Tag: ದಯಾಮರಣ

  • ನೋವಿಲ್ಲದ ಸಾವಿಗೆ ರಹದಾರಿ – ಯುಕೆನಲ್ಲಿ ಹೊಸ ಮಸೂದೆ ಮಂಡನೆ!

    ನೋವಿಲ್ಲದ ಸಾವಿಗೆ ರಹದಾರಿ – ಯುಕೆನಲ್ಲಿ ಹೊಸ ಮಸೂದೆ ಮಂಡನೆ!

    ಅತ್ತ ಬದುಕಲೂ ಆಗದೆ, ಇತ್ತ ಸಾಯುವ ಹಾದಿಯೂ ಸಿಗದೆ ಪರಿತಪಿಸುವ ಜೀವಗಳು ಕೊನೆಗೆ ‘ದಯಾಮರಣ’ (Euthanasia) ಎಂಬ ಕನ್ನಡಿಯೊಳಗಿನ ಗಂಟನ್ನು ಹುಡುಕುತ್ತಾ ಹೊರಡುತ್ತವೆ. ‘ಸಾವಿನ ಭಿಕ್ಷೆ’ ಬೇಡುತ್ತಾ ಹೊರಟವರಿಗೆ ಗೌರವಯುತ ಸಾವು ಸಿಗುವುದು ಭಾರತ ಸಹಿತ ಹಲವು ದೇಶಗಳ ಕಾನೂನಿನಲ್ಲಿ (Law) ಸಾಧ್ಯವೇ ಇಲ್ಲ. ಆದಾಗ್ಯೂ ಕೆಲ ದೇಶಗಳಲ್ಲಿ ದಯಾಮರಣವನ್ನು ಕಾನೂನುಬದ್ಧಗೊಳಿಸಲಾಗಿದೆ. ವೈದ್ಯರ ನೆರವಿನೊಂದಿಗೆ ನೋವಿಲ್ಲದ ಸಾವು ಹೊಂದುವವರಿಗೆ ಇದು ರಹದಾರಿಯಾಗಿದೆ.

    ಹೌದು. ಇತ್ತೀಚೆಗೆ ಯುಕೆನಲ್ಲಿ ದಯಾಮರಣಕ್ಕಾಗಿ ಹೊಸ ಕಾನೂನು ಪರಿಚಯಿಸಲು ಅಲ್ಲಿನ ಸರ್ಕಾರ (England Government) ಮುಂದಾಗಿದೆ. ಇತ್ತೀಚೆಗಷ್ಟೇ ಸಂಸತ್‌ನಲ್ಲಿ ಹೊಸ ಮಸೂದೆ ಮಂಡನೆ ಮಾಡಿದ್ದು, ಅದನ್ನ ಆತ್ಮಸಾಕ್ಷಿ ಮತಗಳ ಮೂಲಕ ಅಂಗೀಕರಿಸಲಾಯಿತು. ಬಳಿಕ ಅದರಲ್ಲಿನ ಅಂಶಗಳನ್ನ ಪರಿಶೀಲಿಸಲು ಸಾರ್ವಜನಿಕ ಮಸೂದೆ ಸಮಿತಿಗೆ ಕಳುಹಿಸಲಾಗಿದೆ. ಮತ್ತೊಮ್ಮೆ ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ಮಸೂದೆಗೆ ತಿದ್ದುಪಡಿ ತರುವ ಕುರಿತು ಮತಚಲಾವಣೆ ಮಾಡಲಾಗುತ್ತದೆ. ಬಳಿಕ ಅದನ್ನು ಹೌಸ್‌ ಆಫ್‌ ಲಾರ್ಡ್ಸ್‌ಗೆ ಕಳುಹಿಸಲಾಗುತ್ತದೆ, ಅಲ್ಲಿ ಮಸೂದೆ ಕುರಿತು ಚರ್ಚೆ ನಡೆಸಿದ ಬಳಿಕ ಕಾನೂನು ರೂಪ ನೀಡಲಾಗುತ್ತದೆ. ಅಷ್ಟಕ್ಕೂ ಈ ʻಅಸಿಸ್ಟೆಡ್‌ ಡೈಯಿಂಗ್‌ ಬಿಲ್‌ʼ (Assisted Dying Bill) ಪರಿಚಯಿಸಲು ಕಾರಣವೇನು? ಅನ್ನೋದನ್ನ ತಿಳಿಯೋದಕ್ಕೂ ಮುನ್ನ ದಯಾಮರಣ ಎಂದರೇನು ಎಂಬುದನ್ನು ತಿಳಿಯೋಣ.

    ʻದಯಾಮರಣʼ ಎಂದರೇನು?

    ಘೋರ ನೋವಿನಿಂದ ನರಳುತ್ತಿರುವ ವ್ಯಕ್ತಿಯ ಇಚ್ಛೆಯ ಅನುಸಾರ ನೀಡಲಾಗುವ ‘ಸಾವು’. ಅಂದ್ರೆ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಇನ್ನು ಸಹಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬ ಸಂದರ್ಭದಲ್ಲಿ ತನಗೆ ಮರಣದ ದಯೆಯನ್ನು ನೀಡಿ ಎಂದು ಅರ್ಜಿ ಸಲ್ಲಿಸುತ್ತಾರೆ. ಕಾನೂನಿನ ಅಡಿಯಲ್ಲಿಯೇ ಅವರಿಗೆ ಸಾವನ್ನು ‘ಕರುಣಿಸಲಾಗುತ್ತದೆ’. ಆದರೆ, ಭಾರತ ಸಹಿತ ಹಲವು ದೇಶಗಳಲ್ಲಿ ಇದಕ್ಕೆ ಅವಕಾಶ ಇಲ್ಲ. ಇದಕ್ಕೆ ಯುಥೆನೇಸಿಯಾ ಎಂಬ ಗ್ರೀಕ್ ಪದವನ್ನು ಸಾಮಾನ್ಯವಾಗಿ ಬಳಸುತ್ತಾರೆ. ಇದರ ಅರ್ಥ ಒಳ್ಳೆಯ ಸಾವು ಎಂದು. 2013 ರಿಂದ, ಯುಕೆಯಲ್ಲಿ ದಯಾಮರಣ ಅನುಮತಿಸಲು ಕನಿಷ್ಠ ಮೂರು ಮಸೂದೆಗಳನ್ನು ಪರಿಚಯಿಸಲಾಗಿದೆ. ಆದ್ರೆ ಕಾನೂನಾಗಿ ಅಧಿಕೃತಗೊಂಡಿಲ್ಲ. ಒಂದು ವೇಳೆ ಮತ್ತೊಬ್ಬರ ಸಹಾಯದಿಂದ ದಯಾಮರಣ ಹೊಂದಿದರೆ, ಸಹಾಯ ಮಾಡಿದವರಿಗೆ 14 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಾನೂನಿಗೆ ಇದೆ.

    ಮಸೂದೆ ಏನು ಹೇಳುತ್ತದೆ?

    ಸ್ವಂತ ಮರಣಕ್ಕೆ ಇಚ್ಚಿಸುವ ಯಾವುದೇ ವ್ಯಕ್ತಿ 18 ವರ್ಷಕ್ಕಿಂತ ಮೇಲ್ಪಟ್ಟು ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದು, ತನ್ನಿಂದ ಬದುಕಲು ಸಾಧ್ಯವಾಗುವುದೇ ಇಲ್ಲ ಅನ್ನೂ ಹಂತಕ್ಕೆ ತಲುಪಿರಬೇಕು. ಅಲ್ಲದೇ ದೇಶದಲ್ಲಿ ದಯಾಮರಣ ಬಯಸುವವರು ಇಂಗ್ಲೆಂಡ್‌ ಅಥವಾ ವೇಲ್ಸ್‌ನಲ್ಲಿ ಕನಿಷ್ಠ 1 ವರ್ಷ ವಾಸವಿರಬೇಕು.

    ಪ್ರಕ್ರಿಯೆ ಹೇಗೆ ನಡೆಯುತ್ತೆ?

