Tag: ದರ್ಶನ್‌ ಫ್ಯಾನ್ಸ್‌ಮ

  • ಈ ಕೆಲ್ಸ ಮಾಡಿ ನನಗೆ ಹತ್ತಿರವಾಗಬಹುದು ಅಂದುಕೊಂಡಿದ್ರೆ ಬಿಟ್ಟುಬಿಡಿ – ಫ್ಯಾನ್ಸ್‌ಗೆ ಹೀಗ್ಯಾಕೆ ಹೇಳಿದ್ರು ದರ್ಶನ್‌?

    ಈ ಕೆಲ್ಸ ಮಾಡಿ ನನಗೆ ಹತ್ತಿರವಾಗಬಹುದು ಅಂದುಕೊಂಡಿದ್ರೆ ಬಿಟ್ಟುಬಿಡಿ – ಫ್ಯಾನ್ಸ್‌ಗೆ ಹೀಗ್ಯಾಕೆ ಹೇಳಿದ್ರು ದರ್ಶನ್‌?

    – ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ಚಂದು ಹೊರಕ್ಕೆ

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೊಲೆ ಆರೋಪಿಯಾಗಿರುವ ನಟ ದರ್ಶನ್‌ (Darshan) ಈಗ ಮತ್ತೆ ʻಡೆವಿಲ್ʼ (The Devil) ಶೂಟಿಂಗ್‌ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಬುಧವಾರದಿಂದಲೇ (ಮಾ.12) ಮೈಸೂರಿನಲ್ಲಿ ಶೂಟಿಂಗ್‌ಗೆ ಚಾಲನೆ ನೀಡಲಾಗುತ್ತಿದೆ. ಈ ಬೆನ್ನಲ್ಲೇ ಅಭಿಮಾನಿಗಳಿಗೆ ಇನ್‌ಸ್ಟಾ ಮೂಲಕ ಖಡಕ್‌ ಸಂದೇಶವೊಂದನ್ನು ನೀಡಿದ್ದಾರೆ.

    ಹೌದು. ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ದರ್ಶನ್‌ ಸಂಬಂಧಿ ಚಂದು ಅವರ ಕಾಲಿಗೆ ದರ್ಶನ್‌ ಅಭಿಮಾನಿಯೊಬ್ಬರು ನಮಸ್ಕರಿಸಲು ಮುಂದಾಗಿದ್ದಾರೆ. ಈ ವೀಡಿಯೋ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ. ಇದು ದರ್ಶನ್‌ ಅವರ ಗಮನಕ್ಕೆ ಬರುತ್ತಿದ್ದಂತೆ ಅಸಮಾಧಾನಗೊಂಡಿರುವ ನಟ ಇನ್‌ಸ್ಟಾದಲ್ಲಿ ವಿಸ್ತೃತ ಸಂದೇಶ ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಖಡಕ್‌ ಸಂದೇಶ ಕೊಟ್ಟಿದ್ದಾರೆ.

    ದರ್ಶನ್‌ ಇನ್‌ಸ್ಟಾದಲ್ಲಿ ಏನಿದೆ?
    ಎಲ್ಲಾ ನನ್ನ ಸೆಲೆಬ್ರಿಟಿಸ್‌ ಗಳಿಗೆ ಈ ಮೂಲಕ ತಿಳಿಸುವುದೇನೆಂದರೆ.. ನೀವು ನನ್ನ ಮತ್ತು ನಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ ಅಭಿಮಾನಕ್ಕೆ ನಾವು ಸದಾ ಚಿರಋಣಿ. ಆದರೆ, ಈ ವೀಡಿಯೊದಲ್ಲಿ ನಮ್ಮ ಮೇಲಿರುವ ಅಭಿಮಾನದಿಂದ ಇನ್ನೂ ಏನು ಸಾಧನೆ ಮಾಡದಿರುವ ನನ್ನ ಅಕ್ಕನ ಮಗನಾದ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದನ್ನು ನೋಡಿ ನನ್ನ ಮನಸಿಗೆ ತುಂಬಾ ನೋವಾಗಿದೆ. ಅದರಿಂದ ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ಚಂದುನನ್ನು ಈ ಚಿತ್ರದಿಂದ ಹೊರಗಿಡಲಾಗಿದೆ. ಚಂದು ಅಥವಾ ನನ್ನ ಮಗ ವಿನೀಶ್‌ಗೆ ನೀವು ಅಭಿಮಾನದಿಂದಲೋ ಅಥವಾ ಅವರೊಂದಿಗೆ ಚೆನ್ನಾಗಿ ಗುರುತಿಸಿಕೊಂಡರೆ ನನಗೆ ಹತ್ತಿರವಾಗಬಹುದು ಎಂದು ನೀವು ಭಾವಿಸಿದರೆ ಅದನ್ನು ನಿಮ್ಮ ಮನಸಿನಿಂದ ತೆಗೆದು ಹಾಕಿ ನೀವು ಹೀಗೆ ಮಾಡುವುದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ..

    ಇನ್ನೂ ಮಾರ್ಚ್ 12ರಿಂದ 15ರ ವರೆಗೆ ಮೈಸೂರಿನಲ್ಲಿ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಮಾಡಲು ಅನುಮತಿ ಸಿಕ್ಕಿದೆ. ಮಾ.12ರಿಂದ ಮಾ.14ರವರೆಗೆ ಸರ್ಕಾರಿ ಅಥಿತಿ ಗೃಹದಲ್ಲಿ ಚಿತ್ರತಂಡ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶೂಟಿಂಗ್ ಮಾಡಲಿದ್ದಾರೆ. ಮಾ.15ರಂದು ಲಲಿತಮಹಲ್ ಪ್ಯಾಲೆಸ್‌ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ.

    ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಾರೆ. ಒಂದು ಪಾಳಿಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಯಂತೆ ಒಟ್ಟು 32 ಸಿಬ್ಬಂದಿ ಶೂಟಿಂಗ್ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ನಟನ ಭದ್ರತೆಗಾಗಿ ಸಿಬ್ಬಂದಿ ನಿಯೋಜಿಸಲು 1,64,785 ರೂ. ‘ದಿ ಡೆವಿಲ್’ ಚಿತ್ರತಂಡ ಪಾವತಿಸಿದೆ.