Tag: ದಾಂಧಲೆ

  • ಬ್ರೆಜಿಲ್‌ ಚುನಾವಣೆಯಲ್ಲಿ ಸೋಲು – ಅಧಿಕಾರಕ್ಕೆ ಸಂಸತ್‌ ಭವನಕ್ಕೆ ನುಗ್ಗಿ ದಾಂಧಲೆ

    ಬ್ರೆಜಿಲ್‌ ಚುನಾವಣೆಯಲ್ಲಿ ಸೋಲು – ಅಧಿಕಾರಕ್ಕೆ ಸಂಸತ್‌ ಭವನಕ್ಕೆ ನುಗ್ಗಿ ದಾಂಧಲೆ

    ಬ್ರೆಸಿಲಿಯಾ: ಬ್ರೆಜಿಲ್‍ನಲ್ಲಿ (Brazil) ಭಾರೀ ಹೈಡ್ರಾಮಾ ನಡೆದಿದ್ದು ಚುನಾವಣೆಯಲ್ಲಿ ಸೋತ ಮಾಜಿ ಅಧ್ಯಕ್ಷ ಜೈರ್ ಬೋಲ್ಸನೇರೋ (Bolsonaro) ಬೆಂಬಲಿಗರು ಅಧಿಕಾರಕ್ಕಾಗಿ ಆ ದೇಶದ ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

    ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ (Election) ಅಧ್ಯಕ್ಷ ಬೋಲ್ಸನೇರೋ ಸೋಲನ್ನು ಅಂಗೀಕರಿಸಲು ನಿರಾಕರಿಸಿದ ಅವರ ಸಾವಿರಾರು ಬೆಂಬಲಿಗರು, ರಾಜಧಾನಿ ಬ್ರೆಸಿಲಿಯಾದ ಪ್ರಮುಖ ಭವನಗಳನ್ನು ಆಕ್ರಮಿಸಿದ್ದಾರೆ. ಭದ್ರತಾ ವಲಯವನ್ನು ಬೇಧಿಸಿ ಸುಪ್ರೀಂಕೋರ್ಟ್, ಸಂಸತ್ ಭವನವಾದ ನ್ಯಾಷನಲ್ ಕಾಂಗ್ರೆಸ್, ಅಧ್ಯಕ್ಷರ ಭವನಗಳಿಗೆ ನುಗ್ಗಿದ್ದಾರೆ.

    ಕೈಗೆ ಸಿಕ್ಕಿದ್ದನ್ನು ಧ್ವಂಸ ಮಾಡಿ, ದಾಂಧಲೆ ನಡೆಸಿದ್ದಾರೆ. ಭದ್ರತಾ ಪಡೆಗಳು, ಪತ್ರಕರ್ತರ ಮೇಲೆ ದಾಳಿ ನಡೆಸಿದ್ದಾರೆ. ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಬೋಲ್ಸನೇರೋಗೆ ಮರಳಿ ಅಧಿಕಾರ ಕೊಡಬೇಕು. ಇಲ್ಲವಾದರೆ ಲೂಲಾ ಡಿಸಿಲ್ವಾರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಆಕ್ರೋಶಿತರರು ಬೇಡಿಕೆ ಇಟ್ಟಿದ್ದಾರೆ.

    ಬೋಲ್ಸನೇರೋ ಬೆಂಬಲಿಗರನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಹೆಲಿಕಾಪ್ಟರ್ ಮೂಲಕ ಟಿಯರ್ ಗ್ಯಾಸ್ ಪ್ರಯೋಗಿಸಿವೆ. ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳು ಹರಸಾಹಸ ಮಾಡುತ್ತಿವೆ. ಈವರೆಗೂ 500ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಶಾಲೆ ಬಿಟ್ಟು ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಅಮೆರಿಕದ ಜಡ್ಜ್

    ಘಟನೆಗೆ ಲೂಲಾ ಡಿಸಿಲ್ವಾ ಗರಂ ಆಗಿದ್ದು, ಅವರು ಮಾಡುತ್ತಿರುವ ಹಾನಿಯನ್ನು ಸಹಿಸಲು ಸಾಧ್ಯವಿಲ್ಲ. ನಿರ್ದಾಕ್ಷಿಣ್ಯವಾಗಿ ಅವರನ್ನು ಹತ್ತಿಕ್ಕಬೇಕು ಎಂದು ಆದೇಶಿಸಿದ್ದಾರೆ. ಅಲ್ಲಿನ ಒಂದೊಂದು ದೃಶ್ಯವೂ 2021ರ ಜನವರಿ 21ರಂದು ಅಮೆರಿಕದ ಸಂಸತ್ ಭವನದಲ್ಲಿ ನಡೆದ ಸಂಘರ್ಷವನ್ನು ನೆನಪಿಸುವಂತಿವೆ. ಆದರೆ ಬೋಲ್ಸನೇರೋ ಮಾತ್ರ ಇದಕ್ಕೂ ನನಗೂ ಸಂಬಂಧವೇ ಇಲ್ಲ ಅಂತಿದ್ದಾರೆ. ಪರಿಸ್ಥಿತಿ ಇನ್ನೂ ತಹಬದಿಗೆ ಬಂದಿಲ್ಲ. ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿಯೇ ಇದೆ.

    ನಾಯಕರ ಖಂಡನೆ:
    ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿ ವಿಶ್ವಸಮುದಾಯ ಈ ಘಟನೆಯನ್ನು ಖಂಡಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಲೇಜು ಆವರಣದಲ್ಲೇ ತಲ್ವಾರ್ ಹಿಡಿದು ಕೇರಳ-ಕರ್ನಾಟಕ ವಿದ್ಯಾರ್ಥಿಗಳ ದಾಂಧಲೆ

    ಕಾಲೇಜು ಆವರಣದಲ್ಲೇ ತಲ್ವಾರ್ ಹಿಡಿದು ಕೇರಳ-ಕರ್ನಾಟಕ ವಿದ್ಯಾರ್ಥಿಗಳ ದಾಂಧಲೆ

    ಮಂಗಳೂರು: ಕೇರಳ-ಕರ್ನಾಟಕ ವಿದ್ಯಾರ್ಥಿಗಳು ತಲ್ವಾರ್ ಹಿಡಿದು ಪರಸ್ಪರ ದಾಂಧಲೆ ನಡೆಸಿಕೊಂಡಿರುವ ಘಟನೆ ನಗರದ ಶ್ರೀದೇವಿ ಕಾಲೇಜು ಆವರಣದಲ್ಲಿ ನಡೆದಿದೆ.

    ಕೇರಳ-ಕರ್ನಾಟಕ ವಿದ್ಯಾರ್ಥಿಗಳ ನಡುವೆ ಈ ದಾಂಧಲೆ ನಡೆದಿದೆ. ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬನ ಸ್ಕೂಟರ್ ಕೇರಳ ಮೂಲದ ವಿದ್ಯಾರ್ಥಿಗೆ ಗುದ್ದಿರುವ ಹಿನ್ನೆಲೆ ಪರಸ್ಪರರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಇದನ್ನೇ ನೆಪವಾಗಿರಿಸಿ ಕ್ಷುಲ್ಲಕ ಕಾರಣಕ್ಕೆ ತಲ್ವಾರ್ ಹಿಡಿದು ಕರ್ನಾಟಕದ ವಿದ್ಯಾರ್ಥಿಗಳು ಕ್ಯಾಂಪಸ್ ಪ್ರವೇಶಿಸಿದ್ದಾರೆ. ತಲ್ವಾರ್ ಹಿಡಿದ ದೃಶ್ಯವು ಮೊಬೈಲ್‍ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಉಗ್ರರ ಜೊತೆ ನಂಟು ಶಂಕೆ – ಮಾಜಿ ಶಾಸಕ ಇದಿನಬ್ಬ ಮಗನ ಮನೆ ಮೇಲೆ ಎನ್‍ಐಎ ದಾಳಿ

