Tag: ದಲಿತ ಮುಖಂಡ

  • ಮರೆಯಾದ ನಿಷ್ಕಳಂಕ ರಾಜಕಾರಣಿ – ಸಿಎಂ, ಡಿಸಿಎಂ ಸೇರಿದಂತೆ ಗಣ್ಯರಿಂದ ಶ್ರೀನಿವಾಸ್ ಪ್ರಸಾದ್ ಅಂತಿಮ ದರ್ಶನ

    ಮರೆಯಾದ ನಿಷ್ಕಳಂಕ ರಾಜಕಾರಣಿ – ಸಿಎಂ, ಡಿಸಿಎಂ ಸೇರಿದಂತೆ ಗಣ್ಯರಿಂದ ಶ್ರೀನಿವಾಸ್ ಪ್ರಸಾದ್ ಅಂತಿಮ ದರ್ಶನ

    – ಮಂಗಳವಾರ ಬೌದ್ಧ ಧರ್ಮದ ಪ್ರಕಾರ ಶ್ರೀನಿವಾಸ್ ಅಂತ್ಯಕ್ರಿಯೆ

    ಮೈಸೂರು: ಹಳೆ ಮೈಸೂರು ಭಾಗದ ಪ್ರಭಾವಿ ದಲಿತ ಮುಖಂಡ, ಸ್ವಾಭಿಮಾನಿ ರಾಜಕಾರಣಿ, ದಲಿತ ಸಮುದಾಯದ ಬಹುದೊಡ್ಡ ಧ್ವನಿ, ನಿಷ್ಕಳಂಕ ರಾಜಕೀಯ ಜೀವನ ಪೂರೈಸಿದ್ದ ವಿ. ಶ್ರೀನಿವಾಸ್ ಪ್ರಸಾದ್ (V Srinivasa Prasad) ಅಸ್ತಂಗತರಾಗಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದ ಮಹಾನ್ ಕೊಂಡಿ ಕಳಚಿದಂತಾಗಿದೆ.

    ಮೈಸೂರಿನ (Mysuru) ಅಶೋಕಪುರಂನ ಶ್ರೀನಿವಾಸ ಪ್ರಸಾದ್ ಚಾಮರಾಜನಗರ (Chamarajanagar) ಮೀಸಲು ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ನಂಜನಗೂಡು ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. ಕೇಂದ್ರ ಮತ್ತು ರಾಜ್ಯದಲ್ಲಿ ಒಮ್ಮೆ ಸಚಿವರಾಗಿ ಕೆಲಸ ಮಾಡಿ ಕಳೆದ ತಿಂಗಳು ರಾಜಕೀಯ ನಿವೃತ್ತಿ ಪಡೆದು ವಿಶ್ರಾಂತಿ ಜೀವನ ಆರಂಭಿಸಿದ್ದರು. ಶ್ರೀನಿವಾಸ್ ಪ್ರಸಾದ್ ಅವರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಇದನ್ನೂ ಓದಿ: ಪ್ರವಾಸಿಗರೇ ಗಮನಿಸಿ – ಊಟಿ, ಕೊಡೈಕೆನಾಲ್‌ಗೆ ಹೋಗಬೇಕಾದ್ರೆ ಇ-ಪಾಸ್‌ ಕಡ್ಡಾಯ

    ರಾಜ್ಯಶಾಸ್ತ್ರದಲ್ಲಿ ಎಂ.ಎ ಮಾಡಿದ್ದ ಶ್ರೀನಿವಾಸ್ ಪ್ರಸಾದ್ 1974ರಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯ ಪ್ರವೇಶಿಸಿದ್ದರು. ಮೊದಲ ಚುನಾವಣೆಯಲ್ಲಿ ಸೋತಿದ್ದರು. 1978ರಲ್ಲಿ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದು ನಾಲ್ಕು ಬಾರಿ ಗೆದ್ದರು. ಒಮ್ಮೆ ಜೆಡಿಯು ಅಭ್ಯರ್ಥಿಯಾಗಿ ಗೆದ್ದು ಕೇಂದ್ರದ ಮಂತ್ರಿಯಾಗಿದ್ದರು. 2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸಂಸದನಾಗಿ ಆಯ್ಕೆ ಆಗಿದ್ದರು. ಅಲ್ಲದೆ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ 2008 ಹಾಗೂ 2013 ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಶ್ರೀನಿವಾಸ್ ಪ್ರಸಾದ್ ಅವಿವಾಹಿತ ಮಹಿಳೆಯರಿಗೆ ಮಾಶಾಸನ ನೀಡುವ ಮಹತ್ವದ ಮನಸ್ವಿನಿ ಯೋಜನೆಯನ್ನು ಜಾರಿಗೆ ತಂದಿದ್ದರು. ಇದನ್ನೂ ಓದಿ: ಬೈರತಿ ಬಸವರಾಜ್ ಕಾರು ಪಲ್ಟಿ – ಚಾಲಕ, ಗನ್ ಮ್ಯಾನ್‍ಗೆ ಗಾಯ

    ತಮ್ಮ ಸಂಪುಟದಿಂದ ಕೈ ಬಿಟ್ಟ ಕಾರಣ ಕೋಪಗೊಂಡಿದ್ದ ಶ್ರೀನಿವಾಸ್ ಪ್ರಸಾದ್ ಸಿದ್ದರಾಮಯ್ಯ ವಿರುದ್ಧ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಯಾದರು. ಬಳಿಕ 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಇದನ್ನೂ ಓದಿ: ಮುರುಘಾ ಶ್ರೀಗೆ ಮೇ 27ರವರೆಗೆ ನ್ಯಾಯಾಂಗ ಬಂಧನ

    ಆರು ಬಾರಿ ಸಂಸದರು ಹಾಗೂ ಎರಡು ಬಾರಿ ಶಾಸಕರಾಗಿ 40 ವರ್ಷಗಳ ಕಾಲ ಅಧಿಕಾರ ಇದ್ದರೂ ಕೂಡ ಎಂದಿಗೂ ಹೆಸರು ಕೆಡಿಸಿಕೊಳ್ಳದೇ ಕಳಂಕರಹಿತ ರಾಜಕೀಯ ಮಾಡಿದ್ದ ಖ್ಯಾತಿ ಶ್ರೀನಿವಾಸ್ ಪ್ರಸಾದ್ ಅವರಿಗಿದೆ. ದೀರ್ಘಕಾಲ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಇತ್ತೀಚಿಗೆ ಸಂಪೂರ್ಣ ವಿಶ್ರಾಂತಿಗೆ ಮೊರೆ ಹೋಗಿದ್ದರು. ಮೂತ್ರಪಿಂಡ ಕಾಯಿಲೆ ಉಲ್ಪಣಗೊಂಡು ಕೆಲ ದಿನಗಳ ಹಿಂದೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ: ಅಮಿತ್‌ ಶಾ ಫೇಕ್‌ ವಿಡಿಯೋ ಕೇಸ್‌ – ರೇವಂತ್‌ ರೆಡ್ಡಿಗೆ ಸಮನ್ಸ್‌, ಓರ್ವ ಕಾಂಗ್ರೆಸ್‌ ಕಾರ್ಯಕರ್ತ ಅರೆಸ್ಟ್‌

    ಸುತ್ತೂರು ಶ್ರೀಗಳು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಶ್ರೀನಿವಾಸ್ ಪ್ರಸಾದ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ನಾಳೆ (ಮಂಗಳವಾರ) ಶ್ರೀನಿವಾಸ್ ಪ್ರಸಾದ್ ಅವರ ಕುಟುಂಬದ ಟ್ರಸ್ಟ್ ಜಾಗದಲ್ಲಿ ಬೌದ್ಧ ಧರ್ಮದ ಪ್ರಕಾರ ಅಂತಿಮ ಸಂಸ್ಕಾರ ನಡೆಯಲಿದೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಬಾಲಾಕೋಟ್ ಏರ್‌ಸ್ಟ್ರೈಕ್‌ ರಹಸ್ಯ ರಿವೀಲ್‌ ಮಾಡಿದ ಮೋದಿ

  • ತುಮಕೂರಿನಲ್ಲಿ ದಲಿತ ಮುಖಂಡನ ಹತ್ಯೆ ಪ್ರಕರಣ – 13 ಆರೋಪಿಗಳ ಬಂಧನ

    ತುಮಕೂರಿನಲ್ಲಿ ದಲಿತ ಮುಖಂಡನ ಹತ್ಯೆ ಪ್ರಕರಣ – 13 ಆರೋಪಿಗಳ ಬಂಧನ

    ತುಮಕೂರು: ಗುಬ್ಬಿಯ ದಲಿತ ಮುಖಂಡ ನರಸಿಂಹಮೂರ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಕಿರಣ್, ರಾಜ @ ಕ್ಯಾಟ್ ರಾಜ, ಮಂಜು @ ಮ್ಯಾಕ್ಸಿ, ಅಭಿಷೇಕ್ @ ಕರೀಮ, ನಯಾಜ್, ವೆಂಕಟೇಶ್, ಕೀರ್ತಿ, ಚಂದ್ರಶೇಖರ್, ಭರತ್, ದೀರಜ್, ವೆಂಕಟೇಶ, ಬಸವರಾಜು, ನಾಗರಾಜು ಬಂದಿತ ಆರೋಪಿಗಳು. ಇದನ್ನೂ ಓದಿ: ದಲಿತ ಮುಖಂಡನ ಕೊಲೆ ಪ್ರಕರಣ – ಐವರು ಶಂಕಿತರು ವಶಕ್ಕೆ

    ಈ ಕುರಿತು ತುಮಕೂರು ಎಸ್‌ಪಿ ರಾಹುಲ್ ಕುಮಾರ್ ಶಹಾಪುರ್ ಸುದ್ದಿಗೋಷ್ಟಿ ನಡೆಸಿ, ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿದೆ. ನರಸಿಂಹ ಮೂರ್ತಿ ಅಲಿಯಾಸ್ ಕುರಿಮೂರ್ತಿ ಕೊಲೆಯಾಗಿದ್ದರು. ಒಟ್ಟು 7 ಆರೋಪಿಗಳು ಮಾಡಿದ್ದಾರೆ. ಇನ್ನುಳಿದ 6 ಜನ ಆರೋಪಿಗಳು ಕೊಲೆಗೆ ಸಹಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಬಂಧಿತರಲ್ಲಿ ಒಟ್ಟು ಆರು ಜನ ಗುಬ್ಬಿ ಟೌನ್‌ನವರು. ಇಬ್ಬರು ಮಂಡ್ಯ ಮೂಲದವರು. ಇನ್ನಿಬ್ಬರು 2 ಮೈಸೂರು, ಇಬ್ಬರು ರಾಮನಗರ, ಒಬ್ಬ ಬೆಂಗಳೂರು ಮೂಲದವರಾಗಿದ್ದಾರೆ. ಆರೋಪಿಗಳಲ್ಲಿ ಕೆಲವರು ರೌಡಿಶೀಟರ್‌ಗಳಾಗಿದ್ದಾರೆ. ಇದನ್ನೂ ಓದಿ: ಟೀ ಅಂಗಡಿ ಮುಂದೆ ಕುಳಿತಿದ್ದ ಡಿಎಸ್‌ಎಸ್ ಮುಖಂಡನನ್ನು ಕೊಚ್ಚಿ ಕೊಂದ್ರು!

    ಭೂ ವಿವಾದ ಹಾಗೂ ಹಣದ ವಿಚಾರಕ್ಕೆ ಕೊಲೆ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ನರಸಿಂಹ ಮೂರ್ತಿ ಹಾಗೂ ಆರೋಪಿ ಕಿರಣ್ ಪರಸ್ಪರ ಪರಿಚಯಸ್ಥರು. ಇತ್ತಿಚೆಗೆ ಕೆಲವು ತಿಂಗಳಿಂದ ಇಬ್ಬರೂ ಬೇರೆಯಾಗಿದ್ದರು. ಪರಸ್ಪರ ದ್ವೇಷ ಬೆಳೆಸಿಕೊಂಡಿದ್ದರು ಎಂದು ಎಸ್‌ಪಿ ರಾಹುಲ್ ಕುಮಾರ್ ಶಹಾಪುರ್ ಮಾಹಿತಿ ನೀಡಿದ್ದಾರೆ.

    Live Tv

  • ರಾಹುಲ್ ಗಾಂಧಿಗೆ ರಕ್ತದಲ್ಲಿ ಪತ್ರ ಬರೆದ ದಲಿತ ಮುಖಂಡ

    ರಾಹುಲ್ ಗಾಂಧಿಗೆ ರಕ್ತದಲ್ಲಿ ಪತ್ರ ಬರೆದ ದಲಿತ ಮುಖಂಡ

    ತುಮಕೂರು: ದಲಿತರೆಲ್ಲಾ ಒಂದಾಗಿದ್ದೇವೆ. ನಮ್ಮಲ್ಲಿ ಒಡಕಿಲ್ಲ ಎಂದು ದಲಿತ ಮುಖಂಡರೊಬ್ಬರು ರಾಹುಲ್ ಗಾಂಧಿಗೆ ರಕ್ತದಲ್ಲಿ ಪತ್ರ ಬರೆದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಕುಣಿಗಲ್ ದಲಿತ ಮುಖಂಡ ನಗುತಾ ರಂಗನಾಥ್ ರಾಹುಲ್ ಗಾಂಧಿಗೆ ರಕ್ತದಲ್ಲಿ ಪತ್ರ ಬರೆದಿದ್ದು, ಡಿಕೆ ಬ್ರದರ್ಸ್ ದಲಿತರನ್ನು ಕುಣಿಗಲ್ ನಲ್ಲಿ ಕಡೆಗಣಿಸುತ್ತಿದ್ದಾರೆ ಎನ್ನುವ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

    ದಲಿತರೆಲ್ಲಾ ಒಂದಾಗಿದ್ದೇವೆ. ನಮ್ಮಲ್ಲಿ ಒಡಕಿಲ್ಲ ಹಾಗೂ ಡಿ.ಕೆ ಬ್ರದರ್ಸ್ ನಮ್ಮನ್ನು ಕಡೆಗಣಿಸಿಲ್ಲ. ನಮ್ಮ ರಕ್ತದಲ್ಲಿ ಬರೆದು ನಿಮಗೆ ಕಳುಹಿಸುತ್ತಿದ್ದೇವೆ ಎಂದು ದಲಿತ ಮುಖಂಡ ರಂಗನಾಥ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಡಿಕೆ ಬ್ರದರ್ಸ್ ದಲಿತರನ್ನು ಕಡೆಗಣಿಸಿದ್ದಾರೆ ಎಂದು ಮಾಜಿ ಶಾಸಕ ರಾಮಸ್ವಾಮಿ ಗೌಡ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದಲಿತ ಮುಖಂಡ ರಕ್ತದಲ್ಲಿ ಪತ್ರ ಬರೆದಿದ್ದಾರೆ.