Tag: ದಸರಾ

  • ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ

    ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ

    ಮೈಸೂರು: ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ ಮನೆ ಮಾಡಿದೆ. ಮುಂಜಾನೆ 4.40ರಿಂದ ಅರಮನೆಯಲ್ಲಿ ಹೋಮ ಆರಂಭವಾಗಿದೆ.

    ಹೋಮಕ್ಕೆ ಯದುವೀರ್ ಒಡೆಯರ್ ಅವರಿಂದ ಪೂರ್ಣಾಹುತಿ. 5.45ಕ್ಕೆ ಆನೆ ಕುದುರೆ ಹಸುಗಳ ಆಗಮನವಾಗಿದೆ. 6.13 ರಿಂದ 6.32ರವರೆಗೆ ಪೂಜಾ ಕೈಂಕರ್ಯ ನೇರವೇರಿದೆ. ಖಾಸಾ ಆಯುಧಗಳಿಗೆ ಯದುವೀರ್ ರಿಂದ ಉತ್ತರ ಪೂಜೆ. ಉತ್ತರ ಪೂಜೆ ನಂತರ ಶಮಿ ಪೂಜೆ ನಂತರ ಚಾಮುಂಡಿ ದೇವಿ ವಿಗ್ರಹ ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆ ಮಾಡಲಾಗಿದೆ.

    ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್: ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಜಯಯಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಮುಂಜಾನೆ 5.45ಕ್ಕೆ ಅರಮನೆಯ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸುಗಳಿಗೆ ಪೂಜೆ ನೆರವೇರಿಸಲಾಯಿತು. ಬಳಿಕ ಬೆಳಗ್ಗೆ 7.20ರಿಂದ 7.40ರವರೆಗೆ ಅರಮನೆ ರಾಜಪುರೋಹಿತರ ಸಮ್ಮುಖದಲ್ಲಿ ವಿಜಯದಶಮಿ ಮೆರವಣಿಗೆ ನಡೆಸಿದ ಯದುವೀರ್ ಒಡೆಯರ್, ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ಮೂಲಕ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.

    ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2021 ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಕೆಂಪು ಸೀರೆಯುಡಿಸಿ ಅಲಂಕಾರ ಮಾಡಲಾಗಿದೆ. ಬೆಳ್ಳಿ ರಥದ ಮೂಲಕ ತಾಯಿ ಚಾಮುಂಡೇಶ್ವರಿಯನ್ನು ಕರೆದೊಯ್ಯುಲಾಗಿದೆ. ಸಚಿವ ಎಸ್.ಟಿ.ಸೋಮಶೇಖರ್‌ ಪುಷ್ಪಾರ್ಚನೆ ಮಾಡಿ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಶಾಸಕರಾದ ರಾಮದಾಸ್, ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್ ಸಿಂಹ ಭಾಗಿಯಾಗಿದ್ದರು. 8 ಗಂಟೆಗೆ ಚಾಮುಂಡಿ ಬೆಟ್ಟದಿಂದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಅರಮನೆಗೆ ಬರಲಿದೆ. ತಾಯಿಯನ್ನು ಸ್ವಾಗತಿಸಲು ಭಕ್ತರು ಉತ್ಸುಕರಾಗಿದ್ದಾರೆ. ಬೆಟ್ಟದ ಪಾದದಿಂದ ಅರಮನೆಯ ರಸ್ತೆಯ ವರೆಗೆ ಬಣ್ಣ-ಬಣ್ಣದ ರಂಗೋಲಿಯನ್ನು ಹಾಕಲಾಗಿದೆ. ದೇವರ ನೈವೇದ್ಯಕ್ಕೆ ನವಧಾನ್ಯ ಉಸ್ಲಿ ನವರಾತ್ರಿ ಸ್ಪೆಷಲ್

    ಜನಪದ ಕಲಾತಂಡಗಳೊಂದಿಗೆ ಸ್ಟೆಪ್ ಹಾಕಿದ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಜಾನಪದ ಕಲಾ ತಂಡಗಳ ಜೊತೆಗೆ ನೃತ್ಯ ಮಾಡಿ ಕಂಸಾಳೆ ಬಡಿದು ಹುರುಪು ತುಂಬಿದ್ದಾರೆ. ಅರಮನೆಯಂಗಳದಲ್ಲಿರುವ ಜಾನಪದ ಕಲಾ ತಂಡದ ಜೊತೆಗೆ ವೀರಗಾಸೆ ಕತ್ತು ಗುರಾಣಿ ಹಿಡಿದು ಉಸ್ತುವಾರಿ ಸಚಿವರು ಕುಣಿದ ಕುಪ್ಪಳಿಸಿದ್ದಾರೆ. ಸರಳ ದಸರಾದಲ್ಲಿ ಅದ್ದೂರಿ ಸ್ಟಪ್ ಹಾಕಿದ ಸೋಮಶೇಖರ್ ಎಲ್ಲಾ ಜಾನಪದ ಕಲಾ ತಂಡಗಳೊಂದಿಗೆ  ಸ್ಟೆಪ್ಸ್ ಹಾಕಿದ್ದಾರೆ. ಈ ವೇಳೆ ಎಸ್‍ಟಿಎಸ್ ಅವರಿಗೆ ಮೈಸೂರು ಜಿಲ್ಲಾಧಿಕಾರಿ ಗೌತಮ್ ಬಗಾದಿ ಸಾಥ್ ನೀಡಿದ್ದಾರೆ.

    ಜಯಮಾರ್ತಂಡ ದ್ವಾರದ ಮೂಲಕ ಚಾಮುಂಡೇಶ್ವರಿ ಉತ್ಸವ ಮೂರ್ತಿ ಅರಮನೆ ಆವರಣ ಪ್ರವೇಶಿಸಿದೆ. ಜಾನಪದ ಕಲಾತಂಡಗಳ ಸಮ್ಮುಖದಲ್ಲಿ ತಾಯಿ ಉತ್ಸವ ಮೂರ್ತಿಗೆ ಪೂರ್ಣ ಕುಂಭ ಸ್ವಾಗತ ಮಾಡಲಾಗಿದೆ. ಅಂಬಾವಿಲಾಸ ಅರಮನೆ ದ್ವಾರ ಪ್ರವೇಶಿಸಿದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಾಂಪ್ರದಾಯ ಪೂಜೆ ವಿಧಿವಿಧಾನ ಮೂಲಕ ಉತ್ಸವ ಮೂರ್ತಿ ಬರ ಮಾಡಿಕೊಂಡ ಅರಮನೆ ಅರ್ಚಕರು ಉತ್ಸವ ಮೂರ್ತಿ ಅಂಬಾವಿಲಾಸ ಅರಮನೆಗೆ ಶಿಫ್ಟ್ ಮಾಡಲಾಗಿದೆ. ದಸರಾ ಕಾರ್ಯಕ್ರಮಗಳು ಸಂಪ್ರದಾಯ ಬದ್ಧವಾಗಿ  ನಡೆಯುತ್ತಿವೆ.

  • ಮೊಟ್ಟ ಮೊದಲ ಬಾರಿಗೆ ಚಾಮುಂಡಿಬೆಟ್ಟದಿಂದ ಅರಮನೆಗೆ ಮೆರವಣಿಗೆಯಲ್ಲಿ ಬರಲಿದೆ ಅಂಬಾರಿ ಉತ್ಸವ ಮೂರ್ತಿ

    ಮೊಟ್ಟ ಮೊದಲ ಬಾರಿಗೆ ಚಾಮುಂಡಿಬೆಟ್ಟದಿಂದ ಅರಮನೆಗೆ ಮೆರವಣಿಗೆಯಲ್ಲಿ ಬರಲಿದೆ ಅಂಬಾರಿ ಉತ್ಸವ ಮೂರ್ತಿ

    -ಪೂಜೆ ಸಲ್ಲಿಸಿ ಚಾಲನೆ ನೀಡಲಿರುವ ಎಸ್.ಟಿ.ಸೋಮಶೇಖರ್

    ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕೇಂದ್ರಬಿಂದು ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿ ಸಾಗುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಈ ಬಾರಿ ಚಾಮುಂಡಿಬೆಟ್ಟದಿಂದ ಅಲಂಕೃತ ವಾಹನದಲ್ಲಿ ವಿವಿಧ ಕಲಾತಂಡಗಳ ಜೊತೆಗೆ ಮೆರವಣಿಗೆ ಮೂಲಕ ಅರಮನೆಗೆ ತರಲಾಗುತ್ತಿದೆ.

    ವಿಜಯದಶಮಿಯ ದಿನವಾದ ಶುಕ್ರವಾರ ಬೆಳಗ್ಗೆ 8:00 ಗಂಟೆಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಟಾಂಗಾದಲ್ಲಿ ಆಗಮಿಸಿದ ಸೋಮಶೇಖರ್

    ಚಾಮುಂಡೇಶ್ವರಿ ಉತ್ಸವ ಮೂರ್ತಿ ತರುವ ಅಲಂಕೃತ ವಾಹನದೊಂದಿಗೆ ನಾದಸ್ವರ ತಂಡ, ಪೊಲೀಸ್ ಬ್ಯಾಂಡ್, ಅಶ್ವದಳ, ಭಜನಾ ತಂಡ, ವೇದಘೋಷ, ಚಂಡೆ, ನವದುರ್ಗೆಯರು ಸಾಗಲಿದ್ದು, ತಾವರಕಟ್ಟೆ, ಇಟ್ಟಿಗೆಗೂಡು, ಹಾಡಿರ್ಂಚ್ ವೃತ್ತದ ಮೂಲಕ ಅರಮನೆ ಪ್ರವೇಶಿಸಲಾಗುತ್ತದೆ.

    ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್. ನಾಗೇಂದ್ರ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಮೈಸೂರು ಮಹಾನಗರ ಪಾಲಿಕೆಯ ಸದಸ್ಯರುಗಳು, ಮತ್ತಿತರ ಗಣ್ಯರು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ನಾಡಿನೆಲ್ಲೆಡೆ ಆಯುಧಪೂಜೆಯ ಸಂಭ್ರಮ – ರಾಜವಂಶಸ್ಥರ ಆಯುಧಗಳಿಗೆ ಪೂಜೆ ಸಲ್ಲಿಸಲಿರುವ ಯದುವೀರ್

  • ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    ಹಿಂದೂಗಳ ಹಬ್ಬಗಳಲ್ಲಿ ನವರಾತ್ರಿಯೂ ಒಂದು. ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಪ್ರತಿ ದಿನವೂ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ. ಅವುಗಳಲ್ಲಿ ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಗೆ ಹೆಚ್ಚಿನ ಮಹತ್ವವಿದೆ.

    ಆಯುಧ ಪೂಜೆಯಂದು ಮನೆಯಲ್ಲಿ ಉಪಯೋಗಿಸುವ ಚೂರಿಯಿಂದ ಹಿಡಿದು ಎಲ್ಲಾ ವಿಧದ ಆಯುಧಗಳನ್ನು ಪೂಜಿಸಲಾಗುತ್ತಿದೆ. ಈ ದಿನ ಮನೆಯನ್ನು ಹೂಗಳಿಂದ ಅಲಂಕಾರ ಮಾಡಲಾಗುತ್ತಿದೆ. ಅಲ್ಲದೇ ಮನೆಯಲ್ಲಿರುವ ವಾಹನಗಳನ್ನು ತೊಳೆದು, ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಗುತ್ತಿದೆ.

    ಆಯುಧ ಪೂಜೆಯ ಇತಿಹಾಸ:
    ದುರ್ಗಾ ದೇವಿಯು ಚಾಮುಂಡೇಶ್ವರಿಯ ರೂಪ ತಾಳಿ ಮಹಿಷಾಸುರನನ್ನು ಸಂಹರಿಸಿದಳು. ಆ ಸಂದರ್ಭದಲ್ಲಿ ದೇವಿ ಉಪಯೋಗಿಸಿದ ಆಯುಧಗಳನ್ನು ಮತ್ತೆ ಬಳಸದೆ ಬಿಸಾಡಿದಳು. ಆ ಆಯುಧಗಳನ್ನು ನಂತರ ಪೂಜಿಸಲಾಯಿತು. ಹಾಗಾಗಿಯೇ ನವರಾತ್ರಿಯ ನವಮಿಯ ದಿನ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ ಎಂಬ ಕಥೆಯಿರುವುದಾಗಿ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ನವರಾತ್ರಿಯ 8ನೇ ದಿನ ಮಹಾಗೌರಿಯ ಪೂಜೆ!

     ಆಯುಧ ಪೂಜೆಯ ಹಿಂದೆ ಮತ್ತೊಂದು ಪೌರಾಣಿಕ ಮಹತ್ವವೂ ಇದೆ. ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಬನ್ನಿಗಿಡದಲ್ಲಿ ಬಚ್ಚಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ಪಾಂಡವರು ವಿಜಯವನ್ನು ಸಾಧಿಸುತ್ತಾರೆ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಸಾಧಿಸಿದ ವಿಜಯದ ಕುರುಹಾಗಿ ಕೂಡ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ. ಇದನ್ನೂ ಓದಿ: 7ನೇ ದಿನ ಕಾಲರಾತ್ರಿಯನ್ನು ಪೂಜೆ ಮಾಡೋದು ಯಾಕೆ?

    ವಿಜಯದಶಮಿ ಹಬ್ಬದ ದ್ಯೋತಕವಾಗಿ ಮನೆಮನೆಗಳಲ್ಲಿ ನೆಂಟರಿಷ್ಟರು ಬನ್ನಿ ಎಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸಂತಸಪಡುತ್ತಾರೆ. ಈ ಬನ್ನಿ ಬಂಗಾರಕ್ಕೆ ಸಮಾನವೆಂದು ಹಿಂದೂಗಳಲ್ಲಿ ನಂಬಿಕೆಯಿದೆ. ಬನ್ನಿ ತೆಗೆದುಕೊಂಡು ಬಂಗಾರದಂತಿರೋಣ ಎಂದು ಆಶಿಸುತ್ತಾರೆ. ಕಿರಿಯರು ಬನ್ನಿ ಸೊಪ್ಪನ್ನು ಹಿರಿಯರ ಕೈಗಿತ್ತು ಆಶೀರ್ವದಿಸಿ ಎಂದು ನಮಸ್ಕರಿಸುವುದು ವಿಜಯದಶಮಿಯ ಸಂಪ್ರದಾಯಗಳಲ್ಲಿ ಮುಖ್ಯವಾದುದು. ಪ್ರತಿಯೊಬ್ಬರ ಮನಸ್ಸಿನಲ್ಲಿ ಹುದುಗಿದ್ದ ಕಲ್ಮಶಗಳೆಲ್ಲ ತೊಳೆದು ಬಾಳು ಬಂಗಾರವಾಗಲಿ ಎಂಬುದು ಈ ಆಚರಣೆಯ ಆಶಯವಾಗಿದೆ. ಇದನ್ನೂ ಓದಿ: ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ

    ಪೂಜೆ ಹೇಗಿರಬೇಕು? ಅದಕ್ಕೆ ಅಗತ್ಯತೆಗಳು ಏನೇನು?
    1. ಮೊದಲು ನೀವು ಪೂಜೆ ಮಾಡುವ ಜಾಗವನ್ನು ಆಯ್ದುಕೊಳ್ಳಿ. ನಂತರ ಆಯುಧಗಳನ್ನು ಇಡಿ. ಅವುಗಳನ್ನು ಅಲ್ಲಿ ಪದೇ ಪದೇ ತೆಗೆದು ಜಾಗ ಬದಲಿಸಬಾರದು.
    2. ನೀವು ಪೂಜೆ ಮಾಡಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅದು ದಿನನಿತ್ಯದ ಬಳಕೆಯ ವಸ್ತುವೂ ಆಗಿರಬಹುದು. ಸಂಗೀತಗಾರ ತನ್ನ ಸಂಗೀತ ವಾದ್ಯಗಳನ್ನು, ವಿದ್ಯಾರ್ಥಿಗಳು ತಮ್ಮ ಪಟ್ಟಿ-ಪುಸ್ತಕ ಮತ್ತು ಲೇಖನಿಯನ್ನು ಹೀಗೆ ನಿಮಗೆ ಅನುಕೂಲ ತಂದುಕೊಡುತ್ತಿರುವ ವಸ್ತುಗಳನ್ನು ಪೂಜಿಸಬಹುದು.
    3. ಪೂಜೆಗೆ ಆಯ್ಕೆ ಮಾಡಿಕೊಂಡ ವಸ್ತುಗಳನ್ನು ಪೂಜಿಸುವ ಮೊದಲು ಸ್ವಚ್ಛಗೊಳಿಸಿ ಇಡಲು ಮರೆಯಬಾರದು.

  • 7ನೇ ದಿನ ಕಾಲರಾತ್ರಿಯನ್ನು ಪೂಜೆ ಮಾಡೋದು ಯಾಕೆ?

    7ನೇ ದಿನ ಕಾಲರಾತ್ರಿಯನ್ನು ಪೂಜೆ ಮಾಡೋದು ಯಾಕೆ?

    ಗನ್ಮಾತೆ ದುರ್ಗೆಯ ಏಳನೇ ಶಕ್ತಿಯನ್ನು ಕಾಲರಾತ್ರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇವಳ ಶರೀರದ ಬಣ್ಣವು ದಟ್ಟವಾದ ಅಂಧಕಾರದಂತೆ ಪೂರ್ಣವಾಗಿ ಕಪ್ಪಾಗಿದೆ. ತಲೆಯ ಕೂದಲೂ ಬಿಟ್ಟುಕೊಂಡು ಹರಡಿಕೊಂಡಿದೆ. ಕತ್ತಿನಲ್ಲಿ ಮಿಂಚಿನಂತೆ ಹೊಳೆಯುತ್ತಿರುವ ಮಾಲೆ ಇದ್ದು, ಮೂರುಕಣ್ಣುಗಳಿವೆ. ಈ ಮೂರು ಕಣ್ಣುಗಳು ಬ್ರಹ್ಮಾಂಡದಂತೆ ಗೋಲವಾಗಿದೆ. ಇವುಗಳ ಕಿರಣಗಳು ವಿದ್ಯುತ್ತಿನಂತೆ ಪಸರಿಸಿಕೊಂಡಿವೆ. ಇವಳ ವಾಹನ ಕತ್ತೆಯಾಗಿದ್ದು ನಾಲ್ಕು ಭುಜಗಳನ್ನು ಹೊಂದಿದ್ದಾಳೆ.

    ಮೇಲಕ್ಕೆ ಎತ್ತಿರುವ ಬಲಕೈಯ ವರಮುದ್ರೆಯಿಂದ ಎಲ್ಲರಿಗೂ ವರದಾನ ನೀಡಿದರೆ ಕೆಳಗಿನ ಬಲಕೈಯಲ್ಲಿ ಅಭಯ ಮುದ್ರೆ ಇದೆ. ಎಡಗಡೆಯ ಮೇಲಿನ ಕೈಯಲ್ಲಿ ಕಬ್ಬಿಣದ ಮುಳ್ಳು ಹಾಗೂ ಕೆಳಗಿನ ಕೈಯಲ್ಲಿ ಖಡ್ಗವಿದೆ. ಕಾಲರಾತ್ರಿ ದುರ್ಗೆಯ ಸ್ವರೂಪವು ನೋಡಲು ಅತ್ಯಂತ ಭಯಂಕರವಾಗಿ ಕಂಡರೂ ಇವಳು ಶುಭಫಲವನ್ನೇ ನೀಡುವ ಕಾರಣ ಈಕೆಯನ್ನು ಶುಭಂಶರೀ ಎಂದು ಕರೆಯುತ್ತಾರೆ.

    ನವರಾತ್ರಿಯ ಏಳನೇ ದಿನ ಕಾಲರಾತ್ರಿಯ ಉಪಾಸನೆಯ ವಿಧಾನವಿದೆ. ಈ ದಿನ ಸಾಧಕನ ಮನಸ್ಸು ‘ಸಹಸ್ರಾರ’ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ಅವನಿಗಾಗಿ ಬ್ರಹ್ಮಾಂಡದ ಎಲ್ಲ ಸಿದ್ಧಿಗಳ ಬಾಗಿಲು ತೆರೆದುಕೊಳ್ಳುತ್ತದೆ. ಈ ಚಕ್ರದಲ್ಲಿ ಸ್ಥಿತವಾದ ಸಾಧಕನ ಮನಸ್ಸು ಪೂರ್ಣವಾಗಿ ತಾಯಿ ಕಾಲರಾತ್ರಿಯ ಸ್ವರೂಪದಲ್ಲೇ ಸ್ಥಿರವಾಗುತ್ತದೆ. ಅವಳ ಸಾಕ್ಷಾತ್ಕಾರದಿಂದ ಸಿಗುವ ಪುಣ್ಯಕ್ಕೆ ಅವನು ಭಾಗಿಯಾಗುತ್ತಾನೆ. ಅವನ ಸಮಸ್ತ ಪಾಪ-ವಿಘ್ನಗಳ ನಾಶವಾಗುತ್ತದೆ. ಅವನಿಗೆ ಅಕ್ಷಯ ಪುಣ್ಯ ಲೋಕಗಳ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ. ಇದನ್ನೂ ಓದಿ: ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ

    ಜಗನ್ಮಾತೆಯ ಕಾಲರಾತ್ರಿಯು ದುಷ್ಟರ ವಿನಾಶ ಮಾಡುವವಳಾಗಿದ್ದಾಳೆ. ದಾನವ, ದೈತ್ಯ, ರಾಕ್ಷಸ, ಭೂತ-ಪ್ರೇತ ಮುಂತಾದವು ಇವಳ ಸ್ಮರಣೆಯಿಂದಲೇ ಭಯಭೀತರಾಗಿ ಓಡಿ ಹೋಗುತ್ತವೆ. ಇವಳು ಗ್ರಹಬಾಧೆಗಳನ್ನೂ ಕೂಡ ದೂರ ಮಾಡುತ್ತಾಳೆ. ಇವಳ ಉಪಾಸಕರಿಗೆ ಅಗ್ನಿಯ, ಜಲ, ಶತು, ಮತ್ತು ರಾತ್ರಿಯ ಭಯ ಮುಂತಾದವುಗಳು ಎಂದೂ ಆಗುವುದಿಲ್ಲ. ಇವಳ ಕೃಪೆಯಿಂದ ಅವನು ಸರ್ವಥಾ ಭಯ ಮುಕ್ತನಾಗಿ ಹೋಗುತ್ತಾನೆ.

    ಕಾಲರಾತ್ರಿ ದೇವಿಯ ಸ್ವರೂಪದ ವಿಗ್ರಹವನ್ನು ತನ್ನ ಹೃದಯದಲ್ಲಿ ನೆಲೆಗೊಳಿಸಿ ಮನುಷ್ಯನು ಏಕನಿಷ್ಠ ಭಾವದಿಂದ ಅವಳ ಉಪಾಸನೆ ಮಾಡಬೇಕು. ಯಮ, ನಿಯಮ, ಸಂಮಯವನ್ನು ಅವನು ಪೂರ್ಣವಾಗಿ ಪಾಲಿಸಬೇಕಾಗುತ್ತದೆ. ಇದನ್ನೂ ಓದಿ: ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

     

  • ಚಂಡಿಕಾ ಯಾಗದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿ

    ಚಂಡಿಕಾ ಯಾಗದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಹುಕ್ಕೇರಿ ಹಿರೇಮಠದ ದಸರಾ ಉತ್ಸವ ಕಾರ್ಯಕ್ರಮದ ನಿಮಿತ್ಯ ಆಯೋಜನೆ ಮಾಡಿದ್ದ ಚಂಡಿಕಾ ಯಾಗದಲ್ಲಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿಯಾಗಿ ಸರಸ್ವತಿ ಮಹಾಮಂಡಲಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

    lakshmi hebbalkar

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಸರಾ ಉತ್ಸವ ನಮ್ಮ ಸಂಸ್ಕøತಿಯ ಪ್ರತೀಕವಾಗಿದೆ. 9 ದಿನಗಳ ಕಾಲ ನಡೆಯುವ ಭಾವಕ್ಯತೆಯ ಸಂಕೇತವಾಗಿರುವ ಹುಕ್ಕೇರಿ ದಸರಾ ಉತ್ಸವದ ಚಂಡಿಕಾ ಯಾಗದಲ್ಲಿ ಭಾಗಿಯಾಗಿದ್ದು ನನ್ನ ಪುಣ್ಯ. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನಮ್ಮ ಪ್ರತಿಯೊಂದು ಕಾರ್ಯಕ್ಕೂ ಸಲಹೆ ನೀಡಿ ತಿದ್ದಿ ಬುದ್ಧಿ ಹೇಳಿ ಹೆಚ್ಚು ಸಾಮಾಜಿಕ ಕಾರ್ಯ ಮಾಡಲು ಸ್ಫೂರ್ತಿ ತುಂಬುತ್ತಿದ್ದಾರೆ ಎಂದರು. ಇದನ್ನೂ ಓದಿ: ಮಕ್ಕಳಿಗೆ ಲಸಿಕೆ ಭಾಗ್ಯ- 2 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ

    lakshmi hebbalkar

    ಇದೇ ವೇಳೆ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಅವರು ಸೌಮ್ಯ ಸ್ವಭಾವದ ನಾಯಕಿ. ಅವರ ತಾಳ್ಮೆ ಸಾಮಾಜಿಕ ಕಾರ್ಯ ಅನುಪಮವಾದ ಅವರು ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಮತ್ತು ಬೆಳಗಾವಿ ಗ್ರಾಮೀಣ ಭಾಗದ ಜನರ ಕಷ್ಟದಲ್ಲಿ ಭಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇನ್ನಷ್ಟು ಅಧಿಕಾರ ಸಿಗಲಿ ಎಂದು ಹಾರೈಸಿದರು. ಇದನ್ನೂ ಓದಿ: ನಾಪತ್ತೆಗೂ ಮುನ್ನ ಖತರ್ನಾಕ್ ಪ್ಲಾನ್ ಮಾಡಿದ್ದ ಯುವತಿ, ಮಕ್ಕಳು

    lakshmi hebbalkar

    ಶ್ರೀ ಸಂಪತ್ತಕುಮಾರ ಶಾಸ್ತ್ರಿಗಳ ವೈದಿಕತ್ವದಲ್ಲಿ ನೂರಾ ಎಂಟು ವಟುಗಳ ವೇದ ಪಠಣದೊಂದಿಗೆ ಚಂಡಿಕಾ ಯಾಗ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಹುಕ್ಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರೇಖಾ ಚಿಕ್ಕೋಡಿ ಅಕ್ಷರ ದಾಸೋಹ ಅಧಿಕಾರಿ ಶ್ರಿಶೈಲ ಹಿರೇಮಠ, ಮುರುಗೇಶ್ ಅಥಣಿ ಸುರೇಶ್ ಜಿನರಾಳಿ ಹಾಗೂ ಚನ್ನಪ್ಪ ಗಜಬರ ಉಪಸ್ಥಿತರಿದ್ದರು.

  • ದಸರಾ, ಕಾವೇರಿ ತೀರ್ಥೋದ್ಭವ ಹಿನ್ನೆಲೆ ಕೊಡಗಿನಲ್ಲಿ ಮದ್ಯ ಮಾರಾಟ ಬಂದ್

    ದಸರಾ, ಕಾವೇರಿ ತೀರ್ಥೋದ್ಭವ ಹಿನ್ನೆಲೆ ಕೊಡಗಿನಲ್ಲಿ ಮದ್ಯ ಮಾರಾಟ ಬಂದ್

    ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಹಾಗೂ ಗೋಣಿಕೊಪ್ಪದಲ್ಲಿ ಅಕ್ಟೋಬರ್ 14 ಮತ್ತು 15ರಂದು ನಡೆಯಲಿರುವ ಆಯುಧ ಪೂಜೆ ಮತ್ತು ದಸರಾ ಕಾರ್ಯಕ್ರಮ ಹಾಗೂ ಅಕ್ಟೋಬರ್ 17ರಂದು ನಡೆಯಲಿರುವ ಕಾವೇರಿ ತೀರ್ಥೋದ್ಭವದ ಹಿನ್ನೆಲೆ ಜಿಲ್ಲೆಯ ವಿವಿಧೆಡೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.

    ಮಡಿಕೇರಿ ಗೋಣಿಕೊಪ್ಪದಲ್ಲಿ ಈ ಬಾರಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಅಕ್ಟೋಬರ್ 14ರ ಬೆಳಗ್ಗೆ 6ಗಂಟೆಯಿಂದ 16ರ ಬೆಳಗ್ಗೆ 6ಗಂಟೆಯವರೆಗೆ ಮಡಿಕೇರಿ ನಗರ ಠಾಣೆ ಮತ್ತು ಗೋಣಿಕೊಪ್ಪ ಠಾಣೆ ಸರಹದ್ದಿನ 10 ಕಿ.ಮೀ.ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೊಟೇಲ್ ಮುಂತಾದವುಗಳಲ್ಲಿ ಎಲ್ಲಾ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ ನಿಧನ

    ಮತ್ತೊಂದಡೆ ಅಕ್ಟೋಬರ್ 17ರಂದು ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ನಡೆಯಲಿರುವ ಕಾವೇರಿ ತೀರ್ಥೋದ್ಭವ ಹಿನ್ನೆಲೆ ಅಕ್ಟೋಬರ್ 16ರ ಬೆಳಗ್ಗೆ 6 ಗಂಟೆಯಿಂದ 18ರ ಬೆಳಗ್ಗೆ 6 ಗಂಟೆಯವರೆಗೆ ಭಾಗಮಂಡ ಠಾಣಾ ಸರಹದ್ದಿನ 20 ಕಿ.ಮೀ. ವ್ಯಾಪ್ತಿಯೊಳಗೆ ಬರುವ (ಚೇರಂಬಾಣೆ ಸೇರಿದಂತೆ) ಎಲ್ಲಾ ಗ್ರಾಮಗಳಲ್ಲಿರುವ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್ ಕ್ಲಬ್, ಹೊಟೇಲ್‍ಗಳಲ್ಲಿ ಮದ್ಯ ಮಾರಾಟ ನಿಷೇಧಿಸಿರುವುದಾಗಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಹಲವೆಡೆ ವಿದ್ಯುತ್ ಕಡಿತ – ಬೆಸ್ಕಾಂನಿಂದ ಮಾಹಿತಿ

  • ದಸರಾ ಸ್ತಬ್ಧಚಿತ್ರಗಳ ಸಿದ್ಧತೆ ಪರಿಶೀಲಿಸಿದ ಸಚಿವ ಎಸ್‍ಟಿಎಸ್

    ದಸರಾ ಸ್ತಬ್ಧಚಿತ್ರಗಳ ಸಿದ್ಧತೆ ಪರಿಶೀಲಿಸಿದ ಸಚಿವ ಎಸ್‍ಟಿಎಸ್

    ಮೈಸೂರು:ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧಚಿತ್ರಗಳ ನಿರ್ಮಾಣದ ಸಿದ್ಧತಾ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪರಿಶೀಲಿಸಿದ್ದಾರೆ.

    ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ರಂಗಮಂದಿರ ಮಂಟಪದ ಎದುರಿನ ಮಳಿಗೆಯಲ್ಲಿ ನಿರ್ಮಿಸುತ್ತಿರುವ ಸ್ತಬ್ಧಚಿತ್ರ ಪರಿಶೀಲನೆ ಮಾಡಿದ್ದಾರೆ. ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದ ಕಲಾವಿದರ ಜೊತೆಗೆ ಸಮಾಲೋಚಿಸಿ ಮಾಹಿತಿ ಪಡೆದರು. ಇದನ್ನೂ ಓದಿ: ಹಣವೇ ಇಲ್ಲ ಲಾಕ್ ಮಾಡುವ ಅವಶ್ಯಕತೆ ಇತ್ತಾ?- ಮಾಲೀಕನಿಗೆ ಪತ್ರ ಬರೆದ ಕಳ್ಳರು

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿ ತೀರ್ಮಾನದಂತೆ ಸ್ತಬ್ಧಚಿತ್ರಗಳನ್ನು ಕಡಿಮೆ ಮಾಡಬೇಕು ಎನ್ನುವ ಕಾರಣಕ್ಕಾಗಿ ಈ ಬಾರಿ 6 ಸ್ತಬ್ಧಚಿತ್ರ ಪಾಲ್ಗೊಳ್ಳಲಿವೆ. ಅ.13ರ ಸಂಜೆ ಹೊತ್ತಿಗೆ ಸಂಪೂರ್ಣ ಸಿದ್ಧವಾಗಲಿದೆ. ಕಲಾತಂಡ ಭಾಗವಹಿಸಲಿವೆ. ದಸರಾ ಮಹೋತ್ಸವದ ಎಲ್ಲ ಸಿದ್ಧತೆ ಮುಗಿಯುತ್ತಿವೆ. ತಾಲೀಮಿಗೆ ಆನೆಗಳು ಸಜ್ಜಾಗಿವೆ ಎಂದರು. ಇದನ್ನೂ ಓದಿ: ಮದುವೆಗಾಗಿ ಮತಾಂತರ ತಪ್ಪು: ಮೋಹನ್ ಭಾಗವತ್

    ಸರಳ ದಸರಾ ಮಹೋತ್ಸವ ಆಚರಣೆಯಾಗಿದ್ದರಿಂದ ಅಧಿಕಾರೇತರ ಸದಸ್ಯರನ್ನು ರಚನೆ ಮಾಡದೆ ಅಧಿಕಾರಿಗಳು ನಿರ್ವಹಣೆ ಮಾಡಿದ್ದಾರೆ. ದಸರಾ ಕಾರ್ಯಕ್ರಮಗಳು ಸುಲಲಿತವಾಗಿ ಜರುಗುತ್ತಿವೆ ಎಂದು ಹೇಳಿದರು.

  • ನವರಾತ್ರಿ ವಿಶೇಷ – ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡೋದು ಯಾಕೆ?

    ನವರಾತ್ರಿ ವಿಶೇಷ – ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡೋದು ಯಾಕೆ?

    ವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯ ಆರಾಧನೆ ನಡೆಯುತ್ತದೆ. ಇವಳ ಈ ಸ್ವರೂಪವು ಪರಮ ಶಾಂತಿದಾಯಕ ಮತ್ತು ಶ್ರೇಯಸ್ಕರವಾಗಿದೆ. ಇವಳ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ಧಚಂದ್ರನಿದ್ದಾನೆ. ಇದರಿಂದಲೇ ಇವಳನ್ನ ಚಂದ್ರಘಂಟಾದೇವಿ ಎಂದು ಕರೆಯಲಾಗುತ್ತದೆ.

    ಇವಳ ಶರೀರದ ಬಣ್ಣವು ಚಿನ್ನದಂತೆ ಹೊಳೆಯುತ್ತದೆ. ಇವಳಿಗೆ ಹತ್ತು ಕೈಗಳಿದ್ದು ಹತ್ತೂ ಕೈಗಳಲ್ಲಿ ಶಸ್ತ್ರಗಳನ್ನು ಹಿಡಿದಿರುವುದು ವಿಶೇಷತೆ. ಇವಳ ವಾಹನ ಸಿಂಹವಾಗಿದ್ದು, ಇವಳ ಮುದ್ರೆಯು ಯುದ್ಧಕ್ಕಾಗಿ ಹೊರಟದಂತಿದೆ. ಇದನ್ನೂ ಓದಿ: ನವರಾತ್ರಿ ಎರಡನೇ ದಿನ ಇಷ್ಟಾರ್ಥ ಸಿದ್ಧಿಗಾಗಿ ಬ್ರಹ್ಮಚಾರಿಣಿಯನ್ನು ಪೂಜಿಸೋದು ಯಾಕೆ? ಪುರಾಣ ಕಥೆ ಓದಿ

    ನವರಾತ್ರಿ ದುರ್ಗಾ ಉಪಾಸನೆಯಲ್ಲಿ ಮೂರನೇ ದಿನದ ಪೂಜೆಯ ಮಹತ್ವ ಅತ್ಯಧಿಕವಾಗಿದೆ. ಈ ದಿನ ಸಾಧಕನ ಮನಸ್ಸು ‘ಮಣಿಪುರ’ ಚಕ್ರದಲ್ಲಿ ಪ್ರವೇಶಿಸುತ್ತದೆ. ತಾಯಿ ಚಂದ್ರಘಂಟೆಯ ಕೃಪೆಯಿಂದ ಅವನಿಗೆ ಅಲೌಕಿಕ ವಸ್ತುಗಳ ದರ್ಶನವಾಗುತ್ತದೆ. ದಿವ್ಯ ಸುಗಂಧಗಳ ಅನುಭವವಾಗುತ್ತದೆ ಹಾಗೂ ವಿವಿಧ ಪ್ರಕಾರದ ದಿವ್ಯ ಧ್ವನಿಗಳು ಕೇಳಿಸುತ್ತದೆ. ಈ ಕ್ಷಣಗಳು ಸಾಧಕನಿಗಾಗಿ ತುಂಬಾ ಎಚ್ಚರವಾಗಿರಬೇಕಾಗುತ್ತವೆ. ಇವಳ ವಾಹನ ಸಿಂಹವಾದ್ದರಿಂದ ಇವಳ ಉಪಾಸಕನು ಸಿಂಹದಂತೆ ಪರಾಕ್ರಮಿ ಮತ್ತು ನಿರ್ಭಯನಾಗುತ್ತಾನೆ. ಇವಳ ಗಂಟೆಯ ಧ್ವನಿಯು ಸದಾಕಾಲ ಭಕ್ತರನ್ನು ರಕ್ಷಿಸುತ್ತದೆ ಎನ್ನುವ ನಂಬಿಕೆಯಿದೆ. ಇದನ್ನೂ ಓದಿ: ನವರಾತ್ರಿ ಹಬ್ಬಕ್ಕೆ ವಿಶೇಷವಾಗಿ ಮಾಡಿ ಸಿಹಿಯಾದ ಎರಿಯಪ್ಪ

    ಇವಳ ಆರಾಧನೆಯಿಂದ ಪ್ರಾಪ್ತವಾಗುವಂತಹ ಇನ್ನೊಂದು ಬಹುದೊಡ್ಡ ಸದ್ಗುಣವು ಸಾಧಕನಲ್ಲಿ ಪರಾಕ್ರಮ- ನಿರ್ಭಯದೊಂದಿಗೆ ಸೌಮ್ಯತೆ ಹಾಗೂ ವಿನಮ್ರತೆಯೂ ವಿಕಾಸವಾಗುತ್ತದೆ. ಅವನ ಮುಖದಲ್ಲಿ, ಕಣ್ಣುಗಳಲ್ಲಿ, ಇಡೀ ಶರೀರದಲ್ಲಿ ಕಾಂತಿ-ಗುಣದ ವೃದ್ಧಿಯಾಗುತ್ತದೆ. ಸ್ವರದಲ್ಲಿ ದಿವ್ಯ, ಅಲೌಕಿಕ ಮಾಧುರ್ಯ ತುಂಬಿ ಹೋಗುತ್ತದೆ.

     

  • ಅಭಿಮನ್ಯು ಕೇವಲ ದಸರಾ ಆನೆಯಲ್ಲ- ಈತ ಕೂಂಬಿಂಗ್ ಸ್ಪೆಷಲಿಸ್ಟ್

    ಅಭಿಮನ್ಯು ಕೇವಲ ದಸರಾ ಆನೆಯಲ್ಲ- ಈತ ಕೂಂಬಿಂಗ್ ಸ್ಪೆಷಲಿಸ್ಟ್

    – 150ಕ್ಕೂ ಹೆಚ್ಚು ಕಾಡಾನೆಗಳ ಪೊಗರು ಇಳಿಸಿರುವ ಅಭಿಮನ್ಯು
    – ಹುಲಿ ಕಾರ್ಯಾಚಾರಣೆಗೂ ಬೇಕು ಅಭಿಮನ್ಯು

    ಮೈಸೂರು: ವಿಶ್ವ ವಿಖ್ವಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಸೆಂಟ್ರಾಆಫ್ ಅಟ್ರಾಕ್ಷನ್ ಎಂದರೆ ಜಂಬೂ ಸವಾರಿ ಮೆರವಣಿಗೆ. ಕಳೆದ ಕಳೆದ ವರ್ಷದಿಂದ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯುವಿಗೆ ನೀಡಲಾಗಿದೆ. ಕಳೆದ ಬಾರಿ ಅರಮನೆಯ ಆವರಣದಲ್ಲೇ ಗಜ ಗಾಂಭೀರ್ಯ ನಡಿಗೆಯ ಮೂಲಕವೇ ಯಶಸ್ವಿಯಾಗಿ ಅಭಿಮನ್ಯು ಜಂಬೂ ಸವಾರಿ ಮೆರಣಿಗೆಯನ್ನು ಮುಗಿಸವ ಮೂಲಕ ನಾಡಿನ ಜನರ ಹೆಗ್ಗಳಿಕೆಗೆ ಪಾತ್ರವಾಗಿದ್ದ. ಅಭಿಮನ್ಯು ದಸರಾ ಆನೆ ಮಾತ್ರವಲ್ಲ ಈತನ ಸಾಧನೆ ಸಾಕಷ್ಟು ಇವೆ. ಇದನ್ನೂ ಓದಿ:  ಸಿದ್ದರಾಮಯ್ಯ, ಕುಮಾರಸ್ವಾಮಿ ವೋಟಿಗಾಗಿ ಜೊಲ್ಲು ಸುರಿಸ್ತಿದ್ದಾರೆ: ಆರಗ ಜ್ಞಾನೇಂದ್ರ

    Abhimanyu elephant publictv

    ಸತತ ಏಳು ಬಾರಿ ತಾಯಿ ಚಾಮುಂಡೇಶ್ವರಿಯನ್ನು ಕೂರಿಸಿದ ಚಿನ್ನದ ಅಂಬಾರಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ರಾಜ ಬೀದಿಗಳಲ್ಲಿ ಹೆಜ್ಜೆ ಹಾಕಿದ್ದ ಅರ್ಜುನನಿಗೆ 60 ವರ್ಷ ದಾಟಿದ ಕಾರಣ ಒಲ್ಲದ ಮನಸ್ಸಿನಿಂದಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಕಳೆದ ಬಾರಿ ಆತನನ್ನು ದಸರಾ ಮಹೋತ್ಸವದಿಂದ ದೂರವಿಟ್ಟರು. ಅರ್ಜುನನ ಜಾಗಕ್ಕೆ ತರುವುದು ಎಂದು ಅಧಿಕಾರಿಗಳು ಯೋಚನೆ ಮಾಡುವ ವೇಳೆ ಕಂಡಿದ್ದೆ ಅಭಿಮನ್ಯು. 56 ವರ್ಷದ ಅಭಿಮನ್ಯುವನ್ನು 1970 ರಲ್ಲಿ ಕೊಡಗಿನ ಹೆಬ್ಬಾಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. 21 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅಭಿಮನ್ಯು 2012 ರಿಂದ 2015ರವರೆಗೆ ದಸರಾ ಮಹೋತ್ಸವದ ಜಂಬೂ ಸವಾರಿ ಮೆರಣಿಗೆಯಲ್ಲಿ ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿ ಎಳೆಯು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ. ಅರ್ಜುನ ಆನೆಯ ಜಾಗಕ್ಕೆ ಯಾರನ್ನು ತರುವುದು ಎಂದು ಹುಡುಕುವಾಗ ಕಣ್ಣಿಗೆ ಬಿದ್ದಿದ್ದು ಅಭಿಮನ್ಯು. ಇದಕ್ಕೆ ಕಾರಣ ಇತ ಬಹಳ ಸೌಮ್ಯ ಸ್ವಾಭಾವದ ಆನೆಯಾಗಿದ್ದು, ಇತನ ಬೆನ್ನು ಅಂಬಾರಿ ಕಟ್ಟಲು ಸೂಕ್ತವಾಗಿದೆ. ಜೊತೆಗೆ ಇತನ ತೂಕ 4720 ಕೆಜಿ, ಎತ್ತರ 2.72 ಮೀಟರ್, ಉದ್ದ 3.51 ಮೀಟರ್ ಇರುವ ಕಾರಣ ಜವಾಬ್ದಾರಿಯಾಗಿ ಅಭಿಮನ್ಯು ಅಂಬಾರಿಯನ್ನು ಹೊರಬಲ್ಲ ಎಂದು ಆಯ್ಕೆ ಮಾಡಲಾಗಿತ್ತು. ಅಧಿಕಾರಿಗಳ ನಿರೀಕ್ಷೆಯಂತೆ ಕಳೆದ ಬಾರಿ ಸಮರ್ಥವಾಗಿ ಚಿನ್ನದ ಅಂಬಾರಿ ಹೊತ್ತು ಅರಮನೆ ಆವರಣದಲ್ಲಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದನು. ಇದನ್ನೂ ಓದಿ:   ಪಟಾಕಿ, ವಾದ್ಯದ ಸದ್ದಿಗೆ ಬೆದರಿದ ಆನೆ – ಜಂಬೂ ಸವಾರಿ ಮೆರವಣಿಗೆ ಸ್ಥಗಿತ

    Abhimanyu elephant publictv

    ಬಹುತೇಕ ಜನರು ಅಭಿಮನ್ಯು ಎಲ್ಲಾ ಆನೆಗಳ ರೀತಿ ದಸರಾ ಆನೆ, ದಸರಾ ಮುಗಿದ ಬಳಿಕ ಈತ ಕಾಡಿನಲ್ಲಿ ಫುಲ್ ರೆಸ್ಟ್ ಮಾಡುತ್ತಾನೆ ಎಂದು ಎಲ್ಲರು ತಿಳಿದುಕೊಂಡಿದ್ದಾರೆ. ಆದ್ರೆ ಇತನಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದರಿಂದ. ಎಷ್ಟು ಹೆಸರಿದೆಯೋ ಅಷ್ಟೇ ಹೆಸರು ಕೂಂಬಿಂಗ್‍ನಲ್ಲೂ ಇದೆ. ಈ ಕಾರಣಕ್ಕೆ ಅಭಿಮನ್ಯುವನ್ನು ಕೂಂಬಿಂಗ್ ಸ್ಪೆಷಲಿಸ್ಟ್ ಎಂದು ಕರೆಯುತ್ತಾರೆ. ಕಾಡಂಚಿನ ಗ್ರಾಮಗಳಲ್ಲಿ ಕಾಡಿನಿಂದಬಂದು ಉಪಟಳ ಮಾಡುವ ಕಾಡಾನೆ ಹಾಗೂ ಹುಲಿ ಕಾರ್ಯಾಚರಣೆಗೆ ಅಭಿಮನ್ಯುವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಸಾಕಾನೆಗಳಿಗೆ ತುಂಬಾ ಧೈರ್ಯ ಬೇಕಾಗಿದೆ. ಅಭಿಮನ್ಯು ಯಾವುದಕ್ಕೂ ಭಯಪಡದೇ ಧೈರ್ಯದಿಂದ ನುಗ್ಗುವ ಕಾರಣಕ್ಕೆ ಇತನನ್ನು ಕೂಂಬಿಂಗ್‍ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿಯವರೆಗೆ 150 ಕ್ಕೂ ಹೆಚ್ಚು ಕಾಡಾನೆಗಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಅಭಿಮನ್ಯು ಆ ಕಾಡಾನೆಗಳ ಪುಂಡಾಟವನ್ನು ಸದ್ದಿಲ್ಲಂದೆ ಅಡಗಿಸಿದ್ದಾನೆ. ಇನ್ನೂ ಇತ ಹೆಸರಿನಲ್ಲಿ 50ಕ್ಕೂ ಹೆಚ್ಚು ಹುಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಹೆಗ್ಗಳಿಕೆಯೂ ಸಹ ಇರುವುದು ಗಮನಾರ್ಹವಾಗಿದೆ. ಇದನ್ನೂ ಓದಿ: ದಸರಾ ಆನೆ ವಿಕ್ರಮನಿಗೆ ಮದ – ಈ ಬಾರಿ ದಸರಾದಿಂದ ವಿಕ್ರಮ ಔಟ್

    Abhimanyu elephant publictv

    ಒಟ್ಟಾರೆ ಕಳೆದ ವರ್ಷದಿಂದ ಯಶಸ್ಸಿಯಾಗಿ ಅಂಬಾರಿ ಹೊರುತ್ತಿರುವ ಅಭಿಮನ್ಯು ಮಾಡಿರು ಸಾಹಸ ಪರಾಕ್ರಮದಿಂದ ಇತನಿಗೆ ಕೂಂಬಿಂಗ್ ಸ್ಪೇಷಲಿಸ್ಟ್ ಎಂಬ ಬಿರುದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನೀಡಿದ್ದಾರೆ. ಅಭಿಮನ್ಯು ಇನ್ನಷ್ಟು ವರ್ಷಗಳ ಕಾಲ ಜಂಬೂ ಸವಾರಿಯ ಕ್ಯಾಪ್ಟನ್ ಶೀಪ್ ವಹಿಸಿಕೊಳ್ಳುವುದರ ಜೊತೆಗೆ ಇತನ ಈ ಯಶಸ್ವಿ ಕೂಂಬಿಂಗ್ ಜರ್ನಿಯನ್ನು ಮುಂದುವರೆಯಲಿ ಎನ್ನುವುದೇ ನಮ್ಮ ಆಶಯವಾಗಿದೆ.

  • ದಸರಾ ಮರುದಿನವೇ 1 ರಿಂದ 5ನೇ ತರಗತಿ ಆರಂಭ: ಬಿ.ಸಿ ನಾಗೇಶ್

    ದಸರಾ ಮರುದಿನವೇ 1 ರಿಂದ 5ನೇ ತರಗತಿ ಆರಂಭ: ಬಿ.ಸಿ ನಾಗೇಶ್

    ಉಡುಪಿ: ರಾಜ್ಯದಲ್ಲಿ ದಸರಾ ಮುಗಿದ ಕೂಡಲೇ ಅಂದರೆ ಅ.16ರಿಂದಲೇ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ‌ ಬಗ್ಗೆ ಶಿಕ್ಷಣ ಸಚಿವ ಬಿ.ಸಿ‌ ನಾಗೇಶ್ ‌ಉಡುಪಿಯಲ್ಲಿ ಘೋಷಣೆ ಮಾಡಿದ್ದಾರೆ.

    ನಗರದ ಒಳಕಾಡು ನಾರ್ತ್ ಶಾಲೆಗೆ ಬಂದು ಶಾಲೆಯ ವೀಕ್ಷಣೆ ಮಾಡಿದರು. ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದರು. ನಾರ್ಥ್ ಶಾಲೆಯಲ್ಲಿರುವ ಶೈಕ್ಷಣಿಕ ಫೆಸಿಲಿಟಿ ಗಳ ಬಗ್ಗೆ ಮಾಹಿತಿ ಪಡೆದು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದರು.

    ಭಗವಂತನ ಅನುಗ್ರಹದಿಂದ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಹಲವಾರು ಜಿಲ್ಲೆಯಲ್ಲಿ ಪಾಸಿಟಿವಿಟಿ ಝೀರೋ ಇದೆ. ಶಾಲೆ ಆರಂಭಿಸಬಹುದು ಎಂದು ತಜ್ಞರು ಅಭಿಪ್ರಾಯ ಕೊಟ್ಟಿದ್ದಾರೆ. ದಸರಾ ಮುಗಿದ ತಕ್ಷಣವೇ ಶಾಲೆಗಳು ಆರಂಭವಾಗುತ್ತದೆ. ಜೊತೆಗೆ ದಸರಾ ಮುಗಿದ ತಕ್ಷಣ ಬಿಸಿಊಟ ಕೂಡ ಆರಂಭವಾಗಲಿದೆ. ಸಿಎಂ ಬೊಮ್ಮಾಯಿ ಕೂಡ ಶೀಘ್ರ ಶಾಲೆ ಆರಂಭಿಸಲು ಆಸಕ್ತಿ ತೋರಿದ್ದಾರೆ ಎಂದರು.

    ಈ ಬಗ್ಗೆ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಟಾಸ್ಕ್ ಫೋರ್ಸ್ ಸಭೆ ಕರೆಯುತ್ತಾರೆ. ಆಯಾ ಜಿಲ್ಲೆಯ ಅಧಿಕಾರಿಗಳು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಮೇರೆಗೆ ಶೀಘ್ರ ಶಾಲೆ ಆರಂಭಿಸುತ್ತೇವೆ. ಇನ್ನು ಎಲ್ಲರಿಗೂ ಶಾಲೆ ಕಡ್ಡಾಯ ಮಾಡಿಲ್ಲ ಮುಂದೆಯೂ ಕಡ್ಡಾಯ ಮಾಡುವುದಿಲ್ಲ. ಆನ್‌ಲೈನ್‌, ಆಫ್ ಲೈನ್ ಎರಡು ಮಾದರಿಯಲ್ಲಿ ತರಗತಿಗಳು ನಡೆಯಲಿದೆ ಎಂದು ಸಚಿವ ನಾಗೇಶ್ ಹೇಳಿದರು.

    ಈಗ ಆರಂಭವಾಗಿರುವ ಶಾಲೆಗಳ ಹಾಜರಾತಿ ತೃಪ್ತಿಕರವಾಗಿದೆ. ಆನ್‌ಲೈನ್‌ ತರಗತಿಯಿಂದ ಕೆಳ ಗ್ರಾಮೀಣ ಮಕ್ಕಳಿಗೆ ತೊಂದರೆ ಆಗಿದೆ‌. ಗ್ರಾಮೀಣ ಭಾಗದಲ್ಲಿ ಹೈಸ್ಕೂಲ್ ಮಕ್ಕಳ ಹಾಜರಾತಿ ಶೇ.90ರಷ್ಟು ಇದೆ. ದಸರಾದ ಮರುದಿನದಿಂದಲೇ ಎಲ್ಲಾ ಶಾಲೆಗಳಲ್ಲಿ ಬಿಸಿಯೂಟ ಕೂಡ ಆರಂಭವಾಗಲಿದೆ. ಜಿಲ್ಲಾಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಶಾಲೆಗಳಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮತ್ತೆ ʼಮಹಾರಾಜʼನಾದ ಟಾಟಾ – Welcome Back ಏರ್‌ ಇಂಡಿಯಾ ಎಂದ ರತನ್‌ ಟಾಟಾ

    ಈ ಸಂದರ್ಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಡಿಡಿಪಿಐ ಎಚ್ ಎನ್ ನಾಗೂರ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.