    ಈ ಕುರಿತು ಸ್ಥಳೀಯ ವಿದ್ಯಾರ್ಥಿಯು ಠಾಣೆಗೆ ದೂರು ನೀಡಿದ್ದು, ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಬರೀ ಎರಡೇ ಅಲ್ಲ, ಮೂರು ಗುಂಪುಗಳಿವೆ: ಕಾರಜೋಳ

  • ನೀರಿನ ವಿಚಾರಕ್ಕೆ ಮನೆಗೆ ನುಗ್ಗಿ ದಾಂಧಲೆ ನಡೆಸಿದ ರೌಡಿಗಳು

    ನೀರಿನ ವಿಚಾರಕ್ಕೆ ಮನೆಗೆ ನುಗ್ಗಿ ದಾಂಧಲೆ ನಡೆಸಿದ ರೌಡಿಗಳು

    ಆನೇಕಲ್: ನೀರು ಹಿಡಿಯುವ ವಿಚಾರಕ್ಕೆ ಮನೆಗೆ ನುಗ್ಗಿ ರೌಡಿಗಳು ದಾಂಧಲೆ ನಡೆಸಿರುವ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಪತ್ರಿಕಾ ಏಜೆಂಟ್ ಆಗಿರುವ ರಾಜಪ್ಪ ಹಾಗೂ ಅವರ ಮನೆಯವರು ಹಲ್ಲೆಗೊಳಗಾದವರು. ಆನೇಕಲ್ ತಾಲೂಕಿನ ಕಾಳನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ನೀರು ಹಿಡಿಯುವ ವಿಚಾರಕ್ಕೆ ಎರಡು ಕುಟುಂಬದ ನಡುವೆ ಗಲಾಟೆಯಾಗಿದೆ. ಇದರಿಂದ ಕೋಪಗೊಂಡ ರೌಡಿಗಳು ಪೇಪರ್ ಏಜೆಂಟ್ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

    ಮೇರಿ ಹಾಗೂ ಅರುಣ್, ಬೇಬಿ ಎಂಬುವವರು ಗಲಾಟೆ ನಡೆಸಿದ್ದಾರೆ. ಮನೆಯ ವಸ್ತುಗಳನ್ನು ಬಿಸಾಡಿ, ಮಹಿಳೆಯರ ಮೇಲೂ ದರ್ಪ ತೋರಿದ್ದಾರೆ. ಗಲಾಟೆ ಬಳಿಕ ಬೇಬಿ, ಯುವಕರನ್ನು ಕರೆಸಿಕೊಂಡಿದ್ದಾರೆ. ಹಲ್ಲೆ ಮಾಡಿದ ಬಳಿಕ ಮನೆ ಧ್ವಂಸ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ರೌಡಿಗಳು ದಾಂಧಲೆ ನಡೆಸಿದ್ದರು. ಇದನ್ನೂ ಓದಿ: ಅನಾರೋಗ್ಯದಿಂದ ಜಾಮೀನಿನ ಮೇಲೆ ಹೊರಬಂದಿರೋ ಪ್ರಜ್ಞಾ ಸಿಂಗ್‌ರಿಂದ ಕ್ರಿಕೆಟ್, ಡ್ಯಾನ್ಸ್ – ವೀಡಿಯೋ ವೈರಲ್

    ಪ್ರಕರಣ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರಿಂದ ದೂರು ದಾಖಲಾಗಿದೆ. ಇದನ್ನೂ ಓದಿ: ಬಿಜೆಪಿಯಿಂದ ದೆಹಲಿಯಲ್ಲಿ ಮೂಲಸೌಕರ್ಯ ಸುಧಾರಿಸಿದೆ: ಅಮಿತ್ ಶಾ

  • ವಿಸ್ಟ್ರಾನ್ ಐಫೋನ್‌ ಘಟಕದಲ್ಲಿ ದಾಂಧಲೆ  -‌ 7 ಸಾವಿರ ಕಾರ್ಮಿಕರ ವಿರುದ್ಧ ದೂರು, 149 ಮಂದಿ ಅರೆಸ್ಟ್‌

    ವಿಸ್ಟ್ರಾನ್ ಐಫೋನ್‌ ಘಟಕದಲ್ಲಿ ದಾಂಧಲೆ -‌ 7 ಸಾವಿರ ಕಾರ್ಮಿಕರ ವಿರುದ್ಧ ದೂರು, 149 ಮಂದಿ ಅರೆಸ್ಟ್‌

    – 5 ಸಾವಿರ ಕಾರ್ಮಿಕರು ಪ್ರಮುಖ ಆರೋಪಿಗಳು
    – 300ಕ್ಕೂ ಹೆಚ್ಚು ಮಂದಿ ವಶಕ್ಕೆ

    ಕೋಲಾರ : ಐಫೋನ್‌ ತಯಾರಕಾ ವಿಸ್ಟ್ರಾನ್ ಇನ್ಫೋಕಾಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿನ ದಾಂಧಲೆ ಪ್ರಕರಣ ಸಂಬಂಧ 7 ಸಾವಿರ ಕಾರ್ಮಿಕರ ವಿರುದ್ದ ಆಡಳಿತ ಮಂಡಳಿ ದೂರು ನೀಡಿದೆ.

    ಸುಮಾರು 300 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು 149 ಜನರನ್ನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಎಚ್.ಡಿ ಕ್ವಾಲಿಟಿ ಇರುವ ಸಿಸಿಟಿವಿ ಕ್ಯಾಮೆರಾ ಮತ್ತು ವಾಟ್ಸಪ್‌ ಚಾಟ್‌, ಕರೆಯನ್ನು ಆಧರಿಸಿ ಕೃತ್ಯ ಎಸಗಿದವರನ್ನ ಬಂಧಿಸಲಾಗುತ್ತಿದೆ.

    6 ಖಾಸಗಿ ಏಜೆನ್ಸಿಗಳ ಮೂಲಕ 8,490 ಕಾರ್ಮಿಕರನ್ನು ಗುತ್ತಿಗೆ ಕಾರ್ಮಿಕರು ಹಾಗೂ 1,343 ಕಾರ್ಮಿಕರನ್ನು ಕಾಯಂ ನೌಕರರನ್ನಾಗಿ ವಿಸ್ಟ್ರಾನ್ ಕಂಪನಿ ನೇಮಿಸಿಕೊಂಡಿತ್ತು. ಈಗಾಗಲೇ ಕಂಪನಿ ಆಡಳಿತ ಮಂಡಳಿ, ಅಸಿಸ್ಟೆಂಟ್ ಮ್ಯಾನೇಜರ್ ವೇಮಗಲ್ ಪೊಲೀಸ್ ಠಾಣೆಯಲ್ಲಿ ಕಾರ್ಮಿಕರ ವಿರುದ್ದ ಪ್ರತ್ಯೇಕ ಮೂರು ಎಫ್‌ಐಅರ್ ದಾಖಲು ಮಾಡಿದ್ದಾರೆ.

    ಒಟ್ಟು 7 ಸಾವಿರ ಕಾರ್ಮಿಕರ ವಿರುದ್ದ ದೂರು ನೀಡಿದ್ದು, ಇದರಲ್ಲಿ 5 ಸಾವಿರ ಕಾರ್ಮಿಕರು ಪ್ರಮುಖ ಅರೋಪಿಗಳು ಅಂದರೆ ಎ-1 ಎಂದು, 2 ಸಾವಿರ ಕಾರ್ಮಿಕರು ಎ-2 ಅರೋಪಿಗಳೆಂದು ದೂರು ದಾಖಲಾಗಿದೆ.

    ಕಂಪನಿ ಉಪಕರಣ, ವಾಹನ, ಎಲೆಕ್ಟ್ರಾನಿಕ್ ಉಪಕರಣಗಳನ್ನ ಧ್ವಂಸ ಮಾಡಿದ್ದು, ಹತ್ತು ಕೋಟಿಯಷ್ಟು ಎಲೆಕ್ಟ್ರಾನಿಕ್ ಉಪಕರಣಗಳು ಕಳುವಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದು, ದಾಂಧಲೆ, ಆಸ್ತಿ ಪಾಸ್ತಿ ನಷ್ಟ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ದರೋಡೆ ಪ್ರಕರಣ ಸೇರಿ, ಐಪಿಸಿ ಸೆಕ್ಷನ್ 143, 147, 148, 149, 323, 395, 448, 435, 427, 504, 506 ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.

    ಕಂಪನಿಯಲ್ಲಿ ವೇತನ ನೀಡದ ಹಿನ್ನೆಲೆಯಲ್ಲಿ ಡಿ.10 ರಂದು ಕಾರ್ಮಿಕರು ದಾಂಧಲೆ ನಡೆಸಿ ಕಂಪನಿಯನ್ನ ಧ್ವಂಸ ಮಾಡಿದ್ದರು. ಈ ಸಂಬಂಧ ಇಲ್ಲಿಯವರೆಗೆ 149 ಕಾರ್ಮಿಕರನ್ನ ಪೊಲೀಸರು ಬಂಧಿಸಿದ್ದು, ದಾಂಧಲೆಯಿಂದ 437.70 ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

    ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರ ಮಾಹಿತಿ ಕಂಪನಿ ಸಿಬ್ಬಂದಿಯಿಂದ ಸಿಕ್ಕಿದ್ದು, 10 ಪೊಲೀಸ್ ತಂಡಗಳಿಂದ ವಿಚಾರಣೆ ನಡೆಯುತ್ತಿದೆ. ಪ್ರಕರಣ ಈಗ ವಿಚಾರಣೆ ಹಂತದಲ್ಲಿದ್ದು, ದಾಂಧಲೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ.

    ಎರಡು ಮೂರು ತಿಂಗಳಲ್ಲಿ ಮತ್ತೆ ಕಂಪನಿ ಆರಂಭವಾಗಲಿದೆ. ಜಿಲ್ಲೆಯ ಎಲ್ಲಾ ಕೈಗಾರಿಕೆಗಳ ಮುಖ್ಯಸ್ಥರನ್ನ ಶಾಸಕರೊಂದಿಗೆ ಸಭೆ ಕರೆದು ಕಾರ್ಮಿಕರ ಸಮಸ್ಯೆಗಳನ್ನ ಪರಿಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ತಿಳಿಸಿದರು.

    ವಿಸ್ಟ್ರಾನ್ ಕಂಪನಿ ಕಾರ್ಮಿಕರ ವೇತನ ಪಾವತಿ ಮತ್ತು ಹಾಜರಾತಿ ದಾಖಲೆಪತ್ರ ನಿರ್ವಹಣೆಯಲ್ಲಿ ಉಂಟಾದ ಗೊಂದಲ, ಕಾರ್ಮಿಕರು ಹಾಗೂ ಆಡಳಿತ ವರ್ಗದವರ ನಡುವೆ ಬಾಂಧವ್ಯ ಹದೆಗೆಟ್ಟ ಹಿನ್ನೆಲೆಯಲ್ಲಿ ದಾಂಧಲೆ ನಡೆದಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.

  • ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ದಾಂಧಲೆ!

    ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ದಾಂಧಲೆ!

