Tag: ದರ್ಶನ್ ಪುಟ್ಟಣ್ಣಯ್ಯ

  • ಅಭಿಮಾನಿಗಳಿಗೆ ಬುದ್ಧಿ ಹೇಳಲು ದರ್ಶನ್‌ಗೆ ಹೇಳ್ತೀನಿ: ದರ್ಶನ್ ಪುಟ್ಟಣ್ಣಯ್ಯ

    ಅಭಿಮಾನಿಗಳಿಗೆ ಬುದ್ಧಿ ಹೇಳಲು ದರ್ಶನ್‌ಗೆ ಹೇಳ್ತೀನಿ: ದರ್ಶನ್ ಪುಟ್ಟಣ್ಣಯ್ಯ

    ಮಂಡ್ಯ: ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್ ಮಾಡದ ರೀತಿ ತಿಳಿಸಲು ನಟ ದರ್ಶನ್ (Darshan) ಜೊತೆ ಮಾತಾಡುತ್ತೇನೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಹೇಳಿದರು.

    ಬುಧವಾರ ಮಂಡ್ಯದ ದುದ್ದದಲ್ಲಿ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸದ್ಯ ದರ್ಶನ್ ಪ್ರಕರಣ ನ್ಯಾಯಾಲಯದಲ್ಲಿದೆ ಇದೆ. ನ್ಯಾಯಾಲಯದ ಮುಂದೆ ಯಾರು ದೊಡ್ಡವರಲ್ಲ. ತಪ್ಪಿತಸ್ಥರು ಯಾರು, ಅವರಿಗೆ ಶಿಕ್ಷೆ ಆಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಇತ್ತ `ಡಿ’ ಫ್ಯಾನ್ಸ್ ಜಟಾಪಟಿ – ಅತ್ತ ಕಾಮಾಕ್ಯದಲ್ಲಿ ದರ್ಶನ್

    ಸಾಮಾಜಿಕ ಜಾಲತಾಣದಲ್ಲಿ ಅನಾವಶ್ಯಕವಾಗಿ ಕಾಮೆಂಟ್ ಹಾಕುವುದು ವೇಸ್ಟ್. ಕಾಮೆಂಟ್ ಮಾಡಿ ಅವರನ್ನು ಇವರನ್ನು ಬೈಯ್ಯುವುದರಿಂದ ಏನು ಆಗಲ್ಲ. ಅಭಿಮಾನಿಗಳು ಕೆಟ್ಟ ಕಾಮೆಂಟ್ ಮಾಡದಂತೆ ನಟ ದರ್ಶನ್ ಸಲಹೆ ಕೊಡಬೇಕು. ಈ ಬಗ್ಗೆ ನಾನು ದರ್ಶನ್ ಅವರ ಜೊತೆ ಮಾತಾಡುತ್ತೇನೆ ಎಂದರು.

    ಸಾಮಾಜಿಕ ಜಾಲತಾಣದಲ್ಲಿ ಪಾಸಿಟಿವ್ ನೆಗೆಟಿವ್ ಎರಡೂ ಇದೆ. ಜಾಲತಾಣವನ್ನು ಎಲ್ಲರೂ ಪಾಸಿಟಿವ್ ಆಗಿ ಬಳಕೆ ಮಾಡಬೇಕು. ಒಂದು ಪ್ಲಾಟ್‌ಫಾರಂ ನೀಡಿ ಅವರು ಇಷ್ಟ ಬಂದಹಾಗೆ ಮಾಡೋಕೆ ಬಿಡೋಕೆ ಆಗಲ್ಲ. ಸರ್ಕಾರವೂ ಸಹ ಈ ಬಗ್ಗೆ ಗಮನಹರಿಸಬೇಕಾಗಿದೆ. ಜನರನ್ನು ಈ ಸಂಬಂಧ ಎಜುಕೇಟ್ ಮಾಡಬೇಕಾಗಿದೆ ಎಂದು ದರ್ಶನ್ ಪುಟ್ಟಣ್ಣಯ್ಯ ಹೇಳಿದರು. ಇದನ್ನೂ ಓದಿ: ಕುಟುಂಬ ಸಮೇತ ಅಸ್ಸಾಂನ ಕಾಮಾಕ್ಯ ದೇವಿಯ ಹರಕೆ ತೀರಿಸಿದ ದರ್ಶನ್

  • ಗ್ಯಾರಂಟಿಯಿಂದಾಗಿ ಅನುದಾನ ಸಿಗ್ತಿಲ್ಲ: ದರ್ಶನ್ ಪುಟ್ಟಣ್ಣಯ್ಯ

    ಗ್ಯಾರಂಟಿಯಿಂದಾಗಿ ಅನುದಾನ ಸಿಗ್ತಿಲ್ಲ: ದರ್ಶನ್ ಪುಟ್ಟಣ್ಣಯ್ಯ

    ಮಂಡ್ಯ: ನಾವು ಯಾವ ಊರಿಗೆ ಹೋದರೂ ಸಹ ಜನರು ರಸ್ತೆ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಂದ (Guarantee Scheme) ಇತರೆ ಅಭಿವೃದ್ಧಿ ಕೆಲಸಗಳಿಗೆ ಅನುದಾನಗಳು ಬರುತ್ತಿಲ್ಲ. ಹೀಗಾಗಿ ಸರ್ಕಾರ ಗ್ಯಾರಂಟಿ ಯೋಜನೆಗಳ ಬಗ್ಗೆ ಪರಾಮರ್ಶೆ ಮಾಡಿ ಅಭಿವೃದ್ಧಿ ಯೋಜನೆಗಳಿಗೂ ಹಣ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಮಂಡ್ಯ (Mandya) ಜಿಲ್ಲೆಯ ಮೇಲುಕೋಟೆ (Melukote)  ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ (Dharshan Puttannaiah) ಹೇಳಿದ್ದಾರೆ.

