Tag: ದಾಂಡಿಯಾ

  • ಬೀದರ್‌ನಲ್ಲಿ ನವರಾತ್ರಿ ಸಂಭ್ರಮ – ಮಹಿಳೆಯರಿಂದ ದಾಂಡಿಯಾ, ಗಾರ್ಬಾ ನೃತ್ಯ

    ಬೀದರ್‌ನಲ್ಲಿ ನವರಾತ್ರಿ ಸಂಭ್ರಮ – ಮಹಿಳೆಯರಿಂದ ದಾಂಡಿಯಾ, ಗಾರ್ಬಾ ನೃತ್ಯ

    ಬೀದರ್‌: ಮಹಾರಾಷ್ಟ್ರ (Maharashtra) ಹಾಗೂ ತೆಲಂಗಾಣ (Telangana) ಗಡಿಗೆ ಹೊಂದಿರುವ ಬೀದರ್‌ನಲ್ಲಿ (Bidar) ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

    ಬೀದರ್ ನಗರದ ಕುಂಬಾರವಾಡಾ ಭವಾನಿ ದೇವಿ ಮಂದಿರ ಸೇರಿದಂತೆ ಜಿಲ್ಲೆಯಾದ್ಯಂತ ಮಹಿಳೆಯರು ದಾಂಡಿಯಾ (Dandiya) ಮತ್ತು ಗಾರ್ಬಾ ನೃತ್ಯ (Garba Dance) ಮಾಡುವ ಮೂಲಕ ನವರಾತ್ರಿ (Navratri) ಉತ್ಸವವನ್ನು ಸಂಭ್ರಮದಿಂದ ಆಚರಿಸಿದರು.

     
    ವಯಸ್ಸಿನ ಅಂತರ ಮರೆತು ಸಂಭ್ರಮದಿಂದ ದಾಂಡಿಯಾ ನೃತ್ಯ ಹಾಗೂ ಗಾರ್ಬಾ ನೃತ್ಯ (Garba Dance) ಆಡುವುದರ ಮೂಲಕ ಮಹಿಳೆಯರು ಮತ್ತು ಬಾಲಕಿಯರು ಜನರ ಗಮನ ಸೆಳೆದರು.  ಇದನ್ನೂ ಓದಿ: ಗಾರ್ಬಾ ನೃತ್ಯದಲ್ಲಿ ತೊಡಗಿದ್ದವರಿಗೆ ಹೃದಯಾಘಾತ – 10 ಸಾವು

    ನಗರದ ಐತಿಹಾಸಿಕ ಕುಂಬಾರವಾಡಾ ದೇವಿ ಮಂದಿರದಲ್ಲಿ ಐದು ದಿನಗಳ ಕಾಲ ಕೈಯಲ್ಲಿ ಸಸಿ ಹಿಡಿದುಕೊಂಡು ಭವಾನಿ ತಾಯಿ ಭಕ್ತರಿಗೆ ದರ್ಶನ ನೀಡುತ್ತಾಳೆ. ತಾಯಿಯ ದರ್ಶನ ಪಡೆಯಲು ನಗರ ಹಾಗೂ ಗ್ರಾಮೀಣ ಭಾಗದ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೆಲ್ಮೆಟ್ ಧರಿಸಿ ಮಹಿಳೆಯರ ಕೋಲಾಟ

    ಹೆಲ್ಮೆಟ್ ಧರಿಸಿ ಮಹಿಳೆಯರ ಕೋಲಾಟ

    ಕಾರವಾರ: ದಸರಾ ಪ್ರಯುಕ್ತ ನಡೆದ ದಾಂಡಿಯಾ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಲ್ಮೆಟ್ ಧರಿಸಿ ಕೋಲಾಟ ಆಡಿದ್ದಾರೆ.

    ಕಾರವಾರದ ಕೆ.ಎಚ್.ಬಿ. ಕಾಲೋನಿಯಲ್ಲಿ ದಸರಾ ಪ್ರಯುಕ್ತ ಮಹಿಳೆಯರು ದಾಂಡಿಯಾ ನೃತ್ಯ ಮಾಡುತ್ತಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಹೆಲ್ಮೆಟ್ ಧರಿಸಿ ಆಗಮಿಸಿದ ಮಹಿಳೆಯರು ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದರು. ಈ ಮೂಲಕ ಪ್ರತಿಯೊಬ್ಬ ವಾಹನ ಸವಾರರು ಹೆಲ್ಮೆಟ್ ಧರಿಸೋದು ಕಡ್ಡಾಯ ಎಂಬ ಜಾಗೃತಿಯನ್ನು ಮೂಡಿಸಿದರು. ಸದ್ಯ ಮಹಿಳೆಯರು ಹೆಲ್ಮೆಟ್ ಧರಿಸಿ ದಾಂಡಿಯಾ ಆಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಶಂಸೆ ವ್ಯಕ್ತವಾಗಿದೆ.

    ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದಗಿನಿಂದ ಟ್ರಾಫಿಕ್ ಉಲ್ಲಂಘಟನೆ ಭಾರೀ ದಂಡ ತೆತ್ತಬೇಕಿದೆ. ಕರ್ನಾಟಕದಲ್ಲಿ ದೊಡ್ಡ ದಂಡದ ಮೊತ್ತಕ್ಕೆ ರಾಜ್ಯ ಸರ್ಕಾರ ಬ್ರೇಕ್ ನೀಡಿದೆ. ಪೊಲೀಸರು ಮಾತ್ರ ವಾಹನ ಸವಾರರಿಗೆ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಗಾಂಧಿ ಜಯಂತಿಯಂದು ರಾಯಚೂರು ಪೊಲೀಸರು ಹೆಲ್ಮೆಟ್ ಧರಿಸದೇ ಸವಾರರಿಗೆ ದಂಡ ಹಾಕಿ ಉಚಿತ ಹೆಲ್ಮೆಟ್ ನೀಡಿದ್ದರು.