    ತುಮಕೂರು: ಕಂಠ ಪೂರ್ತಿ ಕುಡಿದ ಆಟೋ ಚಾಲಕನೋರ್ವ ಅರೆಬೆತ್ತಲಾಗಿ ನಡು ರಸ್ತೆಯಲ್ಲೇ ದಾಂಧಲೆ ನಡೆಸಿದ ಘಟನೆ ಜಿಲ್ಲೆಯ ತಿಪಟೂರು ಬಸ್ ನಿಲ್ದಾಣದ ಬಳಿ ನಡೆದಿದೆ.

    ಆಟೋ ಚಾಲಕ ಅಶೋಕ ಎಂಬಾತ ಅವಾಂತರ ಸೃಷ್ಟಿಸಿದ ಕುಡುಕ ಮಹಾಷಯ. ಮಂಗಳವಾರ ರಾತ್ರಿ ಕಂಠಪೂರ್ತಿ ಕುಡಿದ ಆಟೋ ಚಾಲಕ ಅರೆಬೆತ್ತಲಾಗಿ ನಡು ರಸ್ತೆಯಲ್ಲೇ ದಾಂಧಲೆ ನಡೆಸಿದ್ದಾನೆ. ನಡು ರಸ್ತೆಯಲ್ಲಿ ಬಸ್ ಸೇರಿದಂತೆ ವಾಹನಗಳನ್ನು ಅಡ್ಡಗಟ್ಟಿ ಕಲ್ಲು ತೂರಿದ್ದಾನೆ. ಪರಿಣಾಮ ಹಲವು ಬಸ್ ಗಳ ಗಾಜು ಪುಡಿಪುಡಿಯಾಗಿವೆ.

    ಅಶೋಕನ ರಂಪಾಟ ತಡೆಯಲು ಬಂದ ಸಾರ್ವಜನಿಕರ ಮೇಲೆಯೂ ದೊಣ್ಣೆ ಹಿಡಿದು ಹಲ್ಲೆ ನಡೆಸಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಆಟೋ ಚಾಲಕ ಎಣ್ಣೆ ಮತ್ತಿನಲ್ಲಿ ಪೊಲೀಸರ ವಾಹನವನ್ನೂ ಸಹ ಜಖಂಗೊಳಿಸಿದ್ದಾನೆ. ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಕುಡುಕ ಆಟೋಚಾಲಕನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಘಟನೆ ಸಂಬಂಧ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಹಾಗೂ ಅರೆಬೆತ್ತಲಾಗಿ ಅವಾಂತರ ಸೃಷ್ಟಿಸಿದಕ್ಕೆ ಪೊಲೀಸರು ದೂರು ದಾಖಲಿಸಿಕೊಂಡು ಕುಡುಕನನ್ನು ಬಂಧಿಸಿದ್ದಾರೆ.

    https://www.youtube.com/watch?v=7fWPL8He_rs

  • ಕ್ಷುಲ್ಲಕ ವಿಚಾರದಲ್ಲಿ ಪ್ರಾರಂಭವಾದ ಜಗಳ- ಕುಡಿದ ಮತ್ತಿನಲ್ಲಿ ಮಚ್ಚು ಹಿಡಿದು ದಾಂಧಲೆ

    ಕ್ಷುಲ್ಲಕ ವಿಚಾರದಲ್ಲಿ ಪ್ರಾರಂಭವಾದ ಜಗಳ- ಕುಡಿದ ಮತ್ತಿನಲ್ಲಿ ಮಚ್ಚು ಹಿಡಿದು ದಾಂಧಲೆ

    ಬೆಂಗಳೂರು: ಕುಡಿದ ಮತ್ತಿನಲ್ಲಿದ್ದ ಯುವಕ ಕ್ಷುಲಕ ವಿಚಾರಕ್ಕೆ ಜಗಳ ಪ್ರಾರಂಭಿಸಿ ಮಚ್ಚು ಹಿಡಿದು ದಾಂಧಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಚಿಕ್ಕಮಾರನಹಳ್ಳಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

    ಕುಡಿದ ಮತ್ತಿನಲ್ಲಿ ಸುರೇಶ್ ಹಾಗೂ ಲಕ್ಷ್ಮಿ ನಾರಾಯಣ್ ಎಂಬವರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಬೈದಾಡಿಕೊಂಡು ಸುರೇಶ್ ಮನೆಗೆ ಹೋಗಿದ್ದಾನೆ. ನಂತರ ಲಕ್ಷ್ಮಿನಾರಾಯಣ್ ಮಚ್ಚು ಹಿಡಿದು, ಸುರೇಶ್ ನ ಮನೆ ಬಾಗಿಲು ಮುರಿದಿದ್ದಾನೆ.

    ಈ ವೇಳೆ ಗ್ರಾಮದಲ್ಲಿ ಲಕ್ಷ್ಮಿನಾರಾಯಣನ ರಂಪಾಟಕ್ಕೆ, ಗ್ರಾಮಸ್ಥರು ಕೆಲಕಾಲ ಭಯಬೀತರಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ದಾಂಧಲೆ ಮಾಡಿದ ಲಕ್ಷ್ಮಿನಾರಾಯಣನನ್ನು ಪೊಲೀಸರು ಬಂಧಿಸಿದ್ದಾರೆ.

  • ಕುಡಿದ ನಶೆಯಲ್ಲಿ ಹೋಟೆಲ್‍ನಲ್ಲಿ ದಾಂಧಲೆ ನಡೆಸಿ ಸಿಬ್ಬಂದಿಗೆ ಯುವಕನಿಂದ ಥಳಿತ!

    ಕುಡಿದ ನಶೆಯಲ್ಲಿ ಹೋಟೆಲ್‍ನಲ್ಲಿ ದಾಂಧಲೆ ನಡೆಸಿ ಸಿಬ್ಬಂದಿಗೆ ಯುವಕನಿಂದ ಥಳಿತ!

    ಮೈಸೂರು: ಪಾನಮತ್ತ ಯುವಕನೊಬ್ಬ ಹೋಟೆಲ್‍ನಲ್ಲಿ ದಾಂಧಲೆ ನಡೆಸಿ ಹೋಟೆಲ್ ಸಿಬ್ಬಂದಿಗಳಿಗೆ ಥಳಿಸಿರುವ ಘಟನೆ ಮೈಸೂರಿನ ಇಲವಾಲ ಬಳಿಯ ಬೇಕ್ ಅಂಡ್ ಜಾಯ್ ಹೋಟೆಲ್‍ನಲ್ಲಿ ನಡೆದಿದೆ.

    ಸಂತೋಷ್ ದಾಂಧಲೆ ನಡೆಸಿದ ಯುವಕ. ಸಂತೋಷ್ ಇಲವಾಲ ನಿವಾಸಿಯಾಗಿದ್ದು, ಕೆಲ ದಿನಗಳ ಹಿಂದೆ ಹೋಟೆಲ್ ಗೆ ಬಂದು ತಿಂಡಿ ತಿಂದು ಹಣ ಕೊಡದೆ ಹೋಗಿದ್ದ. ಮೊನ್ನೆ ಮತ್ತೆ ಸಂತೋಷ್ ಹೋಟೆಲ್ ಗೆ ಬಂದಿದ್ದಾನೆ.

    ಈ ವೇಳೆ ಸಂತೋಷ್‍ಗೆ ಹೋಟೆಲ್ ಸಿಬ್ಬಂದಿ ತರಾಟೆ ತೆಗೆದುಕೊಂಡಿದ್ದಾರೆ. ಆಗ ಸುಮ್ಮನೆ ಸಂತೋಷ್ ವಾಪಾಸ್ ಹೋಗಿದ್ದಾನೆ. ಆದರೆ ರಾತ್ರಿ ಮತ್ತೆ ಹೋಟೆಲ್‍ಗೆ ಬಂದು ಗಲಾಟೆ ಮಾಡಿದ್ದಾನೆ. ಸಂತೋಷ್ ನ ಈ ದಾಂಧಲೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಸಂಬಂಧ ಹೋಟೆಲ್ ಮಾಲೀಕ ಮುಶ್ರಫ್ ಇಲವಾಲ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸದ್ಯ ಸ್ಥಳಕ್ಕೆ ಇಲವಾಲ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.

  • ಬ್ಯಾಟೇ ಅಸ್ತ್ರ, ಪಾತ್ರೆಗಳೇ ಗುರಾಣಿ- ಮನೆಗೆ ನುಗ್ಗಿ 30 ಮಂದಿ ಅಟ್ಟಹಾಸ, ಮಹಿಳೆಯರ ಮೇಲೆ ಹಲ್ಲೆ

    ಬ್ಯಾಟೇ ಅಸ್ತ್ರ, ಪಾತ್ರೆಗಳೇ ಗುರಾಣಿ- ಮನೆಗೆ ನುಗ್ಗಿ 30 ಮಂದಿ ಅಟ್ಟಹಾಸ, ಮಹಿಳೆಯರ ಮೇಲೆ ಹಲ್ಲೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬುಧವಾರ ತಡರಾತ್ರಿ ಭಯಾನಕ ದಾಂಧಲೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಮೆನೆಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ.

    ಶಿವಾಜಿನಗರದ ತಿಮ್ಮಯ್ಯ ರಸ್ತೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ರೀಟಾ ಎಂಬಾಕೆಯ ಮನೆಯ ಮೇಲೆ ಪಕ್ಕದ ಮನೆಯವರಾದ ಸುಹೇಲ್ ಹಾಗೂ ಮಹ್ಮದ್ ನೂರ್ 30ಕ್ಕೂ ಹೆಚ್ಚು ಮಂದಿಯ ಗ್ಯಾಂಗ್ ಕರೆದುಕೊಂಡು ಬಂದು ದಾಂಧಲೆ ನಡೆಸಿದ್ದಾರೆ.

    ಸುಹೇಲ್, ಮಹ್ಮದ್ ನೂರ್ ಮತ್ತು ತಂಡ ಮಹಿಳೆಯರ ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ. ಈ ವೇಳೆ ಬ್ಯಾಟುಗಳನ್ನೇ ಅಸ್ತ್ರಗಳಾಗಿ ಬಳಸಿಕೊಂಡ್ರೆ ಹಲ್ಲೆಯಿಂದ ಪಾರಾಗಲು ಮನೆಯವರು ಪಾತ್ರೆ ಪಗಡಿಗಳನ್ನೇ ಗುರಾಣಿಯಂತೆ ಮಾಡಿಕೊಂಡಿದ್ದಾರೆ. ವೃದ್ಧೆ ರೀಟಾ, ಮಹಿಳೆಯರಾದ ಸೋಫಿಯಾ, ಸಿಸಿಲೀಯಾ, ಸಾಂಗ್ಲೀನ್, ಸ್ಟಾಲೀನ್ ಸೇರಿದಂತೆ ಕುಟುಂಬದ 8 ಮಂದಿಯ ಮೇಲೆ ಹಲ್ಲೆ ನಡೆದಿದೆ.

    ಈ ಬಗ್ಗೆ ದೂರು ನೀಡಿದ್ರೆ ಶಿವಾಜಿನಗರ ಪೊಲೀಸರು ಕೇಸ್ ಪಡೆದುಕೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ರೀಟಾ ಕುಟುಂಬಸ್ಥರು ಆರೋಪಿಸಿದ್ದಾರೆ.

    https://www.youtube.com/watch?v=TxpZMxvbbLA