಐಶ್ವರ್ಯಾ, ಇದಕ್ಕೆ ಶೀರ್ಷಿಕೆ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ನಿಮ್ಮ ಪ್ರೀತಿ ಮಾತ್ರ ಅಗತ್ಯ ಎಂದು ಬರೆದುಕೊಂಡು ದಾಂಪತ್ಯ ಜೀವನದಿಂದ ಇಬ್ಬರು ದೂರವಾಗುತ್ತಿರುವ ಕುರಿತಾಗಿ ತಿಳಿಸಿದ್ದಾರೆ.
ದಂಪತಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. 2006 ಮತ್ತು 2010 ರಲ್ಲಿ ಜನಿಸಿದವರಾಗಿದ್ದಾರೆ. ಐಶ್ವರ್ಯಾ ಅವರ ಮೊದಲ ನಿರ್ದೇಶನದ ‘3’ ನಲ್ಲಿ ಧನುಷ್ ಕೆಲಸ ಮಾಡಿದ್ದರು ಮತ್ತು ಚಿತ್ರದ ‘ಕೊಲವೆರಿ ಡಿ’ ಹಾಡು ಸೂಪರ್ ಹಿಟ್ ಆಗಿ ಎಲ್ಲಾ ಕಡೆ ಸದ್ದು ಮಾಡಿತ್ತು.
ಎರಡನೇ ಪುತ್ರಿ ಸೌಂದರ್ಯ ಕೂಡ ಮೊದಲ ಮದುವೆ ಮುರಿದುಕೊಂಡು ಕೆಲವೇ ವರ್ಷಗಳ ಹಿಂದೆ ಎರಡನೇ ವಿವಾಹವಾಗಿದ್ದರು. ರಜನಿಕಾಂತ್ ಮೊದಲ ಪುತ್ರಿ ಐಶ್ವರ್ಯಾ ದಾಂಪತ್ಯವೂ ಮುರಿದುಬಿದ್ದಿದೆ.
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರೆಬಾ ಮೋನಿಕಾ ಜಾನ್ ಅವರು ದೀರ್ಘಕಾಲದ ಗೆಳೆಯ ಜೋಮನ್ ಜೊತೆಗೆ ಜನವರಿ 9 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸುಂದರ ಕ್ಷಣಗಳ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಪ್ರೀತಿ ಎಲ್ಲವನ್ನೂ ಸಹಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ. ಪ್ರೀತಿ ಎಂದಿಗೂ ಮುಗಿಯುವುದಿಲ್ಲ. ನಾವು ಸರ್ವಶಕ್ತನಿಗೂ ವಾಗ್ದಾನ ಮಾಡಿದ್ದೇವೆ. ಇಂದಿನಿಂದ ಮುಂದಕ್ಕೆ ಶ್ರೀಮಂತನಾಗಿ, ಬಡವನಾಗಿ ಅನಾರೋಗ್ಯ ಮತ್ತು ಆರೋಗ್ಯದಲ್ಲಿಯೂ ಯಾವಾಗಲೂ ಜೊತೆಯಾಗಿರುತ್ತೇವೆ, ಪ್ರೀತಿಸುತ್ತೇವೆ ಎಂದು ಬರೆದುಕೊಂಡು ಮದುವೆಯ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಬ್ರಿಗೇಡ್ ರಸ್ತೆಯ ಚರ್ಚ್‍ನಲ್ಲಿ ಸಮಾರಂಭ ನೆರವೇರಿದೆ. ಇನ್‍ಸ್ಟಗ್ರಾಮ್‍ನಲ್ಲಿ ಚಿತ್ರಗಳನ್ನು ಶೇರ್ ಮಾಡಿರುವ ನಟಿ, ಈ ಮೂಲಕ ಎಲ್ಲರೊಡನೆ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಲಯಾಳಂ, ತಮಿಳು ಸೇರಿದಂತೆ ವಿವಿಧ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರೆಬಾಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭ ಕೋರಿದ್ದಾರೆ. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್
ರೆಬಾ ಮೋನಿಕಾ ಜಾನ್ ಅವರು ಮಲಯಾಳಿಯಾದರೂ ಬೆಂಗಳೂರಿನಲ್ಲೇ ಹುಟ್ಟಿಬೆಳೆದವರು. ಕನ್ನಡ ಓದಲು ಹಾಗೂ ಬರೆಯಲು ಕೂಡ ಅವರಿಗೆ ಬರುತ್ತದೆ. ರೆಬಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2016ರಲ್ಲಿ. ಮಲಯಾಳಂನ ಜಾಕೋಬಿಂಟೆ ಸ್ವರ್ಗರಾಜ್ಯಂ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಧನಂಜಯ ನಟನೆಯ ರತ್ನನ್ ಪ್ರಪಂಚದ ಮೂಲಕ ಅವರು ಸ್ಯಾಂಡಲ್‍ವುಡ್‍ಗೆ ಕಾಲಿಟ್ಟಿದ್ದರು. ಈ ಸಿನಿಮಾದಲ್ಲಿ ಉತ್ತಮ ಪಾತ್ರದ ಮೂಲಕವಾಗಿ ಮೆಚ್ಚುಗೆ ಪಡೆದುಕೊಂಡರು. ಇದನ್ನೂ ಓದಿ: 180 ಮಿಲಿಯನ್ ವರ್ಷದ ಹಳೆಯ ‘ಸೀ ಡ್ರ್ಯಾಗನ್’ ಅತೀ ದೊಡ್ಡ ಪಳೆಯುಳಿಕೆ ಪತ್ತೆ
ಬೆಂಗಳೂರು: ದಿನಕ್ಕೆ ಆರು ಬಾರಿ ಸ್ನಾನ, ಬಳಸಿದ ಸೋಪನ್ನು ಮತ್ತೊಂದು ಸೋಪಿನಿಂದ ಸ್ವಚ್ಛಗೊಳಿಸುವ ಪತ್ನಿಯ ಅತಿಯಾದ ಸ್ವಚ್ಛತೆಯ ಗೀಳಿನಿಂದ ಬೇಸತ್ತಿರುವ ಪತಿ ದಾಂಪತ್ಯ ಕಡಿದುಕೊಂಡು ವಿವಾಹ ವಿಚ್ಛೇದನಕ್ಕೆ ಮುಂದಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಒಸಿಡಿ ಸಮಸ್ಯೆಯಿಂದ ಬಳಲುತ್ತಿರುವ 35 ವರ್ಷದ ಮಹಿಳೆ ಲ್ಯಾಪ್‍ಟಾಪ್, ಸೆಲ್‍ಫೋನ್‍ಗಳನ್ನು ಡಿಟರ್ಜೆಂಟ್ ಹಾಕಿ ಸ್ವಚ್ಛಗೊಳಿಸುವ ಅತಿರೇಕದ ವರ್ತನೆಯಿಂದ ರೋಸಿರುವ ಪತಿ ಪೊಲೀಸರ ಮೊರೆ ಹೋಗಿದ್ದಾನೆ. ಪೊಲೀಸರು ಈ ಪ್ರಕರಣವನ್ನು ವನಿತಾ ಸಹಾಯವಾಣಿ ಪರಿಹಾರ್‌ಗೆ ಶಿಫಾರಸು ಮಾಡಿದ್ದಾರೆ. ಇದನ್ನೂ ಓದಿ:ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ
ಆರ್.ಟಿ.ನಗರ ಸುಮಾ ಮತ್ತು ಜಯಂತ್ 2009ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಜಯಂತ್, ವಿವಾಹ ಬಳಿಕ ಪತ್ನಿ ಸುಮಾ ಜೊತೆಗೆ ಲಂಡನ್‍ಗೆ ಹೋಗುತ್ತಾರೆ. ಎಂಬಿಎ ಪದವೀಧರೆಯಾಗಿರುವ ಸುಮಾ ಲಂಡನ್‍ನಲ್ಲಿ ಮನೆಯನ್ನು ತುಂಬಾ ಸ್ವಚ್ಛವಾಗಿ ಇರಿಸಿಕೊಳ್ಳುತ್ತಾರೆ. ಮೊದಲ ಮಗು ಹುಟ್ಟಿದ 2 ವರ್ಷದ ಬಳಿಕ ಸುಮಾಗೆ ಈ ಸ್ವಚ್ಛತೆ ಗೀಳು ಮತ್ತಷ್ಟು ಹೆಚ್ಚಾಗುತ್ತದೆ. ಪತಿ ಕೆಲಸ ಮುಗಿಸಿ ಮನೆಗೆ ಬಂದಾಗ ಶೂ, ಬಟ್ಟೆ, ಸೆಲ್‍ಫೋನ್ ಸ್ವಚ್ಛ ಮಾಡುವಂತೆ ಪದೇ ಪದೇ ಹೇಳುತ್ತಿರುತ್ತಾಳೆ. ಇದರಿಂದ ಕಿರಿಕಿರಿಗೆ ಒಳಗಾಗುವ ಪತಿ, ಈಕೆಯ ಸ್ವಚ್ಛತೆಯ ಅತಿರೇಕದ ವರ್ತನೆಯಿಂದ ಬೇಸತ್ತು ಹೋಗುತ್ತಾನೆ. ಇದನ್ನೂ ಓದಿ: ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್
ಲಂಡನ್‍ನಿಂದ ಬೆಂಗಳೂರಿಗೆ ವಾಪಸ್ ಆಗಿರುವ ದಂಪತಿ ಕೌಟುಂಬಿಕ ಸಮಾಲೋಚನೆಗೆ ಬಳಗಾಗುತ್ತಾರೆ. ಈ ವೇಳೆ ಈ ಸ್ವಚ್ಛತೆಯ ಗೀಳು ಕೊಂಚ ಕಡಿಮೆಯಾಗುತ್ತದೆ. ಈ ನಡುವೆ ದಂಪತಿಗೆ 2ನೇ ಮಗು ಜನಿಸುತ್ತದೆ. ಕೋವಿಡ್ ಸಂದರ್ಭದಲ್ಲಿ ಸುಮಾಳಿಗೆ ಈ ಸ್ವಚ್ಛತೆಯ ಗೀಳು ಮತ್ತಷ್ಟು ಹೆಚ್ಚಾಗುತ್ತದೆ. ಮನೆಯನ್ನು ಪದೇ ಪದೇ ಸ್ಯಾನಿಟೈಸ್ ಮಾಡುವುದು ಮನೆಯ ಪೀಠೋಪಕರಣಗಳು, ಚಮಚ, ಪ್ಲೋರ್ ಮ್ಯಾಟ್ ಸೇರಿದಂತೆ ಎಲ್ಲ ವಸ್ತುಗಳನ್ನು ಪದೇ ಪದೇ ಸ್ವಚ್ಛ ಮಾಡಲು ಶುರು ಮಾಡುತ್ತಾಳೆ. ಇದನ್ನೂ ಓದಿ:ಸಿಪಿಎಂ ಸ್ಥಳೀಯ ಮುಖಂಡನ ಬರ್ಬರ ಹತ್ಯೆ- RSS ಮೇಲೆ ಆರೋಪ
ಲಾಕ್‍ಡೌನ್ ಸಂದರ್ಭದಲ್ಲಿ ದಿನಕ್ಕೆ ಆರು ಬಾರಿ ಸ್ನಾನ ಮಾಡುವುದು, ಸ್ನಾನಕ್ಕೆ ಬಳಸಿದ ಸೋಪನ್ನು ಮತ್ತೊಂದು ಸೋಪಿನಿಂದ ಸ್ವಚ್ಛಗೊಳಿಸುವ ಮಟ್ಟಕ್ಕೆ ಇವಳ ವರ್ತನೆ ಬದಲಾಗುತ್ತದೆ ಎಂದಿದ್ದಾನೆ.
ಈ ನಡುವೆ ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾ ತಾಯಿ ಮೃತಪಡುತ್ತಾರೆ. ಈ ಘಟನೆ ಬಳಿಕ ಸುಮಾಳ ಸ್ವಚ್ಛತೆ ಹೆಚ್ಚಾಗುತ್ತದೆ. ಲಾಕ್‍ಡೌನ್ ಸಂದರ್ಭದಲ್ಲಿ ಪತಿ ವರ್ಕ್ ಫ್ರಂ ಹೋಮ್ ಕೆಲಸ ಮಡುವಾಗ ಆತನ ಲ್ಯಾಪ್‍ಟಾಪ್, ಸೆಲ್‍ಫೋನ್‍ಗಳನ್ನು ಡಿಟರ್ಜೆಂಟ್ ಹಾಕಿ ಸ್ವಚ್ಛಗೊಳಿಸಿದ್ದಳು. ಮಕ್ಕಳು ಶಾಲೆಗೆ ಹೋಗಿ ಬಂದರೆ ಅವರ ಬ್ಯಾಗ್, ಯೂನಿಫಾರ್ಮ್, ಶೂಗಳನ್ನು ಪ್ರತಿ ದಿನ ಸ್ವಚ್ಛ ಮಾಡುತ್ತಿದ್ದಳು. ಈಕೆಯ ಸ್ವಚ್ಛತೆಯ ಅತಿರೇಕದ ವರ್ತನೆಗೆ ಬೇಸತ್ತ ಪತಿ ಜಯಂತ್ ಇದೀಗ ಆಕೆಯಿಂದ ವಿಚ್ಛೇದನ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.