ಮೈಸೂರು: ಬೆಂಗಳೂರು-ಮೈಸೂರು ದಶಪಥ (Bengaluru Mysuru Expressway) ಹೆದ್ದಾರಿ ಶ್ರೇಯಸ್ಸು ಒಬ್ಬರಿಗೆ ಸಲ್ಲಬೇಕು, ಅದು ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ದಶಪಥ ಹೆದ್ದಾರಿಯ ಕ್ರೆಡಿಟ್ ಪಾಲಿಟಿಕ್ಸ್ ವಿಚಾರ ಜೋರಾಗುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಅವರು, ಒಬ್ಬರೇ ಒಬ್ಬರಿಗೆ ಇದರ ಶ್ರೇಯಸ್ಸು ಸಲ್ಲಬೇಕು, ಅದು ಮೋದೀಜಿಗೆ. ಅವರಿಲ್ಲದಿದ್ದರೆ ನಾನು ಎಂಪಿನೂ ಆಗುತ್ತಿರಲಿಲ್ಲ. ಗಡ್ಕರಿ (Nithin Gadkari) ಸರ್ ಮಂತ್ರಿನೂ ಆಗ್ತಿರಲಿಲ್ಲ ಎಂಡ್ ಎಂದು ಬರೆದುಕೊಂಡಿದ್ದಾರೆ.
ಒಬ್ಬರೇ ಒಬ್ಬರಿಗೆ ಇದರ ಶ್ರೇಯಸ್ಸು ಸಲ್ಲಬೇಕು, ಅದು ಮೋದೀಜಿಗೆ @narendramodi ji. ಅವರಿಲ್ಲದಿದ್ದರೆ ನಾನು ಎಂಪಿನೂ ಆಗ್ತಿರಲಿಲ್ಲ, ಗಡ್ಕರಿ ಸರ್ ಮಂತ್ರಿನೂ ಆಗ್ತಿರಲಿಲ್ಲ. ಎಂಡ್! pic.twitter.com/veNE9nbVBU
— Prathap Simha (@mepratap) March 9, 2023
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಕ್ರೆಡಿಟ್ ಯಾರಿಗೆ ಸಲ್ಲಬೇಕು ಎಂಬ ಪ್ರಶ್ನೆಗೆ ಜನ ನೀಡಿದ ಮೂರು ಉತ್ತರಗಳು ಇರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ಸಿಂಹಕ್ಕೆ ಸಲ್ಲಬೇಕು ಹೊರತು ನರಿಗಲ್ಲ. ಎಪ್ಪತ್ತು ವರ್ಷದ ಹಿಂದೆ ಕಲ್ಲು ನೆಟ್ಟ ಯಾವುದೇ ಯೋಜನೆಗಳು ನೆಟ್ಟ ಕಣ್ಣಿನ ಜೊತೆಯೇ ಮಲಗಿತ್ತು. ಮುಕ್ತಿಯನ್ನು ಕಾಣಿಸಿದ ವ್ಯಕ್ತಿಗೆ, ಸರ್ಕಾರಕ್ಕೆ ಕ್ರೆಡಿಟ್ ಸಲ್ಲಬೇಕು. ನರೇಂದ್ರ ಮೋದಿ, ಗಡ್ಕರಿ ಮತ್ತು ಪ್ರತಾಪ್ ಸಿಂಹ ಎಂದು ಜನರು ಉತ್ತರ ನೀಡಿದ್ದರು. ಇದನ್ನೂ ಓದಿ: Exclusive- ಸಾವರ್ಕರ್ ಸಿನಿಮಾದಲ್ಲಿ ಸುನೀಲ್ ರಾವ್ ಫಸ್ಟ್ ಲುಕ್
ಈ ಪೋಸ್ಟ್‌ನಲ್ಲಿ ಜನರೇ ಕೊಟ್ಟ ಉತ್ತರವನ್ನು ನೀವೂ ಒಪ್ಪುವುದಾದರೆ ಈ ಪೋಸ್ಟ್ ಇನ್ನು ಹೆಚ್ಚಿನ ಜನಕ್ಕೆ ತಲುಪಿಸಿ ಎಂದು ಬರೆಯಲಾಗಿದೆ. ಇದಕ್ಕೆ ಪ್ರತಾಪ್ ಸಿಂಹ ಈಗ ಹೆದ್ದಾರಿಯ ಕ್ರೆಡಿಟ್ ಪ್ರಧಾನಮಂತ್ರಿಗೆ ಸಲ್ಲಿಸುವ ಮೂಲಕ ಜಾಣ್ಮೆಯ ಉತ್ತರ ನೀಡಿದ್ದಾರೆ.
