Tag: ದಸರಾ

  • ದಸರಾ ಆನೆ ದ್ರೋಣ ಸಾವನ್ನಪ್ಪುತ್ತಿರೋ ಕೊನೆಯ ದೃಶ್ಯ ಸೆರೆ

    ದಸರಾ ಆನೆ ದ್ರೋಣ ಸಾವನ್ನಪ್ಪುತ್ತಿರೋ ಕೊನೆಯ ದೃಶ್ಯ ಸೆರೆ

    ಮಡಿಕೇರಿ: ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ದಸರಾ ಆನೆ ದ್ರೋಣ ಸಾವಿಗೆ ಅರಣ್ಯಾಧಿಕಾರಿಗಳು ಕಾರಣಾವಾದ್ರಾ ಎಂಬ ಪ್ರಶ್ನೆಯೊಂದು ಮೂಡಿದೆ. ಯಾಕಂದ್ರೆ ದ್ರೋಣನ ಕೊನೆಯ ಗಳಿಗೆಯ ದೃಶ್ಯ ಸೆರೆಯಾಗಿದೆ.

    ಹೌದು. ದ್ರೋಣ ಸಾವನ್ನಪ್ಪುತ್ತಿರುವ ದೃಶ್ಯವನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ದೃಶ್ಯ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ವಿಡಿಯೋದಲ್ಲೇನಿದೆ?:
    ದ್ರೋಣ ಅನಾರೋಗ್ಯದಿಂದ ಬಳಲುತ್ತಿದ್ದರೂ ಮೇಲಾಧಿಕಾರಿಗಳು ವೈದ್ಯರನ್ನ ಕರೆಸಲಿಲ್ಲ. ಹೀಗಾಗಿ ಮಾವುತರು ಹಾಗೂ ಕಾವಾಡಿಗರು ದ್ರೋಣನ ಪ್ರಾಣ ಉಳಿಸಲು ಕೊನೆ ಕ್ಷಣದವರೆಗೂ ಪರದಾಡಿದ್ದಾರೆ. ದ್ರೋಣನ ಮೈಮೇಲೆ ನೀರು ಹಾಕಿ ಪ್ರಾಣ ಉಳಿಸಲು ಪರದಾಡುತ್ತಿದ್ದಾರೆ. ತನ್ನ ಮೇಲೆ ನೀರು ಬೀಳುತ್ತಿದ್ದಂತೆಯೇ ದ್ರೋಣ ನಿಂತಲ್ಲೇ ಕುಸಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

    ಒಟ್ಟಿನಲ್ಲಿ ಇದೀಗ ದ್ರೋಣ ಸಾಯೋ ವೇಳೆ ವೈದ್ಯರನ್ನ ಕರೆಸದ್ದಕ್ಕೆ ಮಾವುತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ದ್ರೋಣ ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ಮೆರುಗು ನೀಡುತ್ತಿದ್ದನು.

    https://www.youtube.com/watch?v=yYgCJ2rsEic

     

  • ರಥೋತ್ಸವದ ಮೂಲಕ ನಾಡಿನ ಜನತೆಗೆ ಮತ್ತೊಮ್ಮೆ ದರ್ಶನ ನೀಡಿದ ತಾಯಿ ಚಾಮುಂಡೇಶ್ವರಿ

    ರಥೋತ್ಸವದ ಮೂಲಕ ನಾಡಿನ ಜನತೆಗೆ ಮತ್ತೊಮ್ಮೆ ದರ್ಶನ ನೀಡಿದ ತಾಯಿ ಚಾಮುಂಡೇಶ್ವರಿ

    ಮೈಸೂರು: ದಸರೆ ಮುಗಿದ ಬಳಿಕ ನಾಡಿನ ಅಧಿದೇವತೆಯನ್ನು ಕಣ್ತುಂಬಿಕೊಳ್ಳಲು ಭಕ್ತರಿಗೆ ಇಂದು ಮತ್ತೊಂದು ಅವಕಾಶ ಸಿಕಿದ್ದು, ಭಕ್ತರು ತಾಯಿಯ ದರ್ಶನವನ್ನು ಪಡೆದು ಉಘೇ ಉಘೇ ಚಾಮುಂಡಿ ಎಂದು ಜೈಕಾರ ಕೂಗಿದರು.

    ಹೌದು, ದಸರೆಯ ಬಳಿಕ ಚಾಮುಂಡಿ ಬೆಟ್ಟದಲ್ಲಿ ಅಧಿದೇವತೆ ಚಾಮುಂಡೇಶ್ವರಿಯ ರಥೋತ್ಸವವನ್ನು ಅದ್ಧೂರಿಯಾಗಿ ನೇರವೇರಿಸಲಾಗಿದೆ. ಮಂಗಳವಾರ ಬೆಳಗ್ಗೆ 8.10 ರಿಂದ 8.40 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ರಥೋತ್ಸವ ಕಾರ್ಯಕ್ರಮ ಜರುಗಿತು.

    ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಮುಂಡಿಯ ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಸರಾದ ಅಂತಿಮ ಕಾರ್ಯಕ್ರಮವಾದ ತಾಯಿ ಚಾಮುಂಡೇಶ್ವರಿಯ ರಥೋತ್ಸವವು ಶಾಸ್ತ್ರೋಕ್ತವಾಗಿ ನೇರವೇರಿದ್ದು, ತಾಯಿ ಚಾಮುಂಡಿಯು ನಾಡಿನ ಜನತೆಗೆ ಆಶೀರ್ವಾದ ನೀಡಲಿ ಎಂದು ಹಾರೈಸಿದರು.

    ಮೆರವಣಿಗೆಗೂ ಮುನ್ನ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆಗಳೊಂದಿಗೆ ಹೊರಗೆ ತಂದು, ಪಲ್ಲಕ್ಕಿ ಮೇಲಿರಿಸಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಲಾಯಿತು. ನಂತರ ದೇವಿಯ ಮೂರ್ತಿಯನ್ನು ರಥೋತ್ಸವದಲ್ಲಿ ಇರಿಸಲಾಗಿತ್ತು. ಬೆಳಗ್ಗಿನಿಂದಲೂ ನಾಡ ದೇವಿಗೆ ವಿಶೇಷ ಪೂಜೆ, ಅಲಂಕಾರ ಮಾಡಿದ್ದ ಆಗಮಿಕರು, ಶುಭ ಲಗ್ನದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿಸಿದ್ದರು.

    ಮೆರವಣಿಗೆ ವೇಳೆ ಸಾವಿರಾರು ಸಂಖ್ಯೆಯಲ್ಲಿ ಬೆಟ್ಟಕ್ಕೆ ಆಗಮಿಸಿದ ಭಕ್ತರು, ರಥಕ್ಕೆ ಹಣ್ಣು-ಜವನ ಎಸೆದು ತಮ್ಮ ಬೇಡಿಕೆ ಈಡೇರಿಸು ತಾಯಿ ಎಂದು ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲದೇ ವಿಶೇಷವಾಗಿ ಪೊಲೀಸ್ ಬ್ಯಾಂಡ್ ಹಾಗೂ ಕಲಾತಂಡಗಳು ರಥೋತ್ಸವದ ಸಂಭ್ರಮಕ್ಕೆ ಮೆರಗು ತಂದಿದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಡಿನತ್ತ ಹೊರಟ ದಸರಾ ಗಜಪಡೆ-ವಿಶೇಷ ಗೌರವದೊಂದಿಗೆ ಆನೆಗಳಿಗೆ ಬೀಳ್ಕೊಟ್ಟ ಅರಮನೆ ಸಿಬ್ಬಂದಿ

    ಕಾಡಿನತ್ತ ಹೊರಟ ದಸರಾ ಗಜಪಡೆ-ವಿಶೇಷ ಗೌರವದೊಂದಿಗೆ ಆನೆಗಳಿಗೆ ಬೀಳ್ಕೊಟ್ಟ ಅರಮನೆ ಸಿಬ್ಬಂದಿ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಜಂಬೂಸವಾರಿಯ ಆನೆಗಳು ಕಾಡಿನತ್ತ ಪ್ರಯಾಣ ಬೆಳೆಸಿವೆ.

    ಅದ್ಧೂರಿಯಾಗಿ ದಸರಾ ಜಂಬೂಸವಾರಿಯನ್ನು ನಡೆಸಿಕೊಟ್ಟಿದ್ದ ಕ್ಯಾಪ್ಟನ್ ಅರ್ಜುನ್ ಅಂಡ್ ಟೀಂನ ಆನೆಗಳು ಇಂದು ಕಾಡಿನತ್ತ ಪ್ರಯಾಣ ಬೆಳೆಸಿವೆ. ಆನೆಗಳಿಗೆ ಅರಮನೆ ಮಂಡಳಿ ಹಾಗೂ ಅರಣ್ಯ ಇಲಾಖೆ ವತಿಯಿಂದ ಅರಮನೆ ಆವರಣದಲ್ಲಿ ವಿಶೇಷ ಪೂಜೆ ನೇರವೇರಿದ್ದು, ಮಾವುತರು ಸೇರಿದಂತೆ ಕಾವಾಡಿಗರಿಗೆ ವಿಶೇಷ ಗೌರವ ನೀಡಿ ಬೀಳ್ಕೊಡಲಾಯಿತು.

    ಸೋಮವಾರ ಅರಮನೆಯಲ್ಲಿ ರಾಜಮನೆತನದ ದಸರಾದ ಅಂತಿಮ ಆಚರಣೆ ಹಿನ್ನೆಲೆಯಲ್ಲಿ ಮೂರು ಆನೆಗಳನ್ನು ಅರಮನೆಯಲ್ಲೇ ಉಳಿಸಿಕೊಳ್ಳಲಾಗಿದೆ. ಹೀಗಾಗಿ ವಿಕ್ರಂ, ಗೋಪಿ ಹಾಗೂ ವಿಜಯ ಆನೆಗಳು ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಫ್ ಸಿದ್ದರಾಮಪ್ಪ, ರಾಜಮನೆತನದವರಿಂದ ಪೂಜಾ ಕಾರ್ಯಕ್ರಮದ ನಿಮಿತ್ತ ಮೂರು ಆನೆಗಳನ್ನು ಅರಮನೆಯಲ್ಲೇ ಉಳಿಸಿಕೊಂಡು, ಇನ್ನುಳಿದ 9 ಆನೆಗಳು ವಿಶೇಷ ಲಾರಿಗಳಲ್ಲಿ ಕಾಡಿನತ್ತ ಪ್ರಯಾಣ ಬೆಳಸಲಿವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಕ್ತಿಧಾಮದ ಮಕ್ಕಳೊಂದಿಗೆ ಸಿಹಿ ಹಂಚಿಕೊಂಡ ಶಿವಣ್ಣ!

    ಶಕ್ತಿಧಾಮದ ಮಕ್ಕಳೊಂದಿಗೆ ಸಿಹಿ ಹಂಚಿಕೊಂಡ ಶಿವಣ್ಣ!

    ಮೈಸೂರು: ಸ್ಯಾಂಡಲ್‍ವುಡ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕುಟುಂಬದ ಸದಸ್ಯರು ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿದ್ದಾರೆ.

    ಶುಕ್ರವಾರ ದಸರಾ ವೀಕ್ಷಣೆಗೆ ಮೈಸೂರಿಗೆ ತೆರಳಿದ್ದ ಶಿವರಾಜ್ ಕುಮಾರ್ ಅವರು ಇಂದು ಶಕ್ತಿಧಾಮಕ್ಕೆ ಭೇಟಿ ಕೊಟ್ಟಿದ್ದಾರೆ. ಅವರ ಜೊತೆಗೆ ಅವರ ಕುಟುಂಬದ ಸದಸ್ಯರಾದ ಪತ್ನಿ ಗೀತಾ ಅವರು ಮತ್ತು ಮಗಳು ಹಾಗೂ ಸಿನಿಮಾದ ಸದಸ್ಯರು ಕೂಡ ಹೋಗಿದ್ದರು.

    ಹಬ್ಬದ ಪ್ರಯುಕ್ತ ಶಿವರಾಜ್ ಕುಮಾರ್ ಮತ್ತು ಕುಟುಂಬದವರು ಶಕ್ತಿಧಾಮಕ್ಕೆ ತೆರಳಿ ಮಕ್ಕಳಿಗೆ ಸಿಹಿ ಹಂಚಿ ಜೊತೆಯಲ್ಲಿ ಸಮಯ ಕಳೆದರು. ಅಷ್ಟೇ ಅಲ್ಲದೇ ನಿರ್ದೇಶಕರಾದ ರಘು ರಾಮ್ ಅವರು ಕೂಡ ಜೊತೆಗೆ ಹೋಗಿದ್ದು, ಅವರು ಮಕ್ಕಳಿಗೆ ಕಥೆಗಳು ಪದ್ಯಗಳನ್ನು ಹೇಳಿಕೊಡುವ ಮೂಲಕ ಅವರೊಂದಿಗೆ ಸಿಹಿ ಕ್ಷಣಗಳನ್ನು ಕಳೆದಿದ್ದಾರೆ.

    ಶುಕ್ರವಾರ ನಡೆದ ಜಂಬೂ ಸವಾರಿ ವೀಕ್ಷಿಸಲು ಶಿವಣ್ಣ ಹಾಗೂ ಅವರ ಕುಟುಂಬ ಮೈಸೂರಿಗೆ ಭೇಟಿ ನೀಡಿದ್ದರು. ಈ ವೇಳೆ ಹೈವೇ ವೃತ್ತದ ಬಳಿ ರಸ್ತೆ ಬದಿ ಖಾಸಗಿ ಹೋಟೆಲ್ ಒಂದರ ಮುಂಭಾಗ ರಸ್ತೆ ಬದಿ ಚೇರ್‍ನಲ್ಲಿ ಶಿವರಾಜ್‍ಕುಮಾರ್ ದಂಪತಿ ಹಾಗೂ ರಘು ರಾಮ್ ಅವರ ಕುಟುಂಬಸ್ಥರು ಕುಳಿತು ವೀಕ್ಷಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಂಬೂಸವಾರಿ ವೇಳೆ ಅಂಬಾರಿ ಆನೆಯನ್ನೇ ನಿಲ್ಲಿಸಿದ ಪೊಲೀಸರು..!

    ಜಂಬೂಸವಾರಿ ವೇಳೆ ಅಂಬಾರಿ ಆನೆಯನ್ನೇ ನಿಲ್ಲಿಸಿದ ಪೊಲೀಸರು..!

    ಮೈಸೂರು: ಶುಕ್ರವಾರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ವಿಜಯದಶಮಿ ಜಂಬೂ ಸವಾರಿ ವೇಳೆ ಪೊಲೀಸ್ ಅಧಿಕಾರಿಗಳು ಸಯ್ಯಾಜಿರಾವ್ ರಸ್ತೆಯಲ್ಲಿ ಅಂಧಾ ದರ್ಬಾರ್ ನಡೆಸಿದ್ದಾರೆ.

    ಅಂಬಾರಿ ಹೊತ್ತ ಅರ್ಜುನ ಮುಂದೆ ಪೊಲೀಸ್ ಅಧಿಕಾರಿ ಹಾಗೂ ಅವರ ಸಹದ್ಯೋಗಿ ಪೊಲೀಸರು ಫೋಟೋ ತೆಗೆಸಿಕೊಳ್ಳುವುದ್ದಕ್ಕೆ ರಸ್ತೆ ಮಧ್ಯೆ ಅರ್ಜನನ್ನು ನಿಲ್ಲಿಸಿದ್ದಾರೆ. ಅಂಬಾರಿ ಹೊತ್ತು ಸಾಗುತ್ತಿದ್ದ ಅರ್ಜುನನ್ನು ಬಲವಂತವಾಗಿ ನಿಲ್ಲಿಸಿ ಫೋಟೋ ತೆಗೆಸಿಕೊಂಡಿದ್ದಾರೆ.

    ಪೊಲೀಸ್ ಅಧಿಕಾರಿ ಸೂಚನೆಯಂತೆ ಅರಣ್ಯ ಇಲಾಖೆ ಸಿಬ್ಬಂದಿ ಅರ್ಜುನನ ದಂತ ಹಿಡಿದು ಎಳೆದು ನಿಲ್ಲಿಸಿದ್ದಾರೆ. ಸಾಮಾನ್ಯವಾಗಿ ಅಂಬಾರಿ ಹೊತ್ತ ಅರ್ಜುನ ದಾರಿ ಮಧ್ಯೆ ನಿಲ್ಲುವುದಿಲ್ಲ. ಆದರೆ ಫೋಟೋ ಹುಚ್ಚಿಗಾಗಿ ಅಂಬಾರಿ ಆನೆಯನ್ನೇ ನಿಲ್ಲಿಸಿ ಅರ್ಜುನನಿಗೆ ಕಿರಿಕಿರಿ ಉಂಟು ಮಾಡಿದ್ದಾರೆ.

    ಪೊಲೀಸರ ಅಂದ ದರ್ಬಾರ್ ಸ್ಥಳಿಯರ ಮೊಬೈಲ್‍ನಲ್ಲಿ ಸೆರೆಯಾಗಿದ್ದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರೇ ಇದೇನಾ ನಿಮ್ಮ ಶಿಸ್ತು? ಖಾಕಿ ಹಾಕಿಕೊಂಡು ಪೊಲೀಸರು ಏನ್ ಬೇಕಾದರೂ ಮಾಡಬಹುದಾ? ಇದು ಜಂಬೂಸವಾರಿಯಾ? ಅಥವಾ ಪೊಲೀಸ್ ಸವಾರಿಯಾ? ಎಂದು ಜನ ಪ್ರಶ್ನಿಸಿ ತರಾಟೆಗೆ ತೆಗದುಕೊಳ್ಳುತ್ತಿದ್ದಾರೆ.

    https://www.youtube.com/watch?v=U3wetUpNpe0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಸರಾ ದುರಂತ: ನೋಡ ನೋಡುತ್ತಲೇ 50 ಮಂದಿ ರೈಲಿಗೆ ಬಲಿ!

    ದಸರಾ ದುರಂತ: ನೋಡ ನೋಡುತ್ತಲೇ 50 ಮಂದಿ ರೈಲಿಗೆ ಬಲಿ!

    ಚಂಡೀಗಢ: ರಾವಣ ಸಂಹಾರದ ಕಾರ್ಯಕ್ರಮವನ್ನು ನೋಡುತ್ತಿದ್ದ ಜನರ ಮೇಲೆ ರೈಲು ಹರಿದ ಪರಿಣಾಮ 50ಕ್ಕೂ ಹೆಚ್ಚು ಜನ ಧಾರುಣವಾಗಿ ಮೃತಪಟ್ಟಿರುವ ಘಟನೆ ಪಂಜಾಬ್ ರಾಜ್ಯದ ಅಮೃತಸರದ ಜೋದಾ ಪಾಟ್ಕರ್ ನಲ್ಲಿ ನಡೆದಿದೆ.

    ವಿಜಯದಶಿಮಿ ಹಿನ್ನೆಯಲ್ಲಿ ಇಂದು ಅಮೃತಸರದ ಜೋದಾ ಪಾಟ್ಕರ್ ನಲ್ಲಿ ರಾವಣನ ಪ್ರತಿಕೃತಿ ಸಂಹರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸಿದ್ದು ಕೆಲವರು ರೈಲು ಹಳಿ ಮೇಲೆ ನಿಂತಿದ್ದರು. ಈ ವೇಳೆ ರೈಲು ಹಳಿ ಮೇಲೆ ಜಮಾಯಿಸಿದ್ದ ಜನರ ಮೇಲೆ ಏಕಾಏಕಿ ರೈಲು ಹರಿದಿದೆ. ರೈಲು ಗುದ್ದಿದ ರಭಸಕ್ಕೆ ಸ್ಥಳದಲ್ಲೇ 50 ಮಂದಿ ಮೃತಪಟ್ಟಿದ್ದಾರೆ.

    ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರ್ಯಕ್ರಮ ಆಯೋಜಿಸಿದ್ದ ಸ್ಥಳದ ಸಮೀಪವೇ ರೈಲು ಮಾರ್ಗ ಹಾದುಹೋಗಿತ್ತು. ಜನ ರೈಲು ಹಳಿಯ ಮೇಲೆ ನಿಂತು ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಕಾರ್ಯಕ್ರಮದಲ್ಲಿ ದೊಡ್ಡದಾದ ಪಟಾಕಿಗಳನ್ನು ಹೊಡೆಯುತ್ತಿದ್ದರಿಂದ ರೈಲು ಬರುತ್ತಿರುವ ಶಬ್ಧ ಯಾರಿಗೂ ಕೇಳಿಸಿಲಿಲ್ಲ. ಒಮ್ಮೆಲೆ ರೈಲು ಜನರ ಮೇಲೆಯೇ ಹರಿಯಿತು. ಸ್ಥಳದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 700 ಮಂದಿ ಸ್ಥಳದಲ್ಲಿದ್ದರು ಎಂದು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮತ್ತೋರ್ವ ಪ್ರತ್ಯಕ್ಷದರ್ಶಿ, ಘಟನೆಗೆ ಕಾರ್ಯಕ್ರಮ ಆಯೋಜಿಸಿದ್ದ ಆಯೋಜಕರೇ ನೇರ ಹೊಣೆಯಾಗಿದ್ದಾರೆ. ರೈಲು ಬರುವ ಮುನ್ನ ದೊಡ್ಡದಾಗ ಶಬ್ದವನ್ನಾದರೂ ಅವರು ಮಾಡಬಹುದಿತ್ತು. ಅಲ್ಲದೇ ಕಾರ್ಯಕ್ರಮ ನಿಗಧಿಯಾಗಿದ್ದರಿಂದ ರೈಲಿನ ಸಂಪೂರ್ಣ ಮಾಹಿತಿಯನ್ನು ಅವರು ಪಡೆದುಕೊಂಡು, ಕಾರ್ಯಕ್ರಮ ನಡೆಯುವ ವೇಳೆ ಜನರು ಇಲ್ಲವೇ ರೈಲನ್ನು ತಡೆಯುವ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿವೆ. ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೋಮ-ಹವನದ ಮೂಲಕ ಮಳೆಗಾಗಿ ಪ್ರಾರ್ಥಿಸಿ, ದಸರಾ ಆಚರಿಸಿದ ರಾಯಚೂರು ಮಂದಿ!

    ಹೋಮ-ಹವನದ ಮೂಲಕ ಮಳೆಗಾಗಿ ಪ್ರಾರ್ಥಿಸಿ, ದಸರಾ ಆಚರಿಸಿದ ರಾಯಚೂರು ಮಂದಿ!

    ರಾಯಚೂರು: ಬಿಸಿಲನಾಡು ಎಂದು ಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿರುವುದರಿಂದ ಈ ಬಾರಿ ದಸರಾವನ್ನು ಸರಳವಾಗಿ ಆಚರಣೆ ಮಾಡಿದ್ದಾರೆ.

    ನಗರದ ಗಾಂಧಿ ವೃತ್ತದ ಬಳಿಯ ಆಂಜನೇಯ ದೇವಾಲಯದಲ್ಲಿ ಎನ್.ಎಸ್.ಬೋಸರಾಜು ಫೌಂಡೇಶನ್ ನೇತೃತ್ವದಲ್ಲಿ ದಸರಾ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ನಿರ್ಮಾಣವಾಗಿದ್ದು, ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಬಾರಿ ಕೇವಲ ಹೋಮ-ಹವನ ಮಾಡುವ ಮೂಲಕ ದಸರಾವನ್ನು ಸರಳವಾಗಿ ಆಚರಿಸಿಲಾಗಿದೆ.

    ಕಳೆದ ವರ್ಷ ಇದೇ ದಸರಾ ಮಹೋತ್ಸವದಲ್ಲಿ ರಾವಣ ಸಂಹಾರ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ ವಿಶೇಷವಾಗಿ ಮಳೆಗಾಗಿ ಈ ಬಾರಿಯ ದಸರಾದಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.

    ಈ ಕಾರ್ಯಕ್ರಮಕ್ಕೆ ಸಂಸದ ಬಿ.ವಿ.ನಾಯಕ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಇದೇ ವೇಳೆ ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಎಂಎಲ್‍ಸಿ ಅನುದಾನದಲ್ಲಿ 29 ಜನ ವಿಕಲಚೇತನರಿಗೆ ತ್ರಿ-ಚಕ್ರ ವಾಹನವನ್ನು ಸಹ ವಿತರಿಸಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏ ಮೈಲಾರಿ ಬಿಡಬ್ಯಾಡಲೇ- ದಸರಾ ಅಂಗವಾಗಿ ಧಾರವಾಡದಲ್ಲಿ ಟಗರು ಕಾಳಗ-ವಿಡಿಯೋ ನೋಡಿ

    ಏ ಮೈಲಾರಿ ಬಿಡಬ್ಯಾಡಲೇ- ದಸರಾ ಅಂಗವಾಗಿ ಧಾರವಾಡದಲ್ಲಿ ಟಗರು ಕಾಳಗ-ವಿಡಿಯೋ ನೋಡಿ

    ಧಾರವಾಡ: “ಏ ಮೈಲಾರಿ, ಬಿಡಬ್ಯಾಡಲೇ ಅವನ್ನ ಅರೇ ಹಾಕು. ಹಾಕು ಚೆನ್ನಾಗಿ ಬೀಳಲಿ ಏಟು. ಅರೇರೇರೇ ಏನ್ಲಾ ಹಾಗೆ ಹೆದರಿಕೊಂಡು ಹೋದ್ರೆ” ಹೀಗೆ ಜನ ವಿಜಯದಶಮಿಯಂದು ಕೂಗಿದ್ದು ಧಾರವಾಡ ತಾಲೂಕಿನ ಚಂದನಮಟ್ಟಿ ಗ್ರಾಮದಲ್ಲಿ.

    ಹೌದು, ದಸರಾ ಹಬ್ಬದ ಅಂಗವಾಗಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಟಗರಿನ ಕಾಳಗದಲ್ಲಿ ಈ ಎಲ್ಲ ದೃಶ್ಯಗಳು ಕಂಡು ಬಂದವು. ಕಳೆದ ನಾಲ್ಕು ವರ್ಷಗಳಿಂದ ಇಲ್ಲಿಯ ಗೆಳೆಯರ ಬಳಗ ಈ ಕಾಳಗ ಆಯೋಜಿಸುತ್ತ ಬಂದಿದೆ.

    ಈ ಟಗರಿನ ಕಾಳಗದಲ್ಲಿ ಒಟ್ಟು ನಾಲ್ಕು ಬಗೆಯ ವಿಭಾಗಗಳನ್ನು ಮಾಡಲಾಗಿತ್ತು. 2, 4, 6 ಹಾಗೂ 8 ಹಲ್ಲುಗಳ ಟಗರುಗಳು, ಅಷ್ಟೇ ಹಲ್ಲಿನ ಟಗರುಗಳೊಂದಿಗೆ ಸೆಣಸಾಡುವ ಕಾಳಗದಲ್ಲಿ, 8 ಸಾವಿರದಿಂದ 30 ಸಾವಿರ ವರೆಗೆ ನಗದು ಬಹುಮಾನ ಇಡಲಾಗಿತ್ತು. ನಮ್ಮ ರಾಜ್ಯದ ಅಷ್ಟೇ ಅಲ್ಲದೇ ಆಂಧ್ರ ಹಾಗೂ ತೆಲಂಗಾಣ ರಾಜ್ಯದ ಟಗರುಗಳು ಕೂಡಾ ಈ ಕಾಳಗದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=mTORGh4QvsA&feature=youtu.be

  • ಜಂಬೂಸವಾರಿ ಆರಂಭ: ರಾಜಗಾಂಭೀರ್ಯದಿಂದ ಹಜ್ಜೆ ಹಾಕುತ್ತಿದ್ದಾನೆ ಅರ್ಜುನ

    ಜಂಬೂಸವಾರಿ ಆರಂಭ: ರಾಜಗಾಂಭೀರ್ಯದಿಂದ ಹಜ್ಜೆ ಹಾಕುತ್ತಿದ್ದಾನೆ ಅರ್ಜುನ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ವಿಜಯದಶಮಿಯಂದು ನಡೆಯುವ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಸಿಕ್ಕಿದೆ. 750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡಿದೇವಿಯನ್ನು ಹೊತ್ತುಕೊಂಡು ಅರ್ಜುನ ಬನ್ನಿ ಮಂಟಪದತ್ತ ಹೆಜ್ಜೆ ಹಾಕುತ್ತಿದ್ದಾನೆ.

    ಅರಮನೆ ಉತ್ತರ ದ್ವಾರವಾದ ಬಲರಾಮ ದ್ವಾರದಲ್ಲಿ ಶುಭ ಕುಂಭ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಸಂಜೆ 4.14ರ ಸಮಯದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.

    ಜಂಬೂ ಸವಾರಿಯಲ್ಲಿ 7 ನೇ ಬಾರಿಗೆ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ಸಾಗುತ್ತಿದ್ದಾನೆ. ಅರ್ಜುನನಿಗೆ ಕಾವೇರಿ ಮತ್ತು ವರಲಕ್ಷ್ಮಿ ಆನೆಗಳು ಸಾಥ್ ನೀಡಿವೆ. ನಿಶಾನೆ ಮತ್ತು ನೌಪತ್ ಆನೆಗಳಾಗಿ ಅಭಿಮನ್ಯು, ಬಲರಾಮ, ಕ್ರಮ, ದ್ರೋಣ, ಕಾವೇರಿ, ವಿಜಯ, ಚೈತ್ರ, ಗೋಪಿ ಪ್ರಶಾಂತ, ನಂಜಯ ಆನೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿವೆ.

    ಈ ಜಂಬೂಸವಾರಿಯಲ್ಲಿ 42 ಸ್ತಬ್ಧ ಚಿತ್ರಗಳು, 40 ವಿವಿಧ ಜಾನಪದ ಕಲಾತಂಡಗಳು, 10 ವಿಶೇಷ ಕಲಾ ತಂಡ, ಉತ್ತರ ಭಾರತದ ವಿವಿಧ ರಾಜ್ಯಗಳ 5 ಕಲಾ ತಂಡ, 1, 675 ಕಲಾವಿದರು ಸೇರಿದಂತೆ ಒಟ್ಟು 2 ಸಾವಿರ ಮಂದಿ ಭಾಗಿಯಾಗಿದ್ದಾರೆ.

    ಖಾಕಿ ಕಣ್ಣು:
    ಅರಮನೆ ಹಾಗೂ ಜಂಬೂ ಸವಾರಿ ಮೆರವಣಿಗೆ 70 ಮಂದಿ ಕಮಾಂಡೋಗಳ ನಿಯೋಜನೆ ಮಾಡಲಾಗಿದ್ದು, ಮೆರವಣಿಗೆ ಮಾರ್ಗದಲ್ಲಿ 86 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. 11 ಎಸ್‍ಪಿ, ಡಿಸಿಪಿ, 43 ಎಸಿಪಿ, 131 ಪೊಲೀಸ್ ಇನ್ಸ್ ಪೆಕ್ಟರ್, 328 ಸಬ್ ಇನ್ಸ್ ಪೆಕ್ಟರ್, 521 ಸಹಾಯಕ ಸಬ್ ಇನ್ಸ್ ಪೆಕ್ಟರ್, 304 ಮಹಿಳಾ ಪೊಲೀಸರು, 1,600 ಹೋಂ ಗಾರ್ಡ್, 3,944 ಮಂದಿ ಪೊಲೀಸ್ ಪೇದೆಗಳನ್ನು ನಿಯೋಜನೆ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರಿನ ಒರಿಜಿನಲ್ ದಸರಾದ ನೆನಪನ್ನು ಬಿಚ್ಚಿಟ್ಟ ಅಂಬರೀಶ್

    ಮೈಸೂರಿನ ಒರಿಜಿನಲ್ ದಸರಾದ ನೆನಪನ್ನು ಬಿಚ್ಚಿಟ್ಟ ಅಂಬರೀಶ್

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರು ನಾನು ನೋಡಿದ ಆ ಕಾಲದ ದಸರಾದ ರಾಜ ವೈಭವವನ್ನ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.

    ದಸರಾ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ತಾತ ಪಿಟೀಲು ಚೌಡಯ್ಯ ಅವರೊಂದಿಗೆ ದಸರಾ ದರ್ಬಾರಿಗೆ ಹೋಗುತ್ತಿದ್ದೆ. ಅಲ್ಲಿ ಅವರು ಪಿಟೀಲು ಬಾರಿಸುತ್ತಿದ್ದರು. ಚಿಕ್ಕವನಾಗಿದ್ದ ನಾನು ತಾತನ ಜೊತೆ ಮೈಸೂರು ಪೇಟಾ, ಶಲ್ಯ, ಕೋಟು ತೊಟ್ಟು ಅರಮನೆಗೆ ಹೋಗುತ್ತಿದ್ದೆ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.

    ಮಹರಾಜರು ಅಂಬಾರಿ ಮೇಲೆ ಸವಾರಿ ಮಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಅಂತಹ ದೃಶ್ಯ ಇನ್ನೆಲ್ಲೂ ಸಿಗುವುದಿಲ್ಲ. ನಾನು ಸ್ವಲ್ಪ ದೊಡ್ಡವನಾದ ಮೇಲೆ ತಂದೆ ನನ್ನನ್ನ ಜಂಬೂ ಸವಾರಿ ನೋಡಲು ಕರೆದುಕೊಂಡು ಹೋಗುತ್ತಿದ್ದರು. ಆಗ ನಾವು ಕೆಆರ್‌ಎಸ್‌ ಆಸ್ಪತ್ರೆ ಮೇಲೆ, ದೇವರಾಜ ಮಾರ್ಕೆಟ್ ಮೇಲೆ ನಿಲ್ಲುತ್ತಿದ್ದೆವು. ಆ ಸಮಯದಲ್ಲಿ ಮಹಾರಾಜರು ಅಪ್ಪಿ-ತಪ್ಪಿ ನಿಂತಿದ್ದ ನಮ್ಮನ್ನು ನೋಡಿದರೆ ಅಯ್ಯೋ ಮಹಾರಾಜರು ನಮ್ಮನ್ನ ನೋಡಿಬಿಟ್ಟರು, ಅವರ ಆಶೀರ್ವಾದ ನಮ್ಮ ಮೇಲೆ ಎಷ್ಟೋ ಇದೆ ಎಂದು ಸಂತಸ ಪಡುತ್ತಿದ್ದೆವು. ಇದು ಒರಿಜಿನಲ್ ದಸರಾ ಎಂದು ಹೇಳಿದರು.

    ಮಹಾರಾಜರು ಆನೆ ಮೇಲೆ ಸವಾರಿ ಮಾಡಿದರೆ, ಇವತ್ತು ಎಷ್ಟು ಜನ ದಸರಾ ನೋಡಲು ಸೇರುತ್ತಾರೋ ಅದಕ್ಕಿಂತ 60 ಪಟ್ಟು ಜನ ಸೇರುತ್ತಾರೆ. ಈ ವರ್ಷದ ದಸರಾದಲ್ಲಿ ಅರಮನೆಯ ದೀಪಾಲಂಕಾರ ಮತ್ತು ಮೈಸೂರು ನಗರಿಯನ್ನ ಬಹಳ ಸೊಗಸಾಗಿ ಅಲಂಕರಿಸಿದ್ದಾರೆ. ನವರಾತ್ರಿಯ ಸಮಯದಲ್ಲಿ ಯುವ ದಸರಾ, ಕ್ರೀಡೆ ಮುಂತಾದವುಗಳು ಎಲ್ಲರಿಗೂ ಮನೋರಂಜನೆ ನೀಡಿದೆ ಎಂದು ಅಂಬಿ ಯವರು “ನಾನು ಕಂಡ ದಸರಾದ” ಅನುಭವವನ್ನ ಪಬ್ಲಿಕ್ ಟಿವಿಯೊಂದಿಗೆ ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv