Tag: ದಲೈ ಲಾಮಾ

  • ಜನಸೇವೆಗಾಗಿ 30-40 ವರ್ಷಗಳ ಕಾಲ ಬದುಕುವ ಆಶಯವಿದೆ – ಉತ್ತರಾಧಿಕಾರಿ ವದಂತಿಗೆ ತೆರೆ ಎಳೆದ ದಲೈ ಲಾಮಾ

    ಜನಸೇವೆಗಾಗಿ 30-40 ವರ್ಷಗಳ ಕಾಲ ಬದುಕುವ ಆಶಯವಿದೆ – ಉತ್ತರಾಧಿಕಾರಿ ವದಂತಿಗೆ ತೆರೆ ಎಳೆದ ದಲೈ ಲಾಮಾ

    ನವದೆಹಲಿ: ಮುಂದಿನ 30-40 ವರ್ಷಗಳ ಕಾಲ ಜನರಿಗೆ ಸೇವೆ ಸಲ್ಲಿಸಲು ಬದುಕುವ ಆಶಯ ಹೊಂದಿದ್ದೇನೆ ಎಂದು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ (Tibetan spiritual leader) ದಲೈ ಲಾಮಾ (Dalai Lama) ಹೇಳಿದ್ದಾರೆ. ಅವರ 90ನೇ ಜನ್ಮದಿನವಾದ ಇಂದು ಉತ್ತರಾಧಿಕಾರಿಯ ಘೋಷಣೆಯ ಕುರಿತಾದ ವದಂತಿಗಳ ನಡುವೆ ಈ ಹೇಳಿಕೆ ನೀಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.

    ಮೆಕ್ಲಿಯೋಡ್ಗಂಜ್‌ನ ತ್ಸುಗ್ಲಾಗ್‌ಖಾಂಗ್‌ನ ಮುಖ್ಯ ದಲೈ ಲಾಮಾ ದೇವಸ್ಥಾನದಲ್ಲಿ ತಮ್ಮ 90ನೇ ಹುಟ್ಟುಹಬ್ಬಕ್ಕೂ ಮುನ್ನ ನಡೆದ ದೀರ್ಘಾಯುಷ್ಯದ ಪ್ರಾರ್ಥನಾ ಸಮಾರಂಭದಲ್ಲಿ ದಲೈ ಲಾಮಾ ಟೆನ್ಜಿನ್ ಗ್ಯಾಟ್ಸೊ ಅವರು ಮಾತನಾಡಿದರು. ಅವಲೋಕಿತೇಶ್ವರನ ಆಶೀರ್ವಾದ ತಮ್ಮೊಂದಿಗಿದೆ ಎಂಬ ಸ್ಪಷ್ಟ ಚಿಹ್ನೆಗಳು ಸಿಗುತ್ತಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮರಾಠಿ ಕಲಿಯಲ್ಲ ಎಂದಿದ್ದಕ್ಕೆ ಉದ್ಯಮಿ ಕಚೇರಿಯೇ ಧ್ವಂಸ

    ನಾನು ಇಲ್ಲಿಯವರೆಗೆ ನನ್ನ ಕೈಲಾದಷ್ಟು ಜನರ ಸೇವೆ ಮಾಡಲು ಪ್ರಯತ್ನಿಸಿದ್ದೇನೆ. ನಾನು ಇನ್ನೂ 30-40 ವರ್ಷಗಳ ಕಾಲ ಬದುಕುತ್ತೇನೆ ಎಂದು ಭಾವಿಸುತ್ತೇನೆ. ಇಲ್ಲಿಯವರೆಗೆ ನಿಮ್ಮ ಪ್ರಾರ್ಥನೆಗಳು ಫಲ ನೀಡಿವೆ. ನಾವು ನಮ್ಮ ದೇಶವನ್ನು ಕಳೆದುಕೊಂಡು ಭಾರತದಲ್ಲಿ ದೇಶಭ್ರಷ್ಟರಾಗಿ ವಾಸಿಸುತ್ತಿದ್ದರೂ, ಇಲ್ಲಿ ನಾನು ಬಹಳಷ್ಟು ಜನರಿಗೆ ಸೇವೆ ಮಾಡಲು ಸಾಧ್ಯವಾಗಿದೆ. ನಾನು ಇನ್ನಷ್ಟು ಜನರ ಸೇವೆ ಮಾಡಲು ಬಯಸುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಹೇಳಿಕೆ ವಿವಾದ | ಕೊಡವ ಸಮುದಾಯ ಎಲ್ಲರನ್ನೂ ಬೆಂಬಲಿಸಿದೆ: ನಟಿ ಪ್ರೇಮ