    ಮೊದಲು ವೈದ್ಯರ ಷರತ್ತುಗಳಿಗೆ ಒಪ್ಪಿ ಆತ ಸಹಿ ಹಾಕಬೇಕು. ಷರತ್ತುಗಳನ್ನು ಪೂರ್ಣಗೊಳಿಸಿದ ನಂತರ ವೈದ್ಯರು ಆತನ ದೇಹಸ್ಥಿತಿ ಪರಿಶೀಲಿಸುತ್ತಾರೆ. ಒಂದು ವೇಳೆ ವೈದ್ಯರು ದಯಾಮರಣಕ್ಕೆ ನಿರಾಕರಿಸಿದ್ರೆ ಮತ್ತೊಬ್ಬ ವೈದ್ಯರಿಗೆ ಸಂತ್ರಸ್ತನು ತನ್ನ ಮನವಿ ಸಲ್ಲಿಸಬಹುದು. ಇಷ್ಟಕ್ಕೆ ಮುಗಿಯುವುದಿಲ್ಲ, ವೈದ್ಯರು ದಯಾಮರಣಕ್ಕೆ ಸಂಪೂರ್ಣ ಒಪ್ಪಿ ದೃಢೀಕರಿಸಿದ ನಂತರ ಅದನ್ನು ಲಂಡನ್‌ನಲ್ಲಿನ ಹೈಕೋರ್ಟ್‌ಗೆ ಕಳುಹಿಸಲಾಗುತ್ತದೆ. ರೋಗಿಯ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲಾಗಿದೆ ಎಂದು ಕೋರ್ಟ್‌ ದೃಢೀಕರಿಸಿದ ನಂತರವಷ್ಟೇ ಮುಂದಿನ 7 ಅಥವಾ 14 ದಿನಗಳಲ್ಲಿ ರೋಗಿಯ ಇಚ್ಛೆಯನ್ನು ಪೂರೈಸಲಾಗುತ್ತದೆ.

    ವಿರೋಧ ಏಕೆ?

    ಯುಕೆ ನಲ್ಲಿ ದಯಾಮರಣ ಕಾನೂನು ಪರಿಚಯಿಸಲು ಕೆಲವರಿಂದ ವಿರೋಧವೂ ಇದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಯುವಕರ ಸಂಖ್ಯೆಗಿಂತ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ. ಹಾಗಾಗಿ ಇಂತಹ ಕಾನೂನನ್ನು ಜಾರಿಗೊಳಿಸಿದ್ರೆ ದುರ್ಬಲರಾದವರು, ವಯಸ್ಸಾದ ವ್ಯಕ್ತಿಗಳಿಗೆ ಒತ್ತಾಯಪೂರ್ವಕವಾಗಿ ದಯಾಮರಣಕ್ಕೆ ಸಹಿ ಮಾಡಿಸಲು ಅನುವು ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಈ ಮಸೂದೆ ಜಾರಿಗೆ ಬೇಡ ಎಂದು ಕೆಲವರು ವಿರೋಧಿಸಿದ್ದಾರೆ.

    ಭಾರತದಲ್ಲಿ ಮೊದಲ ದಯಾಮರಣ ಯಾವಾಗ?

    ಅರುಣಾ ಶಾನುಬಾಗ್ ಅವರದ್ದು ಭಾರತದ ಮೊದಲ ದಯಾಮರಣ ಪ್ರಕರಣ. 1973ರಲ್ಲಿ ಕ್ರೂರವಾಗಿ ಅತ್ಯಾಚಾರಕ್ಕೆ ಒಳಗಾದ ಅರುಣಾ ಅವರು 42 ವರ್ಷ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. 2015ರಲ್ಲಿ ಅವರು ಮೃತಪಟ್ಟರು. ಅರುಣಾ ಅವರಿಗೆ ಬಲವಂತವಾಗಿ ಆಹಾರ ನೀಡುವುದನ್ನು ನಿಲ್ಲಿಸಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು 2011ರಲ್ಲಿ ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಬಳಿಕ ದಯಾಮರಣಕ್ಕೆ ಅವಕಾಶ ಕೊಟ್ಟಿತ್ತು. ಜೀವನಕ್ಕೆ ಮರಳುವುದು ಸಾಧ್ಯವೇ ಇಲ್ಲ ಎಂಬಂತಹ ರೋಗಿಗಳಿಗೆ ದಯಾಮರಣದ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

    ಒರೆಗಾನ್‌ನಲ್ಲಿ ವಿಷ ಔಷಧಿ:

    ಅಮೆರಿಕದ ಒರೆಗಾನ್ ರಾಜ್ಯದಲ್ಲಿ ‘ಒರೆಗಾನ್‌ನ ಘನತೆವೆತ್ತ ಸಾವು ಕಾಯ್ದೆ’ (ಡಿಡಬ್ಲ್ಯೂಡಿಎ)ಯನ್ನು 1997ರಲ್ಲಿ ಶಾಸನಬದ್ಧಗೊಳಿಸಲಾಯಿತು. ಈ ಕಾಯಿದೆಯ ಪ್ರಕಾರ, ಮಾರಕ ಅನಾರೋಗ್ಯಕ್ಕೆ ತುತ್ತಾದ ಒರೆಗಾನ್‌ನ ಮಂದಿ ತಮ್ಮ ವೈದ್ಯರಿಂದ ವಿಷಕಾರಿ ಔಷಧ ಪಡೆದು, ಅದನ್ನು ಸ್ವಯಂ ನುಂಗಿ ಸಾಯುವುದಕ್ಕೆ ಅವಕಾಶ ನೀಡಲಾಯಿತು. ಈ ಕಾನೂನು ಜಾರಿಗೆ ಬಂದ ದಿನದಿಂದ ಇದುವರೆಗೆ ಈ ರಾಜ್ಯದಲ್ಲಿ 1,173 ಮಂದಿ ಡಿಡಬ್ಲ್ಯೂಡಿಎ ಅಡಿ ವಿಷಯುಕ್ತ ಔಷಧಗಳನ್ನು ತಮ್ಮ ವೈದ್ಯರಿಂದ ಬರೆಸಿಕೊಂಡಿದ್ದಾರೆ. ಇವರಲ್ಲಿ ಈ ಔಷಧಗಳನ್ನು ಚುಚ್ಚಿಕೊಂಡು 752 ಸತ್ತಿದ್ದಾರೆ. 2013ನೇ ಇಸವಿಯೊಂದರಲ್ಲೇ 122 ಮಂದಿ ವಿಷ ಔಷಧಿ ಚೀಟಿ ಬರೆಸಿಕೊಂಡಿದ್ದಾರೆ. 2014ರ ಜ.22ರವರೆಗೆ ಇವರಲ್ಲಿ 71 ಜನರು ಈ ಔಷಧಗಳನ್ನು ನುಂಗಿ ಮರಣ ಹೊಂದಿದ್ದಾರೆ. ಅಧ್ಯಕ್ಷ ಜಾರ್ಜ್ ಬುಷ್ ವಿರೋಧದ ನಡುವೆಯೂ ಈ ಕಾಯ್ದೆಯನ್ನು ಅಮೆರಿಕದ ಸುಪ್ರೀಂ ಕೊರ್ಟ್ 2006ರಲ್ಲಿ ಎತ್ತಿ ಹಿಡಿದಿತ್ತು. ಇದೇ ರೀತಿಯ ಕಾಯ್ದೆ ಒರೆಗಾನ್‌ನ ಪಕ್ಕದ ರಾಜ್ಯ ವಾಷಿಂಗ್ಟನ್‌ನಲ್ಲೂ 2008ರಲ್ಲಿ ಅನುಷ್ಠಾನಗೊಂಡಿತು.

    ಬೇರೆ ಬೇರೆ ದೇಶಗಳ ಕಾನೂನು ಹೇಗಿದೆ?

    ನೆದರ್‌ಲ್ಯಾಂಡ್ಸ್‌ನಲ್ಲಿ ಒಬ್ಬ ರೋಗಿಯ ಮನವಿಯನ್ನು ಆಧರಿಸಿ ಆತನ ಬದುಕನ್ನು ಕೊನೆಗೊಳಿಸುವ ಅಧಿಕಾರ ವೈದ್ಯರಿಗೆ ಇದೆ. ಇದರಲ್ಲಿ ಸ್ವ ಪ್ರೇರಿತ, ಸ್ವಪ್ರೇರಿತವಲ್ಲದ ಹಾಗೂ ಸ್ವಪ್ರೇರಣೆಗೆ ವಿರುದ್ಧವಾದ ಎಂಬ ಮೂರು ಪ್ರತ್ಯೇಕ ವಿಭಾಗಗಳಿವೆ. ಸ್ವಪ್ರೇರಿತ ದಯಾಮರಣಕ್ಕೆ ಅಮೆರಿಕ ಹಾಗೂ ಕೆನಡಾದ ಕೆಲವು ಭಾಗಗಳಲ್ಲಿ ಅವಕಾಶ ಇದೆ. ಬೆಲ್ಜಿಯಂ. ಲಕ್ಸಂಬರ್ಗ್, ಸ್ವಿಜರ್‌ಲೆಂಡ್, ಎಸ್ಟೋನಿಯ, ಅಲ್ಬೇನಿಯಾ ಮುಂತಾದೆಡೆ ದಯಾಮರಣಕ್ಕೆ ಕಾನೂನಿನ ಮನ್ನಣೆ ಇದೆ.

  • ಜಾಗದಿಂದ ಒಕ್ಕಲೆಬ್ಬಿಸಲು ಗ್ರಾಮಸ್ಥರಿಂದ ಕಿರುಕುಳ ಆರೋಪ- ದಯಾಮರಣ ಕೋರಿ ಬಡಕುಟುಂಬ ಅರ್ಜಿ

    ಜಾಗದಿಂದ ಒಕ್ಕಲೆಬ್ಬಿಸಲು ಗ್ರಾಮಸ್ಥರಿಂದ ಕಿರುಕುಳ ಆರೋಪ- ದಯಾಮರಣ ಕೋರಿ ಬಡಕುಟುಂಬ ಅರ್ಜಿ

    ಮೈಸೂರು: ಗ್ರಾಮಸ್ಥರು ತಮ್ಮ ಜಾಗದಿಂದ ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕುಟುಂಬವೊಂದು ದಯಾಮರಣಕ್ಕೆ (Euthanasia) ಅರ್ಜಿ ಸಲ್ಲಿಸಿರುವ ಘಟನೆ ಸಿಎಂ ಸಿದ್ದರಾಮಯ್ಯ ( Siddaramaiah) ಅವರ ವರುಣ (Varuna) ಕ್ಷೇತ್ರದ ರಾಂಪುರದಲ್ಲಿ ನಡೆದಿದೆ.

    90 ವರ್ಷಗಳಿಂದ ವಾಸವಿರುವ ಕುಟುಂಬವನ್ನು ಗ್ರಾಮಸ್ಥರು ಎತ್ತಂಗಡಿ ಮಾಡಲು ಹುನ್ನಾರ ಮಾಡುತ್ತಿದ್ದಾರೆ. ಇದು ನಮ್ಮ ಪೂರ್ವಿಕರಿದ್ದ ಜಾಗವಾಗಿದ್ದು, ಬೇಕಾದರೆ ಇದೇ ನೆಲದಲ್ಲಿಯೇ ನಾವು ಪ್ರಾಣ ಬಿಡಲು ಸಿದ್ಧರಿದ್ದೇವೆ ಎಂದು ಇಡೀ ಕುಟುಂಬ ದಯಾಮರಣ ಕೋರಿ ತಹಶೀಲ್ದಾರ್‍ಗೆ ಅರ್ಜಿ ಸಲ್ಲಿಸಿದೆ. ಇದನ್ನೂ ಓದಿ: ಆಹ್ವಾನ ಬಂದಿದ್ದು, ಜ.22 ರ ಬಳಿಕ ರಾಮಮಂದಿರಕ್ಕೆ ಭೇಟಿ ನೀಡುತ್ತೇನೆ: ಅಖಿಲೇಶ್‌ ಯಾದವ್‌

    ನಮ್ಮ ಮುತ್ತಾತನ ಕಾಲದಿಂದಲೂ ಈ ಜಾಗದಲ್ಲಿ ವಾಸವಾಗಿದ್ದೇವೆ. ಸುಮಾರು 90 ವರ್ಷಗಳಿಂದ ಈ ಖರಾಬು ಜಮೀನಿನಲ್ಲಿ ನಮ್ಮ ಕುಟುಂಬ ವಾಸವಿದೆ. ಈಗ ಗ್ರಾಮಸ್ಥರು ಒಕ್ಕಲೆಬ್ಬಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ಗ್ರಾಮದ ಜ್ಯೋತಿ ಎಂಬ ಮಹಿಳೆ ಹಾಗೂ ಅವರ ಕುಟುಂಬ ಆರೋಪಿಸಿದೆ.

    ಸರ್ವೇ ನಂಬರ್ 39ರಲ್ಲಿ ಈಗಾಗಲೇ ಒಂದು ಎಕರೆ ಪ್ರದೇಶದಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಇನ್ನುಳಿದಿರುವ 18 ಗುಂಟೆ ಪ್ರದೇಶದಲ್ಲಿ ವಾಸವಿದ್ದ ಜಮೀನಿನಲ್ಲಿ ಗ್ರಾಮಸ್ಥರು ಸಮುದಾಯ ಭವನ ನಿರ್ಮಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆ ಈಗಾಗಲೇ ಒಂದು ಎಕರೆ ಜಮೀನು ಸ್ವಾಧೀನಕ್ಕೆ ಪಡೆದಿದ್ದಾರೆ. ಉಳಿದ 18 ಗುಂಟೆ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ನಡೆಸುತ್ತಿದ್ದೇವೆ. ಈ ಜಾಗದಲ್ಲಿ ಜನತಾ ಮನೆ ನಿರ್ಮಿಸಲು ನಮಗೆ ಮಂಜೂರಾತಿ ಪತ್ರ ದೊರೆತಿದೆ. ಈಗ ಈ ಜಾಗದಲ್ಲಿ ಅಡುಗೆ ಮನೆ ನಿರ್ಮಿಸಲು ಗ್ರಾಮಸ್ಥರು ಮುಂದಾಗಿದ್ದು, ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಮಣಿಪುರಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ

  • ಸಂಪೂರ್ಣ ಕುಸಿದ ಮನೆಗೆ 50 ಸಾವಿರ ರೂ. ಪರಿಹಾರ – ನೊಂದ ಕುಟುಂಬದಿಂದ ರಾಷ್ಟ್ರಪತಿಗೆ ದಯಾಮರಣ ಅರ್ಜಿ

    ಸಂಪೂರ್ಣ ಕುಸಿದ ಮನೆಗೆ 50 ಸಾವಿರ ರೂ. ಪರಿಹಾರ – ನೊಂದ ಕುಟುಂಬದಿಂದ ರಾಷ್ಟ್ರಪತಿಗೆ ದಯಾಮರಣ ಅರ್ಜಿ

    ಹಾವೇರಿ: ಕೆಲವು ದಿನಗಳ ಹಿಂದೆ ಸುರಿದ ಮಳೆಗೆ (Rain) ಮನೆ ಕುಸಿದು ಬಿದ್ದಿದೆ. ಇತ್ತ ಸೂರಿಲ್ಲದೆ ಪರದಾಡಿದ ತಾಯಿ (Mother), ಮಗ (Son) ಮನೆ ಬಿದ್ದಿದೆ ಎಂದು ಸ್ಥಳೀಯಾಡಳಿತಕ್ಕೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಅವರಿಗೆ ಸೂಕ್ತ ಪರಿಹಾರ ದೊರಕಿಸಿಕೊಟ್ಟಿಲ್ವಂತೆ. ಹೀಗಾಗಿ ನಮಗೆ ಸೂಕ್ತ ಪರಿಹಾರ ಕೊಡಿಸಿ ಇಲ್ಲವೆ ದಯಾಮರಣ (Euthanasia) ಕೊಡಿ ಎಂದು ತಾಯಿ ಮತ್ತು ಮಗ ರಾಷ್ಟ್ರಪತಿಗಳಿಗೆ (President) ಪತ್ರ ಬರೆದಿರುವ ಘಟನೆ ಹಾವೇರಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

    ಹಾವೇರಿ ತಾಲೂಕಿನ ಹೊಸಳ್ಳಿ ಗ್ರಾಮದ ಶಾಂತವ್ವ ನಿಂಬಕ್ಕನವರ ಮತ್ತು ಮಗ ಪ್ರಕಾಶ್ ನಿಂಬಕ್ಕನವರ ಮನೆ ಕಳೆದುಕೊಂಡು ಕಚೇರಿಯಿಂದ ಕಚೇರಿ ಪರಿಹಾರಕ್ಕಾಗಿ ಅಲೆದಾಡಿ ಬೇಸತ್ತು ದಯಾಮರಣಕ್ಕೆ ಅರ್ಜಿ ಹಾಕಿರುವ ನೊಂದ ಜೀವಗಳು. ಇವರಿಗೆ ವಾಸಕ್ಕೆ ಅಂತಾ ಒಂದು ಮನೆ ಇತ್ತು. ಜೀವನೋಪಾಯಕ್ಕೆ ಅಂತಾ ಒಂದು ಎಕರೆ ಜಮೀನಿದೆ. ಆದರೆ ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಮನೆ ಕುಸಿದು ಬಿದ್ದಿದೆ. ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳೆಲ್ಲವೂ ಸಂಪೂರ್ಣ ನಾಶವಾಗಿದೆ. ಇದನ್ನೂ ಓದಿ: ಅನಾರೋಗ್ಯದ ಮಗುವಿದ್ರೆ ಲೈಫ್ ಎಂಜಾಯ್ ಮಾಡಲು ಸಾಧ್ಯವಿಲ್ಲ – ವೈದ್ಯೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

    ಮನೆ ಕೂಡಾ ನಿರಂತರ ಮಳೆಗೆ ಸಂಪೂರ್ಣವಾಗಿ ಬಿದ್ದು ಹೋಗಿದೆ. ಕಳೆದ ಮೂರು ತಿಂಗಳಿನಿಂದ ಮೂರು ಬಾರಿ ಅರ್ಜಿ ಸಲ್ಲಿಸಿದರೂ, ಅಧಿಕಾರಿಗಳು ‘ಸಿ’ ವರ್ಗಕ್ಕೆ ಹಾಕಿ 50 ಸಾವಿರ ರೂ. ಪರಿಹಾರದ ಆದೇಶ ಹೊರಡಿಸಿದ್ದಾರೆ. ಮನೆ ಸಂಪೂರ್ಣ ಬಿದ್ದು ಹೋಗಿದೆ. ಅದರೂ ತಾರತಮ್ಯ ಮಾಡುತ್ತಿದ್ದಾರೆ. ಇದರಿಂದ ನೊಂದು ತಾಯಿ, ಮಗ ಜಿಲ್ಲಾಧಿಕಾರಿ ಹಾಗೂ ರಾಷ್ಟ್ರಪತಿಗೆ ದಯಾಮರಣ ನೀಡಿ ಎಂದು ಪತ್ರವನ್ನು ಬರೆದಿದ್ದಾರೆ. ನಮಗೆ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂ. ನೀಡಿ ಇಲ್ಲದಿದ್ದರೆ ದಯಾಮರಣ ನೀಡಿ ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪ – ಎಲ್ಲ ಮಾದರಿಯ ಕ್ರಿಕೆಟ್‌ನಿಂದ ದನುಷ್ಕ ಅಮಾನತು

    ಕಳೆದ ಮೂರು ತಿಂಗಳಿನಿಂದ ಮನೆ ಇಲ್ಲದೆ, ಅಲ್ಲಿ ಇಲ್ಲಿ ಇದ್ದು ಜೀವನ ಮಾಡುತ್ತಿದ್ದೇವೆ. ಗ್ರಾಮ ಪಂಚಾಯತ್‌ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರನ್ನು ಕೇಳಿದರೆ ಜಿಲ್ಲಾಡಳಿತ ಹಾಗೂ ತಹಶೀಲ್ದಾರ್ ಕಡೆ ತೋರಿಸುತ್ತಾರೆ. ಸಂಪೂರ್ಣವಾಗಿ ಬಿದ್ದ ಮನೆಯನ್ನು ‘ಸಿ’ ಕೆಟಗರಿಗೆ ಸೇರಿಸಿ 50 ಸಾವಿರ ರೂ. ಪರಿಹಾರ ನೀಡಿದ್ದಾರೆ. ನಮಗೆ ಸರ್ಕಾರದ ಹಣ ಬೇಡ. ನಮಗೆ ಮನೆ ಕಟ್ಟಿಸಿಕೊಡಿ ಸಾಕು. ಕಚೇರಿಯಿಂದ ಕಚೇರಿಗೆ ಅಧಿಕಾರಿಗಳಿಂದ ಅಧಿಕಾಗಳ ಬಳಿ ಹೋಗಿ ಸಾಕಾಗಿದೆ. ನಿಜವಾದ ಫಲಾನುಭವಿಗಳಿಗೆ ಮನೆ ಮಂಜೂರು ಮಾಡುತ್ತಿಲ್ಲ. ಹೀಗಾಗಿ ನೊಂದು ದಯಾಮರಣ ಅರ್ಜಿಯನ್ನು ಹಾಕಿದ್ದೇವೆ. ನಮಗೆ ನ್ಯಾಯ ಕೊಡಿ ಇಲ್ಲವೆ ದಯಾಮರಣ ನೀಡಿ ಎಂದು ಶಾಂತವ್ವ ಅಂಗಲಾಚಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ 40% ಸದ್ದು- ಗುತ್ತಿಗೆದಾರನಿಂದ ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ

    ಮತ್ತೆ 40% ಸದ್ದು- ಗುತ್ತಿಗೆದಾರನಿಂದ ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ

    ಹುಬ್ಬಳ್ಳಿ: ಕಾಮಗಾರಿ ಬಿಲ್ ಆಗದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದ ಹುಬ್ಬಳ್ಳಿಯ (Hubballi) ಗುತ್ತಿಗೆದಾರನೊಬ್ಬ (Contractor) ದಯಾಮರಣ ಕೋರಿ ರಾಷ್ಟ್ರಪತಿಗೆ (President) ಅರ್ಜಿ ಬರೆದಿದ್ದಾರೆ.

    ಗುತ್ತಿಗೆದಾರ ಎ.ಬಸವರಾಜ್ ಎಂಬಾತ ದಯಾಮರಣಕ್ಕಾಗಿ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗೆ ಅರ್ಜಿ ಸಲ್ಲಿಸಿದ್ದಾರೆ. ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ಮತ್ತು ಮೂಡಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಬಸವರಾಜ್ ಕೋವಿಡ್ ಪರಿಕರಗಳ ಸರಬರಾಜು ಮಾಡಿದ್ದರು.

    2020-21ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿಗೆ 27 ಲಕ್ಷ ರೂ., ಕಡೂರು ತಾಲೂಕಿಗೆ 85 ಲಕ್ಷ ರೂ. ಪರಿಕರ ಪೂರೈಕೆ ಮಾಡಿದ್ದರು. ಸರಬರಾಜು ಮಾಡಿ 2 ವರ್ಷ ಗತಿಸಿದರೂ ಇನ್ನೂ ಬಿಲ್ ಪಾವತಿ ಆಗಿಲ್ಲ. ಬಿಲ್ ಪಾವತಿ ಮಾಡಲು EO ಕಮಿಷನ್ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದರು.

    ಅಲ್ಲದೆ ಕಡೂರು ಬಿಜೆಪಿ (BJP) ಶಾಸಕ ಬೆಳ್ಳಿ ಪ್ರಕಾಶ ಹೆಸರಿನಲ್ಲಿ ಬಿಲ್‍ನ ಒಟ್ಟು 40 ಪರ್ಸೆಂಟೇಜ್‍ಗಿಂತ ಹೆಚ್ಚಿನ ಹಣಕ್ಕೆ ಕಡೂರು EO ದೇವರಾಜ್ ನಾಯಕ್ ಒತ್ತಾಯ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ಕಾರ್ಯಾಲಯದಿಂದ 4 ಬಾರಿ, ಮುಖ್ಯಮಂತ್ರಿ ಅವರ ಕಾರ್ಯಾಲಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯಾಧಿಕಾರಿ ನಿರ್ದೇಶನ ನೀಡಿದರೂ, ಬಿಲ್ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಅಂಬುಲೆನ್ಸ್‌ನ  ಡೀಸೆಲ್ ಖಾಲಿ – ರಸ್ತೆ ಬದಿಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

    ಮತ್ತೊಂದು ಕಡೆ ಬಸವರಾಜ್‍ಗೆ ಸಾಲಗಾರರ ಕಾಟ ಸಹ ಹೆಚ್ಚಾಗಿದೆ. ಇದರಿಂದ ಮಾನಸಿಕವಾಗಿ ನೊಂದ ಗುತ್ತಿಗೆದಾರನಿಂದ ದಯಾಮರಣ ಕೋರಿ ಅರ್ಜಿ ಹಾಕಿದ್ದು, ಅರ್ಜಿ ಜೊತೆಗೆ ಕಾಮಗಾರಿಯ ಎಲ್ಲಾ ದಾಖಲೆ ಮತ್ತು ಪರ್ಸೆಂಟೇಜ್‍ಗಾಗಿ ಬೇಡಿಕೆ ಇಟ್ಟ ಆಡಿಯೋ ರೆಕಾರ್ಡ್ ಅನ್ನು ರಿಜಿಸ್ಟರ್ ಪೋಸ್ಟ್ ಮಾಡಲಾಗಿದೆ ಎಂದು ಬಸವರಾಜ್ ತಿಳಿಸಿದರು. ಇದನ್ನೂ ಓದಿ: BJPಯಂತೆ ಒಂದೊಂದು ಸಮಾಜಕ್ಕೆ ಒಂದೊಂದು ಸಮಾವೇಶ ಮಾಡಲ್ಲ – HDK

    Live Tv
    [brid partner=56869869 player=32851 video=960834 autoplay=true]

  • 11 ಮಂದಿ ಮಕ್ಕಳಿದ್ರೂ ತಾಯಿಗೆ ಊಟ ಹಾಕುವವರಿಲ್ಲ- ದಯಾಮರಣಕ್ಕೆ ಮನವಿ ಸಲ್ಲಿಸಿದ ವೃದ್ಧೆ

    11 ಮಂದಿ ಮಕ್ಕಳಿದ್ರೂ ತಾಯಿಗೆ ಊಟ ಹಾಕುವವರಿಲ್ಲ- ದಯಾಮರಣಕ್ಕೆ ಮನವಿ ಸಲ್ಲಿಸಿದ ವೃದ್ಧೆ

    ಹಾವೇರಿ: ಆ ಹೆತ್ತಮ್ಮಳಿಗೆ 11 ಜನ ಮಕ್ಕಳು, ಒಂದಿಷ್ಟು ಮೊಮ್ಮಕ್ಕಳೂ ಇರೋ ತುಂಬು ಸಂಸಾರ. ಹಣ್ಣು ಹಣ್ಣಾಗಿರೋ ಆಕೆಗೀಗ 75 ವಯಸ್ಸು. ಆದರೆ ಅಷ್ಟೊಂದು ಮಕ್ಕಳು, ಮೊಮ್ಮಕ್ಕಳು ಇದ್ರೂ ಇಳಿ ವಯಸ್ಸಿನಲ್ಲಿರೋ ಆಕೆಯನ್ನು ಯಾರೂ ನೋಡಿಕೊಳ್ಳುತ್ತಿಲ್ಲ. ಸಾಕಷ್ಟು ಆಸ್ತಿ ಇದ್ದರೂ ತುತ್ತು ಊಟಕ್ಕಾಗಿ ಪರದಾಡುತ್ತಿರುವ 11 ಮಕ್ಕಳ ತಾಯಿ ದಯಾಮರಣ (Euthanasia) ಕೋರಿ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ, ಅರ್ಜಿ ಸಲ್ಲಿಸಿದ್ದಾರೆ.

    ವಯೋವೃದ್ಧೆಯ ಹೆಸರು ಪುಟ್ಟವ್ವ ಕೊಟ್ಟೂರ. ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರು ನಗರದ ರಂಗನಾಥ ನಗರದ ನಿವಾಸಿ. ಪುಟ್ಟವ್ವಳಿಗೆ 7 ಜನ ಗಂಡು ಹಾಗೂ 4 ಜನ ಹೆಣ್ಣು ಮಕ್ಕಳಿದ್ದಾರೆ. ಎಲ್ಲಾ ಮಕ್ಕಳಿಗೂ ಮದುವೆಯಾಗಿದ್ದು, ಅವರೆಲ್ಲರಿಗೂ 1-2 ಎಂಬಂತೆ ಮಕ್ಕಳಿದ್ದಾರೆ. ಪುಟ್ಟವ್ವಳ ಪತಿ ರಾಣೆಬೆನ್ನೂರು ನಗರದಲ್ಲಿ 7 ಮನೆಗಳು, ಸೈಟು ಮತ್ತು ಜಮೀನಿದೆ. ತಾಲೂಕಿನ ಹುಲ್ಲತ್ತಿ ಗ್ರಾಮದ ಹದ್ದಿನಲ್ಲಿರೋ 28 ಎಕರೆ ಜಮೀನು ವ್ಯಾಜ್ಯದಲ್ಲಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆಯಂತೆ.

    ಪುಟ್ಟವ್ವಳ ಪತಿ ಹನುಮಂತಪ್ಪ ಕೆಲವು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ಆದರೆ ಈಗಲೂ ಮನೆಗಳು, ಜಮೀನು ಸೇರಿದಂತೆ ಎಲ್ಲವೂ ಪುಟ್ಟವ್ವಳ ಪತಿ ಹನುಮಂತಪ್ಪನ ಹೆಸರಿನಲ್ಲೇ ಇವೆ. ಇಷ್ಟೆಲ್ಲಾ ಇದ್ದರೂ ಇಳಿ ವಯಸ್ಸಿನಲ್ಲಿರೋ ಹೆತ್ತ ತಾಯಿಯನ್ನು ಯಾರೂ ನೋಡಿಕೊಳ್ಳುತ್ತಿಲ್ಲ. ಪುಟ್ಟವ್ವಳಿಗೆ ಹಲವು ವಯೋಸಹಜ ಕಾಯಿಲೆಗಳೂ ಇವೆ. ಗಂಡು, ಹೆಣ್ಣು ಮಕ್ಕಳು, ಮೊಮ್ಮಕ್ಕಳು ಇದ್ದರೂ ಯಾರೂ ಪುಟ್ಟವ್ವಳಿಗೆ ಒಂದು ಹೊತ್ತಿನ ಊಟ ಹಾಕುತ್ತಿಲ್ಲ. ಆರೋಗ್ಯ ಸಮಸ್ಯೆಯಾದಾಗ ಆಸ್ಪತ್ರೆಗೂ ಕರೆದುಕೊಂಡು ಹೋಗುತ್ತಿಲ್ಲ. ಹೀಗಾಗಿ ನನಗೆ ಈ ಜೀವನ ಸಾಕಾಗಿದೆ. ದಯಾಮರಣ ಕೊಡಿ ಅಂತ ವೃದ್ಧೆ ಪುಟ್ಟವ್ವ ದಯಾಮರಣದ ಪತ್ರ ಹಿಡಿದುಕೊಂಡು ಜಿಲ್ಲಾಡಳಿತ ಭವನಕ್ಕೆ ಬಂದಿದ್ದಾಳೆ. ಇದನ್ನೂ ಓದಿ: ಉತ್ಸವ ಮೂರ್ತಿಯ ಗುಜ್ಜುಕೋಲನ್ನು ಮುಟ್ಟಿದ್ದಕ್ಕೆ ದಲಿತ ಕುಟುಂಬದ ಮೇಲೆ ದೌರ್ಜನ್ಯ – 8 ಮಂದಿ ಅರೆಸ್ಟ್

    ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆ ಸೇರಿದ್ದಾರೆ. 7 ಜನ ಗಂಡು ಮಕ್ಕಳ ಪೈಕಿ ಕಿರಿಯ ಮಗ ಗೋವಿಂದರಾಜ ಮಾತ್ರ ಪುಟ್ಟವ್ವಳಿಗೆ ಕೆಲವು ವರ್ಷಗಳ ಕಾಲ ನೋಡಿಕೊಂಡಿದ್ದರು. ಆದರೆ ಅವರ ಆರ್ಥಿಕ ಪರಿಸ್ಥಿತಿ ಪ್ರಸ್ತುತ ಸರಿ ಇಲ್ಲ. ಪತಿಯ ಹೆಸರಿನಲ್ಲಿರೋ ಆಸ್ತಿಗಳಲ್ಲಿ ಅಲ್ಪಸ್ವಲ್ಪ ಮಾರಾಟ ಮಾಡಿ ಜೀವನ ಸಾಗಿಸಬೇಕು ಎಂದರೆ ಗಂಡು ಮಕ್ಕಳು ಅದಕ್ಕೂ ಬಿಡುತ್ತಿಲ್ಲ. ಎರಡು ಹೊತ್ತಿನ ಊಟವನ್ನೂ ಹಾಕುತ್ತಿಲ್ಲ. ಹೀಗಾಗಿ 11 ಜನ ಮಕ್ಕಳಿದ್ರೂ ಅಕ್ಕಪಕ್ಕದ ಮನೆಯವರು, ಅವರಿವರು ಕೊಟ್ಟ ಊಟ ಮಾಡಿ ಬದುಕಬೇಕಾಗಿದೆ ಎಂದು ಪುಟ್ಟವ್ವ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

    ಮಕ್ಕಳು ನೋಡಿಕೊಳ್ಳದೇ ಇರೋದನ್ನು ಕಂಡು ಜೀವನವೇ ಸಾಕು ಸಾಕು ಅನ್ನಿಸಿದೆ. ನನಗೆ ದಯಾಮರಣ ಕೊಡಿಸಿ ಅಂತ ವೃದ್ಧ ತಾಯಿ ಪುಟ್ಟವ್ವ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಬಳಿ ತನ್ನ ಅಳಲು ತೋಡಿಕೊಂಡಿದ್ದಾಳೆ. ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಬರೆದಿರೋ ಪತ್ರ ಹಿಡಿದು ಬಂದಿರೋ ವೃದ್ಧೆಯನ್ನು ಭೇಟಿಯಾಗಿ ಹಿರಿಯ ನಾಗಕರಿಕರ ಕಲ್ಯಾಣ ಇಲಾಖೆ ಅಧಿಕಾರಿ ಆಶು ನದಾಫ ಸಮಸ್ಯೆ ಆಲಿಸಿದರು. ಪುಟ್ಟವ್ವಳಿಗೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು. ಉಳಿದಂತೆ ಪುಟ್ಟವ್ವಳಿಗೆ ಯಾವುದೇ ಸಮಸ್ಯೆ ಆಗದಂತೆ ಉಳಿದುಕೊಳ್ಳಲು ವೃದ್ಧಾಶ್ರಮದಲ್ಲಿ ವ್ಯವಸ್ಥೆ ಕಲ್ಪಿಸೋದಾಗಿ ಹೇಳಿದ್ದಾರೆ. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ – ಕುಟುಂಬದ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ

    ಪುಟ್ಟವ್ವ ದಯಾಮರಣ ಕೋರಿ ಪತ್ರ ಹಿಡಿದುಕೊಂಡು ಬಂದಿದ್ದು ಗಮನಿಸಿ ಹಿರಿಯ ನಾಗರಿಕ ಕಲ್ಯಾಣ ಇಲಾಖೆ ಅಧಿಕಾರಿ ವೃದ್ಧೆಗೆ ಧೈರ್ಯ ತುಂಬಿದ್ದಾರೆ. ನಂತರ ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ಪುಟ್ಟವ್ವ ಮಕ್ಕಳಿಂದ ಆಗಿರೋ ಸಮಸ್ಯೆ ವಿವರಿಸಿದ್ದಾಳೆ. ಆದರೆ 11 ಜನ ಮಕ್ಕಳಿದ್ರೂ ಇಳಿ ವಯಸ್ಸಿನಲ್ಲಿರೋ ಆಕೆಯನ್ನು ನೋಡಿಕೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಖಾಸಗಿ ಮಾರುಕಟ್ಟೆ ಬಂದ್ ಮಾಡಿ ಇಲ್ಲ ದಯಾಮರಣಕ್ಕೆ ಅವಕಾಶ ಕೊಡಿ – ಸಿಎಂಗೆ APMC ವರ್ತಕರ ಮನವಿ

    ಖಾಸಗಿ ಮಾರುಕಟ್ಟೆ ಬಂದ್ ಮಾಡಿ ಇಲ್ಲ ದಯಾಮರಣಕ್ಕೆ ಅವಕಾಶ ಕೊಡಿ – ಸಿಎಂಗೆ APMC ವರ್ತಕರ ಮನವಿ

    ಬೆಳಗಾವಿ: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಬೆಳಗಾವಿ ಎಪಿಎಂಸಿ ವರ್ತಕರ ಆಕ್ರೋಶ ಮುಂದುವರಿದಿದೆ. ಖಾಸಗಿ ಮಾರುಕಟ್ಟೆ ಬಂದ್ ಮಾಡಿ ಇಲ್ಲ ದಯಾಮರಣಕ್ಕೆ ಅವಕಾಶ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಬೆಳಗಾವಿ ಸರ್ಕಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವರ್ತಕರು ಮನವಿ ಮಾಡಿಕೊಂಡಿದ್ದಾರೆ.

    ನಗರದ ಡಿಸಿ ಕಚೇರಿಗೆ ಆಗಮಿಸಿದ ಸರ್ಕಾರಿ ಎಪಿಎಂಸಿ ವರ್ತಕರು ಖಾಸಗಿ ತರಕಾರಿ ಮಾರುಕಟ್ಟೆ ರದ್ದು ಮಾಡುವಂತೆ ಆಗ್ರಹಿಸಿದರು. ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಎಪಿಎಂಸಿ ಹೋಲ್‍ಸೇಲ್ ತರಕಾರಿ ಮಾರುಕಟ್ಟೆ ಉಳಿಸಬೇಕು. ಖಾಸಗಿ ಮಾರುಕಟ್ಟೆ ಬಂದ್ ಮಾಡಬೇಕು. ಎಪಿಎಂಸಿ ಕಾಯ್ದೆ ಪರಿಣಾಮವಾಗಿ ಬೆಳಗಾವಿ ಸರ್ಕಾರಿ ಎಪಿಎಂಸಿ ಮಾರುಕಟ್ಟೆ ಇದ್ದರೂ ಪರ್ಯಾಯವಾಗಿ ಖಾಸಗಿ ಜೈಕಿಸಾನ್ ತರಕಾರಿ ಮಾರುಕಟ್ಟೆಗೆ ಅನುಮತಿ ಕೊಡಲಾಗಿದೆ. ಇದರಿಂದ ಸರ್ಕಾರಿ ಎಪಿಎಂಸಿ ವರ್ತಕರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣವೇ ಮುಖ್ಯಮಂತ್ರಿಗಳು ಖಾಸಗಿ ಮಾರುಕಟ್ಟೆ ಬಂದ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಜಾರಿಯಾಗುತ್ತಾ ಯುಪಿ ಮಾದರಿ ಜನಸಂಖ್ಯಾ ನಿಯಂತ್ರಣ ಕಾನೂನು?

    ಬೆಳಗಾವಿ ಎಪಿಎಂಸಿ ಮಾರುಕಟ್ಟೆ ಉಳಿಸುವಂತೆ ವರ್ತಕರು, ರೈತರು ನಡೆಸುತ್ತಿರುವ ಹೋರಾಟ 55ನೇ ದಿನಕ್ಕೆ ಕಾಲಿಟ್ಟಿದೆ. ಕಾನೂನಿನ ಪ್ರಕಾರ ಲಕ್ಷಾಂತರ ರೂಪಾಯಿ ಕೊಟ್ಟು ಎಪಿಎಂಸಿಯಲ್ಲಿ ಅಂಗಡಿ ಪಡೆದ ವರ್ತಕರು ಬೀದಿಗೆ ಬಂದಿದ್ದಾರೆ. ಖಾಸಗಿ ಮಾರುಕಟ್ಟೆ ಆರಂಭವಾಗಿದ್ದರಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಶೇ.80ರಷ್ಟು ವ್ಯಾಪಾರ ಕುಸಿತವಾಗಿದೆ. ಹೀಗಾಗಿ ಬೆಳಗಾವಿ ಎಪಿಎಂಸಿ ಉಳಿಸಲು ಸಿಎಂ ಬೊಮ್ಮಾಯಿ ಒಂದು ವಾರದಲ್ಲಿ ಕ್ರಮ ಕೈಗೊಳ್ಳಬೇಕಿದೆ. ಖಾಸಗಿ ಮಾರುಕಟ್ಟೆ ಬಂದ್ ಮಾಡದಿದ್ದರೆ ದಯಾಮರಣಕ್ಕೆ ಅನುಮತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಎಚ್‍ಡಿಡಿ ಪತ್ನಿಗೆ ಐಟಿ ನೋಟಿಸ್

    ಮನವಿ ಸ್ವೀಕರಿಸಲು ಬಂದ ಡಿಸಿ ಬಿಳಿ ಹೋರಾಟಗಾರರು ತಮ್ಮ ನೋವವನ್ನು ತೊಡಿಕೊಂಡಿದ್ದಾರೆ. ಒಟ್ಟಾರೆ, ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ವಾಪಸ್ ಪಡೆದ್ರು ರಾಜ್ಯ ಸರ್ಕಾರ ಇನ್ನೂ ವಾಪಸ್ ಪಡೆದಿಲ್ಲ. ಇದರಿಂದ ಬೆಳಗಾವಿ ಎಪಿಎಂಸಿ ತರಕಾರಿ ಮಾರುಕಟ್ಟೆ ಮುಚ್ಚುವಂತಹ ಸ್ಥಿತಿಗೆ ಬಂದು ತಲುಪಿದ್ದು ದುರಂತವೇ ಸರಿ.

  • ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ಸಾವಿರ ಮಂದಿ ಕಾಫಿನಾಡಿಗರಿಂದ ಪತ್ರ

    ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ಸಾವಿರ ಮಂದಿ ಕಾಫಿನಾಡಿಗರಿಂದ ಪತ್ರ

    ಚಿಕ್ಕಮಗಳೂರು: ಭದ್ರಾ ಹುಲಿ ಯೋಜನೆ ಹಾಗೂ ಬಫರ್ ಝೋನ್‍ನಿಂದ ನಮ್ಮ ಬದುಕು ಬೀದಿಗೆ ಬೀಳುವಂತಾಗಿದೆ. ಯೋಜನೆ ಜಾರಿಗೆ ಬರುವ ಮುನ್ನ ನಮಗೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ 10ಕ್ಕೂ ಹೆಚ್ಚು ಹಳ್ಳಿಯ ಜನ ರಾಷ್ಟ್ರಪತಿ ರಾಮನಾಥ್ ಕೋವಿಂದ್‍ಗೆ ಪತ್ರ ಬರೆದಿದ್ದಾರೆ.

    ಎನ್.ಆರ್.ಪುರ ತಾಲೂಕಿನ ಸಾಲೂರು, ಹೊನ್ನಂಗಿ, ಬೆಳ್ಳಂಗಿ, ಅಳೇಹಳ್ಳಿ, ಆಡುವಳ್ಳಿ, ಕೊಳಲೆ, ಮುದುಗುಣಿ, ಬಾಳೆಗದ್ದೆ, ನಂದಿಗಾವೆ, ಬೈರಾಪುರ ಸೇರಿದಂತೆ ವಿವಿಧ ಹಳ್ಳಿಗಳ ಸಾವಿರಕ್ಕೂ ಹೆಚ್ಚು ಜನ ರಾಷ್ಟ್ರಪತಿಗೆ ದಯಾಮರಣಕ್ಕಾಗಿ ಪತ್ರ ಬರೆದಿದ್ದಾರೆ. ಈ ಹಿಂದೆ ಕೂಡ ಸರ್ಕಾರ ವಿವಿಧ ಕಾರಣಗಳಿಂದ ಜನರನ್ನ ಒಕ್ಕಲೆಬ್ಬಿಸಿತ್ತು. ಈ ಹಿಂದೆ ಸರ್ಕಾರ ಒಕ್ಕಲೆಬ್ಬಿಸಿದ್ದ ವೇಳೆ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿದ್ದೇವೆ. ಇಲ್ಲಿಂದ ಈಗ ಮತ್ತೆ ಒಕ್ಕಲೆಬ್ಬಿಸಿದರೆ ಎಲ್ಲಿಗೆ ಹೋಗೋದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಭದ್ರಾ ಹುಲಿ ಯೋಜನೆ ಹಾಗೂ ಬಫರ್ ಝೋನ್ ನೂರಾರು ಹಳ್ಳಿಯ ಜನರಿಗೆ ಮರಣಶಾಸನವಾಗಿದೆ. ಹಾಗಾಗಿ ಯೋಜನೆ ಜಾರಿಗೆ ಬರುವ ಮುನ್ನ ದಯಾಮರಣಕ್ಕೆ ನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಈಗ ಒಂದು ಸಾವಿರ ಜನ ಪತ್ರ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಐದು ಸಾವಿರ ಜನ ಪತ್ರ ಬರೆಯಲು ನಿರ್ಧರಿಸಿದ್ದಾರೆ. ಈ ಹಿಂದೆ ಕೂಡ ಇದೇ ಯೋಜನೆಯನ್ನ ವಿರೋಧಿಸಿ ಸಾವಿರಾರು ರೈತರು ಎನ್.ಆರ್.ಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ಜಡ್ಜ್ ಭೇಟಿ ವೇಳೆ ಬಾಗಿಲು ಮುಚ್ಚಿದ್ದ ಇನ್ಸ್‌ಪೆಕ್ಟರ್ ಸಸ್ಪೆಂಡ್

    ಗ್ರಾಮ ಪಂಚಾಯಿತಿ ಚುನಾವಣೆಯನ್ನ ಬಹಿಷ್ಕರಿಸಿದ್ದರು. ಈ ಯೋಜನೆ ಜಾರಿಗೆ ಬಂದರೆ 125ಕ್ಕೂ ಹೆಚ್ಚು ಹಳ್ಳಿಗಳಿಗೆ ತೊಂದರೆಯಾಗಲಿದೆ. ಶತಮಾನಗಳ ಬದುಕು ಬೀದಿಗೆ ಬರಲಿದೆ. ಹಾಗಾಗಿ ಜನ ಯೋಜನೆ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಕೇಂದ್ರ-ರಾಜ್ಯ ಸರ್ಕಾರದ ಗಮನ ಸೆಳೆಯಲು ಎಲ್ಲಾ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ, ಯೋಜನೆ ವಿರುದ್ಧ ದಯಾಮರಣಕ್ಕೆ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

  • ದಯಾಮರಣ ಕೋರಿ ಧರಣಿ ಕುಳಿತ ರೈತ ಕುಟುಂಬ

    ದಯಾಮರಣ ಕೋರಿ ಧರಣಿ ಕುಳಿತ ರೈತ ಕುಟುಂಬ

    ಚಾಮರಾಜನಗರ: ದಯಾಮರಣ ಕೋರಿ ರೈತ ಕುಟುಂಬ ಜಿಲ್ಲಾಡಳಿತ ಭವನದ ಮುಂದೆ ಧರಣಿ ಕುಳಿತಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಇದನ್ನೂ ಓದಿ:  ಒಂದೇ ತನಿಖೆಗೆ ಎರಡು ರೀತಿ ತನಿಖಾ ವರದಿ ಬರೆದ ಮೈಸೂರು ಪ್ರಾದೇಶಿಕ ಆಯುಕ್ತ

    ಗುಂಡ್ಲುಪೇಟೆಯ ಮಾಡ್ರಹಳ್ಳಿಯ ಎಂ.ನವೀನ, ಸಹೋದರ ಮಾದಪ್ಪ, ತಾಯಿ ಮಹಾದೇವಮ್ಮ ಎಂಬುವರು ಜಿಲ್ಲಾಡಳಿತ ಭವನದ ಮುಂದೆ ಗಾಂಧೀಜಿ ಫೋಟೋ ಇಟ್ಟು ಧರಣಿ ನಡೆಸಿದ್ದಾರೆ. ತಮ್ಮ ತಂದೆ ಹಾಗೂ ಎರಡನೇ ಹೆಂಡತಿ ಮಕ್ಕಳು ಕಿರುಕುಳ ನೀಡುತ್ತಿದ್ದಾರೆ. ನಮಗೆ ದಯಾಮರಣ ನೀಡಿ ಎಂದು ಧರಣಿ ಮಾಡಿದ್ದಾರೆ. ಇದನ್ನೂ ಓದಿ: ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ

    ತಮ್ಮ ಹೆಸರಿನಲ್ಲಿರುವ ಜಮೀನಿನನಲ್ಲಿ ಉಳುಮೆ ಮಾಡಲು ಹೋದರೆ ಹಲ್ಲೆ ಮಾಡುತ್ತಿದ್ದಾರೆ. ಪದೇಪದೇ ಅಡ್ಡಿಪಡಿಸುತ್ತಾ ಕಿರುಕುಳ ನೀಡಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಹಲವು ಬಾರಿ ದೂರು ನೀಡಿದರು ತಮಗರ ರಕ್ಷಣೆ ಸಿಗುತ್ತಿಲ್ಲ, ತಮಗೆ ದಯಾಮರಣ ನೀಡಿ ಎಂದು ಅವರು ಆಗ್ರಹಿಸಿದ್ದಾರೆ.

  • ಸ್ಥಳೀಯ ಪುಂಡರು, ಅಧಿಕಾರಿಗಳಿಗೆ ಹೆದರಿ ದಯಾಮರಣಕ್ಕೆ ಮುಂದಾದ ಮಾಜಿ ಸೈನಿಕ

    ಸ್ಥಳೀಯ ಪುಂಡರು, ಅಧಿಕಾರಿಗಳಿಗೆ ಹೆದರಿ ದಯಾಮರಣಕ್ಕೆ ಮುಂದಾದ ಮಾಜಿ ಸೈನಿಕ

    – ಕುಟುಂಬ ಸಮೇತ ದಯಾಮರಣಕ್ಕೆ ಅರ್ಜಿ

    ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸುರ ಗ್ರಾಮದ ಯೋಧನೋರ್ವ 17 ವರ್ಷಗಳ ದೇಶಸೇವೆ ಮಾಡಿ ಸದ್ಯ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿ ಬಳಿಕ ಯೋಧನಿಗೆ ಏನಾದ್ರೂ ಸಮಾಜಮುಖಿ ಕೆಲಸ ಮಾಡಬೇಕೆಂಬ ಹಂಬಲ. ಸೇನೆಗೆ ಸೇರಬೇಕೆಂಬ ಹಂಬಲವಿರುವ ಬಡ ಮಕ್ಕಳಿಗೆ ಉಚಿತ ಸೈನಿಕ ತರಬೇತಿ ಕೇಂದ್ರ ಕಟ್ಟಡ ಕಟ್ಟಲು ಸ್ಥಳೀಯ ಅಧಿಕಾರಿಗಳು ಹಾಗೂ ಪುಡಿ ರೌಡಿಗಳ ದೌರ್ಜನ್ಯಕ್ಕೆ ಬೇಸತ್ತಿದ್ದಾನೆ.

    ಸೇನೆಯಲ್ಲಿ ವೈರಿಗಳಿಗೆ, ನಕ್ಸಲ್‍ಗಳಿಗೆ ಹೆದರದ ಸೈನಿಕ, ಸ್ಥಳೀಯ ಪುಂಡರ ಜೀವ ಬೆದರಿಕೆಗೆ ಬೇಸತ್ತು ಕುಟುಂಬದ ಎಂಟು ಜನ ರಾಷ್ಟ್ರಪತಿಗೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹೌದು ಈರಣ್ಣ ಅಣ್ಣಿಗೇರಿ ಕುಟುಂಬ ಸದ್ಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ವಾಸವಿದ್ದಾರೆ. ಈ ಮಾಜಿ ಸೈನಿಕ ತನ್ನ ಕುಟುಂಬದ ಎಂಟು ಜನರು ರಾಷ್ಟ್ರಪತಿಗೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಾರಣ ಲಕ್ಷ್ಮೇಶ್ವರ ಪಟ್ಟಣದ ಈಶ್ವರ ನಗರದಲ್ಲಿ 16.ಡ ವ್ಯಾಪ್ತಿಯ ಪ್ಲ್ಯಾಟ್ ನಂಬರ್ 127/197 ಎಂಬುದನ್ನು ಸುಮಾರು 8 ವರ್ಷಗಳ ಹಿಂದೆಯೇ ಖರೀದಿಸಿದ್ದಾರೆ.

    ಈ ಜಾಗದಲ್ಲಿ ಮನೆ ಹಾಗೂ ಸೈನ್ಯಕ್ಕೆ ಸೇರಬೇಕೆಂಬ ಬಡ ಮಕ್ಕಳಿಗೆ ಉಚಿತ ಸೈನಿಕ ತರಬೇತಿ ಕೇಂದ್ರ ಆರಂಭಿಸಲು ಮುಂದಾಗಿದ್ದಾರೆ. ಆದರೆ ಸ್ಥಳೀಯ ಗಂಗಾಧರ ಗುಡಗೇರಿ ಹಾಗೂ ಮಂಜುನಾಥ ಮಾಗಡಿ ಎಂಬುವರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂಬುದು ಮಾಜಿ ಸೈನಿಕನ ಕುಟುಂಬದ ಆರೋಪವಾಗಿದೆ. ಯಾವುದೇ ಹುರುಳಿಲ್ಲದೇ ಕಟ್ಟಡ ಕಟ್ಟಲು ಅನುಮತಿ ನೀಡದೇ, ಸೈನಿಕನ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ. ಇದರಿಂದ ಹಂತಕರ ಕೈಯಲ್ಲಿ ಸಾವನ್ನಪ್ಪುವುದಕ್ಕಿಂತ ಸರ್ಕಾರದ ಎದುರು ಸಾವಿಗೆ ಶರಣಾಗುವುದೇ ಒಳ್ಳೆಯದು ಎಂದು ನೊಂದು ದಯಾಮರಣಕ್ಕೆ ಮುಂದಾಗಿದ್ದೇವೆ ಎಂದು ಮಾಜಿ ಸೈನಿಕ ಹೇಳಿದ್ದಾರೆ.

    ಮಾಜಿ ಸೈನಿಕ ಈರಣ್ಣ 17 ವರ್ಷ ಸೈನಿಕನಾಗಿ ಸೇವೆ ಸಲ್ಲಿಸಿದ್ದಾರೆ. ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ನಾಗಾಲ್ಯಾಂಡ್, ವೆಲ್ಲಿಂಗ್ಟನ್, ಸಿಯಾಚಿನ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಸೇನೆಯಿಂದ ನಿವೃತ್ತಿ ಹೊಂದಿದ್ದಾರೆ. ದಯಾಮರಣಕ್ಕೆ ಮಾಜಿ ಸೈನಿಕ 38 ವರ್ಷ ಈರಣ್ಣ ಅವರ ಪತ್ನಿ 32 ವರ್ಷದ ಕವಿತಾ, 3 ವರ್ಷದ ಪ್ರಕೃತಿ ಹಾಗೂ 5 ತಿಂಗಳ ಪ್ರಣಿತ್ ಜೊತೆಗೆ ಮಾಜಿ ಸೈನಿಕನ ಸಹೋದರ ಶಿವಲಿಂಗಪ್ಪ, ಅವರ ಪತ್ನಿ 34 ವರ್ಷದ ಶೋಭಾ, ಮಕ್ಕಳಾದ 13 ವರ್ಷದ ಶಿವಯೋಗಿ, 11 ವರ್ಷದ ಆದಿತ್ಯ ಹೀಗೆ ಒಟ್ಟು 8 ಜನ ದಯಾಮರಣ ಅರ್ಜಿಯಲ್ಲಿ ಹೆಸರು ನೋಂದಾಯಿಸಿದ್ದಾರೆ.

  • ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯ: ದಯಾಮರಣಕ್ಕಾಗಿ ಧರಣಿ ನಡೆಸಿದ ರೈತ ಕುಟುಂಬ

    ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯ: ದಯಾಮರಣಕ್ಕಾಗಿ ಧರಣಿ ನಡೆಸಿದ ರೈತ ಕುಟುಂಬ

    ಚಿಕ್ಕಬಳ್ಳಾಪುರ: ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಬಡ ರೈತ ಕುಟುಂಬವೊಂದು ದಯಾಮರಣ ಕೋರಿ ಧರಣಿ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ.

    ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದ ನಿವಾಸಿ ಲಕ್ಷ್ಮಮ್ಮ ಎಂಬುವವರಿಗೆ ತಂದೆಯಿಂದ ವಿಲ್ ಮುಖಾಂತರ 1.15 ಎಕರೆ ಜಮೀನು ಬಂದಿತ್ತು. ಆದರೆ ಈ ಜಮೀನಿನ ಮೇಲೆ ಸಂಬಂಧಿಗಳು ಕಣ್ಣು ಹಾಕಿ ಸಿವಿಲ್ ಕೋರ್ಟ್, ತಹಸೀಲ್ದಾರ್ ಹಾಗೂ ಡಿಸಿ, ಎಸಿ ಕೋರ್ಟ್ ಗಳಲ್ಲಿ ಪ್ರಕರಣ ದಾಖಲು ಮಾಡಿದ್ದರು. ಕೊನೆಗೆ ಲಕ್ಷ್ಮಮ್ಮನವರಿಗೆ ಖಾತೆ ಮಾಡುವಂತೆ ಎರಡು ವರ್ಷದ ಹಿಂದೆಯೇ ನ್ಯಾಯಾಲಯ ನಿರ್ದೇಶನ ಮಾಡಿತ್ತು.

    ಅಧಿಕಾರಿಗಳ ಎಡವಟ್ಟಿನಿಂದ ಲಕ್ಷ್ಮಮ್ಮನ ಹೆಸರಿಗೆ ಸರಿಯಾಗಿ ಖಾತೆಯಾಗಿರಲಿಲ್ಲ. ಈ ಬಗ್ಗೆ ಕಳೆದ ಎರಡು ವರ್ಷದಿಂದ ಲಕ್ಷ್ಮಮ್ಮ ಮತ್ತು ಆಕೆಯ ಕುಟುಂಬದವರು ತಾಲೂಕು ಕಚೇರಿಗೆ ಅಲೆದಾಡುತ್ತಿದ್ದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ರೈತ ಕುಟುಂಬ ದಯಾಮರಣ ಕೋರಿ ದೇವನಹಳ್ಳಿ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕರೀಗೌಡಗೆ ನ್ಯಾಯ ಕೊಡಿ ಇಲ್ಲವೇ ದಯಾಮರಣ ಕೊಡಿ ಎಂದು ಪ್ರತಿಭಟನೆ ನಡೆಸಿ ತಮ್ಮ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ದಯಾಮರಣಕ್ಕೆ ಸುಪ್ರೀಂ ಅನುಮತಿ: ಏನಿದು ಲಿವಿಂಗ್ ವಿಲ್? ತೀರ್ಪಿನಲ್ಲಿ ಏನಿದೆ? ತಪ್ಪು ಮಾಡಿದ್ರೆ ಶಿಕ್ಷೆ ಏನು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv