Tag: ದರ ಇಳಿಕೆ

  • ಗುಡ್ ನ್ಯೂಸ್… ಎಲ್‍ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ

    ಗುಡ್ ನ್ಯೂಸ್… ಎಲ್‍ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ

    ನವದೆಹಲಿ: ಗೃಹ ಬಳಕೆ ಅಡುಗೆ ಅನಿಲ (ಎಲ್‍ಪಿಜಿ) ದರದಲ್ಲಿ ಮತ್ತೆ ಇಳಿಕೆಯಾಗಿದ್ದು, ಸಬ್ಸಿಡಿ ಸಹಿತ ಸಿಲಿಂಡರ್‌ಗೆ 1.46 ರೂ. ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ದರದಲ್ಲಿ 30 ರೂ. ಕಡಿತವಾಗಿದೆ.

    ಗುರುವಾರ ರಾತ್ರಿಯಿಂದ ಈ ಹೊಸ ದರ ಅನ್ವಯವಾಗಲಿದೆ. ಇದರಿಂದಾಗಿ ದೆಹಲಿಯಲ್ಲಿ ಪ್ರತಿ 14.2 ಕೆಜಿ ಸಿಲಿಂಡರ್ ದರ ಗುರುವಾರ 494.99 ರೂ. ಇದ್ದರೆ ಮಧ್ಯರಾತ್ರಿಯಿಂದ 493.53 ರೂ. ಆಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

    ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ 30 ರೂ. ಇಳಿಕೆಯಾಗಿದ್ದು, ದೆಹಲಿಯಲ್ಲಿ 689 ರೂ. ಸಿಗುತ್ತಿದ್ದ 14.2 ಕೆಜಿ ಸಿಲಿಂಡರ್ ಈಗ 659 ರೂ.ಗೆ ಸಿಗಲಿದೆ.

    2018ರ ಜೂನ್‍ನಿಂದ ನವೆಂಬರ್ ತಿಂಗಳ ಅವಧಿಯಲ್ಲಿ ಸತತ 6 ಬಾರಿ ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 14.13 ರೂ. ಹೆಚ್ಚಳವಾಗಿತ್ತು. ಆದರೆ ಕಳೆದ ಎರಡು ತಿಂಗಳಲ್ಲಿ ಗೃಹ ಬಳಕೆ ಅಡುಗೆ ಅನಿಲ (ಎಲ್‍ಪಿಜಿ) ದರವು ಮೂರು ಬಾರಿ ಇಳಿಕೆ ಕಂಡಿದ್ದು, ಗ್ರಾಹಕರ ಸಂತಸಕ್ಕೆ ಕಾರಣವಾಗಿದೆ.

    2018ರ ಡಿಸೆಂಬರ್ ತಿಂಗಳಲ್ಲಿ ಸಬ್ಸಿಡಿ ಸಹಿತ ಅಡುಗೆ ಅನಿಲ ದರವನ್ನು 2ನೇ ಬಾರಿ ಇಳಿಕೆ ಮಾಡಲಾಗಿತ್ತು. ಡಿಸೆಂಬರ್ 1ರಂದು 6.52 ರೂ. ಕಡಿತಗೊಳಿಸಿತ್ತು. ಜನವರಿ 1ರಂದು 5.91 ರೂ. ಇಳಿಕೆ ಮಾಡಿತ್ತು. ಹೀಗಾಗಿ ಒಂದೇ ತಿಂಗಳಿನಲ್ಲಿ 12.43 ರೂ. ಕಡಿಮೆ ಆಗಿತ್ತು. 2018ರ ಡಿಸೆಂಬರ್ 1ರಂದು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 133 ರೂ ಇಳಿಕೆಯಾಗಿದ್ದರೆ ಜನವರಿ 1ರಂದು 120.50 ರೂ. ಇಳಿಕೆಯಾಗಿತ್ತು.