    ದಲೈ ಲಾಮಾ ಅವರ 90ನೇ ಹುಟ್ಟುಹಬ್ಬವನ್ನು ಮೆಕ್ಲಿಯೋಡ್ಗಂಜ್‌ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಆಚರಿಸಲಾಗುತ್ತಿದೆ. ಇಂದು ಕೇಂದ್ರ ಸಚಿವ ಕಿರಣ್ ರಿಜಿಜು, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು, ಹಾಲಿವುಡ್ ನಟ ರಿಚರ್ಡ್ ಗೆರೆ ಸೇರಿ ಇತರರು ಮುಖ್ಯ ಟಿಬೆಟಿಯನ್ ದೇವಾಲಯ ಮತ್ತು ದಲೈ ಲಾಮಾ ಅವರ ನಿವಾಸದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ʻಆಪರೇಷನ್ ಸಿಂಧೂರʼ ಯಶಸ್ಸಿನ ಬೆನ್ನಲ್ಲೇ 1 ಲಕ್ಷ ಕೋಟಿ ಮೊತ್ತದ ರಕ್ಷಣಾ ಯೋಜನೆಗಳಿಗೆ ಮೋದಿ ಸರ್ಕಾರ ಅಸ್ತು

    ದಲೈ ಲಾಮಾ ಅವರ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ಬೆಳಗ್ಗೆ ಬೌದ್ಧ ಮಠದಲ್ಲಿ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ 8:00ಗಂಟೆಗೆ ಪ್ರಾರಂಭವಾದ ಈ ಪ್ರಾರ್ಥನಾ ಸಭೆಯಲ್ಲಿ ದಲೈ ಲಾಮಾ ಸ್ವತಃ ಹಾಜರಿದ್ದರು. ಭಾನುವಾರ ದಲೈ ಲಾಮಾ ಅವರು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಲಿದ್ದಾರೆ. ಈ ವೇಳೆ ತಮ್ಮ ಅನುಯಾಯಿಗಳನ್ನು ಸಹ ಅವರು ಆಶೀರ್ವದಿಸಲಿದ್ದಾರೆ. ಇದನ್ನೂ ಓದಿ: 20 ವರ್ಷಗಳ ಬಳಿಕ ಮತ್ತೆ ಒಂದಾದ ಉದ್ಧವ್‌-ರಾಜ್‌ ಠಾಕ್ರೆ

    ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiran Rijiju), ದಲೈ ಲಾಮಾ ಅವರ 90ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಅವರು ದಲೈ ಲಾಮಾ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿ, ದಲೈ ಲಾಮಾ ಅವರ ಹುಟ್ಟುಹಬ್ಬದ ಆಚರಣೆಯನ್ನು ಭಾನುವಾರ ಆಚರಿಸಲಾಗುವುದು ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.

