Tag: ದಲಿತ ನಾಯಕ

  • ದಲಿತ ಅಂತಾ ನನ್ನನ್ನು ಕಡೆಗಣಿಸಿದ್ದಾರೆ; ಯೋಗಿ ಸರ್ಕಾರದ ವಿರುದ್ಧ ಆರೋಪ – ಸಚಿವ ರಾಜೀನಾಮೆ

    ದಲಿತ ಅಂತಾ ನನ್ನನ್ನು ಕಡೆಗಣಿಸಿದ್ದಾರೆ; ಯೋಗಿ ಸರ್ಕಾರದ ವಿರುದ್ಧ ಆರೋಪ – ಸಚಿವ ರಾಜೀನಾಮೆ

    ಲಕ್ನೋ: ಎರಡನೇ ಬಾರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಯೋಗಿ ಆದಿತ್ಯನಾಥ್‌ ನೇತೃತ್ವದ ಸಂಪುಟಕ್ಕೆ ಈಗ ಸಂಕಷ್ಟ ಎದುರಾಗಿದೆ. ಯೋಗಿ ಸರ್ಕಾರದ ಸಚಿವ ಸಂಪುಟದ ಸಚಿವರೊಬ್ಬರು ರಾಜೀನಾಮೆ ನೀಡಿದ್ದಾರೆ. ಮತ್ತೊಬ್ಬರು ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.

    ʼದಲಿತ ಅಂತಾ ನನ್ನನ್ನು ಕಡೆಗಣಿಸಿದ್ದಾರೆʼ ಎಂದು ಎಂದು ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿರುವ ಸಚಿವ ದಿನೇಶ್‌ ಕಾರ್ತಿಕ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: Sena vs Sena: ಉದ್ಧವ್ ಶಿಬಿರಕ್ಕೆ ತಕ್ಷಣದ ಪರಿಹಾರವಿಲ್ಲ, ಆಗಸ್ಟ್ 1 ರಂದು ಮುಂದಿನ ವಿಚಾರಣೆ: ಕೋರ್ಟ್

    ಕಳೆದ 100 ದಿನಗಳಲ್ಲಿ ನನಗೆ ಯಾವುದೇ ಕೆಲಸ, ಜವಾಬ್ದಾರಿ ವಹಿಸಿಲ್ಲ. ನನಗೆ ತುಂಬಾ ನೋವಾಗಿದೆ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಯುಪಿ ಜಲ ಸಂಪನ್ಮೂಲ ಸಚಿವ ಕಾರ್ತಿಕ್‌ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಉತ್ತರ ಪ್ರದೇಶದ ಜಲಸಂಪನ್ಮೂಲ ಸಚಿವ ಕಾರ್ತಿಕ್ ಅವರು ತಮ್ಮ ಪತ್ರದಲ್ಲಿ 100 ದಿನಗಳ ಕಾಲ ಯಾವುದೇ ಕೆಲಸವನ್ನು ನಿಯೋಜಿಸಿಲ್ಲ ಎಂದು ಹೇಳಿದ್ದಾರೆ. ಇಲಾಖಾ ವರ್ಗಾವಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಪತ್ರದಲ್ಲಿ ನೋಯುತ್ತಿರುವ ಕಾರಣ ರಾಜೀನಾಮೆ ನೀಡುತ್ತಿದ್ದೇನೆ.

    ನಾನು ದಲಿತ ಎಂಬ ಕಾರಣಕ್ಕೆ ನನಗೆ ಯಾವುದೇ ಪ್ರಾಮುಖ್ಯತೆ ನೀಡಿಲ್ಲ. ಸಚಿವನಾಗಿ ನನಗೆ ಯಾವುದೇ ಅಧಿಕಾರವಿಲ್ಲ. ನಾನು ರಾಜ್ಯದ ಸಚಿವನಾಗಿ ಕೆಲಸ ಮಾಡುವುದು ದಲಿತ ಸಮುದಾಯಕ್ಕೆ ವ್ಯರ್ಥ. ನನ್ನನ್ನು ಯಾವುದೇ ಸಭೆಗೆ ಕರೆದಿಲ್ಲ. ನನ್ನ ಸಚಿವಾಲಯದ ಬಗ್ಗೆ ಏನನ್ನೂ ಹೇಳಿಲ್ಲ. ಇದು ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಂದು ಟ್ವೀಟ್‌ಗೆ 12 ಲಕ್ಷ, ಇನ್ನೊಂದಕ್ಕೆ 2 ಕೋಟಿ: ಜುಬೇರ್‌ ವಿರುದ್ಧ ಯುಪಿ ಸರ್ಕಾರ ಸ್ಫೋಟಕ ಆರೋಪ

    ಲೋಕೋಪಯೋಗಿ ಸಚಿವ ಜಿತಿನ್ ಪ್ರಸಾದ ಅವರು ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ತಂಡದ ಅಧಿಕಾರಿಯೊಬ್ಬರನ್ನು ಮುಖ್ಯಮಂತ್ರಿ ಅಮಾನತು ಮಾಡಿರುವ ಬಗ್ಗೆ ಜಿತಿನ್ ಪ್ರಸಾದ ಕೋಪಗೊಂಡಿದ್ದಾರೆ. ಪ್ರಸಾದ ಅವರು ಕಳೆದ ವರ್ಷ ಯುಪಿ ಚುನಾವಣೆಗೆ ತಿಂಗಳುಗಳ ಮೊದಲು ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದರು.

    ಅಕ್ರಮಗಳ ಆರೋಪ ಹೊತ್ತಿದ್ದ ಐವರು ಹಿರಿಯ ಪಿಡಬ್ಲ್ಯೂಡಿ ಅಧಿಕಾರಿಗಳನ್ನು ಅಮಾನತುಗೊಳಿಸಿ ಯುಪಿ ಸರ್ಕಾರ ಆದೇಶ ಹೊರಡಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ದಲಿತ ನಾಯಕ ಎಂ.ಅರವಿಂದ್ AAP ಸೇರ್ಪಡೆ

    ದಲಿತ ನಾಯಕ ಎಂ.ಅರವಿಂದ್ AAP ಸೇರ್ಪಡೆ

    ಬೆಂಗಳೂರು: ದಲಿತ ನಾಯಕ ಎಂ.ಅರವಿಂದ್‌ ಅವರು ಆಮ್‌ ಆದ್ಮಿ ಪಕ್ಷವನ್ನು (AAP) ಸೇರ್ಪಡೆಯಾದರು.

    ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ಅರವಿಂದ್‌ರವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಮೂರು ದಶಕಗಳಿಂದ ದಲಿತರು ಹಾಗೂ ಶೋಷಿತರ ಧ್ವನಿಯಾಗಿ ಹೋರಾಡುತ್ತಿರುವ ಎಂ.ಅರವಿಂದ್‌ ಅವರ ಸೇರ್ಪಡೆಯಿಂದ ರಾಜ್ಯದಲ್ಲಿ ಆಮ್‌ ಆದ್ಮಿ ಪಾರ್ಟಿಯು ಮತ್ತಷ್ಟು ಸದೃಢಗೊಂಡಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಕೆಲವು ಜಾತಿಗಳು ಹಾಗೂ ಧರ್ಮಗಳಿಗೆ ಸೀಮಿತವಾಗಿವೆ. ಆದರೆ ಎಎಪಿ ಜಾತಿ, ಧರ್ಮಗಳ ಭೇದವಿಲ್ಲದೇ ಎಲ್ಲರನ್ನೂ ಸಮಾನವಾಗಿ ನೋಡುತ್ತದೆ. ಒಬ್ಬ ಬಡ ದಲಿತನ ಮಗ ಹಾಗೂ ಉನ್ನತ ಅಧಿಕಾರಿಯ ಮಗ ಒಂದೇ ಶಾಲೆಯಲ್ಲಿ ಅಕ್ಕಪಕ್ಕ ಕುಳಿತು ಪಾಠ ಕಲಿಯುವಂತಾಗಬೇಕು ಎಂದು ಬಾಬಾಸಾಹೇಬ್‌ ಅಂಬೇಡ್ಕರ್‌ ಕನಸು ಕಂಡಿದ್ದರು. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಅಂಬೇಡ್ಕರ್‌ ಕನಸನ್ನು ದೆಹಲಿಯ ಎಎಪಿ ಸರ್ಕಾರ ನನಸು ಮಾಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಗೋವಾ ಮತದಾರರು ಕಾಂಗ್ರೆಸ್ ಸರ್ಕಾರ ತರಲು ಇಚ್ಛಿಸಿದ್ದಾರೆ: ಡಿ.ಕೆ ಶಿವಕುಮಾರ್

    ಎಂ.ಅರವಿಂದ್‌ ಮಾತನಾಡಿ, ಪಾರದರ್ಶಕತೆ, ಜನಪರ ಕಾಳಜಿ, ಸಮಾನತೆಯಲ್ಲಿ ನಂಬಿಕೆ ಹೊಂದಿರುವ ಹಾಗೂ ಇದನ್ನು ದೆಹಲಿಯಲ್ಲಿ ಸಾಧಿಸಿ ತೋರಿಸಿರುವ ಆಮ್‌ ಆದ್ಮಿ ಪಾರ್ಟಿಯಿಂದ ಮಾತ್ರ ದಲಿತರ ಪ್ರಗತಿ ಸಾಧ್ಯ. ಪಕ್ಷವು ಕರ್ನಾಟಕದಲ್ಲಿ ಬಲಗೊಂಡು ಶೀಘ್ರವೇ ಅಧಿಕಾರಕ್ಕೆ ಬರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇಲ್ಲದಿದ್ದರೆ ಭ್ರಷ್ಟ ಪಕ್ಷಗಳು ರಾಜ್ಯವನ್ನು ಲೂಟಿ ಮಾಡಿ ದಲಿತರು, ಬಡವರು, ಶೋಷಿತರು ಕಷ್ಟದಲ್ಲಿಯೇ ಬದುಕುವಂತೆ ಮಾಡುತ್ತವೆ ಎಂದು ತಿಳಿಸಿದರು.

    ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷರಾದ ಮೋಹನ್‌ ದಾಸರಿ ಮಾತನಾಡಿ, ರಾಜ್ಯವನ್ನಾಳಿದ ಮೂರೂ ಪಕ್ಷಗಳಿಂದ ದಲಿತರು ಸೇರಿದಂತೆ ಯಾರಿಗೂ ಏನೂ ಲಾಭವಿಲ್ಲ. ಅವೆಲ್ಲವೂ ತಮ್ಮ ನಾಯಕರ ಜೇಬು ತುಂಬಿಸಿಕೊಳ್ಳುವುದಕ್ಕಾಗಿಯೇ ಇರುವ ಪಕ್ಷಗಳು. ಇದನ್ನು ಅರ್ಥ ಮಾಡಿಕೊಂಡು ಎಲ್ಲ ವರ್ಗಗಳ ಜನರು ಆಮ್‌ ಆದ್ಮಿ ಪಾರ್ಟಿ ಸೇರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸರ್ಕಾರ ಒಂದೇ ವರ್ಷದಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ತೀನಿ ಎಂದಿದ್ದೆ: ಎಚ್‍ಡಿಕೆ

    1990ರ ದಶಕದಲ್ಲಿ ಹಲವು ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷರಾಗಿ ಸಮಾಜಮುಖಿ ಕೆಲಸ ಆರಂಭಿಸಿದ ಎಂ.ಅರವಿಂದ್‌ ಅವರು ನಂತರ ಭೀಮ್‌ ಮಾರ್ಚ್ ಸಂಘಟನೆ ಹಾಗೂ ಸಮತಾ ಸೈನಿಕ ದಳದ ಉನ್ನತ ಹುದ್ದೆ ಅಲಂಕರಿಸಿ ದಲಿತರ ಹಕ್ಕುಗಳಿಗಾಗಿ ಹೋರಾಡಿದ್ದರು. 1996ರಲ್ಲಿ ರಾಮ್ ವಿಲಾಸ್‌ ಪಾಸ್ವಾನ್‌ ಜೊತೆ ಗುರುತಿಸಿಕೊಂಡು, ಅವರ ನೇತೃತ್ವದ ದಲಿತ ಸೇನಾದ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಭೂಮಿಯಿಲ್ಲದವರಿಗೆ ಭೂಮಿ ಕೊಡಿಸುವ ಹೋರಾಟಗಾರರಾಗಿ, ಎಸ್‌ಸಿ-ಎಸ್‌ಟಿ ವಿಚಕ್ಷಣಾ ಸಮಿತಿಯ ಸದಸ್ಯರಾಗಿ, ರೈಲ್ವೆ ನೇಮಕಾತಿ ಮಂಡಳಿಯ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಕೊರೊನಾ ಸಮಯದಲ್ಲಿ ಕಲಘಟಗಿ, ಅಳ್ನಾವರ ಮತ್ತು ಧಾರವಾಡ ತಾಲೂಕುಗಳಲ್ಲಿ ಉಚಿತ ವೈದ್ಯಕೀಯ ನೆರವು ಕಲ್ಪಿಸಿ ನೆರವಾಗಿದ್ದರು.

    ಎಎಪಿಯ ಮುಖಂಡರಾದ ನಂಜಪ್ಪ ಕಾಳೇಗೌಡ, ಜಗದೀಶ್‌ ವಿ ಸದಂ, ವಿಜಯ್‌ ಶಾಸ್ತ್ರಿಮಠ್‌, ದರ್ಶನ್‌ ಜೈನ್‌, ಬಿ.ಟಿ.ನಾಗಣ್ಣ ಮತ್ತಿತರ ನಾಯಕರು, ಅರವಿಂದ್‌ ಅವರ ಆಪ್ತರು ಹಾಗೂ ಎಎಪಿ ಕಾರ್ಯಕರ್ತರು ಭಾವಹಿಸಿದ್ದರು. ಇದನ್ನೂ ಓದಿ: ಕನ್ನಡದಲ್ಲಿ ಮಾತಾಡೋಕೆ ಹೇಳಿ, ನಮಗೆ ಏನೂ ಅರ್ಥ ಆಗ್ತಿಲ್ಲ: ಪರಿಷತ್‌ ಕಲಾಪದಲ್ಲಿ ಗಲಾಟೆ