    ಈ ಕುರಿತು ಮಂಡ್ಯದಲ್ಲಿ ಮಾತನಾಡಿದ ಅವರು, ನಾವು ಹೋದ ಕಡೆಯಲ್ಲಿ ಎಲ್ಲಾ ಜನರು ನಮಗೆ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕೆಲಸಗಳು ಬೇಕು ಎಂದು ಹೇಳುತ್ತಿದ್ದಾರೆ. ಮೂರು ಹೊತ್ತು ಊಟ ಮಾಡುವುದರ ಜೊತೆಗೆ ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದು ಸಹ ಅನಿವಾರ್ಯವಾಗಿದೆ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ರಸ್ತೆಗಿಳಿಯಲ್ಲ ಡಬ್ಬಲ್ ಡೆಕ್ಕರ್ ಬಸ್ – ಯೋಜನೆ ಕೈಬಿಟ್ಟ ಬಿಎಂಟಿಸಿ

    ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಬಗ್ಗೆ ಪರಾಮರ್ಶೆ ಮಾಡಬೇಕಾಗಿದೆ. ಜನರು ಗೆದ್ದು ಒಂದೂವರೆ ವರ್ಷವಾಗಿದೆ ಏನು ಕೆಲಸ ಮಾಡಿದ್ದೀರಾ ಎಂದು ಕೇಳುತ್ತಿದ್ದಾರೆ. ಜನರ ಅಭಿವೃದ್ಧಿಗೆ ಹಲವು ಇಲಾಖೆಗಳಿಂದ ಅನುದಾನಗಳು ಸಿಗುತ್ತಿಲ್ಲ. ಹೀಗಾಗಿ ಅಭಿವೃದ್ಧಿಗೆ ಹಣ ಅವಶ್ಯಕತೆ ಇದೆ. ಸದ್ಯ ರಾಜ್ಯದ ಎಲ್ಲಾ ಆದಾಯದ ಮೂಲ ಗ್ಯಾರಂಟಿ ಯೋಜನೆಗಳಿವೆ ಹೋಗುತ್ತಿದೆ. ಹೀಗಾಗಿ ಸಮತೋಲನವಾಗಿ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕೆಲಸಕ್ಕೆ ಅನುದಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನನಗೆ ಈ ಟಿವಿ ಬೇಡ, ತೆಗೆದುಕೊಂಡು ಹೋಗಿ: ದರ್ಶನ್‌

  • ದರ್ಶನ್ ಭೇಟಿಗೆ ಜೈಲಿಗೆ ಬಂದ ತರುಣ್ ಸುಧೀರ್, ಶಾಸಕ ದರ್ಶನ್ ಪುಟ್ಟಣ್ಣಯ್ಯ

    ದರ್ಶನ್ ಭೇಟಿಗೆ ಜೈಲಿಗೆ ಬಂದ ತರುಣ್ ಸುಧೀರ್, ಶಾಸಕ ದರ್ಶನ್ ಪುಟ್ಟಣ್ಣಯ್ಯ

    ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ಜೈಲು ಪಾಲಾಗಿರುವ ದರ್ಶನ್‌ರನ್ನು (Darshan) ಇದೀಗ ಕಾಟೇರ ನಿರ್ದೇಶಕ ತರುಣ್ ಸುಧೀರ್ (Tharun Sudhir) ಮತ್ತು ಶಾಸಕ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಭೇಟಿಯಾಗಿದ್ದಾರೆ.

    ಮರ್ಡರ್ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿರುವ ದರ್ಶನ್‌ರನ್ನು ನೋಡಲು ಒಬ್ಬೊಬ್ಬರೇ ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಡುತ್ತಿದ್ದಾರೆ. ಈಗ ಪ್ರತ್ಯೇಕ ಕಾರಿನಲ್ಲಿ ಜೈಲಿನ ಚೆಕ್ ಪೋಸ್ಟ್ ಒಳಗೆ ತರುಣ್ ಸುಧೀರ್ ಮತ್ತು ದರ್ಶನ್ ಪುಟ್ಟಣ್ಣಯ್ಯ ಆಗಮಿಸಿದ್ದಾರೆ. ಜೈಲಿನ ಪ್ರತ್ಯೇಕ ಕೊಠಡಿಯಲ್ಲಿ ದರ್ಶನ್‌ರನ್ನು ಭೇಟಿಯಾಗಿದ್ದಾರೆ.

    ಸೋನಲ್ (Sonal) ಜೊತೆಗಿನ ಮದುವೆ ಸಂಗತಿ ನಿಜ ಎಂದು ಒಪ್ಪಿಕೊಂಡ ಬೆನ್ನಲ್ಲೇ ದರ್ಶನ್ ಕ್ಷೇಮ ವಿಚಾರಿಸಲು ಮತ್ತು ವಿವಾಹದ ವಿಚಾರ ತಿಳಿಸಲು ತರುಣ್ ಸುಧೀರ್ ಈಗ ದರ್ಶನ್ ಭೇಟಿಯಾಗಿದ್ರೆ, ಇತ್ತ ದರ್ಶನ್ ಪುಟ್ಟಣ್ಣಯ್ಯ ಕೂಡ ನಟನನ್ನು ಮಾತನಾಡಿಸಲು ಬಂದಿದ್ದಾರೆ.

    ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ. ಅದರಂತೆ ಈ ವಾರ ಈಗಾಗಲೇ ಅತ್ತಿಗೆ ವಿಜಯಲಕ್ಷ್ಮಿ ಜೊತೆ ದಿನಕರ್ ತೂಗುದೀಪ್ ಭೇಟಿಯಾಗಿದ್ದರು.

  • ದರ್ಶನ್ ನನ್ನ ಸ್ನೇಹಿತರು – ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರೋದು ಶಾಕ್ ಆಗ್ತಿದೆ: ದರ್ಶನ್ ಪುಟ್ಟಣ್ಣಯ್ಯ

    ದರ್ಶನ್ ನನ್ನ ಸ್ನೇಹಿತರು – ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರೋದು ಶಾಕ್ ಆಗ್ತಿದೆ: ದರ್ಶನ್ ಪುಟ್ಟಣ್ಣಯ್ಯ

    ಬೆಂಗಳೂರು: ನಟ ದರ್ಶನ್ (Actor Darshan) ನನ್ನ ಸ್ನೇಹಿತ, ಕೊಲೆ ಕೇಸ್ ನಲ್ಲಿ ಅರೆಸ್ಟ್ ಆಗಿರೋ ವಿಷಯ ನನಗೂ ಶಾಕ್ ಆಯ್ತು ಅಂತ ಶಾಸಕರೂ ಆಗಿರುವ ನಟ ದರ್ಶನ್ ಸ್ನೇಹಿತ ದರ್ಶನ್ ಪುಟ್ಟಣ್ಣಯ್ಯ (Dharshan Puttannaiah) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ದರ್ಶನ್ ಬಂಧನದ (Darshan Arrest) ಬಗ್ಗೆ ಮಂಗಳವಾರ ನಮಗೆ ಮಾಹಿತಿ ಗೊತ್ತಾಯ್ತು. ಮಂಡ್ಯದಲ್ಲಿ ಪ್ರೆಸ್‌ನವರು ಕೇಳಿದಾಗ ಗೊತ್ತಿರಲಿಲ್ಲ. ಈಗ ಬಂಧನವಾಗಿರುವ ಮಾಹಿತಿ ಗೊತ್ತಾಯ್ತು. ಏನಾಯ್ತು ಏನು ಅನ್ನೋದು ಈಗ ಮಾಹಿತಿಗಳು ಹೊರಗಡೆ ಬರ್ತಿದೆ. ಪೊಲೀಸರು ಮಂಗಳವಾರ ಹೇಳಿಕೆ ಪಡೆದಿದ್ದಾರೆ. ದರ್ಶನ್ ಅವರು ನನಗೆ ತುಂಬಾ ಆತ್ಮೀಯರು. ನಮ್ಮ ನಡುವೆ ಹಲವಾರು ವರ್ಷಗಳಿಂದ ಒಳ್ಳೆಯ ಸಂಬಂಧ ಇದೆ. ಈ ರೀತಿ ಆಗಿದೆ ಅಂದಾಗ ನನಗೂ ಶಾಕ್ ಆಯ್ತು ಎಂದಿದ್ದಾರೆ.

    ಈ ಪ್ರಕರಣ ಏನಾಗುತ್ತೆ ಅನ್ನೋದು ಪೊಲೀಸರ ತನಿಖೆಯಿಂದ ಗೊತ್ತಾಗುತ್ತೆ. ಈ ಕೇಸ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಸಂಶಯ ಇದೆ ಅಂತ ದರ್ಶನ್‌ ಅವರನ್ನ ಅರೆಸ್ಟ್‌ ಮಾಡಿದ್ದಾರೆ. ಈಗ ಅದು ಸಾಬೀತು ಆಗಬೇಕಿದೆ. ಇದೆಲ್ಲ ನಮಗೆ ಗೊತ್ತಿಲ್ಲ ನಮ್ಮದು ಫ್ರೆಂಡ್ ಶಿಪ್ ಅಂತೂ ಇದ್ದೇ ಇದೆ, ಮುಂದೆಯೂ ಇರುತ್ತೆ. ಆದ್ರೆ ಕಳೆದೆರಡು ದಿನಗಳಿಂದ ದರ್ಶನ್‌ ಜೊತೆ ಸಂಪರ್ಕದಲ್ಲಿರಲಿಲ್ಲ. ಈ ವಿಷಯದ ಬಗ್ಗೆಯೂ ಮಾತುಕತೆ ಆಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಇನ್ನೂ ದರ್ಶನ್ ವಿಚಾರದಲ್ಲಿ ಬರೀ ಕಾಂಟ್ರವರ್ಸಿ ಹೆಚ್ಚಾಗ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಷಯ ಅವರಿಗೆ ಕೇಳಬೇಕು. ಕೊಲೆ ಮಾಡುವ ಹಂತಕ್ಕೆಲ್ಲ ಹೋಗಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಅದೇ ನನಗೂ ಶಾಕ್ ಆಯ್ತು. ಯಾಕೆ ಏನು ಅಂತ ನನೆಗೆ ಗೊತ್ತಿಲ್ಲ ವಿಚಾರಣೆ ಮಾಡಿದಾಗ ಗೊತ್ತಾಗುತ್ತೆ, ಮುಂದೆ ಏನಾಗುತ್ತೆ ನೋಡೋಣ ಅಂದಿದ್ದಾರೆ.

  • ಮಾಜಿ ಪ್ರಧಾನಿಯೊಬ್ಬರ ಮಗ ಜಿಲ್ಲೆಗೆ ಬಂದು ಶಾಂತಿ ಕದಡುವ ನಿರ್ಧಾರ ಮಾಡಿರೋದು ಸರಿಯಲ್ಲ: ಚಲುವರಾಯಸ್ವಾಮಿ

    ಮಾಜಿ ಪ್ರಧಾನಿಯೊಬ್ಬರ ಮಗ ಜಿಲ್ಲೆಗೆ ಬಂದು ಶಾಂತಿ ಕದಡುವ ನಿರ್ಧಾರ ಮಾಡಿರೋದು ಸರಿಯಲ್ಲ: ಚಲುವರಾಯಸ್ವಾಮಿ

    ಕುಮಾರಣ್ಣ ಬೇಕಿದ್ರೆ ನೀವು ಬಿಜೆಪಿ ಸೇರಿಕೊಳ್ಳಿ
    – ಕೇಸರಿ ಶಾಲು ಹಾಕಿಕೊಂಡು ನಿಮ್ಮ ಪಕ್ಷಕ್ಕೆ ಅಂತಿಮ ಯಾತ್ರೆ ಮಾಡಿದ್ದೀರಿ
    – ಮಂಡ್ಯದ ಜನರನ್ನು ಧರ್ಮದ ಹೆಸರು ಹೇಳಿ ನಂಬಿಸಬಹುದು ಅನ್ನೋದು ನಿಮ್ಮ ಭ್ರಮೆ ಎಂದ ಸಚಿವ

    ಮಂಡ್ಯ: ಮಾಜಿ ಪ್ರಧಾನಿಯವರ ಮಗನಾದ ಕುಮಾರಸ್ವಾಮಿ (KumaraSwamy) ಅವರು ಜಿಲ್ಲೆಗೆ ಬಂದು ಶಾಂತಿ ಕದಡುವ ನಿರ್ಧಾರ ಮಾಡಿರೋದು ಸರಿಯಲ್ಲ ಎಂದು ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಕಿಡಿಕಾರಿದ್ದಾರೆ.

    ಶಾಸಕ ಗಣಿಗ ರವಿಕುಮಾರ್ (Ganiga Ravikumar) , ಶಾಸಕ ದರ್ಶನ್ ಪುಟ್ಟಣ್ಣಯ್ಯ (Dharshan Puttannaiah)  ಜೊತೆಗೂಡಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಾಜಿ ಸಿಎಂ ಹೆಚ್‌ಡಿಕೆಗೆ ಮಂಡ್ಯ ಎಲ್ಲಾ ರೀತಿಯ ಶಕ್ತಿ ನೀಡಿದೆ. ಈ ಜಿಲ್ಲೆಯ ಜನರು ಅವರಿಗೆ ಸ್ವಂತ ಜಿಲ್ಲೆಗಿಂತ ಹೆಚ್ಚಿನ ಪ್ರೀತಿ, ಮಹತ್ವ ಕೊಟ್ಟಿದ್ದರು. ಆದರೂ ಅವರು ಇಲ್ಲಿನ ಜನರ ನೆಮ್ಮದಿ ಹಾಳು ಮಾಡುವ ಅವಶ್ಯಕತೆ ಇತ್ತಾ? ನಮ್ಮ ಯುವಕರ ನೆಮ್ಮದಿ ಹಾಳು ಮಾಡುವ ಕೆಲಸ ಮಾಡ್ತಿದ್ದಾರೆ. ಮಂಡ್ಯ ಜಿಲ್ಲೆ ಬಗ್ಗೆ ನಿಮಗೆ ಯಾಕಿಷ್ಟು ದ್ವೇಷ. ನನ್ನ ಮೇಲೆ ಅಥವಾ ಸ್ಥಳೀಯ ಶಾಸಕರ ಮೇಲೆ ದ್ವೇಷ ಮಾಡಿ. ಆದರೆ ಜಿಲ್ಲೆಯ ಜನತೆ ಮೇಲೆ ದ್ವೇಷ ಮಾಡಿ ಗಲಭೆ ಮಾಡಿಸಬೇಡಿ ಎಂದಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ತಪ್ಪು ಮಾಡಿದ್ರೆ ನೇಣಿಗೆ ಹಾಕಿ: ಕೆರಗೋಡು ಕೇಸ್ ತನಿಖೆಗೆ ಆಗ್ರಹಿಸಿ ಹೆಚ್‌ಡಿಕೆ ಸವಾಲು

    ನಮ್ಮ ಜಿಲ್ಲೆಯ ಜನ ಸ್ವಾಭಿಮಾನ, ಗೌರವದಲ್ಲಿ ರಾಜ್ಯದಲ್ಲೇ ಮಾದರಿ ಆಗಿದ್ದಾರೆ. ಇಂತಹ ಜಿಲ್ಲೆಯಲ್ಲಿ ಬಂದು ಜನರಿಗೆ ಅವಮಾನ ಮಾಡಬೇಡಿ ಎಂದಿದ್ದಾರೆ. ಕುಮಾರಸ್ವಾಮಿ ಸಿಎಂ ಮಾಡಲು ಈ ಜಿಲ್ಲೆ ಜನರ ಆಶೀರ್ವಾದ ಕಾರಣ. ಬಾವುಟದ ವಿಚಾರದಲ್ಲಿ ಇವತ್ತು ಪ್ರತಿಭಟನೆ, ಪಾದಯಾತ್ರೆ ಮಾಡ್ತಿದ್ದಾರೆ. ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಯಾಕೆ ಇಂತಹ ನಿರ್ಧಾರ ಮಾಡಲಿಲ್ಲ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯಾಕೆ ಇಷ್ಟೊಂದು ಆಸಕ್ತಿ ಇಲ್ಲ. ಮಂಡ್ಯ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾನೂನು ವಿರುದ್ಧ ಯಾರೇ ನಡೆದುಕೊಂಡರು ಅವರ ವಿರುದ್ಧ ಕ್ರಮ: ಪರಮೇಶ್ವರ್

    ಜಯಪ್ರಕಾಶ್ ನಾರಾಯಣ್, ಮಾಜಿ ಪ್ರಧಾನಿ ಹೆಚ್‌ಡಿಕೆ ಜಾತ್ಯತೀತವಾಗಿ ಜೆಡಿಎಸ್ ಪಕ್ಷ ಕಟ್ಟಿದ್ರು. ಆದರೆ ನೀವು ನಿನ್ನೆ ಕೇಸರಿ ಶಾಲು ಹಾಕಿಕೊಂಡು ನಿಮ್ಮ ಪಕ್ಷಕ್ಕೆ ಅಂತಿಮ ಯಾತ್ರೆ ಮಾಡಿದ್ದೀರಿ. ಹಸಿರು ಶಾಲು ಹಾಕಿಕೊಂಡು ರೈತರ ಪರವಾಗಿ ಹೋರಾಟ ಮಾಡ್ತಿದ್ರಿ. ಆದ್ರೆ ಇದೀಗ ರಾಷ್ಟ್ರಧ್ವಜ ಹೋರಾಟ ಮಾಡ್ತಿದ್ದೀರಿ. ಅಂದರೆ ನಿಮ್ಮ ಉದ್ದೇಶ ರಾಷ್ಟ್ರಧ್ವಜವನ್ನು ಕೆಳಗೆ ಇಳಿಸೋದಾ? ನಿಮ್ಮ ಹೋರಾಟ ರಾಷ್ಟ್ರ ದ್ವಜ ವಿರುದ್ಧವೇ? ತ್ರಿವರ್ಣ ಧ್ವಜವನ್ನು ಕೆಳಗೆ ಇಳಿಸುವ ಸಲುವಾಗಿಯೇ ಹೋರಾಟ ಮಾಡ್ತಿದ್ದೀರಿ. ನಿಮ್ಮ ವೈಯಕ್ತಿಕ ಹಿತಾಸಕ್ತಿಗೆ ದೇಶದ ಧ್ವಜಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಸರಾ ಆನೆ ಕ್ಯಾಪ್ಟನ್ ಅರ್ಜುನನ ವೀರಮರಣದ ಕೊನೇ ಕ್ಷಣದ ರೋಚಕ ವೀಡಿಯೋ ವೈರಲ್

    ಕುಮಾರಸ್ವಾಮಿ ಒಂದು ವೇಳೆ ಅಧಿಕಾರದಲ್ಲಿದ್ರೆ ಏನು ಮಾಡ್ತಿದ್ರಿ?  ರಾಷ್ಟ್ರಧ್ವಜ ತೆಗೆದು ಬೇರೆ ಧ್ವಜ ಹಾಕಲು ಅನುಮತಿ ಕೊಡ್ತಿದ್ರಾ? ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ತೆಗೆದುಕೊಂಡಿರೋ ನಿರ್ಧಾರ ಸರಿಯಾಗಿದೆ. ಆದರೆ ನಿನ್ನೆ ಪಾದಯಾತ್ರೆ ಮಾಡಿ ಜನರ ನೆಮ್ಮದಿ ಕೆಡಿಸಿದ್ದೀರಿ. ಇದನ್ನ ಈ ಜಿಲ್ಲೆಯ ಜನ ಕ್ಷಮಿಸಲ್ಲ. ಈ ಜಿಲ್ಲೆಯ ಜನರನ್ನ ಧರ್ಮದ ಹೆಸರು ಹೇಳಿ ನಂಬಿಸಬಹುದು ಅನ್ನೋದು ನಿಮ್ಮ ಭ್ರಮೆ ಎಂದು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಲಕ್ಷ್ಮಣ  ಸವದಿ ಬಿಜೆಪಿಗೆ ಬಂದ್ರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬರುತ್ತೆ: ರಮೇಶ್ ಕತ್ತಿ

    ಕೆರಗೋಡು ಹನುಮಧ್ವಜ ವಿವಾದ ವಿಚಾರ ಕುರಿತು ಮಾತನಾಡಿದ ಅವರು, ಕೆರಗೋಡು ಗ್ರಾಮದಲ್ಲಿ ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸಲು ಅನುಮತಿ ಪಡೆದು ಗ್ರಾಮಸ್ಥರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಷರತ್ತುಗಳಿಗೆ ಒಪ್ಪಿಕೊಂಡು ಧ್ವಜಸ್ತಂಭ ಹಾಕಿದ್ದಾರೆ. ಆದರೆ ಷರತ್ತುಗಳ ಮೀರಿ ಇವರು ಹನುಮಧ್ವಜ ಹಾಕಿದ್ದಾರೆ. ಅದಕ್ಕಾಗಿ ಹನುಮಧ್ವಜ ಇಳಿಸಿ ರಾಷ್ಟ್ರಧ್ವಜ ಹಾಕಲಾಗಿದೆ. ಆದರೆ ಇಲ್ಲಿ ಯಾಕೆ ಇಷ್ಟೊಂದು ಗೊಂದಲ ಮಾಡಿದ್ದಾರೋ ಗೊತ್ತಿಲ್ಲ. ಇಲ್ಲಿನ ಜನರ ನೆಮ್ಮದಿ ಹಾಳು ಮಾಡೋದಕ್ಕೆ ಹೆಚ್‌ಡಿಕೆ, ಆರ್.ಅಶೋಕ್, ಸಿ.ಟಿ.ರವಿ ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್ ನಾಮಫಲಕ ವಿಚಾರ – ಎರಡು ಗುಂಪುಗಳ ನಡುವೆ ಘರ್ಷಣೆ

    ಜಿಲ್ಲೆಯ ಸಮಸ್ಯೆಗಳ ಬಗ್ಗೆ ಹೆಚ್‌ಡಿಕೆ ಗಮನಹರಿಸಿಲ್ಲ, ಹೋರಾಟ ಮಾಡಿಲ್ಲ. ಜಿಲ್ಲೆಯ ನೀರಾವರಿ ಯೋಜನೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಿನ್ನೆ ಬಂದು ರಾಷ್ಟ್ರಧ್ವಜ ಹಾಕಿರೋದಕ್ಕೆ ಹೋರಾಟ ಮಾಡಿದ್ದೀರಿ. ಬಿಜೆಪಿ ನಾಯಕರ ಜೊತೆ ಸೇರಿ ರಾಷ್ಟ್ರಧ್ವಜ ವಿರುದ್ಧ ಪ್ರತಿಭಟನೆ ನಡೆಸಿದ್ದೀರಿ. ಕುಮಾರಣ್ಣ ನಿಮಗೆ ತಾಳ್ಮೆ ಇರಲಿ. ಸೋತಿದ್ದೀನಿ ಅನ್ನುವ ನಿರಾಸೆಗೆ ಏನೇನೋ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಜಿಲ್ಲೆಯ ಜನ ನಿಮಗೆ ಹೆಚ್ಚಿನ ಪ್ರೀತಿ ಕೊಟ್ಟಿದ್ದಾರೆ. ಹೊರಗಿನಿಂದ ಬಂದು ಇಲ್ಲಿ ಅಧಿಕಾರ ಅನುಭವಿಸಿದ್ದೀರಿ. ಹಾಗಾಗಿ ಇಲ್ಲಿಯ ಜನಕ್ಕೆ ಅನ್ಯಾಯ ಮಾಡಬೇಡಿ. ಬೇಕಿದ್ರೆ ನೀವು ಬಿಜೆಪಿ ಸೇರ್ಪಡೆ ಆಗಿಬಿಡಿ. ಕೇಸರಿ ಬಟ್ಟೆ ಹಾಕಿಕೊಂಡು ಬಿಜೆಪಿ ಸೇರಿಕೊಳ್ಳಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೋಸುಂಬೆ ಉರುಫ್‌ ಊಸರವಳ್ಳಿ ಕಾಂಗ್ರೆಸ್‌ ಪಕ್ಷಕ್ಕೆ ಒಳಗೊಂದು ಹೊರಗೊಂದು ವೇಷ: ಜೆಡಿಎಸ್‌ ವಾಗ್ದಾಳಿ

    ಇವರ ಸುಳ್ಳು ಪ್ರಚೋದನೆಗೆ ಯಾರೂ ಕಿವಿಗೊಡಬೇಡಿ. ನಿಮ್ಮ ಕಷ್ಟ-ಸುಖಕ್ಕೆ ನಾವು ಜೊತೆಯಾಗಿ ಇರುತ್ತೀವಿ. ಮುಂದಿನ ನಾಲ್ಕು ವರ್ಷ ಅಭಿವೃದ್ಧಿಗೆ ಹೆಚ್ಚು ಗಮನ ಕೊಡುತ್ತೇವೆ. ಕಾವೇರಿ ವಿಚಾರ, ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಸೂಕ್ತ ನಿರ್ಧಾರ ಮಾಡ್ತಿದ್ದೀವಿ. ಇಂತಹ ಅಪಪ್ರಚಾರ, ಪ್ರಚೋದನೆಗೆ ಕಿವಿಗೊಡಬೇಡಿ ಎಂದು ಮಂಡ್ಯದ ಜನತೆಗೆ ಸಚಿವ ಚಲುವರಾಯಸ್ವಾಮಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ED  ಕೈಗೆ ಸಿಗದ ಜಾರ್ಖಂಡ್ ಸಿಎಂ – ಹೇಮಂತ್ ಸೊರೆನ್  BMW ಕಾರು  ವಶಕ್ಕೆ

  • ಬರದ ಮಧ್ಯೆಯೂ ವಿದೇಶ ಪ್ರವಾಸ- ಶಾಸಕ ದರ್ಶನ್ ಪುಟ್ಟಣ್ಣಯ್ಯ ನಡೆಗೆ ರೈತರ ಆಕ್ರೋಶ

    ಬರದ ಮಧ್ಯೆಯೂ ವಿದೇಶ ಪ್ರವಾಸ- ಶಾಸಕ ದರ್ಶನ್ ಪುಟ್ಟಣ್ಣಯ್ಯ ನಡೆಗೆ ರೈತರ ಆಕ್ರೋಶ

    ಮಂಡ್ಯ: ರಾಜ್ಯದಲ್ಲಿ ಭೀಕರ ಬರಗಾಲ ಒಂದು ಕಡೆಯಾದರೆ ಮತ್ತೊಂದು ಕಡೆ ಕಾವೇರಿ ಕೊಳ್ಳದ ರೈತರು ಕಾವೇರಿ ನೀರಿಗಾಗಿ (Cauvery Water) ಹೋರಾಟ ನಡೆಸುತ್ತಿದ್ದಾರೆ. ಆದರೆ ಕಾವೇರಿ ಕೊಳ್ಳದ ಶಾಸಕರೊಬ್ಬರು ಇವುಗಳ ನಡುವೆಯೂ ತಮ್ಮ ಕ್ಷೇತ್ರದ ಜನರನ್ನ ಮರೆತು ವಿದೇಶದ ಪ್ರವಾಸದಲ್ಲಿದ್ದಾರೆ. ಚುನಾವಣೆ ಮುಗಿದ ಬಳಿಕ ಐದು ತಿಂಗಳಲ್ಲಿ ಶಾಸಕರು ಕೈಕೊಂಡ ಮೂರನೇ ಪ್ರವಾಸ ಇದಾಗಿದೆ.

    ಬರದ ನಡುವೆ ನಿಲ್ಲದ ಶಾಸಕನ ವಿದೇಶ ಪ್ರವಾಸಕ್ಕೆ (Foreign Tour) ಅನ್ನದಾತರು ಸಿಡಿದೆದ್ದಿದ್ದಾರೆ. ಗೆದ್ದ 5 ತಿಂಗಳಲ್ಲಿ ಮೂರನೇ ಬಾರಿ ವಿದೇಶಕ್ಕೆ ಹಾರಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನಡೆಗೆ ತೀವ್ರ ಖಂಡನೆ ವ್ಯಕ್ತವಾಗ್ತಿದೆ.. ಚುನಾವಣೆ ವೇಳೆ ಶಾಸಕರು ಅಮೆರಿಕಾದಲ್ಲಿನ ತನ್ನ ಕಂಪನಿ ಮಾರಿ ಹುಟ್ಟೂರಲ್ಲೇ ಇರುವುದಾಗಿ ಭರವಸೆ ನೀಡಿದ್ದರು. ಆದರೆ ಗೆದ್ದ ಕೆಲವೇ ದಿನಗಳಲ್ಲಿ ಅಮೆರಿಕಾಕ್ಕೆ ತೆರಳಿದ್ದ ದರ್ಶನ್ ಪುಟ್ಟಣ್ಣಯ್ಯ. ವಾಪಾಸ್ ಬಂದ ಬಳಿಕ ಕ್ಷೇತ್ರದ ಜನರ ಕ್ಷಮೆಯಾಚಿಸಿ ಮತ್ತೆ ವಿದೇಶಕ್ಕೆ ಹೋಗಲ್ಲ ಎಂದಿದ್ರು.

    ಆದರೆ ಕಳೆದ ಆಗಸ್ಟ್ ನಲ್ಲೂ ವಿದೇಶಕ್ಕೆ ತೆರಳಿದ್ದ ಶಾಸಕರು ಸ್ವಾತಂತ್ರ್ಯ ದಿನಾಚರಣೆಗೂ ಗೈರಾಗಿದ್ದರು. ಶಾಸಕರ ಅನುಪಸ್ಥಿತಿಯಲ್ಲಿ ಸ್ವತಂತ್ರ ದಿನಾಚರಣೆ ಮಾಡಲಾಗಿತ್ತು. ಈಗ ಮತ್ತೆ ಕನ್ನಡ ರಾಜ್ಯೋತ್ಸವಕ್ಕೂ ಗೈರಾಗಿದ್ದಾರೆ. ಇದನ್ನೂ ಓದಿ: ಹೀಗೆ ಆದ್ರೆ ಮುಂದೆ ಕುಡಿಯೋಕು ಸಹ ನೀರು ಇರಲ್ಲ: ಕಾವೇರಿ ಹೋರಾಟದಲ್ಲಿ ಅಜ್ಜಿ ಕಣ್ಣೀರು

    ಜಿಲ್ಲೆಯಲ್ಲಿ ಕಾವೇರಿ ಸಮಸ್ಯೆ, ಬರ, ಕರೆಂಟ್ ಹೀಗೆ ರೈತರು ಸಾಲು ಸಾಲು ಸಮಸ್ಯೆ ಎದುರಿಸುತ್ತಿದ್ರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಡೋಂಟ್ ಕೇರ್ ಎಂದಂತಿದೆ. ಶಾಸಕ ದರ್ಶನ್ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಕ್ಷೇತ್ರದ ಜನರು. ಒಮ್ಮೆ ವಿದೇಶಕ್ಕೆ ಹೋದರೆ ತಿಂಗಳುಗಟ್ಟಲೆ ಕ್ಷೇತ್ರಕ್ಕೆ ಬರಲ್ಲ. ಇಲ್ಲೆ ಇದ್ದು ಜನರ ಸಮಸ್ಯೆ ಸ್ಪಂದಿಸಲು ಅವ್ರನ್ನ ಗೆಲ್ಲಿಸಿದ್ದೇವೆ. ಆದರೆ ವೈಯಕ್ತಿಕ ಕಾರಣಗಳನ್ನು ನೀಡಿ ಶಾಸಕರು ಪದೇ ಪದೇ ವಿದೇಶಕ್ಕೆ ಹೋಗ್ತಿದ್ದಾರೆ. ನಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳೋದು ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಒಟ್ಟಾರೆ ಹೇಳುವುದಾದರೆ ರೈತರ ಪ್ರತಿನಿಧಿಯಾಗಿ ಚುನಾಯಿತ ಶಾಸಕರು ಕ್ಷೇತ್ರದ ಜನರ ಹಿತ ಕಾಯುವುದನ್ನು ಬಿಟ್ಟು ವಿದೇಶ ಪ್ರವಾಸ ಕೈಗೊಂಡಿರೋದು ಕ್ಷೇತ್ರದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಶಾಸಕರು ಕ್ಷೇತ್ರಕ್ಕೆ ವಾಪಸ್ ಬರ್ತಾರಾ..? ಅಥವಾ ಅಲ್ಲೇ ಇರ್ತಾರಾ ಕಾದು ನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೆಂಡ್ತಿ, ಮಕ್ಕಳನ್ನು ನೋಡಲು ಅಮೆರಿಕಾಗೆ ತೆರಳಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ

    ಹೆಂಡ್ತಿ, ಮಕ್ಕಳನ್ನು ನೋಡಲು ಅಮೆರಿಕಾಗೆ ತೆರಳಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ

    ಮಂಡ್ಯ: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ (MLA Dharshan Puttannaiah) ಅವರು ಇಂದು ಅಮೆರಿಕಾಗೆ ತೆರಳಿದ್ದಾರೆ.

    ಅಮೆರಿಕಾ (America) ಗೆ ಹೊರಡುವ ಮುನ್ನ ವೀಡಿಯೋ ಮಾಡಿರುವ ಶಾಸಕರು, ಎಲ್ಲರೂ ಶಾಂತಿಯಿಂದ ಇರಬೇಕು. ಜನರಿಗೆ ಸಮಸ್ಯೆ ಇದ್ದರೆ ನನ್ನ ನಂಬರ್ ಗೆ ಕರೆ ಮಾಡಿ ಎಂದು ಹೇಳಿದ್ದಾರೆ.

    ಐದು ತಿಂಗಳ‌ ಹಿಂದೆ ಚುನಾವಣೆಗಾಗಿ ಅಮೇರಿಕಾದಿಂದ ಮಂಡ್ಯದ ಮೇಲುಕೋಟೆ ಕ್ಷೇತ್ರಕ್ಕೆ ಬಂದು ದರ್ಶನ್ ಫುಲ್ ಆಕ್ಟೀವ್ ಆಗಿದ್ದರು. ಇದರ ಪರಿಣಾಮ ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧೆ ಮಾಡಿ ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ವಿರುದ್ಧ ಗೆಲುವನ್ನು ಸಹ ಗಳಿಸಿದ್ರು. ಇದೀಗ ದರ್ಶನ್ ತನ್ನ ಹೆಂಡತಿ ಮಕ್ಕಳನ್ನು ನೋಡಲು ಅಮೆರಿಕಾಗೆ ತೆರಳಿದ್ದಾರೆ. ಇದನ್ನೂ ಓದಿ: ಕರೆಂಟ್ ಬಿಲ್ ಕೇಳಲು ಬಂದ್ರೆ ನನ್ನನ್ನು ಕರೆಯಿರಿ: ಸುರೇಶ್ ಗೌಡ

    ವೀಡಿಯೋದಲ್ಲಿ ಹೇಳಿದ್ದೇನು..?: ಹೆಂಡತಿ ಮಕ್ಕಳನ್ನು ನೋಡಿ 5 ತಿಂಗಳು ಆಗಿವೆ. ಹೀಗಾಗಿ ಅವರನ್ನು ನೋಡಲು ಅಮೆರಿಕಾಗೆ ಹೋಗ್ತಾ ಇದ್ದೀನಿ. 10 ದಿನಗಳ ನಂತರ ವಾಪಸ್ ನಾನು ಬರ್ತೀವಿ. ಎಲ್ಲರೂ ಶಾಂತಿಯಿಂದ ಇರಬೇಕು. ಜನರಿಗೆ ಸಮಸ್ಯೆ ಇದ್ದರೆ ನನ್ನ ನಂಬರ್‍ಗೆ ಕರೆ ಮಾಡಿ. ನಮ್ಮ ಕಡೆಯವರು ಮಾತನಾಡಿ ಸಮಸ್ಯೆ ಬಗೆಹರಿಸುತ್ತಾರೆ. ಅಮೆರಿಕಾದಿಂದ ಬಂದು ಎಲ್ಲರನ್ನು ಕಾಣುತ್ತೇನೆ ಎಂದು ತಿಳಿಸಿದ್ದಾರೆ.

     

  • ಚುನಾವಣೆಗೆ ಸ್ಪರ್ಧಿಸ್ತಾರಾ ಪುಟ್ಟಣ್ಣಯ್ಯ ಪುತ್ರ ದರ್ಶನ್?

    ಚುನಾವಣೆಗೆ ಸ್ಪರ್ಧಿಸ್ತಾರಾ ಪುಟ್ಟಣ್ಣಯ್ಯ ಪುತ್ರ ದರ್ಶನ್?

    ಮಂಡ್ಯ: ರೈತ ಹೋರಾಟಗಾರ, ಶಾಸಕ ಪುಟ್ಟಣ್ಣಯ್ಯ ವಿಧಿವಶರಾಗ್ತಿದ್ದಂತೆ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಮುಂದಿನ ಚುನಾವಣೆಗೆ ಸ್ಪರ್ಧಿಸ್ತಾರಾ ಎಂಬ ಪ್ರಶ್ನೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ದರ್ಶನ್ ಪುಟ್ಟಣ್ಣಯ್ಯ, ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ನಾನು ಇನ್ನೂ ನಿರ್ಧರಿಸಿಲ್ಲ. ಹಸಿರುಸೇನೆ ಕಾರ್ಯಕರ್ತರು ಮತ್ತು ಬೆಂಬಲಿಗರ ಜೊತೆ ಚರ್ಚಿಸಿ ತೀರ್ಮಾನಿಸ್ತೀನಿ ಎಂದು ಹೇಳಿದ್ದಾರೆ.

    ಮಂಡ್ಯದಲ್ಲಿ ಮಾತನಾಡಿದ ದರ್ಶನ್, ಪುಟ್ಟಣ್ಣಯ್ಯ ಅವರ ಹನ್ನೊಂದನೇ ದಿನದ ಕಾರ್ಯವನ್ನು, ಅವರ ಆದರ್ಶಕ್ಕೆ ತಕ್ಕಂತೆ ‘ತಿಥಿ ಬಿಡಿ-ಸಸಿ ನೆಡಿ’ ಎಂಬ ಕಾರ್ಯಕ್ರಮದ ಮೂಲಕ ವಿನೂತನವಾಗಿ ನೆರವೇರಿಸೋದಾಗಿ ಹೇಳಿದರು. ಫೆಬ್ರವರಿ 28 ರಂದು ಹನ್ನೊಂದನೇ ದಿನದ ಕಾರ್ಯವನ್ನು ಸಸಿ ನೆಡುವ ಮೂಲಕ ಕ್ಯಾತನಹಳ್ಳಿಯಲ್ಲಿ ಆಚರಿಸಲಾಗುವುದು ಎಂದು ತಿಳಿಸಿದ್ರು. ಪುಟ್ಟಣ್ಣಯ್ಯ ಅವರ ಹೋರಾಟಕ್ಕೆ ಗೌರವವಾಗಿ ರೈತರು ಸಂಜೆ ನುಡಿ ನಮನ ಸಲ್ಲಿಸಲಿದ್ದಾರೆ. ಕಾಯಕ ಪ್ರಶಸ್ತಿ ವಿತರಿಸುವುದರ ಜೊತೆಗೆ ನಾಟಕ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ರು. ಇದೇ ಸಂದರ್ಭದಲ್ಲಿ ಪುಟ್ಟಣ್ಣಯ್ಯ ಅವರ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ಕುಟುಂಬ ವರ್ಗ ತೆಗೆದುಕೊಳ್ಳುತ್ತಿರುವ ತೀರ್ಮಾನದ ಬಗ್ಗೆಯೂ ದರ್ಶನ್ ಮಾತನಾಡಿದ್ರು.

    ನಾನು ರೈತ ಪರ ಚಳುವಳಿಗೆ ಧುಮುಕುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಪುಟ್ಟಣ್ಣಯ್ಯ ಕುಟುಂಬದಿಂದ ಮುಂದೆ ಯಾರಾದರೂ ಚುನಾವಣೆಗೆ ನಿಲ್ಲುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಈಗಷ್ಟೇ ತಂದೆ ವಿಧಿವಶರಾಗಿದ್ದಾರೆ. ನಾನು ಅಮೆರಿಕದಲ್ಲಿ ಇದ್ದರೂ ರೈತ ಪರ ಕಾಳಜಿ ಯಾವಾಗಲೂ ಇದೆ. ಈಗ ಅವರು ಇಲ್ಲದಿದ್ದಾಗ ನಾವು ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕಿದೆ. ವಿದೇಶದಲ್ಲಿ ಒಂದಷ್ಟು ಕಂಪೆನಿ ನಡೆಸುತ್ತಿದ್ದೇನೆ. ಇಲ್ಲಿಗೆ ವಾಪಸ್ ಬರಬೇಕಾದ್ರೆ ಏನು ಮಾಡಬೇಕು ಎಂಬುದನ್ನೆಲ್ಲ ಮುಂದಿನ ವಾರ ನಿರ್ಧರಿಸುತ್ತೇನೆ. ರಾಜಕೀಯವಾಗಿ ಯಾವ ಮುಖಂಡರ ಜೊತೆಗೂ ಇನ್ನೂ ಚರ್ಚೆ ನಡೆಸಿಲ್ಲ. ನಮ್ಮ ತಂದೆ ಯಾವಾಗಲೂ ಬೇರೆಯವರಿಗೆ ಒಳ್ಳೆಯದು ಮಾಡು ಅಂತಿದ್ದರು. ಸಮಾನತೆ ಬಗ್ಗೆ ಮಾತನಾಡುತ್ತಿದ್ದರು. ಅವರು ಜೀವಮಾನಪೂರ್ತಿ ರೈತರಿಗಾಗಿ ದುಡಿದರು. ರೈತರ ಬಗ್ಗೆ ಅವರಿಗಿರುವ ಪ್ರೀತಿ ನಮಗೂ ಇದೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ದರ್ಶನ್ ತಿಳಿಸಿದ್ರು.