  • ಟಿಬೆಟನ್‌ ಧರ್ಮಗುರು ದಲೈ ಲಾಮಾಗೆ ಜೀವ ಬೆದರಿಕೆ – ಕೇಂದ್ರದಿಂದ ʻZʼ ಶ್ರೇಣಿಯ ಭದ್ರತೆ

    ಟಿಬೆಟನ್‌ ಧರ್ಮಗುರು ದಲೈ ಲಾಮಾಗೆ ಜೀವ ಬೆದರಿಕೆ – ಕೇಂದ್ರದಿಂದ ʻZʼ ಶ್ರೇಣಿಯ ಭದ್ರತೆ

    ನವದೆಹಲಿ: ಟಿಬೆಟನ್‌ ಧರ್ಮಗುರು ದಲೈ ಲಾಮಾ (Tibetan Spiritual leader Dalai Lama) ಅವರಿಗೆ ಜೀವ ಬೆದರಿಕೆ ಇರುವುದರಿಂದ ಕೇಂದ್ರ ಸರ್ಕಾರವು ‘ಜೆಡ್‌’ ಶ್ರೇಣಿಯ ಭದ್ರತೆಯನ್ನು (Z Category Protection) ಒದಗಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿದೆ.

    89 ವರ್ಷದ ಆಧಾತ್ಮಿಕ ನಾಯಕನಿಗೆ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವಾಲಯವು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ವಿಐಪಿ ಭದ್ರತಾ ವಿಭಾಗಕ್ಕೆ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: Manipur | ಬಿರೇನ್‌ ಸಿಂಗ್‌ ರಾಜೀನಾಮೆ ಬೆನ್ನಲ್ಲೇ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ

    ದಲೈ ಲಾಮಾ ಅವರು ಹಿಮಾಚಲ ಪ್ರದೇಶ ಪೊಲೀಸರ ಭದ್ರತೆ ಹೊಂದಿದ್ದರು. ಆದ್ರೆ ದೆಹಲಿ ಮತ್ತು ಇತರ ಯಾವುದೇ ಸ್ಥಳಗಳಿಗೆ ಭೇಟಿ ನೀಡುವಾಗ ಪೊಲೀಸ್‌ ಭದ್ರತೆಯನ್ನು ವಿಸ್ತರಿಸಲಾಗುತ್ತಿತ್ತು. ಆದ್ರೆ ಕೇಂದ್ರ ಗುಪ್ತಚರ ಸಂಸ್ಥೆಗಳ ಪರಿಶೀಲನೆಯ ನಂತರ ಸರ್ಕಾರ ಏಕರೂಪದ ಭದ್ರತೆಗೆ ಸೂಚನೆ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸುಮಾರು 30 ಸಿಆರ್‌ಪಿಎಫ್‌ ಕಮಾಂಡೋಗಳ ತಂಡವು ದಲೈ ಲಾಮಾಗೆ ರಕ್ಷಣೆ ನೀಡಲಿದೆ. ಅಲ್ಲದೇ ಮಣಿಪುರದ ಬಿಜೆಪಿ ನಾಯಕ ಸಂಬಿತ್ ಪಾತ್ರ ಅವರಿಗೂ ʻಜೆಡ್‌ʼ ಶ್ರೇಣಿಯ ಭದ್ರತೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕೈಕಾಲು ಕಟ್ಟಿ, ಕಂಪಾಸ್‌ನಿಂದ ಚುಚ್ಚಿ ಚಿತ್ರಹಿಂಸೆ – ನರ್ಸಿಂಗ್‌ ಕಾಲೇಜಿನಲ್ಲಿ ರ‍್ಯಾಗಿಂಗ್‌ ಕ್ರೂರತೆಯ ವಿಡಿಯೋ ವೈರಲ್‌

  • ಭಾರೀ ಟೀಕೆಯ ಬಳಿಕ ಬಾಲಕನ ಬಳಿ ಕ್ಷಮೆ ಕೇಳಿದ ದಲೈ ಲಾಮಾ

    ಭಾರೀ ಟೀಕೆಯ ಬಳಿಕ ಬಾಲಕನ ಬಳಿ ಕ್ಷಮೆ ಕೇಳಿದ ದಲೈ ಲಾಮಾ

    ನವದೆಹಲಿ: ತನ್ನ ನಾಲಿಗೆಯನ್ನು ನೆಕ್ಕುವಂತೆ ಅಪ್ರಾಪ್ತ ಬಾಲಕನಿಗೆ (Boy) ಸೂಚಿಸಿ ಭಾರೀ ಟೀಕೆಗೆ ಒಳಗಾದ ಟಿಬೆಟಿಯನ್ ಆಧ್ಯಾತ್ಮ ನಾಯಕ ದಲೈ ಲಾಮಾ (Dalai Lama) ಇದೀಗ ಬಾಲಕ ಹಾಗೂ ಆತನ ಕುಟುಂಬದ ಬಳಿ ಕ್ಷಮೆ (Apology) ಕೇಳಿದ್ದಾರೆ.

