Tag: ದರೋಡೆ ಗ್ಯಾಂಗ್

  • ದರೋಡೆ ಗ್ಯಾಂಗ್ ಜೊತೆ ಕೈಜೋಡಿಸಿ 9 ಲಕ್ಷ ಪಡೆದಿದ್ದ ಪೊಲೀಸ್‌ – ಹೆಡ್ ಕಾನ್ಸ್‌ಟೇಬಲ್ ಸೇರಿ 7 ಮಂದಿ ಅರೆಸ್ಟ್‌

    ದರೋಡೆ ಗ್ಯಾಂಗ್ ಜೊತೆ ಕೈಜೋಡಿಸಿ 9 ಲಕ್ಷ ಪಡೆದಿದ್ದ ಪೊಲೀಸ್‌ – ಹೆಡ್ ಕಾನ್ಸ್‌ಟೇಬಲ್ ಸೇರಿ 7 ಮಂದಿ ಅರೆಸ್ಟ್‌

    ಬಳ್ಳಾರಿ: ಪೋಲಿಸ್ ಹೆಡ್‌ಕಾನ್ಸ್‌ಟೇಬಲ್‌ (Police Constable) ಒಬ್ಬ ಕಳ್ಳರ ಜೊತೆ ಕೈಜೋಡಿಸಿ, ಕದ್ದ ಮಾಲನ್ನೇ ತನ್ನ ಮನೆಗೆ ಸಾಗಿಸಿ ಲಕ್ಷ ಲಕ್ಷ ಲೂಟಿ ಮಾಡಿರುವ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.

    ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆಯ (BrucePet Police Station) ಮೆಹಬೂಬ್ ಪಾಷಾ ಕಳ್ಳತನದಲ್ಲಿ ಭಾಗಿಯಾಗಿ ಸದ್ಯ ಬಂಧನಕ್ಕೊಳಗಾದ ಮುಖ್ಯಪೇದೆ. ಇದನ್ನೂ ಓದಿ: ಪೇಜರ್‌ ಬ್ಲಾಸ್ಟ್‌ ಕೇಸ್‌ನಲ್ಲಿ ಟ್ಟಿಸ್ಟ್‌ – ಘಟನೆ ಹಿಂದೆ ಭಾರತೀಯ ಮೂಲದ ಉದ್ಯಮಿಯ ಕೈವಾಡ ಇರೋದು ನಿಜವೇ?

    ಏನಿದು ಘಟನೆ?
    ಇದೇ ಸೆಪ್ಟೆಂಬರ್‌ 12ರಂದು ಬೆಳಗ್ಗಿನ ಜಾವ ಬಳ್ಳಾರಿಯ (Bellary) ರಾಯದುರ್ಗಾ ಬಸ್ ನಿಲ್ದಾಣದ ಕಡೆ ಹೋಗ್ತಿರುವಾಗ ರಘು ಎನ್ನುವ ವ್ಯಕ್ತಿ ಕಣ್ಣಿಗೆ ಕಾರದ ಪುಡಿ ಎರಚಿ 22.99 ಲಕ್ಷ ರೂ. ನಗದು ಮತ್ತು 318 ಗ್ರಾಂ ಬಂಗಾರ ದರೋಡೆ ಮಾಡಲಾಗಿತ್ತು. ತೌಸೀಫ್, ಜಾವೀದ್, ಪೀರ್, ದಾದಾ ಖಲಂದರ್, ಮುಸ್ತಕಾ ಅಲಿ ರೆಹಮಾನ್, ಆರೀಫ್ 7 ಜನರಿಂದ ದರೋಡೆ ನಡೆದಿತ್ತು. ಈ ದರೋಡೆ ಟೀಮ್ ಜೊತೆಗೆ ಸೇರಿ ಹೆಡ್ ಕಾನ್ಸ್‌ಟೇಬಲ್‌ ಮೆಹಬೂಬ್ ಪಾಷಾ ಹಣ ಕೊಳ್ಳೆ ಹೊಡೆದಿದ್ದ. ಈ ದರೋಡೆ ಗ್ಯಾಂಗ್‌ನ ಕಿಂಗ್ ಪಿನ್ ಆರೀಫ್‌ಗೆ ದರೋಡೆ ಮಾಡೋದಕ್ಕೆ ಬೈಕ್ ಕೊಟ್ಟು ಕಳಿಸಿದ್ದೇ ಈ ಹೆಡ್ ಕಾನ್ಸ್‌ಟೇಬಲ್ ಮೆಹಬೂಬ್ ಪಾಷಾ ಎಂದು ಹೇಳಲಾಗಿದೆ.

