Tag: ದಲಿತ ಬಾಲಕ

  • ಶಿಕ್ಷಕನಿಂದ ಥಳಿಸಲ್ಪಟ್ಟಿದ್ದ ದಲಿತ ಬಾಲಕ ಸಾವು – ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

    ಶಿಕ್ಷಕನಿಂದ ಥಳಿಸಲ್ಪಟ್ಟಿದ್ದ ದಲಿತ ಬಾಲಕ ಸಾವು – ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಔರೈಯಾ ಜಿಲ್ಲೆಯಲ್ಲಿ ಶಾಲೆಯ ಶಿಕ್ಷಕನಿಂದ (Teacher) ಥಳಿಸಲ್ಪಟ್ಟಿದ್ದ 15 ವರ್ಷದ ದಲಿತ ಬಾಲಕ (Dalit Boy) ಸಾವನ್ನಪ್ಪಿದ್ದು, ಇದೀಗ ಭಾರೀ ಪ್ರತಿಭಟನೆಗೆ (Protest) ಕಾರಣವಾಗಿದೆ.

    ಸೆಪ್ಟೆಂಬರ್ 7 ರಂದು ಬಾಲಕ ನಿಖಿತ್ ದೋಹ್ರೆ ಶಾಲೆಯಲ್ಲಿ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕಾಗಿ ಶಿಕ್ಷಕ ಅಶ್ವಿನಿ ಸಿಂಗ್ ಆತನಿಗೆ ಥಳಿಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಶನಿವಾರ ಆತನನ್ನು ನೆರೆಯ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆತ ಸಾವನ್ನಪ್ಪಿದ್ದಾನೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಆತನ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

    ಇದೀಗ ತಲೆಮರೆಸಿಕೊಂಡಿರುವ ಶಿಕ್ಷಕನನ್ನು ತಕ್ಷಣವೇ ಬಂಧಿಸಬೇಕೆಂದು ಬಾಲಕನ ಕುಟುಂಬ ಹಾಗೂ ಭೀಮ್ ಆರ್ಮಿ ಸಂಘಟನೆಯ ಸದಸ್ಯರು ಒತ್ತಾಯಿಸಿದ್ದಾರೆ. ಆರಂಭದಲ್ಲಿ ಬಾಲಕನ ಅಂತ್ಯಸಂಸ್ಕಾರ ಮಾಡಲು ಕುಟುಂಬ ನಿರಾಕರಿಸಿ, ಆತ ಓದಿದ್ದ ಶಾಲೆಯ ಬಳಿಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಈದ್ಗಾದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಸಂಘಟನೆಗಳ ಪಟ್ಟು

    ಇದೀಗ ಪ್ರತಿಭಟನೆ ಹಿಂಸಾಚಾರಕ್ಕೆ (Violence) ತಿರುಗಿದ್ದು, ಕೆಲ ಸ್ಥಳೀಯರು ಪೊಲೀಸ್ ಜೀಪ್‌ಗೆ ಬೆಂಕಿ ಹಚ್ಚಿದ್ದಾರೆ. ಮಾತ್ರವಲ್ಲದೇ ಪೊಲೀಸರ ಮೇಲೂ ಕಲ್ಲುತೂರಾಟ ನಡೆಸಿದ್ದಾರೆ.

    ಘಟನೆಯ ಬಗ್ಗೆ ತಿಳಿದು ಹಿರಿಯ ಪೊಲೀಸ್ ಮತ್ತು ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತ್ವರಿತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಬಳಿಕ ಬಾಲಕನ ಕುಟುಂಬ ಮತ್ತು ಭೀಮ್ ಆರ್ಮಿ ಸದಸ್ಯರು ಶವಸಂಸ್ಕಾರಕ್ಕಾಗಿ ನಿಖಿತ್‌ನ ಮೃತದೇಹವನ್ನು ಅವರ ಗ್ರಾಮಕ್ಕೆ ಕೊಂಡೊಯ್ದಿದ್ದಾರೆ.

    ಇದೀಗ ತಲೆಮರೆಸಿಕೊಂಡಿರುವ ಶಿಕ್ಷಕನ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದು, ಶೀಘ್ರವೇ ಆಕೆಯನ್ನು ಬಂಧಿಸಲಾಗಿವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನಕ್ಕೆ ಬಡಿದ ಪಕ್ಷಿ – ಕಣ್ಣೂರಿನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್

    Live Tv
    [brid partner=56869869 player=32851 video=960834 autoplay=true]

  • ದಲಿತ ಬಾಲಕನಿಗೆ ಸವರ್ಣೀಯರಿಂದ ದಂಡ- ಧರ್ಮ ಗ್ರಂಥಗಳು ಇದನ್ನು ಒಪ್ಪಲ್ಲ: ಪೇಜಾವರ ಶ್ರೀ

    ದಲಿತ ಬಾಲಕನಿಗೆ ಸವರ್ಣೀಯರಿಂದ ದಂಡ- ಧರ್ಮ ಗ್ರಂಥಗಳು ಇದನ್ನು ಒಪ್ಪಲ್ಲ: ಪೇಜಾವರ ಶ್ರೀ

    ಉಡುಪಿ: ಮಾಲೂರಿನಲ್ಲಿ ಉತ್ಸವದ ಸಂದರ್ಭ ಪಲ್ಲಕ್ಕಿ ಮುಟ್ಟಿದ್ದಕ್ಕೆ ಸವರ್ಣೀಯರಿಂದ (Upper Caste) ದಲಿತ ಬಾಲಕನಿಗೆ (Dalit Boy) ಬಹಿಷ್ಕಾರ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ (Udupi) ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ (Pejavara Shree) ತೀವ್ರ ಖೇದ ವ್ಯಕ್ತಪಡಿಸಿದರು.

    ಈ ಘಟನೆಯನ್ನು ಕೇಳಿ ನಮಗೆ ಬಹಳ ಖೇದವಾಗಿದೆ. ಧರ್ಮ ಗ್ರಂಥಗಳು ಇಂತಹ ಬೆಳವಣಿಗೆಯನ್ನು ಒಪ್ಪುವುದಿಲ್ಲ. ಉತ್ಸವ ಇಡೀ ಊರಿಗೆ ಸಂಬಂಧಿಸಿದ ಕಾರ್ಯಕ್ರಮ. ಬಹಿಷ್ಕಾರ ಶಿಕ್ಷೆ ದಂಡವನ್ನು ಯಾವ ಧರ್ಮ ಗ್ರಂಥವೂ ಒಪ್ಪುವುದಿಲ್ಲ. ಹಿಂದೂ ಸಂಘಟನೆಗಳು ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುತ್ತಿದೆ. ಸರ್ಕಾರ ಕೂಡ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

    ತಪ್ಪು ಮಾಡಿದವರನ್ನು ಶಿಕ್ಷಿಸಿದರೆ ಸಾಲದು, ಜಾಗೃತ ಕಾರ್ಯಕ್ರಮ ಆಗಬೇಕು. ಸಮಾಜ ಮತ್ತು ಧರ್ಮ ಒಪ್ಪದ ಚಟುವಟಿಕೆಗಳಿಗೆ ಯಾರೂ ಇಳಿಯಬಾರದು ಎಂದು ಪೇಜಾವರ ಶ್ರೀಗಳು ಹೇಳಿದರು. ಇದನ್ನೂ ಓದಿ: ದಲಿತ ಬಾಲಕ ದೇವರ ಮೂರ್ತಿ ಮುಟ್ಟಿದ್ದಕ್ಕೆ 60 ಸಾವಿರ ರೂ. ದಂಡ ಹಾಕಿದ ಗ್ರಾಮಸ್ಥರು

    ಶಿವಮೊಗ್ಗಕ್ಕೆ ಉಗ್ರರ ಪ್ರವೇಶವಾಗಿದೆ ಎಂದು ಕೇಳಿ ನಮಗೆ ಆಘಾತವಾಗಿದೆ. ಮಂಗಳೂರು, ಉಡುಪಿ ಭಾಗದಲ್ಲೂ ಇಂತಹ ಚಟುವಟಿಕೆ ನಡೆದಿದೆ. ಸ್ಯಾಟಲೈಟ್ ಫೋನ್‌ಗಳ ಮೂಲಕ ಸಂಭಾಷಣೆ ನಡೆಯುವುದು ನಮ್ಮ ಗಮನಕ್ಕೆ ಬಂದಿತ್ತು. ನಿಖರವಾದ ಮಾಹಿತಿಗಳ ಜೊತೆಗೆ ಇದನ್ನು ಪರಿಶೀಲನೆ ಮಾಡಬೇಕು. ಪ್ರಕರಣದಲ್ಲಿ ಹತ್ತು ಹಲವು ಜನ ಭಾಗಿ ಆಗಿರುವ ಸಾಧ್ಯತೆ ಇದೆ ಎಂದು ಪೇಜಾವರ ಶ್ರೀ ಸಂಶಯ ವ್ಯಕ್ತಪಡಿಸಿದರು.

    ಉಗ್ರರ ವಿರುದ್ಧ ಕೂಂಬಿಂಗ್ ಮಾದರಿಯಲ್ಲಿ ಪರಿಶೀಲನೆ ಆಗಬೇಕು. ಸಮಾಜದ ಶಾಂತಿ ಕದಡುವುದನ್ನು ತಪ್ಪಿಸಬೇಕು. ಉಗ್ರರಿಂದ ಸಮಾಜದಲ್ಲಿ ಯಾರಿಗೂ ನೆಮ್ಮದಿ ಇಲ್ಲ. ಸಮಾಜದ ಶಾಂತಿ ಕದಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮವಾಗಲಿ. ಯಾವುದೇ ಕೋಮಿನ ಬಣ್ಣ ನೀಡದೆ ಇದನ್ನು ನಿಗ್ರಹ ಮಾಡಬೇಕು. ಭಾರತ ದೇಶದ ಒಳಗೆ ಇರುವವರು ಭಾರತೀಯರು ದೇಶದ ಯಾವುದೇ ಭಾಗದಲ್ಲಿ ಉಗ್ರರ ಕರಿನೆರಳು ಹಾಯಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಹಾಸ್ಟೆಲ್‍ನ ಕಿಟಕಿ ರಾಡ್ ಮುರಿದು ಮೂವರು ವಿದ್ಯಾರ್ಥಿನಿಯರು ಪರಾರಿ

    Live Tv
    [brid partner=56869869 player=32851 video=960834 autoplay=true]

  • ಮೃತ ದಲಿತ ಬಾಲಕನ ಕುಟುಂಬದವರನ್ನು ಭೇಟಿಯಾಗಲು ಹೊರಟಿದ್ದ ಚಂದ್ರಶೇಖರ್‌ ಆಜಾದ್‌ ಬಂಧನ

    ಮೃತ ದಲಿತ ಬಾಲಕನ ಕುಟುಂಬದವರನ್ನು ಭೇಟಿಯಾಗಲು ಹೊರಟಿದ್ದ ಚಂದ್ರಶೇಖರ್‌ ಆಜಾದ್‌ ಬಂಧನ

    ಜೈಪುರ: ಕಳೆದ ತಿಂಗಳು ರಾಜಸ್ಥಾನದಲ್ಲಿ ಶಿಕ್ಷಕನಿಂದ ಹತ್ಯೆಗೀಡಾದ ದಲಿತ ಬಾಲಕನ ಕುಟುಂಬವನ್ನು ಭೇಟಿಯಾಗಲು ಹೋಗುತ್ತಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಜೋಧ್‌ಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.

    ಬಂಧನಕ್ಕೊಳಗಾದಾಗ ಚಂದ್ರಶೇಖರ್ ಆಜಾದ್ ರಾಜಸ್ಥಾನದ ಜಲೋರ್‌ಗೆ ತೆರಳುತ್ತಿದ್ದರು. ಈ ಹತ್ಯೆಯು ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಭಾರೀ ಆಕ್ರೋಶ ಮತ್ತು ರಾಜಕೀಯ ಹಿನ್ನಡೆಯನ್ನು ಉಂಟುಮಾಡಿದೆ. ಇದನ್ನೂ ಓದಿ: ಪಾತ್ರೆಯಲ್ಲಿದ್ದ ನೀರು ಕುಡಿದ ದಲಿತ ಬಾಲಕನಿಗೆ ಥಳಿಸಿ ಕೊಂದ ಶಿಕ್ಷಕ

    ಜುಲೈ 20 ರಂದು ಒಂಬತ್ತು ವರ್ಷದ ದಲಿತ ಸಮುದಾಯದ ಬಾಲಕ, ಮೇಲ್ಜಾತಿಯವರು ಬಳಸುವ ಪಾತ್ರೆಯಲ್ಲಿ ನೀರು ಕುಡಿದ ಕಾರಣಕ್ಕೆ ಶಿಕ್ಷಕನಿಂದ ಥಳಿಸಲ್ಪಟ್ಟು ಸಾವನ್ನಪ್ಪಿದ್ದ. ಥಳಿತದಿಂದಾಗಿ ಮಗುವಿನ ಕಣ್ಣು ಮತ್ತು ಕಿವಿಗೆ ಗಾಯವಾಗಿತ್ತು. ಗುಜರಾತ್‌ನ ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಬಾಲಕ ನಿಧನ ಹೊಂದಿದ್ದ.

    ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. ಶಿಕ್ಷಕನ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಭಾರತದ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟು ಸಮುದಾಯದವರನ್ನು ರಕ್ಷಿಸುವ ಕಟ್ಟುನಿಟ್ಟಿನ ಕಾನೂನಿನಡಿಯಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ದಲಿತ ವಿದ್ಯಾರ್ಥಿ ಸಾವಿನಿಂದ ಮನನೊಂದು ಕಾಂಗ್ರೆಸ್ ಶಾಸಕ ರಾಜೀನಾಮೆ

    Live Tv
    [brid partner=56869869 player=32851 video=960834 autoplay=true]

  • ದಲಿತ ಬಾಲಕನ ಸಾವಿನಿಂದ ಹೆಚ್ಚಿದ ಕಾವು – ಕಾಂಗ್ರೆಸ್‌ನ 12 ಕೌನ್ಸಿಲರ್‌ಗಳು ದಿಢೀರ್ ರಾಜೀನಾಮೆ

    ದಲಿತ ಬಾಲಕನ ಸಾವಿನಿಂದ ಹೆಚ್ಚಿದ ಕಾವು – ಕಾಂಗ್ರೆಸ್‌ನ 12 ಕೌನ್ಸಿಲರ್‌ಗಳು ದಿಢೀರ್ ರಾಜೀನಾಮೆ

    ಜೈಪುರ: ಶಾಲಾ ಶಿಕ್ಷಕರಿಂದ ಥಳಿತಕ್ಕೊಳಗಾಗಿ ಮೃತಪಟ್ಟಿರುವ ಘಟನೆಯಿಂದ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಉನ್ನತ ಸ್ಥಾನದಲ್ಲಿರುವವರೇ ರಾಜೀನಾಮೆ ನೀಡುತ್ತಿದ್ದಾರೆ.

    ನಿನ್ನೆ ಸಂಜೆ ಜೈಪುರದ ಬರನ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕ ಮನನೊಂದು ರಾಜೀನಾಮೆ ನೀಡಿದ್ದರು. ಈ ಬೆನ್ನಲ್ಲೇ ಪಕ್ಷದ ಶಾಸಕ ಪಾನ್‌ಚಂದ್ ಮೇಘವಾಲ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಇಂದು ಬರನ್‌ನ 25 ಕಾಂಗ್ರೆಸ್ ಕೌನ್ಸಿಲರ್‌ಗಳ ಪೈಕಿ 12 ಮಂದಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಇದನ್ನೂ ಓದಿ: ದಲಿತ ವಿದ್ಯಾರ್ಥಿ ಸಾವಿನಿಂದ ಮನನೊಂದು ಕಾಂಗ್ರೆಸ್ ಶಾಸಕ ರಾಜೀನಾಮೆ

    ಏನಿದು ಪ್ರಕರಣ?
    ಮಡಿಕೆಯಲ್ಲಿದ್ದ ನೀರು ಕುಡಿದಿದ್ದಕ್ಕಾಗಿ ಇಲ್ಲಿನ ಖಾಸಗಿ ಶಾಲೆಯ ಶಿಕ್ಷಕರೊಬ್ಬರು 9 ವರ್ಷದ ಪರಿಶಿಷ್ಟ ಜಾತಿಯ ಬಾಲಕ ಇಂದ್ರ ಮೇಘವಾಲ್‌ನನ್ನು ಹೊಡೆದಿದ್ದರು. ಇದರಿಂದ ಬಾಲಕ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದ. ಜುಲೈ 20ರಂದು ಬಾಲಕನ ಮೇಲೆ ಹಲ್ಲೆ ನಡೆದಿತ್ತು. ಬಾಲಕನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ಘೋಷಿಸಲಾಗಿತ್ತು. ಇದನ್ನೂ ಓದಿ: ಸೂರ್ಯನ ಅರ್ಧ ಆಯಸ್ಸು ಮುಕ್ತಾಯ – ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ವರದಿಯಲ್ಲಿ ಏನಿದೆ?

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಶಾಸಕರೊಬ್ಬರು ರಾಜೀನಾಮೆ ಸಲ್ಲಿಸಿದ್ದರು. ಅವರ ನಿರ್ಧಾರವನ್ನು ಬೆಂಬಲಿಸಿ ಕೌನ್ಸಿಲರ್‌ಗಳಾದ ಯೋಗೇಂದ್ರ ಮೆಹ್ತಾ, ರೋಹಿತಾಶ್ವ ಸಕ್ಸೇನಾ, ರಾಜಾರಾಮ್ ಮೀನಾ, ರೇಖಾ ಮೀನಾ, ಲೀಲಾಧರ್ ನಗರ್, ಹರಿರಾಜ್ ಎರ್ವಾಲ್, ಪಿಯೂಷ್ ಸೋನಿ, ಊರ್ವಶಿ ಮೇಘವಾಲ್, ಯಶವಂತ್ ಯಾದವ್, ಅನ್ವರ್ ಅಲಿ, ಜ್ಯೋತಿ ಜಾತವ್ ಮತ್ತು ಮಯಾಂಕ್ ಮಾಥೋಡಿಯಾ ರಾಜೀನಾಮೆ ನೀಡಿದ್ದಾರೆ. ರಾಜಸ್ಥಾನದಲ್ಲಿ ದಲಿತರು ಹಾಗೂ ಶೋಷಿತ ವರ್ಗಗಳ ಮೇಲಿನ ದೌರ್ಜನ್ಯ ಕಂಡು ಮನನೊಂದು ರಾಜೀನಾಮೆ ನೀಡಲಾಗಿದೆ. ನಾವು ಬುಧವಾರ ಕೋಟಾ ವಿಭಾಗೀಯ ಕೌನ್ಸಿಲರ್‌ಗೆ ನಮ್ಮ ರಾಜೀನಾಮೆ ಪ್ರತಿಗಳನ್ನು ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಲಿತ ವಿದ್ಯಾರ್ಥಿ ಸಾವಿನಿಂದ ಮನನೊಂದು ಕಾಂಗ್ರೆಸ್ ಶಾಸಕ ರಾಜೀನಾಮೆ

    ದಲಿತ ವಿದ್ಯಾರ್ಥಿ ಸಾವಿನಿಂದ ಮನನೊಂದು ಕಾಂಗ್ರೆಸ್ ಶಾಸಕ ರಾಜೀನಾಮೆ

    ಜೈಪುರ: ತನ್ನ ಕ್ಷೇತ್ರ ವ್ಯಾಪ್ತಿಯಲ್ಲೇ ಶಾಲಾ ಶಿಕ್ಷಕರಿಂದ ಥಳಿತಕ್ಕೊಳಗಾಗಿ ಮೃತಪಟ್ಟಿರುವ ಘಟನೆಯಿಂದ ಮನನೊಂದಿರುವ ಕಾಂಗ್ರೆಸ್ ಶಾಸಕ ಪಾನ್‌ಚಂದ್ ಮೇಘವಾಲ್ ತನ್ನ ವಿಧಾನ ಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ರಾಜಾಸ್ಥಾನ ಮುಖ್ಯಮಂತ್ರಿ ಹಾಗೂ ವಿಧಾನಸಭಾ ಸ್ಪೀಕರ್ ಸಿ.ಪಿ ಜೋಶಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ದಲಿತ ವಿದ್ಯಾರ್ಥಿಯ ಸಾವಿನಿಂದ ನೋವಾಗಿದೆ ಎಂದೂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪಾನ್‌ಚಂದ್ ಮೇಘವಾಲ್ ಎರಡು ಬಾರಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದಾರೆ. ಇದನ್ನೂ ಓದಿ:  ಡ್ರಗ್ಸ್ ಸೇವಿಸಿ ಕಾರು ಅಪಘಾತ ಮಾಡಿಕೊಂಡಿದ್ದ ಖ್ಯಾತ ನಟಿ ಕೊನೆಗೂ ಉಳಿಯಲಿಲ್ಲ: ನಟಿಯ ನಿಧನಕ್ಕೆ ಹಾಲಿವುಡ್ ಕಂಬನಿ

    ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ರೂಪಾಯಿ ಆರ್ಥಿಕ ನೆರವು ಹಾಗೂ ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವಂತೆ ನಾನು ಒತ್ತಾಯಿಸಿದ್ದೇನೆ. 24 ಗಂಟೆ ಕಳೆದರೂ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದರಿಂದ ರಾಜೀನಾಮೆ ನೀಡಿರುವುದಾಗಿ ಶಾಸಕ ತಿಳಿಸಿದ್ದಾರೆ.

    ದೇಶವು ಸ್ವಾತಂತ್ರ‍್ಯ ಪಡೆದು 75 ವರ್ಷ ಪೂರೈಸಿ, ಅಮೃತ ಮಹೋತ್ಸವ ಆಚರಿಸಿದೆ. ಇಷ್ಟು ವರ್ಷಗಳ ನಂತರವೂ ದಲಿತರ ಹಾಗೂ ಶೋಷಿತ ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ತನಗೆ ತೀವ್ರ ನೋವುಂಟು ಮಾಡಿವೆ. ದಲಿತರ ಮೇಲಿನ ದೌರ್ಜನ್ಯದ ಹೆಚ್ಚಿನ ಪ್ರಕರಣಗಳಲ್ಲಿ ಅಂತಿಮ ವರದಿ ಸಲ್ಲಿಸಿದರೂ ಯಾವುದೇ ಕ್ರಮ ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಖಿ ಕಟ್ಟಿಸಿಕೊಳ್ಳಲು ಸಹೋದರಿ ಮನೆಗೆ ಹೊರಟ್ಟಿದ್ದವನ ಜೀವ ತೆಗೆದ ಗಾಳಿಪಟ ದಾರ

    ನಮ್ಮ ಸಮಾಜದ ಹಕ್ಕುಗಳನ್ನು ರಕ್ಷಿಸಲು ನಾವು ವಿಫಲರಾದಾಗ ಅಧಿಕಾರದಲ್ಲಿವುದರಲ್ಲಿ ಯಾವುದೇ ಅರ್ಥವಿಲ್ಲ. ನನ್ನ ಆತ್ಮಸಾಕ್ಷಿಯಂತೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಯಾವುದೇ ಹುದ್ದೆಗಳ ಹಂಗಿಲ್ಲದೆ ಸಮಾಜದ ಶೋಷಿತ ವರ್ಗದ ಪರವಾಗಿ ಹೋರಾಡುವ ಸಲುವಾಗಿ ನನ್ನ ರಾಜೀನಾಮೆ ಅಂಗೀಕರಿಸಿ ಎಂದು ಮನವಿ ಮಾಡಿದ್ದಾರೆ.

    ಏನಿದು ಘಟನೆ?
    ಕುಡಿಯುವ ನೀರಿನ ಮಡಿಕೆ ಮುಟ್ಟಿದ್ದರ ಕಾರಣಕ್ಕಾಗಿ ಖಾಸಗಿ ಶಾಲೆಯ ಶಿಕ್ಷಕರೊಬ್ಬರು 9 ವರ್ಷದ ಪರಿಶಿಷ್ಟ ಜಾತಿಯ ಬಾಲಕ ಇಂದ್ರ ಮೇಘವಾಲ್‌ನನ್ನು ಹೊಡೆದಿದ್ದರು. ಇದರಿಂದ ಬಾಲಕ ಕಳೆದ ಶನಿವಾರ ಅಂದ್ರೆ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದ. ಜುಲೈ 20ರಂದು ಬಾಲಕನ ಮೇಲೆ ಹಲ್ಲೆ ನಡೆದಿತ್ತು. ಬಾಲಕನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ಘೋಷಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಅಪ್ರಾಪ್ತ ದಲಿತ ಬಾಲಕನಿಂದ ಕಾಲು ನೆಕ್ಕಿಸಿಕೊಂಡ ಕಿಡಿಗೇಡಿಗಳು – ವೀಡಿಯೋ ವೈರಲ್

    ಅಪ್ರಾಪ್ತ ದಲಿತ ಬಾಲಕನಿಂದ ಕಾಲು ನೆಕ್ಕಿಸಿಕೊಂಡ ಕಿಡಿಗೇಡಿಗಳು – ವೀಡಿಯೋ ವೈರಲ್

    ಲಕ್ನೋ: ದಲಿತ ಸಮುದಾಯದ ಅಪ್ರಾಪ್ತ ಬಾಲಕನ ಮೇಲೆ ಮೇಲ್ಜಾತಿಯ ದುಷ್ಕರ್ಮಿಗಳು ಹಲ್ಲೆ ನಡೆಸಿ, ಅವರಲ್ಲಿ ಓರ್ವ ಬಾಲಕನಿಗೆ ಕಾಲು ನೆಕ್ಕಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    2 ನಿಮಿಷ 30 ಸೆಕೆಂಡ್‍ಗಳಿರುವ ಈ ವೀಡಿಯೋದಲ್ಲಿ ಬಾಲಕ ತನ್ನ ಕಿವಿಗಳ ಮೇಲೆ ಕೈಯಿಟ್ಟು ನೆಲದ ಮೇಲೆ ಮಂಡಿಯೂರಿ ಕುಳಿತಿರುವುದನ್ನು ಕಾಣಬಹುದಾಗಿದೆ. ಇದೇ ವೇಳೆ ಕಿಡಿಗೇಡಿಯೋರ್ವ ಮೋಟಾರ್ ಬೈಕ್ ಮೇಲೆ ಕುಳಿತು ತನ್ನ ಕಾಲು ನೆಕ್ಕುವಂತೆ ಹೇಳಿದ ತಕ್ಷಣ ಬಾಲಕ ನಡುಗುತ್ತಲೆ ಆತನ ಬಳಿ ಹೋಗಿ ಕಾಲನ್ನು ನೆಕ್ಕಿದ್ದಾನೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ರಾಯ್ಬರೇಲಿ ಪೊಲೀಸರು ಆರು ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಅಪಘಾತವಾದರೆ ರಸ್ತೆ ಅಗೆದವರೆ ಹೊಣೆ – ಬಿಬಿಎಂಪಿಯಿಂದ ಆದೇಶ

    ಈ ವಿಚಾರವಾಗಿ ಪ್ರತಿಕ್ರಿಯಿಸಿದ ರಾಯ್ಬರೇಲಿ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ಅವರು, ಪ್ರಕರಣದ ಪ್ರಮುಖ ಆರೋಪಿ ಅಪ್ರಾಪ್ತ ವಯಸ್ಕನಾಗಿದ್ದು, ಆತನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ ಮತ್ತು ಉಳಿದಂತೆ ಅಭಿಷೇಕ್, ವಿಕಾಸ್ ಪಾಸಿ, ಮಹೇಂದ್ರ ಕುಮಾರ್, ಹೃತಿಕ್ ಸಿಂಗ್, ಅಮನ್ ಸಿಂಗ್ ಮತ್ತು ಯಶ್ ಪ್ರತಾಪ್‍ನನ್ನು ಸಹ ಬಂಧಿಸಲಾಗಿದೆ. ಹತ್ತನೇ ತರಗತಿಯ ದಲಿತ ವಿದ್ಯಾರ್ಥಿ ಕಾಲು ನೆಕ್ಕುವಂತೆ ಮಾಡಿದ ಇತರ ಆರೋಪಿಗಳ ಹುಡುಕಾಟವನ್ನು ಇನ್ನೂ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈ ವರ್ಷದಿಂದಲೇ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ: ಬಿಸಿ ನಾಗೇಶ್