Tag: ದವಸ ಧಾನ್ಯ

  • ಮನೆ ಬೀಗ ಮುರಿದು ಕಳ್ಳತನ – ಚಿನ್ನಾಭರಣದ ಜೊತೆ ದವಸ ಧಾನ್ಯ ದೋಚಿದ್ರು!

    ಮನೆ ಬೀಗ ಮುರಿದು ಕಳ್ಳತನ – ಚಿನ್ನಾಭರಣದ ಜೊತೆ ದವಸ ಧಾನ್ಯ ದೋಚಿದ್ರು!

    ರಾಯಚೂರು: ಮನೆಬೀಗ ಮುರಿದು ಚಿನ್ನಾಭರಣದ ಜೊತೆಗೆ ದವಸ ಧಾನ್ಯವನ್ನು ದೋಚಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ದಾಮ್ಲನಾಯ್ಕ ತಾಂಡದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಬೂದೆಮ್ಮ ಎಂಬವರಿಗೆ ಸೇರಿದ ಮನೆಯಲ್ಲಿ 30 ಗ್ರಾಂ ಚಿನ್ನ, 10 ಗ್ರಾಂ ಬೆಳ್ಳಿ, 50 ಸಾವಿರ ರೂಪಾಯಿ ನಗದು ಸೇರಿ ಸುಮಾರು 3 ಲಕ್ಷ ರೂಪಾಯಿ ಬೆಲೆಬಾಳುವ ವಸ್ತುಗಳ ಜೊತೆಗೆ ದವಸ ಧಾನ್ಯವನ್ನು ಖದೀಮರು ದೋಚಿದ್ದಾರೆ. ಇದನ್ನು ಓದಿ:ಮನೆಯಲ್ಲಿ ನೀರಿಲ್ಲ, ನೀರು ತರಲು ಬಿಡ್ತಿಲ್ಲ – ಯುವಕನ ಅಳಲು

    ರಾತ್ರಿ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ನಿನ್ನೆ ರಾತ್ರಿ ಘಟನೆ ಮನೆ ಯಜಮಾನಿಗೆ ಇಂದು ಮಧ್ಯಾಹ್ನ ಮನೆಗೆ ಮರಳಿ ಬಂದಾಗ ಕಳ್ಳತನ ನಡೆದಿರುವುದರ ಬಗ್ಗೆ ತಿಳಿದುಬಂದಿದೆ. ಇದನ್ನು ಓದಿ: ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ: ಎಸ್.ಟಿ.ಸೋಮಶೇಖರ್

    ಚಿನ್ನಾಭರಣ ಜೊತೆಗೆ 50 ಕೆ.ಜಿ ಸಜ್ಜೆ ಸೇರಿದಂತೆ ಮನೆಯಲ್ಲಿನ ದವಸ ಧಾನ್ಯಗಳನ್ನು ಸಹ ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಈ ಘಟನೆ ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಸರ್ಕಾರಿ ಶಾಲೆಯಲ್ಲಿ ಆಕಸ್ಮಿಕ ಬೆಂಕಿ- ಬಿಸಿಯೂಟದ ದವಸ ಧಾನ್ಯ ಭಸ್ಮ

    ಸರ್ಕಾರಿ ಶಾಲೆಯಲ್ಲಿ ಆಕಸ್ಮಿಕ ಬೆಂಕಿ- ಬಿಸಿಯೂಟದ ದವಸ ಧಾನ್ಯ ಭಸ್ಮ

    ರಾಯಚೂರು: ಸರ್ಕಾರಿ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪುಸ್ತಕ, ಬಿಸಿಯೂಟದ ದವಸ ಧಾನ್ಯಗಳು ಸುಟ್ಟು ಭಸ್ಮವಾಗಿರುವ ಘಟನೆ ದೇವದುರ್ಗದ ಜಾಲಹಳ್ಳಿಯ ಶಾಲೆಯಲ್ಲಿ ನಡೆದಿದೆ.

    ಜಾಲಹಳ್ಳಿಯ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಬಿಸಿಯೂಟದ ದವಸ ಧಾನ್ಯ, ಬೈಸಿಕಲ್, ಪುಸ್ತಕಗಳು ಸೇರಿ ವಿವಿಧ ವಸ್ತುಗಳು ಬೆಂಕಿಗಾಹುತಿಯಾಗಿವೆ. 35 ಚೀಲ ಅಕ್ಕಿ, 10 ಬೈಸಿಕಲ್ ಹಾಗೂ ಕೋಣೆಯಲ್ಲಿದ್ದ ನೋಟ್ ಪುಸ್ತಕ ಸುಟ್ಟುಹೋಗಿವೆ.

    ಅಗ್ನಿಶಾಮಕದಳ ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿನಂದಿಸಿದ್ದಾರೆ. ಬೆಳಗಿನ ಜಾವ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಶಾಲೆಯಿಂದ ಹೊಗೆ ಬರುತ್ತಿರುವುದನ್ನ ಗಮನಿಸಿ ಮುಖ್ಯೋಪಾಧ್ಯಾಯರು ಹಾಗೂ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಈ ಅವಘಡ ಕುರಿತಾಗಿ ಮುಖ್ಯೋಪಾಧ್ಯಾಯ ಶಾಕೀಲ್ ಸಾಬ್ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.