Tag: ದಸರಾ ಉತ್ಸವ

  • ಮೈಸೂರು ದಸರಾ ಮಹೋತ್ಸವ: ಕಾಡಿನಿಂದ ನಾಳೆ ಗಜಪಯಣ ಆರಂಭ

    ಮೈಸೂರು ದಸರಾ ಮಹೋತ್ಸವ: ಕಾಡಿನಿಂದ ನಾಳೆ ಗಜಪಯಣ ಆರಂಭ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭಗೊಂಡಿದೆ. ನಾಳೆ ದಸರಾ ಗಜಪಡೆ ಕಾಡಿನಿಂದ ನಾಡಿಗೆ ಪಯಣ ಆರಂಭಿಸಲಿವೆ.

    ಬೆಳಿಗ್ಗೆ 10:20 ರಿಂದ 10:45ರೊಳಗಿನ ಶುಭ ಮುಹೂರ್ತದಲ್ಲಿ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣ ಆರಂಭವಾಗಲಿದೆ. ಮೊದಲ ತಂಡದಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳು ಮೈಸೂರಿಗೆ (Mysuru) ಆಗಮಿಸಲಿವೆ. ಇದನ್ನೂ ಓದಿ: ರಾಜ್ಯಪಾಲರಿಗಾಗಲಿ, ಲೋಕಾಯುಕ್ತಕ್ಕಾಗಲಿ ವಕ್ತಾರನಲ್ಲ, ನಾನು ಕಾಂಗ್ರೆಸ್ ಪ್ರತಿನಿಧಿ: ಡಿಕೆಶಿ

    ಎರಡನೇ ತಂಡದಲ್ಲಿ 5 ಆನೆಗಳು ಬರಲಿದೆ. ಹೆಚ್ಚುವರಿಯಾಗಿ 4 ಮೀಸಲು ಆನೆಗಳು ಗುರುತು ಕೂಡ ಮಾಡಲಾಗಿದೆ. ನಾಡಿಗೆ ಬರುವ ಈ ಗಜಪಡೆಗೆ ಆ.23 ರಂದು ಮೈಸೂರು ಅರಮನೆಯಲ್ಲಿ  ಅದ್ಧೂರಿಯಿಂದ ಸ್ವಾಗತಿಸಲಾಗುತ್ತದೆ. ಇದನ್ನೂ ಓದಿ: ನರ್ಸರಿಯಲ್ಲಿ 4 ವರ್ಷದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ರೊಚ್ಚಿಗೆದ್ದ ಜನರಿಂದ ಪೊಲೀಸರ ಮೇಲೆ ಕಲ್ಲು ತೂರಾಟ

     

    ವೈಭವೋಪೇತ ಜಂಬೂಸವಾರಿಯಲ್ಲಿ ಪಾಳ್ಗೊಳ್ಳುವ ಆನೆಗಳು ಅರಮನೆ ನಗರಿಯತ್ತ ಹೊರಟುನಿಂತಿವೆ. ಕೊಡಗು ಜಿಲ್ಲೆ (Kodagu) ದುಬಾರೆ ಸಾಕಾನೆ ಶಿಬಿರದಿಂದ ಕಂಜನ್, ಧನಂಜಯ, ಗೋಪಿ, ಅನೆಗಳು ಒಂದು ತಿಂಗಳ ಭರ್ಜರಿ ಪೂರ್ವಸಿದ್ಧತೆಯೊಂದಿಗೆ ನಾಳೆ ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ. ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಲು SIT ಪತ್ರ ಬರೆದಿದೆ: ಸಿದ್ದರಾಮಯ್ಯ

    ಆನೆಗಳಿಗೆ ಸಾಕಾನೆ ಶಿಬಿರದಲ್ಲಿ ಸಾಂಪ್ರದಾಯಿಕವಾಗಿ ಗಣಪತಿ ಪೂಜೆಯನ್ನು ನೆರವೇರಿಸಿದ ಸಾಕಾನೆಗಳ ಮಾವುತ, ಕಾವಾಡಿಗಳು ಯಾವುದೇ ವಿಘ್ನ ಬರದಂತೆ ಪೂಜೆ ಸಲ್ಲಿಸಿದರು. ಒಂದು ತಿಂಗಳು ಮೈಸೂರಿನಲ್ಲಿ ವಿಶೇಷ ಆಹಾರ ಹಾಗೂ ತರಬೇತಿ ನಡೆಸಲಿರುವ ದಸರಾ ಆನೆಗಳು ಮೈಸೂರಿಗೆ ಹೊರಟಿವೆ. ಇದನ್ನೂ ಓದಿ: ರಾಜ್ಯಪಾಲರನ್ನು ನಮ್ಮ ನಾಯಕರು ನಿಂದನೆ ಮಾಡಿಲ್ಲ, ಇರೋದನ್ನೆ ಹೇಳಿದ್ದಾರೆ: ಸಿದ್ದರಾಮಯ್ಯ

    ಇನ್ನೂ ದುಬಾರೆ ಸಾಕಾನೆ ಶಿಬಿರದಿಂದ ದಸರಾ ಆನೆಗಳು ವೀರನಹೊಸಹಳ್ಳಿಗೆ ಕಳುಹಿಸುವ ಸಲುವಾಗಿ ಲಾರಿಗಳಿಗೆ ಹತ್ತಿಸಲಾಯಿತು. ನಾಡದೇವತೆಯ ಹಬ್ಬದಲ್ಲಿ ಪಾಲ್ಗೊಳ್ಳುವ ಮಾವುತ ಕಾವಾಡಿಗಳು ಮಾತಾನಾಡಿ, ದೇವಿಯ ಹಬ್ಬದಲ್ಲಿ ಭಾಗಿಯಾಗಲು ನಿಜವಾಗಿಯೂ ನಾವು ಪುಣ್ಯ ಮಾಡಿದ್ದೇವೆ. ಸಾಕು ಪ್ರಾಣಿಗಳ ಮೂಲಕ ದೇವಿಯ ಸೇವೆಗೆ ಹೋಗುವುದೇ ನಮಗೆ ತುಂಬಾ ಖುಷಿಯ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇವರಾಜ್ ಅರಸ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಲು ಕೇಂದ್ರಕ್ಕೆ ಶಿಫಾರಸು- ಸಿದ್ದರಾಮಯ್ಯ

    ಮೊದಲ ಹಂತವಾಗಿ ದುಬಾರೆಯಿಂದ ಮೂರು ಆನೆಗಳು ಹೊರಟಿವೆ. ಮುಂದಿನ ದಿನಗಳಲ್ಲಿ ದುಬಾರೆ ಸಾಕಾನೆ ಶಿಬಿರದಿಂದ ಅಯ್ಯಪ್ಪ, ಹರ್ಷ, ಸುಗ್ರೀವ, ಪ್ರಶಾಂತ ಅರಮನೆಯತ್ತ ಪ್ರಯಾಣ ಬೆಳೆಸಲಿದೆ. ಇದನ್ನೂ ಓದಿ: ಶತಮಾನ ಕಂಡ ಸರ್ಕಾರಿ ಶಾಲೆ ಕಿಡಿಗೇಡಿಗಳಿಂದ ಧ್ವಂಸ

    ವಿಶ್ವವಿಖ್ಯಾತ ಮೈಸೂರು ದಸರಾದ (Mysuru Dasara) ಜಂಬೂಸವಾರಿಗಾಗಿ ಆನೆಗಳ ತಂಡ ದುಬಾರೆಯಿಂದ ವೀರನಹೊಸಹಳ್ಳಿ ಶಿಬಿರಕ್ಕೆ ತೆರಳಿ ಅಲ್ಲಿಂದ ನಾಳೆ ಬೆಳಿಗ್ಗೆ ಮೈಸೂರಿನತ್ತ ಪ್ರಯಾಣ ಬೆಳೆಸಲಿದ್ದು, ಸಂಪ್ರದಾಯದಂತೆ ಅರಮನೆಗೆ ಗಜಪಯಣ ನಡೆಯಲಿದೆ. ಇದನ್ನೂ ಓದಿ: ಸಾಮಾಜಿಕ ನ್ಯಾಯದ ಪರ ಇರೋದಕ್ಕೆ ನನ್ನ ವಿರುದ್ಧ ಬಿಜೆಪಿ ಷಡ್ಯಂತ್ರ: ಸಿದ್ದರಾಮಯ್ಯ

  • ದಸರಾ ಉತ್ಸವದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ ಚಂದ್ರಶೇಖರ್ ಶ್ರೀ

    ದಸರಾ ಉತ್ಸವದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ ಚಂದ್ರಶೇಖರ್ ಶ್ರೀ

    ಚಿಕ್ಕೋಡಿ: ದಸರಾ ಉತ್ಸವದಲ್ಲಿ 9 ದಿನ ಆದಿಶಕ್ತಿ ದುರ್ಗಾಮಾತೆಗೆ ವಿಭಿನ್ನದ ಜೊತೆಗೆ ವಿಶೇಷವಾಗಿ ಪೂಜೆ ಮಾಡುವುದು ವಾಡಿಕೆ. ಆದರೆ ದಸರಾ ಉತ್ಸವದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ನಮ್ಮನ್ನ ಕಾಪಾಡುವ ದುರ್ಗಾಮಾತೆಯರು ಎಂದು ಪೌರ ಕಾರ್ಮಿಕ ಮಹಿಳೆಯರಿಗೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಪೂಜೆ ಸಲ್ಲಿಸಿ ಮಾದರಿಯಾಗಿದ್ದಾರೆ.

    ಉತ್ತರ ಕರ್ನಾಟಕದಲ್ಲೆ ಭಾವೈಕ್ಯತೆಯ ಸಂಕೇತವಾಗಿ ಅದ್ದೂರಿಯಾಗಿ ಆಚರಿಸುವ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ವಿಶೇಷವಾಗಿ ಗೌರವ ಸಲ್ಲಿಸಲಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಪೌರ ಕಾರ್ಮಿಕ ಮಹಿಳೆಯರಿಗೆ ಉಡಿ ತುಂಬಿ, ದೀಪ ಬೆಳಗಿ ವಿಶೇಷವಾದ ಪೂಜೆ ಸಲ್ಲಿಸಿದರು. ಸ್ವಾಮೀಜಿ ಅವರಿಗೆ ವಿಧಾನಸಭೆಯ ಉಪಸಭಾಪತಿ ಆನಂದ್ ಮಾಮನಿ, ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ದಂಪತಿ ಸಾಥ್ ನೀಡಿದರು. ಇದನ್ನೂ ಓದಿ: ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಟಾಂಗಾದಲ್ಲಿ ಆಗಮಿಸಿದ ಸೋಮಶೇಖರ್

    ನಗರವನ್ನು ಸ್ವಚ್ಛಂದವಾಗಿಡುವ ಮಹಿಳಾ ಪೌರ ಕಾರ್ಮಿಕರಿಗೆ ಹಾಗೂ ಪುರುಷ ಪೌರ ಕಾರ್ಮಿಕರ ಪತ್ನಿಯರಿಗೆ ಈ ಸಂದರ್ಭದಲ್ಲಿ ಪೂಜೆ ಸಲ್ಲಿಸಲಾಯಿತು. ಸೀರೆ ನೀಡಿ, ಉಡಿ ತುಂಬುವದರ ಜೊತೆಗೆ ಆರತಿ ಮಾಡಿ ವಿಶೇಷವಾದ ಗೌರವ ನೀಡಲಾಯಿತು. ಕೊರೊನಾ ಮಹಾಮಾರಿ ಸಂದರ್ಭದಲ್ಲಿ ನಗರ ಹಾಗೂ ಗ್ರಾಮಗಳನ್ನು ಸ್ವಚ್ಛವಾಗಿಟ್ಟು, ಜನರ ಆರೋಗ್ಯವನ್ನ ಕಾಪಾಡಿದ ಪೌರ ಕಾರ್ಮಿಕರಿಗೆ ಈ ರೀತಿಯಾದ ಸನ್ಮಾನ ಮಾಡಿದ ಕಾರ್ಯವನ್ನು ವಿಧಾನಸಭೆಯ ಉಪಸಭಾಪತಿ ಶ್ಲಾಘಿಸಿದರು.

    ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಗುರುತಿಸಿ ದಸರೆಯ ಸಂದರ್ಭದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿ, ಗೌರವ ಸಲ್ಲಿಸಿದ ಹುಕ್ಕೇರಿ ಹಿರೇಮಠದ ಕಾರ್ಯಕ್ಕೆ ಸಾರ್ವಜನಿಕ ಪ್ರಶಂಸೆ ವ್ಯಕ್ತವಾಗುವುದರ ಜೊತೆಗೆ ರಾಜ್ಯದ ವಿವಿಧ ಮಠಾಧೀಶರಿಗೆ ಹುಕ್ಕೇರಿ ಶ್ರೀಗಳ ಕಾರ್ಯ ಮಾದರಿಯಾಗಿದೆ. ಇದನ್ನೂ ಓದಿ: 550 ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ವ್ಯಕ್ತಿ – ವೀಡಿಯೋ ವೈರಲ್

  • ಕೋವಿಡ್ ಮುಂಜಾಗ್ರತೆಯೊಂದಿಗೆ ಶಿವಮೊಗ್ಗದಲ್ಲಿ ವೈಭವದ ದಸರಾ ಆಚರಣೆಗೆ ಸಿದ್ಧತೆ: ಕೆ.ಎಸ್ ಈಶ್ವರಪ್ಪ

    ಕೋವಿಡ್ ಮುಂಜಾಗ್ರತೆಯೊಂದಿಗೆ ಶಿವಮೊಗ್ಗದಲ್ಲಿ ವೈಭವದ ದಸರಾ ಆಚರಣೆಗೆ ಸಿದ್ಧತೆ: ಕೆ.ಎಸ್ ಈಶ್ವರಪ್ಪ

    ಶಿವಮೊಗ್ಗ: ಈ ಬಾರಿ ಶಿವಮೊಗ್ಗ ದಸರಾವನ್ನು ಕೋವಿಡ್ ಮುಂಜಾಗ್ರತೆಯೊಂದಿಗೆ ಭಕ್ತಿಪೂರ್ವಕವಾಗಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಸರಾ ಆಚರಣೆ ಕುರಿತು ಮಹಾನಗರ ಪಾಲಿಕೆ ಸದಸ್ಯರ ಮತ್ತು ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ದಸರಾ ಮಾದರಿಯಲ್ಲಿ ಹಲವು ವರ್ಷಗಳಿಂದ ಶಿವಮೊಗ್ಗದಲ್ಲಿ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಬಾರಿ ಸರಳವಾಗಿ ದಸರಾ ಆಚರಿಸಲಾಗಿದ್ದು, ಈ ಬಾರಿ ಹೆಚ್ಚಿನ ಜನ ಸೇರದಂತೆ ಎಲ್ಲಾ ಮುಂಜಾಗರೂಕತೆಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಅಸ್ಸಾಂನಿಂದ ಬರುತ್ತಿದ್ದಾರೆ ನೂರಾರು ಕೂಲಿ ಕಾರ್ಮಿಕರು – ಸ್ಥಳೀಯರ ಆತಂಕ

    9 ದಿನಗಳ ಕಾಲ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ಹಿಂದೆ ವಿವಿಧ ವೇದಿಕೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಈ ಬಾರಿ ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಪ್ರತಿದಿನ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.

    ವಿಜಯ ದಶಮಿಯ ಕಡೆ ದಿನದ ಮೆರವಣಿಗೆಯನ್ನು ಸರಳವಾಗಿ, ವ್ಯವಸ್ಥಿತವಾಗಿ ನಡೆಸಲಾಗುವುದು. ಪ್ರತಿ ವರ್ಷ ನೀಡುವಂತೆ 196 ದೇವಾಲಯಗಳಿಗೆ ಪೂಜೆ ಅಲಂಕಾರಕ್ಕಾಗಿ 4 ಸಾವಿರ ರೂ. ಅನುದಾನ ಒದಗಿಸಲಾಗುವುದು. ಆದರೆ ಮೆರವಣಿಗೆಯಲ್ಲಿ ಎಲ್ಲಾ ದೇವಾಲಯಗಳು ಭಾಗವಹಿಸುವ ಅಗತ್ಯವಿಲ್ಲ. ಆಯ್ದ ಕೆಲವು ದೇವಾಲಯಗಳಿಂದ ಮೆರವಣಿಗೆಯಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿದೆ. ದಸರಾ ಆಚರಣೆಗೆ ರಾಜ್ಯ ಸರ್ಕಾರದಿಂದ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ:  ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿನದ್ದು: ಸಂಜಯ್ ಪಾಟೀಲ್

    ದಸರಾದ ವೈಭವವನ್ನು ಸಾರ್ವಜನಿಕರು ವೀಕ್ಷಿಸಲು ಸಹಾಯಕವಾಗುವಂತೆ ನಗರದ ವಿವಿಧೆಡೆಗಳಲ್ಲಿ ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗುವುದು. ಸಾರ್ವಜನಿಕರು ಈ ಪರದೆಗಳ ಮೂಲಕ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಸಾರ್ವಜನಿಕರು ಸಹಕರಿಸುವ ಮೂಲಕ ದಸರಾವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಮನವಿ ಮಾಡಿದರು.

    ಈ ಸುದ್ದಿಗೋಷ್ಠಿಯಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಆಯುಕ್ತ ಚಿದಾನಂದ ವಟಾರೆ, ಜಿ.ಪಂ.ಸಿಇಒ ಎಂ.ಎಲ್.ವೈಶಾಲಿ, ಮಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.