    ಜನವರಿ ತಿಂಗಳಿನಲ್ಲಿ ಸಬ್ಸಿಡಿ ಸಹಿತ ಸಿಲಿಂಡರ್ ಪಡೆಯುವ ಗ್ರಾಹಕರ ಖಾತೆಗೆ 194.01 ರೂ. ಜಮೆಯಾಗಿದ್ದರೆ, ಫೆಬ್ರವರಿಯಲ್ಲಿ 165.47 ರೂ. ಜಮೆಯಾಗಲಿದೆ. ಸರ್ಕಾರ ಈಗ ಒಂದು ಕುಟುಂಬಕ್ಕೆ 14.2 ಕೆಜಿ ತೂಕದ ಗರಿಷ್ಟ 12 ಎಲ್‍ಪಿಜಿ ಸಿಲಿಂಡರ್ ಗಳನ್ನು ಸಬ್ಸಿಡಿ ರೂಪದಲ್ಲಿ ನೀಡುತ್ತಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‍ಪಿಜಿ ದರ ಮತ್ತು ವಿದೇಶಿ ವಿನಿಮಯ ದರವನ್ನು ನೋಡಿಕೊಂಡು ಪ್ರತಿ ತಿಂಗಳು ಭಾರತದಲ್ಲಿ ಎಲ್‍ಪಿಜಿ ಸಿಲಿಂಡರ್ ಗಳ ದರ ಪರಿಷ್ಕರಣೆಯಾಗುತ್ತದೆ. ಬೆಲೆ ಏರಿಕೆಯಾದಾಗ ಸರ್ಕಾರ ಸಬ್ಸಿಡಿಯನ್ನು ಏರಿಕೆ ಮಾಡುತ್ತದೆ. ದರ ಇಳಿಕೆಯಾದಾಗ ಸಬ್ಸಿಡಿ ದರವನ್ನು ಇಳಿಕೆ ಮಾಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಟಾಪ್ ಕ್ಯಾಮೆರಾ ಫೀಚರ್ ಇರೋ ಕ್ಸಿಯೋಮಿಯ 2 ಫೋನ್ ಬೆಲೆ 4 ಸಾವಿರ ರೂ. ದಿಢೀರ್ ಇಳಿಕೆ

    ಟಾಪ್ ಕ್ಯಾಮೆರಾ ಫೀಚರ್ ಇರೋ ಕ್ಸಿಯೋಮಿಯ 2 ಫೋನ್ ಬೆಲೆ 4 ಸಾವಿರ ರೂ. ದಿಢೀರ್ ಇಳಿಕೆ

    ಬೆಂಗಳೂರು: ಕ್ಸಿಯೋಮಿಯ ದುಬಾರಿ ಬೆಲೆಯ ಎರಡು ಫೋನ್ ಗಳ ಬೆಲೆ 4 ಸಾವಿರ ರೂ. ಕಡಿತಗೊಂಡಿದೆ. ಎಂಐ ಎ2 ಮತ್ತು ರೆಡ್‍ಮೀ ನೋಟ್ 5 ಪ್ರೊ ಬೆಲೆ ದಿಢೀರ್ ಇಳಿಕೆಯಾಗಿದೆ.

    4 ಜಿಬಿ ರ‍್ಯಾಮ್ , 64 ಜಿಬಿ ಆಂತರಿಕ ಮೆಮೊರಿಯ ಎಂಐ 2 ಫೋನ್ ಜುಲೈ 2018 ರಲ್ಲಿ ಬಿಡುಗಡೆಯಾದಾಗ 17,999 ರೂ. ನಿಗದಿಯಾಗಿದ್ದರೆ, ಈಗ ಈ ಫೋನ್ 13,999 ರೂ.ಗೆ ಲಭ್ಯವಿದೆ. 6ಜಿಬಿ ರ‍್ಯಾಮ್, 128 ಜಿಬಿ ಆಂತರಿಕ ಮೆಮೊರಿಯ ಫೋನ್ 20,500 ರೂ.ಗೆ ಬಿಡುಗಡೆಯಾಗಿದ್ದರೆ ಈಗ 15,999 ರೂ.ಗೆ ಇಳಿಕೆಯಾಗಿದೆ.