    ದಲೈ ಲಾಮಾ ಅಪ್ರಾಪ್ತ ಬಾಲಕನೊಬ್ಬನಿಗೆ ತಮ್ಮ ನಾಲಿಗೆಗೆ ಮುತ್ತಿಟ್ಟು, ನೆಕ್ಕುವಂತೆ ಸೂಚಿಸಿದ್ದರು. ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಭಾರೀ ಟೀಗೆಗೆ ಒಳಗಾಗಿದ್ದರು. ಇದೀಗ ಬೌದ್ಧ ಧರ್ಮ ಗುರು ತನ್ನ ವರ್ತನೆ ಹಾಗೂ ಮಾತುಗಳಿಂದ ಬಾಲಕ ಹಾಗೂ ಆತನ ಕುಟುಂಬಕ್ಕೆ ನೋವಾಗಿರಬಹುದು ಎಂದು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

    ವೀಡಿಯೋದಲ್ಲೇನಿದೆ?
    ಅಪ್ರಾಪ್ತ ಬಾಲಕನೊಬ್ಬ ದಲೈ ಲಾಮಾ ಅವರಿಗೆ ಗೌರವ ಸಲ್ಲಿಸಲು ತಲೆ ಬಾಗಿದ್ದಾನೆ. ಬಳಿಕ ದಲೈ ಲಾಮಾ ಬಾಲಕನಿಗೆ ತನ್ನ ಬಾಯಿಯನ್ನು ತೋರಿಸುತ್ತಾ ನಾಲಿಗೆಯನ್ನು ಹೊರ ಚಾಚಿದ್ದಾರೆ. ಈ ವೇಳೆ ಅವರು ನನ್ನ ನಾಲಿಗೆಯನ್ನು ನೆಕ್ಕುತ್ತೀಯಾ? ಎಂದು ಆತನ ಬಳಿ ಕೇಳಿರುವುದು ಕಂಡುಬಂದಿದೆ. ಬಳಿಕ ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿ ಭಾರೀ ಟೀಕೆಗೆ ದಲೈ ಲಾಮಾ ಗುರಿಯಾಗಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ಬಾಲಕನಿಗೆ ತನ್ನ ನಾಲಿಗೆ ನೆಕ್ಕುವಂತೆ ಸೂಚಿಸಿದ ದಲೈ ಲಾಮಾ – ಭಾರೀ ಟೀಕೆ

    ತನ್ನ ವಿವಾದಿತ ವರ್ತನೆ ಬಗ್ಗೆ ತಿಳಿಸಿದ ದಲೈ ಲಾಮಾ, ನಾನು ಭೇಟಿಯಾಗುವ ಜನ ಹಾಗೂ ಮಕ್ಕಳೊಂದಿಗೆ ಮುಗ್ಧ ರೀತಿಯಲ್ಲಿ ಮತ್ತು ತಮಾಷೆಗಾಗಿ ಈ ರೀತಿ ವರ್ತಿಸುತ್ತೇನೆ. ಆದರೆ ನನ್ನ ವರ್ತನೆಗೆ ಬಾಲಕ ಹಾಗೂ ಆತನ ಕುಟುಂಬಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದಂತೆ ನಾನು ರಷ್ಯಾದಿಂದ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲ ಖರೀದಿಗೆ ಮುಂದಾಗಿದ್ದೆ: ಇಮ್ರಾನ್ ಖಾನ್

  • ಅಪ್ರಾಪ್ತ ಬಾಲಕನಿಗೆ ತನ್ನ ನಾಲಿಗೆ ನೆಕ್ಕುವಂತೆ ಸೂಚಿಸಿದ ದಲೈ ಲಾಮಾ – ಭಾರೀ ಟೀಕೆ

    ಅಪ್ರಾಪ್ತ ಬಾಲಕನಿಗೆ ತನ್ನ ನಾಲಿಗೆ ನೆಕ್ಕುವಂತೆ ಸೂಚಿಸಿದ ದಲೈ ಲಾಮಾ – ಭಾರೀ ಟೀಕೆ

    ನವದೆಹಲಿ: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ (Dalai Lama) ಅವರಿಗೆ ಸಂಬಂಧಪಟ್ಟ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ದಲೈ ಲಾಮಾ ಅಪ್ರಾಪ್ತ ಬಾಲಕನೊಬ್ಬನಿಗೆ (Boy) ತಮ್ಮ ನಾಲಿಗೆಗೆ (Tongue) ಮುತ್ತಿಟ್ಟು ನೆಕ್ಕುವಂತೆ ಸೂಚಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

    ವೀಡಿಯೋದಲ್ಲಿ ಬಾಲಕನೊಬ್ಬ ದಲೈ ಲಾಮಾ ಅವರಿಗೆ ಗೌರವ ಸಲ್ಲಿಸಲು ತಲೆ ಬಾಗಿದ್ದಾನೆ. ಬಳಿಕ ದಲೈ ಲಾಮಾ ಬಾಲಕನಿಗೆ ತನ್ನ ಬಾಯಿಯನ್ನು ತೋರಿಸುತ್ತಾ ನಾಲಿಗೆಯನ್ನು ಹೊರ ಚಾಚಿದ್ದಾರೆ. ಈ ವೇಳೆ ಅವರು ನನ್ನ ನಾಲಿಗೆಯನ್ನು ನೆಕ್ಕುತ್ತೀಯಾ? ಎಂದು ಆತನ ಬಳಿ ಕೇಳಿರುವುದು ಕಂಡುಬಂದಿದೆ. ಇದನ್ನೂ ಓದಿ: ರಾಹುಲ್‌ ವಿರುದ್ಧ ಮಾನಹಾನಿ ಕೇಸ್‌ ದಾಖಲಿಸುತ್ತೇನೆ: ಅಸ್ಸಾಂ ಸಿಎಂ

     

    ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿದ್ದೇ ತಡ. ಎಲ್ಲೆಡೆ ಬೌದ್ಧ ಧರ್ಮ ಗುರುವಿನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅಪ್ರಾಪ್ತ ಬಾಲಕನೊಂದಿಗೆ ದಲೈ ಲಾಮಾ ವರ್ತಿಸಿರುವ ರೀತಿಯನ್ನು ನೆಟ್ಟಿಗರು ಅಸಹ್ಯಕರ ಎಂದು ಕರೆದಿದ್ದಾರೆ.

    ದಲೈ ಲಾಮಾ ಸಾರ್ವಜನಿಕವಾಗಿ ಟೀಕೆಗೊಳಗಾಗಿರುವುದು ಇದೇ ಮೊದಲೇನಲ್ಲ. ಕೆಲ ವರ್ಷಗಳ ಹಿಂದೆ ಅವರು ತಮ್ಮ ಉತ್ತರಾಧಿಕಾರಿ ಮಹಿಳೆಯಾಗಬೇಕಿದ್ದರೆ ಅವರು ಅತ್ಯಂತ ಆಕರ್ಷಕವಾಗಿರಬೇಕು ಎಂದು ಹೇಳಿ ವಿವಾದವನ್ನು ಎಳೆದುಕೊಂಡಿದ್ದರು. ಈ ಹೇಳಿಕೆಯಿಂದ ಅವರು ವಿಶ್ವದಾದ್ಯಂತ ಭಾರೀ ಟೀಕೆಗೆ ಒಳಗಾಗಿದ್ದರು. ಇದನ್ನೂ ಓದಿ: 20ಕ್ಕೂ ಹೆಚ್ಚು ಬಿಜೆಪಿ ಶಾಸಕರಿಗೆ ಕೊಕ್‌ – ಲಿಸ್ಟ್‌ನಲ್ಲಿ ಯಾರಿದ್ದಾರೆ?

  • 2 ವರ್ಷಗಳ ನಂತ್ರ ಸಾರ್ವಜನಿಕವಾಗಿ ಕಾಣಿಸಿಕೊಂಡ ಬೌದ್ಧ ಗುರು

    2 ವರ್ಷಗಳ ನಂತ್ರ ಸಾರ್ವಜನಿಕವಾಗಿ ಕಾಣಿಸಿಕೊಂಡ ಬೌದ್ಧ ಗುರು

    ಶಿಮ್ಲಾ: ಕೋವಿಡ್ ಸಾಂಕ್ರಾಮಿಕ ರೋಗ ಹರಡಿ ಮಾನವರು ಒಬ್ಬರನ್ನೊಬ್ಬರು ಸಂಪರ್ಕ ಮಾಡುವುದು ಕಡಿಮೆಯಾಗಿತ್ತು. ಎರಡಕ್ಕೂ ಹೆಚ್ಚು ವರ್ಷಗಳಕಾಲ ಬೌದ್ಧ ಧರ್ಮ ಗುರು ದಲೈ ಲಾಮಾ (Dalai Lama) ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಕೊರೊನಾ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

    ಬಳಿಕ ಪ್ರತಿಕ್ರಿಯಿಸಿರುವ ಅವರು, ನಾನೀಗ ಆರೋಗ್ಯವಂತನಾಗಿದ್ದು, ವೈದ್ಯರೊಂದಿಗೆ ಬಾಕ್ಸಿಂಗ್ ಕೂಡಾ ಆಡಬಹುದು. ನಾನು ನಿಯಮಿತವಾಗಿ ವೈದ್ಯಕೀಯ ತಪಾಸಣೆಗಾಗಿ ದೆಹಲಿಯ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಉತ್ತಮ ಆರೋಗ್ಯ ಹೊಂದಿರುವುದರಿಂದ ಈಗ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.

    ಟಿಬೆಟಿಯನ್ ದೇವಾಲಯದಲ್ಲಿ ಅನುಯಾಯಿಗಳಿಗೆ ‘ಜಟಕ’ ಕಥೆಗಳ ಕಿರು ಬೋಧನೆಯನ್ನು ನೀಡಿದರು. ಕೇಂದ್ರ ಟಿಬೆಟಿಯನ್ ಆಡಳಿತದ (ಸಿಟಿಎ) ಸದಸ್ಯರು ಹಾಗೂ ಸಾವಿರಾರು ಬಿಕ್ಕುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

    ಸನ್ಯಾಸಿಗಳು ಮತ್ತು ಕೇಂದ್ರದ ಸದಸ್ಯರು ಸೇರಿದಂತೆ ಸಾವಿರಾರು ಟಿಬೆಟಿಯನ್ನರು, ಟಿಬೆಟಿಯನ್ ಅಡ್ಮಿನಿಸ್ಟ್ರೇಷನ್ (CTA), ಕೂಟದ ಭಾಗವಾಗಿದ್ದಾರೆ. (CTA) ಚಾರ್ಟರ್ ಆಫ್ ದಿ ಟಿಬೆಟಿಯನ್ಸ್ ಇನ್-ಎಕ್ಸೈಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನೂ ಓದಿ: ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

    (CTA) ಸದಸ್ಯ ತೇನ್ಸಿಂಗ್ ಜಿಗ್ಮೆ ಮಾತನಾಡಿ, ಇದು ಅತ್ಯಂತ ಸುಂದರವಾದ ದಿನ. ನಾವು ಎರಡು ವರ್ಷಗಳ ನಂತರ ಅವರನ್ನು ನೋಡುತ್ತಿದ್ದೇವೆ. ಇದು ಇಂದಿನ ಅತ್ಯಂತ ಅದೃಷ್ಟದ ಸಂಗತಿಯಾಗಿದೆ. ಅವರು ಆರೋಗ್ಯವಾಗಿದ್ದಾರೆ ಆದ್ದರಿಂದ ನಾವು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ ಎಂದು ಹೇಳಿದರು. ನಾವು ನಿಜವಾಗಿಯೂ ಸಂತೋಷವನ್ನು ಅನುಭವಿಸುತ್ತಿದ್ದೇವೆ ಮತ್ತು ಅವರ ಪವಿತ್ರತೆಯನ್ನು ಉತ್ತಮವಾಗಿ ನೋಡಲು ಆಶೀರ್ವದಿಸುತ್ತೇವೆ ಎಂದು ಹೇಳಿದ್ದಾರೆ.

  • ಮಂಗಳೂರಿಗೆ ಆಗಮಿಸಿದ ದಲೈ ಲಾಮಾ

    ಮಂಗಳೂರಿಗೆ ಆಗಮಿಸಿದ ದಲೈ ಲಾಮಾ

    – ಝೀರೋ ಟ್ರಾಫಿಕ್ ಮೂಲಕ ಕರೆತಂದ ಅಧಿಕಾರಿಗಳು

    ಮಂಗಳೂರು: ಟಿಬೆಟಿಯನ್ ಧರ್ಮ ಗುರು ದಲೈ ಲಾಮಾ ಅವರು ಇಂದು ಮಂಗಳೂರಿಗೆ ಆಗಮಿಸಿದ್ದು, ಮೂರು ದಿನಗಳ ಕಾಲ ಮಂಗಳೂರಿನಲ್ಲಿಯೇ ತಂಗಲಿದ್ದಾರೆ.

    ದಲೈ ಲಾಮಾ ಆಗಮಿಸುವ ಸೂಚನೆ ತಿಳಿದಿದ್ದರಿಂದ ಮಂಗಳೂರು ವಿಮಾನ ನಿಲ್ದಾಣದ ಹೊರಗಡೆ ಟಿಬೆಟಿಯನ್ ಸಾಂಪ್ರದಾಯಿಕ ನೃತ್ಯದ ಮೂಲಕ ಅವರನ್ನು ಸ್ವಾಗತಿಸಲಾಯಿತು. ಅಲ್ಲದೆ ವಿಮಾನ ನಿಲ್ದಾಣದ ಸುತ್ತ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ಖಾಸಗಿ ಹೋಟೆಲ್‍ನಲ್ಲಿ ತಂಗಿರುವ ಅವರನ್ನು ಭಾರೀ ಭದ್ರತೆಯಲ್ಲಿ ಝೀರೋ ಟ್ರಾಫಿಕ್ ಮೂಲಕ ವಿಮಾನ ನಿಲ್ದಾಣದಿಂದ ನಗರಕ್ಕೆ ಕರೆ ತರಲಾಯಿತು.

    ಆಗಸ್ಟ್ 30 ರಂದು ನಗರದ ಫಾದರ್ ಮುಲ್ಲರ್ ಸಭಾಂಗಣದಲ್ಲಿ ನಡೆಯಲಿರುವ ನಯನ ಅಖಿಲ ಭಾರತ ಕ್ಯಾಥೊಲಿಕ್ ಶಾಲಾ ಒಕ್ಕೂಟದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲಿದ್ದು, 31 ರಂದು ಅವರು ಬೆಂಗಳೂರಿಗೆ ತೆರಳಲಿದ್ದಾರೆ.

    ಮಧ್ಯಾಹ್ನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಮಂಗಳೂರು ಉಪವಿಭಾಗಾಧಿಕಾರಿ ರವಿಚಂದ್ರ ನಾಯ್ಕ್, ಉಪ ಪೊಲೀಸ್ ಆಯುಕ್ತ ಅರುಣಾಂಶು ಗಿರಿ, ಲಕ್ಷ್ಮೀ ಗಣೇಶ್ ಅವರು ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದರು.