Tag: ದರ ಹೆಚ್ಚಳ

  • ಹೋಟೆಲ್‌ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ – ನಾಲಿಗೆ ಸುಡಲಿದೆ ಹೊಸ ದರ

    ಹೋಟೆಲ್‌ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ – ನಾಲಿಗೆ ಸುಡಲಿದೆ ಹೊಸ ದರ

    ಬೆಂಗಳೂರು: ಹೋಟೆಲ್‌ (Hotel) ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಬಿಸಿ ಬಿಸಿ ಕಾಫಿ ಕುಡಿಬೇಕು, ದೋಸೆ ತಿನ್ಬೇಕು ಅನ್ಕೊಂಡವ್ರಿಗೆ ಹೊಸ ದರ ನಾಲಿಗೆ ಸುಡಲಿದೆ. ಹೋಟೆಲ್‌ ತಿಂಡಿ-ತಿನಿಸು ಮತ್ತಷ್ಟು ದುಬಾರಿಯಾಗಲಿದೆ.

    ಹಾಲು, ಮೊಸರು, ತುಪ್ಪ ಬೆಲೆ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ತಟ್ಟಿದೆ. ಸದ್ದಿಲ್ಲದೆ ಹೋಟೆಲ್ ತಿಂಡಿ-ತಿನಿಸು ದರ ಹೆಚ್ಚಾಗಿದೆ. ಶೇ.15 ರಿಂದ 20 ರಷ್ಟು ದರ ಹೆಚ್ಚಳವಾಗಿದ್ದು, ಹೊಸ ದರದ ಫಲಕಗಳನ್ನು ಕೆಲ ಹೋಟೆಲ್‌ಗಳಲ್ಲಿ ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ: ಪಿಕ್ನಿಕ್ ಮುಗಿಸಿ ಬರ್ತಿದ್ದ ಬಸ್ ಪಲ್ಟಿ – ಇಬ್ಬರು ಶಾಲಾ ವಿದ್ಯಾರ್ಥಿಗಳ ದುರ್ಮರಣ

    ದಿನ ಬಳಕೆ ವಸ್ತುಗಳ ರೇಟ್ ಜಾಸ್ತಿ ಆಗಿರುವ ಹಿನ್ನೆಲೆ, ಕೆಲ ಹೋಟೆಲ್‌ಗಳಲ್ಲಿ ದರ ಏರಿಕೆ ಮಾಡಿದ್ದಾರೆ. ಕೆಲವು ಹೋಟೆಲ್‌ಗಳಲ್ಲಿ ದರ ಏರಿಕೆಗೆ ನಿರ್ಧರಿಸಲಾಗಿದೆ. ಚೈನೀಸ್, ನಾರ್ತಿಸ್ ತಿಂಡಿ ರೇಟ್ ಕೂಡ ಜಾಸ್ತಿಯಾಗಿದ್ದು, ಅದರ ಜೊತೆ ಜೊತೆಗೆ ತುಪ್ಪದ ರೇಟ್ ಸಹ ಜಾಸ್ತಿಯಾಗಿದೆ. ಗ್ಯಾಸ್ (Gas) ದರ 200 ರೂ. ಜಾಸ್ತಿ ಆಗಿದೆ, ಬಿಲ್ಡಿಂಗ್ ಮೇಲೆ ಜಿಎಸ್‍ಟಿಯಿಂದ (GST) ಹೊರೆ ಆಗ್ತಿದೆ. ಕಮರ್ಷಿಯಲ್ ಗ್ಯಾಸ್‍ಗೆ ಶೇ. 80 ಟ್ಯಾಕ್ಸ್ ಕಟ್ಟುತ್ತಿದ್ದೇವೆ. ಕಾರ್ಮಿಕರ ಅಭಾವವಿದೆ, ಮಾರುಕಟ್ಟೆಯಲ್ಲಿ ವಸ್ತುಗಳ ದರ ಜಾಸ್ತಿ ಆಗಿದೆ ಅಂತ ಹೋಟೆಲ್‌ ಮಾಲೀಕರು ಹೇಳುತ್ತಿದ್ದಾರೆ. ಇದನ್ನೂ ಓದಿ: ಐದೇ ನಿಮಿಷ ಸಾಕು – ಹುಳಿ ಅವಲಕ್ಕಿ ಮಾಡಿ ಸವಿಯಿರಿ

     

    ಮಧ್ಯಮ ಹೋಟೆಲ್‌ಗಳ ದರ:
    ರೈಸ್ ಬಾತ್: 30 ರಿಂದ 35-49 ರೂ.ಗೆ ಏರಿಕೆ., ಮಸಾಲ, ಸೆಟ್ ದೋಸೆ: 30 ರಿಂದ 40 ರೂ. ಏರಿಕೆ., ಹಾಫ್ ರೈಸ್: 25 ರಿಂದ 30 ರೂ. ಏರಿಕೆ., ಎರಡು ಚಪಾತಿ: 20 ರಿಂದ 30 ರೂ. ಏರಿಕೆ., ಪುಳಿಯೋಗರೆ: 30 ರಿಂದ 40 ರೂ. ಏರಿಕೆ., ಪೂರಿ: 30 ರಿಂದ 40 ರೂ. ಏರಿಕೆ., ಚಿತ್ರಾನ್ನ: 30 ರಿಂದ 35 ರೂ. ಏರಿಕೆ., ಅನ್ನ ಸಾಂಬಾರ್: 30 ರಿಂದ 35 ರೂ. ಏರಿಕೆ., ಮೊಸರನ್ನ: 30 ರಿಂದ 35 ರೂ. ಏರಿಕೆ., ಪರೋಟ: 30 ರಿಂದ 40 ರೂ. ಏರಿಕೆ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಪೆಟ್ರೋಲ್, ಡೀಸೆಲ್ ದರ ಹೆಚ್ಚಳ- ಬೈಕ್ ಹೊತ್ತು ಸಾಗಿದ ಕೈ ಕಾರ್ಯಕರ್ತರು

    ಪೆಟ್ರೋಲ್, ಡೀಸೆಲ್ ದರ ಹೆಚ್ಚಳ- ಬೈಕ್ ಹೊತ್ತು ಸಾಗಿದ ಕೈ ಕಾರ್ಯಕರ್ತರು

    ಧಾರವಾಡ: ದಿನೇ ದಿನೇ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಹೆಗಲ ಮೇಲೆ ಬೈಕ್ ಹೊತ್ತುಕೊಂಡು ಬರುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

    ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಬೈಕ್ ಹೊತ್ತು ತಂದ ಕೈ ಕಾರ್ಯಕರ್ತರು, ಕೇಂದ್ರ ಸರ್ಕಾರ ಸತತ 19 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಹೆಚ್ಚಳ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ ಆಡಳಿತ ನಡೆಸುತ್ತಿವೆ. ಬೆಲೆ ಹೆಚ್ಚಳ ಮಾಡುವ ಮುಖಾಂತರ ಕೇಂದ್ರ ಸರ್ಕಾರ ಬಡವರ ಹಾಗೂ ಮಧ್ಯಮ ವರ್ಗದ ಜನರ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಇದನ್ನು ಓದಿ: 19ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ!

    ಜಿಲ್ಲಾಧಿಕಾರಿ ಕಚೇರಿಗೆ ಬೈಕ್ ಗಳನ್ನು ಹೊತ್ತುಕೊಂಡು ಬರುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಕೂಡಲೇ ತೈಲ ಬೆಲೆ ಇಳಿಕೆ ಮಾಡುವಂತೆ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.

  • ಶೀಘ್ರವೇ ನಂದಿನಿ ಹಾಲಿನ ದರ ಏರಿಕೆ

    ಶೀಘ್ರವೇ ನಂದಿನಿ ಹಾಲಿನ ದರ ಏರಿಕೆ

    ಬೆಂಗಳೂರು: ಕೆಲವೇ ದಿನಗಳಲ್ಲಿ ನಂದಿನಿ ಹಾಲು-ಮೊಸರು ದರದಲ್ಲಿ 2 ರೂ. ಏರಿಯಾಗುವ ಸಾಧ್ಯತೆ ಇದೆ. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಇವತ್ತು ಸಭೆ ನಡೆಸಿದ್ದು, ದರ ಹೆಚ್ಚಳಕ್ಕೆ ಒಮ್ಮತದ ಒಪ್ಪಿಗೆ ಸಿಕ್ಕಿದೆ. ಇನ್ನೆರಡು ದಿನಗಳಲ್ಲಿ ಸಿಎಂ ಒಪ್ಪಿಗೆ ಪಡೆದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

    ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮೊದಲೇ ತತ್ತರಿಸಿರೋ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ನಷ್ಟದ ನೆಪವೊಡ್ಡಿ, ರೈತರಿಗೆ ಲಾಭ ನೀಡುತ್ತೇವೆ ಎಂಬ ಉದ್ದೇಶದಿಂದ ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್ ಮುಂದಾಗಿದೆ.

    ಖಾಸಗಿ ಡೈರಿ ಹಾಲಿನ ದರಕ್ಕೆ ಹೊಲಿಕೆ ಮಾಡಿದರೆ ನಂದಿನಿ ದರ ಕಡಿಮೆ ಇದೆ. ಮೂರು ವರ್ಷಗಳಿಂದ ಹಾಲಿನ ದರ ಏರಿಕೆಯಾಗಿಲ್ಲ. ಈಗಾಗಿ ಎಲ್ಲಾ ಒಕ್ಕೂಟದವರು ಹಾಲಿನ ದರ ಏರಿಕೆ ಮಾಡುವಂತೆ ತಿಳಿಸಿದ್ದಾರೆ. ನಂದಿನ ಹಾಲು, ಮೊಸರು ಸೇರಿದಂತೆ ನಂದಿನಿ ಹಾಲಿನ ಉತ್ಪನ್ನಗಳ ಹಾಲಿನ ದರ ಏರಿಕೆಯಾಗುವುದು ಬಹುತೇಕ ಖಚಿತ ಎಂಬ ಮಾಹಿತಿ ಲಭಿಸಿದೆ.

    ದರ ಏರಿಕೆ ಕುರಿತು ಕೆಎಂಎಫ್ ಇಂದು ಡೈರಿ ಸರ್ಕಲ್ ನಲ್ಲಿರುವ ಕೆಎಂಎಫ್ ಕಚೇರಿಯಲ್ಲಿ ಹಾಲು ಮಹಾಮಂಡಲದ ನಿರ್ದೇಶಕರ ಸಭೆ ನಡೆಯಿತು. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ನಿರ್ದೇಶಕರು ಹಾಲಿನ ದರ ಹೆಚ್ಚಳಕ್ಕೆ ಅಧ್ಯಕ್ಷರಿಗೆ ಒಪ್ಪಿಗೆ ಸೂಚಿಸಿದ್ದಾರೆ. ದರ ಹೆಚ್ಚಳದಲ್ಲಿ ಎಷ್ಟು ಹೆಚ್ಚಳ ಮಾಡಬೇಕು ಎಂಬುದರ ಬಗ್ಗೆ ಅಧ್ಯಕ್ಷರಿಗೆ ನಿರ್ಣಯ ಮಾಡಲು ತಿಳಿಸಿದ್ದಾರೆ.

    ಈ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಇನ್ನೆರೆಡು ದಿನಗಳಲ್ಲಿ ಅಂತಿಮ ಚರ್ಚೆ ಮಾಡಿದ ಬಳಿಕ ನಿಖರ ದರ ಹೆಚ್ಚಳದ ಬಗ್ಗೆ ತಿಳಿಸುವುದಾಗಿ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

  • ಸಕ್ಕರೆ ನಾಡಿನ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ- ಖರೀದಿ ದರ ಏರಿಕೆ

    ಸಕ್ಕರೆ ನಾಡಿನ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ- ಖರೀದಿ ದರ ಏರಿಕೆ

    ಮಂಡ್ಯ: ಹಾಲಿನ ಖರೀದಿ ದರವನ್ನು 3.50 ರೂಪಾಯಿ ಹೆಚ್ಚಳ ಮಾಡುವ ಮೂಲಕ ಹಾಲು ಉತ್ಪಾದಕರಿಗೆ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಹೊಸ ವರ್ಷದ ಕೊಡುಗೆ ನೀಡಿದೆ.

    ಒಕ್ಕೂಟದ 394ನೇ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದ್ದು, ಹಾಲು ಉತ್ಪಾದಕರಿಗೆ ಪ್ರಸ್ತುತ ಪ್ರತೀ ಲೀಟರ್‍ಗೆ 25 ರೂಪಾಯಿ ದೊರಕುತ್ತಿದೆ. ಆದರೆ ಈ ದರ ಜ. 1ರಿಂದ 28.50 ರೂಪಾಯಿಗೆ ಹೆಚ್ಚಳವಾಗಲಿದೆ. ಅಲ್ಲದೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪ್ರತಿ ಲೀಟರ್ ಹಾಲಿಗೆ 29.40 ರೂ. ದೊರೆಯಲಿದೆ.

    ಈ ಹೆಚ್ಚುವರಿ ದರವು ಮಾರ್ಚ್ ತಿಂಗಳ ಅಂತ್ಯದವರೆಗೂ ಉತ್ಪಾದಕರಿಗೆ ನೀಡಲಾಗುವುದು. ಜೊತೆಗೆ ಒಕ್ಕೂಟದ ಪ್ರಗತಿಯ ದೃಷ್ಟಿಯಿಂದ ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವಂತೆ ಒಕ್ಕೂಟ ಮನವಿ ಮಾಡಿದೆ.

  • ನಾಳೆಯಿಂದ ಮೊದಲ ಹಂತದ ನಮ್ಮ ಮೆಟ್ರೋ ಸೇವೆ ಸಂಪೂರ್ಣವಾಗಿ ಲಭ್ಯ- ಟಿಕೆಟ್ ದರ 10% ಹೆಚ್ಚಳ ಸಾಧ್ಯತೆ

    ನಾಳೆಯಿಂದ ಮೊದಲ ಹಂತದ ನಮ್ಮ ಮೆಟ್ರೋ ಸೇವೆ ಸಂಪೂರ್ಣವಾಗಿ ಲಭ್ಯ- ಟಿಕೆಟ್ ದರ 10% ಹೆಚ್ಚಳ ಸಾಧ್ಯತೆ

    ಬೆಂಗಳೂರು: ಶನಿವಾರದಿಂದ ಮಹಾನಗರಿ ಬೆಂಗಳೂರಿನ ಮಂದಿಗೆ ಮೊದಲ ಹಂತದ ನಮ್ಮ ಮೆಟ್ರೋ ಸೇವೆ ಸಂಪೂರ್ಣವಾಗಿ ಲಭ್ಯವಾಗಲಿದೆ.

    ಶನಿವಾರದಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಯಲೇಚನಹಳ್ಳಿ-ಸಂಪಿಗೆ ರಸ್ತೆ ಮಾರ್ಗ ಲೋಕಾರ್ಪಣೆ ಮಾಡಲಿದ್ದಾರೆ. ಇದರೊಂದಿಗೆ 42.3 ಕಿಲೋ ಮೀಟರ್ ದೂರದ ಮೊದಲ ಹಂತದ ಮೆಟ್ರೋ ಸೇವೆ ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಇಂದು ಮತ್ತು ನಾಳೆ ರಾಜಾಜಿನಗರದಿಂದ ಸಂಪಿಗೆ ರಸ್ತೆ ನಿಲ್ದಾಣವರೆಗೆ ಮೆಟ್ರೋ ಸಂಚಾರ ಇರಲ್ಲ.

    ಇದೇ ಹೊತ್ತಲ್ಲಿ ಟಿಕೆಟ್ ದರ ಶೇಕಡಾ 10ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಮೆಟ್ರೋದಿಂದ ಇದುವರೆಗೆ ಆಗಿರೋ ನಷ್ಟವನ್ನು ಸರಿದೂಗಿಸುವ ಸಲುವಾಗಿ ಪ್ರಯಾಣ ದರ ಏರಿಕೆಗೆ ನಿರ್ಧರಿಸಲಾಗಿದ್ದು, ರಾಜ್ಯ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ. ಪ್ರಸ್ತುತ 2011ರಲ್ಲಿ ಅಂದರೆ 6 ವರ್ಷಗಳ ಹಿಂದೆ ನಿಗದಿಪಡಿಸಿದ ದರವೇ ಚಾಲ್ತಿಯಲ್ಲಿದೆ. ಅದ್ರೆ ನಿರ್ವಹಣಾ ವೆಚ್ಚ ಹೆಚ್ಚಾಗಿದ್ದು, ಸರ್ಕಾರಕ್ಕೆ 260 ಕೋಟಿ ರೂಪಾಯಿ ಹೊರೆಬೀಳ್ತಿದೆ ಎಂದು ಹೇಳಲಾಗಿದೆ.

    ನಾಗಸಂದ್ರದಿಂದ ಯಲೇಚನಹಳ್ಳಿಯವರೆಗೆ ಪ್ರಯಾಣ ದರ 60 ರೂಪಾಯಿಯಾಗಲಿದೆ. ಆರಂಭದ ನಿಲ್ದಾಣಗಳಲ್ಲಿ ಟಿಕೆಟ್ 2 ರಿಂದ 5 ರೂಪಾಯಿ ದುಬಾರಿಯಾಗಲಿದೆ.

  • ಯುಗಾದಿ ಬೆನ್ನಲ್ಲೆ ಕರೆಂಟ್ ಶಾಕ್- ಏಪ್ರಿಲ್ 1ರಿಂದ ವಿದ್ಯುತ್ ದರ ಹೆಚ್ಚಳ

    ಯುಗಾದಿ ಬೆನ್ನಲ್ಲೆ ಕರೆಂಟ್ ಶಾಕ್- ಏಪ್ರಿಲ್ 1ರಿಂದ ವಿದ್ಯುತ್ ದರ ಹೆಚ್ಚಳ

    ಬೆಂಗಳೂರು: ಯುಗಾದಿ ಹಬ್ಬದ ಬೆನ್ನಲ್ಲೇ ಸರ್ಕಾರದಿಂದ ಜನರಿಗೆ ಶಾಕ್ ಕಾದಿದೆ. ಏಪ್ರಿಲ್ 1ರಿಂದ ವಿದ್ಯುತ್ ದರ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. ಮಾರ್ಚ್ 31ಕ್ಕೆ ಕೆಇಆರ್‍ಸಿಯಿಂದ (ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ)ದರ ಪ್ರಕಟವಾಗಲಿದ್ದು, ಈ ಪರಿಷ್ಕೃತ ದರ ಏಪ್ರಿಲ್ 1ರಿಂದಲೇ ಜಾರಿಯಾಗಲಿದೆ.

    ಎಸ್ಕಾಂಗಳು ಕಳೆದ ಡಿಸೆಂಬರ್‍ನಲ್ಲಿ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಪ್ರಸ್ತಾವನೆಯಲ್ಲಿ ಯೂನಿಟ್ ಗೆ 1.40ಪೈಸೆ ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸಿತ್ತು.

    ದರ ಏರಿಕೆ ಅನಿವಾರ್ಯ: ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಫೆ. 20ರಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದರು. ಈ ಬಗ್ಗೆ 5 ವಿದ್ಯುತ್ ಸರಬರಾಜು ಕಂಪೆನಿಗಳಿಂದ ಪ್ರಸ್ತಾವನೆ ಬಂದಿದ್ದು, ಪ್ರತಿ ಯೂನಿಟ್‍ಗೆ 1 ರೂಪಾಯಿ 48 ಪೈಸೆ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ ಎಂದು ತಿಳಿಸಿದ್ದರು. ಕಳೆದ ವರ್ಷ ಮಾರ್ಚ್‍ನಲ್ಲಿ ವಿದ್ಯುತ್‍ದರ ಏರಿಕೆ ಮಾಡಲಾಗಿತ್ತು.

    ಕಳೆದ ಬಾರಿ ಎಷ್ಟು ಹೆಚ್ಚಳ ಮಾಡಲಾಗಿತ್ತು?: ನಗರದ ಗೃಹಬಳಕೆ ಗ್ರಾಹಕರಿಗೆ ಮೊದಲ 30 ಯೂನಿಟ್‍ಗೆ 30 ಪೈಸೆ, 31ರಿಂದ 100 ಯೂನಿಟ್‍ಗೆ 40 ಪೈಸೆ ಹೆಚ್ಚಿಸಲಾಗಿತ್ತು. 100 ಯೂನಿಟ್‍ಗೆ ಮೇಲ್ಪಟ್ಟ ಬಳಕೆಗೆ ಪ್ರತಿ ಹಂತದಲ್ಲಿ ತಲಾ 50 ಪೈಸೆ ಏರಿಸಲಾಗಿತ್ತು. ಗ್ರಾಮೀಣ ಗೃಹಬಳಕೆದಾರರಿಗೂ ಇಷ್ಟೇ ದರ ಹೆಚ್ಚಳವಾಗಿತ್ತು. ಎಲ್ಲ ಗ್ರಾಹಕರನ್ನು ಪರಿಗಣಿಸಿ ಲೆಕ್ಕ ಹಾಕಿದರೆ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 48 ಪೈಸೆಯಷ್ಟು ಏರಿಕೆ ಮಾಡಿದಂತಾಗಿತ್ತು. ಇದು ಕಳೆದ ಒಂದು ದಶಕದಲ್ಲಾದ ಅತ್ಯಧಿಕ ಪ್ರಮಾಣದ ದರ ಏರಿಕೆಯಾಗಿತ್ತು. ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂ) ಪ್ರತಿ ಯೂನಿಟ್‍ಗೆ 1.02 ರೂ. ಹೆಚ್ಚಳಕ್ಕೆ ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು.