Tag: ದಲಿತ ವ್ಯಕ್ತಿ

  • ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳನ್ನೇ ಕತ್ತರಿಸಿದ ದುರುಳರು

    ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳನ್ನೇ ಕತ್ತರಿಸಿದ ದುರುಳರು

    ಗಾಂಧೀನಗರ: ಕ್ರಿಕೆಟ್ (Cricket) ಆಡುತ್ತಿದ್ದ ಸಂದರ್ಭ ದಲಿತ ಬಾಲಕನೊಬ್ಬ (Dalit Boy) ಚೆಂಡನ್ನು (Ball) ಮುಟ್ಟಿದ್ದಕ್ಕೆ ಗಲಾಟೆ ನಡೆದು, ಇದನ್ನು ಪ್ರಶ್ನಿಸಿದ ದಲಿತ ವ್ಯಕ್ತಿಯ (Dalit Man)  ಹೆಬ್ಬೆರಳನ್ನೇ ( ಕತ್ತರಿಸಿರುವ ವಿಕೃತ ಘಟನೆ ಗುಜರಾತ್‌ನಲ್ಲಿ ನಡೆದಿದೆ.

    ಗುಜರಾತ್‌ನ ಪಟಾನ್ ಜಿಲ್ಲೆಯ ಗ್ರಾಮಸ್ಥರು ಭಾನುವಾರ ಶಾಲೆಯೊಂದರ ಆಟದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ದಲಿತ ಬಾಲಕನೊಬ್ಬ ಚೆಂಡನ್ನು ಮುಟ್ಟಿದ್ದ. ಇದರಿಂದ ಕೋಪಗೊಂಡ ಗ್ರಾಮಸ್ಥರು ಬಾಲಕನಿಗೆ ಜಾತಿ ನಿಂದನೆ ಮಾಡಿದ್ದಲ್ಲದೇ ಬೆದರಿಕೆ ಹಾಕಿದ್ದಾರೆ.

    ಈ ವಿಚಾರ ತಿಳಿದ ಬಾಲಕನ ಸಂಬಂಧಿ ಧೀರಜ್ ಪರ್ಮಾರ್ ಗ್ರಾಮಸ್ಥರಲ್ಲಿ ಬಾಲಕನಿಗೆ ನಿಂದಿಸಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಕ್ಷಣಕ್ಕೆ ಗಲಾಟೆಯನ್ನು ಇತ್ಯರ್ಥಗೊಳಿಸಲಾಯಿತಾದರೂ ಬಳಿಕ ಸಂಜೆ 7 ಜನರ ಗುಂಪು ಹರಿತವಾದ ಆಯುಧಗಳೊಂದಿಗೆ ಬಂದು ಧೀರಜ್ ಹಾಗೂ ಆತನ ಸಹೋದರ ಕೀರ್ತಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳಲ್ಲಿ ಒಬ್ಬ ಕೀರ್ತಿ ಅವರ ಹೆಬ್ಬೆರಳನ್ನೇ ಕತ್ತರಿಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ

    ಇದೀಗ ಘಟನೆ ಬಗ್ಗೆ ಪೊಲೀಸರು ಭಾರತೀಯ ದಂಡಸಂಹಿತೆ (ಐಪಿಸಿ) ಹಾಗೂ ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ ಕಾಯ್ದೆ) ಸೆಕ್ಷನ್ 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧಗಳಿಂದ ಗಂಭೀರ ಗಾಯವನ್ನು ಉಂಟುಮಾಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಚಾಕ್ಲೇಟ್, ಆಟಿಕೆ ಬೇಕೆಂದು ಹಠ ಹಿಡಿದ ಮಗಳನ್ನು ಕಲ್ಲು ಎತ್ತಿ ಹಾಕಿ ಕೊಂದೇ ಬಿಟ್ಟ ಪಾಪಿ ತಂದೆ

  • ಒಳ್ಳೆಯ ಬಟ್ಟೆ,‌ ದುಬಾರಿ ಸನ್‌ ಗ್ಲಾಸ್ ಧರಿಸಿದ್ದಕ್ಕೆ ದಲಿತ ವ್ಯಕ್ತಿಯ ಮೇಲೆ ಹಲ್ಲೆ- 7 ಮಂದಿ ವಿರುದ್ಧ FIR

    ಒಳ್ಳೆಯ ಬಟ್ಟೆ,‌ ದುಬಾರಿ ಸನ್‌ ಗ್ಲಾಸ್ ಧರಿಸಿದ್ದಕ್ಕೆ ದಲಿತ ವ್ಯಕ್ತಿಯ ಮೇಲೆ ಹಲ್ಲೆ- 7 ಮಂದಿ ವಿರುದ್ಧ FIR

    ಗಾಂಧಿನಗರ: ದಲಿತ ವ್ಯಕ್ತಿಯೊಬ್ಬ ಒಳ್ಳೆಯ ಬಟ್ಟೆ ಹಾಗೂ ದುಬಾರಿ ಸನ್‍ಗ್ಲಾಸ್ (Sunglass) ಧರಿಸಿದ್ದ ಎಂಬ ಕಾರಣಕ್ಕೆ ತಂಡವೊಂದು ಹಲ್ಲೆ ಮಾಡಿ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಗುಜರಾತ್‍ (Gujrat) ನ ಬನಸ್ ಕಾಂತ ಜಿಲ್ಲೆಯ ಪಾಲನ್‍ಪುರ ತಾಲೂಕಿನ ಮೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಗರ್ ಶೆಖಾಲಿಯಾ ಹಲ್ಲೆಗೊಳಗಾದ ವ್ಯಕ್ತಿ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಏಳು ಮಂದಿ ಆರೋಪಿಗಳ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

    ನಡೆದಿದ್ದೇನು..?: ಮಂಗಳವಾರ ಬೆಳಗ್ಗೆ ಜಿಗರ್ ತಮ್ಮ ಮನೆ ಮುಂದೆ ನಿಂತಿದ್ದರು. ಈ ವೇಳೆ ಓರ್ವ ಆರೋಪಿ ಬಂದು ಇತ್ತೀಚಿನ ದಿನಗಳಲ್ಲಿ ನಿನ್ನದು ಅತಿಯಾಯ್ತು. ಇದೇ ರೀತಿ ಮುಂದುವರಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೊರಟು ಹೋಗಿದ್ದಾನೆ.

    ಅದೇ ದಿನ ರಾತ್ರಿ ಜಿಗರ್ ಗ್ರಾಮದ ಹೊರಭಾಗದ ದೇವಾಲಯದ ಬಳಿ ನಿಂತಿದ್ದ ವೇಳೆ ಬಂದ 7 ಮಂದಿ ಆರೋಪಿಗಳು ಏಕಾಏಕಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ತನ್ನನ್ನು ಯಾಕೆ ಹೊಡೆಯುತ್ತಿದ್ದೀರಾ ಎಂದು ಕೇಳಿದಾಗ ಒಳ್ಳೆಯ ಬಟ್ಟೆ ಹಾಗೂ ಸನ್ ಗ್ಲಾಸ್ ಧರಿಸಿದ್ದಕ್ಕಾಗಿ ಎಂದು ಹೇಳಿ ಮನಬಂದಂತೆ ಥಳಿಸಿದ್ದಾರೆ.

    ಇತ್ತ ಮಗನ ಮೇಲೆ ಹಲ್ಲೆ ನಡೆಯುತ್ತಿರುವ ವಿಚಾರ ತಿಳಿದ ತಾಯಿ ಸ್ಥಳಕ್ಕೆ ದೌಡಾಯಿಸಿ ಹಲ್ಲೆ ಮಾಡದಂತೆ ಮನವಿ ಮಾಡಿದ್ದಾರೆ. ಅಲ್ಲದೆ ಮಗನ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಆರೋಪಿಗಳು ಜಿಗರ್ ತಾಯಿ ಮೇಲೆಯೂ ಹಲ್ಲೆ ನಡೆಸಿ ಆಕೆಯ ಬಟ್ಟೆಯನ್ನು ಹರಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೊರಟು ಹೋಗಿದ್ದಾರೆ.

    ಗಾಯಾಳು ತಾಯಿ-ಮಗ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

  • ಸೀಬೆ ಹಣ್ಣು ಕಿತ್ತಿದ್ದಕ್ಕೆ ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಕೊಲೆ – ಇಬ್ಬರ ಬಂಧನ

    ಸೀಬೆ ಹಣ್ಣು ಕಿತ್ತಿದ್ದಕ್ಕೆ ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಕೊಲೆ – ಇಬ್ಬರ ಬಂಧನ

    ಲಕ್ನೋ: ತೋಟದಿಂದ ಸೀಬೆ ಹಣ್ಣನ್ನು (Guava) ಕಿತ್ತಿದ್ದಕ್ಕೆ ದಲಿತ ವ್ಯಕ್ತಿಯನ್ನು (Dalit Man) ದೊಣ್ಣೆಯಿಂದ ಹೊಡೆದು ಕೊಂದಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ (Uttar Pradesh) ಅಲಿಗಢದಲ್ಲಿ (Aligarh) ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಘಟನೆಯಲ್ಲಿ ಸಾವನ್ನಪ್ಪಿರುವ ವ್ಯಕ್ತಿ ಓಂ ಪ್ರಕಾಶ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಅವರ ಸಹೋದರ ಸತ್ಯ ಪ್ರಕಾಶ್ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಸಹೋದರ ಹಸಿವನ್ನು ತಣಿಸಿಕೊಳ್ಳಲು ಹೊರಗಡೆ ಹೋಗಿದ್ದ. ಆತ ಇತರರ ತೋಟದಿಂದ ಒಂದು ಸೀಬೆ ಹಣ್ಣನ್ನು ಕಿತ್ತು ತಿಂದಿದ್ದಕ್ಕೆ ಹೊಡೆದು ಸಾಯಿಸಿದ್ದಾರೆ. ಈ ವಿಚಾರವನ್ನು ಒಬ್ಬ ಹುಡುಗ ಬಂದು ಹೇಳಿದಾಗಲೇ ನಮಗೆ ವಿಷಯ ತಿಳಿಯಿತು ಎಂದಿದ್ದಾರೆ. ಇದನ್ನೂ ಓದಿ: ತಾಯಿಯನ್ನು ನಿಂದಿಸಿದ್ದಕ್ಕೆ ಜೈಲಿನಿಂದ ಬಂದ ಸ್ನೇಹಿತರಿಂದ್ಲೇ ಯುವಕ ಕೊಲೆಯಾದ

    crime

    ಘಟನೆಯ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಓಂ ಪ್ರಕಾಶ್‌ನನ್ನು ಮೊದಲಿಗೆ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆತ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಾಮಾಚಾರದ ಆರೋಪ – ನೆರೆಹೊರೆಯವರಿಂದಲೇ ಮಹಿಳೆ ಸಜೀವ ದಹನ

    ಇದೀಗ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ಕಲ್ ಅಧಿಕಾರಿ ಅಭಯ್ ಕುಮಾರ್ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) 302 (ಕೊಲೆ) ಮತ್ತು ಎಸ್‌ಸಿ/ಎಸ್‌ಟಿ ಕಾಯಿದೆಯ 3(2)(ವಿ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]