Tag: ದಾಂಡಿಯಾ ನೃತ್ಯ

  • ದಾಂಡಿಯಾ ಹೆಸರಲ್ಲಿ ಡ್ರಗ್ಸ್ ಪಾರ್ಟಿನಾ? – ಮಂಗಳೂರಿನಲ್ಲಿ VHP ವಿರೋಧ

    ದಾಂಡಿಯಾ ಹೆಸರಲ್ಲಿ ಡ್ರಗ್ಸ್ ಪಾರ್ಟಿನಾ? – ಮಂಗಳೂರಿನಲ್ಲಿ VHP ವಿರೋಧ

    ಮಂಗಳೂರು: ನಗರದಲ್ಲಿ ದಾಂಡಿಯಾ ನೃತ್ಯಕ್ಕೆ ವಿಶ್ವ ಹಿಂದೂ ಪರಿಷತ್ (VHP) ತೀವ್ರ ವಿರೋಧ ವ್ಯಕ್ತಪಡಿಸಿದೆ.

    ಉತ್ತರ ಭಾರತದಲ್ಲಿ ನವರಾತ್ರಿ ಸಂದರ್ಭದಲ್ಲಿ ನಡೆಯುವ ನೃತ್ಯ ಇದಾಗಿದೆ. ಇದೀಗ ಈ ದಾಂಡಿಯಾ ನೃತ್ಯ (Dandiya Dance) ಹೆಸರಲ್ಲಿ ಮಂಗಳೂರಿನಲ್ಲಿ ಮದ್ಯ, ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿ ವಿಹೆಚ್‍ಪಿ ದೂರು ನೀಡಿದೆ.

    ಮಂಗಳೂರಿನ (Mangaluru) ಹಲವು ಹೊಟೇಲ್ ಗಳು ಸೇರಿ ಸುಮಾರು 23 ಕಡೆ ದಾಂಡಿಯಾ ನೃತ್ಯ ಕಾರ್ಯಕ್ರಮ ಆಯೋಜನೆಯಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನೂರಾರು ಸಂಖ್ಯೆಯಲ್ಲಿ ಉತ್ತರ ಭಾರತದ ಕಡೆಯಿಂದ ದಾಂಡಿಯಾ ನೃತ್ಯ ಕಲಾವಿದರು ಮಂಗಳೂರಿಗೆ ಬಂದಿಳಿದಿದ್ದಾರೆ. ನವರಾತ್ರಿ ಅಂಗವಾಗಿ ಇಂದಿನಿಂದ ನಾಲ್ಕು ದಿನಗಳವರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇದನ್ನೂ ಓದಿ: ಗುತ್ತಿಗೆದಾರರಿಂದ ಲೂಟಿ ಮಾಡಿ ಚುನಾವಣೆಗೆ ಹಣ ಸಂಗ್ರಹಿಸುತ್ತಿದೆ ಸರ್ಕಾರ – ವಿಜಯೇಂದ್ರ ವಾಗ್ದಾಳಿ

    ದಾಂಡಿಯಾ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಮಾದಕ ವಸ್ತುಗಳನ್ನು ಬಳಸುತ್ತಾರೆ. ಡ್ರಗ್ಸ್, ಮಾದಕ ದ್ರವ್ಯ, ಮದ್ಯಪಾನ ಮಾಡಿ ಅಸಭ್ಯ ನೃತ್ಯ ಮಾಡುತ್ತಾರೆ ಎಂದು ಆರೋಪಿಸಿ ದುರ್ಗವಾಹಿನಿ ಸಂಘಟನೆ ಮಂಗಳೂರು ಪೊಲೀಸ್ ಕಮಿಷನರ್ ಗೆ ಮನವಿ ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಾಂಡಿಯಾ ನೃತ್ಯ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ವ್ಯಕ್ತಿ ಸಾವು

    ದಾಂಡಿಯಾ ನೃತ್ಯ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ವ್ಯಕ್ತಿ ಸಾವು

    ಗುಜರಾತ್: ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ದಾಂಡಿಯಾ ನೃತ್ಯ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ದಾಹೋದ್ (Dahod) ಜಿಲ್ಲೆಯ ದೇವಗಢ್ ಬರಿಯಾದಲ್ಲಿ (Devgadh Baria) ಭಾನುವಾರ ನಡೆದಿದೆ.

    ಈ ಘಟನೆಯ ಸಂಪೂರ್ಣ ದೃಶ್ಯವನ್ನು ಸಮಾರಂಭದಲ್ಲಿದ್ದ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗುತ್ತಿದೆ. ಮೃತ ವ್ಯಕ್ತಿಯನ್ನು ದೇವಗಡ ಬರಿಯಾ ನಿವಾಸಿ ರಮೇಶ್ ವಂಝಾರ (51) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಅಡಿಕೆ ಬೆಳೆಯ ಎಲೆ ಚುಕ್ಕೆ ರೋಗ ಬಾಧೆ ಹಾವಳಿ ಬಗ್ಗೆ ಕೇಂದ್ರಕ್ಕೆ ನಿಯೋಗ – ಆರಗ ಜ್ಞಾನೇಂದ್ರ

    ವೀಡಿಯೋದಲ್ಲಿ ರಮೇಶ್ ವಂಝಾರ ಅವರು ಕೈಯಲ್ಲಿ ಕೋಲು ಹಿಡಿದುಕೊಂಡು ಮತ್ತೋರ್ವ ವ್ಯಕ್ತಿಯ ಜೊತೆಗೆ ದಾಂಡಿಯಾ ನೃತ್ಯ ಮಾಡುತ್ತಿರುತ್ತಾರೆ. ಈ ವೇಳೆ ವಂಝಾರ ದಣಿದಿರಬಹುದು ಅಂದುಕೊಂಡು ಅವರ ಬಳಿ ಇದ್ದ ಕೋಲನ್ನು ಮತ್ತೊಬ್ಬರು ತೆಗೆದುಕೊಂಡು ಹೋಗುತ್ತಾರೆ. ಆಗ ಇದ್ದಕ್ಕಿದ್ದಂತೆ ರಮೇಶ್ ವಂಝಾರ ನೆಲದ ಮೇಲೆ ಕುಸಿದು ಬೀಳುತ್ತಾರೆ. ತಕ್ಷಣ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಅವರ ನೆರವಿಗಿ ಧಾವಿಸುತ್ತಾರೆ. ಆದರೆ ಹಠಾತ್ ಹೃದಯ ಸ್ತಂಭನದಿಂದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಸೋಮವಾರ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಯಿತು. ರಮೇಶ್ ವಂಝಾರ ಅವರ ಅಗಲಿಕೆಗೆ ಆಪ್ತರು ಮತ್ತು ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕರ್ನಾಟಕದಿಂದ 1 ಟ್ರಿಲಿಯನ್ ಡಾಲರ್ ಆರ್ಥಿಕ ಕೊಡುಗೆ ಗುರಿ – ಮೇಲ್ವಿಚಾರಣೆಗೆ ವಿಶೇಷ ತಂಡ ರಚನೆ

    Live Tv
    [brid partner=56869869 player=32851 video=960834 autoplay=true]