    2018ರಲ್ಲಿ ಬಿಡುಗಡೆಯಾಗಿ ದೇಶದಲ್ಲಿ 1 ಕೋಟಿ ಮಾರಾಟ ಕಂಡಿರುವ ರೆಡ್‍ಮೀ ನೋಟ್ 5 ಸರಣಿಯ ಪ್ರೋ ಫೋನಿನ ಬೆಲೆಯೂ ಇಳಿಕೆಯಾಗಿದೆ. 15,999 ರೂ.ಗೆ ಬಿಡುಗಡೆಯಾಗಿದ್ದ 4 ಜಿಬಿ ರ‍್ಯಾಮ್, 64 ಜಿಬಿಯ ಆಂತರಿಕ ಫೋನ್ ಈಗ 12,999 ರೂ.ಗೆ ಲಭ್ಯವಿದೆ. 6ಜಿಬಿ ರ‍್ಯಾಮ್, 128 ಜಿಬಿ ಆಂತರಿಕ ಮೆಮೊರಿಯ ಫೋನ್ ಬಿಡುಗಡೆಯಾದಾಗ 17,999 ರೂ. ನಿಗದಿಯಾಗಿದ್ದರೆ ಈಗ ಬೆಲೆ 13,999 ರೂ.ಗೆ ಸಿಗುತ್ತಿದೆ.

    ರೆಡ್‍ಮಿ ಎಂಐ ಎ2 ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 158.7 * 75.4 * 7.3 ಮಿ.ಮೀ., 166 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 5.99 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080*2160 ಪಿಕ್ಸೆಲ್, 18:9 ಅನುಪಾತ 403ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 ಓರಿಯೋ (ಆಂಡ್ರಾಯ್ಡ್ ಪೈ ಗೆ ಅಪ್‍ಡೇಟ್ ಮಾಡಬಹುದು), ಕ್ವಾಲಕಂ ಸ್ನ್ಯಾಪ್ ಡ್ರಾಗನ್ 660 ಅಕ್ಟಾ ಕೋರ್ ಪ್ರೊಸೆಸರ್ 2.2 ಗಿಗಾಹರ್ಟ್ಸ್ ಸ್ಪೀಡ್, ಅಡ್ರಿನೋ 512 ಗ್ರಾಫಿಕ್ಸ್ ಪ್ರೊಸೆಸರ್ , ಎಂಐ 10 ಆವೃತ್ತಿ ಅಪ್‍ಡೇಟೆಡ್, 4 ಜಿಬಿ ರ‍್ಯಾಮ್ /64 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು, ಯಾವುದೇ ವಿಸ್ತರಣಾ ಸಾಮರ್ಥ್ಯ ಇಲ್ಲ.

    ಕ್ಯಾಮೆರಾ:
    ಮುಂಭಾಗ 20ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಲೈಟ್ ವಿತ್ ಆಟೋ ಫೇಸ್ ಡಿಟೆಕ್ಷನ್, ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 12ಎಂಪಿ+20ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಫೀಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್, ಟಚ್ ಫೋಕಸ್

    ಇತರೆ ಫೀಚರ್ ಗಳು: ಫೇಸ್ ಡಿಟೆಕ್ಷನ್ ಅನ್‍ಲಾಕ್, ಫಿಂಗರ್ ಪ್ರಿಂಟ್, 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸಾಮರ್ಥ್ಯ ಹಾಗೂ 5 ವೋಟ್ಸ್ ನ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

    ರೆಡ್‍ಮೀ ನೋಟ್5 ಪ್ರೋ ಗುಣವೈಶಿಷ್ಟ್ಯಗಳು
    ಬಾಡಿ ಮತ್ತು ಡಿಸ್ಪ್ಲೇ:
    158.6 * 75.4 * 8.1 ಮಿ.ಮೀ ಗಾತ್ರ, 181 ಗ್ರಾಂ ತೂಕ, 5.99 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080*2160 ಪಿಕ್ಸೆಲ್, 403 ಪಿಪಿಐ, 18:09 ಅನುಪಾತ), ಹೈ ಬ್ರಿಡ್ ಡ್ಯುಯಲ್ ಸಿಮ್ ಸ್ಲಾಟ್.

    ಪ್ಲಾಟ್‍ಫಾರಂ ಮತ್ತು ಮೆಮೊರಿ
    ಆಂಡ್ರಾಯ್ಡ್ 7.1 ನೂಗಟ್ ಓಎಸ್( ಒರೊಯೋಗೆ ಅಪ್‍ಗ್ರೇಡ್ ಮಾಡಬಹುದು), ಕ್ವಾಲಕಂ ಸ್ನಾಪ್‍ಡ್ರಾಗನ್ ಅಕ್ಟಾಕೋರ್ 1.8 ಗಿಗಾಹರ್ಟ್ಸ್ ಪ್ರೊಸೆಸರ್, ಅಡ್ರಿನೋ 509 ಗ್ರಾಫಿಕ್ಸ್ ಪ್ರೊಸೆಸರ್, ಎರಡನೇ ಸಿಮ್ ಸ್ಲಾಟ್ ನಲ್ಲಿ ಕಾರ್ಡ್ ಹಾಕಿದರೆ 256 ಜಿಬಿವರೆಗೆ ಮೆಮೊರಿಯನ್ನು ವಿಸ್ತರಿಸಬಹುದು. 4ಜಿಬಿ/ 6ಜಿಬಿ ರ‍್ಯಾಮ್, 128 ಜಿಬಿ ಆಂತರಿಕ ಮಮೊರಿ.

    ಕ್ಯಾಮೆರಾ ಮತ್ತು ಇತರೇ:
    ಹಿಂದುಗಡೆ ಡ್ಯುಯಲ್ ಕ್ಯಾಮರಾ(12 ಎಂಪಿ, 5 ಎಂಪಿ) ಡ್ಯುಯಲ್ ಎಲ್‍ಇಡಿ ಫ್ಲಾಶ್, ಮುಂದುಗಡೆ ಎಲ್‍ಇಡಿ ಫ್ಲಾಶ್ ಇರುವ 20 ಎಂಪಿ ಕ್ಯಾಮೆರಾವಿದೆ. ಫಿಂಗರ್ ಪ್ರಿಂಟ್ ಸೆನ್ಸರ್, ಫಾಸ್ಟ್ ಬ್ಯಾಟರಿ ಚಾರ್ಜಿಂಗ್(ಕ್ವಿಕ್ ಚಾರ್ಜ್ 2.0), 4000 ಎಂಎಎಚ್ ಬ್ಯಾಟರಿ.

  • ಇಂದಿನಿಂದ 23 ವಸ್ತುಗಳ ಬೆಲೆ ಇಳಿಕೆ: ಸಿನಿಮಾ ಟಿಕೆಟ್ ಬೆಲೆ ಎಷ್ಟು ಇಳಿಕೆಯಾಗುತ್ತೆ?

    ಇಂದಿನಿಂದ 23 ವಸ್ತುಗಳ ಬೆಲೆ ಇಳಿಕೆ: ಸಿನಿಮಾ ಟಿಕೆಟ್ ಬೆಲೆ ಎಷ್ಟು ಇಳಿಕೆಯಾಗುತ್ತೆ?

    ನವದೆಹಲಿ: ಹೊಸ ವರ್ಷಕ್ಕೆ ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ದರ ಇಳಿಕೆಯಾಗುವುದರ ಜೊತೆಗೆ ಇಂದಿನಿಂದ 23 ವಸ್ತುಗಳ ಬೆಲೆಯೂ ಕಡಿಮೆಯಾಗಲಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಜಿಎಸ್‍ಟಿ ಮಂಡಳಿ ಶೇ.28 ತೆರಿಗೆ ಶ್ರೇಣಿಯಲ್ಲಿದ್ದ ವಸ್ತುಗಳ ತೆರಿಗೆಯನ್ನು ಕಡಿತಗೊಳಿಸಿತ್ತು. ಜಿಎಸ್‍ಟಿ ಮಂಡಳಿ ಘೋಷಿಸಿದ್ದ ಸೇವೆಗಳ ಮೇಲಿನ ತೆರಿಗೆ ಇಳಿಕೆ ಹೊಸ ವರ್ಷದ ಮೊದಲ ದಿನವಾದ ಇಂದಿನಿಂದ ಜಾರಿಗೆ ಬರಲಿದೆ.

    ಯಾವ ವಸ್ತುಗಳ ತೆರಿಗೆ ಇಳಿಕೆಯಾಗಿದೆ?
    ಮಾನಿಟರ್, 32 ಇಂಚು ಟಿ.ವಿ ಸ್ಕ್ರೀನ್, ಟೈರ್, ಪವರ್ ಬ್ಯಾಂಕ್‍ಗಳ ಲಿಥಿಯಂ ಬ್ಯಾಟರಿ, ಗೇರ್ ಬಾಕ್ಸ್, ವಿಡಿಯೊ ಗೇಮ್, ಡಿಜಿಟಲ್ ಕ್ಯಾಮೆರಾ, ವಿಡಿಯೊ ರೆಕಾರ್ಡರ್ ಮೇಲಿದ್ದ ತೆರಿಗೆ ಶೇ.28 ರಿಂದ ಶೇ.18ಕ್ಕೆ ತಗ್ಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಗುಡ್‍ನ್ಯೂಸ್ – ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಇಳಿಕೆ: ಯಾವ ನಗರದಲ್ಲಿ ಎಷ್ಟು?

    ಅಂಗವಿಕಲ ವ್ಯಕ್ತಿಗಳಿಗೆ ಬೇಕಾಗುವ ಸಾಧನಗಳ ಮೇಲಿದ್ದ ತೆರಿಗೆ ಶೇ.28 ರಿಂದ ಶೇ.5ಕ್ಕೆ ಇಳಿಕೆಯಾಗಿದ್ದರೆ, ಶಿಲೆಗಳ ಮೇಲಿದ್ದ ತೆರಿಗೆ ಶೇ.18 ರಿಂದ ಶೇ. 12ಕ್ಕೆ ಇಳಿದಿದೆ. ಶೇ.18 ರಿಂದ ಶೇ.5ಕ್ಕೆ ಮಾರ್ಬಲ್ ಮೇಲಿದ್ದ ತೆರಿಗೆ ತಗ್ಗಿದರೆ, ವಾಕಿಂಗ್ ಸ್ಟಿಕ್, ಹಾರುವ ಬೂದಿಯಿಂದ ತಯಾರಿಸುವ ಇಟ್ಟಿಗೆ ಮೇಲಿದ್ದ ತೆರಿಗೆ ಶೇ.12 ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಮ್ಯೂಸಿಕ್ ಪುಸ್ತಕಗಳ ಮೇಲಿದ್ದ ಶೇ.12 ತೆರಿಗೆಯನ್ನು ಸಂಪೂರ್ಣ ತೆಗೆದುಹಾಕಲಾಗಿದೆ.

    ಸಿನಿಮಾ ಟಿಕೆಟ್ ಅಗ್ಗ
    ಸಿನಿ ವೀಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, 100 ರೂ. ತನಕದ ಟಿಕೆಟ್ ಮೇಲೆ ಶೇ.18ರಷ್ಟಿದ್ದ ಜಿಎಸ್‍ಟಿಯನ್ನು ಶೇ.12ಕ್ಕೆ ಇಳಿಸಲಾಗಿದೆ. 100 ರೂ.ಗಿಂತ ಹೆಚ್ಚಿನ ದರದ ಟಿಕೆಟ್ ಮೇಲೆ ಶೇ.28ರಷ್ಟಿದ್ದ ಜಿಎಸ್‍ಟಿ ಶೇ.18ಕ್ಕೆ ತಗ್ಗಿದೆ. ಸರಕು ಸಾಗಣೆ ವಾಹನಗಳ ಮೇಲಿನ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ರೀಮಿಯಂ ಮೊದಲಾದವುಗಳ ಮೇಲಿದ್ದ ತೆರಿಗೆ ಶೇ.18 ರಿಂದ ಶೇ.12ಕ್ಕೆ ಇಳಿಕೆಯಾಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಗಿಫ್ಟ್ – ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಇಳಿಕೆ

    ಕಳೆದ ಡಿ.22ರಂದು ಸಭೆ ಸೇರಿದ್ದ ಜಿಎಸ್‍ಟಿ ಮಂಡಳಿ ದರ ಇಳಿಕೆಗೆ ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರದಿಂದಾಗಿ ಶೇ.28 ತೆರಿಗೆ ದರ ಹೊಂದಿರುವ ವಸ್ತುಗಳ ಸಂಖ್ಯೆ ಸದ್ಯ 28ಕ್ಕೆ ಇಳಿಕೆಯಾಗಿದೆ. 2017ರ ಜು.1ರಂದು ಜಿಎಸ್‍ಟಿ ಜಾರಿಯಾದಾಗ ಶೇ.28ರ ತೆರಿಗೆ ವ್ಯಾಪ್ತಿಯಲ್ಲಿ 226 ಸರಕುಗಳು ಇದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಂಟಿಸಿ ಬಾಡಿಗೆ ಬಸ್ ದರದಲ್ಲಿ ಭಾರೀ ಇಳಿಕೆ

    ಬಿಎಂಟಿಸಿ ಬಾಡಿಗೆ ಬಸ್ ದರದಲ್ಲಿ ಭಾರೀ ಇಳಿಕೆ

    ಬೆಂಗಳೂರು: ಖಾಸಗಿ ಬಸ್ಸು ಸಂಸ್ಥೆಗಳಿಗೆ ಪೈಪೋಟಿ ನೀಡಲು ಮುಂದಾದ ಬಿಎಂಟಿಸಿ ಅಧಿಕಾರಿಗಳು ಈಗ ಆದಾಯ ಹೆಚ್ಚಿಸಲು ಹವಾನಿಯಂತ್ರಿತ ಬಾಡಿಗೆ ಬಸ್ ದರ ಇಳಿಕೆ ಮಾಡಿ, ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

    ಸಾಂದರ್ಭಿಕ ಒಪ್ಪಂದದ ಆಧಾರದ ಮೇಲೆ ಒದಗಿಸುವ ಹವಾನಿಯಂತ್ರಿತ ವೋಲ್ವೋ ದರ ಹಾಗೂ ಪ್ರವಾಸ, ಮದುವೆ, ಹಬ್ಬಗಳಿಗೆ ಒದಗಿಸುವ ಬಸ್ಸುಗಳ ಬಾಡಿಗೆಯಲ್ಲಿ ಭಾರೀ ಇಳಿಕೆಯಾಗಿದೆ. ಆಗಸ್ಟ್ 1 ರಿಂದ ಹೊಸ ದರ ಜಾರಿಯಾಗಲಿದೆ.

    ಎಷ್ಟೆಷ್ಟು ಇಳಿಕೆ?
    ಒಂದು ದಿನದ ಬಸ್ಸಿನ ಬಾಡಿಗೆಯಲ್ಲಿ 2 ಸಾವಿರ ರೂ. ಕಡಿತವಾಗಿದ್ದು. ಹೀಗಾಗಿ ಬಾಡಿಗೆಯ ಮೊತ್ತ 12 ಸಾವಿರ ರೂ.ದಿಂದ 10 ಸಾವಿರ ರೂ.ಗೆ ಇಳಿಕೆಯಾಗಿದೆ. ಅಷ್ಟೇ ಅಲ್ಲದೆ ಪ್ರತಿ ಕಿ.ಮೀ.ಗೆ 10 ರೂ. ಕಡಿತಗೊಳಿಸಲಾಗಿದೆ. ಈ ಮೂಲಕ ಪ್ರತಿ ಕಿ.ಮೀ. 70 ರೂ.ದಿಂದ 60 ರೂ. ಬೆಲೆ ಇಳಿಕೆಯಾಗಲಿದೆ.