Tag: ದಸುನ್‌ ಶನಾಕ

  • Asia Cup 2023ː ಬಿಗಿ ಬೌಲಿಂಗ್‌ ಹಿಡಿತಕ್ಕೆ ಲಂಕಾ ಭಸ್ಮ – ಭಾರತಕ್ಕೆ 41 ರನ್‌ಗಳ ಭರ್ಜರಿ ಜಯ

    Asia Cup 2023ː ಬಿಗಿ ಬೌಲಿಂಗ್‌ ಹಿಡಿತಕ್ಕೆ ಲಂಕಾ ಭಸ್ಮ – ಭಾರತಕ್ಕೆ 41 ರನ್‌ಗಳ ಭರ್ಜರಿ ಜಯ

    ಕೊಲಂಬೊ: ಇಲ್ಲಿನ ಆರ್‌ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯವು ಬೌಲರ್‌ಗಳ ಆಟಕ್ಕೆ ಸೀಮಿತವಾಗಿತ್ತು. ಇತ್ತಂಡಗಳಿಂದಲೂ ಸ್ಪಿನ್‌ ಬೌಲರ್‌ಗಳ ಕೈಚಳಕ ಜೋರಾಗಿತ್ತು. ಆದ್ರೆ ಚೇಸಿಂಗ್‌ನಲ್ಲಿ ಲಂಕಾ ವಿರುದ್ಧ ಬಿಗಿ ಹಿಡಿತ ಸಾಧಿಸಿದ ರೋಹಿತ್‌ ಪಡೆ 41 ರನ್‌ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

    ರೋಹಿತ್‌ ಶರ್ಮಾ ಅರ್ಧಶತಕ ಬ್ಯಾಟಿಂಗ್‌ ನೆರವು ಹಾಗೂ ಕುಲ್ದೀಪ್‌ ಯಾದವ್‌ ಸ್ಪಿನ್‌ ಬೌಲಿಂಗ್‌ ದಾಳಿ ನೆರವಿನಿಂದ ಭಾರತ, ಶ್ರೀಲಂಕಾ ವಿರುದ್ಧ 41 ರನ್‌ಗಳ ಜಯ ಸಾಧಿಸಿದ್ದು, ಫೈನಲ್‌ ಕನಸು ಜೀವಂತವಾಗಿಸಿಕೊಂಡಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 49.1 ಓವರ್‌ಗಳಲ್ಲಿ 213 ರನ್‌ಗಳಿಗೆ ಆಲೌಟ್‌ ಆಯಿತು. 214 ರನ್‌ಗಳ ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಟೀಂ ಇಂಡಿಯಾ ಸ್ಪಿನರ್‌ಗಳ ದಾಳಿಗೆ ನಲುಗಿತು. 41.3 ಓವರ್‌ಗಳಲ್ಲಿ 172 ರನ್‌ಗಳಗೆ ಸರ್ವಪತನ ಕಂಡಿತು.

    ಚೇಸಿಂಗ್‌ ಆರಂಭಿಸಿದ ಲಂಕಾ ತಂಡ ಟೀಂ ಇಂಡಿಯಾ ಸ್ಪಿನ್‌ ಬೌಲಿಂಗ್‌ ದಾಳಿಗೆ ನಲುಗಿಹೋಗಿತ್ತು. 7 ಓವರ್‌ಗಳಲ್ಲಿ 26 ರನ್‌ಗಳಿಸಿ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. 26 ಓವರ್‌ಗಳಲ್ಲಿ 104 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಪಾತುಮ್ ನಿಸ್ಸಾಂಕ 6 ರನ್‌, ದಿಮುತ್ ಕರುಣಾರತ್ನೆ 2 ರನ್‌, ಕುಸಲ್ ಮೆಂಡಿಸ್ 15 ರನ್‌, ಸದೀರ ಸಮರವಿಕ್ರಮ 17 ರನ್‌, ಚರಿತ್ ಅಸಲಂಕಾ 22 ರನ್‌ ಹಾಗೂ ದಸುನ್‌ ಶನಾಕ 9 ರನ್‌ಗಳಿಸಿ ವಿಕೆಟ್‌ ಕೈಚೆಲ್ಲಿದರು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಧನಂಜಯ ಡಿ ಸಿಲ್ವಾ ಹಾಗೂ ದುನಿತ್ ವೆಲ್ಲಲಾಗೆ ತಂಡಕ್ಕೆ ನೆರವಾದರು.

    ಧನಂಜಯ ಹಾಗೂ ದುನಿತ್‌ ಜೋಡಿ 7ನೇ ವಿಕೆಟ್‌ಗೆ 75 ಎಸೆತಗಳಲ್ಲಿ 63 ರನ್‌ಗಳ ಜೊತೆಯಾಟ ನೀಡಿತ್ತು. ಕೊನೆಯ ಹಂತ ತಲುಪುತ್ತಿದ್ದಂತೆ ಸ್ಪೋಟಕ ಆಟಕ್ಕೆ ಪ್ರಯತ್ನಿಸಿತ್ತು. ಅಷ್ಟರಲ್ಲೇ ಜಡೇಜಾ ಧನಂಜಯ್‌ ಸೆಲ್ವಾ ಆಟಕ್ಕೆ ಬ್ರೇಕ್‌ ಹಾಕಿದರು. ಸಿಲ್ವಾ 66 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 41 ರನ್‌ ಗಳಿಸಿ ಔಟಾಗುತ್ತಿದ್ದಂತೆ ಮಹೀಶ್‌ ತೀಕ್ಷಣ, ಕಸುನ್‌ ರಜಿತ ಹಾಗೂ ಮಹೇಶ್‌ ಪಥಿರಣ ವಿಕೆಟ್‌ ಒಪ್ಪಿಸಿದ್ರು. ಕೊನೆಯವರೆಗೂ ಹೋರಾಟ ನಡೆಸಿದ ದುನಿತ್‌ 46 ಎಸೆತಗಳಲ್ಲಿ 42 ರನ್‌ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಶ್ರೀಲಂಕಾ 41.3 ಓವರ್‌ಗಳಲ್ಲಿ 172 ರನ್‌ಗಳಿಗೆ ಸರ್ವಪತನ ಕಂಡಿತು.

    ಟೀಂ ಇಂಡಿಯಾ ವಿರುದ್ಧ ಕುಲ್ದೀಪ್‌ ನಾಲ್ಕು ವಿಕೆಟ್‌ ಕಿತ್ತರೆ, ಜಸ್ಪ್ರೀತ್‌ ಬುಮ್ರಾ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್‌ ಹಾಗೂ ಮೊಹಮ್ಮದ್‌ ಸಿರಾಜ್‌, ಹಾರ್ದಿಕ್‌ ಪಾಂಡ್ಯ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಆರಂಭಿಕರಾದ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೋಡಿ 15.1 ಓವರ್‌ಗಳಲ್ಲಿ 91 ರನ್‌ಗಳ ಜೊತೆಯಾಟ ನೀಡಿತು. ಶುಭಮನ್‌ ಗಿಲ್‌ 19‌ ರನ್‌ ಗಳಿಸಿ ಔಟಾದರು. ಈ ಬೆನ್ನಲ್ಲೇ ಪಾಕ್‌ ವಿರುದ್ಧ ಶತಕ ಸಿಡಿಸಿ ಮೆರೆದಾಡಿದ್ದ ಕೊಹ್ಲಿ ಕೇವಲ 3 ರನ್‌ಗಳಿಗೆ ಔಟಾದರು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್‌ ಕಿಶನ್‌ 61 ಎಸೆತಗಳಲ್ಲಿ 33 ರನ್ ಹಾಗೂ ಕೆ.ಎಲ್‌ ರಾಹುಲ್‌ 44 ಎಸೆತಗಳಲ್ಲಿ 39 ರನ್‌ ಬಾರಿಸುವ ಮೂಲಕ ಛೇರಿಕೆ ನೀಡಿದ್ದರು. ಇವರಿಬ್ಬರ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಒಂದೊಂದೇ ವಿಕೆಟ್‌ ಕಳೆದುಕೊಂಡಿತು. ಕೊನೆಯಲ್ಲಿ ಅಕ್ಷರ್‌ ಪಟೇಲ್‌ 26 ರನ್‌ಗಳ ನೆರವಿನಿಂದ ಟೀಂ ಇಂಡಿಯಾ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಮೊದಲ 15 ಓವರ್‌ಗಳಲ್ಲಿ 91 ರನ್‌ ಗಳಿಸಿದ್ದ ಭಾರತ 25 ಓವರ್‌ಗಳಲ್ಲಿ 128 ರನ್‌ ಗಳಿಸಿತ್ತು. ಬಳಿಕ ನಿಧಾನ ಗತಿ ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾ 43 ಓವರ್‌ಗಳಲ್ಲಿ 186 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡಿತ್ತು. ಇದರಿಂದ 200 ರನ್‌ ಗಳಿಸುವುದೂ ಕಷ್ಟವಾಗಿತ್ತು. ಈ ವೇಳೆ ಅಕ್ಷರ್‌ ಪಟೇಲ್‌ ಜವಾಬ್ದಾರಿಯುತ ಆಟದಿಂದ 200ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಶ್ರೀಲಂಕಾ ಪರ ದುನಿತ್ ವೆಲ್ಲಲಾಗೆ 10 ಓವರ್‌ಗಳಲ್ಲಿ 40 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಕಿತ್ತರೆ, ಚರಿತ್‌ ಹಸಲಂಕಾ 9 ಓವರ್‌ಗಳಲ್ಲಿ ಕೇವಲ 18 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಉರುಳಿಸಿದರು. ಮಹೀಶ್‌ ತೀಕ್ಷಣ ಒಂದು ವಿಕೆಟ್‌ ಪಡೆದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • AsiaCup 2023: ಬಾಂಗ್ಲಾಕ್ಕೆ ಲಗಾಮು ಹಾಕಿದ ಲಂಕಾ – 5 ವಿಕೆಟ್‌ಗಳ ಜಯದೊಂದಿಗೆ ಶುಭಾರಂಭ

    AsiaCup 2023: ಬಾಂಗ್ಲಾಕ್ಕೆ ಲಗಾಮು ಹಾಕಿದ ಲಂಕಾ – 5 ವಿಕೆಟ್‌ಗಳ ಜಯದೊಂದಿಗೆ ಶುಭಾರಂಭ

    ಕೊಲಂಬೊ: ಬೌಲಿಂಗ್‌ನಲ್ಲಿ ಉತ್ತಮ ಹಿಡಿತ ಸಾಧಿಸಿದ್ದ ಶ್ರೀಲಂಕಾ (Sri Lanka) ತಂಡ ಮಂದಗತಿಯ ಬ್ಯಾಟಿಂಗ್‌ ಹೊರತಾಗಿಯೂ ಬಾಂಗ್ಲಾದೇಶದ (Bangladesh) ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಏಕದಿನ ಏಷ್ಯಾಕಪ್‌ (AsiaCup) ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.

    ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ 42.4 ಓವರ್‌ಗಳಲ್ಲಿ 164 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಲಂಕಾ 39 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 165 ರನ್‌ ಗಳಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: 5,966 ಕೋಟಿ ರೂ.ಗೆ BBCI ಮಾಧ್ಯಮ ಹಕ್ಕು ಪಡೆದ Viacom18

    ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಲಂಕಾ ತಂಡಕ್ಕೂ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ಪಾತುಂ ನಿಸ್ಸಾಂಕ (14 ರನ್‌) ಹಾಗೂ ದಿಮುತ್ ಕರುಣಾರತ್ನೆ (1 ರನ್‌) ಜೋಡಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಈ ಬೆನ್ನಲ್ಲೇ ಕುಸಲ್‌ ಮೆಂಡೀಸ್‌ ಸಹ 5 ರನ್‌ಗಳಿಗೆ ವಿಕೆಟ್‌ ಕೈಚೆಲ್ಲಿ ಪೆವಿಲಿಯನ್‌ ಸೇರಿಕೊಂಡರು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಜೊತೆಗೂಡಿದ ಸದೀರ ಸಮರವಿಕ್ರಮ, ಚರಿತ್ ಅಸಲಂಕ ಶತಕದ ಜೊತೆಯಾಟದಿಂದ ಗೆಲುವಿನ ಹಾದಿಯತ್ತ ಸಾಗಿತು.

    4ನೇ ವಿಕೆಟ್‌ಗೆ ಈ ಜೋಡಿ 119 ರನ್‌ಗಳ ಜೊತೆಯಾಟ ನೀಡಿತು. ಸಮರವಿಕ್ರಮ 77 ಎಸೆತಗಳಲ್ಲಿ 56 ರನ್‌ ಗಳಿಸಿದ್ರೆ, ಅಸಲಂಕ 92 ಎಸೆತಗಳಲ್ಲಿ ಅಜೇಯ 62 ರನ್‌ (5 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಮಿಂಚಿದರು. ಕೊನೆಯಲ್ಲಿ ನಾಯಕ ದಸುನ್‌ ಶನಾಕ (Dasun Shanaka) 21 ಎಸೆತಗಳಲ್ಲಿ 14 ರನ್‌ ಗಳಿಸಿ ಜಯದ ದಡ ಮುಟ್ಟಿಸಿದರು.

    ಬಾಂಗ್ಲಾ ಪರ ನಾಯಕ ಶಕೀಬ್ ಅಲ್ ಹಸನ್ 2 ವಿಕೆಟ್‌ ಕಿತ್ತರೆ, ತಸ್ಕಿನ್‌ ಅಹ್ಮದ್‌, ಶೋರಿಫುಲ್ ಇಸ್ಲಾಂ ಹಾಗೂ ಮೆಹದಿ ಹಸನ್‌ (Shakib Al Hasan) ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಭಾರತೀಯರು ಎಲ್ಲಿ ಬೇಕಾದ್ರೂ ಜಯಿಸ್ತಾರೆ ಅನ್ನೋದಕ್ಕೆ ನೀವು ಮಾದರಿ – ಪ್ರಜ್ಞಾನಂದ ಕುಟುಂಬ ಭೇಟಿ ಮಾಡಿದ ಮೋದಿ

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ ಲಂಕಾ ಬೌಲರ್‌ಗಳ ದಾಳಿಗೆ ತತ್ತರಿಸಿತು. 3ನೇ ಕ್ರಮಾಂಕದಲ್ಲಿ ಬಂದ ನಜ್ಮುಲ್ ಹೊಸೈನ್ ಶಾಂತೋ 122 ಎಸೆತಗಳಲ್ಲಿ 89 ರನ್‌ (7 ಬೌಂಡರಿ), ತೌಹಿದ್ ಹೃದಯೊಯ್ 20 ರನ್‌ ಗಳಿಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕೈಚೆಲ್ಲಿದ ಪರಿಣಾಮ ತಂಡಕ್ಕೆ ಸೋಲಾಯಿತು.

    ತೀಕ್ಷ್ಣ ಬೌಲಿಂಗ್‌ ಬಾಂಗ್ಲಾ ತತ್ತರ: ಮೊದಲು ಫೀಲ್ಟಿಂಗ್‌ ಮಾಡುವ ಅವಕಾಶ ಪಡೆದ ಲಂಕಾ ಪರ ಬೌಲರ್‌ಗಳು ಉತ್ತಮ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಮಾರಕ ಬೌಲಿಂಗ್‌ ದಾಳಿ ನಡೆಸಿದ ಮಥೀಶ ಪತಿರಣ 7.4 ಓವರ್‌ಗಳಲ್ಲಿ 32 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಿತ್ತರೆ, ಮಹೀಶ್‌ ತೀಕ್ಷಣ 2 ವಿಕೆಟ್‌, ಧನಂಜಯ ಡಿ ಸಿಲ್ವಾ, ದುನಿತ್‌ ಹಾಗೂ ದಸುನ್‌ ಶನಾಕ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]