Tag: ದಸರಾ

  • ರಾಜಬೀದಿಯಲ್ಲಿ ತಾಲೀಮು ಆರಂಭ: ದಸರಾ ಆನೆಗಳ ತೂಕ 1 ವರ್ಷದ ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ರಾಜಬೀದಿಯಲ್ಲಿ ತಾಲೀಮು ಆರಂಭ: ದಸರಾ ಆನೆಗಳ ತೂಕ 1 ವರ್ಷದ ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ಮೈಸೂರು: ಮೈಸೂರು ದಸರೆಗಾಗಿ ಆಗಮಿಸಿರುವ ಕ್ಯಾಪ್ಟನ್ ಅರ್ಜುನ ನೇತೃತ್ವದ ಮೊದಲ ಗಜಪಡೆಯ ಟೀಂ ರಾಜಬೀದಿಯಲ್ಲಿ ತಾಲೀಮು ಆರಂಭಿಸಿದೆ.

    ಅಂಬಾರಿ ಮೆರವಣಿಗೆ ವೇಳೆಗೆ ಆನೆಗಳು ಮತ್ತಷ್ಟು ಶಕ್ತಿಶಾಲಿ ಆಗಬೇಕಿದ್ದು, ತಾಲೀಮು ಆರಂಭಿಸುವ ಮುನ್ನ ಅವುಗಳ ತೂಕ ಪರೀಕ್ಷೆ ನಡೆಸಲಾಗುತ್ತದೆ. ಗಜಪಡೆಯ ಆರೈಕೆ ಹಾಗೂ ಆರೋಗ್ಯದ ಮೇಲೆ ನಿಗಾ ಇಡುವ ಸಲುವಾಗಿ ಅರಣ್ಯ ಇಲಾಖೆಯೂ ಈ ಪರೀಕ್ಷೆ ನಡೆಸುತ್ತದೆ. ಕಳೆದ ಬಾರಿ ದಸರಾ ಮುಗಿಸಿ ಕಾಡಿಗೆ ಹಿಂದಿರುಗಿದ್ದ ಗಜಪಡೆಯ ತೂಕಕ್ಕೂ ಇವತ್ತಿನ ತೂಕಕ್ಕೂ ಇರುವ ವ್ಯತ್ಯಾಸದ ಕುರಿತ ಇನ್‍ಟ್ರೆಸ್ಟಿಂಗ್ ಅಂಶಗಳು ಇಂತಿದೆ.

    ಇಂದು ಟ್ರಕ್‍ಗಳ ತೂಕ ಹಾಕುವ ಕೇಂದ್ರದಲ್ಲಿ ಆನೆಗಳ ತೂಕ ಪರೀಕ್ಷಿಸಲಾಯಿತು. ಕ್ಯಾಪ್ಟನ್ ಅರ್ಜುನ, ವರಲಕ್ಷ್ಮಿ, ವಿಕ್ರಮ, ಧನಂಜಯ, ಗೋಪಿ ಮತ್ತು ಚೈತ್ರ ಆನೆಗಳ ದೇಹ ತೂಕ ಪರೀಕ್ಷಿಸಲಾಯಿತು. ಕಳೆದ ವರ್ಷ 5,250 ಕೆಜಿ ತೂಕವಿದ್ದ ಕ್ಯಾಪ್ಟನ್ ಅರ್ಜುನ ಈಗ 5,650 ಕೆಜಿ ತೂಕವಿದ್ದಾನೆ. ಅಲ್ಲಿಗೆ, ಒಂದು ವರ್ಷಕ್ಕೆ 400 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಇನ್ನೂ ವರಲಕ್ಷ್ಮಿ ಆನೆ 3,120 ಕೆಜಿ ತೂಕವಿದೆ. ಕಳೆದ ವರ್ಷ ಈ ಆನೆ 2,830 ಕೆಜಿ ಇತ್ತು. ಅಲ್ಲಿಗೆ 290 ಕೆಜಿ ತೂಕವನ್ನು ವರಲಕ್ಷ್ಮಿ ಹೆಚ್ಚಿಸಿಕೊಂಡಿದೆ.

    ವಿಕ್ರಮ ಆನೆ 3,985 ಕೆಜಿ, ಗೋಪಿ 4,435 ಕೆಜಿ, ಚೈತ್ರಾ 2,920 ಕೆಜಿ ಹಾಗೂ ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿರುವ ಧನಂಜಯ ಆನೆ 4,045 ಕೆಜಿ ತೂಕವಿದ್ದಾನೆ. ಅಲ್ಲಿಗೆ ಮೊದಲ ತಂಡದ ಆನೆಗಳಲ್ಲಿ ಕ್ಯಾಪ್ಟನ್ ಅರ್ಜುನ ಹೆಚ್ಚು ಬಲಶಾಲಿಯಾಗಿದ್ದಾನೆ. ಉಳಿದಂತೆ ಎಲ್ಲಾ ಆನೆಗಳು ಸದೃಢವಾಗಿವೆ. ಆನೆಗಳ ಬಲವನ್ನು ಇನ್ನಷ್ಟು ಹೆಚ್ಚಿಸಲು ಇಂದಿನಿಂದ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಬೆಲ್ಲ, ತೆಂಗಿನಕಾಯಿ, ಭತ್ತ, ಮುದ್ದೆ, ಬೆಣ್ಣೆ ಸೇರಿದಂತೆ ಪೌಷ್ಠಿಕವಾದ ಕಾಳು, ಹಸಿರು ಹುಲ್ಲನ್ನು ಪ್ರತಿ ದಿನವೂ ನಾಲ್ಕೈದು ಬಾರಿ ಆನೆಗಳಿಗೆ ನೀಡಿ ಅವುಗಳನ್ನು ಇನ್ನಷ್ಟು ಬಲಶಾಲಿ ಆಗುವಂತೆ ಮಾಡಲಾಗುತ್ತದೆ.

    ನಾಡಿನಲ್ಲಿ ಒಂದೂವರೆ ತಿಂಗಳು ಸಿಗುವ ರಾಜಾತಿಥ್ಯದಲ್ಲಿ ಆನೆಗಳು ತಮ್ಮ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದರಲ್ಲಿ ಅನುಮಾನಗಳೇ ಇಲ್ಲ. ವಿಜಯದಶಮಿ ಮೆರವಣಿಗೆಯಲ್ಲಿ ಐದು ಕಿಮೀ ದೂರವನ್ನು ಈ ಆನೆಗಳು ಕ್ರಮಿಸುತ್ತದೆ. ಹೀಗಾಗಿ ಆನೆಗಳ ಸಾರ್ಮಥ್ಯದ ಮೇಲೆ ಅರಣ್ಯ ಇಲಾಖೆ ಹೆಚ್ಚು ನಿಗಾವಹಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಿಲ್ಯಾಕ್ಸ್ ಮೂಡ್‍ನಲ್ಲಿ ಅರ್ಜುನ ಆಂಡ್ ಟೀಂ

    ರಿಲ್ಯಾಕ್ಸ್ ಮೂಡ್‍ನಲ್ಲಿ ಅರ್ಜುನ ಆಂಡ್ ಟೀಂ

    ಮೈಸೂರು: ಕಾಡನಿಂದ ನಾಡಿಗೆ ಬಂದಿರುವ ದಸರಾ ಗಜಪಡೆ ಈಗ ಫುಲ್ ರಿಲ್ಯಾಕ್ಸ್ ಮೂಡಿನಲ್ಲಿವೆ. ಕಾಡಿನಿಂದ ಬಂದಿರುವ ಅತಿಥಿಗಳಿಗೆ ನಾಡಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ. ಕಾಡಿನಲ್ಲಿ ಬೇಕಾದ್ದನ್ನು ತಿನ್ನುತ್ತಿದ್ದ ಗಜಪಡೆಗೆ ಇಲ್ಲಿ ಅತಿ ಪೌಷ್ಠಿಕವಾದ ಆಹಾರ ನೀಡಿ ಆರೈಕೆ ಮಾಡಲಾಗುತ್ತಿದೆ.

    ದಸರೆಗಾಗಿ ಕಾಡನಿಂದ ಬಂದಿರುವ ದಸರಾ ಗಜಪಡೆ ಈಗ ಮೈಸೂರಿನ ಅಶೋಕ್‍ಪುರಂನಲ್ಲಿನ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಕ್ಯಾಪ್ಟನ್ ಅರ್ಜುನ, ಧನಂಜಯ, ಚೈತ್ರ, ಗೋಪಿ, ವಿಕ್ರಮ, ವರಲಕ್ಷ್ಮಿ ಆನೆಗಳು ಸಂಪೂರ್ಣವಾಗಿ ವಿಶ್ರಾಂತಿಯಲ್ಲಿವೆ. ಈ ಆನೆಗಳು ಮೊದಲ ತಂಡದಲ್ಲಿ ಮೈಸೂರಿಗೆ ಬಂದಿದ್ದು, ಎರಡನೇ ತಂಡದಲ್ಲಿ ಇನ್ನೂ ಆರು ಆನೆಗಳು ಮುಂದಿನ ವಾರ ಮೈಸೂರಿಗೆ ಬರಲಿವೆ. ಇದನ್ನೂ ಓದಿ: ನಾಡಹಬ್ಬಕ್ಕೆ ಸಿದ್ಧತೆ ಶುರು- 4,050 ಕೆ.ಜಿ ತೂಕದ ಧನಂಜಯನಿಗೆ ಮೊದ್ಲ ದಸರಾ

    ಈಗ ಬಂದಿರುವ ಆನೆಗಳಿಗೆ ಭತ್ತ, ಹಸಿ ಹುಲ್ಲು, ಸೊಪ್ಪು, ಕಾಯಿ ಬೆಲ್ಲ ನೀಡಿ ಹಾರೈಕೆ ಮಾಡಲಾಗುತ್ತಿದೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಹೀಗೆ ನಾಲ್ಕು ಹಂತಗಳಲ್ಲಿ ಆನೆಗಳಿಗೆ ಪೌಷ್ಠಿಕವಾದ ಆಹಾರ ನೀಡಿ ಪರಿಪೂರ್ಣವಾಗಿ ಆರೈಕೆ ಮಾಡಲಾಗುತ್ತಿದೆ. ಅಲ್ಲದೆ ಆನೆಗಳ ಆರೋಗ್ಯದ ಬಗ್ಗೆಯೂ ವೈದ್ಯರು ತಪಾಸಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಮೈಸೂರಿಗೆ ಹೊರಟ ದಸರಾ ಆನೆಗಳು – ಇಷ್ಟವಾದ ಆಹಾರ ಕೊಟ್ಟ ನಂತ್ರ ಲಾರಿ ಹತ್ತಿದ ಧನಂಜಯ

    ಈ ಆನೆಗಳನ್ನು ನಾಳೆ ಸಂಜೆ 4 ಗಂಟೆಗೆ ಮೈಸೂರಿನ ಅರಮನೆಗೆ ಬರ ಮಾಡಿಕೊಳ್ಳಲಾಗುತ್ತದೆ. ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ,ಟಿ. ದೇವೇಗೌಡ ಅರಮನೆಯ ಬಲರಾಮ ದ್ವಾರದಲ್ಲಿ ಸಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅರಮನೆ ಆವರಣಕ್ಕೆ ಸ್ವಾಗತಿಸಲಿದ್ದಾರೆ ಎಂದು ಆನೆಯ ವೈದ್ಯರಾದ ನಾಗರಾಜ್ ತಿಳಿಸಿದರು.

    ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಆನೆಗಳನ್ನು ನೋಡಲು ಜನರು ತಂಡೋಪಡವಾಗಿ ಬರುತ್ತಿದ್ದಾರೆ. ಅದರಲ್ಲೂ ಇದೇ ಮೊದಲ ಬಾರಿಗೆ ದಸರೆಗೆ ಬಂದಿರುವ ಧನಂಜಯ ಆನೆ ಎಲ್ಲರ ಆರ್ಕಷಣೆಯಾಗಿದೆ. ಆನೆಗಳ ಜೊತೆ ಸೆಲ್ಫಿ ತೆಗೆಸಿಕೊಂಡು ಜನ ಸಂಭ್ರಮ ಪಡುತ್ತಿದ್ದಾರೆ ಎಂದು ಸ್ಥಳೀಯ ಗೋಪಿ ಹೇಳಿದರು.

    ಆನೆಗಳು ನಾಳೆ ಅರಮನೆ ಆವರಣ ಪ್ರವೇಶಿಸಿದ ಮೇಲೆ ಆನೆಗಳಿಗೆ ತಾಲೀಮು ಶುರುವಾಗಲಿದೆ. ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಆನೆಗಳಿಗೆ ದಸರಾ ಮೆರವಣಿಗೆ ಸಾಗುವ ಹಾದಿಯಲ್ಲಿ ತಾಲೀಮು ಮಾಡಿಸಿ ನಗರದ ಪರಿಸರಕ್ಕೆ ಅವುಗಳ ಮನ:ಸ್ಥಿತಿಯನ್ನು ಹೊಂದಿಸಲಾಗುತ್ತದೆ. ಈ ಮೂಲಕ ಮೈಸೂರಲ್ಲಿ ಆನೆ ದರ್ಬಾರ್ ಶುರುವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=ufz9ZpgsZ_o

  • ನಾಡಹಬ್ಬಕ್ಕೆ ಸಿದ್ಧತೆ ಶುರು- 4,050 ಕೆ.ಜಿ ತೂಕದ ಧನಂಜಯನಿಗೆ ಮೊದ್ಲ ದಸರಾ

    ನಾಡಹಬ್ಬಕ್ಕೆ ಸಿದ್ಧತೆ ಶುರು- 4,050 ಕೆ.ಜಿ ತೂಕದ ಧನಂಜಯನಿಗೆ ಮೊದ್ಲ ದಸರಾ

    ಮೈಸೂರು: ಮುಂದಿನ ತಿಂಗಳು ನಡೆಯಲಿರುವ ನಾಡಹಬ್ಬ ದಸರಾಗೆ ಮೈಸೂರು ಸಜ್ಜಾಗುತ್ತಿದೆ. ಅದಕ್ಕೆ ಅಧಿಕೃತವಾದ ಚಾಲನೆ ಇಂದು ಸಿಕ್ಕಿದೆ. ದಸರಾ ಮೆರವಣಿಗೆಯಲ್ಲಿ ಸಾಗುವ ಗಜಪಡೆಯ ಮೊದಲ ತಂಡ ಇಂದು ಕಾಡಿನಿಂದ ನಾಡಿಗೆ ಬಂದವು.

    ಈ ವರ್ಷದ ದಸರಾದಲ್ಲಿ ಭಾಗವಹಿಸುವ ಗಜಪಡೆಯ ಮೊದಲ ತಂಡ ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಕಾಡಿನಿಂದ ನಾಡಿಗೆ ಬಂದವು. 58 ವರ್ಷದ ಅರ್ಜುನ ಭಾಗವಹಿಸುತ್ತಿರುವ 19 ನೇ ದಸರಾ ಇದಾಗಿದ್ದು, ಕ್ಯಾಪ್ಟನ್ ಅರ್ಜುನ 2012 ರಿಂದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿ ನಿರ್ವಹಿಸುತ್ತಿದ್ದಾನೆ.

    ಕ್ಯಾಪ್ಟನ್ ಅರ್ಜುನನ ಜೊತೆ ವರಲಕ್ಷ್ಮಿ, ಚೈತ್ರ, ಗೋಪಿ, ವಿಕ್ರಮ ಮತ್ತು ಧನಂಜಯ ಆನೆಗಳು ಕಾಡಿನಿಂದ ನಾಡಿಗೆ ಬಂದವು. ಧನಂಜಯ ಆನೆ ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿದೆ. 35 ವರ್ಷದ ಧನಂಜಯ 4,050 ಕೆಜಿ ತೂಕ ಇದ್ದಾನೆ. ಅತ್ಯಂತ ಬಲಿಷ್ಟವಾಗಿರೋ ಧನಂಜಯ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯದಲ್ಲಿ ನಿಸ್ಸಿಮ್ಮನಾಗಿದ್ದಾನೆ. ಇದನ್ನೂ ಓದಿ: ಮೈಸೂರಿಗೆ ಹೊರಟ ದಸರಾ ಆನೆಗಳು – ಇಷ್ಟವಾದ ಆಹಾರ ಕೊಟ್ಟ ನಂತ್ರ ಲಾರಿ ಹತ್ತಿದ ಧನಂಜಯ

    ಈ ಗಜಪಡೆಗೆ ಮೈಸೂರು ಜಿಲ್ಲೆಯ ವೀರಹೊಸನಹಳ್ಳಿ ಬಳಿ ಸಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಶಾಸಕರಾದ ಎಚ್. ವಿಶ್ವನಾಥ್, ತನ್ವೀರ್‍ಸೇಠ್, ಮಹದೇವ್, ಹರ್ಷವರ್ಧನ್, ನಾಗೇಂದ್ರ, ಶ್ರೀಕಂಠೇಗೌಡ ಈ ವೇಳೆ ಹಾಜರಿದ್ದರು. ಈ ಆನೆಗಳು ಮೈಸೂರಿಗೆ ಬಂದು ವಿಶ್ರಾಂತಿ ಪಡೆಯಲಿದ್ದು ಸೆಪ್ಟೆಂಬರ್ 5 ರಂದು ಸಂಜೆ ಈ ತಂಡಕ್ಕೆ ಮೈಸೂರು ಅರಮನೆಯ ಆವರಣಕ್ಕೆ ಬರಮಾಡಿಕೊಳ್ಳಲಾಗುತ್ತದೆ. ನಂತರ, ಆನೆಗಳ ತಾಲೀಮು ಬೆಳಗ್ಗೆ ಮತ್ತು ಸಂಜೆ ನಡೆಯುತ್ತದೆ. ಇನ್ನೆರಡು ವಾರಕ್ಕೆ ಗಜಪಡೆಯ ಎರಡನೇ ತಂಡವೂ ಮೈಸೂರಿಗೆ ಬರಲಿದ್ದು, ನಂತರ ಎಲ್ಲಾ ಆನೆಗಳ ತಾಲೀಮು ಒಟ್ಟಾಗಿ ಸಾಗಲಿದೆ.

    ಕೊಡಗಿನ ಜಲಪ್ರವಾಹ ಮತ್ತು ಉತ್ತರ ಕರ್ನಾಟಕದ ಬರದ ಛಾಯೆ ನಡುವೆ ಈ ಬಾರಿಯನ್ನು ದಸರಾ ಸಾಂಪ್ರದಾಯಿಕವಾಗಿ ನಡೆಯಲಿದೆ. ಗಜಪಡೆ ಮೈಸೂರಿಗೆ ಬಂತೆಂದರೆ ಮೈಸೂರಲ್ಲಿ ದಸರಾ ಸಂಭ್ರಮದ ಹೆಚ್ಚಿದೆ ಅಂತಾನೇ ಅರ್ಥ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=OSN65my5LXc

  • ನೋವಿನಲ್ಲೇ ಸಾಂಪ್ರದಾಯಿಕ ಮಡಿಕೇರಿ ದಸರಾ ಆಚರಣೆಗೆ ಚಾಲನೆ

    ನೋವಿನಲ್ಲೇ ಸಾಂಪ್ರದಾಯಿಕ ಮಡಿಕೇರಿ ದಸರಾ ಆಚರಣೆಗೆ ಚಾಲನೆ

    ಮಡಿಕೇರಿ: ದಕ್ಷಿಣದ ಕಾಶ್ಮೀರ ಎಂದು ಹೆಸರುವಾಸಿಯಾಗಿದ್ದ ಕೊಡಗು ಇದೀಗ ಅಕ್ಷರಶಃ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದೆ. ಹಿಂದೆಂದೂ ಕಾಣದ ಜಲಪ್ರಳಯಕ್ಕೆ ಕೊಡಗು ತತ್ತರಿಸಿದೆ. ಆನೇಕರು ಮನೆ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಆದೇ ರೀತಿ ಆನೇಕ ವರ್ಷಗಳಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದ ಮಡಿಕೇರಿ ದಸರಾ ಕೂಡ ಈ ಬಾರೀ ತನ್ನ ಅಂದ ಕಳೆದುಕೊಂಡು ನೋವಿನ ನಡುವೆ ನಾಡಹಬ್ಬ ಆಚರಿಸುವ ಪರಿಸ್ಥಿತಿಗೆ ತಲುಪಿದೆ.

    ಮಡಿಕೇರಿಯ ದಸರಾ ರಾಜ್ಯದ ಗಮನ ಸೆಳೆದಿತ್ತು. ಅದೆಷ್ಟೋ ವರ್ಷದಿಂದ ದಸರಾ ತನ್ನ ವೈಶಿಷ್ಟ್ಯತೆಯನ್ನು ಉಳಿಸಿಕೊಂಡಿತ್ತು. ಮಡಿಕೇರಿಯ 10 ಶಕ್ತಿ ದೇವಾಲಯ ಸಮಿತಿಗಳ ದಶಮಂಟಪಗಳು ರಾಜಬೀದಿಯಲ್ಲಿ ಸಾಗಿ ಅಕರ್ಷಿಸುತ್ತಿತ್ತು. ಐತಿಹಾಸಿಕ ಪುರಾಣ ಕಥೆಗಳನ್ನು ಸಾರುವ ಮಂಟಪಗಳು ಎಲ್ಲರ ಗಮನ ಸೆಳೆಯುತ್ತಿತ್ತು. ದಶಮಂಟಪಗಳನ್ನು ನೋಡಲೆಂದೇ ದೂರದೂರಿನಿಂದ ಜನರು ಬರುತ್ತಿದ್ದರು. ಆದರೆ ಈ ಬಾರಿ ದಸರಾ ಹೇಗೆ ನಡೆಸುವುದು ಎಂಬ ಥಳಮಳ ಇದೀಗ ಸಮಿತಿಗಳಲ್ಲಿ ಪ್ರಾರಂಭಗೊಂಡಿದೆ.

    ಇಂದಿನವರೆಗೂ ಜನರ ದೇಣಿಗೆಯ ಮೂಲಕವೇ ದಸರಾ ನಡೆಯುತ್ತಿತ್ತು. ಇದರ ಜೊತೆಗೆ ಸರ್ಕಾರ ನೀಡುವ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಈ ಬಾರಿ ಜಲಪ್ರಳಯದಲ್ಲಿ ನೊಂದಿರುವ ಜನರ ಬಳಿ ಹೇಗೆ ಹಣ ಕೇಳುವುದು ಎಂಬ ನೋವು ಕೂಡ ಸಮಿತಿ ಮುಂದಿದೆ. ಆದರೆ ನೋವಿನ ನಡುವೆಯೇ ದಸರಾ ಆಚರಣೆಗೆ ಚಾಲನೆ ನೀಡಲಾಗಿದೆ.

    ಮಡಿಕೇರಿಯ ಶ್ರೀರಾಮ ಮಂದಿರದಲ್ಲಿ ಸಕಲ ಪೂಜಾ ವಿಧಿವಿಧಾನದ ಮೂಲಕ ಇಂದು ದಶಮಂಟಪಗಳ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. 10 ಮಂಟಪಗಳ ಸಮಿತಿ ಅಧ್ಯಕ್ಷರು ದೇವರಿಗೆ ಪೂಜೆ ಸಲ್ಲಿಸಿದರು. ಇನ್ನೂ ನೋವಿನ ನಡುವೆ ನಡೆಯುತ್ತಿರುವ ದಸರೆಗೆ ಸರ್ಕಾರ ಅನುದಾನ ನೀಡಬೇಕು. ಜನರ ಬಳಿ ದೇಣಿಗೆ ಸಂಗ್ರಹ ಮಾಡಲು ಸಾಧ್ಯವಿಲ್ಲ. ಅದರಿಂದ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಶಾಸಕರು ಸರ್ಕಾರದೊಂದಿಗೆ ಚರ್ಚಿಸಿ ಸಮಿತಿಯ ಜತೆಗೆ ಕೈಜೋಡಿಸಬೇಕು. ದಸರಾ ಆಚರಣೆಯ ವೇಳೆ ವಿಜೃಂಭಣೆಗೆ ಬ್ರೇಕ್ ಹಾಕಿ ಕೇವಲ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದು ದಶಮಂಟಪ ಸಮಿತಿ ಅಧ್ಯಕ್ಷ ರವಿ ತಿಳಿಸಿದ್ದಾರೆ.

    ಇದೇ ವೇಳೆ ಯಾವುದೇ ಕಾರಣಕ್ಕೂ ಆಚರಣೆ ಕೈಬಿಡಲು ಸಾಧ್ಯವಾಗುವುದಿಲ್ಲ 4 ಶಕ್ತಿ ದೇವತೆಗಳಾದ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ದೇವಾಲಯಗಳ ಕರಗ ಹೊರುವ ಮೂಲಕ ಆಚರಣೆಗೆ ಚಾಲನೆ ನೀಡಲಾಗಿದ್ದು, ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಧಾರ್ಮಿಕ ಆಚರಣೆಗಳನ್ನು ಮಾತ್ರ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರಿಗೆ ಹೊರಟ ದಸರಾ ಆನೆಗಳು – ಇಷ್ಟವಾದ ಆಹಾರ ಕೊಟ್ಟ ನಂತ್ರ ಲಾರಿ ಹತ್ತಿದ ಧನಂಜಯ

    ಮೈಸೂರಿಗೆ ಹೊರಟ ದಸರಾ ಆನೆಗಳು – ಇಷ್ಟವಾದ ಆಹಾರ ಕೊಟ್ಟ ನಂತ್ರ ಲಾರಿ ಹತ್ತಿದ ಧನಂಜಯ

    ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಸಾಂಪ್ರದಾಯದಂತೆ ಕೊಡಗಿನಿಂದ ಮೂರು ಆನೆಗಳ ದಂಡು ಪಯಣ ಆರಂಭಿಸಿದೆ.

    ಕುಶಾಲನಗರದ ಆನೆಕಾಡುವಿನಿಂದ ವಿಕ್ರಂ, ಧನಂಜಯ ಮತ್ತು ಗೋಪಿ ಎಂಬ ಮೂರು ಆನೆಗಳು ಮೈಸೂರು ಅರಮನೆ ನಗರಿಗೆ ಕಳುಹಿಸಿಕೊಡಲಾಗಿದೆ. ಆನೆಕಾಡುವಿನಿಂದ ಮಾವುತರು ಆನೆಗಳಿಗೆ ಪೂಜೆ ಸಲ್ಲಿಸಿ ಬಳಿಕ ಲಾರಿ ಮೂಲಕ ಹುಣಸೂರಿಗೆ ಕಳುಹಿಸಿ ಕೊಟ್ಟಿದ್ದಾರೆ.

    ಆನೆಕಾಡುವಿನಿಂದ ಇನ್ನೂ ಕೆಲವು ಆನೆಗಳು ಮೈಸೂರಿಗೆ ತೆರಳಲಿದ್ದು, ವಿಶೇಷವಾಗಿ ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗಹಿಸುತ್ತಿರುವ ಧನಂಜಯ ಆನೆ ಮೇಲೆ ಎಲ್ಲರು ಆಸಕ್ತಿ ವಹಿಸಿದ್ದಾರೆ. ಎಲ್ಲಾ ಆನೆಗಳು ಕಾಡುಬಿಟ್ಟು ಅರಮನೆಯತ್ತ ಪ್ರಯಾಣ ಬೆಳೆಸಲು ಸಿದ್ಧವಾಗಿದ್ದರೆ ಧನಂಜಯ ಮಾತ್ರ ಕಾಡು ಬಿಟ್ಟು ಬರಲು ಹಿಂದೇಟು ಹಾಕಿದ್ದ. ಮಾವುತರು 1 ಗಂಟೆಗೂ ಹೆಚ್ಚು ಕಾಲ ಎಷ್ಟೇ ಪ್ರಯತ್ನ ಪಟ್ಟರೂ ಲಾರಿ ಹತ್ತಲು ಧನಂಜಯ ಮಾತ್ರ ನಿಂತ ಜಾಗದಿಂದ ಮುಂದೇ ಬರಲಿಲ್ಲ. ಈ ವೇಳೆ ಆತನಿಗೆ ಇಷ್ಟವಾದ ಕಬ್ಬು ಬೆಲ್ಲದಿಂದ ಹಿಡಿದು ಇಷ್ಟವಾದ ಎಲ್ಲಾ ತಿಂಡಿಯನ್ನು ನೀಡಿ ಬಳಿಕ ಗೋಪಿ ಮತ್ತು ವಿಕ್ರಮ್ ಸಹಾಯದಿಂದ ಧನಂಜಯನನ್ನು ಲಾರಿ ಹತ್ತಿಸಲಾಯಿತು.

    ಇದೇ ಪ್ರಥಮ ಬಾರಿಗೆ ಲಾರಿ ಹತ್ತುತ್ತಿರುವ ಧನಂಜಯ ವಾಹನ ಕಂಡು ಸ್ವಲ್ಪ ಭಯಪಟ್ಟಿದೆ. ಅದ್ದರಿಂದ ಆನೆಗೆ ಗಾಬರಿ ಆಗದಿರಲಿ ಎಂದು ಮಾವುತರು ಕೂಡ ಧನಂಜಯನೊಂದಿಗೆ ನಿಂತು ಪ್ರಯಾಣ ಆರಂಭಿಸಿದ್ದಾರೆ. ಇನ್ನು ಭಾರೀ ಮಳೆಯಿಂದ ಮಡಿಕೇರಿಯಲ್ಲೂ ದಸರಾ ಸರಳ ಆಚರಣೆ ಮಾಡಲು ನಿರ್ಧಾರ ಮಾಡಿ ಚಾಲನೆ ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಡು ಸಮೃದ್ಧಿ ಆಗಿರೋ ಕಾರಣ ಅದ್ಧೂರಿ ದಸರಾ ಮಾಡೋಣ – ಸಿಎಂ

    ನಾಡು ಸಮೃದ್ಧಿ ಆಗಿರೋ ಕಾರಣ ಅದ್ಧೂರಿ ದಸರಾ ಮಾಡೋಣ – ಸಿಎಂ

    ಮೈಸೂರು: ರಾಜ್ಯ ಹಲವು ಡ್ಯಾಂಗಳು ಭರ್ತಿಯಾಗಿ ನಾಡು ಸಮೃದ್ಧಿಯಾಗಿದ್ದು, ಈ ಬಾರಿ ಅದ್ಧೂರಿ ದಸರಾ ಆಚರಣೆ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಹೇಳಿದ್ದಾರೆ.

    ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಸಿಎಂ ಹೆಚ್‍ಡಿಕೆ, ರಾಜ್ಯದ ಹಲವು ಜಲಾಶಯಗಳು ಭರ್ತಿಯಿಂದ ನಾಡು ಸಮೃದ್ಧಿಯಾಗಿದೆ. ಈ ಬಾರಿ ಉತ್ತಮ ಮಳೆ ಬಿದ್ದಿರುವುದರಿಂದ ವಿದ್ಯುತ್ ಸಮಸ್ಯೆಯೂ ನಿವಾರಣೆ ಆಗಿದೆ. 12 ವರ್ಷಗಳ ನಂತರ ಕೆಲ ಜಲಾಶಯಗಳಿಗೆ ನಾನೇ ಬಾಗಿನ ಅರ್ಪಣೆ ಮಾಡುತ್ತಿದ್ದೇನೆ. ಇದಕ್ಕೆಲ್ಲ ತಾಯಿ ಚಾಮುಂಡೇಶ್ವರಿಯ ಆಶಿರ್ವಾದ ಕಾರಣವಾಗಿದ್ದು, ನಾಡು ಸಮೃದ್ಧಿ ಆಗಿರೋ ಕಾರಣ ಅದ್ಧೂರಿ ದಸರಾ ಮಾಡುತ್ತೇವೆ. ನಾವು ಮಾಡುವ ದಸರಾ ಆಚರಣೆ ರಾಜ್ಯಕ್ಕೆ ಮಾದರಿಯಾಗುತ್ತದೆ. ಈ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ಸಭೆ ಕರೆದು ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ.

    ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡೇಶ್ವರಿ ಪೂಜೆ ಸಲ್ಲಿಸಿದ ಸಿಎಂ ರಾಜ್ಯದ ಅಭಿವೃದ್ಧಿಗೆ ಹಾಗೂ ರೈತರ ನೆಮ್ಮದಿಯ ಜೀವನಕ್ಕೆ ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ. ಇಂದು ನನ್ನ ಜೊತೆ ಹಲವು ಸಚಿವರು ಜೊತೆಗಿದ್ದು ತಾಯಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯಗಳಿಗೆ ಬಾಗಿನ ಅರ್ಪಣೆ ಮಾಡುವ ಶುಭಕಾರ್ಯವನ್ನು ಇಟ್ಟುಕೊಂಡಿದ್ದೇವೆ. ಈ ಎಲ್ಲ ಕಾರಣದಿಂದ ಆಷಾಢ ಶುಕ್ರವಾರದಂದು ಪೂಜೆಗೆ ಬಂದಿದ್ದೇವೆ ಎಂದು ಹೇಳಿದರು.

    ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಿಎಂ ಹೆಚ್‍ಡಿಕೆ ಹೇಳಿಕೆ ಆಷಾಢ ಮಾಸ, ಈ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನ ನಡೆಸೋದಿಲ್ಲ. ಆದರೆ ಇದೇ ಮಾಸದಲ್ಲಿ ದೇವರ ಆರಾಧನೆಯಿಂದ ಸಂಪೂರ್ಣ ಫಲ ಪ್ರಾಪ್ತಿಯಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ. ಅದರಲ್ಲೂ ಆಷಾಢ ಮಾಸದಲ್ಲಿ ಶಕ್ತಿದೇವತೆಗಳ ಆರಾಧನೆಯಿಂದ ಕುಟುಂಬ ಸದಸ್ಯರ ಆರೋಗ್ಯ, ಐಶ್ವರ್ಯ ಸಂಪತ್ತು ಅಭಿವೃದ್ಧಿಯಾಗುತ್ತೆ ಅನ್ನೋದು ಭಕ್ತರ ನಂಬಿಕೆ. ಈ ನಂಬಿಕೆಯಿಂದಲೇ ನೂರಾರು ವರ್ಷಗಳಿಂದ ಮೈಸೂರಿನ ಅಧಿದೇವತೆಯಾದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಮಾಸದ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸುತ್ತಾ ಬರಲಾಗಿದೆ.

  • ನಾಡಿನಿಂದ ಕಾಡಿನತ್ತ ಹೊರಟಿತು ದಸರಾ ಆನೆಗಳು

    ನಾಡಿನಿಂದ ಕಾಡಿನತ್ತ ಹೊರಟಿತು ದಸರಾ ಆನೆಗಳು

    ಮೈಸೂರು: ದಸರಾ ಹಬ್ಬಕ್ಕಾಗಿ ಕಾಡಿನಿಂದ ಮೈಸೂರು ಅರಮನೆಗೆ ಬಂದಿದ್ದ, ಗಜಪಡೆಗೆ ಪೂಜೆ ಸಲ್ಲಿಸಿ ನಾಡಿನಿಂದ ಬೀಳ್ಕೊಡಲಾಯಿತು.

    407 ನೇ ದಸರಾ ಹಬ್ಬಕ್ಕಾಗಿ ಒಂದು ತಿಂಗಳ ಹಿಂದೆ ಕಾಡಿನಿಂದ ಮೈಸೂರು ಅರಮನೆಗೆ ಗಜಪಡೆಯನ್ನು ಕರೆಸಲಾಗಿತ್ತು. ನಂತರ ಯಶಸ್ವಿಯಾಗಿ ವಿಜಯದಶಮಿಯ ಮೆರವಣಿಗೆ ಮುಗಿಸಿದ ಬಳಿಕ ಗಜಪಡೆಯನ್ನು ಮಂಗಳವಾರ ಕಾಡಿಗೆ ಕಳುಹಿಸಲಾಯಿತು.

    ಗಜಪಡೆಗೆ ಮೈಸೂರಿನ ಅರಮನೆ ಆವರಣದಲ್ಲಿ ಪೂಜೆ ಸಲ್ಲಿಸಿ ಆನೆಗಳನ್ನು ಒಂದೊಂದಾಗಿ ಲಾರಿಗೆ ಹತ್ತಿಸಿ, ಆ ಆನೆಗಳ ಕ್ಯಾಂಪ್ ಗೆ ಕಳುಹಿಸಲಾಯಿತು.

    ನಂತರ 15 ಆನೆಗಳ ಮಾವುತರು ಮತ್ತು ಕಾವಾಡಿಗಳಿಗೆ ಜಿಲ್ಲಾಡಳಿತದಿಂದ ಗೌರವಧನ ನೀಡಿ ಅಭಿನಂದನೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್, ಶಾಸಕ ಎಂ.ಕೆ. ಸೋಮಶೇಖರ್, ಅರಣ್ಯ ಇಲಾಖೆ ಆಧಿಕಾರಿಗಳು ಉಪಸ್ಥಿತರಿದ್ದರು.

     

  • ದಸರಾ ಹೆಲಿರೈಡ್: ಹದ್ದು ಡಿಕ್ಕಿಯಾಗಿ ಹೆಲಿಕಾಪ್ಟರ್ ಗಾಜು ಪುಡಿ

    ದಸರಾ ಹೆಲಿರೈಡ್: ಹದ್ದು ಡಿಕ್ಕಿಯಾಗಿ ಹೆಲಿಕಾಪ್ಟರ್ ಗಾಜು ಪುಡಿ

    ಮೈಸೂರು: ದಸರಾ ಪ್ರಯುಕ್ತ ಹೆಲಿಕಾಪ್ಟರ್ ಮೂಲಕ ಪ್ರವಾಸಿಗರಿಗೆ ಮೈಸೂರು ದರ್ಶನ ಮಾಡಿಸುವಾಗ ಹದ್ದೊಂದು ಬಡಿದು ಪೈಲೆಟ್ ಮುಂಬದಿಯ ಗಾಜು ಪುಡಿಯಾಗಿರುವ ಘಟನೆ ನಡೆದಿದೆ.

    ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಯ ವೇಳೆ 9 ಮಂದಿಯನ್ನು ಕರೆದುಕೊಂಡು ಹೆಲಿಕಾಪ್ಟರ್ ಮೇಲೆ ಹಾರಿತ್ತು. ಹಾರಾಟ ನಡೆಸುತ್ತಿರುವಾಗ ಅಗಸದಲ್ಲಿ ಏಕಾಏಕಿ ಹದ್ದು ಡಿಕ್ಕಿ ಹೊಡೆದಿದೆ.

    ಹದ್ದು ಸಾವನ್ನಪ್ಪಿದ್ದು, ಹೆಲಿಕಾಪ್ಟರ್ ಮುಂದಿನ ಬಲಬದಿಯ ಗಾಜು ಒಡೆದು ಹೋಗಿದೆ. ಪೈಲಟ್ ಶ್ರೀನಿವಾಸ ರಾವ್ ತಕ್ಷಣ ನಿಯಂತ್ರಣ ತಪ್ಪದಂತೆ ಜಾಗೃತಿ ವಹಿಸಿ ಸುರಕ್ಷಿತವಾಗಿ ಹೆಲಿಕಾಪ್ಟರ್ ಅನ್ನು ಕೆಳಗಡೆ ಇಳಿಸಿದ್ದಾರೆ.

    ದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ತೊಂದರೆಗಳಾಗಿಲ್ಲ. ಯಾರೂ ಗಾಬರಿ ಪಡಬೇಕಾಗಿಲ್ಲ ಎಂದು ಪವನ್ ಹನ್ಸ್ ಸಂಸ್ಥೆ ತಿಳಿಸಿದೆ.

    ಕಳೆದ ಹತ್ತು ದಿನಗಳಿಂದ ಹೆಲಿಕಾಪ್ಟರ್ ಮೂಲಕ ಆಕಾಶದಿಂದ ಮೈಸೂರು ನೋಡುವ ಅವಕಾಶವನ್ನು ಸಾರ್ವಜನಿಕರಿಗೆ ಒದಗಿಸಲಾಗಿತ್ತು. 2500 ರೂಪಾಯಿ ದರ ನಿಗದಿ ಮಾಡಿ ಮೈಸೂರಿನ ವೈಮಾನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

  • ನಮಗೆ ದೇಶಭಕ್ತಿ ಬಗ್ಗೆ ಬೋಧನೆ ಮಾಡಬೇಡಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದ ಉದ್ಧವ್ ಠಾಕ್ರೆ

    ನಮಗೆ ದೇಶಭಕ್ತಿ ಬಗ್ಗೆ ಬೋಧನೆ ಮಾಡಬೇಡಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದ ಉದ್ಧವ್ ಠಾಕ್ರೆ

    ಮುಂಬೈ: ಶಿವ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಇಂದು “ನಮಗೆ ದೇಶಭಕ್ತಿ ಬಗ್ಗೆ ಬೋಧನೆ ಮಾಡಬೇಡಿ” ಎಂದು ಬಿಜೆಯ ವಿರುದ್ಧ ವಾಗ್ದಾಳಿಯನ್ನು ಮಾಡಿದ್ದಾರೆ.

    ಮುಂಬೈಯ ಶಿವಾಜಿ ಪಾರ್ಕ್‍ನಲ್ಲಿ ಆಯೋಜಿಸಿದ್ದ ಪಕ್ಷದ ವಾರ್ಷಿಕ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಠಾಕ್ರೆ, ನಮಗೆ ರಾಷ್ಟ್ರಪ್ರೇಮದ ಬಗ್ಗೆ ಕಲಿಸಬೇಡಿ, ದೇಶಭಕ್ತಿಯನ್ನು ನಿಮ್ಮಿಂದ ಕಲಿಯಬೇಕಾದ ದಿನ ಇನ್ನೂ ಬಂದಿಲ್ಲ ಎಂದು ಹೇಳಿದರು.

    ಪ್ರಸ್ತುತ ಸಮಾಜದಲ್ಲಿ ಭ್ರಷ್ಟಾಚಾರವನ್ನು ಬೆಂಬಲಿಸುವವರು ದೇಶಭಕ್ತರಾಗಿದ್ದಾರೆ. ಭ್ರಷ್ಟಾಚಾರವನ್ನು ವಿರೋಧಿಸುವವರು ದೇಶದ್ರೋಹಿಗಳಾಗಿದ್ದಾರೆ. ಇಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೋಟು ರದ್ಧತಿ ನಿರ್ಧಾರವನ್ನು ಟೀಕಿಸಿದರು.

    ಇತ್ತೀಚಿಗೆ ಹಣದುಬ್ಬರದ ವಿರುದ್ಧ ಶಿವ ಸೇನಾ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಮೇಲೆ ವೈಯಕ್ತಿಕ ದಾಳಿಯನ್ನು ಮಾಡಲು ಯೋಚಿಸಿದರು. ಆದರೆ ಅವರು ದಾಳಿಯನ್ನು ಪ್ರಾರಂಭಿಸದಂತೆ ಕಾರ್ಯಕರ್ತರಲ್ಲಿ ಠಾಕ್ರೆ ಅವರು ಮನವಿ ಮಾಡಿಕೊಂಡಿದ್ದರು.

    ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷವು ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಪಕ್ಷದೊಂದಿಗೆ ಮಾಡಿಕೊಂಡಿರುವ ಸಮ್ಮಿಶ್ರ ಸರ್ಕಾರದ ಹಿನ್ನೆಲೆ ಸಿದ್ಧಾಂತ ಕುರಿತು ಹಾಗೂ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಪ್ರಸ್ತುತೆ ಕುರಿತು ಪ್ರಶ್ನಿಸಿದ್ದಾರೆ.

    `ಹಿಂದುತ್ವ’ ಎಂದ ಶಬ್ಧವನ್ನು ನಿಷೇಧಿಸಿದಾಗ ನಾವು ಹಿಂದುತ್ವಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದ್ದೇವೆ. ಆದರೆ ಬಿಜೆಪಿ ನಾಯಕರು ನಾವು ಅವರಿಗೆ ಯಾವುದೇ ರೀತಿ ಉಪಯೋಗವಿಲ್ಲ ಎಂದು ಭಾವಿಸಿದ್ದಾರೆ ಎಂದು ಠಾಕ್ರೆ ಹೇಳಿದರು.

    ಇತ್ತೀಚೆಗೆ ಪ್ರಧಾನಿ ಮೋದಿ ಅವರು ಬುಲೆಟ್ ರೈಲು ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲೂ ಶಿವಸೇನೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು. ಯಾರು ಬುಲೆಟ್ ರೈಲನ್ನು ಬಯಸುತ್ತಾರೆ? ಮೊದಲು ಇರುವ ರೈಲುಗಳಿಗೆ ಮೂಲ ಸೌಕರ್ಯವನ್ನು ಸುಧಾರಿಸಿ ಎಂದು ವ್ಯಂಗ್ಯ ಮಾಡಿದರು.

    ಸರ್ಕಾರ ಜಿಎಸ್‍ಟಿ ಏಕರೂಪದ ತೆರಿಗೆಯನ್ನು ಹೊಂದಿದೆ ಎಂದು ಹೇಳುತ್ತದೆ. ಏಕರೂಪತೆ ಎಲ್ಲಿದೆ? ಪಾಕಿಸ್ತಾನವೂ ಕೂಡ ನಮಗಿಂತ ಹೆಚ್ಚಿನ ಅಗ್ಗದ ದರದಲ್ಲಿ ಪೆಟ್ರೋಲ್ ಕೊಡುತ್ತಿದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.

  • ಕಣ್ಮನ ತಣಿಸಿದ ದಸರಾ ವೈಭವ: ಅನಾವರಣವಾಯ್ತು ಕಲಾ ಶ್ರೀಮಂತಿಕೆ

    ಕಣ್ಮನ ತಣಿಸಿದ ದಸರಾ ವೈಭವ: ಅನಾವರಣವಾಯ್ತು ಕಲಾ ಶ್ರೀಮಂತಿಕೆ

    ಮೈಸೂರು: 407ನೇ ನಾಡಹಬ್ಬ ಮೈಸೂರು ದಸರಾಗೆ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ವಿಜಯದಶಮಿಯ ದಿನವಾದ ಶನಿವಾರ ನಡೆದ ಜಂಬೂ ಸವಾರಿ ಮನಸೂರೆಗೊಂಡಿತು.

    ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.15ಕ್ಕೆ ಶುಭಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಅರಮನೆಯ ಮುಖ್ಯದ್ವಾರದಲ್ಲಿ ನಿರ್ಮಿಸಲಾಗಿದ್ದ ವಿಶೇಷ ವೇದಿಕೆಯಲ್ಲಿ ಸಂಜೆ 4.45ಕ್ಕೆ ಸಿದ್ದರಾಮಯ್ಯ ಚಿನ್ನದ ಅಂಬಾರಿಯಲ್ಲಿ ಕುಳಿತಿದ್ದ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು. ಈ ವೇಳೆ ಯುವರಾಜ ಯದುವೀರ್, ಮೇಯರ್ ರವಿಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಜಿಲ್ಲಾಧಿಕಾರಿ ಡಿ. ರಂದೀಪ್, ಸಂಸದ ಪ್ರತಾಪ್ ಸಿಂಹ ಶಾಸಕರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

    ನಗರ ಸಶಸ್ತ್ರ ಪಡೆಯ ಪೊಲೀಸರು 21 ಕುಶಾಲತೋಪುಗಳನ್ನು ಹಾರಿಸಿದರು. ಸಂಜೆ 5 ಗಂಟೆ ಹೊತ್ತಿಗೆ ಸುಮಾರು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆಯನ್ನು ಹೊತ್ತ ಅರ್ಜುನ ಗಾಂಭೀರ್ಯದಿಂದ ಹೆಜ್ಜೆ ಹಾಕತೊಡಗಿದ. ಅರ್ಜುನನಿಗೆ ಕುಮ್ಕಿ ಆನೆಗಳಾದ ಕಾವೇರಿ, ವಿಜಯಾ ಸಾಥ್ ನೀಡಿದರು. ಅರಮನೆ ಆವರಣದಲ್ಲಿ ಸ್ವಲ್ಪ ದೂರ ಸಾಗಿದ ವೇಳೆ ಅಶ್ವದಳದ ಕುದುರೆಯೊಂದು ಬೆದರಿ, ಆನೆ ವಿಜಯಗೆ ಡಿಕ್ಕಿ ಹೊಡೆಯಿತು. ಇದರಿಂದ ಗಲಿಬಿಲಿಗೊಂಡ ವಿಜಯಾ ಅಂಬಾರಿ ಸಾರಥಿ ಅರ್ಜುನನನ್ನು ತಳ್ಳಿತು. ಈ ವೇಳೆ, ಆತಂಕದ ವಾತಾವರಣ ನಿರ್ಮಾಣವಾಯಿತು. ತಕ್ಷಣವೇ ಕುಮ್ಕಿ ವಿಜಯಾ ಆನೆಯನ್ನು ಮಾವುತ ತಹಬದಿಗೆ ತಂದರು.

    https://youtu.be/I05j3rIJEqk

     

    ನಂತರ ಬಲರಾಂ ಗೇಟ್ ಮುಖಾಂತರ ಹೊರಗೆ ಬಂದ ಜಂಬೂ ಸವಾರಿ ಕೆ.ಆರ್ ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆರ್ಯುವೇದಿಕ ಆಸ್ಪತ್ರೆ ವೃತ್ತ, ಆರ್‍ಎಂಸಿ ಬಸ್ ನಿಲ್ದಾಣ, ಬಂಬೂ ಬಜಾರ್ ರಸ್ತೆ, ನೆಲ್ಸನ್ ಮಂಡೇಲಾ ರಸ್ತೆ ಮೂಲಕ ಬನ್ನಿಮಂಟಪದಲ್ಲಿ ಅಂತ್ಯವಾಯಿತು.

    ಸುಮಾರು ಐದೂವರೆ ಕಿ.ಮೀ.ನಲ್ಲಿ ಗಾಂಭೀರ್ಯದಿಂದ ಸಾಗಿದ ಜಂಬೂ ಸವಾರಿಯನ್ನು ರಸ್ತೆ ಇಕ್ಕೆಲಗಳಲ್ಲಿ ಉದ್ದಕ್ಕೂ ಜನ ಕಿಕ್ಕಿರಿದು ಸೇರಿ ದೇವಿಯ ದರ್ಶನ ಪಡೆದರು. ಸಯ್ಯಾಜಿ ರಾವ್ ರಸ್ತೆಗೆ ಸಿಮೆಂಟ್ ರಸ್ತೆ ಇದ್ದ ಕಾರಣ ಅರ್ಜುನ ಕೊಂಚ ಬಳಲಿದಂತೆ ಕಂಡು ಬಂದ ಆಮೇಲೆ 2 ಗಂಟೆ ಸಾಗಿ ಬನ್ನಿಮಂಟಪ ತಲುಪಿದ.

    ಅರಮನೆಯ ವಾದ್ಯವೃಂದ, ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಪೋಲಿಸ್ ಬ್ಯಾಂಡ್‍ಗಳ ಸಂಗೀತ, ಪೂಜಾಕುಣಿತ, ಕರಡಿ ಮಜಲು, ನಂದಿಕೋಲು, ಮರಗಾಲು, ಹುಲಿವೇಷಧಾರಿಗಳೂ ಸೇರಿದಂತೆ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ದಸರಾ ಜಂಬೂಸವಾರಿ ಮೆರವಣಿಗೆಗೆ ಮೆರಗು ತಂದಿದ್ದವು.

    ರಾಜ್ಯದ ಕಲಾ ತಂಡಗಳಲ್ಲದೆ, ಪಂಜಾಬ್, ತೆಲಂಗಾಣ, ಒಡಿಸ್ಸಾ, ಡಾರ್ಜಲಿಂಗ್, ಉತ್ತರ ಪ್ರದೇಶ, ಹರಿಯಾಣ ರಾಜ್ಯಗಳ ಸುಮಾರು 40 ತಂಡಗಳು ಜಂಬೂ ಸವಾರಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ವೀರರಾಣಿ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ದಾರ್ಶನಿಕರ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.

    ಮೆರವಣಿಗೆಯಲ್ಲಿ ಕೆಎಸ್‍ಆರ್‍ಪಿ,ಅಂಡ್ ಗೈಡ್ಸ್, ಸೇವಾ ದಳ, ಮಹಿಳಾ ಪೊಲೀಸ್, ರಿಸರ್ವ್ ಪೊಲೀಸ್, ಅಗ್ನಿಶಾಮಕ ಸೇವೆ, ಮೌಂಟ್ ಬಿಟಾಲಿಯನ್, ಕರ್ನಾಟಕ ಪೊಲೀಸ್ ಬ್ಯಾಂಡ್, ಸ್ಕೌಟ್ಸ್ ರಿದಂತೆ ಅರಮನೆಯ ವಾದ್ಯವೃಂದ, ಪಿರಂಗಿ ಗಾಡಿಗಳು, ವಿಶೇಷ ವೇಷಧಾರಿಗಳ ತಂಡ, ಅಲೆಮಾರಿಗಳ ತಂಡ ಸೇರಿದಂತೆ 30 ತಂಡಗಳು ಪಾಲ್ಗೊಂಡಿದ್ದವು

    .