    ಮೆಹಬೂಬ್ ಪಾಷಾ ಮತ್ತು ಪ್ರಮುಖ ಆರೋಪಿ ಅಸೀಫ್ ಆತ್ಮೀಯ ಗೆಳೆಯರು. ಆಸೀಫ್ ಈ ಹಿಂದೆ ಹೋಮ್ ಗಾರ್ಡ್ ಆಗಿ ಕೆಲಸದಿಂದ ವಜಾಗೊಂಡಿದ್ದ. ಈತನ ಜೊತೆ ಮೆಹಬೂಬ್ ಪಾಷಾ ನಿಕಟ ಸಂಪರ್ಕ ಹೊಂದಿದ್ದ. ಕಳ್ಳತನದ ಪ್ರಕರಣ ಸ್ಟೇಷನ್ ಮೆಟ್ಟಿಲು ಹತ್ತುತ್ತಿದ್ದಂತೆ ಪ್ರಕರಣದ ಅಸಲೀಯತ್ತು ಬಟಾಬಯಲಾಗಿದೆ. ಇದನ್ನೂ ಓದಿ: ಮಹಿಳಾ ಪಿಎಸ್‍ಐ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನ – ಕೊಲೆ ಆರೋಪಿಗೆ ಗುಂಡೇಟು

    ದರೋಡೆ ಮಾಡಿದ ಹಣದಲ್ಲಿ ಮೆಹಬೂಬ್ ಪಾಷಾ 9 ಲಕ್ಷ ಹಣ ಪಡೆದಿದ್ದ. ಸದ್ಯ ಮೆಹಬೂಬ್ ಪಾಷನಿಂದ 6.25 ಲಕ್ಷ ರೂ. ವಶಕ್ಕೆ ಪಡೆಯಲಾಗಿದ್ದು, ಬಂಧಿತ ಎಲ್ಲಾ ಆರೋಪಗಳಿಂದ ಒಟ್ಟು 15.91 ಲಕ್ಷ ನಗದು, 116 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕಳ್ಳತನದಲ್ಲಿ ತನ್ನ ಪಾಲಿನ ಬಗ್ಗೆ ಒಪ್ಪಿಕೊಂಡಿರುವ ಆರೋಪಿ ಹೆಡ್ ಕಾನಸ್ಟೇಬಲ್ ಮೆಹಬೂಬ್ ಪಾಷಾ ನನ್ನ ಬಂಧಿಸಿದ ನಂತರ, ಸೇವೆಯಿಂದ ಅಮಾನತು ಮಾಡಲಾಗಿದೆ. ಘಟನೆ ಸಂಬಂಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುನಿರತ್ನ ತಪ್ಪು ಮಾಡಿದ್ರೆ ಕಾನೂನು ಪ್ರಕಾರ ತನಿಖೆಯಾಗಿ ಶಿಕ್ಷೆ ಆಗಲಿ – ನಿಖಿಲ್ 

  • ಅಕ್ಕಪಕ್ಕದ ಮನೆಗಳಿಗೆ ಚಿಲಕ ಹಾಕಿ, ಪ್ರೀ ಪ್ಲ್ಯಾನ್ಡ್‌ ದರೋಡೆ – ಬೆಚ್ಚಿಬಿದ್ದ ರಾಯಚೂರು ಜನ

    ಅಕ್ಕಪಕ್ಕದ ಮನೆಗಳಿಗೆ ಚಿಲಕ ಹಾಕಿ, ಪ್ರೀ ಪ್ಲ್ಯಾನ್ಡ್‌ ದರೋಡೆ – ಬೆಚ್ಚಿಬಿದ್ದ ರಾಯಚೂರು ಜನ

    ರಾಯಚೂರು: ಖತರ್ನಾಕ್ ಗ್ಯಾಂಗ್‌ನಿಂದ ಸಿನಿಮೀಯ ರೀತಿಯಲ್ಲಿ ಬೆಚ್ಚಿಬೀಳಿಸುವ ದರೋಡೆ ಪ್ರಕರಣವೊಂದು (Robbery Case) ಜಿಲ್ಲೆಯ ಲಕ್ಷ್ಮಿನರಸಿಂಹ ಲೇಔಟ್‌ನಲ್ಲಿ ನಡೆದಿದೆ.

    ಮೂರು ಜನರ ಖತರ್ನಾಕ್ ಗ್ಯಾಂಗ್‌ನಿಂದ ಪ್ರೀ ಪ್ಲ್ಯಾನ್ಡ್‌ ದರೋಡೆ ನಡೆದಿದ್ದು, ಜಿಲ್ಲೆಯ ಜನರನ್ನೇ ಬೆಚ್ಚಿಬೀಳಿಸಿದೆ. ಬಸನಗೌಡ ಎಂಬುವವರ ಮನೆ ಬಾಗಿಲು ಮುರಿದು ಖದೀಮರು ದರೋಡೆ ಮಾಡಿದ್ದಾರೆ.ಇದನ್ನೂ ಓದಿ: Suicide Pod; ಒಂದು ಬಟನ್‌ ಒತ್ತಿದರೆ ಸಾಕು ನಿಮಿಷದಲ್ಲಿ ನೋವಿಲ್ಲದೇ ಸಾಯಬಹುದು!

    ದರೋಡೆಗೂ ಮುನ್ನ ಬೀದಿ ದೀಪಗಳನ್ನು ಆರಿಸಿ, ಅಕ್ಕಪಕ್ಕದ ಮನೆಗಳ ಚಿಲಕ ಹಾಕಿ ಪೂರ್ವಯೋಜನೆಯೊಂದಿಗೆ ದರೋಡೆ ಮಾಡಿದ್ದಾರೆ. ಮನೆ ಬಾಗಿಲು ಮುರಿದು ಒಳನುಗ್ಗಿದ್ದಾರೆ. ಮನೆಯವರನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ 220 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, 2 ಲಕ್ಷ ನಗದು ಹಣವನ್ನು ದೋಚಿಕೊಂಡು ಹೋಗಿದ್ದಾರೆ.

    ಮೂರು ಜನರು ಕಪ್ಪು ಬಟ್ಟೆ ಧರಿಸಿಕೊಂಡು, ಕೈಗೆ ಗ್ಲೌಸ್, ಮಂಕಿ ಕ್ಯಾಪ್ ಹಾಕಿ ಮನೆಗೆ ನುಗ್ಗಿದ್ದಾರೆ. ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಬಾರದ ಹಾಗೆ ಪ್ಲ್ಯಾನ್‌ ಮಾಡಿ ಮನೆಗಳಿಗೆ ಬೀಗ ಹಾಕಿದ್ದಾರೆ. ದರೋಡೆಕೋರರ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಎರಡು ದಿನಗಳಿಂದಲೂ ರಾತ್ರಿ ವೇಳೆ ಬೀದಿ ದೀಪಗಳು ಬಂದ್ ಆಗುತ್ತಿರುವುದನ್ನು ಬಡಾವಣೆ ಜನ ಗಮನಿಸಿದ್ದಾರೆ. ಬಡಾವಣೆ ಜನರ ಚಲನವಲನವನ್ನು ಅರಿತ ಖತರ್ನಾಕ್ ಗ್ಯಾಂಗ್ ಕೃತ್ಯ ಎಸಗಿದೆ. ಈ ಭಯಾನಕ ದರೋಡೆ ಪ್ರಕರಣದಿಂದ ಜನ ಬೆಚ್ಚಿಬಿದ್ದಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ.

    ಸ್ಥಳಕ್ಕೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಭೇಟಿ ನೀಡಿದ್ದು, ಸದ್ಯ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ.ಇದನ್ನೂ ಓದಿ: ನಾಗಮಂಗಲದ ಕೋಮು ಗಲಭೆಗೆ ಕೇರಳ ಲಿಂಕ್ – ಕೇರಳ ಮುಸ್ಲಿಮರ ಕೈವಾಡ ಇದ್ಯಾ? – ವಿಶ್ವ ಹಿಂದೂ ಪರಿಷತ್‌ ಆರೋಪ ಏನು?

  • ಒಬ್ಬಂಟಿಯಾಗಿ ಸಂಚಾರಿಸುವವರನ್ನು ಟಾರ್ಗೆಟ್ ಮಾಡ್ತಿದ್ದ ದರೋಡೆ ಗ್ಯಾಂಗ್ ಅಂದರ್

    ಒಬ್ಬಂಟಿಯಾಗಿ ಸಂಚಾರಿಸುವವರನ್ನು ಟಾರ್ಗೆಟ್ ಮಾಡ್ತಿದ್ದ ದರೋಡೆ ಗ್ಯಾಂಗ್ ಅಂದರ್

    ಬೆಂಗಳೂರು: ರಸ್ತೆಯಲ್ಲಿ ಒಬ್ಬಂಟಿಯಾಗಿ ಸಂಚರಿಸುತ್ತಿದ್ದ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದ ಗ್ಯಾಂಗನ್ನು ನಗರದ ಮಹದೇವಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮೊಹಮ್ಮದ್ ರಸೂಲ್ (19), ಸಿರಾಜ್ ಶೇಖ್(20), ಅಪ್ಸರ್ ಶೇಖ್ (20) ಮತ್ತು ಪ್ರದೀಪ್ (22) ಬಂಧಿತ ಅರೋಪಿಗಳು. ಬಂಧಿತರು ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆಲ್ಫೈನ್ ಅರ್ಪಾಟ್ ಮೆಂಟ್ ಬಳಿಯ ನಿರ್ಜನ ಪ್ರದೇಶದಲ್ಲಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

    ಮಾರಕಾಸ್ತ್ರಗಳೊಂದಿಗೆ ದರೋಡೆ ನಡೆಸಲು ಸಂಚು ರೂಪಿಸಲು ಕಾಯುತ್ತಿದ್ದ ಆರೋಪಿಗಳ ನಡವಳಿಕೆ ಕುರಿತು ಅನುಮಾನಗೊಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಿ ಪೊಲೀಸರು ದರೋಡೆ ನಡೆಸಲು ಸಂಗ್ರಹಿಸಿಟ್ಟಿದ್ದ ಮಾರಕಾಸ್ತ್ರ, ಖಾರದ ಪುಡಿ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಬಂಧಿತರಿಂದ 3 ದ್ವಿಚಕ್ರ ವಾಹನ, ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಗ್ಯಾಂಗ್ ನ ಮತ್ತೊಬ್ಬ ದರೋಡೆಕೋರ ಧನರಾಜ್ ಆಯುಧ ಸಮೇತ ಪರಾರಿಯಾಗಿದ್ದಾನೆ. ಸದ್ಯ ಆರೋಪಿ ಧನರಾಜ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.