Tag: ದಲಿತ ಸಿಎಂ

  • 2028ಕ್ಕೆ ದಲಿತ ಸಿಎಂ ಬಗ್ಗೆ ಗಂಭೀರ ಚರ್ಚೆ ಮಾಡೋಣ: ಸತೀಶ್ ಜಾರಕಿಹೊಳಿ

    2028ಕ್ಕೆ ದಲಿತ ಸಿಎಂ ಬಗ್ಗೆ ಗಂಭೀರ ಚರ್ಚೆ ಮಾಡೋಣ: ಸತೀಶ್ ಜಾರಕಿಹೊಳಿ

    – ನಮ್ಮ ತೆರಿಗೆ ಹಣದಿಂದ ಯುಪಿ, ಬಿಹಾರದಲ್ಲಿ ರಸ್ತೆ ಆಗುತ್ತಿವೆ ಎಂದು ಆಕ್ಷೇಪ

    ಕಲಬುರಗಿ: ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ದಲಿತ ಸಿಎಂ (Dalit CM) ಕೂಗು ನಿಂತಿದೆ. ಹೊಸ ಎಲೆಕ್ಷನ್ ಆದ ಮೇಲೆ ನೋಡೋಣ ಅಂತ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ದಲಿತ ಸಿಎಂ ಕೂಗು ಕೇಳಿಬಂದಿಲ್ಲ. 2028ರ ಚುನಾವಣೆಯಲ್ಲಿ ಅದರ ಬಗ್ಗೆ ಗಂಭೀರ ಚರ್ಚೆ ಮಾಡೋಣ ಅಂತ ತಿಳಿಸಿದ್ದಾರೆ.

    ಇನ್ನೂ ನವೆಂಬರ್ ತಿಂಗಳಲ್ಲಿ ಸಿಎಂ ಬದಲಾವಣೆ ಅಂತ ಎಚ್. ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಹೇಳಿಕೆಗೂ ನಮ್ಮಗೂ ಸಂಬಂಧ ಇಲ್ಲ ಅವರು ನಮ್ಮ ಪಕ್ಷದವರಲ್ಲ. ನಮ್ಮ ಪಕ್ಷದವರು ಹೇಳಿದ್ರೆ ಅದಕ್ಕೆ ರಿಯಾಕ್ಟ್ ಮಾಡಬಹುದು, ಅವರ ಹೇಳಿಕೆಗೂ ನಮ್ಮಗೂ ಯಾವ ಸಂಬಂಧ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಶೃಂಗೇರಿಯಲ್ಲಿ ವರುಣಾರ್ಭಟ – ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ

    ಇದೇ ವೇಳೆ ಗ್ಯಾರಂಟಿ ಯೋಜನೆಗಳಿಂದ (Guarantee Scheme) ಅಭಿವೃದ್ಧಿ ಇಲ್ಲ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿ, ಕಳೆದ 2 ವರ್ಷಗಳಿಂದ ಅವರು ಇದನ್ನೇ ಹೇಳ್ತಿದ್ದಾರೆ. ಇನ್ನೂ 3 ವರ್ಷ ಬಿಜೆಪಿಯವರು ಗ್ಯಾರಂಟಿಯಿಂದ ಅಭಿವೃದ್ಧಿ ಇಲ್ಲ ಅಂತಾ ಹೇಳ್ತಾರೆ. ಗ್ಯಾರಂಟಿಯಿಂದ ಯಾವ ಅಭಿವೃದ್ಧಿ ಸಹ ನಿಂತಿಲ್ಲ. ಬೊಮ್ಮಾಯಿ ಅವಧಿಯಲ್ಲಿ ಸರ್ಕಾರಿ ಇಲಾಖೆಗಳಿಗೆ ಅನುದಾನ ಇರಲಿಲ್ಲ. ನಮ್ಮ ಸರ್ಕಾರದಲ್ಲಿ ಎಲ್ಲ ಇಲಾಖೆಗಳಿಗೆ ಅನುದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಪ್ರಧಾನಿ ಮೋದಿ ವಿದೇಶ ಪ್ರವಾಸ – ಕೆನಡಾ ಸೇರಿ ಮೂರು ರಾಷ್ಟ್ರಗಳಿಗೆ ಭೇಟಿ

    ಜಿಎಸ್‌ಟಿಯ ಅರ್ಧದಷ್ಟು ಹಣ ವಾಪಸ್‌ ಕೊಡಲಿ
    ಇನ್ನೂ ಕೇಂದ್ರಕ್ಕೆ ನಾವು 2 ಲಕ್ಷ ಕೋಟಿ ಜಿಎಸ್‌ಟಿ ಹಣ ಕೊಡುತ್ತೆವೆ, ಹೀಗಾಗಿ ಅದರ ಅರ್ಧ ಹಣವಾದ್ರು ಕೇಂದ್ರ ಸರ್ಕಾರ ನಮಗೆ ಕೊಡಬೇಕು. ಸದ್ಯ 36 ಸಾವಿರ ಕೋಟಿ ಜಿಎಸ್‌ಟಿ ಹಣ ಮಾತ್ರ ನಮ್ಮಗೆ ಕೊಟ್ಟಿದ್ದಾರೆ. ನಮ್ಮ ತೆರಿಗೆ ಹಣವನ್ನ ಯಮುನಾ, ಗಂಗಾ ಹೈವೆ ಎಕ್ಸಪ್ರೇಸ್‌ಗೆ ಬಳಕೆ ಮಾಡುತ್ತಿದ್ದಾರೆ. ನಮ್ಮ ತೆರಿಗೆ ಹಣದಿಂದ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ರಸ್ತೆ ಆಗುತ್ತಿವೆ ಅಂತ ಆಕ್ಷೇಪ ಹೊರಹಾಕಿದ್ದಾರೆ. ಇದನ್ನೂ ಓದಿ: ಉರ್ದು, ಪರ್ಷಿಯನ್‌ ಬದಲಿಗೆ ಹಿಂದಿಯಲ್ಲಿ ಮಾತನಾಡಿ: ಪೊಲೀಸರಿಗೆ ರಾಜಸ್ಥಾನ ಸಚಿವ ಸೂಚನೆ

  • 2013 ರಿಂದ ದಲಿತ ಸಿಎಂ ಓಡ್ತಿದೆ, ಪಿಕ್ಚರ್‌ ರಿಲೀಸ್ ಆಗ್ತಿಲ್ಲ: ಸತೀಶ್ ಜಾರಕಿಹೊಳಿ

    2013 ರಿಂದ ದಲಿತ ಸಿಎಂ ಓಡ್ತಿದೆ, ಪಿಕ್ಚರ್‌ ರಿಲೀಸ್ ಆಗ್ತಿಲ್ಲ: ಸತೀಶ್ ಜಾರಕಿಹೊಳಿ

    ಬೆಂಗಳೂರು: ದಲಿತ ಸಿಎಂ (Dalit CM) ವಿಚಾರ 2013 ರಿಂದಲೂ ಓಡುತ್ತಿದೆ‌ ಆದರೆ ಪಿಕ್ಚರ್‌ ಮಾತ್ರ ರಿಲೀಸ್ ಆಗುತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ದಲಿತ ಸಿಎಂ ವಿಚಾರ 2013 ರಿಂದಲೂ ಓಡುತ್ತಲೇ ಇದೆ. 5 ವರ್ಷ ಅದೆ ಓಡಿತು ಆದರೆ ಪಿಕ್ಚರ್‌ ರಿಲೀಸ್ ಆಗಲಿಲ್ಲ. ಹಿಂದೆ ಮಲ್ಲಿಕಾರ್ಜುನ ಖರ್ಗೆಯವರು (Mallikarjun Kharge) ಇದ್ದಾಗಲೂ ಅವಕಾಶ ಆಗಲಿಲ್ಲ. ಪರಮೇಶ್ವರ್ (Parameshwar) ಅವರು 8 ವರ್ಷ ಅಧ್ಯಕ್ಷರಾಗಿದ್ದರು. ಅವರಿಗೆ ಡಿಸಿಎಂ ಆಗಲು ಆಗಲಿಲ್ಲ ಎಂದರು.

     

    ಎರಡೂವರೆ ವರ್ಷದ ನಂತರ ಏನಾಗುತ್ತೆ ಅಂತ ಸಿಎಂ, ಡಿಸಿಎಂ, ಪಕ್ಷದ ಅಧ್ಯಕ್ಷರು, ಹೈಕಮಾಂಡ್ ನಾಯಕರಿದ್ದಾರೆ. ಅದನ್ನು ಅವರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

    ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ನಾನು ಸಿಎಂ‌ ಆಗಬೇಕು ಅಂತ ಹೇಳಿರುವುದರಲ್ಲಿ ಹೊಸದೇನು ಇಲ್ಲ. ಅದು ಹಳೇ ಸ್ಕೀಂ. ಅವರು ಮೊದಲಿನಿಂದಲೂ ಹೇಳುತ್ತಿದ್ದು, ಈಗಲು ಹೇಳಿದ್ದಾರೆ. ಸಹಜವಾಗಿಯೇ ಸಮುದಾಯದ ಪರವಾಗಿ ಮಾತನಾಡುತ್ತಾರೆ. ಅದರಂತೆ ಸ್ವಾಮೀಜಿ ಅವರು ಸಿಎಂ ಆಗಬೇಕು ಎಂದಿದ್ದಾರೆ. ನಾನು ಯಾವುದೇ ಪವರ್ ಸೆಂಟರ್ ಅಲ್ಲ. ನಮ್ಮದು ಒಂದೇ ಪವರ್ ಸೆಂಟರ್ ಅದು ಹೈಕಮಾಂಡ್ ಎಂದರು.  ಇದನ್ನೂ ಓದಿ: 508 ಕೋಟಿ ನೀಡಿದ್ದೇನೆ, ಯುಎಇಗೆ ಪರಾರಿಯಾಗುವಂತೆ ಸಲಹೆ ನೀಡಿದ್ದೇ ಸಿಎಂ ಬಘೇಲ್‌: ಬೆಟ್ಟಿಂಗ್ ಆ್ಯಪ್‌ ಮಾಲೀಕ

     

    ಜಾತಿ ಜನಗಣತಿ (Caste Survey) ವರದಿಯನ್ನು ಸರ್ಕಾರ ಸ್ವೀಕರಿಸಬೇಕು. ಏನಾದರು ತಪ್ಪಿದ್ದರೆ ಅದನ್ನು ಆನಂತರ ಸರಿಪಡಿಸಬಹುದು. ಜಾತಿಗಣತಿ ವರದಿ ಬಂದ ನಂತರ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಆಗಬೇಕು. ಎರಡು ಸದನದಲ್ಲಿ ಪರ ವಿರೋಧ ಚರ್ಚೆಯಾಗಬೇಕು. ವರದಿಯ ಬಗ್ಗೆ ಸಾರ್ವಜನಿಕ ಚರ್ಚೆಯಾಗಲಿ. ಒಳ ಪಂಗಡಗಳನ್ನು ಬಿಟ್ಟಿರಬಹುದು ಎಂಬ ಆತಂಕ ಕೆಲವರಿಗೆ ‌ಇರಬಹುದು. ಆದರೆ ಏನೇ ತಪ್ಪಾಗಿದ್ದರೂ ಅದನ್ನು ಸರಿಪಡಿಸಲು ಅವಕಾಶ ಇದೆ ಎಂದರು.

  • ನಾನು ಯಾಕೆ ಸಿಎಂ ಆಗಬಾರದು: ಪರಮೇಶ್ವರ್‌ ಪ್ರಶ್ನೆ

    ನಾನು ಯಾಕೆ ಸಿಎಂ ಆಗಬಾರದು: ಪರಮೇಶ್ವರ್‌ ಪ್ರಶ್ನೆ

    ಬೆಂಗಳೂರು: ನಾನು ಯಾಕೆ ಸಿಎಂ (Chief Minister) ಆಗಬಾರದು? ಮುನಿಯಪ್ಪ ಯಾಕಾಗಬಾರದು? ಮಹಾದೇವಪ್ಪ ಯಾಕೆ ಆಗಬಾರದು ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಪ್ರಶ್ನಿಸಿದ್ದಾರೆ.

    ದಲಿತಪರ ಸಂಘಟನೆಗಳು ವಸಂತ ನಗರದ ಅಂಬೇಡ್ಕರ್‌ ಭವನದಲ್ಲಿ ಸರ್ಕಾರದ ದಲಿತ ಸಮುದಾಯದ ಸಚಿವರುಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾವೇಶದಲ್ಲಿ ಪರಮೇಶ್ವರ್‌ ಮಾತನಾಡಿದರು.   ಇದನ್ನೂ ಓದಿ: 1 ಷೇರಿನ ಬೆಲೆ 1 ಲಕ್ಷ – ಭಾರತದಲ್ಲಿ ದಾಖಲೆ ಬರೆದ ಎಂಆರ್‌ಎಫ್‌: ಯಾವ ವರ್ಷ ಎಷ್ಟಿತ್ತು?

    ನಮ್ಮಲ್ಲಿ ಕೀಳರಿಮೆ ಇರಬಾರದು. ಅದಕ್ಕೆ ನಾನು ಯಾವಾಗಲೂ ನಾನು ಸಿಎಂ ಆಗಬೇಕು ಅಂತ ಹೇಳುತ್ತೇನೆ. ನಮಗೆ ಸಿಎಂ ಆಗುವ ಅವಕಾಶಗಳನ್ನು ತಪ್ಪಿಸಿದ್ದಾರೆ. ನಮ್ಮಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ನಾವು ಉಳಿದುಕೊಳ್ಳುತ್ತೇವೆ. ಅದು ಬಿಟ್ಟು ಎಡ, ಬಲ ಎಂದು ಹೇಳುತ್ತಿದ್ದರೆ ನಾವು ಏನು ಸಾಧನೆ ಮಾಡುವುದಿಲ್ಲ. ನಮ್ಮಲ್ಲಿ ಒಗ್ಗಟ್ಟಿನ ಮಂತ್ರ ಇರಬೇಕು ಎಂದರು.

    ಕಾಂಗ್ರೆಸ್‌ಗೆ (Congress) 2018 ರಲ್ಲಿ ಸೋಲಾಯಿತು. ಯಾವ ಸಮುದಾಯವನ್ನು ಕಡೆಗಣಿಸಿದರೋ ಅದರಿಂದ ಪಾಠ ಕಲಿಯಬೇಕಾಯ್ತು ಎಂದು ಪರೋಕ್ಷವಾಗಿ ದಲಿತ ಸಿಎಂ ಮಾಡದ ಕಾರಣ ಕಾಂಗ್ರೆಸ್‌ಗೆ ಸೋಲಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ನಮ್ಮ ಪಕ್ಷದ ಆಂತರಿಕ ವಲಯದಲ್ಲಿ ಗೆಲುವಿನ ಪರಾಮರ್ಶೆ ಮಾಡುವಾಗ ಈ ಬಾರಿ ದಲಿತರು (Dalits) ನಮ್ಮ ಕೈ ಹಿಡಿದಿದ್ದಾರೆ ಎಂಬ ಮಾತು ಬಂದಿದೆ. ಮುಸ್ಲಿಮರು 100% ನಮ್ಮ ಕೈ ಹಿಡಿದಿದ್ದಾರೆ ಅಂತ ಮಾತನಾಡುತ್ತಾರೆ. ನಮ್ಮ ಬಗ್ಗೆ ಈಗ ಎಲ್ಲರಿಗೆ ಗೊತ್ತಾಗಿದೆ. 51 ಮೀಸಲು ಕ್ಷೇತ್ರಗಳ ಪೈಕಿ 32 ರಲ್ಲಿ ಗೆದ್ದಿದ್ದೇವೆ. ನಮ್ಮ ಪಕ್ಷದ ಪ್ರಣಾಳಿಕೆ ಸಮಿತಿಗೆ ನಾನೇ ಅಧ್ಯಕ್ಷನಾಗಿದ್ದೆ.  ಪ್ರಣಾಳಿಕೆಯಲ್ಲಿ ಹೇಳಿದಂತೆ ಮೊದಲ ಅಧಿವೇಶನದಲ್ಲಿ ಸದಾಶಿವ ಆಯೋಗ ವರದಿ ಮಂಡಿಸುತ್ತೇವೆ ಎಂದರು.

  • ದಲಿತ ಸಿಎಂ ಮಾಡಲು ನಾವು ಸಿದ್ಧ – ಹೆಚ್‌ಡಿಕೆ

    ದಲಿತ ಸಿಎಂ ಮಾಡಲು ನಾವು ಸಿದ್ಧ – ಹೆಚ್‌ಡಿಕೆ

    ತುಮಕೂರು: ಮುಂಬರುವ ಚುನಾವಣೆಯಲ್ಲಿ (Elections) 123 ಸ್ಥಾನಗಳಲ್ಲಿ ಜೆಡಿಎಸ್ ಗೆದ್ದರೆ ದಲಿತ ಸಿಎಂ (Dalit CM) ಮಾಡಲು ನಾವು ತಯಾರಿದ್ದೇವೆ. ಅದಕ್ಕೆ ನಮ್ಮ ಪಕ್ಷದಲ್ಲಿ ಮುಕ್ತ ಅವಕಾಶ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅಭಿಪ್ರಾಯಪಟ್ಟರು.

    ಗುರುವಾರ ‘ಪಂಚರತ್ನ ರಥಯಾತ್ರೆ’ ತುಮಕೂರು ನಗರಕ್ಕೆ ಪ್ರವೇಶಿಸಿದೆ. ಈ ಸಂದರ್ಭದಲ್ಲಿ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹೆಚ್‌ಡಿಕೆ ಅವರು, ದಲಿತರ ಬಗ್ಗೆ ಅಭಿಮಾನ ಇಟ್ಕೊಂಡಿರೋ ಸಿದ್ದರಾಮಯ್ಯ ಏನ್ ಮಾತಾಡಿದ್ದಾರೆ ದಾಖಲೆ ಕೊಡ್ಲ? ಅಸ್ಪಶ್ಯರ ಬಗ್ಗೆ ಎಷ್ಟು ಕೀಳಾಗಿ ಮಾತಾಡಿದ್ದಾರೆ. ಮುಖ್ಯಮಂತ್ರಿ ಇದ್ದಾಗ ದಲಿತ ಕುಟುಂಬ ಮಹಿಳೆಯನ್ನ ಚಿಕಿತ್ಸೆ ಕೊಡಿಸಿ ನಮ್ಮ ಮನೆಯಲ್ಲೇ ಆರೈಕೆ ಮಾಡಿದ್ದೆವು. ಯಾವ್ ಮುಖ್ಯಮಂತ್ರಿ ಮಾಡಿದ್ದಾರೆ ಹೇಳ್ಲಿ ಎಂದು ಸಿದ್ದು ವಿರುದ್ಧ ಗುಡುಗಿದರು. ಇದನ್ನೂ ಓದಿ: ಮುಂಬೈ ಹೋಟೆಲ್‌ವೊಂದರಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಸಿದ್ಧಾರ್ಥ್ -ಅದಿತಿ

    ಜೆಡಿಎಸ್ (JDS) ಅಧಿಕಾರಕ್ಕೆ ಬಂದ್ರೆ ದಲಿತ ಸಿಎಂ ವಿಚಾರವಾಗಿ ಮಾತನಾಡಿ, 123 ಬಂದ್ರೆ ದಲಿತ ಮುಖ್ಯಮಂತ್ರಿ ಯಾಕೆ ಆಗ್ಬಾರದು? ದಲಿತರನ್ನ ಮುಖ್ಯಮಂತ್ರಿ ಮಾಡಲು ನಾವು ತಯಾರಿದ್ದೇವೆ. ದೇವೆಗೌಡರು (HD Devegowda) ಮೀಸಲಾತಿ ಇಲ್ಲದೇ ಇದ್ದಾಗ ದಲಿತರನ್ನ ಮುಖಂಡರನ್ನಾಗಿ ಮಾಡಿದ್ದನ್ನ ನಾವು ಮರೆಯೋ ಹಾಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: IAS ಆಕಾಂಕ್ಷಿ ಅಂತಾ ಬಿಲ್ಡಪ್‌; ಬೆತ್ತಲೆ ವೀಡಿಯೋ ಇಟ್ಕೊಂಡು ಯುವಕನಿಗೆ 40 ಲಕ್ಷ ಪಂಗನಾಮ – ಖತರ್ನಾಕ್‌ ಲೇಡಿ ಅರೆಸ್ಟ್‌

    ರಥಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ, ಈ ಕಾರ್ಯಕ್ರಮದ ಮೂಲಕ ನಾಡಿನ ಪ್ರತಿ ಕುಟುಂಬಕ್ಕೆ ತಲುಪಬೇಕು. ಪರಿವರ್ತನೆ ಹಾದಿಗೆ ಈ ಕಾರ್ಯಕ್ರಮ ಉಪಯೋಗ ಆಗಲಿದೆ. ಈ ರೀತಿಯ ಜನತೆಯ ಅಲೆ ಬರುತ್ತಿರುವುದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಹಣಕೊಟ್ಟ ಕರೆದುಕೊಂಡು ಬಂದಿಲ್ಲ. ಮಹಿಳೆಯರು ರಾತ್ರಿ 11, 12 ಗಂಟೆಯಾದ್ರೂ ಸಭೆಗೆ ಬರುತ್ತಿದ್ದಾರೆ. ಇದನ್ನು ನೋಡಿದರೆ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸುತ್ತಿದ್ದಾರೆ. ಒಂದು ಬಾರಿ ಈ ಪಕ್ಷಕ್ಕೆ ಸಂಪೂರ್ಣ ಆಶೀರ್ವಾದ ಮಾಡಿ. ಇದನ್ನೇ ಜನತೆ ಮುಂದೆ ಇಟ್ಟಿದ್ದೇನೆ. ಮುಂದಿನ ಮಾರ್ಚ್ವರೆಗೂ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ ಎಂದು ಹೇಳಿದರು.

    ಜೆಡಿಎಸ್ ಬಿ ಟೀಂ ಎಂದು ಕಾಂಗ್ರೆಸ್ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ವಿರುದ್ಧ ಮಾತನಾಡಲು ಕಾಂಗ್ರೆಸ್‌ಗೆ ಬೇರೆ ಏನಿಲ್ಲ. ಹೀಗೆ ಹೇಳಿ ಹೇಳಿ ಅವರು 70 ಸ್ಥಾನಕ್ಕೆ ಬಂದಿದ್ದಾರೆ ಎಂದು ಕುಟುಕಿದರು.

    Live Tv
    [brid partner=56869869 player=32851 video=960834 autoplay=true]

  • ದಲಿತರು ಯಾಕೆ ಸಿಎಂ ಆಗಬಾರದು – ಡಿ.ಕೆ.ಶಿವಕುಮಾರ್ ಪ್ರಶ್ನೆ

    ದಲಿತರು ಯಾಕೆ ಸಿಎಂ ಆಗಬಾರದು – ಡಿ.ಕೆ.ಶಿವಕುಮಾರ್ ಪ್ರಶ್ನೆ

    ಬೆಂಗಳೂರು: ರಾಜ್ಯದಲ್ಲಿ ದಲಿತ ಸಿಎಂ ಕೂಗು ಕೇಳಿ ಬರೋದು ತಪ್ಪೇನಿಲ್ಲ. ದಲಿತರು ಯಾಕೆ ಸಿಎಂ ಆಗಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

    ತುಮಕೂರಿನ ಕಾಂಗ್ರೆಸ್ ಸಂಕಲ್ಪ ಶಿಬಿರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಪ್ರತಿ ಜಿಲ್ಲೆಯಲ್ಲಿ ಆಯಾ ಜಿಲ್ಲೆಯ ರೈತರ, ಸಾಮಾಜಿಕ, ಮಹಿಳೆಯ ಸಮಸ್ಯೆ ಕುರಿತ ಚಿಂತನ- ಮಂಥನ ನಡೆಯುತ್ತಿದೆ. ರಾಷ್ಟ್ರಮಟ್ಟದಲ್ಲಿ ಸಭೆ ಆಗಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ಸಭೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ಟಾರ್ ನಟರ ಸಿನಿಮಾ ನಿರ್ಮಾಣ ಮಾಡಿದ್ದ ಖ್ಯಾತ ನಿರ್ಮಾಪಕನ ಕಾರು ಅಪಘಾತ

    ಇದೇ ವೇಳೆ ದಲಿತ ಸಿಎಂ ಕೂಗು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ದಲಿತರು ಯಾಕೆ ಸಿಎಂ ಆಗಬಾರದು? ಆದರೆ ಇಲ್ಲಿ ಸಭೆಯಲ್ಲಿ ದಲಿತ ಸಿಎಂ ಕುರಿತ ಚರ್ಚೆ ಆಗೋದಿಲ್ಲ. ಪಕ್ಷಕ್ಕೆ ಏನೆಲ್ಲ ಅನೂಕೂಲ ಆಗಬೇಕು ಅದು ಚರ್ಚೆ ಆಗುತ್ತದೆ ಎಂದು ಹೇಳಿದ್ದಾರೆ.

    ಇ.ಡಿ. ಚಾರ್ಜ್‌ಶೀಟ್‌ ಸಲ್ಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಚಾರ್ಜ್‌ಶೀಟ್‌ ನಾನು ನೋಡಿಲ್ಲ. ನಾನು ಜೈಲಲ್ಲಿ ಇದ್ದಾಗಲೇ ಚಾರ್ಜ್‌ಶೀಟ್‌ ಹಾಕಬಹುದಿತ್ತು. ಆದರೆ ಅವರು ಹಾಕಿಲ್ಲ. ಈಗ ರಾಜಕಾರಣ ಮಾಡುತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    Live Tv

  • ಸುದೀಪ್ – ದೇವಗನ್ ವಿಚಾರ ಕಟ್ಟಿಕೊಂಡು ಏನ್ ಮಾಡ್ತೀರಾ: ರಮೇಶ್‌ಕುಮಾರ್ ವ್ಯಂಗ್ಯ

    ಸುದೀಪ್ – ದೇವಗನ್ ವಿಚಾರ ಕಟ್ಟಿಕೊಂಡು ಏನ್ ಮಾಡ್ತೀರಾ: ರಮೇಶ್‌ಕುಮಾರ್ ವ್ಯಂಗ್ಯ

    ವಿಜಯಪುರ: ಹಿಂದಿ ಭಾಷೆ ವಿಚಾರವಾಗಿ ನಟ ಸುದೀಪ್ -ಅಜಯ್ ದೇವಗನ್ ಮಧ್ಯೆ ನಡೆಯುತ್ತಿರುವ ವಿವಾದದಿಂದ ಜನರಿಗೆ ಪ್ರಯೋಜನವಿಲ್ಲ. ಇವೆಲ್ಲ ಕಟ್ಟಿಕೊಂಡು ಏನ್‌ ಮಾಡ್ತೀರಾ? ಎಂದು ವ್ಯಂಗ್ಯವಾಡಿದ್ದಾರೆ.

    RAMESHKUMAR

    ವಿಜಯಪುರದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, 108 ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಅವುಗಳಿಗೆ ನಾವು ಪರಿಹಾರ ಹುಡುಕೋಣ. ಇವೆಲ್ಲ ಕಟ್ಟಿಕೊಂಡು ಏನಾಗಬೇಕು. ಇದು ಜನರ ಗಮನ ಬೇರೆಡೆ ಸೆಳೆಯೋದಕ್ಕೆ ಸೃಷ್ಟಿ ಮಾಡುವಂತಹ ವಿವಾದ ಎಂದು ಟೀಕಿಸಿದ್ದಾರೆ.  ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ: ಅಜಯ್ ದೇವಗನ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ

    RAMESH KUMAR 02

    ಇದೇ ವೇಳೆ ದಲಿತ ಸಿಎಂ ಬಗ್ಗೆ ರಮೇಶ್ ಜಿಗಜಿಣಗಿ ಕೂಗು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಾಕಪ್ಪಾ ಅವೆಲ್ಲಾ ಚರ್ಚೆ? ಯಾವ ಪಾರ್ಟಿ ಆಯ್ಕೆ ಆಗುತ್ತೋ- ಆ ಪಾರ್ಟಿಯವರು ಏನು ತೀರ್ಮಾನ ಮಾಡ್ತಾರೋ? ಸುಮ್ಮನೆ ಅವೆಲ್ಲಾ ಮಾತನಾಡುವುದರಿಂದ ಏನು ಶಕ್ತಿ ಬರುತ್ತೆ? ನಾನು ಸಿಎಂ ಆಕಾಂಕ್ಷಿ ಅಲ್ಲದಿರುವುದರಿಂದ ದಲಿತ ಸಿಎಂ ಮಾಡಿದರೆ, ಖುಷಿ ಪಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ : ಸುದೀಪ್ ಸರಣಿ ಟ್ವಿಟ್ ಗೆ ತಪ್ಪಾಗಿ ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್

  • ನಾನು ಮಣ್ಣಿಗೆ ಹೋಗುವುದರೊಳಗೆ ಜೆಡಿಎಸ್‌ನಿಂದ ದಲಿತ ಸಿಎಂ ಮಾಡುವೆ: ಹೆಚ್‌ಡಿಕೆ ಘೋಷಣೆ

    ನಾನು ಮಣ್ಣಿಗೆ ಹೋಗುವುದರೊಳಗೆ ಜೆಡಿಎಸ್‌ನಿಂದ ದಲಿತ ಸಿಎಂ ಮಾಡುವೆ: ಹೆಚ್‌ಡಿಕೆ ಘೋಷಣೆ

    ಮಂಡ್ಯ: ಜೆಡಿಎಸ್‌ ಪಕ್ಷದಿಂದ ನನ್ನ ಜೀವಿತಾವಧಿಯೊಳಗೆ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದರು.

    ಮಳವಳ್ಳಿಯಲ್ಲಿ ಇಂದು ಡಾ.ಬಿ.ಆರ್.‌ಅಂಬೇಡ್ಕರ್‌ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೆ ನಮ್ಮ ಪಕ್ಷ ಹಾಸನ ಜಿಲ್ಲಾ ಪಂಚಾಯಿತಿಗೆ ದಲಿತರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿತ್ತು. ಆಮೇಲೆ ಅನೇಕ ದಲಿತ ನಾಯಕರು ಪಕ್ಷದಲ್ಲಿ, ಸರ್ಕಾರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು ಎಂದರು. ಇದನ್ನೂ ಓದಿ: ಮಂತ್ರಿ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಘೋಷಣೆ

    ಆ ಸಂದರ್ಭದಲ್ಲಿ ನನ್ನ ಸಹೋದರ ರೇವಣ್ಣ ಅವರೂ ಮೊದಲ ಬಾರಿಗೆ ಜಿಲ್ಲಾ ಪಂಚಾಯಿಗೆ ಗೆದ್ದು ಬಂದಿದ್ದರು. ಆದರೆ, ದೇವೇಗೌಡರು ಎಂಎ ಪದವೀಧರನಾಗಿದ್ದ ದಲಿತ ಅಭ್ಯರ್ಥಿಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಮುಂದಿನ ದಿನಗಳಲ್ಲಿ ಜಾತ್ಯತೀತ ಜನತಾದಳದಿಂದ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಅವಕಾಶ ಬಂದೇ ಬರುತ್ತದೆ. ನಾನು ಮಣ್ಣಿಗೆ ಹೋಗುವ ಮುನ್ನ ದಲಿತ ಮುಖ್ಯಮಂತ್ರಿಯನ್ನು ಮಾಡುತ್ತೇನೆ. ಈ ನಿರೀಕ್ಷೆಯನ್ನು ಜೆಡಿಎಸ್ ಸಾಕಾರಗೊಳಿಸುತ್ತದೆ ಎಂದು ಭರವಸೆ ನೀಡಿದರು.

    ನಾನು ಮೊದಲಿನಿಂದಲೂ ಜಾತ್ಯತೀತ, ಧರ್ಮಾತೀತವಾಗಿ ಕೆಲಸ ಮಾಡಿಕೊಂಡು ಬಂದವನು. ನನ್ನನ್ನು ದಿನನಿತ್ಯವೂ ಸಾವಿರಾರು ಜನರು ರಾಜ್ಯದ ಮೂಲೆ ಮೂಲೆಗಳಿಂದಲೂ ಬಂದು ಭೇಟಿ ಮಾಡುತ್ತಾರೆ. ಅವರನ್ನೆಲ್ಲ ನಾನು, ನೀವು ಯಾವ ಜಾತಿ? ಯಾವ ಧರ್ಮ? ಎಂದು ಎಂದೂ ಕೇಳಿಲ್ಲ. ನಿಮ್ಮ ಕಷ್ಟವೇನು? ಎಂದಷ್ಟೇ ಕೇಳುತ್ತೇನೆ. ಇದು ನಾನು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ಧರ್ಮ ಎಂದು ಅವರು ಹೇಳಿದರು. ಇದನ್ನೂ ಓದಿ: ನನ್ನ ಸಿಡಿ ಕೇಸ್, ಸಂತೋಷ್ ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ: ರಮೇಶ್ ಜಾರಕಿಹೊಳಿ

    ನನಗೆ ಐದು ವರ್ಷ ಅಧಿಕಾರ ಕೊಡಿ. ನೀವು ನೆನಪಲ್ಲಿಟ್ಟುಕೊಳ್ಳುವ ಕೆಲಸ ಮಾಡುತ್ತೇನೆ. ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಹಂಗಿನ ಸರ್ಕಾರ ಖಂಡಿತಾ ಬೇಡ. ರಾಜ್ಯವು ಕಳೆದ ಎಪ್ಪತ್ತೈದು ವರ್ಷಗಳಲ್ಲಿ ನೀರಾವರಿ ವಿಷಯಕ್ಕೆ ಸಂಬಂಧಿಸಿ ಅನ್ಯಾಯಕ್ಕೆ ತುತ್ತಾಗಿದೆ. ನನಗೆ ಐದು ವರ್ಷ ಅಧಿಕಾರ ಕೊಟ್ಟು ನೋಡಿ. ಆ ಅನ್ಯಾಯವನ್ನು ಐದೇ ವರ್ಷಗಳಲ್ಲಿ ಸರಿ ಮಾಡುತ್ತೇನೆ. ಇಲ್ಲವಾದರೆ ನಮ್ಮ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಮಳವಳ್ಳಿ ಶಾಸಕ ಡಾ.ಅನ್ನದಾನಿ, ಮಂಡ್ಯ ಜಿಲ್ಲೆಯ ಪಕ್ಷದ ಮುಖಂಡರು, ಅಸಂಖ್ಯಾತ ಕಾರ್ಯಕರ್ತರು ಹಾಜರಿದ್ದರು.

  • ರಾಜ್ಯದಲ್ಲಿ ದಲಿತ ಸಿಎಂ ಆಗಲೇಬೇಕು: ರಮೇಶ್ ಜಿಗಜಿಣಗಿ

    ರಾಜ್ಯದಲ್ಲಿ ದಲಿತ ಸಿಎಂ ಆಗಲೇಬೇಕು: ರಮೇಶ್ ಜಿಗಜಿಣಗಿ

    ವಿಜಯಪುರ: ರಾಜ್ಯದಲ್ಲಿ ದಲಿತ ಸಿಎಂ ಆಗಲೇ ಬೇಕು. ನಾನೇ ಸಿಎಂ ಆಗಬೇಕೆಂದೇನಿಲ್ಲ. ಯಾರಾದರೂ ಒಬ್ಬರು ದಲಿತ ಸಿಎಂ ಆಗಲೇಬೇಕು ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಬ್ಬ ಶೇ.2-3ರಷ್ಟು ಇರೋರು ಸಿಎಂ ಆಗಿದ್ದಾರೆ. ಶೇ.23ರಷ್ಟು ಇರೋ ದಲಿತರು ಸಿಎಂ ಯಾಕೆ ಆಗಬಾರದು ಎಂದು ಪ್ರಶ್ನಿಸಿದರು.

    ದಲಿತರು ಸಿಎಂ ಆಗಬೇಕು ಅನ್ನೋ ಆಸೆ ನನ್ನದು. ಒಂದಿಲ್ಲ ಒಂದು ದಿನ ದೇವರೇ ದಲಿತರನ್ನ ಸಿಎಂ ಮಾಡ್ತಾನೆ. ನೀವೆಲ್ಲ ಬೇಡ ಅಂದರೂ ದೇವರೇ ದಲಿತರನ್ನ ಸಿಎಂ ಮಾಡ್ತಾನೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.

    ಇಧೆ ವೇಳೆ ಸಿಡಿ ಪ್ರಕರಣ ಸಂಬಂಧ ಮಾತನಾಡಿದ ಸಂಸದ, ನಾನು ಸಿಡಿ ನೋಡಿಲ್ಲ, ಸಿಡಿದು ಏನಿದೆ ಗೊತ್ತಿಲ್ಲ. ರಾಜ್ಯದಲ್ಲಿ ಸಿಡಿ ಬೆಳವಣಿಗೆ ತಪ್ಪು. ನಾನು ಮಾಡಿದರೂ ಅದು ತಪ್ಪು. ಯಾರು ಮಾಡಿದರೂ ಅದು ತಪ್ಪೇ ಎಂದು ಅವರು ತಿಳಿಸಿದರು.

  • ಬಿಜೆಪಿ 5 ಸ್ಥಾನ ಗೆದ್ರೂ ಸರ್ಕಾರ ಸೇಫ್ – ವಿರೋಧಿಗಳಿಗೆ ಸಿದ್ದು ಪರೋಕ್ಷ ಟಾಂಗ್

    ಬಿಜೆಪಿ 5 ಸ್ಥಾನ ಗೆದ್ರೂ ಸರ್ಕಾರ ಸೇಫ್ – ವಿರೋಧಿಗಳಿಗೆ ಸಿದ್ದು ಪರೋಕ್ಷ ಟಾಂಗ್

    – ದಲಿತ ಸಿಎಂ ಚರ್ಚೆ ಈಗಲೇ ಅಗತ್ಯವಿಲ್ಲ

    ಬಾಗಲಕೋಟೆ: ದಲಿತ ಸಿಎಂ ಹಾಗೂ ಮೈತ್ರಿ ಸರ್ಕಾರ ರಚನೆ ಬಗ್ಗೆ ಮಾಜಿ ಸಿಎಂ, ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಲಿತ ಸಿಎಂ ವಿಚಾರ ಬಗ್ಗೆ ಮಾತನಾಡಲು, ಯಾವುದೇ ತೀರ್ಮಾನ ಮಾಡಲು ಉಪಚುನಾವಣೆಯ ಫಲಿತಾಂಶ ಬರಬೇಕು. ಪಕ್ಷದ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತದೆ. ಆದ್ದರಿಂದ ಈಗಲೇ ಚರ್ಚೆ ಶುರುಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

    ಯಾವುದೇ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಲು ಉಪಚುನಾವಣೆ ಫಲಿತಾಂಶ ಬರಬೇಕು. ಈ ಬಗ್ಗೆ ಫಲಿತಾಂಶ ಬಂದ ಬಳಿಕ ಮಾತನಾಡುತ್ತೇನೆ. ಚುನಾವಣೆಯಲ್ಲಿ ನಾವು ಮೊದಲಿಗೆ ಹತ್ತು ಸ್ಥಾನ ಗೆಲ್ಲಬೇಕು. ಜೆಡಿಎಸ್ ಪಕ್ಷ ಒಂದು ಅಥವಾ ಎರಡು ಸ್ಥಾನ ಗೆದ್ದರೆ ಮಾತ್ರ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಬಿಜೆಪಿ 5 ಸ್ಥಾನ ಗೆದ್ದರೂ, ಬಿಎಸ್‍ಪಿ ಅಭ್ಯರ್ಥಿ ಸೇರಿದಂತೆ 112 ಸ್ಥಾನ ಆಗುತ್ತದೆ ಎಂದು ಪರೋಕ್ಷವಾಗಿ ಮೈತ್ರಿ ಸರ್ಕಾರ ರಚನೆಯ ವಿಷಯಕ್ಕೆ ಟಾಂಗ್ ನೀಡಿ, ಫಲಿತಾಂಶಕ್ಕೂ ಮೊದಲೇ ಬಿಜೆಪಿ ಸರ್ಕಾರ ಸೇಫ್ ಎಂಬರ್ಥದಲ್ಲಿ ಮಾತನಾಡಿದರು.

    ಇದೇ ವೇಳೇ ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆತರುತ್ತೇನೆ ಎಂಬ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ಹುಡುಗಾಟಿಕೆ, ಮಕ್ಕಳಾಟಿಕೆ ಆಡಬಾರದು. ಅನರ್ಹ ಶಾಸಕ ರಮೇಶ ಜಾರಕಿಹೊಳಿ ಗಂಭೀರವಾಗಿ ಮಾತನಾಡೋದನ್ನು ಕಲಿಯಬೇಕು. ರಮೇಶ್ ಹೇಳಿಕೆಗೆ ನಗಬೇಕೋ, ಅಳಬೇಕೋ ತಿಳಿಯುತ್ತಿಲ್ಲ. ಇವೆಲ್ಲ ಬಾಲಿಷವಾದ ಹೇಳಿಕೆಗಳಾಗಿದ್ದು, ಅವರಿಗೆ ಜವಾಬ್ದಾರಿ ಇದ್ದರೆ ಹೀಗೆಲ್ಲ ಮಾತನಾಡಲ್ಲ. ನಮ್ಮ ಹೋರಾಟವೇ ಕೋಮುವಾದಿ ಪಕ್ಷದ ವಿರುದ್ಧವಾಗಿದೆ. ಅವನ್ಯಾರು ರೀ ರಮೇಶ್, ಅವನಿಗೆ ಐಡಿಯಾಲಜಿ ಗೊತ್ತಿಲ್ಲ, ಪೊಲಿಟಿಕಲ್ ಫಿಲಾಸಫಿ ಗೊತ್ತಿಲ್ಲ. ಏನು ಓದಿಕೊಂಡಿಲ್ಲ ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಅದಕ್ಕೆಲ್ಲ ಕಿಮ್ಮತ್ತು ಕೊಡಬೇಕಿಲ್ಲ ಎಂದು ಕಿಡಿಕಾರಿದರು.

  • ದಲಿತ ಸಿಎಂಗೆ ಏನು ಮೀಸಲಾತಿ ಇದೆಯೇ – ಖರ್ಗೆ ಗರಂ

    ದಲಿತ ಸಿಎಂಗೆ ಏನು ಮೀಸಲಾತಿ ಇದೆಯೇ – ಖರ್ಗೆ ಗರಂ

    ಬೆಂಗಳೂರು: ಪದೇ ಪದೇ ನನ್ನ ದಲಿತ ನಾಯಕ ಅಂತ ಏಕೆ ಕರೆಯುತ್ತಿದ್ದೀರಿ. ದಲಿತ ಸಿಎಂಗೆ ಏನು ಮೀಸಲಾತಿ ಇದೆಯೇ ಎಂದು ಪ್ರಶ್ನಿಸಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಗರಂ ಆಗಿದ್ದಾರೆ.

    ಇಂದು ಮಲ್ಲಿಕಾರ್ಜುನ ಖರ್ಗೆ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಡಿಸೆಂಬರ್ 9ರ ನಂತರ ಮಲ್ಲಿಕಾರ್ಜುನ ಖರ್ಗೆ ಸಿಹಿ ಹಂಚುತ್ತಾರೆ. ದಲಿತರು ಸಿಎಂ ಆಗುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವನ್ನು ಪ್ರಸ್ತಾಪ ಮಾಡಿ ಪ್ರಶ್ನೆ ಕೇಳಿದ್ದಕ್ಕೆ ದಲಿತ ಸಿಎಂಗೆ ಮೀಸಲಾತಿ ಇದೆಯೇ ಎಂದು ಪ್ರಶ್ನಿಸಿದರು.

    ನಾನು 55 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಪಕ್ಷದಲ್ಲಿ ಇಷ್ಟು ವರ್ಷದಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಹೀಗಿದ್ದೂ ನಾನು ಯಾಕೆ ದಲಿತ ಸಿಎಂ ಆಗಬೇಕು? ನನ್ನನ್ನು ಆ ರೀತಿಯಾಗಿ ಕರೆಯಬೇಡಿ ಎಂದರು.

    ನನ್ನನ್ನು ಉಲ್ಲೇಖಿಸಿ ಇನ್ನೂ ದಲಿತ ಸಿಎಂ ಆಗಬೇಕು ಎನ್ನುವುದಾದರೆ ಐ ಫೀಲ್ ವೆರೀ ಬ್ಯಾಡ್. ಡೋಂಟ್ ಕಾಲ್ ದಲಿತ. ನನ್ನನ್ನು ಒಂದು ಜಾತಿಗೆ ಮೀಸಲು ಮಾಡಬೇಡಿ. ಕುಮಾರಸ್ವಾಮಿ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಗರಂ ಆಗಿ ಪ್ರತಿಕ್ರಿಯಿಸಿದರು.

    ರಾಜ್ಯದ ಜನರ ವಾತಾವರಣ ಗಮನಿಸಿದ್ರೆ ಕಾಂಗ್ರೆಸ್ಸಿಗೆ ಹೆಚ್ಚಿನ ಸೀಟ್ ಸಿಗಲಿದೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವುದಿಲ್ಲ. ಬಳಿಕ ಏನ್ ಮಾಡಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡಲಿದೆ. 15 ಕ್ಷೇತ್ರಗಳಲ್ಲಿ ಬಹುತೇಕ ನಾವು ಗೆಲ್ಲುತ್ತೇವೆ. ಜನರು ಕಾಂಗ್ರೆಸ್ ಪರವಾಗಿ ಇದ್ದಾರೆ ಎಂದು ಈ ವೇಳೆ ಭವಿಷ್ಯ ನುಡಿದರು.