– ಗ್ಯಾರಂಟಿ ಸರ್ಕಾರದಿಂದ ಜನಕ್ಕೆ ಶಾಕ್; ಯಾವ್ಯಾವ ಬಸ್ ಟಿಕೆಟ್ ದರ ಎಷ್ಟಿದೆ?
ಬೆಂಗಳೂರು: ಗ್ಯಾರಂಟಿ ಸರ್ಕಾರ ರಾಜ್ಯದ ಜನರಿಗೆ ಮತ್ತೆ ದರ ಏರಿಕೆ ಬರೆ ಎಳೆದಿದೆ. ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಏರಿಕೆ ಮಾಡಿದೆ. ಬರೋಬ್ಬರಿ 20 ರೂ. ಏರಿಕೆ ಮಾಡಿದ್ದು ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.
ದಸರಾ ಹಬ್ಬದ ಪ್ರಯುಕ್ತ ಟಿಕೆಟ್ ದರ ಇಳಿಕೆ ಮಾಡಿ ದಸರಾ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕಾಗಿತ್ತು ಸರ್ಕಾರ. ಆದರೆ ಸಾರಿಗೆ ಇಲಾಖೆ ಮೈಸೂರು ಮಾರ್ಗದ ಕೆಎಸ್ ಆರ್ಟಿಸಿ ಬಸ್ ದರವನ್ನ ಏರಿಕೆ ಮಾಡಿದೆ. ಎಲ್ಲಾ ಕೆಎಸ್ ಆರ್ಟಿಸಿ ಬಸ್ ದರ ಬರೋಬ್ಬರಿ ೨೦ ರೂಪಾಯಿ ಏರಿಕೆ ಮಾಡಿದೆ. ಪ್ರಯಾಣಿಕರು ಟಿಕೆಟ್ ದರ ಏರಿಕೆ ಮಾಡಿರೋದಕ್ಕೆ ಆಕ್ರೋಶ ಹೊರ ಹಾಕ್ತಾ ಇದ್ದಾರೆ.
ಇನ್ನೂ ಕೆಎಸ್‌ಆರ್‌ಟಿಸಿ ವೇಗದೂತ, ತಡೆರಹಿತ, ರಾಜಹಂಸ, ಐರಾವತ ಸೇರಿದಂತೆ ಎಲ್ಲಾ ಬಸ್‌ಗಳ ದರ ಏರಿಕೆ ಆಗಿದೆ. ದಸರಾ ಮುಗಿಯುವವರೆಗೂ ದರ ಏರಿಕೆ ಇರಲಿದೆ.
ಯಾವ್ಯಾವ ಬಸ್ ಟಿಕೆಟ್ ದರ ಎಷ್ಟಿದೆ?
ಕರ್ನಾಟಕ ಸಾರಿಗೆ ವೇಗದೂತ – 170 ರೂ. ನಿಂದ 190 ರೂ.ಗೆ
ತಡೆ ರಹಿತ ಸಾರಿಗೆ – 210 ರಿಂದ 240 ರೂ.
ರಾಜಾಹಂಸ – 270 ರಿಂದ 290 ರೂ.
ಐರಾವತ – 430 ರಿಂದ 450 ರೂ.
ಐರಾವತ ಕ್ಲಬ್ ಕ್ಲಾಸ್ – 440 ರಿಂದ 460 ರೂ.
ದಸರಾ ಪ್ರಯುಕ್ತ ಟಿಕೆಟ್ ದರ ಇಳಿಕೆ ಮಾಡಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಡಬೇಕು. ಆದ್ರೆ ಟಿಕೆಟ್ ದರ ಏರಿಕೆ ಮಾಡಿ ಪ್ರಯಾಣಿಕರಿಗೆ ಶಾಕ್ ನೀಡಿರೋದು ಸರಿಯಲ್ಲ.
ಬೆಂಗಳೂರು: ಬಿಬಿಎಂಪಿ (BBMP) ವ್ಯಾಪ್ತಿಯ ಈಜುಕೊಳಗಳಲ್ಲಿ (Swimming Pool) ದರ ಏರಿಕೆ ಆಗಿದೆ. ಚಿಕ್ಕ ಮಕ್ಕಳಿಗೂ ಒಂದೇ ದರ, ದೊಡ್ಡವರಿಗೆ ಒಂದೇ ದರ, ಹೇಳೋರಿಲ್ಲ ಕೇಳೋರಿಲ್ಲ. ಬೇಕಾಬಿಟ್ಟಿ ದರ ನಿಗದಿಗೆ ಇದೀಗ ಪೋಷಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಒಂದು ಕಡೆ ಬಿರು ಬಿಸಿಲು ಬೇಸಿಗೆ ಮತ್ತೊಂದು ಕಡೆ ಶಾಲಾ ಮಕ್ಕಳಿಗೆ ರಜೆ. ಇದನ್ನೇ ಗುರಿಯಾಗಿಸಿಕೊಂಡಿರುವ ಬಿಬಿಎಂಪಿ ಈಜುಕೊಳಗಳಲ್ಲೂ ಬೇಕಾ ಬಿಟ್ಟಿ ದರ ನಿಗದಿ ಮಾಡಿದೆ. ಮೊದಲೆಲ್ಲಾ ಚಿಕ್ಕಮಕ್ಕಳಿಗೆ 25 ರೂ. ದೊಡ್ಡವರಿಗೆ 30 ರೂ. ಇತ್ತು. ಈಗ ವಯಸ್ಕರಿಗೂ, ಚಿಕ್ಕಮಕ್ಕಳಿಗೂ 50 ರೂ. ನಿಗದಿಯಾಗಿದೆ ಬಿಬಿಎಂಪಿ ದರ ನಿಗದಿ ಮಾಡಿರುವುದು ಒಂದಾದರೆ, ಈಜುಕೊಳಗಳಲ್ಲಿ ಉಸ್ತುವಾರಿಗಳು ಮತ್ತೊಂದು ದರದಲ್ಲಿ ವಸೂಲಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಓಂ ಪ್ರಕಾಶ್ ಹತ್ಯೆಗೆ 1 ವಾರದಿಂದ ಸ್ಕೆಚ್ ಹಾಕಿದ್ದ ಪತ್ನಿ, ಪುತ್ರಿ!
ಮಹಾಲಕ್ಷ್ಮೀ ಲೇಔಟ್‌ನ ಬಿಬಿಎಂಪಿ ಈಜುಕೊಳದಲ್ಲಿ 40 ನಿಮಿಷಕ್ಕೆ 50 ರೂ. ನಿಗದಿ ಮಾಡಿದ್ದಾರೆ. ಚಿಕ್ಕಮಕ್ಕಳಿಗೂ 50 ರೂ. ದೊಡ್ಡವರಿಗೂ 50 ರೂ. ಇದಕ್ಕೆ ಪೋಷಕರು ಮಕ್ಕಳಿಗೆ ದರ ಕಡಿಮೆ ಮಾಡಿ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದನ್ನೂ ಓದಿ: ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ ಫೇಕಾ?
ಬೆಂಗಳೂರು: ಈ ವರ್ಷ ಆರಂಭದಿಂದಲೂ ನಿತ್ಯ ಜೇಬಿಗೆ ಹೊರೆಯಾಗುವ ಶಾಕಿಂಗ್ ಸುದ್ದಿಗಳೇ ಕೇಳಿಬರುತ್ತಿವೆ. ನಿತ್ಯ ಒಂದಲ್ಲ ಒಂದು ದರ ಏರಿಕೆಯಿಂದ ಕಂಗೆಟ್ಟಿದ್ದ ಜನಕ್ಕೆ ಈಗ ಮತ್ತೊಂದು ಸರದಿ. ಡೀಸೆಲ್ ದರ ಏರಿಕೆಯಾದ (Diesel Price Hike) ಬೆನ್ನಲ್ಲೇ ಖಾಸಗಿ ಬಸ್ ಪ್ರಯಾಣ ದರ ಕೂಡ ಏರಿಕೆಯಾಗಲಿದೆ.
ಡೀಸೆಲ್ ದರ ಏರಿಕೆ ಮಾಡಿ ಸರ್ಕಾರದ ವಿರುದ್ಧ ವಾಣಿಜ್ಯ ವಾಹನಗಳು ಸಮರ ಸಾರಿವೆ. ಏ.15ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೂ ಮುಂದಾಗಿವೆ. ಈ ಮಧ್ಯೆ ಈ ಮುಷ್ಕರಕ್ಕೆ ಖಾಸಗಿ ಬಸ್ (Private Bus) ಮಾಲೀಕರು ಕೂಡ ಬೆಂಬಲ ಸೂಚಿಸಿದ್ದಾರೆ. ಮುಷ್ಕರಕ್ಕೆ ಬೆಂಬಲ ಸೂಚಿಸುವುದರ ಜೊತೆಗೆ ಪ್ರಯಾಣ ದರ ಏರಿಕೆಗೂ ಕೂಡ ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್ ಅನ್ನು 104% ಹೆಚ್ಚಿಸಿದ ಅಮೆರಿಕ
ಪ್ರತಿ ಸ್ಟೇಜ್‌ಗೂ 2 ರೂ.ನಂತೆ 15%ರಷ್ಟು ದರ ಏರಿಕೆಗೆ ನಿರ್ಧಾರ ಮಾಡಿವೆ. ಅದರಂತೆ ಮುಷ್ಕರ ಆರಂಭವಾದ ದಿನದಿಂದಲೇ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಎಸಿ, ನಾನ್‌ಎಸಿ, ಸ್ಲೀಪರ್ ಬಸ್‌ಗಳಲ್ಲಿ ದರ ಏರಿಕೆಯಾಗಲಿದೆ. ಈಗಾಗಲೇ ಡೀಸೆಲ್ ದರ, ಬಿಡಿ ಭಾಗಗಳ ದರ, ಟೈರ್ ದರಗಳ ಹೆಚ್ಚಳ ಸೇರಿದಂತೆ ಎಲ್ಲಾ ದರ ಏರಿಕೆ ಕಾರಣ ದರೇರಿಕೆ ಮಾಡದೇ ಬೇರೆ ಆಯ್ಕೆಯೇ ಇಲ್ಲ ಎಂಬ ನಿರ್ಧಾರಕ್ಕೆ ಖಾಸಗಿ ಬಸ್ ಮಾಲೀಕರು ಬಂದಿದ್ದಾರೆ. ಇದನ್ನೂ ಓದಿ: ಅಕ್ರಮ ಸಂಬಂಧ ಆರೋಪ – ಪತ್ನಿ ಆತ್ಮಹತ್ಯೆ, ಪತಿ ಅರೆಸ್ಟ್, 7 ಮಂದಿ ವಿರುದ್ಧ FIR
ರಾಜ್ಯಾದ್ಯಂತ ಒಟ್ಟು 14,000 ಖಾಸಗಿ ಬಸ್‌ಗಳು ನಿತ್ಯ ಓಡಾಟ ಮಾಡುತ್ತಿವೆ. ಬೆಂಗಳೂರಿನಲ್ಲೇ ಎರಡೂವರೆ ಸಾವಿರ ವಾಹನ ಓಡಾಟ ಮಾಡುತ್ತವೆ. ಅಲ್ಲದೇ ವಿಕೇಂಡ್‌ಗಳಲ್ಲಿ ಸಾವಿರಾರು ಸಂಖ್ಯೆಯ ಜನ ಬೆಂಗಳೂರಿನಿಂದ ಹೊರ ಹೋಗಲು ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶದ ಹಲವು ಕಡೆ ಈಗಲೂ ಕೂಡ ಖಾಸಗಿ ಬಸ್‌ಗಳೇ ಪ್ರಮುಖ ಸಾರಿಗೆ. ಸದ್ಯದ ದರ ಏರಿಕೆ ಆಯಾ ಗ್ರಾಮೀಣ ಪ್ರದೇಶಗಳ ಜನರ ಮೇಲೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಭಾರತದ ಉದ್ಯಮಿಗೆ ಅಮೆರಿಕದಲ್ಲಿ ಕಹಿ ಅನುಭವ – ಏರ್‌ಪೋರ್ಟ್‌ನಲ್ಲಿ 8 ಗಂಟೆ ಕೂರಿಸಿದ ಆರೋಪ
ಬೆಂಗಳೂರಿನಿಂದ ಯಾವ ಭಾಗಕ್ಕೆ ಎಷ್ಟು ದರ? ಬೆಂಗಳೂರು ಟು ಹುಬ್ಬಳ್ಳಿ:
ಈಗಿನ ದರ – 1,000 ರೂ.
ಸಾಮಾನ್ಯ ದಿನ ದರ – 1,200 ರೂ.
ವಾರಾಂತ್ಯ ದರ – 1,500 ರೂ.
ಬೆಂಗಳೂರು ಟು ಬೆಳಗಾವಿ:
ಈಗಿನ ದರ – 1,200ರೂ.
ಸಾಮಾನ್ಯ ದಿನ ದರ – 1,400 ರೂ.
ವಾರಾಂತ್ಯ ದರ – 1,600 ರೂ.
ಬೆಂಗಳೂರು ಟು ಕಲಬುರಗಿ:
ಈಗಿನ ದರ – 1,200 ರೂ.
ಸಾಮಾನ್ಯ ದಿನ ದರ – 1,400 ರೂ.
ವಾರಾಂತ್ಯ ದರ- 1,600 ರೂ.
ಬೆಂಗಳೂರು ಟು ಮಂಗಳೂರು:
ಈಗಿನ ದರ – 1,000 ರೂ.
ಸಾಮಾನ್ಯ ದಿನ ದರ – 1,400 ರೂ.
ವಾರಾಂತ್ಯ ದರ – 1,600 ರೂ.
ಬೆಂಗಳೂರು ಟು ಬಳ್ಳಾರಿ:
ಈಗಿನ ದರ – 700 ರೂ.
ಸಾಮಾನ್ಯ ದಿನ ದರ- 1,000 ರೂ.
ವಾರಾಂತ್ಯ ದರ – 1,200 ರೂ.
ಬೆಂಗಳೂರು ಟು ಶಿವಮೊಗ್ಗ:
ಈಗಿನ ದರ – 750 ರೂ.
ಸಾಮಾನ್ಯ ದಿನ ದರ – 1,000 ರೂ.
ವಾರಾಂತ್ಯ ದರ – 1,200 ರೂ.
ಬೆಂಗಳೂರು: ಬಸ್ ಟಿಕೆಟ್, ಮೆಟ್ರೋ, ಹಾಲು, ವಿದ್ಯುತ್ ಬಳಿಕ ಡಿಸೇಲ್ ದರ ಏರಿಕೆ ಮಾಡಿ ರಾಜ್ಯ ಸರ್ಕಾರ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೆನ್ನಲ್ಲೇ ಈಗ ಕಾಫಿ, ಟೀ ದರ ಸಹ ಏರಿಕೆಯಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನಂದಿನಿ ಹಾಲಿನ ದರ ಬೆಲೆ ಪ್ರತಿ ಲೀ.ಗೆ 4 ರೂ. ಏರಿಕೆ ಮಾಡಿದ ಬೆನ್ನಲ್ಲೇ ಈಗ ಹೋಟೆಲ್‌ಗಳಲ್ಲಿ ಕಾಫಿ(Coffee), ಟೀ(Tea) ಬೆಲೆಯೂ ಏರಿಕೆಯಾಗಿದೆ. ಒಂದು ಕಡೆ ವಿಪಕ್ಷಗಳು ದರ ಏರಿಕೆ ವಿರುದ್ಧ ಮಾತಿನ ಸಮರ ನಡೆಸಿದ್ರೇ ಇನ್ನೊಂದು ಕಡೆ ಸರ್ಕಾರ ದರ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದೆ. ಇದನ್ನೂ ಓದಿ: ಕೊಲ್ಲೂರಲ್ಲಿ ಚಂಡಿಕಾ ಹೋಮದಿಂದ ಸಂಗ್ರಹವಾಯ್ತು 1.77 ಕೋಟಿ ರೂ.
ಈಗ ಹಾಲಿನ ದರ ಲೀಟರ್‌ಗೆ 4 ರೂ. ಏರಿಕೆಯಾದ ಬೆನ್ನಲ್ಲೇ ಈಗ ಹೋಟೆಲ್‌ಗಳಲ್ಲಿ ಕಾಫಿ, ಟೀ ಬೆಲೆಯೂ ಏರಿಕೆಯಾಗಿದೆ. 2-3 ರೂ. ಏರಿಕೆ ಕಂಡಿದೆ. ಬೆಂಗಳೂರಿನ ಹೋಟೆಲ್‌ಗಳಲ್ಲಿ ಕಾಫಿ ಟೀ ದರದ ಜೊತೆಗೆ ಶೀಘ್ರವೇ ಬೆಣ್ಣೆ, ತುಪ್ಪದ ದೋಸೆ ದರವೂ ಏರಿಕೆಯಾಗಲಿದೆ ಎಂದು ಹೋಟೆಲ್ ಅಸೋಸಿಯೇಷನ್(Hotel Association) ಹೇಳಿದೆ. ಇದನ್ನೂ ಓದಿ: ನನಗೆ ಶುಗರ್ ಇದೆ, ಅನ್ನ ಬಿಟ್ಟು ಚಪಾತಿ ತಿಂತಾ ಇದೀನಿ: ಸಿದ್ದರಾಮಯ್ಯ
ಇನ್ನೂ ದರ ಏರಿಕೆ ವಿಚಾರದಲ್ಲಿ ಸರ್ಕಾರವನ್ನು ಕಟುವಾಗಿ ಟೀಕಿಸಿರುವ ಹೆಚ್.ಡಿ.ಕುಮಾರಸ್ವಾಮಿ(H D Kumaraswamy) ಹಾಲಿನ ದುಡ್ಡು ರೈತರಿಗೆ ಮೊಸರಿನ ದುಡ್ಡು ಏನು ಮಾಡ್ತೀರಾ ಎಂದು ಕಿಡಿಕಾರಿದ್ದಾರೆ. ಆದರೆ ಸಚಿವ ಡಿ.ಕೆ.ಶಿವಕುಮಾರ್(D K Shivakumar) ದರ ಏರಿಕೆಯನ್ನು ಸಮರ್ಥಿಸಿದ್ದಾರೆ. ರಾಜಕೀಯ ಪಕ್ಷಗಳ ಕೆಸೆರೆರೆಚಾಟದ ಮಧ್ಯೆ ಜನರು ನಿತ್ಯ ದರ ಏರಿಕೆ ಬರೆಯಿಂದ ಹೈರಾಣಾಗಿದ್ದಾರೆ.
ಬೆಂಗಳೂರು: ಸರ್ಕಾರದ ದರ ಏರಿಕೆ (Price Hike) ವಿರುದ್ಧ ಬಿಜೆಪಿ ರಣಕಹಳೆ ಮೊಳಗಿಸಿದೆ. ಬುಧವಾರದಿಂದ ನಡೆಯುತ್ತಿರುವ ಬಿಜೆಪಿ (BJP) ಅಹೋರಾತ್ರಿ ಧರಣಿ ಇಂದು ತೀವ್ರ ಸ್ವರೂಪಕ್ಕೆ ತಿರುಗಿತ್ತು. ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ಬಿಜೆಪಿ ನಾಯಕರು, ಅಪಾರ ಕಾರ್ಯಕರ್ತರು ಸಿಎಂ ಮನೆ ಮುತ್ತಿಗೆ ಯತ್ನ ನಡೆಸಿದ್ದು, ಈ ವೇಳೆ ಪೊಲೀಸರಿಗೂ ಪ್ರತಿಭಟನಾಕಾರರಿಗೂ ಜಟಾಪಟಿ ನಡೆಯಿತು.
ಬೆಂಗಳೂರಿನ (Bengaluru) ಫ್ರೀಡಂ ಪಾರ್ಕಿನಲ್ಲಿ (Freedom Park) ಬುಧವಾರದಿಂದ ಬಿಜೆಪಿ ನಡೆಸುತ್ತಿದ್ದ ಅಹೋರಾತ್ರಿ ಧರಣಿಯಲ್ಲಿ ಇಂದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪಾಲ್ಗೊಂಡಿದ್ದರು. ನಾಯಕರೆಲ್ಲ ಮಾತಾಡಿದ ಮೇಲೆ ಯಡಿಯೂರಪ್ಪ ಮುಂದಾಳತ್ವದಲ್ಲಿ ಸಿಎಂ ಮನೆ ಮುತ್ತಿಗೆಗೆ ನಾಯಕರು, ಕಾರ್ಯಕರ್ತರು ಮುಂದಾದರು. ಪ್ರತಿಭಟನಾ ಸ್ಥಳದಿಂದ ಯಡಿಯೂರಪ್ಪ ಜೊತೆಗೆ ನಾಯಕರು, ಕಾರ್ಯಕರ್ತರು ರಸ್ತೆಗೆ ಇಳಿದರು. ಆದರೆ ಅಷ್ಟರೊಳಗೆ ನಾಕಾಬಂದಿ ಹಾಕಿದ್ದ ಪೊಲೀಸರು ಪ್ರತಿಭಟನಾಕಾರರನ್ನು ರಸ್ತೆಯಲ್ಲೇ ಎರಡು ಬದಿ ತಡೆದು ಸಿಎಂ ಮನೆ ಮುತ್ತಿಗೆ ವಿಫಲಗೊಳಿಸಿದರು.ಇದನ್ನೂ ಓದಿ: ಜನವಿರೋಧಿ ನೀತಿ ವಿರುದ್ಧ ಬಿಜೆಪಿ ನಿರಂತರ ಹೋರಾಟ: ಯಡಿಯೂರಪ್ಪ
<
ಕಾಂಗ್ರೆಸ್ಸಿಗರೇ, ನೀವೆಷ್ಟೇ ಪ್ರಯತ್ನಿಸಿದರೂ ನಮ್ಮ ಹೋರಾಟ ನಿಲ್ಲದು !
ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ, ಜನವಿರೋಧಿ ನೀತಿ ಖಂಡಿಸಿ ನಮ್ಮ ಪ್ರತಿಭಟನೆ ನಿರಂತರ…
ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಿದಷ್ಟೂ ತೀವ್ರಗೊಳ್ಳಲಿದೆ ನಮ್ಮ ಹೋರಾಟ… ರಾಜ್ಯದಾದ್ಯಂತ ನಮ್ಮ ಹೋರಾಟ ಪ್ರಾರಂಭವಾಗಲಿದೆ.
ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳ ಮೇಲೆ ಹತ್ತಿ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ, ಡಿಸಿಎಂ ಹಾಗೂ ಸಚಿವರ ಫೋಟೋ ಇದ್ದ ರಾವಣನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಕಾರ್ಯಕರ್ತೆಯರು ಎಮ್‌ಎಲ್‌ಸಿ ಭಾರತಿ ಶೆಟ್ಟಿ ನೇತೃತ್ವದಲ್ಲಿ ರಸ್ತೆಯಲ್ಲೇ ಕೂತು ಪ್ರತಿಭಟನೆಗೆ ಮುಂದಾದರು. ಕೊನೆಗೆ ಪೊಲೀಸರು ಯಡಿಯೂರಪ್ಪ, ವಿಜಯೇಂದ್ರ, ಆರ್.ಅಶೋಕ್, ಸಿ.ಟಿ ರವಿ, ಎಸ್.ಆರ್ ವಿಶ್ವನಾಥ್, ಬೈರತಿ ಬಸವರಾಜು ಮುಂತಾದ ನಾಯಕರನ್ನು ವಶಕ್ಕೆ ಪಡೆದು ಬಸ್ ಮೂಲಕ ಕರೆದೊಯ್ದರು.
ಇನ್ನು ಪ್ರತಿಭಟನೆ ನಡೆಯುವಾಗಲೇ ವಕ್ಫ್ ಬಿಲ್ (Waqf Bill) ಪಾಸಾದ ಹಿನ್ನೆಲೆಯಲ್ಲಿ ನಾಯಕರು ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಒಟ್ಟಾರೆಯಾಗಿ ಎರಡು ದಿನಗಳ ಅಹೋರಾತ್ರಿ ಹೋರಾಟ ಮೂಲಕ ಸರ್ಕಾರಕ್ಕೆ ಬಿಜೆಪಿ ತಕ್ಕ ಮಟ್ಟಿಗೆ ಬಿಸಿ ಮುಟ್ಟಿಸಿದೆ. ಮುಂದಿನ ದಿನಗಳಲ್ಲಿ ಜಿಲ್ಲಾವಾರು ಹೋರಾಟ ತೀವ್ರಗೊಳಿಸಲು ಕೇಸರಿ ಪಡೆ ಮುಂದಾಗಿದೆ.ಇದನ್ನೂ ಓದಿ: ಭಂಡ ಸರ್ಕಾರ, ಸಿಎಂ ವಿರುದ್ಧ ಬೀದಿಗಿಳಿದು ಹೋರಾಟ ಮಾಡದೇ ಬೇರೆ ದಾರಿಯಿಲ್ಲ: ವಿಜಯೇಂದ್ರ
– ಘಜ್ನಿ, ಘೋರಿ ನಾಚುವಂತೆ ಜನರ ಮೇಲೆ ಸರ್ಕಾರದ ದರ ಏರಿಕೆ ದಂಡಯಾತ್ರೆ: ಕೇಂದ್ರ ಸಚಿವ ಕಿಡಿ
ನವದೆಹಲಿ: ರಾಜ್ಯದಲ್ಲಿ ದರ ಬೀಜಾಸುರ ಸರ್ಕಾರ ಜನರ ರಕ್ತ ಹೀರುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರ್ಕಾರ ದಿನಕ್ಕೊಂದು ಸುಳ್ಳು ಹೇಳುತ್ತಿದೆ. ತಿಂಗಳಿಗೊಂದು ದರ ಏರಿಕೆ ಮಾಡುತ್ತಿದೆ. ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ (Congress) ಕಂಪನಿ ಸರ್ಕಾರ ಆಡಳಿತದ ವೈಖರಿ ಇದು! ಇಂದಿನಿಂದ ಕಾಂಗ್ರೆಸ್ ಕಂಪನಿ ಸರ್ಕಾರ ಕಸದ ಮೇಲೆಯೂ ಸೆಸ್ ವಿಧಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಲು ಭಾರತ ನಿರ್ಧರಿಸಿದೆ: ಟ್ರಂಪ್
ದರ ಏರಿಕೆಗೆ ಪಂಚ ಗ್ಯಾರಂಟಿಯನ್ನು ನೆಪ ಮಾಡಿಕೊಂಡಿದೆ. ಆದರೆ ಸರ್ಕಾರದ ದುರುದ್ದೇಶ ಜನರ ಲೂಟಿ ಮಾಡುವುದಷ್ಟೇ. ಭಾರತದ ಮೇಲೆ ಆಕ್ರಮಣ ನಡೆಸಿ ನಿರಂತರ ಲೂಟಿ ಮಾಡಿದ ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ ಅವರಿಬ್ಬರೂ ನಾಚುವಂತೆ ಕನ್ನಡಿಗರ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರ ದರ ಏರಿಕೆ ದಂಡಯಾತ್ರೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಲೇಷ್ಯಾದಲ್ಲಿ ಗ್ಯಾಸ್ ಪೈಪ್‌ಲೈನ್ ಸ್ಫೋಟ – ಅಣಬೆ ಆಕಾರದಲ್ಲಿ ನಭಕ್ಕೆ ಚಿಮ್ಮಿದ ಬೆಂಕಿ!
ದುರಾಡಳಿತದಿಂದ ಸಮೃದ್ಧ ಕರ್ನಾಟಕವನ್ನು (Karnataka) ಬರ್ಬಾದ್ ಮಾಡಿರುವ ಕಾಂಗ್ರೆಸ್ ಕಂಪನಿ ಸರ್ಕಾರ ದರ ಬೀಜಾಸುರ ರೂಪ ತಳೆದು ಜನರ ರಕ್ತ ಹೀರುತ್ತಿದೆ. ನೀರು, ಮೆಟ್ರೋ ರೈಲು, ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್, ಹಾಲು(3 ಸಲ ದರ ಏರಿಕೆ), ವಿದ್ಯುತ್, ಮುದ್ರಾಂಕ, ಮಾರ್ಗದರ್ಶಿ ಮೌಲ್ಯ, ಅಬಕಾರಿ ಸುಂಕ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಶುಲ್ಕ, ಶವದ ಮರಣೋತ್ತರ ಪರೀಕ್ಷೆ ಶುಲ್ಕ, ವೈದ್ಯಕೀಯ ಪ್ರಮಾಣ ಪತ್ರದ ದರ, ಲ್ಯಾಬ್‌ನಲ್ಲಿ ಪರೀಕ್ಷೆ ಶುಲ್ಕ, ವೃತ್ತಿಪರ ತೆರಿಗೆ, ಬಿತ್ತನೆ ಬೀಜಗಳ ದರವನ್ನು ಏರಿಕೆ ಮಾಡಿದೆ. ಇದು ದರ ಬೀಜಾಸುರ ಕಾಂಗ್ರೆಸ್ ಸರ್ಕಾರ ಎಂದು ದೂರಿದ್ದಾರೆ. ಇದನ್ನೂ ಓದಿ: ನಾಳೆ ದೆಹಲಿಯಲ್ಲಿ ನೂತನ ಕರ್ನಾಟಕ ಭವನ ಉದ್ಘಾಟನೆ – 138 ಕೋಟಿ ವೆಚ್ಚದಲ್ಲಿ ನಿರ್ಮಾಣ
ಇಷ್ಟು ಸಾಲದೆಂಬಂತೆ ಜನರ ಮೇಲೆ ಏ. 1ರಿಂದ ಕಸದ ಸೆಸ್(Garbage Cess) ಹೇರುತ್ತಿದೆ ದರ ಬೀಜಾಸುರ ಸರ್ಕಾರ. ಕಸದ ಹೆಸರಿನಲ್ಲಿ ಕೋಟಿ ಕೋಟಿ ಸುಲಿಗೆ ಮಾಡುವುದನ್ನು ಗುರಿಯಾಗಿಸಿಕೊಂಡಿದೆ.
ಬೆಂಗಳೂರು: ಬಸ್, ಮೆಟ್ರೋ, ಹಾಲು ದರ ಏರಿಕೆಯ ಬೆನ್ನಲ್ಲೇ ಈಗ ಅಡುಗೆ ಎಣ್ಣೆಗೆ (Cooking Oil) ಬೆಲೆ ಏರಿಕೆಯ ಬರೆ ಬಿದ್ದಿದೆ. ಅದರಲ್ಲೂ ತೆಂಗಿನಕಾಯಿ ಎಣ್ಣೆ (Coconut Oil) ದರ ಲೀಟರ್‌ಗೆ 300 ರೂ. ಗಡಿ ದಾಟಿದೆ.
ಯಾವುದೇ ಅಡುಗೆ ಮಾಡಬೇಕಾದರೂ ಅಡುಗೆ ಎಣ್ಣೆ ಬೇಕೇ ಬೇಕು. ಆದರೆ ಖಾದ್ಯ ತೈಲ ಬೆಲೆ ಕಳೆದ ಒಂದು ತಿಂಗಳಿಂದ ಏರಿಕೆಯಾಗುತ್ತಿದೆ. ಹೀಗಾಗಿ ಒಂದು ತಿಂಗಳ ಹಿಂದಿನ ಬೆಲೆಗೂ ಈಗಿನ ಬೆಲೆಗೂ 10 – 20 ರೂ. ಏರಿಕೆಯಾಗಿದೆ.
ಜಾಗತಿಕ ಮಟ್ಟದಲ್ಲಿ ಪೂರೈಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೂರ್ಯಕಾಂತಿ ಎಣ್ಣೆಯ ದರ ಏರಿಕೆಯಾಗಿದೆ. ಪ್ರಮುಖವಾಗಿ ಸನ್ ಫ್ಲವರ್, ಪಾಮ್ ಆಯಿಲ್, ಕಡಲೇಕಾಯಿ ಎಣ್ಣೆ, ಅರಳೆಎಣ್ಣೆ ಹಾಗೂ ಸಾಸಿವೆ ಎಣ್ಣೆಯಲ್ಲಿ 10-20 ರೂ. ರೂ. ಹೆಚ್ಚಾಗಿದೆ ಎನ್ನುತ್ತಾರೆ ಖಾದ್ಯತೈಲ ವ್ಯಾಪಾರಿಗಳು.
ತೆಂಗಿನ ಎಣ್ಣೆ ದರ ಏರಿಕೆ ಯಾಕೆ?
ಸಾಧಾರಣವಾಗಿ ಮಾರ್ಚ್ ಮಧ್ಯಭಾಗದಿಂದ ರಾಜ್ಯದಲ್ಲಿ ಬಿಸಿಲು ಹೆಚ್ಚಾಗುತ್ತದೆ. ಆದರೆ ಈ ಬಾರಿ ಜನವರಿ ಕೊನೆಯಿಂದಲೇ ಉಷ್ಣಾಂಶ ಏರಿಕೆಯಾಗುತ್ತಿದ್ದು ಎಳೆನೀರಿಗೆ ಹೆಚ್ಚು ಬಳಕೆಯಾಗುತ್ತಿವೆ. ಇದರ ಜೊತೆ ಕೊಬ್ಬರಿಯ ದರವೂ ಏರಿಕೆಯಾಗಿದೆ.
1 ವರ್ಷದಿಂದ ಕ್ವಿಂಟಾಲ್‌ಗೆ 8 ರಿಂದ 8,500 ರೂ. ಇದ್ದ ಕೊಬ್ಬರಿ ಪ್ರಸ್ತುತ 14,500 ರಿಂದ 15 ಸಾವಿರ ರೂ.ಗಳಿಗೆ ಏರಿಕೆಯಾಗಿದೆ. ಎಳನೀರು ಯಥೇಚ್ಛವಾಗಿ ಮಾರಾಟವಾಗುತ್ತಿರುವ ಕಾರಣ ಕೊಬ್ಬರಿ ಬೇಡಿಕೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಇದರ ನೇರ ಪರಿಣಾಮ ತೆಂಗಿನ ಎಣ್ಣೆಯ ಮೇಲೆ ಬಿದ್ದಿದೆ. ಇದರಿಂದಾಗಿ ತೆಂಗಿನ ಎಣ್ಣೆ ದರ ಏರಿಕೆಯಾಗುತ್ತಿದೆ. ಹೀಗಾಗಿ ಒಂದು ಲೀಟರ್ ತೆಂಗಿನಕಾಯಿ ಎಣ್ಣೆ ಬೆಲೆಯಲ್ಲಿ 50 ರೂ. ಹೆಚ್ಚಾಗಿದೆ.
ಅಡುಗೆ ಎಣ್ಣೆಯನ್ನು ಅಕ್ರಮವಾಗಿ ಗೋಡಾನ್‌ಗಳಲ್ಲಿ ಸಂಗ್ರಹಿಸಿ ಇಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಈ ಬಗ್ಗೆ ಆಹಾರ ಹಾಗೂ ನಾಗರೀಕ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ಎಪಿಎಂಸಿ ವ್ಯಾಪಾರಿಗಳ ಸಂಘ ಒತ್ತಾಯಿಸಿದೆ.
ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಸಿಹಿ ಸುದ್ದಿ. ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ದರ ಏರಿಕೆ ಸಂಬಂಧ ಕೇಂದ್ರ ತಂಡ ಹೆಚ್ಚುವರಿ ವರದಿಯನ್ನು ಕೇಳಿತ್ತು. ಅಷ್ಟೇ ಅಲ್ಲದೇ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಗ್ರ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್‌ಗೆ (BMRCL) ನಿರ್ದೇಶನ ನೀಡಿದೆ.
BMRCL’s proposed 45% metro fare hike, set for Feb 1, has been put on hold. The Modi government has directed BMRCL to submit a comprehensive report before making any decision. A big win for the people of Bengaluru—ensuring transparency, accountability, and fair metro pricing. pic.twitter.com/5LBJT70mX2
ಕಳೆದ ಭಾನುವಾರ ಪಬ್ಲಿಕ್ ಟಿವಿ ಮೆಟ್ರೋ ದರ ಏರಿಕೆಯಾಗುವುದು ಅನುಮಾನ ಎಂದು ವರದಿ ಪ್ರಕಟಿಸಿತ್ತು. ಈಗ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪಿಸಿ ಮೋಹನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ದರ ಏರಿಕೆಯನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ದೋಸ್ತಾ ನೀ ಮಸ್ತಾ’: ಗೆಳೆಯನ ಗೆಲುವುವನ್ನು ಸಂಭ್ರಮಿಸಿದ ಧನರಾಜ್ ಆಚಾರ್
ಪೋಸ್ಟ್‌ನಲ್ಲಿ ಏನಿದೆ?
ಫೆಬ್ರವರಿ 1 ರಂದು ನಿಗದಿಯಾಗಿದ್ದ ಬಿಎಂಆರ್‌ಸಿಎಲ್‌ನ 45% ಮೆಟ್ರೋ ದರ ಹೆಚ್ಚಳದ ಪ್ರಸ್ತಾವನೆಯನ್ನು ತಡೆಹಿಡಿಯಲಾಗಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಗ್ರ ವರದಿಯನ್ನು ಸಲ್ಲಿಸುವಂತೆ ಮೋದಿ ಸರ್ಕಾರ ಬಿಎಂಆರ್‌ಸಿಎಲ್‌ಗೆ ನಿರ್ದೇಶನ ನೀಡಿದೆ. ಬೆಂಗಳೂರಿನ ಜನರಿಗೆ ಒಂದು ದೊಡ್ಡ ಗೆಲುವು – ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನ್ಯಾಯಯುತ ಮೆಟ್ರೋ ಬೆಲೆ ನಿಗದಿಯನ್ನು ಖಚಿತಪಡಿಸಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಗ್ನಿ ಅವಘಡ – ಕಾರು, ಬೈಕ್ ಸೇರಿ 100ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ
ಸುದ್ದಿಗೋಷ್ಠಿ ರದ್ದಿಗೆ ಕಾರಣ ನೀಡಿಲ್ಲ. ದರ ಏರಿಕೆ ಖಚಿತವಾಗಿದ್ದರೂ ಕನಿಷ್ಠ, ಗರಿಷ್ಠದ ಜೊತೆ ಮಧ್ಯದಲ್ಲಿ ಬರುವ ನಿಲ್ದಾಣಗಳಿಗೆ ಎಷ್ಟು ದರ ನಿಗದಿ ಮಾಡಬೇಕು ಎನ್ನುವುದರ ಬಗ್ಗೆ ಗೊಂದಲ ಇರುವ ಕಾರಣ ಸುದ್ದಿಗೋಷ್ಠಿಯನ್ನು ರದ್ದು ಮಾಡಲಾಗಿದೆ ಎನ್ನಲಾಗುತ್ತಿದೆ.
ಗೊಂದಲಗಳನ್ನು ಇತ್ಯರ್ಥ ಮಾಡಿ ಮುಂದಿನ ವಾರ ಮೆಟ್ರೋ ದರ ಏರಿಕೆ ಸಂಬಂಧ ಸುದ್ದಿಗೋಷ್ಠಿ ನಡೆಸಲು ಬಿಎಂಆರ್‌ಸಿಎಲ್ ಮುಂದಾಗಿದೆ.
ಕಳೆದ 8 ವರ್ಷದಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ಸಿಂಗಾಪುರ, ಹಾಂಕಾಂಗ್, ದೆಹಲಿಗೆ ತೆರಳಿ ಅಲ್ಲಿನ ಮೆಟ್ರೋ ದರ ಪರಿಷ್ಕರಣೆ ಕ್ರಮ, ದರ ಹೆಚ್ಚಳವನ್ನು ಅಧ್ಯಯನ ಮಾಡಿ ದರ ಪರಿಷ್ಕರಣೆ ವರದಿ ಸಿದ್ಧಪಡಿಸಿದೆ.
– ನಮಗೆ ಯಾವ ಫ್ರೀನೂ ಬೇಡ.. ರೇಟ್ ಜಾಸ್ತಿ ಮಾಡೋದು ಸರಿಯಲ್ಲ: ಗಂಡಸರ ಪರ ನಿಂತ ಮಹಿಳೆಯರು
ಬೆಂಗಳೂರು: ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ಹೀಗೆ ಎಲ್ಲದಕ್ಕೂ ದರ ಹೆಚ್ಚಿಸಿದರೆ, ಬದುಕುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಮಹಿಳೆಯರು ಕೂಡ ಪುರುಷರ ಪರ ನಿಂತು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ನಮಗೆ ಫ್ರೀ ಟಿಕೆಟ್ ಬೇಡವೇ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಮಹಿಳೆಯರಿಗೆ ಫ್ರೀ ಬಸ್ ಟಿಕೆಟ್ ಕೊಡುವ ಅವಶ್ಯಕತೆಯೇ ಇರಲಿಲ್ಲ. ನಿತ್ಯ ಪ್ರಯಾಣಕ್ಕೆ ತುಂಬಾ ಕಷ್ಟ ಆಗ್ತಿದೆ. ಬಸ್ ವ್ಯವಸ್ಥೆ ಕೂಡ ಕಡಿಮೆ ಆಗಿ, ತುಂಬಾ ರಷ್ ಆಗ್ತಿದೆ. ಕಾಲೇಜು, ಆಫೀಸ್‌ಗೆ ಹೋಗುವವರಿಗೆ ತುಂಬಾ ಸಮಸ್ಯೆ ಆಗ್ತಿದೆ ಎಂದು ಮಹಿಳೆಯೊಬ್ಬರು ಟಿಕೆಟ್ ದರ ಏರಿಕೆಗೆ ಬೇಸರ ಹೊರಹಾಕಿದ್ದಾರೆ. ಮಹಿಳೆಯರಿಗೆ ಫ್ರೀ ಇದ್ದರೂ, ಬೇರೆ ರೀತಿಯಲ್ಲಿ ನಮಗೆ ತೆರಿಗೆ ಹೊರೆ ಹೆಚ್ಚಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: KSRTC Ticket Price Hike – ಬೆಂಗಳೂರಿನಿಂದ ನಿಮ್ಮ ಜಿಲ್ಲೆಗೆ ಎಷ್ಟು ದರ ಏರಿಕೆ? ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಹೆಣ್ಣುಮಕ್ಕಳಿಗೆ ಆ ಭಾಗ್ಯ ಕೊಡ್ತೀವಿ, ಈ ಭಾಗ್ಯ ಕೊಡ್ತೀವಿ ಅಂತಾ ಸರ್ಕಾರದವರು ಎಲ್ಲಾ ಮೋಸ ಮಾಡ್ತಿದ್ದಾರೆ. ಒಂದು ಕಡೆಯಿಂದ ಕೊಟ್ಟು, ಇನ್ನೊಂದು ಕಡೆ ಕೊಟ್ಟಂಗೆ ಮಾಡ್ತಾರೆ. ಹೆಣ್ಣುಮಕ್ಕಳೇನು ಹೊರಗಿನವರಾ? ನಮ್ಮ ಕುಟುಂಬದಲ್ಲೇ ಇರುತ್ತಾರೆ. ಹಾಗಿದ್ಮೇಲೆ, ನಮ್ಮ ಕುಟುಂಬದ ನಾಶವೇ ಇದು. ಇವರು ಮೋಸ ಮಾಡ್ತಾರೆ. ಇದು ಮೋಸದ ಸರ್ಕಾರ ಅಂತಾ ನಮಗೆ ಮೊದಲೇ ಗೊತ್ತಿತ್ತು ಎಂದು ಪ್ರಯಾಣಿಕರೊಬ್ಬರು ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಹೆಣ್ಣುಮಕ್ಕಳಿಗೆ ಬಸ್ ಫ್ರೀ, ವಿದ್ಯುತ್ ಫ್ರೀ ಅಂತೀರಾ. ಆದರೆ, ಬೇರೆ ಎಲ್ಲದರ ರೇಟ್ ಜಾಸ್ತಿ ಮಾಡ್ತೀರಾ. ಬಡವರ ದುಡ್ಡನ್ನು ಸರ್ಕಾರ ಕೊಳ್ಳೆ ಹೊಡೀತಿದೆ. ಸರ್ಕಾರವೇ ಮೋಸ. ಬಿಜೆಪಿ, ಕಾಂಗ್ರೆಸ್ ಯಾವುದು ಬಂದರೂ ಅಷ್ಟೆ. ಎಲ್ಲಾ ವೇಸ್ಟ್. ಹೆಣ್ಣುಮಕ್ಕಳಿಗೆ ಬಸ್ ಫ್ರೀ ಅಂತಾರೆ. ಆದರೆ, ಗಂಡಸರಿಗೆ ರಾತ್ರೋರಾತ್ರಿ ದರ ಏರಿಸಿದ್ದಾರೆ. ಇದು ಮೋಸ. ಬಡವರಿಗೆ ತುಂಬಾ ಕಷ್ಟ ಆಗ್ತಿದೆ. ಸರ್ಕಾರ ಈ ರೀತಿ ಮಾಡಬಾರದು ಎಂದು ಮಹಿಳಾ ಪ್ರಯಾಣಿಕರೇ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕೆ-ಸೆಟ್ 2024 ಫಲಿತಾಂಶ ಪ್ರಕಟ – 6,302 ಅಭ್ಯರ್ಥಿಗಳು ಅರ್ಹ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರವನ್ನು ಸರ್ಕಾರ ಹೆಚ್ಚಳ ಮಾಡಿದೆ. ಶೇ.15 ರಷ್ಟು ಪ್ರಯಾಣ ದರ ಹೆಚ್ಚಿಸಿ ಆದೇಶ ಹೊರಡಿಸಿದೆ.