Tag: ದಶಪಥ ರಸ್ತೆ

  • ದಶಪಥ ಹೆದ್ದಾರಿಯಲ್ಲಿ ಸರಣಿ ಅಪಘಾತ- ನಾಲ್ಕು ವಾಹನಗಳು ಜಖಂ

    ದಶಪಥ ಹೆದ್ದಾರಿಯಲ್ಲಿ ಸರಣಿ ಅಪಘಾತ- ನಾಲ್ಕು ವಾಹನಗಳು ಜಖಂ

    ರಾಮನಗರ: ಬೆಂಗಳೂರು-ದಶಪಥ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಸರಣಿ ಅಪಘಾತ ನಡೆದು ನಾಲ್ಕು ವಾಹನಗಳು ಜಖಂಗೊಂಡಿವೆ.

    ಬಿಡದಿಯ ನೆಲ್ಲಿಗುಡ್ಡೆ ಕೆರೆಯ ಸಮೀಪ ದಶಪಥ ಹೆದ್ದಾರಿಯಲ್ಲಿ ಲಾರಿ, ಬಸ್ ಹಾಗೂ ಎರಡು ಕಾರು ನಡುವೆ ಅಪಘಾತ ನಡೆದಿದೆ. ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಸಂಚಾರ ಮಾಡುತ್ತಿದ್ದ ಈ ನಾಲ್ಕು ವಾಹನಗಳ ನಡುವೆ ಅಪಘಾತ ನಡೆದು ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಮಂದಗತಿಯಲ್ಲಿ ಚಲಿಸುತ್ತಿದ್ದ ಲಾರಿಗೆ ಮೊದಲು ಐರಾವತ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್ ಹಿಂಬಂದಿ ಬರುತ್ತಿದ್ದ ಎರಡು ಕಾರುಗಳು ಸಹ ಬಸ್ಸಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇಯಲ್ಲಿ ನಿಯಂತ್ರಣ ತಪ್ಪಿ ಪಕ್ಕದ ರಸ್ತೆಗೆ ನುಗ್ಗಿದ ಟ್ರಕ್ – ತಪ್ಪಿದ ಭಾರೀ ಅನಾಹುತ

    ಸರಣಿ ಅಪಘಾತದಿಂದ ನಾಲ್ಕು ವಾಹನಗಳು ಜಖಂಗೊಂಡಿದ್ದು, ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಬಳಿಕ ಜಖಂಗೊಂಡ ವಾಹನಗಳನ್ನ ತೆರವು ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆ; ಯಾವ ಬಸ್‌ನಲ್ಲಿ ಹೋದ್ರೆ ಎಷ್ಟು?

    ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ (Bengaluru Mysuru Expressway) ಮಾರ್ಚ್ 14ರಿಂದಲೇ ಟೋಲ್ (Toll) ಸಂಗ್ರಹ ಆರಂಭವಾಗಿದ್ದು, ಈ ಟೋಲ್ ಶುಲ್ಕದ ಹೊರೆಯನ್ನು ಕೆಎಸ್‌ಆರ್‌ಟಿಸಿ (KSRTC) ಪ್ರಯಾಣಿಕರ ಹೆಗಲಿಗೆ ಹೊರಿಸಿದೆ.

    ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಕಟಣೆ ಹೊರಡಿಸಿದೆ. ಎಕ್ಸ್‌ಪ್ರೆಸ್‌ವೇಯ ಮೊದಲ ಹಂತದ ಬೆಂಗಳೂರು-ನಿಡಘಟ್ಟ ಮಧ್ಯದಲ್ಲಿನ ಕಣಿಮಿಣಿಕೆ ಟೋಲ್ ಮುಖಾಂತರ ಸಂಚರಿಸುವ ಬಸ್ಸುಗಳಿಂದ ಮಾರ್ಚ್ 14ರಿಂದಲೇ ಟೋಲ್ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಾರಂಭಿಸಿದೆ. ಇದನ್ನೂ ಓದಿ: ಮಾರ್ಚ್ 14ರಿಂದಲೇ ದಶಪಥ ರಸ್ತೆಯಲ್ಲಿ ಟೋಲ್ ಸಂಗ್ರಹ ಶುರು

    ಈ ವೆಚ್ಚ ಸರಿದೂಗಿಸಲು ಟೋಲ್ ಶುಲ್ಕದ ಹೊರೆಯನ್ನು ಪ್ರಯಾಣಿಕರ ಹೆಗಲಿಗೆ ಹೊರಿಸಲಾಗಿದೆ. ಎಕ್ಸ್‌ಪ್ರೆಸ್‌ವೇ ಮೂಲಕ ಸಂಚರಿಸುವ ನಿಗಮದ ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ತಲಾ ಪ್ರಯಾಣಿಕರಿಂದ 15 ರೂ., ರಾಜಹಂಸ ಬಸ್ಸುಗಳಲ್ಲಿ ತಲಾ 18 ರೂ. ಹಾಗೂ ಮಲ್ಟಿ ಆಕ್ಸಲ್ ಅಥವಾ ಇತರೇ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ ತಲಾ 20 ರೂ. ಅನ್ನು ಬಳಕೆದಾರರ ಶುಲ್ಕವನ್ನಾಗಿ (ಟೋಲ್) ಸಂಗ್ರಹಿಸುವುದು ಅನಿವಾರ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ:ಮೋದಿ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಹೆದ್ದಾರಿಯಲ್ಲಿ ಸಂಚಾರಕ್ಕೆ ಅನುಮತಿ

    ಬಳಕೆದಾರರ ಶುಲ್ಕವು ಎಕ್ಸ್‌ಪ್ರೆಸ್‌ವೇ ಮೂಲಕ ಕಾರ್ಯಾಚರಣೆಯಾಗುವ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ಅನ್ವಯವಾಗುತ್ತದೆ. ಉಳಿದ ಸಾರಿಗೆಗಳಿಗೆ ಅನ್ವಯಿಸುವುದಿಲ್ಲ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

  • ದಶಪಥ ರಸ್ತೆ ಸರಿಯಿಲ್ಲ, ನಾನು ಬರೋವಾಗ ಶೌಚಾಲಯಕ್ಕೆ ನಿಲ್ಲಿಸಲೂ ಅವಕಾಶ ಇರ್ಲಿಲ್ಲ – ಡಿಕೆಶಿ

    ದಶಪಥ ರಸ್ತೆ ಸರಿಯಿಲ್ಲ, ನಾನು ಬರೋವಾಗ ಶೌಚಾಲಯಕ್ಕೆ ನಿಲ್ಲಿಸಲೂ ಅವಕಾಶ ಇರ್ಲಿಲ್ಲ – ಡಿಕೆಶಿ

    ಬೆಂಗಳೂರು: ದಶಪಥ ರಸ್ತೆಯಲ್ಲಿ (Bengaluru Mysuru Expressway) ಸ್ಥಳೀಯರು ಓಡಾಡೋಕೆ ಸರ್ವೀಸ್ ರಸ್ತೆ ಇರಬೇಕು. ಆದ್ರೆ ಅಲ್ಲಿ ಸರ್ವೀಸ್ ರಸ್ತೆಯೇ ಇಲ್ಲ. ನಾನೇ ಆ ರಸ್ತೆಯಲ್ಲಿ ಬರೋವಾಗ ಶೌಚಾಲಯಕ್ಕೆ ಹೋಗ್ಬೇಕು ಅಂದ್ರೆ, ಅವಕಾಶ ಇರ್ಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಉದ್ಘಾಟನೆಯೇ ಸರಿಯಿಲ್ಲ. ರಸ್ತೆಯನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿಯಮದ ಅನ್ವಯ ಮಾಡಿಲ್ಲ. ರಸ್ತೆ ಗುತ್ತಿಗೆದಾರನೂ ಸರಿಯಾಗಿ ಕೆಲಸ ಮಾಡಿಲ್ಲ. ಈಗಾಗಲೇ 80ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಎಲ್ಲ ಕಡೆ ಅಂಗಡಿಗಳು ಮುಚ್ಚಿಹೋಗಿವೆ. ಸ್ಥಳೀಯರು ಓಡಾಡೋಕೆ ಸರ್ವೀಸ್ ರಸ್ತೆಯೇ ಇಲ್ಲ. ನಾನೇ ಮೊನ್ನೆ ಬರೋವಾಗ ಶೌಚಾಲಯಕ್ಕೆ ನಿಲ್ಲಿಸಲು ಅವಕಾಶ ಇರಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಮಾರ್ಚ್ 14ರಿಂದಲೇ ದಶಪಥ ರಸ್ತೆಯಲ್ಲಿ ಟೋಲ್ ಸಂಗ್ರಹ ಶುರು

    ಸಚಿವ ವಿ. ಸೋಮಣ್ಣ (V Somanna) ಮತ್ತು ಡಿ.ಕೆ ಶಿವಕುಮಾರ್ ವಿಮಾನದಲ್ಲಿ ಒಟ್ಟಿಗೆ ಕುಳಿತಿದ್ದ ಫೋಟೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಹಳಷ್ಟು ವಿಚಾರದಲ್ಲಿ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಸೋಮಣ್ಣ ನಮ್ಮ ತಾಲೂಕಿನವರು. ನಾವು ಅವರಿಗೆ ಗೌರವ ಕೊಡ್ತೀವಿ. ರಾಜಕಾರಣ ಬೇರೆ, ಬಾಂಧವ್ಯ ಬೇರೆ. ಅವರು ಕಾಂಗ್ರೆಸ್‌ಗೆ ಬರ್ತೀನಿ ಅಂತಾ ಹೇಳಿಲ್ಲ, ನಾನೂ ಕರೆದಿಲ್ಲ. ಅಧಿವೇಶನ ಮುಗಿಸಿಕೊಂಡು ಬೆಳಗಾವಿಯಿಂದ ವಿಮಾನದಲ್ಲಿ ಬರ್ತಾ ಇದ್ವಿ ಅಷ್ಟೇ. ಅದರಲ್ಲಿ ಏನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭಗವಾನ್ ಶ್ರೀಕೃಷ್ಣನನ್ನೇ ವರಿಸಿದ ಎಲ್‍ಎಲ್‍ಬಿ ಪದವೀಧರೆ!

  • JDS ಕಾರ್ಯಕರ್ತರಿಗೆ ಭರ್ಜರಿ ಬಾಡೂಟ -ನಾನು ರಾಮನಗರದಲ್ಲೇ ಮಣ್ಣಾಗೋದು ಎಂದ HDK

    JDS ಕಾರ್ಯಕರ್ತರಿಗೆ ಭರ್ಜರಿ ಬಾಡೂಟ -ನಾನು ರಾಮನಗರದಲ್ಲೇ ಮಣ್ಣಾಗೋದು ಎಂದ HDK

    -ಜನ ಪ್ರೀತಿ ತೋರಿಸಿ ನಿಖಿಲ್ ಸೋಲಿಸಿದ್ರು ಎಂದ ಕುಮಾರಸ್ವಾಮಿ

    ರಾಮನಗರ: ರಾಜ್ಯದಲ್ಲಿ ಚುನಾವಣಾ (Elections) ಕಾವು ದಿನೇ ದಿನೇ ರಂಗೇರುತ್ತಿದೆ. ಮೂರು ಪಕ್ಷಗಳೂ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಈ ನಡುವೆ ಸ್ವಕ್ಷೇತ್ರದಲ್ಲಿ ಮಗನ ಗೆಲುವಿಗಾಗಿ ಪಣ ತೊಟ್ಟಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಭರ್ಜರಿ ಬಾಡೂಟ (Nonveg) ಹಾಕಿಸುವ ಮೂಲಕ ಮತದಾರರನ್ನ ಸೆಳೆಯುವುದಕ್ಕೆ ಮುಂದಾಗಿದ್ದಾರೆ.

    ಮಂಡ್ಯಕ್ಕೆ (Mandya) ಮೋದಿ ಆಗಮನದಿನದಂದೇ ರಾಮನಗರ (Ramanagara) ಕ್ಷೇತ್ರದಲ್ಲಿ ಹೆಚ್‌ಡಿಕೆ ಬಾಡೂಟ ಹಾಕಿಸುವ ಮೂಲಕ ಬಿಜೆಪಿಗೆ (BJP) ಠಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಧಾರವಾಡ ಜಿಲ್ಲಾಡಳಿತದಿಂದ ಪ್ರಧಾನಿ ಮೋದಿಗೆ ತೊಟ್ಟಿಲು ಗಿಫ್ಟ್

    ಹೌದು, 2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹಳೇ ಮೈಸೂರು ಭಾಗದಲ್ಲಿ ಮೂರು ಪಕ್ಷಗಳು ಕೂಡಾ ಜಿದ್ದಾ-ಜಿದ್ದಿಯಲ್ಲಿ ರ‍್ಯಾಲಿ, ಸಮಾವೇಶ, ರೋಡ್ ಶೋಗಳನ್ನ ಆಯೋಜನೆ ಮಾಡುವ ಮೂಲಕ ಮತದಾರರ ಮನವೊಲಿಸಲು ಮುಂದಾಗಿದ್ದಾರೆ. ಒಂದೆಡೆ ಮಂಡ್ಯದಲ್ಲಿ ಪ್ರಧಾನಿ ಮೋದಿ (Narendra Modi) ರೋಡ್ ಶೋ ಮಾಡ್ತಿದ್ರೆ, ಮತ್ತೊಂದೆಡೆ ಪಕ್ಕದ ಜಿಲ್ಲೆ ರಾಮನಗರದಲ್ಲಿ ಹೆಚ್‌ಡಿಕೆ ಭರ್ಜರಿ ಬಾಡೂಟ ಆಯೋಜಿಸಿದ್ದಾರೆ. ಪುತ್ರನ ಗೆಲುವಿಗಾಗಿ ರಣತಂತ್ರ ರೂಪಿಸಿರೋ ಕುಮಾರಸ್ವಾಮಿ ಅಭಿನಂದನಾ ಸಮಾರಂಭದ ಹೆಸರಿನಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ.

    ರಾಮನಗರ ಜಿಲ್ಲೆಯ 5ನೇ ತಾಲೂಕಾಗಿ ಹಾರೋಹಳ್ಳಿ ಉದ್ಘಾಟಿಸಿದ ಹಿನ್ನೆಲೆಯಲ್ಲಿ ಹೆಚ್‌ಡಿಕೆ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಇದನ್ನೇ ಸದುಪಯೋಗಪಡಿಸಿಕೊಂಡ ಕುಮಾರಸ್ವಾಮಿ ಕ್ಷೇತ್ರದ ಸುಮಾರು 25 ಸಾವಿರ ಕಾರ್ಯಕರ್ತರಿಗೆ ಬಾಡೂಟ ಏರ್ಪಡಿಸಿದ್ದರು. ಬಾಡೂಟದಲ್ಲಿ ಮಟನ್ ಸಾಂಬಾರ್, ಚಿಕನ್ ಫ್ರೈ, ಬೋಟಿ ಗೊಜ್ಜು, ತಲೆ ಮಾಂಸ, ಊಟ ಹಾಕಿಸಿದ್ದು ಬಂದಂತಹ ಕಾರ್ಯಕರ್ತರು ಬಾಡೂಟಕ್ಕೆ ಮುಗಿಬಿದ್ದರು. ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಬೇಗ ತಲುಪಿ!

    ಇದೇ ವೇಳೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಹೆಚ್‌ಡಿಕೆ, ನನ್ನ ತಾಲೂಕಿನ ಜನತೆ ಮೇಲೆ ವಿಶ್ವಾಸವಿದೆ. ಕಳೆದ ಬಾರಿ ಮಂಡ್ಯದಲ್ಲಿ ಜನ ನಿಖಿಲ್ ಮೇಲೆ ಪ್ರೀತಿ ತೋರಿಸಿದ್ದರು, ಆದ್ರೆ ಸೋಲಿಸಿದರು. ಬಿಜೆಪಿ, ಕಾಂಗ್ರೆಸ್ ಹಾಗೂ ರೈತಸಂಘದ ಕುತಂತ್ರದಿಂದ ನಿಖಿಲ್ ಸೋತರು. ಈಗ ನಿಖಿಲ್‌ಗೆ ಆ ಭಯ ಬೇಡ. ರಾಮನಗರದ ಜನ ನಿಖಿಲ್‌ರನ್ನ ಗೆಲ್ಲಿಸುತ್ತಾರೆ ಎಂದು ನಿಖಿಲ್‌ಗೆ ಅಭಯ ನೀಡಿದರು.

    ನಾನು ಜನ್ಮ ತಾಳಿದ್ದು ಹಾಸನ ಇರಬಹುದು, ಆದರೆ ರಾಜಕೀಯ ಜನ್ಮ ಕೊಟ್ಟಿದ್ದು ರಾಮನಗರ. ಕುಮಾರಸ್ವಾಮಿ ಯಾರೆಂದು ಗುರುತಿಸುವ ಶಕ್ತಿ ಕೊಟ್ಟಿದ್ದು ರಾಮನಗರದ ಜನ. ನಾನೂ ಕೂಡ ಇಲ್ಲೇ ಮಣ್ಣಾಗೋದು ಎಂದು ಭಾವುಕರಾದರು.

  • ಮೋದಿ ಗೌರವಿಸಿದ ವ್ಯಕ್ತಿ ಯಾರಾದ್ರೂ ಇದ್ರೆ ಅದು ಯಡಿಯೂರಪ್ಪ – ಮುನಿರತ್ನ

    ಮೋದಿ ಗೌರವಿಸಿದ ವ್ಯಕ್ತಿ ಯಾರಾದ್ರೂ ಇದ್ರೆ ಅದು ಯಡಿಯೂರಪ್ಪ – ಮುನಿರತ್ನ

    – ಬಿಎಸ್‌ವೈಗೆ ಮೋದಿ ತಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ
    – ದಶಪಥ ರಸ್ತೆ ನಮ್ಮದೇ ಕೊಡುಗೆ ಎಂದ ಸಚಿವ

    ಕೋಲಾರ: ಪ್ರಧಾನಿ ಗೌರವಿಸಿದಂತಹ ವ್ಯಕ್ಯಿ ಯಾರಾದ್ರು ಇದ್ರೆ ಅದು ಯಡಿಯೂರಪ್ಪ. ಅವರನ್ನ ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಲಾಗುತ್ತಿದೆ. ಯಡಿಯೂರಪ್ಪ (BS Yediyurappa) ಅವರಿಗೆ ಮೋದಿ (Narendra Modi) ಅವರು ತಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ ಎಂದು ಸಚಿವ ಮುನಿರತ್ನ (Munirathna) ತಿಳಿಸಿದರು.

    narendra modi bs yediyurappa

    ಕೋಲಾರ (Kolar) ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನ ಬಿಡುವ ಉದ್ದೇಶ ಇಲ್ಲ. ಅವರು ನಮ್ಮ ಜೊತೆಗೆ ಇದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ವಧುದಕ್ಷಿಣೆ ಕಡಿಮೆ ಆಯ್ತು ಅಂತಾ ಮದುವೆ ಬೇಡವೆಂದ ಯುವತಿ – ಪ್ರಕರಣ ದಾಖಲಿಸದ ಪೊಲೀಸರು

    narendra modi 5

    ಬಿಜೆಪಿ (BJP) ಜೊತೆ ಎಲ್ಲಾ ಸಮುದಾಯಗಳು ಇವೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ಈಗಾಗಲೇ ಗ್ಯಾರೆಂಟಿ ಕಾರ್ಡ್ ಕೊಡುವ ಮೂಲಕ ಅಧಿಕಾರಕ್ಕೆ ಬರಲ್ಲ ಎಂದು ಅವರೇ ಹೇಳ್ತಿದ್ದಾರೆ. ಹಾಗಾಗಿ ನಾವು ರಾಜ್ಯದಲ್ಲಿ ಸರ್ಕಾರ ಮಾಡೋದು ಖಚಿತ ಎಂದು ಹೇಳಿದರು. ಇದನ್ನೂ ಓದಿ: ಅಭಿವೃದ್ಧಿ ಅಂದ್ರೆ ಬೊಜ್ಜು ಕಡಿಮೆ ಮಾಡಿಕೊಳ್ಳಲು ಭಾರತ್ ಜೋಡೋ ಹೆಸರಲ್ಲಿ ವಾಕಿಂಗ್ ಮಾಡಿದಂತಲ್ಲ: ತೇಜಸ್ವಿ

    ದಶಪಥ ರಸ್ತೆ (Bengaluru Mysuru Expressway) ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಇದ್ದಾಗ ಅದನ್ನ ಪ್ರಾರಂಭ ಮಾಡಿ ಉದ್ಘಾಟನೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ವಿಧಾನಸೌಧ, ಹೈಕೋರ್ಟ್ ಕೂಡ ನಾವೆ ಕಟ್ಟಿಸಿದ್ದೇವೆ ಅಂದುಬಿಡ್ತಾರೆ. ಸದ್ಯ, ಕೆಆರ್‌ಎಸ್ ಕೂಡ ನಾವೇ ಮಾಡಿದ್ದು ಎಂದಿಲ್ಲ ಎಂದು ವ್ಯಂಗ್ಯವಾಡಿದರು.

  • ಯಾರಿಗೋ ಹುಟ್ಟಿದ ಮಗುವನ್ನು ಜೆಡಿಎಸ್-ಕಾಂಗ್ರೆಸ್‍ನವರು ತಮ್ಮದೆನ್ನುತ್ತಾರೆ: ಈಶ್ವರಪ್ಪ ವಾಗ್ದಾಳಿ

    ಯಾರಿಗೋ ಹುಟ್ಟಿದ ಮಗುವನ್ನು ಜೆಡಿಎಸ್-ಕಾಂಗ್ರೆಸ್‍ನವರು ತಮ್ಮದೆನ್ನುತ್ತಾರೆ: ಈಶ್ವರಪ್ಪ ವಾಗ್ದಾಳಿ

    ಮಡಿಕೇರಿ: ಜೆಡಿಎಸ್ (JDS) ಹಾಗೂ ಕಾಂಗ್ರೆಸ್‍ನವರು (Congress) ಯಾರಿಗೋ ಹುಟ್ಟಿದ ಮಗುವನ್ನು ನಮ್ಮದು ಎನ್ನುತ್ತಾರೆ ಎಂದು ಮಾಜಿ ಸಚಿವ ಈಶ್ವರಪ್ಪ (K.S.Eshwarappa) ವಾಗ್ದಾಳಿ ನಡೆಸಿದ್ದಾರೆ.

    ಮಡಿಕೇರಿಯಲ್ಲಿ (Madikeri) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮೈಸೂರು ದಶಪಥ ರಸ್ತೆ ನಿರ್ಮಾಣಕ್ಕೆ ದೇವೇಗೌಡರು (H.D.Deve Gowda), ಸಿದ್ದರಾಮಯ್ಯ (Siddaramaiah) ಮತ್ತು ಮಹದೇವಪ್ಪನವರು ನಾವೇ ಕಾರಣ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಇಬ್ಬರ ಜೊತೆ ಲಿವ್ ಇನ್ ರಿಲೇಶನ್‍ಶಿಪ್- ಮಕ್ಕಳು ಹುಟ್ಟಿದ ಬಳಿಕ ಒಂದೇ ಮಂಟಪದಲ್ಲಿ ಇಬ್ಬರನ್ನೂ ವರಿಸಿದ!

    ಬೆಂಗಳೂರು (Bengaluru) -ಮೈಸೂರು (Mysuru) ದಶಪಥ ರಸ್ತೆ ನಿರ್ಮಾಣಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಕೊಡುಗೆ ಶೂನ್ಯ. ಆದರೂ ದಶಪಥ ರಸ್ತೆ ನಮ್ಮ ಕೊಡುಗೆ ಎನ್ನುವುದು ಒಳ್ಳೆಯದಲ್ಲ. ಎರಡು ಪಕ್ಷಗಳು ಈ ಯೋಜನೆಗೆ ಒಂದೇ ಒಂದು ರೂ. ಕೊಟ್ಟಿದ್ದರೆ ಅವರು ಹೇಳಿದ ಹಾಗೆ ಕೇಳುತ್ತೇನೆ ಎಂದಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಹಣ ಬಿಡುಗಡೆ ಮಾಡಿದ ಮೇಲೆ ಎರಡು ಪಕ್ಷದವರು ಅಭಿವೃದ್ಧಿ ಮಾಡಿದ್ದೇವೆ ಎನ್ನುತ್ತಿದ್ದಾರೆ. ಮೊದಲು ನಿಮ್ಮ ಕೂಸು ಯಾವುದು ಅದನ್ನು ಹುಡುಕಿಕೊಳ್ಳಲಿ. ಅದು ಬಿಟ್ಟು ಬೇರೆಯವರ ಕೂಸನ್ನು ನಮ್ಮದು ಎಂದು ಹೇಳುವುದು ಬೇಡ. ಇದು ನನ್ನ ಪ್ರಾರ್ಥನೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ದೇವರ ಹಣದಲ್ಲೂ ಕಮಿಷನ್ ಪಡೀತಿದ್ದಾರೆ: ಗೌರಿಶಂಕರ್ ವಿರುದ್ಧ ಸುರೇಶ್ ಗೌಡ ಆರೋಪ

  • ದಶಪಥ ರಸ್ತೆ ನಿರ್ಮಾಣ ಆಗಿರೋದು ಜನರ ದುಡ್ಡಿಂದ – ಕ್ರೆಡಿಟ್ ನನ್ನದು ಅನ್ನೋದು ಮೂರ್ಖತನ – ವಾಟಾಳ್

    ದಶಪಥ ರಸ್ತೆ ನಿರ್ಮಾಣ ಆಗಿರೋದು ಜನರ ದುಡ್ಡಿಂದ – ಕ್ರೆಡಿಟ್ ನನ್ನದು ಅನ್ನೋದು ಮೂರ್ಖತನ – ವಾಟಾಳ್

    ಚಾಮರಾಜನಗರ: ಬಿಜೆಪಿ (BJP), ಕಾಂಗ್ರೆಸ್ (Congress), ಜೆಡಿಎಸ್ (JDS) ಸರ್ಕಾರಗಳಾಗಲಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಾಗಲಿ ತಮ್ಮ ಮನೆಯಿಂದ ಹಣ ತಂದು ಬೆಂಗಳೂರು-ಮೈಸೂರು ದಶಪಥ ರಸ್ತೆ ಮಾಡಿಸಿಲ್ಲ. ಅದು ನಿರ್ಮಾಣ ಆಗಿರೋದು ಜನರ ದುಡ್ಡಿನಿಂದ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ವಾಗ್ದಾಳಿ ನಡೆಸಿದ್ದಾರೆ.

    ExpressWay

    ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಶಪಥ ರಸ್ತೆ (Bengaluru Mysuru Expressway) ನಿರ್ಮಾಣವಾಗಲು ನಾನೇ ಕಾರಣ ಎನ್ನುತ್ತಿರುವ ಸಂಸದ ಪ್ರತಾಪ್ ಸಿಂಹ ಅವರ ಮಾತು ಅರ್ಥವಿಲ್ಲದ್ದು. ದೇಶದಲ್ಲಿ ಕೇಂದ್ರ ಸರ್ಕಾರ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಅದೆಲ್ಲ ನರೇಂದ್ರ ಮೋದಿ ಅವರದ್ದು ಎನ್ನಲು ಸಾಧ್ಯವಿಲ್ಲ. ಹಾಗೆಯೇ ರಸ್ತೆ ನನ್ನಿಂದ ನಿರ್ಮಾಣವಾಗಿದೆ ಅನ್ನೋದು ಮೂರ್ಖತನದ ಪರಮಾವಧಿ ಎಂದು ಹೇಳಿದ್ದಾರೆ.

    Bengaluru Mysuru

    ದಶಪಥ ರಸ್ತೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಕೇಂದ್ರ, ರಾಜ್ಯದ ಮತ್ತು ಜನರ ತೆರಿಗೆ ಹಣದಿಂದ ನಿರ್ಮಾಣವಾದ ರಸ್ತೆ ಅದು. ರಾಜಕೀಯ ಪಕ್ಷಗಳು ಇದರ ಲಾಭ ತೆಗೆದುಕೊಳ್ಳಲು ಮುಂದಾಗಬಾರದು ಎಂದು ತಿಳಿವಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮೋದಿ ರೋಡ್ ಶೋಗೆ ಮೊದಲೇ ಸಿದ್ದರಾಮಯ್ಯ ಪರಿಶೀಲನಾ ಯಾತ್ರೆ

    MYS SIDDARAMAIAH 1

    ದಶಪಥ ರಸ್ತೆಗೆ ಯಾರೂ ಮಾಲೀಕರಲ್ಲ. ಸಮಗ್ರ ದೇಶ, ರಾಜ್ಯದ ಜನರು ನೀಡಿರುವ ತೆರಿಗೆಯಿಂದ ನಿರ್ಮಾಣವಾಗಿದೆ. ಆದ್ದರಿಂದ ಇದನ್ನು ಯಾರೂ ಸಹ ನಮ್ಮದು ಅನ್ನೋಕೆ ಆಗಲ್ಲ ಎಂದ ಅವರು, ಬೆಂಗಳೂರು – ಮೈಸೂರು ದಶಪಥ ರಸ್ತೆಗೆ `ಕನ್ನಡ ತಾಯಿ ಭುವನೇಶ್ವರಿ ರಸ್ತೆ’ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ದಶಪಥ ರಸ್ತೆ ಜೆಡಿಎಸ್ ಸರ್ಕಾರದ ಕೊಡುಗೆ – ಶಾಸಕ ಪುಟ್ಟರಾಜು 

  • ಊರಲ್ಲಿರೋ ಮಕ್ಕಳೆಲ್ಲಾ ನನ್ನವೇ ಅಂದ್ರೆ ಕಾಲಲ್ಲಿರೋದು ಕೈಗೆ ತಗೋತಾರೆ – ಸಿ.ಟಿ ರವಿ ಕಿಡಿ

    ಊರಲ್ಲಿರೋ ಮಕ್ಕಳೆಲ್ಲಾ ನನ್ನವೇ ಅಂದ್ರೆ ಕಾಲಲ್ಲಿರೋದು ಕೈಗೆ ತಗೋತಾರೆ – ಸಿ.ಟಿ ರವಿ ಕಿಡಿ

    ರಾಯಚೂರು: ಊರಲ್ಲಿರುವ ಮಕ್ಕಳೆಲ್ಲಾ ನನ್ನವೇ ಅಂದ್ರೆ, ಯಾರಾದ್ರೂ ಕಾಲಲ್ಲಿ ಇರೋದನ್ನ ಕೈಗೆ ತಗೋತಾರೆ. ಈಗ ಕಾಂಗ್ರೆಸ್‌ನದ್ದೂ (Congress) ಅದೇ ಪರಿಸ್ಥಿತಿ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CR Ravi) ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.

    ExpressWay

    ರಾಯಚೂರಿನಲ್ಲಿ (Raichur) ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ವೇಳೆ ಮಾತನಾಡಿದ ಅವರು, ಊರಲ್ಲಿರುವ ಮಕ್ಕಳೆಲ್ಲ ನನ್ನವೇ ಅಂದ್ರೆ ಯಾರಾದ್ರೂ ಕಾಲಲ್ಲಿ ಇರೋದನ್ನ ಕೈಗೆ ತಗೋತಾರೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ (Bengaluru Mysuru Expressway) ಕಾಂಗ್ರೆಸ್‌ನಿಂದ ಒಂದೇ ಒಂದು ರೂಪಾಯಿ ಕೊಡುಗೆಯಿಲ್ಲ, ಇದ್ದರೆ ತೋರಿಸಲಿ? ಕಾಂಗ್ರೆಸ್ ಸುಳ್ಳು ಹೇಳುತ್ತೋ ಸತ್ಯ ಹೇಳುತ್ತೋ ಅನ್ನೋದು ಜನರಿಗೆ ಗೊತ್ತಾಗುತ್ತೆ ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಸುಮಲತಾ ಶುಕ್ರವಾರ ಬಿಜೆಪಿ ಸೇರ್ತಾರೆ: ಶಾಸಕ ಪುಟ್ಟರಾಜು

    MYS SIDDARAMAIAH 1

    ಕಾಂಗ್ರೆಸ್ ತನ್ನ ಅವಧಿಯಲ್ಲಿ ಹಣ ಬಿಡುಗಡೆ ಮಾಡಿದ್ರೆ, ಟೆಂಡರ್ ಕರೆದಿದ್ರೆ, ಮಂಜೂರಾತಿ ಪತ್ರ ಇದ್ದರೆ ಬಿಡುಗಡೆ ಮಾಡಲಿ. ಕಾಂಗ್ರೆಸ್ ಜನ್ಮದಿಂದಲೂ ಮೂಗಿಗೆ ತುಪ್ಪ ಸವರೊ ಕೆಲಸ ಮಾಡಿಕೊಂಡು ಬಂದಿದೆ. ಹಿಂದೆ 10 ವರ್ಷ ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇತ್ತು. 5 ವರ್ಷ ಸಿದ್ದರಾಮಯ್ಯ (Siddaramaiah) ಸಿಎಂ ಆಗಿದ್ರು. ಆಗ ಯಾಕೆ ಅನುಮೋದನೆ ಕೊಡಲಿಲ್ಲ? ಅದಕ್ಕೆ ಮೋದಿಯೇ ಬರಬೇಕಾಯಿತು. ಡಬಲ್ ಇಂಜಿನ್ ಸರ್ಕಾರ ಮಾಡಿದ ಕೆಲಸಕ್ಕೆ ತಮ್ಮ ಸೀಲ್ ಹಾಕೋಕೆ ಹೋಗೋದು ನಾಚಿಕೆಯಿಲ್ಲದವರು ಮಾಡುವ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಶಪಥ ರಸ್ತೆ ಜೆಡಿಎಸ್ ಸರ್ಕಾರದ ಕೊಡುಗೆ – ಶಾಸಕ ಪುಟ್ಟರಾಜು

  • ದಶಪಥ ರಸ್ತೆಯಲ್ಲಿ ಅತಿಯಾದ ವೇಗ – 6 ತಿಂಗಳಿನಲ್ಲಿ 84 ಮಂದಿ ಬಲಿ

    ದಶಪಥ ರಸ್ತೆಯಲ್ಲಿ ಅತಿಯಾದ ವೇಗ – 6 ತಿಂಗಳಿನಲ್ಲಿ 84 ಮಂದಿ ಬಲಿ

    ಬೆಂಗಳೂರು: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ (Mysuru-Bengaluru Expressway) ಸಂಚಾರ ಆರಂಭವಾಗಿ ಆರು ತಿಂಗಳಾಗಿದೆ. ಈ ಅವಧಿಯಲ್ಲಿ ಅಪಘಾತಗಳ (Accident) ಸಂಖ್ಯೆ ಹೆಚ್ಚಿದ್ದು, ಕನಿಷ್ಠ 84 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

    ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಈ ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನ ಸಂಚಾರ ಆರಂಭ ಆಗಿತ್ತು. ಅಲ್ಲಿಂದ ಇಲ್ಲಿಯವರೆಗೆ 335ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ವರದಿ ಆಗಿವೆ.

    ಹೆದ್ದಾರಿ ಕಾಮಗಾರಿ ಅಂತಿಮ ಹಂತಕ್ಕೆ ಬಂದ ಡಿಸೆಂಬರ್, ಜನವರಿಯಲ್ಲೇ ಹೆಚ್ಚು ಅಪಘಾತಗಳು ಆಗಿವೆ. ಕುಂಬಳಗೋಡಿನಿಂದ ನಿಡಘಟ್ಟವರೆಗಿನ ರಾಮನಗರ ಜಿಲ್ಲಾ ವ್ಯಾಪ್ತಿಯ ಹೆದ್ದಾರಿಯಲ್ಲಿ 110ಕ್ಕೂ ಹೆಚ್ಚು ಆಕ್ಸಿಡೆಂಟ್ ಆಗಿದ್ದು, 41 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 225 ಅಪಘಾತ ಉಂಟಾಗಿದ್ದು, 43 ಸವಾರರು ಬಲಿ ಆಗಿದ್ದಾರೆ. ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ 30 ಅಪಘಾತ ಉಂಟಾಗಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ದಶಪಥ ಹೆದ್ದಾರಿಯ ಕ್ರೆಡಿಟ್ ರೇವಣ್ಣಗೆ ಸಲ್ಲಬೇಕು: ಸಿ.ಎಂ ಇಬ್ರಾಹಿಂ

     

    ಬಿಡದಿ-ರಾಮನಗರ-ಚನ್ನಪಟ್ಟಣ ಬೈಪಾಸ್‍ಗಳಲ್ಲಿ ವಾಹನಗಳ ವೇಗ ಹೆಚ್ಚಿರುತ್ತದೆ. ಸರ್ವೀಸ್ ರಸ್ತೆಗಳಲ್ಲೂ ವಾಹನ ಓಡಾಟ ಹೆಚ್ಚಿದೆ. ಅತಿಯಾದ ವೇಗ ಮತ್ತು ಬೇಗ ತಲುಪಬೇಕೆಂಬ ಧಾವಂತವೇ ಅಪಘಾತ  ಹೆಚ್ಚಾಗಲು ಕಾರಣವಾಗಿದೆ.

  • ದಶಪಥ ರಸ್ತೆ ಜೆಡಿಎಸ್ ಸರ್ಕಾರದ ಕೊಡುಗೆ – ಶಾಸಕ ಪುಟ್ಟರಾಜು

    ದಶಪಥ ರಸ್ತೆ ಜೆಡಿಎಸ್ ಸರ್ಕಾರದ ಕೊಡುಗೆ – ಶಾಸಕ ಪುಟ್ಟರಾಜು

    ಮೈಸೂರು: ಬೆಂಗಳೂರು-ಮೈಸೂರು ದಶಪಥ ರಸ್ತೆ (Bengaluru Mysuru Expressway) ನಿರ್ಮಾಣಕ್ಕೆ ಜೆಡಿಎಸ್  ಸರ್ಕಾರದ ಕೊಡುಗೆಯೂ ಇದೆ. ಮೈತ್ರಿ ಸರ್ಕಾರ ಇದ್ದಾಗ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಅನುಮೋದನೆ ಕೊಡದೇ ಇದ್ದಿದ್ದರೇ ರಸ್ತೆ ಹೇಗೆ ಆಗುತ್ತಿತ್ತು ಎಂದು ಜೆಡಿಎಸ್ ಶಾಸಕ ಸಿ.ಎಸ್ ಪುಟ್ಟರಾಜು (CS Puttaraju) ಪ್ರಶ್ನಿಸಿದ್ದಾರೆ.

    PRATAP SIMHA 2

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ದಶಪಥ ರಸ್ತೆ ಕ್ರೆಡಿಟ್ ವಾರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ದಶಪಥ ರಸ್ತೆಗೆ ಜೆಡಿಎಸ್‌ನದ್ದೂ (JDS) ಪಾಲಿದೆ ಎಂದು ಹೇಳಿದರು. ಇದನ್ನೂ ಓದಿ: ಸುಮಲತಾ ಶುಕ್ರವಾರ ಬಿಜೆಪಿ ಸೇರ್ತಾರೆ: ಶಾಸಕ ಪುಟ್ಟರಾಜು

    ಪ್ರತಾಪ್ ಸಿಂಹ (Pratap Simha) ಹೆಜ್ಜೆ-ಹೆಜ್ಜೆಗೂ ಚೀಫ್ ಎಂಜಿನಿಯರ್ ಥರ ಆಡ್ತಿದ್ದಾರೆ. ಕೇಂದ್ರ ಸರ್ಕಾರ ಪ್ರತಾಪ್ ಸಿಂಹಗೇ ಹೆದ್ದಾರಿ ಯೋಜನೆ ಗುತ್ತಿಗೆ ಕೊಟ್ಟಿದ್ಯಾ? ಇಡೀ ಯೋಜನೆ ನಾನೊಬ್ಬನೇ ಮಾಡಿಸಿದ್ದೇನೆ ಅಂತಾ ಓಡಾಡಿಕೊಂಡಿದ್ದಾರೆ. ನಾನು ಎಂಪಿ ಆಗಿದ್ದವನು. ದೆಹಲಿಯಲ್ಲಿ ಏನೆಲ್ಲಾ ಹೋರಾಟ ಮಾಡಿದ್ದೀನಿ ಅಂತಾ ಯಡಿಯೂರಪ್ಪ ಅವರ ಬಳಿ ಕೇಳಿ ತಿಳಿದುಕೊಳ್ಳಲಿ ಎಂದು ಹೇಳಿದರು. ಇದನ್ನೂ ಓದಿ: ಮೋದಿ ರೋಡ್ ಶೋಗೆ ಮೊದಲೇ ಸಿದ್ದರಾಮಯ್ಯ ಪರಿಶೀಲನಾ ಯಾತ್ರೆ

    ExpressWay

    ಮೈತ್ರಿ ಸರ್ಕಾರ ಇದ್ದಾಗ ಕುಮಾರಸ್ವಾಮಿ ಯೋಜನೆಯ ಅನುಮೋದನೆ ನೀಡದೇ ಇದ್ದಿದ್ದರೆ ಹೆದ್ದಾರಿ ಹೇಗೆ ಆಗುತ್ತಿತ್ತು. ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದಿದ್ರೂ ಈ ಯೋಜನೆಗೆ ಸಹಕಾರ ಕೊಡಲೇಬೇಕಿತ್ತು. ಹೆದ್ದಾರಿ ಬಂದಿರುವುದರಿಂದ ಚನ್ನಪಟ್ಟಣ, ರಾಮನಗರ, ಮಂಡ್ಯ ಶ್ರೀರಂಗಪಟ್ಟಣದ ನೂರಾರು ಕುಟುಂಬಗಳ ಬಾಯಿಗೆ ಮಣ್ಣು ಬಿದ್ದಿದೆ ಎಂದು ತಿಳಿಸಿದರು.